Tag: Bhagyashree

  • ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ರಿಲೀಸ್

    ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ರಿಲೀಸ್

    ಬಾಲ್ಯ ವಿವಾಹ ದುಷ್ಪರಿಣಾಮ ಕುರಿತಾದ ಕಾದಂಬರಿ ಆಧಾರಿತ ‘ಭಾಗ್ಯಶ್ರೀ’ ಸಿನಿಮಾ ಈ ವಾರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

    ಬಾಗಲಕೋಟೆ ಜಿಲ್ಲೆಯವರಾದ ಆಶಾ ಶಾಹಿರ ಬೀಳಗಿ ಹಾಗೂ ಶಾಹಿರ ಬೀಳಗಿ ಬನಶಂಕರಿ ಆಟ್ರ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ತಯಾರಿಸಿದ್ದಾರೆ. ಎಸ್ ಮಲ್ಲೇಶ್ ಅವರ ಕಾದಂಬರಿ ‘ಭಾಗ್ಯಶ್ರೀ’ ಅದೇ ಹೆಸರಿನಲ್ಲಿ ಅವರು ನಿರ್ದೇಶನ ಸಹ ಮಾಡಿದ್ದಾರೆ. ಪ್ರಾರ್ಥನ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಕುಮಾರಿ ಹೀರಾ ಈ ಚಿತ್ರದಲ್ಲಿ ‘ಭಾಗ್ಯಶ್ರೀ’ ಪಾತ್ರವನ್ನು ಮಾಡಿದ್ದಾರೆ.

    ಈ ಚಿತ್ರಕ್ಕೆ ಪದ್ಮಶ್ರೀ ದೊಡ್ಡರಂಗೇ ಗೌಡ ಅವರು ಎರಡು ಹಾಡುಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ ಒಂದು ವಿಶೇಷವಾದ ಹಾಡು ನಾಲ್ಕೂವರೆ ನಿಮಿಷಗಳ ಕಾಲ ಮೂಡಿಬಂದಿದೆ. ಕಾರ್ತಿಕ್ ವೆಂಕಟೇಶ್ ರಾಗ ಸಂಯೋಜನೆಯಲ್ಲಿ ಮೂರು ಹಾಡುಗಳು ಮೂಡಿಬಂದಿದೆ. ನಿರ್ದೇಶಕ ಮಲ್ಲೇಶ್ ಸಹ ಒಂದು ಗೀತೆಯನ್ನು ರಚಿಸಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಹೇಮಂತ್ ಕುಮಾರ್ ಛಾಯಾಗ್ರಹಣ ಇರುವ ಈ ಭಾಗ್ಯಶ್ರೀ ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ, ಕೆ ಜಿ ಎಫ್ ಕೃಷ್ಣೋಜಿ ರಾವ್, ಏಕನಾಥ್, ನಾಗರಾಜ್ ಹಾಗೂ ಇತರರು ತಾರಾಗಣದಲಿದ್ದಾರೆ.

  • ಸೀತಾರಾಮನಿಗೆ ಸಿಕ್ಕ ಬಾಲಿವುಡ್ ಭಾಗ್ಯ!

    ಸೀತಾರಾಮನಿಗೆ ಸಿಕ್ಕ ಬಾಲಿವುಡ್ ಭಾಗ್ಯ!

    ನಿಖಿಲ್ ಕುಮಾರಸ್ವಾಮಿ ಅಭಿನಯದ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಮೊದಲ ಚಿತ್ರ ಜಾಗ್ವಾರ್ ಅನ್ನೇ ಮೀರಿಸುವಂತೆ ಈ ಚಿತ್ರ ಸದ್ದು ಮಾಡುತ್ತಿದೆ. ಅವ್ಯಾಹತವಾಗಿ ಚಿತ್ರೀಕರಣ ನಡೆಸಿಕೊಳ್ತಿರೋ ಈ ಚಿತ್ರಕ್ಕೀಗ ಮತ್ತೋರ್ವ ಅತಿಥಿಯ ಆಗಮನವಾಗಿದೆ!

    ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಭಾಗ್ಯಶ್ರೀ ಇದೀಗ ಸೀತಾರಾಮನಿಗೆ ಜೊತೆಯಾಗಿದ್ದಾರೆ. ಆಕೆ ನಿಖಿಲ್ ಅಮ್ಮನ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ.

    ಹಿಂದಿಯ ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದ ಭಾಗ್ಯ ನಾನಾ ಭಾಷೆಗಳ ಚಿತ್ರಗಳಲ್ಲಿಯೂ ಮಿಂಚಿದ್ದರು. ಈ ತಲೆಮಾರಿನ ಕನ್ನಡ ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿಲ್ಲದ ಈಕೆ ಈಗ ಇಪ್ಪತ್ತು ವರ್ಷಗಳ ನಂತರ ಮರಳಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ನಾಯಕನ ಫ್ಲ್ಯಾಶ್ ಬ್ಯಾಕ್ ಸೀನೊಂದಿದೆ. ಇಡೀ ಚಿತ್ರದಲ್ಲಿ ಬಹು ಮುಖ್ಯವಾದ ಇದರಲ್ಲಿ ಭಾಗ್ಯ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಚಿತ್ರತಂಡ ಈ ಪಾತ್ರಕ್ಕೆ ಭಾಗ್ಯ ಅವರನ್ನೇ ಕರೆ ತರಬೇಕೆಂದು ನಿರ್ಧರಿಸಿ ಅದರಲ್ಲಿ ಯಶ ಕಂಡಿದೆ. ಭಾಗ್ಯ ಕೂಡಾ ಇಪ್ಪತ್ತು ವರ್ಷಗಳ ಹಿಂದೆ ತಾನು ನಾಯಕಿಯಾಗಿ ಮಿಂಚಿದ್ದ ಕನ್ನಡ ಚಿತ್ರ ರಂಗಕ್ಕೆ ಖುಷಿಯಿಂದಲೇ ಮರಳಿ ಬರಲು ಒಪ್ಪಿಕೊಂಡಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಖಿಲ್ ಗಾಗಿ 20 ವರ್ಷಗಳ ಬಳಿಕ ಬಾಲಿವುಡ್ ನಟಿ ಚಂದನವನಕ್ಕೆ ಎಂಟ್ರಿ

