Tag: Bhagavad Gita

  • ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

    ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

    ಕಲಬುರಗಿ: ರಾಜೀವ್ ಗಾಂಧಿ ಅವರು ದೂರದರ್ಶನದಲ್ಲಿ ರಾಮಾಯಣ, ಮಹಾಭಾರತ ತೋರಿಸುವ ವ್ಯವಸ್ಥೆಯನ್ನು ಮಾಡಿದ್ದರು. ಭಗವದ್ಗೀತೆ ಬಗ್ಗೆ ನಮಗೆ ಯಾವುದೇ ಹೊಟ್ಟೆ ಉರಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯದಾ ಯದಾ ಹಿ ಧರ್ಮಸ್ಯ, ಯಾವ ಶ್ಲೋಕ ಬೇಕು ಹೇಳಿ ನಾನು ಹೇಳುತ್ತೇನೆ. ನಾವು ಹಿಂದುಗಳು, ಹಿಂದುತ್ವ ಬಿಜೆಪಿ ಆಸ್ತಿನಾ? ಎಲ್ಲಾ ಧರ್ಮದ ಉತ್ತಮ ವಿಚಾರಗಳನ್ನು ಕಲಿಸಲಿ ನಮಗೆ ಅಭ್ಯಂತರವಿಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣೆವರೆಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

    ಮೇಕೆದಾಟು ವಿಚಾರವಾಗಿ ಮಾತನಾಡಿ, ಡಬಲ್ ಇಂಜಿನ ಸರ್ಕಾರಕ್ಕೆ ಬದ್ದತೆ ಇರಬೇಕು. ಎಲ್ಲಾ ಸರಿಯಿದೆ ಅಂತ ಸಿಎಂ ಹೇಳಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಬೇಕು. ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಬೇಕೋ, ತಮಿಳುನಾಡು ಬೇಕೋ ಅನ್ನೋದನ್ನು ಹೇಳಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚುನಾವಣೆವರಗೆ ಸುಮ್ಮನಿದ್ದರು. ಆದರೆ ಇದೀಗ ಪೆಟ್ರೋಲ್ ಮತ್ತು ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಮತದಾರರು ತಾಳ್ಮೆ ಕಳೆದುಕೊಂಡಿದ್ದಾರೆ. ಜನರ ಆದಾಯ ಹೆಚ್ಚು ಆಗಿಲ್ಲ ಬೆಲೆ ಏರಿಕೆ ಮಾತ್ರ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ವಿರೋಧಿಸಿ, ಪಿಕ್ ಪಾಕೇಟರ್ಸ್ ವಿರುದ್ಧ ಹೋರಾಟ ಮಾಡುತ್ತೇವೆ. ಸಿಎಂ ಅವರು ಬೆಲೆ ಏರಿಕೆ ಮಾಡಬಾರದು. ಡಬಲ್ ಇಂಜಿನ್ ಸರ್ಕಾರ ಅಂತ ಹೇಳುತ್ತೀರಿ. ಇದೀಗ ಸರ್ಕಾರವೇ ಬೆಲೆ ಏರಿಕೆಯ ವೆಚ್ಚ ಭರಿಸಬೇಕು ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

  • ಭಗವದ್ಗೀತೆಯ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ: ನ್ಯಾಯವಾದಿ ಸುರೇಂದ್ರ ಉಗಾರೆ

    ಭಗವದ್ಗೀತೆಯ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ: ನ್ಯಾಯವಾದಿ ಸುರೇಂದ್ರ ಉಗಾರೆ

    ಬೆಳಗಾವಿ: ಪವಿತ್ರಗಂಥ್ರ ಭಗವದ್ಗೀತೆ ಮೂಲ ಪುಸ್ತಕ ಎಲ್ಲಿದೆ? ಎಂಬುವುದರ ಕುರಿತು ಪ್ರತಿಯೊಬ್ಬ ಜನಸಾಮಾನ್ಯರ ಪ್ರಶ್ನೆಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಮಾಹಿತಿ ಹಕ್ಕು ಹೋರಾಟಗಾರ, ನ್ಯಾಯವಾದಿ ಸುರೇಂದ್ರ ಉಗಾರೆ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಗವದ್ಗೀತೆ ಶಾಲೆಗಳಲ್ಲಿ ಪಠ್ಯ ರೂಪದಲ್ಲಿ ನೀಡಲು ಚಿಂತನೆ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಗಂಥ್ರ ಭಗವದ್ಗೀತೆ ಮೂಲ ಪುಸ್ತಕ ಎಲ್ಲಿದೆ? ಎಂಬುವುದರ ಕುರಿತು ಪ್ರತಿಯೊಬ್ಬ ಜನಸಾಮಾನ್ಯರ ಪ್ರಶ್ನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯದ ಬಳಿಯೂ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಮೂಲಕ ಪ್ರಶ್ನೆ ಮಾಡಲಾಗಿತ್ತು. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದರು. ಇದನ್ನೂ ಓದಿ: ಭಗವದ್ಗೀತೆಯ ಮೂಲ ದಾಖಲೆ ನಮ್ಮಲ್ಲಿಲ್ಲ: ಕೇಂದ್ರ ಸಂಸ್ಕೃತಿ ಸಚಿವಾಲಯ

    ಭಗವದ್ಗೀತೆ ಮೂಲ ಪ್ರತಿ ಪೂರೈಕೆ, ಭಗವದ್ಗೀತೆ ಮೂಲ ಪ್ರಕಾಶಕರ ಪಟ್ಟಿ ಸೇರಿದಂತೆ ಅದಕ್ಕೆ ಸಂಬಂಧಿಸಿದ ಮಾಹಿತಿಯ ಪ್ರಶ್ನೆಗೆ ಕೇಂದ್ರ ಸರ್ಕಾರ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರ ನೀಡಿದೆ. ಆದ್ರೆ, ಮಕ್ಕಳಿಗೆ ಕಲಿಸಲು ಮುಂದಾಗಿರುವುದು ಯಾವ ಭಗವದ್ಗೀತೆ? ಎಂದು ರಾಜ್ಯ ಸರ್ಕಾರಕ್ಕೆ ಸುರೇಂದ್ರ ಉಗಾರೆ ಪ್ರಶ್ನೆ ಹಾಕಿದ್ದಾರೆ. ಇದನ್ನೂ ಓದಿ: ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

  • ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ: ವಿಶ್ವೇಶ್ವರ ಹೆಗಡೆ ಕಾಗೇರಿ

    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ: ವಿಶ್ವೇಶ್ವರ ಹೆಗಡೆ ಕಾಗೇರಿ

    ಬೆಂಗಳೂರು: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

    ಹಣ ಗಳಿಸುವ ಉದ್ದೇಶವನ್ನು ಕಲಿಸುವ ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಯ ಹೊರತಾಗಿ, ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುವ, ಜೀವನಕ್ಕೆ ಸಾರ್ಥಕತೆಯನ್ನು ನೀಡುವಂತಹ ಶಕ್ತಿಯನ್ನು ಹೊಂದಿರುವ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಭೋಧಿಸಿದ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆಯ ಮೂಲ ದಾಖಲೆ ನಮ್ಮಲ್ಲಿಲ್ಲ: ಕೇಂದ್ರ ಸಂಸ್ಕೃತಿ ಸಚಿವಾಲಯ

    ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಚರಣ್ ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು ಎನ್ನುವಂತಹ ವಿಷಯದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆ, ಹಣವನ್ನು ಗಳಿಸುವ ಉದ್ದೇಶದ ಬ್ರಿಟಿಷ್‌ ಪದ್ಧತಿಯಾಗಿದೆ. ನನ್ನದೊಂದು ನಂಬಿಕೆ ಇದೆ. ಅದನ್ನು ಹೇಳಿದರೆ ತಪ್ಪಾಗಲಾರದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಇದೆ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.

    ಭಗವದ್ಗೀತೆಯಲ್ಲಿ ಜಾತಿ, ಉಪಜಾತಿ, ಆ ರಾಜ್ಯ, ಈ ಭಾಷೆ, ಆ ಗಡಿ, ಈ ಗಡಿ ಎನ್ನುವ ತಾರತಮ್ಯ ಇಲ್ಲ. ಯಾವ ಭೇದಭಾವ ಕೂಡ ಇಲ್ಲ. ಸೃಷ್ಟಿಯ ಸತ್ಯ ಏನಿದೆಯೋ ಅದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಸೃಷ್ಟಿಯ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಹಾಗಾಗಿ ಅದನ್ನು ತಿಳಿದುಕೊಳ್ಳುವ ಶಿಕ್ಷಣ ಭಗವದ್ಗೀತೆಯಲ್ಲಿದೆ. ಹಾಗಾಗಿ ಭಗವದ್ಗೀತೆಯ ಶಿಕ್ಷಣವನ್ನು ನಾವು ಕಲಿಸಿದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ. ಅದನ್ನು ಕಲಿಸಬೇಕೆಂಬ ಆಗ್ರಹ ನನ್ನದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

    ನಾನು ಶಿಕ್ಷಣ ಮಂತ್ರಿಯಾಗಿದ್ದಾಗ ಭಗವದ್ಗೀತಾ ಅಭಿಯಾನ ನಡೆಸಲಾಗಿತ್ತು. ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಂತಹ ಅಭಿಯಾನದಲ್ಲಿ ರಾಜ್ಯದ 20 ಲಕ್ಷ ವಿದ್ಯಾರ್ಥಿಗಳು ಭಗವದ್ಗೀತೆ ಕಲಿಯುವ ಅವಕಾಶವನ್ನು ನಾನು ಶಿಕ್ಷಣ ಮಂತ್ರಿಯಾಗಿ ಮಾಡಿಕೊಟ್ಟಿದ್ದೇನೆ. ಇಂದು ಅದು ಕಡ್ಡಾಯವಾಗಿ ಶಿಕ್ಷಣದಲ್ಲಿ ಅಳವಡಿಕೆ ಆಗಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಅದು ಬರಲಿ ಎಂದು ಆಶಿಸೋಣ. ಭಗವದ್ಗೀತೆ ಶಿಕ್ಷಣದ ಭಾಗ ಆಗಬೇಕು. ಏಕೆಂದರೆ ಅದು ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುತ್ತದೆ. ಜೀವನದ ಸಾರ್ಥಕತೆಯನ್ನು ಅದು ನೀಡುತ್ತದೆ. ಹಣಗಳಿಸುವ ಶಿಕ್ಷಣ ವ್ಯವಸ್ಥೆಯಿಂದ ನಮ್ಮ ಜೀವನ ಸಾರ್ಥಕಗೊಳಿಸುವ ಶಿಕ್ಷಣ ವ್ಯವಸ್ಥೆಯ ಕಡೆಗೆ ಹೋಗಲು ಭಗವದ್ಗೀತೆಯಂತಹ ಶಿಕ್ಷಣ ಬೇಕು. ನಾವು ಹಣಗಳಿಸುವ ವ್ಯವಸ್ಥೆಯಿಂದ ಪರಿವರ್ತನೆ ತರಬೇಕು ಎನ್ನುವುದಾದರೆ ಆಧ್ಯಾತ್ಮಿಕ ತಳಹದಿಯ ಶಿಕ್ಷಣ ನಮಗೆ ಅಗತ್ಯ. ಆಧ್ಯಾತ್ಮಿಕ ತಳಹದಿಯ ಶಿಕ್ಷಣ ಭಗವದ್ಗೀತೆಯಂತಹ ಶಿಕ್ಷಣದಲ್ಲಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಭಗವದ್ಗೀತೆಯ ಮೂಲ ದಾಖಲೆ ನಮ್ಮಲ್ಲಿಲ್ಲ: ಕೇಂದ್ರ ಸಂಸ್ಕೃತಿ ಸಚಿವಾಲಯ

    ಭಗವದ್ಗೀತೆಯ ಮೂಲ ದಾಖಲೆ ನಮ್ಮಲ್ಲಿಲ್ಲ: ಕೇಂದ್ರ ಸಂಸ್ಕೃತಿ ಸಚಿವಾಲಯ

    ನವದೆಹಲಿ: ಪ್ರಸ್ತುತ ಶಾಲಾ ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಪಠ್ಯಕ್ರಮವಾಗಿ ಅಳವಡಿಸುವ ಸಂಬಂಧ ಚರ್ಚೆ ಎದ್ದಿದೆ. ಭಗವದ್ಗೀತೆಯ ಪರ – ವಿರೋಧ ಚರ್ಚೆಗಳು ನಡೆಯುತ್ತಿದ್ದು, ಸದ್ಯಕ್ಕೆ ಪಠ್ಯಕ್ರಮದಲ್ಲಿ ಅಳವಡಿಸುವುದಿಲ್ಲ. ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.

    ಇಂತಹ ಸಂದರ್ಭದಲ್ಲಿಯೇ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಭಗವದ್ಗೀತೆಯ ಮೂಲ ದಾಖಲೆಗಳನ್ನು ಕೇಳಿ ಸಲ್ಲಿಸಿದ್ದ ಅರ್ಜಿ ಮಹತ್ವ ಪಡೆದುಕೊಂಡಿದೆ. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಮೂಲ ಪ್ರತಿ ಕುರಿತಂತೆ ಬೆಳಗಾವಿ ಮೂಲದ ವಕೀಲ ಸುರೇಂದ್ರ ಉಗಾರೆ ಅವರು, ಭಗವದ್ಗೀತೆಯ ಮೂಲ ಪುಟಗಳ ಮಾಹಿತಿ ಮತ್ತು ಅದನ್ನು ಎಲ್ಲಿ ಸಂರಕ್ಷಿಸಿಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕೃತ ಪುಸ್ತಕಗಳು ಹಾಗೂ ಅವುಗಳನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಗಳ ಹೆಸರನ್ನು ತಿಳಿಸಿ ಎಂದು ಅವರು 2005ರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4 ಮತ್ತು 6ರ ಅಡಿ ಕಳೆದ ವರ್ಷ ಡಿಸೆಂಬರ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಈ ಮಾಹಿತಿ ಕೋರುತ್ತಿರುವುದಾಗಿ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ- ತಪ್ಪಿದ ಭಾರೀ ಅನಾಹುತ 

    ಆದರೆ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐಒ ಮತ್ತು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಅಂಜನಾ, ಅಂತಹ ಮಾಹಿತಿ ಸಚಿವಾಲಯದ ತಮ್ಮ ವಿಭಾಗದಲ್ಲಿ ಲಭ್ಯವಿಲ್ಲ. ಈ ಉತ್ತರ ತೃಪ್ತಿದಾಯಕವಾಗಿರದಿದ್ದರೆ ಕಾಯ್ದೆ ಸೆಕ್ಷನ್ 19ರ ಅಡಿ ಸಚಿವಾಲಯದ ಉಪ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡದೇ ಶುಲ್ಕ ವಿಧಿಸಿದ ಸರ್ಕಾರ – ರೈತರು ಕಂಗಾಲು

  • ಚಿಕ್ಕ ವಯಸ್ಸಿನಿಂದಲೇ ರಾಮಾಯಣ, ಮಹಾಭಾರತ ತಿಳ್ಕೊಂಡಿದ್ದೀನಿ – ಪ್ರತಾಪ್ ಸಿಂಹಗೆ ಹೆಚ್‍ಡಿಕೆ ತಿರುಗೇಟು

    ಚಿಕ್ಕ ವಯಸ್ಸಿನಿಂದಲೇ ರಾಮಾಯಣ, ಮಹಾಭಾರತ ತಿಳ್ಕೊಂಡಿದ್ದೀನಿ – ಪ್ರತಾಪ್ ಸಿಂಹಗೆ ಹೆಚ್‍ಡಿಕೆ ತಿರುಗೇಟು

    ಮಂಡ್ಯ: ನಾನು ಚಿಕ್ಕ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಕುಮಾರಸ್ವಾಮಿ ಅವರು, ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಹೇಳಿದ್ದರು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಅವರು, ನಾನು ಕುಮಾರಸ್ವಾಮಿ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ. ಕುಟುಂಬ ರಾಜಕಾರಣ ಮಾಡಬಾರದು. ನನಗೆ ಎಲ್ಲಾ ಅಧಿಕಾರ ಬೇಕು ಎನ್ನುವ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ಸದ್ಯ ಈ ವಿಚಾರವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಬಿಜೆಪಿ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಮಾಡುತ್ತಿದೆ. ನಾನು ಚಿಕ್ಕ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದೇನೆ. ಮಾನವೀಯತೆ, ತಾಯಿಯ ಹೃದಯವನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ಬಿಜೆಪಿ ಅವರಿಂದ ತಿಳುವಳಿಕೆಯನ್ನು ಕಲಿಯುವ ಅಗತ್ಯವಿಲ್ಲ. ಅಂತಹ ತಿಳುವಳಿಕೆ ಕಲಿತರೆ ಸಮಾಜ ಹಾಳಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

  • ನಾವು ಸಹ ಹಿಂದೂಗಳೇ, ಭಗವದ್ಗೀತೆಯನ್ನು ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್: ಡಿಕೆಶಿ

    ನಾವು ಸಹ ಹಿಂದೂಗಳೇ, ಭಗವದ್ಗೀತೆಯನ್ನು ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್: ಡಿಕೆಶಿ

    ಮೈಸೂರು: ನಾವೂ ಸಹ ಹಿಂದೂಗಳೇ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಮಾತ್ರವಲ್ಲ ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜೀವ್ ಗಾಂಧಿ ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪ್ರಸಾರ ಮಾಡಿದ್ದಾರೆ. ದೂರದರ್ಶನದ ಮೂಲಕ ದೇಶದ ಜನರಿಗೆ ತಲುಪಿಸಿದ್ದಾರೆ ಎಂದು ಭಗವದ್ಗೀತೆಯ ಯದಾ ಯದಾ ಹಿ ಧರ್ಮಸ್ಯ ಶ್ಲೋಕದ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಉಚಿತ ಪ್ರದರ್ಶನ ನಿಲ್ಲಿಸಿ: ಬಿಜೆಪಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಮನವಿ

    ಮುಂದೊಂದು ದಿನ ಕೇಸರಿ ಭಾವುಟ ರಾಷ್ಟ್ರ ಧ್ವಜ ಆಗಬಹುದು ಎಂದು ಹಿಂದೂ ಪರ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಕಲ್ಲಡ್ಕ ಪ್ರಭಾಕರ ಭಟ್ ಬಿಜೆಪಿಯಲ್ಲಿ ಯಾರು, ಏನು ಅಂತ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ ಈ ಹಿಂದೆ ಸಚಿವರೊಬ್ಬರ ಹೇಳಿಕೆಗೆ ಹೋರಾಟ ಮಾಡಿದ್ದೇವೆ. ಈ ಪ್ರತಿಭಟನೆಗೆ ಸರಿಯಾಗಿ ನಡ್ಡಾ ಅವರಿಂದ ಪ್ರತಿಕ್ರಿಯೆ ಸಿಕ್ಕಿದೆ. ಈ ರೀತಿ ಮಾತನಾಡುವವರು ರಾಷ್ಟ್ರ ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು

    ದೇಶದಲ್ಲಿ ನಿರುದ್ಯೋಗ ಮತ್ತು ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಕಬ್ಬಿಣ ಮತ್ತು ಸಿಮೆಂಟ್ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರಿಗೆ ಮನೆಕಟ್ಟಬೇಕೆಂಬ ಆಸೆಯಲ್ಲಿರುವವರಿಗೆ ಸರ್ಕಾರ ಅಡ್ಡಗಾಲಿಟ್ಟಿದೆ. ನಿರುದ್ಯೋಗದಿಂದ ಜನ ತತ್ತರಿಸಿದ್ದಾರೆ. ಜನರು ದಡ್ಡರಲ್ಲ, ಬಿಜೆಪಿಯ ಸುಳ್ಳು ಮಾತುಗಳಿಗೆ ಮರಳಾಗುವುದಿಲ್ಲ. ಜನ ಬದಲಾವಣೆ ಬಯಸಿದ್ದಾರೆ ಎಂದಿದ್ದಾರೆ.

  • ಕುರಾನ್, ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತದೆ:  ಕಲ್ಲಡ್ಕ ಪ್ರಭಾಕರ ಭಟ್

    ಕುರಾನ್, ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತದೆ:  ಕಲ್ಲಡ್ಕ ಪ್ರಭಾಕರ ಭಟ್

    ಮಂಗಳೂರು: ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರದ ಆವರಣದಲ್ಲಿ ನಡೆದ ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡುತ್ತೇನೆ. ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ. ಮೊದಲು ಬ್ರಿಟಿಷರ ಧ್ವಜ ಇತ್ತು. ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು, ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್‌ನಲ್ಲಿ ಮೂರನೆಯವರ ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ, ಹೀಗೆಯೇ ಮುಂದುವರೆದರೆ ಹಿಂದೂ ಸಮಾಜ ಒಟ್ಟಾಗುತ್ತದೆ ಎಂದಿದ್ದಾರೆ.

    ಇವತ್ತು ಕಾಶ್ಮೀರ್‌ ಫೈಲ್ಸ್‌ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ, ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಷಂಡ ಕಾಂಗ್ರೆಸ್ ಒಪ್ಪಿಕೊಂಡಿತ್ತು. ಇವತ್ತು‌ ಅದೇ ರೀತಿ ಹಿಜಬ್ ಬಂದಿದೆ. ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಎನ್ನೋ ಮನೋಭಾವ ಇದೆ. ಇದು ಈ ದೇಶವನ್ನು ತುಂಡು ಮಾಡುವ ಪ್ರಯತ್ನ ಎಂದು ಅವರು ಕಿಡಿಕಾರಿದರು.

    ಬೈಬಲ್, ಕುರಾನ್ ನಿಮ್ಮ ಮನೆಯಲ್ಲಿರಲಿ. ಭಗವದ್ಗೀತೆ ಇಡೀ ಶಾಲೆಗಳಲ್ಲಿ, ಮನೆ ಮನೆಗಳಲ್ಲಿ ನೀಡಬೇಕು. ಭಗವದ್ಗೀತೆ ಈ ದೇಶದ ಅಂತಃ ಸತ್ವವಾಗಿದೆ. ಜಗತ್ತಿನಲ್ಲಿ ಸರಿಯಾಗಿ ಬದುಕಬೇಕು ಎಂದಿದ್ದರೆ ಅದಕ್ಕೆ ಭಗವದ್ಗೀತೆ ಓದಬೇಕು. ಗುಜರಾತ್‍ನಂತೆ ನಮ್ಮ ರಾಜ್ಯ ಸರ್ಕಾರವು ಭಗವದ್ಗೀತೆ ಕಲಿಸುವ ಧೈರ್ಯ ಮಾಡಿದೆ. ಇದನ್ನು ಜಾರಿಗೊಳಿಸುವುದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಎಂದಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

    ಕುರಾನ್, ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತಿದೆ. ದಿ ಕಾಶ್ಮೀರ್‌ ಫೈಲ್ಸ್ ಚಲನಚಿತ್ರದಲ್ಲಿ ಇದೆಲ್ಲವನ್ನು ಚಿತ್ರಿಸಲಾಗಿದೆ. ಅಮಾಯಕರ ಕೊಲೆ, ಅತ್ಯಾಚಾರ ಮಾಡುವುದಕ್ಕೆ ಕುರಾನ್, ಬೈಬಲ್ ಹೇಳಿಕೊಟ್ಟಿದೆಯಾ..? ಬೈಬಲ್, ಕುರಾನ್‍ನಲ್ಲಿ ಆ ರೀತಿ ಇದ್ರೆ ಇವಾಗ ಬದಲು ಮಾಡಿಕೊಳ್ಳಬೇಕು. ಮನುಸ್ಮೃತಿಯ ಬಗ್ಗೆ ಭಾರಿ ಮಾತನಾಡುತ್ತಾರೆ. ಅದರಲ್ಲಿ ತಪ್ಪು ಕಂಡು ಬಂದರೆ ಅದಕ್ಕೊಂದು ಭಾಷ್ಯ ಬರೆಯಿರಿ. ನಮ್ಮಲ್ಲಿ ಆ ಸ್ವಾತಂತ್ರ್ಯ ಇದೆ. ನೀವು ಆ ಸ್ವಾತಂತ್ರ್ಯಗಳಿಸಿಕೊಡಬೇಕು. ಕಾಲಕ್ಕೆ ಸರಿಯಾಗಿ ನಮಸ್ಕಾರ ಮಾಡಿಕೊಳ್ಳಬೇಕು. ಹಳೆ ಕಾಲದ ಹಿಜಬ್ ಕಡೆಗೆ ಹೋಗುವುದು ಬೇಡ ಕಿತಾಬ್ ಕಡೆಗೆ ಹೋಗಿ. ಎಲ್ಲರೂ ಒಂದಾಗಿ ಓದುವ ದೃಷ್ಟಿಕೋನ ಬೆಳೆಸಬೇಕು ಎಂದಿದ್ದಾರೆ.  ಇದನ್ನೂ ಓದಿ:  ಉಪ್ಪಿ ಕಂಠಸಿರಿಯಲ್ಲಿ ‘ಹುಷಾರ್’ ಹಾಡು

  • ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ: ಸಿದ್ದರಾಮಯ್ಯ

    ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ: ಸಿದ್ದರಾಮಯ್ಯ

    ಹುಬ್ಬಳ್ಳಿ: ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ಭಗವದ್ಗೀತೆ ಪಠ್ಯದಲ್ಲಿ ಸೇರಿಸಲು ಕ್ರಮ ತೀರ್ಮಾನ ತೆಗೆದುಕೊಂಡಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣ ಬೇಕು, ಅದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಸಹ ಕೊಡಬೇಕು. ಭಗವದ್ಗೀತೆ ಬಗ್ಗೆ ನಮ್ಮದು ಯಾವುದೇ ವಿರೋಧ ಇಲ್ಲ. ಸಂವಿಧಾನದ ಪ್ರಕಾರ ಮಾಡಲಿ, ಸಂವಿಧಾನ ಧರ್ಮ ನಿರಪೇಕ್ಷತೆ ಬಗ್ಗೆ ಹೇಳುತ್ತದೆ. ಜಾತ್ಯಾತೀತ ಮನೋಭಾವ ಬೆಳೆಯಬೇಕು ಎಂದಿದ್ದಾರೆ.

    ಪಂಚರಾಜ್ಯ ಚುನಾವಣೆ ಕಾಂಗ್ರೆಸ್ ಹೀನಾಯ ಸೋಲು ವಿಚಾರವಾಗಿ ಮಾತನಾಡಿದ ಅವರು, ಎಲ್ಲರೂ ರಾಹುಲ್ ಹಾಗೂ ಸೋನಿಯಾ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಪಕ್ಷ ಬಲಪಡಿಸುವ ಬಗ್ಗೆ ಸಿಡಬ್ಲೂಸಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದಾರೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಯಾವಾಗ ಚುನಾವಣೆ ನಡೆದರೂ ನಾವು ರೆಡಿ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಪಕ್ಷ ಸಂಘಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ: ಬಿಎಸ್‍ವೈ

    ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಯಾವಾಗಲಾದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ಯಾ? 2008, 2018ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬಹುದು, ಆದರೆ ಆಪರೇಷನ್ ಕಮಲ ಮಾಡಿನೇ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲಿದೆ. ಜಗದೀಶ್ ಶೆಟ್ಟರ್ ಮಾತಿಗೆ ಯಾವ ಕಿಮ್ಮತ್ತು ಇಲ್ಲ. ಅವರು ಸಿಎಂ ಆಗಿದ್ದಾಗ ಎಷ್ಟು ಸೀಟು ಬಂತು ಗೊತ್ತಿಲ್ವಾ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

     

    ಕಾಂಗ್ರೆಸ್‍ನಲ್ಲಿ ಸಿಎಂ ಆಕಾಂಕ್ಷಿಗಳ ಕಿತ್ತಾಟ ವಿಚಾರ: ಆಕಾಂಕ್ಷಿಗಳು ಇರುವುದು ತಪ್ಪಾ? ಅಂತಿಮವಾಗಿ ಯಾರು ಸಿಎಂ ಆಗಬೇಕು ಎನ್ನುವುದು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಯಲ್ಲಿ ಯಾವುದೇ ಜಗಳ ಇಲ್ವಾ? ಯತ್ನಾಳ್ ಏನು ಮಾಡುತ್ತಿದ್ದಾರೆ, ಜಗದೀಶ್ ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ. ಬಣಗಳು ಇರುವುದು ಬಿಜೆಪಿಯಲ್ಲಿ, ಆದರೆ ನಮ್ಮಲ್ಲಿ ಯಾವುದೇ ಬಣ ಇಲ್ಲ. ನಮ್ಮಲ್ಲಿ ಇರುವುದು ಒಂದೇ ಬಣ ಅದು ಸೋನಿಯಾ ಗಾಂಧಿ ಬಣ. ಬಿಜೆಪಿಯಲ್ಲಿ ಕಾಂಗ್ರೆಸ್‍ನಿಂದ ಹೋದವರು, ಆರ್‌ಎಸ್‌ಎಸ್‌ನವರು, ಜೆಡಿಯುನಿಂದ ಹೋದವರು ಎಂದು ಹೇಳಿದ್ದಾರೆ.

  • ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ: ಬಿಎಸ್‍ವೈ

    ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ: ಬಿಎಸ್‍ವೈ

    ಬೆಂಗಳೂರು: ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

    ನೆಲಮಂಗಲದಲ್ಲಿ ಅವೇರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಭಗವದ್ಗೀತೆಯಲ್ಲಿ ಬರುವ ಎಲ್ಲಾ ವಿಚಾರವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗಾಗಿ ಗುಜರಾತ್ ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಜಾರಿಗೆ ತಂದಿದ್ದಾರೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಅವರ ಜೊತೆ ತೀರ್ಮಾನ ಮಾಡಿ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಪಠ್ಯ ಪುಸ್ತಕ ಸೇರಿಸಲು ವಿನಂತಿ ಮಾಡುವೆ ಎಂದು ಹೇಳಿದರು.

    ಪ್ರತಿಪಕ್ಷ ವಿರೋಧ ಹಿನ್ನೆಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗವದ್ಗೀತೆ ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ತಿಳಿಸುತ್ತೆ. ಇದರ ಬಗ್ಗೆ ಟೀಕೆ- ಟಿಪ್ಪಣಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಅನೇಕ ಕಾಂಗ್ರೆಸ್ ಮುಖಂಡರು ಸ್ವಾಗತ ಮಾಡಿದ್ದಾರೆ. ವಿರೋಧ ಮಾಡುವವರಿಗೆ ದಯಮಾಡಿ ಒಳ್ಳೆಯ ಕೆಲಸಕ್ಕೆ ಅವಕಾಶ ಮಾಡಿ ಎಂದು ವಿನಂತಿ ಮಾಡುವೆ ಎಂದರು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

    ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಅಧಿವೇಶನ ಮುಗಿದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 160 ಕ್ಷೇತ್ರ ಗೆಲ್ಲಲು ಕಾರ್ಯಕ್ರಮ ರೂಪಿಸಲಾಗಿದೆ ಎಂದ ಅವರು, ಸಂಪುಟ ಪುನರ್ ರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟಿದ್ದು, ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

  • ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

    ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

    – ಭಗವದ್ಗೀತೆ ಧರ್ಮ ಅಧರ್ಮ ಬಗ್ಗೆ ಬೋಧಿಸುತ್ತದೆ

    ಮೈಸೂರು: ಬೈಬಲ್, ಕುರಾನ್ ಹಾಗೂ ಭಗವದ್ಗೀತೆಗೂ ವ್ಯತ್ಯಾಸವಿದೆ. ಭಗವದ್ಗೀತೆ ಹಿಂದೂಗಳ ಧರ್ಮಗ್ರಂಥ ಮಾತ್ರವಲ್ಲ, ಅದರಲ್ಲಿ ಜೀವನದ ನೀತಿ ಪಾಠವಿದೆ ಎಂದು ಸಂಸದ ಪ್ರತಾಪ್‍ಸಿಂಹ ಹೇಳಿದ್ದಾರೆ.

    ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರ ಮಾತನಾಡಿದ ಅವರು, ಕ್ರಿಶ್ಚಿಯನ್, ಇಸ್ಲಾಂ ರೀತಿ ಅಲ್ಲ, ಅದು ಒಂದೇ ದೇವರು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ. ಮಹಾಭಾರತ ಧರ್ಮ, ಅಧರ್ಮದ ನಡುವೆ ನಡೆದ ಯುದ್ಧವಾಗಿದೆ. ಅದೇ ಸಮಯದಲ್ಲಿ ಕೃಷ್ಣ ಭಗವದ್ಗೀತೆ ಭೋದನೆ ಮಾಡಿ ಧರ್ಮದ ದಾರಿಯಲ್ಲಿ ನಡೆಯುವಂತೆ ಹೇಳಲಾಗಿದೆ. ಧರ್ಮ ಎಂದರೆ ಅದು ಸತ್ಯ. ಇದು ಒಂದು ಧರ್ಮಕ್ಕೆ ಸಿಮೀತವಾಗಿಲ್ಲ. ಹಿಂದೂ ಧರ್ಮವೇ ಜೀವನ ಶೈಲಿಯಾಗಿದೆ. ಇದನ್ನು ಶಾಲೆಯ ಹಂತದಲ್ಲಿ ತಿಳಿಸಬೇಕಾಗಿರುವುದು ಅಗತ್ಯವಿದೆ. ಕುರಾನ್, ಬೈಬಲ್ ಕಲಿಸಿದರೆ ಒಬ್ಬ ವ್ಯಕ್ತಿ ದೇವರು ಅಂತಾ ಕಲಿಸಲಾಗುತ್ತದೆ. ಆದರೆ ಭಗವದ್ಗೀತೆ ಧರ್ಮ ಅಧರ್ಮ ಬಗ್ಗೆ ಬೋಧಿಸುತ್ತದೆ. ಇದನ್ನು ಪಠ್ಯವಾಗಿ ತರಬೇಕು ಅಂತಾ ಸಿಎಂ ಸಚಿವರು ತರಲು ಹೊರಟಿರುವುದು ಸ್ವಾಗತಾರ್ಹವಾಗಿದೆ. ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಕುಮಾರಸ್ವಾಮಿ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ. ಕುಟುಂಬ ರಾಜಕಾರಣ ಮಾಡಬಾರದು. ನನಗೆ ಎಲ್ಲಾ ಅಧಿಕಾರ ಬೇಕು ಅನ್ನೋ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ದಿ ಕಾಶ್ಮಿರ್‌ ಫೈಲ್ಸ್ ಚಿತ್ರವನ್ನು ಕಾಂಗ್ರೆಸ್ ನಾಯಕರು ನೋಡದ ವಿಚಾರ ಮಾತನಾಡಿ, ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಅವರೇ ಮಾಡಿದ ಅಪರಾಧವನ್ನು ಅವರೇ ನೋಡಲು ಹೇಗೆ ಸಾಧ್ಯ? ಆದರೆ ಜನರು ನೋಡುತ್ತಿದ್ದಾರೆ. ಅವರಿಗೆ ಸತ್ಯದ ಅರಿವಾಗಿದೆ. ಕಾಶ್ಮಿರ ಫೈಲ್ಸ್‍ನಲ್ಲಿರುವ ಒಂದೊಂದು ದೃಶ್ಯವು ಸತ್ಯವಾಗಿದೆ. ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯವಾಗುತ್ತದೆ. ಜೈ ಭೀಮ್ ಬಿಡುಗಡೆಯಾಗಿದ್ದು ಓಟಿಟಿಯಲ್ಲಿ, ಓಟಿಟಿಯಲ್ಲಿ ತೆರಿಗೆ ವಿನಾಯತಿ ಕೊಡಲು ಹೇಗೆ ಸಾಧ್ಯ? ಕಾಂಗ್ರೆಸ್ ನಾಯಕರು ಪೆದ್ದು ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