Tag: bhagyalakshmi serial

  • ಕಲರ್ಸ್ ಕನ್ನಡದಿಂದ ‘ನಾನು ಭಾಗ್ಯ’ ಅಭಿಯಾನ

    ಕಲರ್ಸ್ ಕನ್ನಡದಿಂದ ‘ನಾನು ಭಾಗ್ಯ’ ಅಭಿಯಾನ

    ನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಸ್ಥೈರ್ಥವನ್ನು ಸಂಭ್ರಮಿಸುವುದೇ ‌’ಭಾಗ್ಯಲಕ್ಷ್ಮಿ’ ಸೀರಿಯಲ್ (Bhagyalakshmi Serial) ‘ನಾನು ಭಾಗ್ಯ’ (Nanu Bhagya) ಅಭಿಯಾನದ ಗುರಿ. ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ ಇದೀಗ ಏಳುನೂರನೇ ಸಂಚಿಕೆಯ ಹೊಸಿಲಿನಲ್ಲಿದ್ದು, ಭಾಗ್ಯ ತನ್ನ ಬದುಕಿನ ನಿರ್ಣಾಯಕ ತಿರುವಿನಲ್ಲಿ ನಿಂತಿದ್ದಾಳೆ. ಇಲ್ಲಿಂದ ಮುಂದಕ್ಕೆ ಕತೆ ಭಾರೀ ಬದಲಾವಣೆ ಕಾಣಲಿದೆ.

    ಆರಂಭದಲ್ಲಿ ತನ್ನ ಗಂಡನ ಸಾಂಪ್ರದಾಯಿಕ ಮನೆಗೆ ತಕ್ಕ ಸೊಸೆಯಾಗಲು ಹೆಣಗಿದ ಭಾಗ್ಯಳ ಪ್ರೀತಿ ಮತ್ತು ತಾಳ್ಮೆ ಅವಳ ಅತ್ತೆ ಕುಸುಮಳ ಮನಗೆದ್ದಿದ್ದವು. ಅದೇ ಉತ್ಸಾಹದಲ್ಲಿ ಎರಡು ಮಕ್ಕಳಾದ ಮೇಲೂ ಮತ್ತೆ ಶಾಲೆಗೆ ಸೇರಿ ಹತ್ತನೇ ಕ್ಲಾಸಿನ ಪರೀಕ್ಷೆಯನ್ನೂ ಮುಗಿಸಿದ ಭಾಗ್ಯ ತನ್ನ ಕುಟುಂಬ ಹಾಗೂ ಮಕ್ಕಳ ಗೌರವ ಗಳಿಸಿದಳು. ಹೆಸರಾಂತ ಫೈವ್ ಸ್ಟಾರ್ ಹೋಟೆಲಿನಲ್ಲಿ ಮುಖ್ಯ ಶೆಫ್ ಆಗಿ ಕೆಲಸ ಶುರುಮಾಡಿದಾಗಲಂತೂ ಅವಳ ಪಯಣ ಹೊಸ ಮಜಲಿಗೇರಿತ್ತು.

    ಆದರೂ ಇದೀಗ ಭಾಗ್ಯ ತನ್ನ ಕುಟುಂಬದ ತಳಪಾಯವನ್ನೇ ಅಲುಗಾಡಿಸುವಂಥ ಸತ್ಯಕ್ಕೆ ಮುಖಾಮುಖಿಯಾಗಿದ್ದಾಳೆ. ತನ್ನ ಗಂಡ ತಾಂಡವನ ಮೋಸ ಬಟಾಬಯಲಾಗಿ ಕಂಗೆಟ್ಟ ಅವಳಿಗೆ ಸಂಸಾರದಲ್ಲಿ ಉಳಿಯಬೇಕೋ ಬೇಡವೊ ಅನ್ನುವ ಪ್ರಶ್ನೆ ಎದುರಾಗಿತ್ತು. ಸಂಸಾರದೊಳಗೇ ಇದ್ದು ತನ್ನನ್ನು ತಾನು ಮರಳಿ ಕಂಡುಕೊಳ್ಳುವ ಕೆಚ್ಚಿನ ನಿರ್ಧಾರ ತೆಗೆದುಕೊಂಡಿರುವ ಭಾಗ್ಯಳ ಇದುವರೆಗೆ ಕಂಡಿರದ ಹೊಸ ಮುಖದ ಪರಿಚಯ ವೀಕ್ಷಕರಿಗೆ ಮುಂಬರುವ ಸಂಚಿಕೆಗಳಲ್ಲಿ ಆಗಲಿದೆ. ತನ್ನನ್ನು ತಾನು ಸಂಪೂರ್ಣವಾಗಿ ಬದಲಾಯಿಸಿಕೊಂಡು ತನ್ನ ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡಲಿರುವ ಸ್ವತಂತ್ರ ಭಾಗ್ಯಳನ್ನು ಅವರು ನೋಡಲಿದ್ದಾರೆ.

