Tag: Bhagavad Gita

  • ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

    ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

    ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸುತ್ತಿದ್ದಂತೆ ಸಮಂತಾ ಮೇಲೆ ಹಲವರು ಮುಗಿಬಿದ್ದಿದ್ದಾರೆ. ನೆಗೆಟಿವ್ ಕಾಮೆಂಟ್ ಗಳನ್ನು ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸಮಂತಾ ನಟಿಸಿದರೆ ಆ ಸಿನಿಮಾಗಳು ಸೋಲುತ್ತವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಸಮಂತಾ ಭಗವದ್ಗೀತೆಯ (BhagavadGita) ಸಾಲುಗಳನ್ನು ಹಾಕಿದ್ದಾರೆ.

    ಕಾರಿನಲ್ಲಿ ಕುಳಿತಿರುವ ಸುಂದರವಾದ ಫೋಟೋವೊಂದನ್ನು ಶೇರ್ ಮಾಡಿರುವ ಸಮಂತಾ, ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ. ಮಾ ಕರ್ಮಫಲಹೇತುರ್ಭೂರ್ಮಾತೇ ಸಂಗೋಸ್ತ್ವ ಕರ್ಮಣಿ’ ಎಂದು ಬರೆಯುವ ಮೂಲಕ ಟೀಕೆ ಮಾಡುವವರಿಗೆ ಉತ್ತರ ನೀಡಿದ್ದಾರೆ. ಅದರಲ್ಲೂ ಈ ಪೋಸ್ಟ್ ಹಾಕಿದ್ದು, ತೆಲುಗಿನ ನಿರ್ಮಾಪಕ ಚಿಟ್ಟಿಬಾಬುಗೆ ಎಂದು ಹೇಳಲಾಗುತ್ತಿದೆ. ಶಾಕುಂತಲಂ ಸಿನಿಮಾ ನೋಡಿದ್ದ ಚಿಟ್ಟಿಬಾಬು, ‘ಸಮಂತಾ ಅಧ್ಯಾಯ ಮುಗೀತು’ ಎಂದು ಟೀಕಿಸಿದ್ದರು.  ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಸಮಂತಾ (Samantha) ನಟನೆಯ ‘ಶಾಕುಂತಲಂ’ (Shakunthalam) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಕಮಾಲ್ ಮಾಡಲಿಲ್ಲ. ಐವತ್ತು ಕೋಟಿ ವೆಚ್ಚದಲ್ಲಿ ತಯಾರಾದ ಈ  ಸಿನಿಮಾ  ನಿರ್ಮಾಪಕರಿಗೆ ಹಣ ತಂದುಕೊಡಲಿಲ್ಲ. ಹಾಗಾಗಿ ಮತ್ತೆ ಸಮಂತಾ ವಿರುದ್ಧ ಟ್ರೋಲ್ ಹಾವಳಿ ಹೆಚ್ಚಾಗಿದೆ. ಸಮಂತಾ ವಿರುದ್ಧ ನೆಗೆಟಿವ್ ಕಾಮೆಂಟ್ ಕೂಡ ಬರೆಯುತ್ತಿದ್ದಾರೆ. ಇದೆಲ್ಲದನ್ನೂ ತಲೆ ಕೆಡಿಸಿಕೊಳ್ಳದೇ ಸಮಂತಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಕೊಟ್ಟಿದ್ದಾರೆ.

