Tag: Bhagavant khuba

  • ಮತದಾರರಿಗೆ ಆಮಿಷವೊಡ್ಡಿದ ಕೈ ನಾಯಕರು: ಭಗವಂತ ಖೂಬಾ ವಾಗ್ದಾಳಿ

    ಮತದಾರರಿಗೆ ಆಮಿಷವೊಡ್ಡಿದ ಕೈ ನಾಯಕರು: ಭಗವಂತ ಖೂಬಾ ವಾಗ್ದಾಳಿ

    ಬೀದರ್: ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡುವಾಗ ಮತವನ್ನು ತೋರಿಸಿ ಮಾಡಬೇಕು ಎಂಬ ಷರತ್ತನ್ನು ಕಾಂಗ್ರೆಸ್ ನಾಯಕರು ಮತದಾರರಿಗೆ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಭಗವಂತ್ ಖೂಬಾ ವಾಗ್ದಾಳಿ ನಡೆಸಿದರು.

    ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ಕ್ಕೆ ಈಶ್ವರ್ ಖಂಡ್ರೆ ಮತ್ತು ರಾಜಶೇಖರ ಪಾಟೀಲ್ ಅವರ ತಂಡಕ್ಕೆ ಸೋಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪೊಳ್ಳು ಧಮ್ಕಿಗೆ ಮತದಾರರು ಹೆದರುವ ಅವಶ್ಯಕತೆ ಇಲ್ಲ. ಸಿಎಂ ಬಂದು ಹೋದ ಮೇಲೆ ಕಾಂಗ್ರೆಸ್ ಈ ರೀತಿ ಮಾಡಿದೆ ಎಂದ ಅವರು, ಕಾಂಗ್ರೆಸ್ ನಾಯಕರಿಂದ ಗಡಿ ಜಿಲ್ಲೆಯಲ್ಲಿ ಕುದುರೆ ವ್ಯಾಪಾರ ವಿಚಾರವಾಗಿ ಆನಂದ ದೇವಪ್ಪ, ಶಿವರಾಜ್ ನರಶೆಟ್ಟಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈಶ್ವರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಕುಮ್ಮಕ್ಕಿನಿಂದಾಗಿ ಮತದಾರರಿಗೆ ಹಣದ ಆಮಿಷ ಒಡ್ಡಿ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ: ಸಿದ್ದರಾಮಯ್ಯ

    BJP - CONGRESS

    ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಶಾಸಕ ರಾಜಶೇಖರ ಪಾಟೀಲ್ ವಿರುದ್ಧ ಆರೋಪಿಸಿದರು. ಇದನ್ನೂ ಓದಿ: ಹೆಂಡ್ತಿ ಇಲ್ಲ ಅಂತ ಎರಡನೇ ಮದುವೆ- ಈಕೆಗೆ ಇವನು ನಾಲ್ಕನೆಯವನು!

  • ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲ

    ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲ

    ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿದ್ದ ಕೊಳಕು ಬೆಡ್, ಕೊಠಡಿಗಳು ಹಾಗೂ ಅವ್ಯವಸ್ಥೆಯನ್ನು ಕಂಡು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ವೈದ್ಯಕೀಯ ಸಚಿವ ಇ. ತುಕಾರಾಂ ಅವರು ಸಿಟ್ಟಿಗೆದ್ದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ಇಂದು ಬ್ರಿಮ್ಸ್ ಆಸ್ಪತ್ರೆಯನ್ನು ಪರಿಶೀಲಿಸಲು ಮೂವರು ಸಚಿವರು ಹಾಗೂ ಎಂಪಿ ಭೇಟಿ ಕೊಟ್ಟಿದ್ದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವೈದ್ಯಕೀಯ ಸಚಿವ ಇ ತುಕಾರಾಂ, ಕ್ರೀಡಾ ಸಚಿವ ರಹೀಂ ಖಾನ್ ಹಾಗೂ ಸಂಸದ ಭಗವಂತ್ ಖೂಬಾ ಅವರು ಆಸ್ಪತ್ರೆಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೆಂಡಾಮಂಡಲರಾದರು.

