Tag: Bhagavad Gita

  • ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಗಾಂಧಿನಗರ: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ- ಕಾಲೇಜುಗಳಲ್ಲಿ ಭಗವದ್ಗೀತೆ ಕಡ್ಡಾಯ ಮಾಡಲು ಗುಜರಾತ್ ಸರ್ಕಾರ ಮುಂದಾಗಿದೆ.

    ಆರನೇ ತರಗತಿಯಿಂದ 12ನೇ ತರಗತಿವರೆಗೂ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಬೋಧಿಸುವುದು, ಪಠಣ ಮಾಡಲಾಗುತ್ತದೆ. ಭಗವದ್ಗೀತೆ ಎನ್ನುವುದು ಕೇವಲ ಗ್ರಂಥವಲ್ಲ. ಅದೊಂದು ಜೀವನ ವಿಧಾನ. ನಮ್ಮ ಸಂಸ್ಕೃತಿಯ  ಪ್ರತೀಕ. ಇದು ಎಲ್ಲರಿಗೂ ಗೊತ್ತಾಗುವುದು ಅತ್ಯಗತ್ಯ ಎಂದು ಶಿಕ್ಷಣ ಸಚಿವ ಜಿತು ವಘಾನಿ ತಿಳಿಸಿದ್ದಾರೆ. ಇದನ್ನೂ ಓದಿ: 5 ನಿಮಿಷ ಚಾರ್ಜ್‌ ಮಾಡಿದ್ರೆ 600 ಕಿ.ಮೀ ಸಂಚಾರ – ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ಬಿಡುಗಡೆ

    ಭಗವದ್ಗೀತೆಯಿಂದ ಕಲಿಯುವುದು ಬೇಕಾದಷ್ಟಿದೆ. ಹೀಗಾಗಿ ಶಾಲೆಗಳಲ್ಲಿ ಅಳವಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲರ ಮನೆಯಲ್ಲಿ ಭಗವದ್ಗೀತೆ ಇರಬೇಕು ಮತ್ತು ಪಠಣ ನಡೆಸಬೇಕು. ಕೆಲವೇ ದಿನಗಳಲ್ಲಿ ಇನ್ನಷ್ಟು ರಾಜ್ಯಗಳ ಶಾಲೆಗಳಲ್ಲಿ ಭಗವದ್ಗೀತೆ ಪಠಣವನ್ನು ಜಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  • ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಮೊದಲ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಿದೆ.

    ತನ್ನ ಪಿಎಸ್‌ಎಲ್‌ವಿ 51 ರಾಕೆಟ್‌ ಮೂಲಕ ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಶ್ರೀಹರಿಕೋಟದಲ್ಲಿರುವ ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:30ಕ್ಕೆ ಉಡಾವಣೆ ಮಾಡಲಾಯಿತು.

    ಒಟ್ಟು 20 ಉಪಗ್ರಹಗಳನ್ನು ಇಂದು ಉಡಾವಣೆ ಮಾಡಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ 2 ಉಪಗ್ರಹಗಳ ಉಡಾವಣೆಯನ್ನು ಕಳೆದ ವಾರ ರದ್ದು ಮಾಡಲಾಗಿತ್ತು.

    ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರು ಇರುವ ಉಪಗ್ರಹವನ್ನು ಇಂದು ಕಳುಹಿಸಲಾಯಿತು.

    ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹ 637 ಕೆಜಿ ತೂಕವನ್ನು ಹೊಂದಿದ್ದು, ಇದು ಬ್ರೆಜಿಲ್‌ ವ್ಯಾಪ್ತಿಯಲ್ಲಿರುವ ಅಮೆಜಾನ್‌ ಪ್ರದೇಶದ ಅರಣ್ಯ ನಾಶದ ಬಗ್ಗೆ ಮಾಹಿತಿ ನೀಡಲಿದೆ.

    ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್  ಉಡಾವಣೆಗೂ ಮೊದಲು ತಿಳಿಸಿದ್ದರು.  ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ, 25 ಸಾವಿರ ದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

    ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

    ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • ಬಾಹ್ಯಾಕಾಶಕ್ಕೆ ಮೋದಿ ಫೋಟೋ, ಭಗವದ್ಗೀತೆ – ಇಸ್ರೋ ರಾಕೆಟ್‌ ಮೂಲಕ ಉಪಗ್ರಹ ಉಡಾವಣೆ

    ಬಾಹ್ಯಾಕಾಶಕ್ಕೆ ಮೋದಿ ಫೋಟೋ, ಭಗವದ್ಗೀತೆ – ಇಸ್ರೋ ರಾಕೆಟ್‌ ಮೂಲಕ ಉಪಗ್ರಹ ಉಡಾವಣೆ

    – ಸ್ಪೇಸ್‌ ಕಿಡ್ಜ್‌ ಇಂಡಿಯಾ ಅಭಿವೃದ್ಧಿ ಪಡಿಸಿದ ಉಪಗ್ರಹ
    – 25 ಸಾವಿರ ಜನರ ಹೆಸರು ಬಾಹ್ಯಾಕಾಶಕ್ಕೆ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತನ್ನ ಮೊದಲ ಉಡಾವಣೆಯನ್ನು ಫೆ.28ರಂದು ನಡೆಸಲಿದೆ.