    ಸಮಂತಾ ಕನಸಿನ ಪ್ರಾಜೆಕ್ಟ್ ಸಿಟಾಡೆಲ್ (Citadel) ವೆಬ್ ಸೀರಿಸ್ (Web Series) ಶೂಟಿಂಗ್ ಇನ್ನೇನು ಶುರುವಾಗಲಿದೆ. ಈ ವೆಬ್ ಸರಣಿಯ ಚಿತ್ರೀಕರಣಕ್ಕೆ ವಿದೇಶದಲ್ಲಿ ನಡೆಯಲಿದೆ. ಹಾಗಾಗಿ ಅವರು ವಿಮಾನ ಏರಿದ್ದಾರೆ. ತಾವು ವಿದೇಶ ಪ್ರಯಾಣವನ್ನು ಮಾಡುತ್ತಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಿಟಾಡೆಲ್ ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೆಬ್ ಸಿರೀಸ್. ವರುಣ್ ಧವನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸರಣಿಯಲ್ಲಿ ಸಮಂತಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಈ ಪಾತ್ರಕ್ಕಾಗಿ ಅವರು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಭಾರೀ ಬಜೆಟ್ ನಲ್ಲಿ ಈ ವೆಬ್ ಸಿರೀಸ್ ಮೂಡಿ ಬರಲಿದೆ. ಈ ನಡುವೆ ಮತ್ತೊಂದು ಹೊಸ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದರು. ಅದರ ಮಾಹಿತಿಯನ್ನು ಸದ್ಯದಲ್ಲೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಶಾಲಾ ಪಠ್ಯದಲ್ಲಿ ಭಗವದ್ಗೀತೆ  ಸೇರಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

    ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

    ದಾವಣಗೆರೆ: ಶಾಲಾ ಪಠ್ಯದಲ್ಲಿ (Text Book) ಭಗವದ್ಗೀತೆ (Bhagavad Gita) ಬರಬೇಕು. ಎಲ್ಲಾ ಶಾಲೆಗಳಲ್ಲೂ ಕಡ್ಡಾಯಗೊಳಿಸಬೇಕು ಎಂಬ ಸರ್ಕಾರದ ನಿರ್ಧಾರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಬೆಂಬಲ ಸೂಚಿಸಿದರು.

    ದಾವಣಗೆರೆ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2ರ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎನ್ನುವ ಚರ್ಚೆಯಾಗುತ್ತಿದೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರ ಜೊತೆಗೆ ಅದನ್ನ ಕಡ್ಡಾಯವಾಗಿ ಮಕ್ಕಳಿಗೆ ಕಲಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ದೇಶದ ಮೊದಲ ಚಿನ್ನದ ATM ಉದ್ಘಾಟನೆ – ಇಲ್ಲಿ ಹಣ ಅಲ್ಲ, ಚಿನ್ನ ಡ್ರಾ ಮಾಡ್ಬೋದು!

    ಸಮಾಜದ ಸ್ಥಿತಿಗತಿಗಳನ್ನು, ಆಗುಹೋಗುಗಳನ್ನು ಗಮನಿಸಿದರೆ ಮನಸ್ಸುಗಳು ಅನೇಕ ರೀತಿಯಲ್ಲಿ ಒಡೆದು ಹೋಗಿವೆ. ಭಾಷೆಗಾಗಿ, ಗಡಿಗಳಿಗಾಗಿ, ನೀರಿಗಾಗಿ, ಆಹಾರ ಪದ್ಧತಿಗಳಿಗಾಗಿ, ಪ್ರತಿಯೊಂದರಲ್ಲೂ ಭಿನ್ನತೆಗಳನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಏಕತೆ ಬೆಳೆಯಬೇಕಾದರೆ ಅದಕ್ಕೆ ಭಗವದ್ಗೀತೆಯೇ ಮೂಲ ಆಧಾರವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್‌

    Live Tv
    [brid partner=56869869 player=32851 video=960834 autoplay=true]

  • ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ 75 ಸಾವಿರ ಭಗವದ್ಗೀತೆ ಪುಸ್ತಕ ವಿತರಣೆ – 132 ಜೋಡಿಗೆ ಮದುವೆ ಭಾಗ್ಯ

    ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ 75 ಸಾವಿರ ಭಗವದ್ಗೀತೆ ಪುಸ್ತಕ ವಿತರಣೆ – 132 ಜೋಡಿಗೆ ಮದುವೆ ಭಾಗ್ಯ

    ಹಾವೇರಿ: ಮದುವೆ (Marriage) ಸಮಾರಂಭ ಎಂದರೆ ಅಲ್ಲಿ ಅದ್ದೂರಿ ಇದ್ದೇ ಇರುತ್ತದೆ. ಇಲ್ಲಿ ಮದುವೆ ಆಮಂತ್ರಣ ಪತ್ರಿಕೆಯ (Invitation Card) ಜೊತೆಗೆ ಭಗವದ್ಗೀತೆ (Bhagavad Gita) ಪುಸ್ತಕವನ್ನು ನೀಡಿ ಮದುವೆಗೆ ಆಹ್ವಾನಿಸಲಾಗುತ್ತಿದೆ. ಸುಮಾರು 75 ಸಾವಿರಕ್ಕೂ ಅಧಿಕ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡಿ ಮದುವೆಗೆ ಆಹ್ವಾನಿಸಲಾಗಿದೆ. ಮಾತ್ರವಲ್ಲದೇ 132 ಜೋಡಿಗಳ ಉಚಿತವಾಗಿ ಮದುವೆ (Mass Wedding) ಮಾಡಲಾಗುತ್ತಿದೆ.

    ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷರ ಪ್ರಕಾಶ ಬುರಡಿಕಟ್ಟಿ ಅವರ ವಿಭಿನ್ನ ಮದುವೆ ಕಾರ್ಯಕ್ರಮ. ನಾಳೆ ಪ್ರಕಾಶ ಬುರಡಿಕಟ್ಟಿಯ ಮದುವೆಯ ಜೊತೆಗೆ ರಾಣೇಬೆನ್ನೂರು ತಾಲೂಕಿನ 132 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ಜೋಡಿಗೆ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ವತಿಯಿಂದ ಮಾಂಗಲ್ಯ, ಇಬ್ಬರಿಗೂ ಬಟ್ಟೆ ಜೊತೆಗೆ 35 ಸಾವಿರ ರೂ. ಧನಸಹಾಯವನ್ನು ನೀಡಲಾಗುತ್ತಿದೆ. ಅಲ್ಲದೆ ತಾಲೂಕಿನ ಪ್ರತಿಯೊಂದು ಹಳ್ಳಿಯ ಮನೆಮನೆಗೆ ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮ ಮಾಡಲಾಗುತ್ತಿದೆ.

    ಪ್ರಕಾಶ ಬುರಡಿಕಟ್ಟಿ ಅವರು ತಮ್ಮ ಸಂಬಂಧಿಕರಿಗೆ ನೀಡುವಂತೆ ರಾಣೇಬೆನ್ನೂರಿನ ಕೂಲಿಕಾರ್ಮಿಕರಿಗೆ, ಆಟೋಚಾಲಕರು, ಹಮಾಲರು, ಭಿಕ್ಷುಕರಿಗೆ, ಕುಶಲಕರ್ಮಿಗಳಿಗೆ, ಅಂಧ ಮಕ್ಕಳಿಗೆ ಸೇರಿದಂತೆ ವೃದ್ಧಾಶ್ರಮಗಳಿಗೆ ವಿಶೇಷ ಉಡುಗೊರೆ ಹಾಗೂ ಬಟ್ಟೆಯನ್ನು ನೀಡಲಾಗಿದೆ. ರಾಣೇಬೆನ್ನೂರು ತಾಲೂಕಿನ 132 ಬಡ ಜೋಡಿಗಳು ಹಸೆಮಣೆ ಏರಲಿದ್ದಾರೆ. ಅಲ್ಲದೆ ರಾಣೇಬೆನ್ನೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮನೆಮನೆಗೆ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕವನ್ನು ತಲುಪಿಸಿದ್ದಾರೆ.

    ಹಿಂದೂ ಧರ್ಮದ ಜಾಗೃತಿ ಹಾಗೂ ಭಗವದ್ಗೀತೆ ಪುಸ್ತಕ ಎಲ್ಲರ ಮನೆಯಲ್ಲಿ ಇರಬೇಕು. ಮಕ್ಕಳು ಅದನ್ನು ಓದುವ ಕೆಲಸ ಆಗಬೇಕು. ಇದೊಂದು ಐತಿಹಾಸಿಕ ಮದುವೆ ಕಾರ್ಯಕ್ರಮವಾಗಿದೆ. ಭಗವದ್ಗೀತೆ ಪುಸ್ತಕ ನೀಡುವುದರ ಮೂಲಕ ಜನರಿಗೆ ಹಿಂದುತ್ವದ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಈ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

    ರಾಣೇಬೆನ್ನೂರು ತಾಲೂಕಿನಲ್ಲಿ ಪ್ರಕಾಶ ಬುರಡಿಕಟ್ಟಿ ತಮ್ಮ ಮದುವೆಯ ಆಮಂತ್ರಣದ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ನಾಳೆ ನಡೆಯುವ 132 ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಧಾಮೂರ್ತಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳು ಸೇರಿದಂತೆ ನಾಡಿನ ಗಣ್ಯರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಹಳ್ಳಕ್ಕೆ ಉರುಳಿದ KSRTC ಬಸ್ – 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

    ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

    – ಬೈಬಲ್ ಹಾಗೂ ಕುರಾನ್ ಗ್ರಂಥಗಳೇ ಶ್ರೇಷ್ಠ
    – ಗೀತೆಯಲ್ಲಿ ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಬರೆದಿದ್ಯಾ?

    ತುಮಕೂರು: ಶಿವಮೊಗ್ಗದ ಬಳಿಕ ಕಲ್ಪತರು ನಾಡು ತುಮಕೂರಿಗೂ ನಕಲಿ ಭಗವದ್ಗೀತೆ(Bhagavad Gita) ಪುಸ್ತಕದ ಜಾಲ ಕಾಲಿಟ್ಟಿದೆ. ಈ ಮೂಲಕ ಮತಾಂತರ ಜಾಲವೊಂದು ಸದ್ದಿಲ್ಲದೇ ಕೆಲಸ ಮಾಡುತ್ತಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ.

    ಹೌದು. ಇಲ್ಲಸಲ್ಲದ ಆಸೆಗಳನ್ನು ಹೇಳಿ ಮತಾಂತರ(Religious Conversion) ಮಾಡುವುದು ಹಳೆಯ ಸುದ್ದಿ. ಆದರೆ ಈಗ ನಕಲಿ ಭಗವದ್ಗೀತೆಯನ್ನು ಮುದ್ರಿಸಿ ಅದನ್ನುಹಿಡಿದು ಮತಾಂತರ ಮಾಡಲು ಹೊರಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

    ಹೊರರಾಜ್ಯದಿಂದ ಬಂದು ಜನಸಂದಣಿ ಇರುವ ಪ್ರದೇಶ, ಹಿಂದೂ ದೇವಾಲಯಗಳ ಬಳಿ ಹಾಗೂ ಹಳ್ಳಿ ಹಳ್ಳಿಗಳಿಗೆ ತೆರಳಿ ಭಗವದ್ಗೀತೆ ಹೋಲುವ ಪುಸ್ತಕವನ್ನ ಮಾರಾಟ ಮಾಡಲಾಗುತ್ತಿದೆ. ʼಗೀತೆ ನಿನ್ನ ಜ್ಞಾನ ಅಮೃತʼ ಎಂಬ ಹೆಸರಿನಲ್ಲಿರುವ ಪುಸ್ತಕವನ್ನು ಮುದ್ರಿಸಿ 100 ರೂ. ಬೆಲೆಯಿರುವ ಪುಸ್ತಕವನ್ನು ಜನಸಾಮಾನ್ಯರಿಗೆ 10 ರಿಂದ 30 ರೂ.ಗೆ ಹಾಗೂ ಕೆಲವು ಕಡೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಭಜರಂಗ ದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ತಿಳಿಸಿದ್ದಾರೆ.

    ನಕಲಿ ಪುಸ್ತಕದ ಮುಖಪುಟದ ಮೇಲೆ ಶ್ರೀಕೃಷ್ಣನ ಚಿತ್ರವನ್ನೂ ಮುದ್ರಿಸಲಾಗಿದೆ. ಕಡಿಮೆ ದರಕ್ಕೆ ಧರ್ಮ ಗ್ರಂಥದ ಪುಸ್ತಕ ಸಿಕ್ಕಿದೆ ಎಂದು ಖರೀದಿಸಿ ಮನೆಗೆ ತೆಗೆದುಕೊಂಡು ಹೋದವರಿಗೆ ಶಾಕ್ ಆಗಿದೆ.

    ಪುಸ್ತಕದಲ್ಲಿ ಏನಿದೆ?
    ಹಿಂದೂ ಧರ್ಮ(Hindu Religion) ಸರಿಯಿಲ್ಲ, ಹಿಂದೂ ದೇವರುಗಳು, ಆಚರಣೆಗಳು ಸರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ ಬೈಬಲ್(Bible) ಹಾಗೂ ಕುರಾನ್(Quran) ಗ್ರಂಥಗಳೇ ಶ್ರೇಷ್ಠ ಅಂತಲೂ ಹೇಳಲಾಗಿದೆ.

    ಗೀತಾ ಜ್ಞಾನದಲ್ಲಿ ತಾನು ಏನು ಹೇಳಿದ್ದೇನೆ ಎಂಬುದರ ಬಗ್ಗೆ ಶ್ರೀಕೃಷ್ಣನಿಗೆ ಗೊತ್ತೇ ಇರಲಿಲ್ಲ. ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನು ಹೇಳಿಲ್ಲ. ಬದಲಾಗಿ ಅವನ ಶರೀರದಲ್ಲಿ ಪ್ರೇತಗಳಂತೆ ಪ್ರವೇಶಿಸಿದ ಕಾಲಾನು ಹೇಳಿದ್ದಾನೆ ಎಂದು ಅವಹೇಳನ ಮಾಡಲಾಗಿದೆ.

    ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೂ ಸಾವಿದೆ. ಗೀತೆಯಲ್ಲಿ ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಎಲ್ಲಾದರೂ ಬರೆದಿದೆಯೇ? ವೇದಗಳಲ್ಲಿಯೂ ಸಹಾ ದುರ್ಗೆಯನ್ನು, ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಬರೆದಿಲ್ಲ. ಹಾಗಾದರೆ ಮಹರ್ಷಿಗಳು ವೇದಗಳನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ? ಇದನ್ನೂ ಓದಿ: ಮುಸ್ಲಿಮರಿಗೂ ಮೀಸಲಾತಿ ಹೆಚ್ಚಿಸಿ – ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ

    ಸತ್ಯಯುಗದ ಮಹರ್ಷಿಗಳು ಪೂರ್ಣ ವಿದ್ವಾಂಸರೇ? ‘ಓಂ ‘ ಎಂಬ ನಾಮಜಪವೂ ಎಲ್ಲದಕ್ಕಿಂತ ಉತ್ತಮ ಜಪ ಹಾಗೂ ಬ್ರಹ್ಮ ಪೂಜೆಯು ಸರ್ವಶ್ರೇಷ್ಠ ಎನ್ನುವುದು ಅವರ ಸ್ವಂತ ನಿರ್ಧಾರವಾಗಿತ್ತು. ಹಾಗಾಗಿ ಪ್ರಿಯ ಓದುಗರೇ! ಯಾರು ಬ್ರಹ್ಮನ ಪೂಜೆಯನ್ನು ಇಷ್ಟ ದೈವವೆಂದು ತಿಳಿದು ಮಾಡುತ್ತಾರೋ ಅವರು ಅಜ್ಞಾನಿಗಳು, ಬ್ರಹ್ಮ ಸಾಧನೆಯಿಂದ ಉತ್ತಮವಲ್ಲದ ಮೋಕ್ಷವು ಅವರಿಗೆ ಪ್ರಾಪ್ತವಾಗುತ್ತದೆ ಎಂದು ಭಗವದ್ಗೀತೆಯ ಸಾರವನ್ನೇ ತಿರುಚಲಾಗಿದೆ.

    ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂಪರ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ತುಮಕೂರಿನ ಕೋರಾ ಪೊಲೀಸ್ ಠಾಣೆ ಮತ್ತು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಹಿಂದೂಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

    ಈ ಪುಸ್ತಕಗಳನ್ನ ಬ್ಯಾನ್ ಮಾಡಬೇಕು, ಈ ಪುಸ್ತಕಗಳನ್ನ ಉಚಿತವಾಗಿ ಡೌನ್ ಲೋಡ್‌ ಮಾಡಿಕೊಳ್ಳಲು ಬಿಟ್ಟಿರುವ ವೆಬ್ ಸೈಟ್ ಅನ್ನು ನಿಷೇಧ ಮಾಡಬೇಕು. ಇದರ ಹಿಂದೆ ಕೆಲಸ ಮಾಡುತ್ತಿರುವವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    ನವದೆಹಲಿ: ಜಿಹಾದ್ (Jihad) ಪರಿಕಲ್ಪನೆ ಕೇವಲ ಇಸ್ಲಾಂ (Islam) ಧರ್ಮದಲ್ಲಿ ಮಾತ್ರವಲ್ಲ, ಭಗವದ್ಗೀತೆ (Bhagavad Gita) ಹಾಗೂ ಕ್ರಿಶ್ಚಿಯನ್ ಧರ್ಮದಲ್ಲೂ (Christianity) ಇದೆ. ಶ್ರೀಕೃಷ್ಣನೂ (Lord Krishna) ಅರ್ಜುನನಿಗೆ (Arjun) ಜಿಹಾದ್ ಬೋಧಿಸಿದ್ದಾನೆ ಎಂದು ಕಾಂಗ್ರೆಸ್‌ನ (Congress) ಹಿರಿಯ ನಾಯಕ ಶಿವರಾಜ್ ಪಾಟೀಲ್ (Shivraj Patil) ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದ ವೇಳೆ ಮಾತನಾಡಿದ ಶಿವರಾಜ್ ಪಾಟೀಲ್, ಸರಿಯಾದ ಉದ್ದೇಶ ಹೊಂದಿದ್ದರೂ, ಸರಿಯಾದ ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ವೇಳೆ ಜಿಹಾದ್ ಪರಿಕಲ್ಪನೆ ಹುಟ್ಟಿಕೊಳ್ಳುತ್ತದೆ. ಜಿಹಾದ್ ಇಸ್ಲಾಂ ಧರ್ಮದಲ್ಲಿ ಇದೆ ಎಂಬುದಾಗಿ ಭಾರೀ ಚರ್ಚೆಯಾಗುತ್ತಿದೆ. ಆದರೆ ಕುರಾನ್‌ನಲ್ಲಿ ಮಾತ್ರವಲ್ಲ, ಮಹಾಭಾರತದ ಗೀತೆಯಲ್ಲೂ ಇದೆ, ಕ್ರಿಶ್ಚಿಯನ್ ಧರ್ಮದಲ್ಲೂ ಇದೆ ಎಂದು ಹೇಳಿದ್ದಾರೆ.

    ಜನರಿಗೆ ಎಲ್ಲವನ್ನೂ ವಿವರಿಸಿದ ಬಳಿಕವೂ ಅರ್ಥವಾಗುವುದಿಲ್ಲ. ಬದಲಿಗೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬರುತ್ತಾರೆ. ಈ ವೇಳೆ ನಿಮ್ಮಿಂದ ಓಡಿ ಹೋಗಲು ಸಾಧ್ಯವಿಲ್ಲ. ಇದನ್ನು ಜಿಹಾದ್ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ತಪ್ಪು ಎಂದೂ ಹೇಳಲೂ ಸಾಧ್ಯವಿಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಜನರಿಗೆ ಅರ್ಥ ಮಾಡಿಸುವಂತಹ ಪರಿಕಲ್ಪನೆ ಇರಬಾರದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – 4 ತಿಂಗಳು ಹಿಂದೆ ಬಿದ್ದ ನಮ್ಮ ಮೆಟ್ರೋ ಕಾಮಗಾರಿ

    ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಎಎಪಿಯಲ್ಲಿ ಗೋಪಾಲ್ ಇಟಾಲಿಯಾ, ಹಾಗೂ ರಾಜೇಂದ್ರ ಪಾಲ್ ಬಳಿಕ ಇದೀಗ ಕಾಂಗ್ರೆಸ್‌ನ ಶಿವರಾಜ್ ಪಾಟೀಲ್ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಪ್ರವಚನ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆ ನೀಡುವ ಮೂಲಕ ಹಿಂದೂ ದ್ವೇಷ ಹಾಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್ ವೇಳೆಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ: ಬಿ.ಸಿ.ನಾಗೇಶ್

    ಡಿಸೆಂಬರ್ ವೇಳೆಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ: ಬಿ.ಸಿ.ನಾಗೇಶ್

    ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ಪಠ್ಯದಲ್ಲಿ (Textbook) ಭಗವದ್ಗೀತೆ (Bhagavad Gita) ಬೋಧನೆ ಮಾಡುತ್ತೇವೆ ಅಂತ ಶಿಕ್ಷಣ ಸಚಿವ ಬಿ.ಸಿ. ನಾಗೇಶ್(BC Nagesh) ತಿಳಿಸಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿಯ ಪ್ರಾಣೇಶ್ ಹಾಗೂ ರವಿಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಶಾಲಾ(School) ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರ್ಕಾರದ (BJP Karnataka) ಮುಂದೆ ಇಲ್ಲ. ಆದರೆ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುತ್ತೇವೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡುತ್ತೇವೆ. ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಶಾಲೆಗಳಲ್ಲಿ ಜಾರಿಗೆ ತರುತ್ತೇವೆ ಎಂದರು. ಇದನ್ನೂ ಓದಿ: ಮ್ಯಾನೇಜರ್ ನಂಬರ್ ಕೇಳಿದ್ದೆ ತಪ್ಪಾ? – ಬಟ್ಟೆ ಚಿಂದಿಯಾಗುವಂತೆ ವ್ಯಕ್ತಿಗೆ ಹೊಡೆದ್ರು ಮಹಿಳೆಯರು

    ಈ ವೇಳೆ ಮಾತನಾಡಿದ ಸದಸ್ಯ ಪ್ರಾಣೇಶ್ (Pranesh), ಶಾಲಾ ಪಠ್ಯಪುಸ್ತಕದಲ್ಲಿ ಭಗದ್ಗೀತೆ ಬೋಧಿಸುವ ಪ್ರಸ್ತಾಪ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಹಿಂದೆ ಸರ್ಕಾರ ಭಗದ್ಗೀತೆ ಬೋಧನೆ ಮಾಡಲು ಸಮಿತಿ ರಚನೆ ಮಾಡುವುದಾಗಿ ಹೇಳಿತ್ತು. ಸರ್ಕಾರಕ್ಕೆ ಭಗವದ್ಗೀತೆ ಬೋಧಿಸಲು ಮುಜುಗರ ಇದೆಯಾ? ಇದಕ್ಕೆ ಯಾರ ವಿರೋಧವೂ ಇರುವುದಿಲ್ಲ. ಮೊದಲು ಇದ್ದ ಆಸಕ್ತಿ ಇದ್ದಕ್ಕಿದ್ದಂತೆ ಈಗ ಯಾಕಿಲ್ಲ ಅಂತ ಪ್ರಶ್ನೆ ಮಾಡಿದರು. ಅಲ್ಲದೇ ಬಾಬಾ ಬುಡನ್ ಗಿರಿಗೆ ದತ್ತಾಪೀಠ (Dattapeeta) ಅಂತ ಹೆಸರು ಇಡಬೇಕು ಅಂತ ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವರು, ಪಠ್ಯದಲ್ಲಿ ಸೇರ್ಪಡೆ ಇಲ್ಲ ಅಂತ ಹೇಳಿದ್ದೇವೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುತ್ತೇವೆ. ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಶಾಲೆಗಳಲ್ಲಿ ಪ್ರಾರಂಭ ಮಾಡುತ್ತೇವೆ. ಇತಿಹಾಸದ ತಪ್ಪುಗಳನ್ನು ಪಠ್ಯದಲ್ಲಿ ಸರಿ ಮಾಡುವ ಕೆಲಸ ಮಾಡ್ತಿದ್ದೇವೆ. ಬಾಬಾ ಬುಡನ್ ಗಿರಿ(Baba Budan giri) ಹೆಸರು ಈಗಾಗಲೇ ದತ್ತಾತ್ರೇಯ ಪೀಠ ಅಂತ ಬದಲಾವಣೆ ಮಾಡಲಾಗಿದೆ ಅಂತ ತಿಳಿಸಿದರು. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್ – ವಾಶ್ ರೂಂ ಅಂದ್ರೆನೇ ಬೆಚ್ಚಿ ಬೀಳ್ತಿದ್ದಾರೆ ವಿದ್ಯಾರ್ಥಿನಿಯರು