    ಆಸ್ಪತ್ರೆಯ ಅವ್ಯವಸ್ಥೆ, ರೋಗಿಗಳಿಗೆ ನೀಡುತ್ತಿರುವ ಕೊಳಕು ಬೆಡ್‍ಗಳು, ಸ್ವಚ್ಛವಿಲ್ಲದ ಕೊಠಡಿಗಳನ್ನು ಕಂಡು ಸಚಿವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಹಾಗೆಯೇ ಆಸ್ಪತ್ರೆಯ ಮುಚ್ಚಿದ ಕೋಣೆಯ ಬೀಗ ತೆಗೆಯಲು ಸಚಿವರು ತಾಕೀತು ಮಾಡಿದ್ದು, ಕೊಣೆಯನ್ನು ಸಿಬ್ಬಂದಿಗಳು ತೆರೆದ ನಂತರ ಅಲ್ಲಿನ ದುಸ್ಥಿತಿ ಕಂಡು ಕೆಂಡಾಮಂಡಲರಾದರು. ಏನಿದು ಬ್ರಿಮ್ಸ್ ಪರಿಸ್ಥಿತಿ ಎಂದು ಪ್ರಶ್ನಿಸಿ ಜಿಲ್ಲಾ ಸರ್ಜನ್ ಡಾ. ರತಿಕಾಂತ್‍ಸ್ವಾಮಿ ಮೇಲೆ ಸಚಿವರು ಗರಂ ಆದರು.

    ಬಳಿಕ ಬೀದರ್ ಬ್ರಿಮ್ಸ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ಶಿವಾನಂದ ಪಾಟೀಲ್ ಅವರಿಗೆ ವ್ಯಕ್ತಿಯೊಬ್ಬ ಹೇಳಿದ ಮಾತು ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಸಚಿವರನ್ನು ಕಂಡ ವ್ಯಕ್ತಿ, ಬ್ರಿಮ್ಸ್ ಗೆ ಬೀಗ ಹಾಕಿಕೊಂಡು ಹೋಗಿ ಎಂದು ಕೀಲಿಕೈ ನೀಡಿದ್ದಾನೆ. ಅಲ್ಲದೆ ಬ್ರಿಮ್ಸ್ ಅವ್ಯವಸ್ಥೆ ನೋಡಿ ಸಾಕಾಗಿದೆ ಎಂದು ಸಚಿವರ ಬಳಿ ದೂರಿದ್ದಾನೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಶಿವಾನಂದ ಪಾಟೀಲ್ ಅವರು, ಇಲ್ಲಾ ಸರಿಪಡಿಸುತ್ತೇವೆ ಎಂದು ವ್ಯಕ್ತಿಯನ್ನು ಸಮಾಧಾನ ಮಾಡಿ, ಮುಜುಗರದಿಂದಲೇ ಕಾರು ಹತ್ತಿ ಹೋದರು.

  • ರಾಜಕೀಯ ವೈರತ್ವ ಮರೆತು ಜೊತೆಗೆ ಕುಣಿದ ಖೂಬಾ, ಖಂಡ್ರೆ – ವಿಡಿಯೋ ನೋಡಿ

    ರಾಜಕೀಯ ವೈರತ್ವ ಮರೆತು ಜೊತೆಗೆ ಕುಣಿದ ಖೂಬಾ, ಖಂಡ್ರೆ – ವಿಡಿಯೋ ನೋಡಿ

    ಬೀದರ್: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನೆಲೆ ಬೀದರ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷಬೇದ ಮರೆತು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    ಲೊಕಸಭಾ ಚುನಾವಣಾ ಗುಂಗು ಮರೆತು ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ಪರಸ್ಪರ ಎದುರಾಳಿಯಾಗಿದ್ದರೂ ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ವೈರತ್ವವನ್ನು ಮರೆತು ಕುಣಿದು ಸಂತೋಷ ಪಟ್ಟಿದ್ದಾರೆ. ಅವರಿಗೆ ಸಚಿವ ಬಂಡೆಪ್ಪ ಕಾಶೆಂಪೂರ್, ಎಂಎಲ್‍ಸಿ ವಿಜಯ ಸಿಂಗ್, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಾಥ್ ನೀಡಿದರು.

    ಇಂದು ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನೆಲೆ ಬೀದರ್ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಎಲ್ಲಾ ಪಕ್ಷದ ನಾಯಕರು ಒಟ್ಟಾಗಿ ಕುಣಿದು ಲೋಕಸಭಾ ಚುನಾವಣಾ ಪ್ರಚಾರದಿಂದ ಕೊಂಚ ರಿಲೀಫ್ ಪಡೆದಿದ್ದಾರೆ.