    ಪಿಎಸ್‌ಎಲ್‌ವಿ -51 ರಾಕೆಟ್‌ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದ್ದು, ಈ ಪೈಕಿ ಒಂದು ಖಾಸಗಿ ಉಪಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

    ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಲಿದೆ.

    ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್ ಹೇಳಿದ್ದಾರೆ. ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಪ್ರತಿ, 25000 ಮಂದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

    ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

    ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ –  ಹ್ಯಾಕರ್‌ ಶ್ರೀಕಿ

    ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

    – ಭಗವದ್ಗೀತೆ ಪುಸ್ತಕದೊಂದಿಗೆ ಸಿಸಿಬಿ ಕಚೇರಿಗೆ ಆಗಮನ
    – ಮುಂದೆ ಚೀನಿ ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತೇನೆ

    ಬೆಂಗಳೂರು: “ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಭಗವದ್ಗೀತೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ. ಬಳಿಕ ನಾನು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತೇನೆ” ಇದು ಡ್ರಗ್ಸ್‌ ಪ್ರಕರಣದಲ್ಲಿ ಬಂಧನಗೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಪೊಲೀಸ್‌ ವಿಚಾರಣೆಯ ವೇಳೆ ತಿಳಿಸಿದ ತನ್ನ ಏಕಾಗ್ರತೆಯ ರಹಸ್ಯ.

    ನ.17 ರಂದು ಬೆಂಗಳೂರಿನ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ 25 ವರ್ಷದ ಶ್ರೀಕೃಷ್ಣ ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಜಾಸ್ತಿ ಮಾತನಾಡಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಭಗವದ್ಗೀತೆ ಬೇಕೇಬೇಕು:
    ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ಇರುವ ಶ್ರೀಕೃಷ್ಣ ಠಾಣೆಯಲ್ಲೂ ಪ್ರತಿ ದಿನ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಾನೆ. ರಾತ್ರಿ ಭಗವದ್ಗೀತೆ ಪುಸ್ತಕ ಓದುವುದರ ಜೊತೆಗೆ ಇಂದು ಸಿಸಿಬಿ ಪೊಲೀಸರ ಕಚೇರಿಗೆ ವಿಚಾರಣೆಗೆ ಹಾಜರಾಗಲು ಕರೆ ತಂದಾಗಲೂ ಕೈಯಲ್ಲಿ ಭಗವದ್ಗೀತೆ ಪುಸ್ತಕವನ್ನು ಹಿಡಿದುಕೊಂಡೇ ಬಂದಿದ್ದ.

    ಭಗವದ್ಗೀತೆ ಪುಸ್ತಕವನ್ನು ಯಾಕೆ ಓದುತ್ತಿದ್ದಿ ಎಂದು ಪ್ರಶ್ನಿದ್ದಕ್ಕೆ, ಹ್ಯಾಕಿಂಗ್‌ ಮಾಡಲು ಮನಸ್ಸಿಗೆ ಏಕಾಗ್ರತೆ ಬೇಕು. ಭಗದ್ಗೀತೆ ಓದಿದ ಬಳಿಕ ಏಕಾಗ್ರತೆ ಸಿಕ್ಕಿ ನಾನು ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಗವದ್ಗೀತೆ ಅಲ್ಲದೇ ಸ್ವಾಮಿ ವಿವೇಕಾನಂದ, ಓಶೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀಕೃಷ್ಣ ಓದಿದ್ದಾನೆ.

    ಆಧ್ಯಾತ್ಮದ ಬಗ್ಗೆ ಎಷ್ಟು ಒಲವು ಹೊಂದಿದ್ದಾನೆ ಎಂದರೆ ಪ್ರತಿ ಗಂಟೆಗೆ ಭಗವದ್ಗೀತೆ ಓದಿ ಬಳಿಕ ಧ್ಯಾನ ಮಾಡುತ್ತಿದ್ದಾನೆ. ವಿಚಾರಣೆಯ ಸಂದರ್ಭದಲ್ಲೂ ಶ್ರೀಕಿ ಭಗವದ್ಗೀತೆಯಲ್ಲಿ ಬರುವ ಕೃಷ್ಣನ  ಉಪದೇಶವನ್ನು ಹೇಳುತ್ತಿದ್ದಾನೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್‌, ಸರ್ಕಾರಿ ಟೆಂಡರ್‌ ವೆಬ್‌ಸೈಟ್‌ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅರೆಸ್ಟ್

    ಹ್ಯಾಕಿಂಗ್‌ ನಿಲ್ಲಿಸಲ್ಲ:
    ಸದ್ಯ ಉದ್ಯೋಗ ಇಲ್ಲ ಮುಂದೇನು ಎಂದು ಅಧಿಕಾರಿಗಳು ಪ್ರಶ್ನಿದ್ದಕ್ಕೆ, ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಹ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸಲ್ಲ. ನಾನು ಯಾವುದೇ ಉದ್ಯೋಗ ಮಾಡುವುದಿಲ್ಲ. ಸ್ಥಳೀಯ ವೆಬ್ ಸೈಟ್‌ಗಳನ್ನು ಇನ್ನು ಮುಂದೆ ಹ್ಯಾಕ್ ಮಾಡುವುದಿಲ್ಲ. ಬದಲಾಗಿ ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಹ್ಯಾಕಿಂಗ್‌ ಹೇಗೆ?
    ಹ್ಯಾಕರ್ ಶ್ರೀಕಿ ವೆಬ್‌ಸೈಟ್‌ ಹ್ಯಾಕ್‌ ಮಾಡಲು Hak5 WIFI pineapple ಡಿವೈಸ್‌ ಬಳಸುತ್ತಿದ್ದ. ಈ ಸಾಧನದ ಮೂಲಕ ವೆಬ್‌ಸೈಟ್‌ ಕೋಡ್‌ನಲ್ಲಿ ಬಗ್‌ ಪತ್ತೆ ಮಾಡಿ ಸರ್ವರ್‌ ಹ್ಯಾಕ್‌ ಮಾಡುತ್ತಿದ್ದ. ನಂತರ ವೆಬ್‌ಸೈಟ್‌ ಅನ್ನು ತನಗೆ ಹೇಗೇ ಬೇಕೋ ಹಾಗೆ ಕೆಲಸ ಮಾಡುವಂತೆ ಬದಲಾವಣೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಪೋಕರ್‌ ವೆಬ್‌ಸೈಟ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದ.

  • ಅನಾವರಣಗೊಳ್ಳಲಿದೆ ಬರೋಬ್ಬರಿ 800 ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥ

    ಅನಾವರಣಗೊಳ್ಳಲಿದೆ ಬರೋಬ್ಬರಿ 800 ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥ

    ನವದೆಹಲಿ: ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 800 ಕೆ.ಜಿ ತೂಕದ, 670 ಪುಟಗಳನ್ನು ಹೊಂದಿರುವ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ದೆಹಲಿಯ ಇಸ್ಕಾನ್ ದೇವಾಲಯದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.

    ದೆಹಲಿಯ ಪೂರ್ವ ಕೈಲಾಸ್ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಬೃಹತ್ ಭಗವದ್ಗೀತೆ ಗ್ರಂಥವನ್ನು ಅನಾವರಣ ಮಾಡಲಿದ್ದಾರೆ. ಈ ಬೃಹತ್ ಭಗವದ್ಗೀತೆಯೂ 670 ಪುಟಗಳನ್ನು ಹೊಂದಿದ್ದು, 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿದೆ. ಆದರಿಂದ ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಹೆಗ್ಗಳಿಕೆ ಪಡೆಯಲಿದೆ.

    ವಿಶ್ವದೆಲ್ಲೆಡೆ ಸುಮಾರು 400 ಕ್ಕೂ ಹೆಚ್ಚು ಕೃಷ್ಣ ದೇಗುಲ ಹಾಗೂ 100ಕ್ಕೂ ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್ ಗಳನ್ನು ಇಸ್ಕಾನ್ ಸಂಸ್ಥೆ ನಡೆಸುತ್ತಿದೆ. ವಿಶೇಷವಾಗಿ ಈ ಭಗವದ್ಗೀತೆಯ ಕಾಗದವು ವಾಟರ್ ಪ್ರೂಫ್ ಆಗಿದ್ದು, ಈ ಪವಿತ್ರ ಗ್ರಂಥವು 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲದೆ ಯೂಪೊ ಸಿಂಥೆಟಿಕ್ ಲೇಪಿತ ಮಿಲನ್ ಬಳಸಿ ಇಟಲಿಯ ಮಿಲಾನ್‍ನಲ್ಲಿ ಗ್ರಂಥವನ್ನು ಮುದ್ರಿಸಲಾಗಿದೆ ಎಂದು ಇಸ್ಕಾನ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾತಿ-ಮತ, ಕೋಮು ಭಾವನೆ ಮೀರಿರೋ ಮಕ್ಕಳು- ಕುರಾನ್, ಭಗವದ್ಗೀತೆ, ಬೈಬಲ್ ಎಲ್ಲಕ್ಕೂ ಸೈ