    ಭಾಗ್ಯಳ ಈ ದಿಟ್ಟ ತಿರುವಿನ ಕ್ಷಣವನ್ನು ಸಂಭ್ರಮಿಸಲು ಕಲರ್ಸ್ ಕನ್ನಡ ‘ನಾನು ಭಾಗ್ಯ’ (Nanu Bhagya) ಅನ್ನುವ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನಕ್ಕೆಂದೇ #IAMBHAGYA ಅನ್ನುವ ಹ್ಯಾಷ್ ಟ್ಯಾಗ್ ಆರಂಭಿಸಲಾಗಿದೆ. ಇದರ ಮುಖಾಂತರ ಎಲ್ಲ ಹೆಣ್ಣುಮಕ್ಕಳನ್ನು ಸಮಾಜದ ಒತ್ತಡಗಳನ್ನು ಮೀರಿ ತಮ್ಮ ಕನಸನ್ನು ಬೆಂಬತ್ತುವಂತೆ ಉತ್ತೇಜಿಸುವುದು ಕಲರ್ಸ್ ಕನ್ನಡದ ಉದ್ದೇಶ. ಇದಕ್ಕಾಗಿ ಪ್ರೊಮೊ ಹಾಡೊಂದನ್ನು ಸಹ ನಿರ್ಮಿಸಲಾಗಿದೆ. ಈ ಹಾಡಿಗೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದು, ಪ್ರದ್ಯುಮ್ನ ಗೀತೆ ರಚಿಸಿದ್ದಾರೆ.

    ಭಾಗ್ಯಳ ಮುಂದಿನ ಹೆಜ್ಜೆಗಳು ಅವಳನ್ನು ಎಲ್ಲಿಗೆ ಕರೆದೊಯ್ಯಲಿವೆ ಎಂಬ ಕುತೂಹಲ ತಣಿಯಲು ನೀವು ಕಲರ್ಸ್ ಕನ್ನಡ ವೀಕ್ಷಿಸುವುದನ್ನು ಮರೆಯಬೇಡಿ.

  • ಹೆಣ್ಣು ಮಗುವಿಗೆ ತಾಯಿಯಾದ ‘ಭಾಗ್ಯಲಕ್ಷ್ಮಿ’ ನಟಿ ಗೌತಮಿ ಗೌಡ

    ಹೆಣ್ಣು ಮಗುವಿಗೆ ತಾಯಿಯಾದ ‘ಭಾಗ್ಯಲಕ್ಷ್ಮಿ’ ನಟಿ ಗೌತಮಿ ಗೌಡ

    ‘ಭಾಗ್ಯಲಕ್ಷ್ಮಿ’ (Bhagyalakshmi) ಸೀರಿಯಲ್ ಮೂಲಕ ಮನೆಮಾತಾದ ನಟಿ ಗೌತಮಿ ಗೌಡ (Gowthami Gowda) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಸರಾ(Dasara) ಹಬ್ಬದ ಶುಭಸಂದರ್ಭದಲ್ಲಿ ಈ ಗುಡ್ ನ್ಯೂಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಗೌತಮಿ ಅವರ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ತಾಯಿ-ಮಗು ಇಬ್ಬರೂ ಕ್ಷೇಮವಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಕೆಲ ದಿನಗಳ ಹಿಂದೆ ನಟಿ ಹೇಳಿಕೊಂಡಿದ್ದರು.

