Tag: Bhagwant Khooba

  • ಬಿಜೆಪಿ ಅಂದ್ರೆ ಭಾರತೀಯ ಜೂಟಾ ಪಾರ್ಟಿ: ಈಶ್ವರ್ ಖಂಡ್ರೆ

    ಬಿಜೆಪಿ ಅಂದ್ರೆ ಭಾರತೀಯ ಜೂಟಾ ಪಾರ್ಟಿ: ಈಶ್ವರ್ ಖಂಡ್ರೆ

    ಬೀದರ್: ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ಈಗ ಬಿಜೆಪಿ ಅವರು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಬಿಜೆಪಿ ಎಂದರೆ ಭಾರತೀಯ ಜೂಟಾ ಪಾರ್ಟಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಬೀದರ್ ನಲ್ಲಿ ಸುದ್ದಿಗೋಷ್ಠಿ ಮಾಡಿದ ಖಂಡ್ರೆ, ಗಾಂಧಿಜೀ ಅವರ ಸ್ವರಾಜ್ ಕಲ್ಪನೆಯನ್ನು ಪೂರ್ತಿಯಾಗಿ ಮಾಡದೆ ಗಾಂಧಿಜೀಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಬಹಿರಂಗವಾಗಿ ಗಾಂಧಿಜಿ ಕೊಲೆ ಮಾಡಿದ ಗೋಡ್ಸೆಯ ದೇವಾಲಯ ಕಟ್ಟಲು ಹೋರಟಿದ್ದೀರಿ ಎಂದು ಜನ ಸ್ವರಾಜ್ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ:  70 ವರ್ಷದ ದೇಶದ ಸಾಧನೆಯನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಭೂಪೇಶ್ ಬಘೇಲ್

    ಪಂಚ ರಾಜ್ಯಗಳ ಚುನಾವಣೆ ಇದ್ದು, ಚುನಾವಣೆಯ ದೃಷ್ಟಿಯಿಂದ ಹೆದರಿ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ರೈತರಿಗೆ ಸಿಕ್ಕ ಜಯ ಜೊತೆಗೆ ಬೆಂಬಲ ನೀಡಿದ್ದ ವಿರೋಧ ಪಕ್ಷಗಳ ಜಯ ಎಂದರು.

    Bhagwanth khuba Bidar MP

    ಕೇಂದ್ರ ಸಚಿವ ಭಗವಂತ್ ಖೂಬಾ ರಸಗೊಬ್ಬರದ ಕೊರತೆ ಇಲ್ಲ ಎನ್ನುತ್ತಿದ್ದಾರೆ. ಆದರೆ ಒಂದೂವರೆ ತಿಂಗಳಿನಿಂದ ರಸಗೊಬ್ಬರದ ಕೊರತೆ ಇದೆ. ನೀವೇ ಹೋಗಿ ರಸಗೊಬ್ಬರದ ಅಂಗಡಿಗಳಲ್ಲಿ ಡಿಎಪಿ ರಸಗೊಬ್ಬರ ಕೇಳಿ ಆದ್ರೆ ರಸಗೊಬ್ಬರ ಸಿಗಲ್ಲ. ಏಕೆಂದರೆ ರಸಗೊಬ್ಬರ ಕೊರತೆ ಇದೆ ಎಂದು ಖೂಬಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಅನುಷ್ಕಾ ಸಂಗೀತ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ಆಲಿಯಾ

  • ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಲಿ – ಭಗವಂತ್ ಖೂಬಾ

    ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಲಿ – ಭಗವಂತ್ ಖೂಬಾ

    ಬೀದರ್: ಬಹುಮತವಿಲ್ಲದೆ ಅಲ್ಪಮತಕ್ಕೆ ಕುಸಿದಿರುವ ಸರ್ಕಾರದಲ್ಲಿ ಸಿಎಂ ಏನು ಬಹುಮತ ಸಾಬೀತು ಮಾಡುತ್ತಾರೆ ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ. ಹೀಗಿರುವಾಗ ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗುತ್ತೇನೆ ಎನ್ನುವುದಕ್ಕೆ ಮುಖ್ಯಮಂತ್ರಿಗಳಿಗೆ ಯಾವ ನೈತಿಕತೆಯೂ ಇಲ್ಲಾ ಎಂದು ಸಂಸದ ಭಗವಂತ್ ಖೂಬಾ ವಾಗ್ದಾಳಿ ನಡೆಸಿದ್ದಾರೆ.

    ನಗರದ ರಂಗಮಂದಿರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರು, ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಾರೆ. ಇನ್ನು ಕೆಲವರು ಈಗಿರುವ ಸಿಎಂ ಇರಬೇಕು ಎನ್ನುತ್ತಾರೆ. ಇದನ್ನು ನೋಡಿದರೆ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟು ಗೊಂದಲಗಳು ಇವೆ ಹಾಗೂ ಸ್ವಾರ್ಥವಿದೆ ಎಂದು ಗೊತ್ತಾಗುತ್ತಿದೆ. ರಾಜ್ಯದ ಏಳಿಗೆಯ ಬಗ್ಗೆ ಎರಡು ಪಕ್ಷಗಳು ಸ್ವಲ್ಪವು ಯೋಚನೆ ಮಾಡುತ್ತಿಲ್ಲಾ ಎಂದು ಮೈತ್ರಿ ಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಬೇಕು. ರಿವರ್ಸ್ ಆಪರೇಷನ್ ಮಾಡುತ್ತೇನೆ. ಬೇರೆ ಏನೋ ತಂತ್ರಗಾರಿಕೆ ಮಾಡುತ್ತೇನೆ ಎಂದರೆ ರಾಜ್ಯದ ಜನರಿಗೆ ಇದು ಸರಿ ಬರೋಲ್ಲಾ ಎಂದು ಬಿಜೆಪಿ ಸಂಸದ ಭಗವಂತ್ ಖೂಬಾ ಸಿಎಂ ಹಾಗೂ ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.