    ಜಾತಿ-ಮತ, ಕೋಮು ಭಾವನೆ ಮೀರಿರೋ ಮಕ್ಕಳು- ಕುರಾನ್, ಭಗವದ್ಗೀತೆ, ಬೈಬಲ್ ಎಲ್ಲಕ್ಕೂ ಸೈ

    ಚಿಕ್ಕಮಗಳೂರು: ಅದು ಸಣ್ಣ ಸರ್ಕಾರಿ ಶಾಲೆ. ಇರೋದು 150 ಮಕ್ಕಳು. ಒಂದೊಂದು ಮಗುನೂ ಸೌಹಾರ್ದತೆಯ ರಾಯಭಾರಿಗಳು. ಜಾತಿ-ಮತ-ಕೋಮು ಭಾವನೆಯನ್ನು ಮೀರಿರೋ ಇಲ್ಲಿನ ಮಕ್ಕಳು, ನಾವೆಲ್ಲಾ ಒಂದೇ ಎಂದು ಕುರಾನ್ ಗೂ ಸೈ, ಭಗವದ್ಗೀತೆಗೂ ಸೈ ಎಂದು ಹೇಳುತ್ತಿದ್ದಾರೆ.

    ಸದ್ಯಕ್ಕೆ ಕರ್ನಾಟಕ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಟಿಪ್ಪು ಜಯಂತಿ ಬೇಕು-ಬೇಡದ ಚರ್ಚೆ ಹಿಡಿದಿದೆ. ಆದ್ರೆ ಚಿಕ್ಕಮಗಳೂರಿನ ಕದ್ರಿಮಿದ್ರಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು ನಾವೆಲ್ಲಾ ಒಂದೇ ಎಂದು ಕೂಗಿ ಹೇಳುತ್ತಿದ್ದಾರೆ. ಅದು ಭಗವದ್ಗೀತೆ, ಕುರಾನ್, ಬೈಬಲ್ ಪಠಿಸುವ ಮೂಲಕ.

    ಕ್ರಿಶ್ಚಿಯನ್ ಮಕ್ಕಳು ಬೈಬಲ್ ಹೇಳಿಕೊಟ್ಟರೆ, ಮುಸ್ಲಿಂ ಮಕ್ಕಳು ಕುರಾನ್ ಹೇಳಿಕೊಡುತ್ತಾರೆ ಹಾಗೂ ಹಿಂದೂ ಮಕ್ಕಳು ಭಗವದ್ಗೀತೆ ಕಲಿಸಿಕೊಡುತ್ತಾರೆ. ಹಿಂದೂ-ಮುಸ್ಲಿಂ-ಕ್ರೈಸ್ತ ಮಕ್ಕಳೆಲ್ಲಾ ನಾವೆಲ್ಲಾ ಒಂದೇ ಎಂದು ಸೌಹಾರ್ದಯುತವಾಗಿ ಬೆಳೆಯುತ್ತಿದ್ದಾರೆ.

    ಎರಡೂವರೆ ವರ್ಷಗಳಿಂದ ಮಕ್ಕಳ ಈ ಸಾಧನೆಗೆ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಬೆಂಗಾವಲಾಗಿ ನಿಂತಿದ್ದಾರೆ. ಮಕ್ಕಳಿಗೆ ಕಷ್ಟವಾಗುವಂತಹ, ಅರ್ಥೈಸಿಕೊಳ್ಳಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಶಿಕ್ಷಕರು ತಿಳಿ ಹೇಳುತ್ತಾರೆ. ವಾರದಲ್ಲಿ ಮೂರು ದಿನ ಮೂರು ಪಿರಿಯಡ್‍ ಗಳು ಸೌಹಾರ್ದತೆಯ ಸಂದೇಶಕ್ಕೆ ಮೀಸಲಾಗಿದೆ. ಶಿಕ್ಷಕರ ಜೊತೆ ಪೋಷಕರು ಕೂಡ ಮಕ್ಕಳ ಕಲಿಕೆಗೆ ಬೆಂಗಾವಲಾಗಿದ್ದಾರೆ.