     

    View this post on Instagram

     

    A post shared by Gowthami H M (@gowthamigowda)

    ಈಗ ಮಗುವಿನ ಫೋಟೋ ರಿವೀಲ್ ಮಾಡದೇ ತಮ್ಮ ಬೇಬಿ ಬಂಪ್ ಫೋಟೋ ಶೇರ್ ಮಾಡಿ ಗುಡ್ ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಸರಾ ಹಬ್ಬದ ಸಂಭ್ರಮದಲ್ಲಿ ಯಶ್- ರಾಧಿಕಾ ದಂಪತಿ

    ‘ಚಿ.ಸೌ ಸಾವಿತ್ರಿ’ ಸೀರಿಯಲ್ ಮೂಲಕ ಗೌತಮಿ ಗೌಡ ಬಣ್ಣದ ಬದುಕಿಗೆ ಕಾಲಿಟ್ಟರು. ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ತಾಂಡವ್ ಪಾತ್ರಧಾರಿಯ ಗರ್ಲ್‌ಫ್ರೆಂಡ್ ಆಗಿ ಗೌತಮಿ ನಟಿಸಿದ್ದರು. ಇತ್ತೀಚೆಗಷ್ಟೇ ಈ ಧಾರಾವಾಹಿಯಿಂದ ನಟಿ ಹೊರಬಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ಬಿಗ್ ಬಾಸ್ ಸೀಸನ್ 8ರ (Bigg Boss Kannada) ವಿನ್ನರ್ ಆಗಿರುವ ಮಂಜು ಪಾವಗಡ (Manju Pavagada) ಅಂತರಪಟ ಸೀರಿಯಲ್‌ನಲ್ಲಿ ತಂದೆಯಾಗಿ ಕಾಣಿಸಿಕೊಳ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಕಲಿ ಅಪ್ಪನಾಗಿ ಮಂಜು ಪಾವಗಡ ಎಂಟ್ರಿ ಕೊಡ್ತಿದ್ದಾರೆ.

    ಬಿಗ್ ಬಾಸ್ (Bigg Boss) ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಮಂಜು ಪಾವಗಡ ಈಗ ಮತ್ತೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸುಷ್ಮಾ ರಾವ್- ಸುದರ್ಶನ್ ರಂಗಪ್ರಸಾದ್ ನಟನೆಯ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ನಕಲಿ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಪ್ರೋಮೋ ವಾಹಿನಿಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ್ದು, ಪ್ರೋಮೋ ಸಖತ್‌ ಸದ್ದು ಮಾಡುತ್ತಿದೆ.

    ಇಷ್ಟವಿಲ್ಲದೇ ತಾಯಿಯ ಹಠಕ್ಕೆ ಮಣಿದು ತಾಂಡವ್ ಅಲಿಯಾಸ್ ಸುದರ್ಶನ್ ಭಾಗ್ಯಳನ್ನು ಮದುವೆಯಾಗುತ್ತಾನೆ. ಈ ಕಡೆ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಶ್ರೇಷ್ಠಾ ಜೊತೆ ತಾಂಡವ್ ಅಫೇರ್ ಇಟ್ಟುಕೊಂಡಿರುತ್ತಾನೆ. ಈಗ ಶ್ರೇಷ್ಠಾ ಮನೆಯವರು ಮದುವೆಯಾಗುವ ಒತ್ತಡವನ್ನ ತಾಂಡವ್ ಮುಂದಿಟ್ಟಿದ್ದಾರೆ. ಅಮ್ಮನ ಮಾತಿಗೆ ಭಯಪಡುವ ತಾಂಡವ್‌ಗೆ ಸಾಥ್ ನೀಡಲು ಶ್ರೇಷ್ಠಾ ನಕಲಿ ತಂದೆಯಾಗಿ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಎಜುಕೇಷನ್ ಇಲ್ಲಾ ಅಂತಾ ಹಂಗಿಸೋ ತಾಂಡವ್ ಮುಂದೆ ಗೆಲ್ಲಲು ಭಾಗ್ಯ ಈಗ ಸ್ಕೂಲಿಗೆ ಹೋಗುತ್ತಿದ್ದಾಳೆ. ಸೊಸೆಯನ್ನು ಓದಿಸಲೇಬೇಕು ಅಂತಾ ಅತ್ತೆ ಪಣ ತೊಟ್ಟಿದ್ದಾಳೆ. ಇದೆಲ್ಲದರ ನಡುವೆ ಭಾಗ್ಯಳ ಸಂಸಾರದ ಬಂಡಿಗೆ ಬ್ರೇಕ್ ಹಾಕಲು ಕೆಡಿ ಶ್ರೇಷ್ಠಾ ಜೊತೆ ಮಂಜು ಪಾವಗಡ ಜೊತೆಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ನ್ನಡದ ‘ಎರಡನೇ ಸಲ’ ಸಿನಿಮಾದ ನಾಯಕಿ ಸಂಗೀತಾ ಭಟ್ (Sangeetha Bhat) ಅವರು 31ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಪತ್ನಿ ಸಂಗೀತಾಗೆ ‘ಭಾಗ್ಯಲಕ್ಷ್ಮಿʼ (Bhagyalakshmi) ಸೀರಿಯಲ್ ಖ್ಯಾತಿಯ ಸುದರ್ಶನ್ ಅವರು ವಿಶ್ ಮಾಡೋದರ ಜೊತೆಗೆ ಕಾಲೆಳೆದಿದ್ದಾರೆ. ನಟನ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಸ್ಯಾಂಡಲ್‌ವುಡ್‌ನಲ್ಲಿ ಎರಡನೇ ಸಲ, ಅನುಕ್ತ, ಆದ್ಯ, ರೂಪಾಂತರ, ದಯವಿಟ್ಟು ಗಮನಿಸಿ, ಮಾಮು ಟೀ ಅಂಗಡಿ, ಕಾಕಿ, ಕಿಸ್ಮತ್ ಮುಂತಾದ ಸಿನಿಮಾಗಳಲ್ಲಿ ಸಂಗೀತಾ ಭಟ್ ಅವರು ನಟಿಸಿದ್ದಾರೆ. ಚಿತ್ರರಂಗದಿಂದ ಒಂದಷ್ಟು ವರ್ಷಗಳ ಕಾಲ ಬ್ರೇಕ್ ಪಡೆದಿದ್ದ ಸಂಗೀತಾ ಭಟ್ ಅವರು ಈಗ ಅಂಕಿತಾ ಅಮರ್ ನಟನೆಯ ‘ಅಬ ಜಬ ದಬ’ ಸಿನಿಮಾದಲ್ಲಿಯೂ ಸಂಗೀತಾ ಭಟ್ ನಟಿಸುತ್ತಿದ್ದಾರೆ. ಇನ್ನು ‘ಕ್ಲಾಂತ’ ಎನ್ನುವ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಇದನ್ನೂ ಓದಿ:ಕೋಮಲ್ ಹುಟ್ಟುಹಬ್ಬಕ್ಕೆ ‘ಯಲಾ ಕುನ್ನಿ’ ಫಸ್ಟ್ ಲುಕ್

