Tag: Bhagwa Dhwaja

  • ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    – ಖುದ್ದು ಮಹಿಳೆಯರೇ ಧ್ವಜ ಹೊಲಿದು ಹಂಚಿಕೆ

    ಬೀದರ್: ಮಂತ್ರಾಕ್ಷತೆ ಬಳಿಕ ಮನೆ ಮನೆಗೆ ಭಗವಾಧ್ವಜ (Bhagwa Dhwaja) ವಿತರಣೆ ಮಾಡಲಾಗುತ್ತಿದೆ. ಬೀದರ್‌ನ ರಾಮಭಕ್ತರು ಈ ಕೆಲಸ ಮಾಡುತ್ತಿದ್ದಾರೆ. ಜನವರಿ 22ರಂದು ಪ್ರತಿ ಮನೆ ಮನೆಯ ಮೇಲೂ ಭಗವಾಧ್ವಜ ಹಾರಾಡುವಂತೆ ಮಾಡುತ್ತಿದ್ದಾರೆ.

    ಬೀದರ್‌ನ (Bidar) ಈ ಮಹಿಳಾ ಭಕ್ತರು ಶ್ರೀರಾಮನಿಗಾಗಿ (Sri Ram) ಬರೋಬ್ಬರಿ ಒಂದು ಸಾವಿರ ಭಗವಾಧ್ವಜ ಹಾರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

    ಬೀದರ್ ತಾಲೂಕಿನ ಕಾಡವಾದ ಗ್ರಾಮದ ರಾಮನ ಪರಮ ಭಕ್ತೆಯರು ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆ ವಿತರಣೆಯಿಂದ ಪ್ರೇರಣೆಗೊಂಡಿದ್ದಾರೆ. ಈ ಪ್ರೇರಣೆಯಿಂದ ಒಂದು ಸಾವಿರ ಭಗವಾ ಧ್ವಜಗಳನ್ನ ಸ್ವತಃ ತಾವೇ ಹೊಲಿದು ಹಂಚಿಕೆ ಮಾಡುತ್ತಿದ್ದಾರೆ. ಬಾಲ ರಾಮನ ಪ್ರತಿಷ್ಠಾಪನೆಯ ದಿನ ಗ್ರಾಮದ ಎಲ್ಲಾ ಮನೆಗಳ ಮೇಲೂ ಭಗವಾಧ್ವಜ ಹಾರಾಡಬೇಕೆಂದು ಪಣ ತೊಟ್ಟು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ

    ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಈಗಾಗಲೇ ಧ್ವಜದ ಬಟ್ಟೆ ವಿತರಿಸಿದ್ದಾರೆ. 500 ಧ್ವಜ ತಯಾರಿಸಿದ್ದು 1 ಸಾವಿರಕ್ಕೂ ಹೆಚ್ಚು ಭಗವಾಧ್ವಜ ತಯಾರಿಸುವ ಪಣ ತೊಟ್ಟಿದ್ದಾರೆ. ರಾಮನ ಪರಮ ಭಕ್ತೆಯರಾಗಿರುವ ಇಂದುಮತಿ ಮರಕಂದಾ, ಸವಿತಾ ನಿನ್ನಿ, ಶ್ರೀದೇವಿ ಮೀನಕೇರಿ, ಸವಿತಾ ಶೀಲವಂತ, ಪದ್ಮಾವತಿ ಕಾರ್ಕನಳ್ಳಿ, ಅಂಬಿಕಾ ಹೂಗಾರ ಎಂಬುವರು ಧ್ವಜ ತಯಾರಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ದಿನ ಬೀದರ್‌ನ ಈ ಗ್ರಾಮದ ಪ್ರತಿ ಮನೆಗಳ ಮೇಲೆ ಭಗವಾಧ್ವಜ ಹಾರಿಸುವ ಮೂಲಕ ಮಹಿಳೆಯರು ರಾಮನಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos 

  • ಮಸೀದಿ ಮೇಲೆ ಭಗವಾಧ್ವಜ ಹಾರಿಸಿ ಪರಾರಿಯಾದ ಕಿಡಿಗೇಡಿಗಳು

    ಮಸೀದಿ ಮೇಲೆ ಭಗವಾಧ್ವಜ ಹಾರಿಸಿ ಪರಾರಿಯಾದ ಕಿಡಿಗೇಡಿಗಳು

    ಬೀದರ್: ಯಾರು ಇಲ್ಲದ ವೇಳೆ ಮಸೀದಿ (Mosque) ಮೇಲೆ ಕಿಡಿಗೇಡಿಗಳು ಭಗವಾಧ್ವಜ (Bhagwa Dhwaj) ಹಾರಿಸಿ ಪರಾರಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ ಕೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊರ ವಲಯದ ಜಾಮೀಯಾ ಮಸೀದಿ (Jamia Masjid) ಮೇಲೆ ರಾತ್ರಿ ಭಗವಾಧ್ವಜ ಹಾರಿಸಿ ಕಿಡಿಗೇಡಿಗಳು ಪರಾರಿಯಾಗಿದ್ದು ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಬಸವಕಲ್ಯಾಣ ಗ್ರಾಮೀಣ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಭಗವಾಧ್ವಜ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.

     

    ಗ್ರಾಪಂ ಕಚೇರಿಯಲ್ಲಿ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ಮಾಡಿದ ಸಿಪಿಐ ನ್ಯಾಮೇಗೌಡ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳನ್ನು‌ ಕೂಡಲೇ ಬಂಧಿಸುತ್ತೇವೆ. ಯಾರು ಅಶಾಂತಿಗೆ ಕಾರಣವಾಗಬಾರದು‌‌‌ ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಜೊತೆ ದೋಸ್ತಿ – ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟ

    ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]