Tag: Bhagwant Man

  • ಪಟಿಯಾಲದ ಕಾಳಿ ದೇವಿ ಮುಂಭಾಗ ಹಿಂಸಾಚಾರ – 2 ಮಂದಿಗೆ ಗಾಯ

    ಪಟಿಯಾಲದ ಕಾಳಿ ದೇವಿ ಮುಂಭಾಗ ಹಿಂಸಾಚಾರ – 2 ಮಂದಿಗೆ ಗಾಯ

    ಚಂಡೀಗಢ: ದೇಶಾದ್ಯಂತ ಧಾರ್ಮಿಕ ವಿಚಾರವಾಗಿ ಎಲ್ಲೆಡೆ ಹಿಂಸಾಚಾರ ವರದಿಗಳು ಆಗುತ್ತಲೇ ಇವೆ. ಇದೀಗ ಪಂಜಾಬ್‌ನ ಪಟಿಯಾಲದಲ್ಲೂ ಹಿಂಸಾಚಾರ ವರದಿಯಾಗಿದೆ.

    ಶುಕ್ರವಾರ ಪಂಜಾಬ್‌ನ ಪಟಿಯಾಲದಲ್ಲಿ ಕಾಳೀ ದೇವಿ ದೇವಾಲಯದ ಮುಂಭಾಗದಲ್ಲಿ ಹಿಂಸಾಚಾರ ವರದಿಯಾಗಿದೆ. ಘಟನೆ ವೇಳೆ ಒಂದು ಗುಂಪು ಖಾಲಿಸ್ತಾನ್ ವಿರೋಧಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸಂಘರ್ಷ ನಡೆದಿದೆ.

    ಹಿಂಸಾಚಾರದ ವೇಳೆ ಇಬ್ಬರಿಗೆ ಗಾಯಗಳಾಗಿವೆ. ಈ ವೇಳೆ ಪಟಿಯಾಲದ ಕೆಲವು ಭಾಗಗಳಲ್ಲೂ ಉದ್ವಿಗ್ನತೆ ವರದಿಯಾಗಿದ್ದು, ಹಲವೆಡೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

    ಘರ್ಷಣೆಯ ಸಂದರ್ಭದಲ್ಲಿ ನೆರೆದಿದ್ದ ಒಂದು ಗುಂಪು ಮಹಾರಾಷ್ಟ್ರದ ಶಿವಸೇನೆಯದ್ದು ಎಂಬುದು ತಿಳಿದುಬಂದಿದೆ. ಇಲ್ಲಿ ಮೆರವಣಿಗೆಗೆ ಯಾವುದೇ ಅನುಮತಿ ಇಲ್ಲದ ಕಾರಣ ಶಿವಸೇನೆ ಮುಖ್ಯಸ್ಥ ಹರೀಶ್ ಸಿಂಗ್ಲಾ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಪಟಿಯಾಲ ಡಿಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ಪಂಜಾಬ್ ಸಿಎಂ ಪ್ರತಿಕ್ರಿಯೆ:
    ಪಟಿಯಾಲದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಸಿಎಂ ಭಗವಂತ್ ಮಾನ್, ಪಟಿಯಾಲದಲ್ಲಿ ನಡೆದ ಹಿಂಸಾಚಾರ ಅತ್ಯಂತ ದುರದೃಷ್ಟಕರ. ನಾನು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಆ ಪ್ರದೇಶದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲಾಗಿದೆ. ಘಟನೆ ಬಗ್ಗೆ ನಾವು ಗಂಭೀರವಾಗಿ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ಇಂತಹ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಹಾಗೂ ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮೀಸಲಾತಿ ಅಭ್ಯರ್ಥಿಗಳು ಅಧಿಕ ಅಂಕ ಗಳಿಸಿದ್ರೆ ಸಾಮಾನ್ಯ ವರ್ಗದಡಿ ಪರಿಗಣನೆ: ಸುಪ್ರೀಂ

     

  • ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

    ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.

    ಭಗವಂತ್ ಮಾನ್ ಅವರು ರಾಜ್ಯದ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಲೋಕಸಭಾ ಸಂಸದರಾಗಿದ್ದಾರೆ. ಸದ್ಯ ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅವರು, ಇಂದು ದೆಹಲಿಗೆ ತೆರಳಿ ಸಂಗ್ರೂರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂಗ್ರೂರಿನ ಜನ ನನಗೆ ಇಷ್ಟು ವರ್ಷ ಪ್ರೀತಿ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು. ಈಗ ನನಗೆ ಇಡೀ ಪಂಜಾಬ್‍ಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು, ಕೆಲವೇ ತಿಂಗಳಲ್ಲಿ ಲೋಕಸಭೆಯಲ್ಲಿ ಅವರ ಧ್ವನಿಯನ್ನು ಮತ್ತೆ ಕೇಳಲಾಗುವುದು ಎಂದು ನಾನು ಸಂಗ್ರೂರ್ ಜನರಿಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ಭಗವತ್ ಮಾನ್ ಅವರು ಮಾರ್ಚ್ 16ರಂದು ಮಧ್ಯಾಹ್ನ 12:30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಿನಲ್ಲಿ ಪಂಜಾಬ್‍ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಪ್ ಪಕ್ಷ 92 ಸ್ಥಾನಗಳನ್ನು ಗೆದ್ದಿತು. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

  • ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ಚಂಡೀಗಢ: ಯಾವುದೇ ಧರ್ಮದ ಬಗ್ಗೆ ಅಗೌರವವನ್ನು ತೋರಿದರೆ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಹೋಶಿಯಾರ್‍ಪುರದಲ್ಲಿ ನಡೆದ ಗೋವುಗಳ ಹತ್ಯೆಯನ್ನು ಪಂಜಾಬ್‍ನ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಖಂಡಿಸಿದ್ದಾರೆ.

    ಹೋಶಿಯಾರ್‍ಪುರದಿಂದ ಸುಮಾರು 36 ಕಿಮೀ ದೂರದಲ್ಲಿರುವ ಜಾನ್ಸ್ ಹಳ್ಳಿಯ ಸಮೀಪದಲ್ಲಿರುವ ರೈಲ್ವೆ ಹಳಿ ಬಳಿ ಶನಿವಾರ ಬೆಳಗ್ಗೆ ಸುಮಾರು 19 ಹಸುಗಳ ಮೃತದೇಹಗಳು ಪತ್ತೆಯಾಗಿವೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಭಗವಂತ್ ಮಾನ್ ಅವರು, ಯಾವುದೇ ಬೆಲೆ ತೆತ್ತಾದರೂ ಪಂಜಾಬ್‍ನಲ್ಲಿ ಶಾಂತಿ ಮತ್ತು ಸಹೋದರತ್ವ ಹದಗೆಡಲು ನಾವು ಬಿಡುವುದಿಲ್ಲ. ಪಂಜಾಬ್‍ನಲ್ಲಿ ಶಾಂತಿ ಕದಡುವ ಸಮಾಜ ವಿರೋಧಿಗಳ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ರಾಜ್ಯದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    ಘಟನೆಯ ತನಿಖೆಗಾಗಿ ಪಂಜಾಬ್ ಗೋವು ಸೇವಾ ಆಯೋಗವು ದ್ವಿಸದಸ್ಯ ಸಮಿತಿಯನ್ನು ರಚಿಸಿದ್ದು, ಈ ವಿಚಾರವಾಗಿ ಏಳು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ಪೊಲೀಸ್ ವರಿಷ್ಠಾಧಿಕಾರಿ (ತನಿಖೆ) ಮುಖ್ತಿಯಾರ್ ರೈ ಅವರು, ಜಾನ್ಸ್ ಹಳ್ಳಿಯ ಸಮೀಪದಲ್ಲಿ ರೈಲ್ವೇ ಹಳಿ ಬಳಿ ಕೈಬಿಟ್ಟ ಸ್ಥಳದಲ್ಲಿ ತಲೆ ಇಲ್ಲದ ಕನಿಷ್ಠ 19 ಹಸುಗಳ ಶವಗಳು ಪತ್ತೆಯಾಗಿದ್ದು, ಜೊತೆಗೆ ಆಲೂಗಡ್ಡೆ ತುಂಬಿದ ಸುಮಾರು 12 ಗೋಣಿ ಚೀಲಗಳು ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಹಸುಗಳನ್ನು ಮತ್ತು ಆಲೂಗಡ್ಡೆ ತುಂಬಿದ ಗೋಣಿ ಚೀಲಗಳನ್ನು ಎಸೆದಿದ್ದಾರೆ. ಗೋಹತ್ಯೆ ಮಾಡಿದ ಬಳಿಕ ಅವುಗಳ ಚರ್ಮವನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಬೆಳಗ್ಗೆ ಸ್ಥಳೀಯರು ಹಸುಗಳು ಸತ್ತಿರುವುದನ್ನು ಕಂಡು ತಾಂಡಾ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

  • ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಕೆಲ ಕಡೆ ಅಚ್ಚರಿ ಮೂಡಿಸಿದ್ದರೆ, ಕೆಲ ರಾಜ್ಯಗಳಲ್ಲಿ ನಿರೀಕ್ಷಿತ ಫಲದಂತಿದೆ. ಫಲಿತಾಂಶ ಪೂರ್ವ ಬಂದ ಸಮೀಕ್ಷೆಗಳು ಬಹುತೇಕ ಖಚಿತವಾಗಿವೆ. ಅದರಂತೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿಯೇ ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸಿ, ಅಧಿಕಾರ ಚುಕ್ಕಾಣೆ ಹಿಡಿಯಲು ದಿನಗಣನೆ ಶುರುವಾಗಿದೆ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಚುನಾವಣೆ ಮುನ್ನವೇ ಪಂಜಾಬ್ ನ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಎಂದು ಕೇಜ್ರಿವಾಲಾ ಘೋಷಣೆ ಮಾಡಿದ್ದರು. ಅವರ ಮೇಲಿನ ನಂಬಿಕೆ ಸುಳ್ಳಾಗಿಲ್ಲ. ನಿರೀಕ್ಷೆಗಿಂತ ಹೆಚ್ಚೆ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗಾಗಿ ಭಗವಂತ್ ಮಾನ್ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ.  ಹಾಗಾದರೆ, ಯಾರು ಈ ಭಗವಂತ್ ಖಾನ್? ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

    ಸಿನಿಮಾ ಮತ್ತು ಮ್ಯೂಸಿಕ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಭಗವಂತ್. ತೊಂಬತ್ತರ ದಶಕದಿಂದಲೂ ಅವರು ಕಾಮಿಡಿ ಶೋಗಳನ್ನು ಮಾಡುತ್ತಲೇ, ಸಾವಿರಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ. ಈ ವೇಳೆಯಲ್ಲಿ ಭಗವಂತ್ ಜತೆ ಕಾಣಿಸಿಕೊಳ್ಳುತ್ತಿದ್ದ ಮತ್ತೊಂದು ಹೆಸರು ಖ್ಯಾತ ಕಾಮಿಡಿಯನ್ ಜಗ್ತರ್ ಜಗ್ಗಿ ಅವರದ್ದು. ಭಗವಂತ್ ಮತ್ತು ಜಗ್ತರ್ ಜಗ್ಗಿ ಕಾಮಿಡಿ ಇದ್ದರೆ ಸಾಕು, ನಗೆಹಬ್ಬ ಗ್ಯಾರಂಟಿ ಆಗಿರುತ್ತಿತ್ತು. ಈ ಜೋಡಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ  ಅಮೆರಿಕಾ, ಇಂಗ್ಲೆಂಡ್, ಅರಬ್ ದೇಶಗಳು, ಕೆನಡಾ ಸೇರಿದಂತೆ ವಿದೇಶಗಳಲ್ಲೂ ಇವರು ಸಾಕಷ್ಟು ಕಾಮಿಡಿ ಶೋಗಳನ್ನು ನೀಡಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಕಾಮಿಡಿ ಶೋಗಳು ಮಾತ್ರವಲ್ಲ, ತೊಂಬತ್ತರ ದಶಕದಲ್ಲಿ ಭಗವಂತ್ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. ಈವರೆಗೂ ಸುಮಾರ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಮಾಜ ಸೇವೆಯತ್ತ ಒಲವು ಹೆಚ್ಚಾಗಿದ್ದರಿಂದ ಸಿನಿಮಾ ರಂಗದಿಂದ ದೂರವಾಗಿ ಲೋಕ್ ಲೆಹರ್ ಫೌಂಡೇಷನ್ ಎಂಬ ಎನ್.ಜಿ.ಓ ಸಂಸ್ಥೆಯನ್ನು ಸ್ಥಾಪಿಸಿ ವಿಶೇಷ ಚೇತನ ಮಕ್ಕಳ ಬಾಳಿಗೆ ಬೆಳಕಾದವರು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

    ಭಗಮಂತ್ ಮಾನ್ ಹುಟ್ಟಿದ್ದು ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಸತೋಜ್ ಗ್ರಾಮದಲ್ಲಿ. ಹರ್ಪಾಲ್ ಕೌರ್ ಮ್ತು ಮಹಿಂದರ್ ಸಿಂಗ್ ದಂಪತಿಯ ಪುತ್ರ ಇವರು. 17 ಅಕ್ಟೋಬರ್ 1973ರಲ್ಲಿ ಹುಟ್ಟಿರುವ ಭಗವಂತ್, ನಗುತ್ತಲೇ ಭೂಮಿಗೆ ಬಂದರು ಎನ್ನುವ ಮಾತೂ ಜನಜನಿತ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆಯೇ ಕಾಮಿಡಿ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಸಮಾಜ ಸೇವೆಯತ್ತ ಮುಖ ಮಾಡಿದರು. ಅವರು ಮಾಡಿದ ಸಮಾಜ ಸೇವೆಯೇ ಇಂದು ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೂ ಕರೆದುಕೊಂಡು ಬಂದಿದೆ.

  • ಪಂಜಾಬ್‌ ಹಾಲಿ ಸಿಎಂ ವಿರುದ್ಧ ಆಪ್‌ ಸಿಎಂ ಅಭ್ಯರ್ಥಿಯಿಂದ ಓಪನ್ ಚಾಲೆಂಜ್

    ಪಂಜಾಬ್‌ ಹಾಲಿ ಸಿಎಂ ವಿರುದ್ಧ ಆಪ್‌ ಸಿಎಂ ಅಭ್ಯರ್ಥಿಯಿಂದ ಓಪನ್ ಚಾಲೆಂಜ್

    ಚಂಡೀಗಢ: ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ತಮ್ಮ ವಿರುದ್ಧ ಧುರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ.

    ನಾನು ಚಮಕೌರ್ ಸಾಹಿಬ್ (ಚರಂಜಿತ್ ಚನ್ನಿ ಕ್ಷೇತ್ರ) ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ಅವರು ಧುರಿಯಿಂದ ಸ್ಪರ್ಧಿಸಬಹುದು, ನಾನು ಅವರನ್ನು ಸ್ವಾಗತಿಸುತ್ತೇನೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. ಭಗವಂತ್ ಮಾನ್ ಅವರು ಪಂಜಾಬ್ ಚುನಾವಣೆಯಲ್ಲಿ ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಭಗವಂತ್ ಮಾನ್ ಸಂಸದರಾಗಿರುವ ಸಂಗ್ರೂರ್ ಜಿಲ್ಲೆಯಲ್ಲಿ ಈ ಕ್ಷೇತ್ರವಿದೆ. ಇದನ್ನೂ ಓದಿ: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಜನವರಿ 18 ರಂದು ಫೋನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 93 ಕ್ಕಿಂತಲೂ ಹೆಚ್ಚು ಮಂದಿ ಅವರಿಗೆ ಮತ ಚಲಾಯಿಸಿ ಅವರನ್ನು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಧುರಿ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್‍ನ ದಲ್ವೀರ್ ಸಿಂಗ್ ಖಂಗುರಾ ಶಾಸಕರಾಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್