    ನಟನೆಗೆ ಮತ್ತೆ ಕಂಬ್ಯಾಕ್ ಆಗಿರುವ ನಟಿ ಸಂಗೀತಾಗೆ ಪತಿ ಸುದರ್ಶನ್ (Sudarshan)ವಿಶ್ ಮಾಡಿರುವ ರೀತಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹ್ಯಾಪಿ ಬರ್ತ್‌ಡೇ ಸಂಗೀತಾ ಭಟ್. ನಿನಗೆ ಈಗ 31 ವರ್ಷ ಅಂತ ನಾನು ಯಾರಿಗೂ ಹೇಳೋದಿಲ್ಲ. ನೀನು ಆಂಟಿಯಾಗಿ ಒಂದು ವರ್ಷ ಅನುಭವವಿದೆ ಎಂದು ಸಂಗೀತಾ ಭಟ್ ಅವರಿಗೆ ಸುದರ್ಶನ್ ವಿಶ್ ಮಾಡಿದ್ದಾರೆ. ಅದಕ್ಕೆ ನಟಿ ಕೂಡ ಪ್ರತಿಕ್ರಿಯೆ ನೀಡಿ, ನಿಮ್ಮ ನಿಜವಾದ ವಯಸ್ಸು ಹೇಳೋದಾ ನಾನು ಎಂದು ಪತಿಗೆ ಕಾಲೆಳೆದಿದ್ದಾರೆ.

    ಸಂಗೀತಾ- ಸುದರ್ಶನ್ ಅವರು ಪ್ರೀತಿಸಿ ಮದುವೆಯಾದ ಜೋಡಿ, ಪ್ರೀತಿಯ ವಿಷಯವನ್ನ ತಮ್ಮ ಕುಟುಂಬಕ್ಕೆ ತಿಳಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾದರು. ಸುದರ್ಶನ್ ಕೂಡ ‘ಭಾಗ್ಯಲಕ್ಷ್ಮಿʼ ಸೀರಿಯಲ್ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಮಿಂಚಿದ್ದಾರೆ. ಭಾಗ್ಯಗೆ ಕಾಟ ಕೊಡುವ ಗಂಡನಾಗಿ ಕಾಣಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]