    ನಿಖಿಲ್ ಗಾಗಿ 20 ವರ್ಷಗಳ ಬಳಿಕ ಬಾಲಿವುಡ್ ನಟಿ ಚಂದನವನಕ್ಕೆ ಎಂಟ್ರಿ

    ಬೆಂಗಳೂರು: ನಟ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರ ತಾರೆಗಳಿಂದ ತುಂಬಿ ತುಳುಕುತ್ತಿದ್ದು, ಈಗ ನಿಖಿಲ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಲು ಬಿಟೌನ್ ನಟಿ 20 ವರ್ಷಗಳ ನಂತರ ಸ್ಯಾಂಡಲ್‍ವುಡ್ ಗೆ ಎಂಟ್ರಿಯಾಗುತ್ತಿದ್ದಾರೆ.

    `ಮೈನೆ ಪ್ಯಾರ್ ಕಿಯಾ’ ಲಡಕಿ ಎಂದೇ ಬಾಲಿವುಡ್‍ನಲ್ಲಿ ಫೇಮಸ್ ಆಗಿರುವ ಮುದ್ದು ಮುಖದ ನಟಿ ಭಾಗ್ಯಶ್ರೀ ಅವರು ಸ್ಯಾಂಡಲ್‍ವುಡ್ ಗೆ ಬರುತ್ತಿದ್ದಾರೆ. ಈಗಾಗಲೇ `ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ರವಿಶಂಕರ್, ಸಂಪತ್ ರಾಜ್, ಮಧು, ಶರತ್ ಕುಮಾರ್ ಸೇರಿದಂತೆ ಅನೇಕ ಹೆಸರಾಂತ ತಾರೆಯರು ಅಭಿನಯಿಸಿದ್ದಾರೆ.

    ತಮಿಳು-ತೆಲುಗು ಭಾಷೆಯ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದ್ದ ಭಾಗ್ಯಶ್ರೀ ಮದುವೆಯಾಗಿ ಸಾಂಸಾರಿಕ ಜೀವನದಲ್ಲೇ ಬ್ಯುಸಿಯಾಗಿದ್ದರು. ಆಗಾಗ ಹಿಂದಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕೆಲ ಚಿತ್ರಗಳಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ದೊಡ್ಡಪರದೆಯಿಂದ ಅನೇಕ ವರ್ಷಗಳ ಕಾಲ ದೂರವೇ ಇದ್ದರು. ಈಗ ಸ್ಯಾಂಡಲ್‍ವುಡ್ ಮೂಲಕ ಮತ್ತೆ ಸಿನಿಮಾರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

    ಸೀತಾರಾಮ ಕಲ್ಯಾಣ ಚಿತ್ರತಂಡದ ಅಭಿಲಾಷೆಯ ಮೇರೆಗೆ ಕನ್ನಡ ಸಿನಿಮಾದಲ್ಲಿ ಮತ್ತೆ ಅಭಿನಯಿಸುವುದಕ್ಕೆ ಒಪ್ಪಿ ಬರುತ್ತಿದ್ದಾರೆ. ವಿಶೇಷ ಅಂದರೆ ನಿಖಿಲ್ ಕುಮಾರ್ ತಾಯಿಯ ಪಾತ್ರದಲ್ಲಿ ಭಾಗ್ಯಶ್ರೀ ನಟಿಸಲಿದ್ದು, ಒಂದು ಫ್ಲ್ಯಾಶ್‍ಬ್ಯಾಕ್ ಕಥೆಯಲ್ಲಿ ಭಾಗ್ಯಶ್ರೀ ಪಾತ್ರ ಬರಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲೇ ಭಾಗ್ಯಶ್ರೀ ಅಭಿನಯಿಸುವ ಭಾಗದ ಚಿತ್ರೀಕರಣ ನಡೆಯಲಿದೆ.

    ಭಾಗ್ಯಶ್ರೀ ಅವರು ಸಲ್ಮಾನ್ ಖಾನ್ ಜೋಡಿಯಾಗಿ ಚಿತ್ರರಂಗ ಪ್ರವೇಶಿಸಿ ನಟಿಸಿದ್ದ ಮೊದಲ ಚಿತ್ರವೇ ಭರ್ಜರಿ ಹಿಟ್ ಆಗಿತ್ತು. ಮೈನೆ ಪ್ಯಾರ್ ಕಿಯಾ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಮುಂದೆ ಭಾಗ್ಯಶ್ರೀ ದಕ್ಷಿಣ ಚಿತ್ರರಂಗದ ಕಡೆ ಪ್ರಯಾಣ ಬೆಳೆಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೋಡಿಯಾಗಿ `ಅಮ್ಮಾವ್ರ ಗಂಡ’ ಕನ್ನಡ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv