ಕಲಬುರಗಿ: ಅಕ್ರಮ ಗಣಿಗಾರಿಕೆ ಮಾಡಿದ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಅವರಿಗೆ ಕಲಬುರಗಿ ಜಿಲ್ಲೆಯ ಕಾಳಗಿ ತಹಶೀಲ್ದಾರ್ (Tahsildar) 25.30 ಕೋಟಿ ರೂ. ದಂಡ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದಲ್ಲಿ 2014ರ ಜು.19 ರಿಂದ 2019ರ ಜು.18ರ ವರೆಗೆ ವಚ್ಚಾ ಗ್ರಾಮದ ಸರ್ವೆ ನಂ.24/4 ರಲ್ಲಿ 2 ಎಕರೆಗೆ ಅನುಮತಿ ಪಡೆದು 8 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂಜೀವಕುಮಾರ್ ತಿಪ್ಪಣ್ಣ ಜವಕರ್ ಎಂಬವರು ಇದರ ವಿರುದ್ಧ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಗಣಿ ಇಲಾಖೆ ಹಾಗೂ ಕಾಳಗಿ ತಹಶೀಲ್ದಾರ ಜಂಟಿ ಪರಿಶೀಲನೆ ನಡೆಸಿದಾಗ, ಅಕ್ರಮ ಗಣಿಗಾರಿಕೆ ನಡೆದಿದೆ ಅನ್ನೋದು ತಿಳಿದುಬಂದಿದೆ. ಬಳಿಕ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ವರದಿ ಬಳಿಕ 25.30 ಕೋಟಿ ರೂ. ದಂಡ ಪಾವತಿಸುವಂತೆ ಮೂರು ಬಾರಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ನೋಟಿಸ್ ಪ್ರಶ್ನಿಸಿ ಖೂಬಾ ಕಾನೂನು ಮೊರೆ ಹೋಗಿದ್ದಾರೆ.
– ಯುವತಿ ದೂರಿನ ಹಿಂದೆ ಖೂಬಾ ಕೈವಾಡವಿದೆ ಎಂದ ಬಿಜೆಪಿ ಶಾಸಕ
ಬೀದರ್: ನನ್ನನ್ನು ಮುಗಿಸಬೇಕು ಎಂದು ಭಗವಂತ್ ಖೂಬಾ (Bhagwanth Khuba) ಪಿತೂರಿ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಮಾಜಿ ಸಚಿವ ಪ್ರಭು ಚೌಹಾಣ್ (Prabhu Chavan) ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಹಿಂದೆ ಭಗವಂತ್ ಖೂಬಾ ಕೈಯಿದ್ದು, ಈ ಟೀಂ ನಾಯಕರು ಭಗವಂತ್ ಖೂಬಾ. ಹುಡುಗಿ ಬಗ್ಗೆ ಏನು ಇಲ್ಲಾ ಸಮಸ್ಯೆ ಇಲ್ಲಾ. ಇದು ನಮ್ಮ ವಿರುದ್ಧ ಮಾಡಿರುವ ಕೆಲಸ ಎಂದು ಖೂಬಾ ಫೋಟೊ ತೋರಿಸಿ ಚೌಹಾಣ್ ಕಿಡಿಕಾರಿದ್ದಾರೆ.
2013 ಸೇರಿದಂತೆ ಕೆಲವು ಬಾರಿ ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವರಿಂದ ದೋಖಾ ಆಗಿದ್ದು, ಅವರು ಮುಂದೆ ಬರಲ್ಲಾ. ಹಿಂದೆ ಪಿತೂರಿ ಮಾಡತ್ತಾರೆ. ಇದರಲ್ಲಿ ನಮ್ಮ ಮಗಳೂ ಇದ್ದಾಳೆ. ಆದರೆ, ಅವರಿಗೆ ಆಮಿಷೆ ತೋರಿಸಿದ್ದಾರಾ ಏನು ಗೊತ್ತಿಲ್ಲ. ನೂರಕ್ಕೆ ನೂರು ನಾನು ಸಾಯೋತನಕ ಈ ಟೀಂನ ಬಿಡಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ
ಕಾನೂನು ಕ್ರಮ ಮಾಡಿಸುತ್ತೇನೆ. ಇದು ಬರೀ ಟ್ರೈಲರ್ ಅಷ್ಟೆ. ಪಿಕ್ಚರ್ ಬಾಕಿ ಇದೆ ಎಂದು ಖೂಬಾ ವಿರುದ್ಧ ಬಿಜೆಪಿ ಶಾಸಕ ಗುಡುಗಿದ್ದಾರೆ.
ಬೀದರ್: ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಮುಖಭಂಗ ಅನುಭವಿಸಿದ್ದಾರೆ. ಕಿರಿಯ ವಯಸ್ಸಿನ ಸಾಗರ್ ಖಂಡ್ರೆ (Sagar Khandre) ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸತ್ತಿನಲ್ಲಿ ನಾನು ಧ್ವನಿ ಎತ್ತುತ್ತೇನೆ. ನಮ್ಮ ತಂದೆ ವರ್ಚಸ್ಸು, ಗ್ಯಾರಂಟಿಯ ಅನುಷ್ಠಾನದಿಂದಾಗಿ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಜಯದ ಬಗ್ಗೆ ಸಾಗರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
ಬೀದರ್ ಕ್ಷೇತ್ರದಲ್ಲಿ ಭಗವಂತ್ ಖೂಬಾ ವಿರುದ್ಧದ ಅಲೆ ಇತ್ತು. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಖೂಬಾ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದರು. ಹೊಸ ಹಾಗೂ ಯುವ ನಾಯಕನಿಗೆ ಜನ ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಚಾಮರಾಜನಗರ: ಕಾಂಗ್ರೆಸ್ ಸಚಿವರ ಪುತ್ರನಿಗೆ ಚೊಚ್ಚಲ ಜಯ
ಬೀದರ್: ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಜಿದ್ದಾಜಿದ್ದಿನ ಲೋಕಸಭಾ ಕ್ಷೇತ್ರ ಬೀದರ್ (Bidar). 1989 ರವರೆಗೂ ಬೀದರ್ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ನಂತರ ಬಿಜೆಪಿ ಕಡೆ ತಿರುಗಿತು. ಮತ್ತೆ 2004, 2009 ರ ಅವಧಿಯಲ್ಲಿ ಕಾಂಗ್ರೆಸ್‌ಗೆ ಹೋಯಿತು. ಈಗ ಬಿಜೆಪಿ ಹಿಡಿತದಲ್ಲಿದೆ. ಒಂದರ್ಥದಲ್ಲಿ ಬೀದರ್ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರತಿಷ್ಠೆಯ ಕ್ಷೇತ್ರವಾಗಿದೆ.
ಕ್ಷೇತ್ರ ಪರಿಚಯ
ಬೀದರ್ 1962 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು 2008 ರ ವರೆಗೆ ಪರಿಶಿಷ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿತ್ತು. ರಾಮಚಂದ್ರ ವೀರಪ್ಪ ಎಂಬ ಸಂಸದರು ಒಟ್ಟು 7 ಬಾರಿ ಗೆದ್ದು ಬಂದು ಇತಿಹಾಸ ನಿರ್ಮಿಸಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದ ಹಾಗೂ ಐದು ಬಾರಿ ಬಿಜೆಪಿಯಿಂದ ಗೆದ್ದು ಇತಿಹಾಸ ಬರೆದಿದ್ದಾರೆ. ಮೂರು ಬಾರಿ ಕಾಂಗ್ರೆಸ್‌ನಿಂದ ನರಸಿಂಗರಾವ್ ಸೂರ್ಯವಂಶಿ ಎಂಬ ಸಂಸದರು ಬೀದರ್‌ನಿಂದ ಸಂಸತ್ ಪ್ರವೇಶ ಮಾಡಿದ್ದಾರೆ. 2009ರಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪ್ಪಳಿ ವಿರುದ್ಧ ಗೆದ್ದು ಬೀದರ್ ಲೋಕಸಭೆಯಿಂದ ಪಾರ್ಲಿಮೆಂಟ್‌ಗೆ ಪ್ರವೇಶ ಮಾಡಿದ್ದಾರೆ. ಆದರೆ 2014ರಲ್ಲಿ ಮಾಜಿ ಸಿಎಂ ಎನ್ ಧರ್ಮಸಿಂಗ್ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ವಿರುದ್ಧ 92 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತು ಭಾರಿ ಮುಖಭಂಗ ಅನುಭವಿಸಿದ್ರು. 2019ರಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ವಿರುದ್ಧ 1,16,834 ಮತಗಳ ಅಂತರದಿಂದ ಬಿಜೆಪಿಯ ಭಗವಂತ್ ಖುಬಾ ಜಯಭೇರಿ ಬಾರಿಸಿದ್ರು. 2014 ಹಾಗೂ 2019 ರಲ್ಲಿ ಮೋದಿ ಅಲೆಯಲ್ಲಿ ಗೆದ್ದು ಬೀಗಿರುವ ಖೂಬಾ ಬೀದರ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಇದನ್ನೂ ಓದಿ: Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿ ಹ್ಯಾಟ್ರಿಕ್ ನಗೆ ಬೀರ್ತಾರಾ ಕರಂದ್ಲಾಜೆ?
ವಿಧಾನಸಭಾ ಕ್ಷೇತ್ರಗಳೆಷ್ಟು?
ಬೀದರ್ ಲೋಕಸಭಾ ಕ್ಷೇತ್ರದಲ್ಲಿ (Lok Sabha Elections 2024) ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇವೆ. ಬೀದರ್ ಉತ್ತರ, ಬೀದರ್ ದಕ್ಷಿಣ, ಭಾಲ್ಕಿ, ಹುಮ್ನಾಬಾದ್, ಔರಾದ್, ಬಸವಕಲ್ಯಾಣ ಜೊತೆಗೆ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಚಿಂಚೊಳಿ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭಗವಂತ್ ಖೂಬಾ (Bhagwanth Khuba) ಎರಡನೆಯ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಂದಿನ ಕೆಪಿಸಿಸಿ ಕಾರ್ಯಾಧ್ಯಕ್ಷರು ಈಗಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಭಗವಂತ್ ಖೂಬಾ ವಿರುದ್ಧ ಸೋತ್ರು. 1,16,834 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿ ಭಗವಂತ್ ಖೂಬಾ, ಈಶ್ವರ್ ಖಂಡ್ರೆಯನ್ನು ಸೋಲಿಸಿ ಎರಡನೇ ಬಾರಿಗೆ ಪಾರ್ಲಿಮೆಂಟ್ ಪ್ರವೇಶ ಮಾಡಿದ್ರು. ಭಗವಂತ್ ಖೂಬಾ 5,85,471 ಲಕ್ಷ ಮತಗಳನ್ನು ಗಳಿಸಿ ಗೆದ್ರೆ ಈ ಕಡೆ 4,68,637 ಮತಗಳನ್ನು ಗಳಿಸಿ ಖಂಡ್ರೆ ಪರಾಜಿತರಾಗಿದ್ರು.
ಈ ಬಾರಿಯ ಆಕಾಂಕ್ಷಿಗಳು ಯಾರು?
2019 ರಲ್ಲಿ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ಹೈಕಮಾಂಡ್ ಸೂಚನೆಯಂತೆ ಭಗವಂತ್ ಖುಬಾ ವಿರುದ್ಧ ಸ್ಪರ್ಧೆ ಮಾಡಿದ್ರು. ಈಶ್ವರ್ ಖಂಡ್ರೆಗೆ ಕಾಂಗ್ರೆಸ್ ಶಾಸಕರಾಗಿದ್ದ ರಹೀಂಖಾನ್, ರಾಜಶೇಖರ್ ಪಾಟೀಲ್ ಹಾಗೂ ಬಿ ನಾರಾಯಣ್‌ರಾವ್ ಸಾಥ್ ನೀಡಿದ್ರು. ಆದ್ರೆ ಈ ಸಲ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಬಿಜೆಪಿಯಿಂದ ಮತ್ತೆ ಕೇಂದ್ರ ಸಚಿವರು, ಹಾಲಿ ಸಂಸದ ಭಗವಂತ್ ಖೂಬಾಗೆ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ಆದರೂ ಬಿಜೆಪಿಯಲ್ಲಿ ಗುರುನಾಥ್ ಕೊಳ್ಳೂರು, ಈಶ್ವರ್ ಸಿಂಗ್ ಠಾಕೂರ್, ಚನ್ನಬಸವಣ್ಣ ಬಳತೆ, ಡೋಣಗಾಪೂರ್ ಸ್ವಾಮೀಜಿ ಸೇರಿದಂತೆ ಸಾಲು ಸಾಲು ಆಕ್ಷಾಂಕ್ಷಿಗಳು ಲೋಕಸಭೆಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡಲು ರೆಡಿಯಾಗಿದ್ದಾರೆ. ಟಿಕೆಟ್ ವಿಚಾರವಾಗಿ ಬಿಜೆಪಿಯಲ್ಲಿ ಒಳಜಗಳವಿದೆ. ಖೂಬಾ ಅವರಿಗೆ ಟಿಕೆಟ್ ನೀಡಬಾರದು ಎಂದು ಸ್ವಪಕ್ಷದ ಶಾಸಕರೇ ಬಿಜೆಪಿ ನಾಯಕರಲ್ಲಿ ಹಕ್ಕೊತ್ತಾಯ ಮಂಡಿಸಿದ್ದರು. ಇತ್ತ ಕಾಂಗ್ರೆಸ್‌ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಹೆಸರು ಸದ್ಯ ಕೇಳಿ ಬರುತ್ತಿದೆ. ಒಂದು ವೇಳೆ ಭಗವಂತ್ ಖೂಬಾಗೆ ಟಿಕೆಟ್ ಸಿಕ್ಕರೆ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸಚಿವರನ್ನು ಮಣಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಈ ಬಾರಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗಿರುವುದರಿಂದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಕೂಡಾ ಬಿಜೆಪಿಗೆ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ
ಖೂಬಾ ಪಾರುಪತ್ಯ
2014 ರಲ್ಲಿ ಪತಂಜಲಿಯ ಯೋಗ ಗುರು ಖ್ಯಾತಿಯ ರಾಮಬಾಬಾದೇವರಿಂದಾಗಿ ಭಗವಂತ್ ಖೂಬಾಗೆ ಅಂದು ಟಿಕೆಟ್ ಸಿಕ್ಕಿತ್ತು. ಮೋದಿ ಅಲೆಯಲ್ಲಿ ಖೂಬಾ ಗೆದ್ದು ಬಂದ್ರು. ಅಂದು ಎದುರಾಳಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್‌ರನ್ನು ಬರೋಬ್ಬರಿ 92 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ ಹೊಸ ಇತಿಹಾಸ ಬರೆದಿದ್ರು. ಖೂಬಾ ಎರಡನೆಯ ಬಾರಿಗೂ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರ್ ಖಂಡ್ರೆಯನ್ನು ಸೋಲಿಸಿದ್ರು. ಎರಡನೆಯ ಬಾರಿ ಗೆದ್ದು ಬೀಗಿದ ಖೂಬಾಗೆ ಗಡಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ. ಕೇಂದ್ರ ಸಚಿವರಾದ ಬಳಿಕ ಕೇಂದ್ರದ ಘಟಾನುಘಟಿ ನಾಯಕರ ಸಂಪರ್ಕ ಪಡೆದಿರುವ ಖೂಬಾ ಸದ್ಯ ಪ್ರಭಾವಿ ಬಿಜೆಪಿ ನಾಯಕರಾಗಿ ಬೆಳೆದು ನಿಂತಿದ್ದಾರೆ. ರಾಜ್ಯದ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡುವ ಏಕೈಕ ಬಿಜೆಪಿ ನಾಯಕ ಅಂದ್ರೆ ಅದು ಖೂಬಾ.
ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಲಾಭ?
ಎರಡು ಬಾರಿ ಬಿಜೆಪಿ ಪಕ್ಷ ಹಾಗೂ ಮೋದಿ ಬಲದ ಮೇಲೆ ಗೆದ್ದು ಬರುತ್ತಿರುವ ಖೂಬಾಗೆ ಈ ಬಾರಿ ಜೆಡಿಎಸ್ ಮೈತ್ರಿಯಿಂದ ವರದಾನವಾಗಲಿದೆ. ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಪ್ರಭಾವಿ ಕುರುಬ ಹಾಗೂ ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಸಹಜವಾಗಿ ಜೆಡಿಎಸ್‌ಗೆ ಹೋಗುತ್ತಿದ್ದ ಜಿಲ್ಲೆಯ ಕುರುಬ ಮತಗಳು ಹಾಗೂ ಹಿಂದುಳಿದ ಮತಗಳು ಬಿಜೆಪಿ ಕಡೆ ಮುಖ ಮಾಡಲಿವೆ. ಬೀದರ್ ದಕ್ಷಿಣದಲ್ಲಿ ಬಂಡೆಪ್ಪ ಖಾಶೆಂಪೂರ್, ಹುಮ್ನಾಬಾದ್‌ನಲ್ಲಿ ಸಿಎಂ ಫೈಜ್ ಹಾಗೂ ಬೀದರ್ ಉತ್ತರದಲ್ಲಿ ಸೂರ್ಯಕಾಂತ್ ನಾಗಮಾರಪಳ್ಳಿ ಸೇರಿದಂತೆ ಜಿಲ್ಲೆಯಲ್ಲಿ ಜೆಡಿಎಸ್ ನಾಯಕರ ದಂಡೇ ಇದೆ. ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಕಾರ್ಯಕರ್ತರ ಪಡೆ ಇದ್ದು, ಅಲ್ಪಸಂಖ್ಯಾತರು ಜೆಡಿಎಸ್ ಕೈ ಹಿಡಿಯಲಿದ್ದಾರೆ. ಹೀಗಾಗಿ ಕೈ ವಿರುದ್ಧ ಬೀದರ್‌ನಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದ ಬಿಜೆಪಿಗೆ ಜೆಡಿಎಸ್ ಮೈತ್ರಿಯಿಂದ ಆನೆ ಬಲ ಬಂದಂತಾಗಿದೆ. ಇದನ್ನೂ ಓದಿ: ಬರಗಾಲದಲ್ಲಿ ಗ್ಯಾರಂಟಿ ಸಮಾವೇಶ – ಸಿಎಂ ವಿರುದ್ಧ ಹೆಚ್‍ಡಿಕೆ ಕೆಂಡ
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
2004 – ರಾಮಚಂದ್ರ ವೀರಪ್ಪ: 23,621 ಅಂತರದಿಂದ ಗೆಲುವು (ಬಿಜೆಪಿ)
2004 – ನರಸಿಂಗರಾವ್ ಸೂರ್ಯವಂಶಿ: 13,470 ಮತಗಳ ಅಂತರದ ಗೆಲುವು (ಕಾಂಗ್ರೆಸ್): ರಾಮಚಂದ್ರ ವೀರಪ್ಪ ನಿಧನದಿಂದಾಗಿ ಬೈ ಎಲೆಕ್ಷನ್
2009 – ಎನ್ ಧರ್ಮಸಿಂಗ್ (ಮಾಜಿ ಮುಖ್ಯಮಂತ್ರಿಗಳು) 39,619 ಮತಗಳ ಅಂತರದಿಂದ ಗೆಲವು (ಕಾಂಗ್ರೆಸ್)
2014 – ಭಗವಂತ್ ಖೂಬಾ: 92,192 ಮತಗಳ ಅಂತರದಿಂದ ಗೆಲುವು (ಬಿಜೆಪಿ)
2019 – ಭಗವಂತ್ ಖೂಬಾ (ಕೇಂದ್ರ ಸಚಿವರು) 1,16,834 ಮತಗಳ ಅಂತರದಿಂದ ಗೆಲುವು (ಬಿಜೆಪಿ)
ಕ್ಷೇತ್ರದ ಜಾತಿವಾರು ಲೆಕ್ಕಾಚಾರ
ಲಿಂಗಾಯತರು: 5.20 ಲಕ್ಷ
ಎಸ್ಸಿ ಹಾಗೂ ಎಸ್ಟಿ: 4.10 ಲಕ್ಷ
ಅಲ್ಪಸಂಖ್ಯಾತರು: 3.40 ಲಕ್ಷ
ಹಿಂದುಳಿದ ವರ್ಗಗಳು: 2.50 ಲಕ್ಷ
ಮರಾಠ: 1.5 ಲಕ್ಷ
ಇತರೆ: 1.8 ಲಕ್ಷ
ಬೀದರ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ವಿಕ್ರಂ ಸಿಂಹರನ್ನು ಬಂಧಿಸಿರುವುದು ಕಾನೂನಿನ ವಿರುದ್ಧವಾಗಿದೆ. ಎಫ್‍ಐಆರ್‍ನಲ್ಲಿ ಹೆಸರಿಲ್ಲದಿದ್ದರೂ ಅವರನ್ನು ಬಂಧಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯನವರ ಕುತಂತ್ರವಾಗಿದೆ. ಈ ರೀತಿ ಕುತಂತ್ರ ಮಾಡಿದರೂ ಸಹ ಪ್ರತಾಪ್ ಸಿಂಹ ಅವರನ್ನು ಅಲ್ಲಿಯ ಜನ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಮ್ಮನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ: ವಿಕ್ರಂ ಸಿಂಹ
ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸರು ಯಾರ ಮೂಗಿನ ಅಳತೆ ಮೇಲೆ ಕೆಲಸ ಮಾಡುತ್ತಿರುವುದು ಗೊತ್ತಿದೆ. ಇದು ಸರಿಯಾದ ನಡೆಯಲ್ಲ. ಪ್ರತಾಪ್ ಸಿಂಹ ಅವರೇ ನೀವು ಎದೆಗುಂದುವುದು ಬೇಡ, ಸತ್ಯಕ್ಕೆ ಜಯವಾಗಲಿದೆ ಎಂದಿದ್ದಾರೆ.
ಬೀದರ್: ತನಿಖೆ ನಡೆದರೆ ಮತ್ತೆ ಜೈಲಿಗೆ (Jail) ಹೋಗುತ್ತಾರೆ ಅನ್ನೋದು ಡಿಕೆ ಶಿವಕುಮಾರ್‌ಗೆ (DK Shivakumar) ಖಾತ್ರಿ ಇದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಭಗವಂತ ಖೂಬಾ (Bhagwanth Khuba) ಅವರು ಟಾಂಗ್ ನೀಡಿದರು.
ರಾಜ್ಯ ಸರ್ಕಾರ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ (CBI) ತನಿಖೆ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಲೂಟಿ ಹೊಡೆದು ಆಸ್ತಿ ಹೆಚ್ಚಳ ಮಾಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಣಯ ಅವರ ವಿರುದ್ದ ಇದೆ ಎಂಬ ಕಾರಣಕ್ಕೆ ಹಿಂದಕ್ಕೆ ಪಡೆದುಕೊಳ್ಳುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಸರ್ಕಾರ ಉತ್ತರಿಸಬೇಕಾಗುತ್ತದೆ ಎಂದರು. ಇದನ್ನೂ ಓದಿ: ಸಚಿವ ಶರಣಬಸಪ್ಪ ದರ್ಶನಾಪೂರ ಕ್ಷೇತ್ರದಲ್ಲೇ 6,000 ಕ್ವಿಂಟಲ್ ಪಡಿತರ ಅಕ್ಕಿಗೆ ಕನ್ನ!
ಯಾದಗಿರಿಯಲ್ಲಿ ಸಿಕ್ಕಿಬಿದ್ದಿರುವ ಪಡಿತರ ಅಕ್ಕಿ ಒಂದು ಉದಾಹರಣೆ ಮಾತ್ರವಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಪ್ರತಿ ಇಲಾಖೆಯಲ್ಲಿ ಇಂತಹ ವ್ಯವಹಾರಗಳೆ ನಡೆಯುತ್ತಿವೆ. ಜನಸಾಮಾನ್ಯರಿಗೆ ಸಿಗಬೇಕಾದ ಸವಲತ್ತುಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜದ ಸಮುದಾಯಗಳನ್ನು ಒಡೆದು ರಾಜಕೀಯ ಮಾಡಿ ಕರ್ನಾಟಕದ ಸಂಪೂರ್ಣ ಅರ್ಥವ್ಯವಸ್ಥೆ ಹದಗೆಡಿಸಿರುವುದು ಕಾಂಗ್ರೆಸ್ (Congress) ಸಾಧನೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿದೆ. ಉಡಾಫೆ ಮಾತುಗಳನ್ನು ಆಡುವುದೇ ಕಾಂಗ್ರೆಸ್ ಸರ್ಕಾರದ ಆರು ತಿಂಗಳ ಸಾಧನೆ ಎಂದು ಕಿಡಿಕಾರಿದರು.
ಕಾನೂನಿನ ಮುಂದೆ ಎಲ್ಲರೂ ಒಂದೇ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಎಂತಹ ಗಣ್ಯ ವ್ಯಕ್ತಿಗಳೇ ಆಗಿರಲಿ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೆ ಕ್ರಮ ತಗೆದುಕೊಳ್ಳಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಇಂತಹ ಪ್ರಕರಣವನ್ನು ಅರಣ್ಯ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಈ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ನಟರಾದ ಜಗ್ಗೇಶ್ (Jaggesh), ದರ್ಶನ್ (Darshan), ನಿಖಿಲ್ ಕುಮಾರ ಸ್ವಾಮಿ, ವಿನಯ್ ಗುರೂಜಿ ಸೇರಿದಂತೆ ಹಲವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ನೋಟಿಸ್ ನೀಡಲು ಮುಂದಾದರು. ಇದೀಗ ಬಹುತೇಕ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ.
ಕಾಫಿನಾಡಿನಲ್ಲಿ ಅರ್ಚಕರ ಬಂಧನ
ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಹುಲಿ ಉಗುರು (Tiger Claw) ಕಾರ್ಯಚರಣೆ ಮುಂದುವರೆದಿದ್ದು, ಹುಲಿ ಉಗುರಿನ ಡಾಲರ್ (Dollar) ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರನ್ನು (Priest) ಬಾಳೆಹೊನ್ನೂರು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಅರ್ಚಕರನ್ನು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು ಮೂರು ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಅರ್ಚಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಬೀದರ್: ಮಾಜಿ ಸಚಿವ ಪ್ರಭು ಚವ್ಹಾಣ್ (Prabhu Chavan) ಮತ್ತು ಕೇಂದ್ರ ಸಚಿವ ಭಗವಂತ ಖೂಬಾ (Bhagwanth khuba) ಕಿತ್ತಾಟ ಈಗ ದೇವರ ಸನ್ನಿಧಿಗೆ ಬಂದು ತಲುಪಿದೆ.
ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಖೂಬಾ ಸೋಮವಾರ ಪ್ರಭು ಚವ್ಹಾಣ್ ಅವರ ಕ್ಷೇತ್ರ ಔರಾದ್ (Aurad) ಪಟ್ಟಣದಲ್ಲಿರುವ ಐತಿಹಾಸಿಕ ಅಮರೇಶ್ವರ ದೇವಸ್ಥಾನಕ್ಕೆ (Amareshwara Temple ) ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲ್ತಾರೆ: ಸಂಜಯ್ ರಾವತ್
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚವ್ಹಾಣ್ ಕೊಲೆ ಆರೋಪ ಮಾಡಿದ್ದು ನನಗೆ ಶಾಕ್ ಆಗಿದೆ. ಆ ಶಾಕ್‌ನಿಂದ ಇನ್ನೂ ನಾನು ಹೊರ ಬಂದಿಲ್ಲ. ಹೀಗಾಗಿ ಎಲ್ಲಾ ಆರೋಪಗಳಿಗೆ ಉತ್ತರ ನೀಡು ಎಂದು ಅಮರೇಶ್ವರನ ಉಡಿಯಲ್ಲಿ ಹಾಕಿದ್ದೇನೆ ಎಂದು ಹೇಳಿದರು.
ಹಿಂದೆ ಆರೋಪಗಳನ್ನು ಮಾಡಿದಾಗ ನಮ್ಮ ಪಕ್ಷದವರೇ ಎಂದು ಸುಮ್ಮನಿದ್ದೆ. ಆದರೆ ಈ ನೋವಿನಿಂದ ಹೊರಗೆ ಬರಬೇಕು ಎಂದು ಇಂದು ಅಮರೇಶ್ವರನ ಮೊರೆ ಹೋಗಿದ್ದೆನೆ. ಇಂದು ರಾಜಕಾರಣ ಹೊಲಸಾಗಿದ್ದು ಕ್ರಿಮಿನಲ್ ಹಿನ್ನೆಲೆ ಇರುವ ಕೋರ್ಟ್ ಕೇಸ್ ಇರುವ ಸಚಿವರೇ ಹೆಚ್ಚಾಗಿದ್ದಾರೆ ಎಂದರು.
ಕೊಲೆ ಮಾಡುತ್ತಾರೆ ಎಂದು ಹೇಳಿದ್ದು ನನ್ನನ್ನು ಘಾಸಿಗೊಳಿಸಿದೆ. ನನ್ನ ಹೇಳಿಕೆಗಳಿಗೆ ನೇರವಾಗಿ ಪ್ರಭು ಚೌವ್ಹಾಣ್ ಉತ್ತರ ನೀಡಲಿಲ್ಲ. ದರ್ಪದ, ಅಹಂಕಾರದಿಂದ ಕಾರ್ಯಕರ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ನೂರು ವರ್ಷ ಬದುಕಿ, ಸಾಯುವತನಕ ನೀವು ಔರಾದ್ ಶಾಸಕರಾಗಿರಿ ಎಂದು ಖೂಬಾ ವಾಗ್ದಾಳಿ ನಡೆಸಿದರು.
ನವದೆಹಲಿ: ಮಾಜಿ ಸಚಿವ ಪ್ರಭು ಚವ್ಹಾಣ್ (Prabhu Chauhan) ವಿರುದ್ಧ ನೂರು ಕೋಟಿ ಮಾನಹಾನಿ (Defamation) ಪ್ರಕರಣ ದಾಖಲಿಸಲು ಚಿಂತಿಸಿದ್ದು, ಈ ಬಗ್ಗೆ ಹೈಕಮಾಂಡ್ ನಾಯಕರ ಅನುಮತಿ ಕೇಳಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ಕಾನೂನು ಹೋರಾಟ ಮಾಡಲಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಹೇಳಿದ್ದಾರೆ.
ಮಂಡಲದ ಕಾರ್ಯಕಾರಣಿಯಲ್ಲಿ ಮಾತನಾಡುವ ಮಾತು ಬಿಟ್ಟು ನನ್ನ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು, ಹಿತೈಷಿಗಳು ನಿರಂತರವಾಗಿ ಸಂಪರ್ಕ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಪ್ರಭು ಚವ್ಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದೆ. ಕಳೆದ 9 ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದರು ಎಂದರು. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
ನನ್ನ ಮತ್ತು ಅವರ ಸಮಸ್ಯೆ ಪಕ್ಷದ ವೇದಿಕೆಯಲ್ಲಿ ಬಗೆಹರಿಯುತ್ತವೆ. ತಪ್ಪು ತಿಳುವಳಿಕೆ ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ ಇದರ ಹಿಂದೆ ತಂತ್ರ, ಕುತಂತ್ರ, ಮೋಸ, ಕಪಟತನವಿದೆ ಎಂದು ಈಗ ಅರ್ಥವಾಗಿದೆ. ನನ್ನ ಚರಿತ್ರೆ, ಪಕ್ಷದ ಸೇವೆ ನೋಡಿ ಮೋದಿ ಅವರು ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: 50ರ ಅಜ್ಜಿಗೆ ಫ್ಲೈಯಿಂಗ್ ಕಿಸ್ ಕೊಡಲು ರಾಹುಲ್‌ಗೇನು ಹುಡುಗಿಯರ ಕೊರತೆ ಇಲ್ಲ: ಕಾಂಗ್ರೆಸ್ ಶಾಸಕಿ ಹೇಳಿಕೆ
ಬೀದರ್ (Bidar) ಜಿಲ್ಲೆಯಲ್ಲಿ ಒಬ್ಬ ಶಾಸಕನಿಂದ ನಾಲ್ಕಕ್ಕೆ ಶಾಸಕರ ಸಂಖ್ಯೆ ಹೆಚ್ಚಿಸಿದೆ. ಇಂತಹ ಸಮಯದಲ್ಲಿ ಪ್ರಭು ಚವ್ಹಾಣ್ ಎಲ್ಲರ ಜೊತೆಗೆ ಸಂಭ್ರಮಿಸಬೇಕಿತ್ತು. ಆದರೆ ಅತ್ತು ಕರೆದು ದೂಷಣೆ ಮಾಡುತ್ತಿದ್ದಾರೆ. ಇದು ಅವರ ತಂತ್ರ ಕುತಂತ್ರದ ಆಟ. ಈ ಬಗ್ಗೆ ನಮ್ಮ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ನಾನು ನನ್ನ ಭಾವನೆ ಹೇಳಿಕೊಂಡಿದ್ದೇನೆ. ಪಕ್ಷದ ವೇದಿಕೆಯಲ್ಲಿ ಸತ್ಯಾಸತ್ಯತೆಯನ್ನು ವರಿಷ್ಠರು ಹೊರ ಹಾಕಲಿದ್ದಾರೆ ಎಂದರು. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಹೊರಗೆ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ
ನೂರು ಕೋಟಿ ಮಾನಹಾನಿ ಕೇಸ್ ಹಾಕಲು ನಿರ್ಧರಿಸಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ದೂರು ದಾಖಲಿಸುತ್ತೇನೆ. ಯಾವ್ಯಾವ ಆರೋಪ ಮಾಡಿದ್ದಾರೆ ಎಲ್ಲದಕ್ಕೂ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ನಾನು ಪಕ್ಷಕ್ಕೆ ಮುಜುಗರ ಮಾಡುವುದಿಲ್ಲ. ಪಕ್ಷದಲ್ಲಿ ಅಥವಾ ಕೋರ್ಟ್‌ನಲ್ಲಿ ಅವರಿಗೆ ಉತ್ತರ ಸಿಗಲಿದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಎರಡನೇ ಬಾರಿ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದ ಮೋದಿ – ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು
ಪ್ರಚಾರಕ್ಕೆ ಬಂದಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಪೂರ್ವ ಕಾರ್ಯಕರ್ತರ ಅಸಮಾಧಾನ ಅವರ ಗಮನಕ್ಕೆ ತಂದಿದ್ದೆ. ಸಿಟಿ ರವಿ ಸಮ್ಮುಖದಲ್ಲಿ ಪ್ರಸ್ತಾಪ ಮಾಡಿದ್ದೆ. ಅವರ ಕ್ಷೇತ್ರದಲ್ಲಿ ಪ್ರವಾಸ ಮಾಡುವುದಾಗಿ ಹೇಳಿದ್ದೆ. ನಾನು ಮಂತ್ರಿಯಾಗಿದ್ದೇನೆ, ನಾನು ಗೆಲ್ಲುತ್ತೇನೆ. ನನ್ನ ಕ್ಷೇತ್ರಕ್ಕೆ ಬರುವ ಅಗತ್ಯ ಇಲ್ಲ ಎಂದು ಹೇಳಿದ್ದರು ಎಂದು ಹೇಳಿದರು. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ
9 ವರ್ಷಗಳಿಂದ ಸಾರ್ವಜನಿಕವಾಗಿ ಆರೋಪಗಳನ್ನು ಎದುರಿಸಿದ್ದೇನೆ. ಪಕ್ಷ ಕಟ್ಟುವುದು ನನ್ನ ಕೆಲಸ. ಬಿಜೆಪಿ (BJP) ಮೇಲೆ ನಂಬಿಕೆ ಇದೆ. ಸಂಬಂಧ ಕಡಿದು ಹೋಯಿತು ಎಂದು ಭಾವಿಸುವುದಿಲ್ಲ. ಅವರು ಅಹಂಕಾರದ ಸ್ವಭಾವ ಮುಂದುವರಿಸಿದರೆ ಮಾನಹಾನಿ ಕೇಸ್ ಹಾಕುತ್ತೇನೆ. ಚುನಾವಣೆ ಹತ್ತಿರ ಬಂದಾಗ ಮನಸ್ಸು ಬದಲಾಗಬಹುದು. ಚುನಾವಣೆಯಲ್ಲಿ ನನ್ನ ವಿಜಯಕ್ಕೆ ಅವರು ದುಡಿಯುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಮಣಿಪುರ ಶೀಘ್ರದಲ್ಲೇ ಶಾಂತಿಯ ಬೆಳಕನ್ನು ಕಾಣಲಿದೆ: ಮೋದಿ ಭರವಸೆ
ಬೀದರ್: ಭಗವಂತ ಖೂಬಾ (Bhagwanth Khuba) ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ವಿಫಲವಾಗಿದ್ದರಿಂದ ಈಗ ತಾನು ಸಾಕಿದ ಗೂಂಡಾಗಳಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಮಾಜಿ ಸಚಿವ ಪ್ರಭು ಚವ್ಹಾಣ್ (Prabhu Chauhan) ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಚವ್ಹಾಣ್ ವಿರುದ್ಧ ವಾಕ್ಸಮರ ನಡೆಸಿದ ಖೂಬಾಗೆ ಔರಾದ್‌ನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ಖೂಬಾ ವಿರುದ್ಧ ಚವ್ಹಾಣ್ ಕಿಡಿಕಾರಿ ಇಡೀ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನನಗೆ ಕೊಲೆ ಮಾಡಿ 6 ತಿಂಗಳಲ್ಲಿ ಉಪಚುನಾವಣೆಗೆ ಕುತಂತ್ರ ನಡೆಸಲಾಗುತ್ತಿದೆ. ರಸ್ತೆ ಮಧ್ಯೆ ನನಗೆ ಗುಂಡು ಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಬೆಂಬಲಿಗರಿಂದ ಇದು ಗೊತ್ತಾಗಿದೆ ಎಂದು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ನೀತಿಗಳಿಂದಲೇ ಭಾರತ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯಾಗಿದೆ: ನಿರ್ಮಲಾ ಸೀತಾರಾಮನ್