    Live Tv
    [brid partner=56869869 player=32851 video=960834 autoplay=true]

  • ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ

    ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ

    ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಪ್ರಮುಖ ಹಂತಕ ಮಹಾಂತೇಶ್ ಶಿರೂರು ಇತ್ತೀಚೆಗಷ್ಟೇ ತನ್ನ ಫೇಸ್‍ಬುಕ್‍ನಲ್ಲಿ ಫೋಸ್ಟ್ ಮಾಡಿದ್ದ ಭಗವದ್ಗೀತೆ ಗೀತೋಪದೇಶದ ಸಾಲಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡುವ ಮುನ್ನ ಐದು ದಿನದ ಹಿಂದೆ ಹಂತಕ ಮಹಾಂತೇಶ್, ಶ್ರೀ ಕೃಷ್ಣ ಪರಮಾತ್ಮನ ರೌದ್ರಾವತಾರದಲ್ಲಿ ಕುದುರೆ ಏರಿ ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಅಲ್ಲದೇ ಈ ಫೋಟೋದಲ್ಲಿ ಅಧರ್ಮ ತಾಂಡವವಾಡುತ್ತಿರುವಾಗ ದುಷ್ಟರ ನಾಶ ಪಡಿಸಲು ಧರ್ಮ ಪುನರ್ ಸ್ಥಾಪಿಸಲು ನೀನು ಬರುವೆ ಎಂದು ವಚನ ನೀಡಿರುವೆ. ವಿಳಂಭವೇಕೆ ಮತ್ತೆ ಅವತರಿಸು ಪ್ರಭುವೆ..! ಸಂಭವಾಮಿ ಯುಗೇ ಯುಗೇ ಎಂಬ ಭಗವದ್ಗೀತೆಯ ಗೀತೋಪದೇಶದ ಸಾಲುಗಳಿರುವುದನ್ನು ಕಾಣಬಹುದಾಗಿದೆ.  ಇದನ್ನೂ ಓದಿ: ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು

    ಸರಳವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಉಣಕಲ್‍ನಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಹಾಡಹಗಲೇ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರವೇ ಬಂಧಿಸಿದ್ದು, ಈ ಸಂಬಂಧ ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ

    ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ

    ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದಲ್ಲಿ ಈಶ್ವರಿ ವಿಶ್ವವಿದ್ಯಾಲಯ ನಿರ್ಮಿಸಿರುವ ಏಷ್ಯಾದದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯುಸಿಯಂ ಮೇ 15 ರಂದು ಲೋಕಾರ್ಪಣೆಗೊಳ್ಳಲಿದೆ.

    ಐದೂವರೆ ಎಕರೆಯಲ್ಲಿ ನಿರ್ಮಿಸಿರುವ ಜ್ಞಾನಲೋಕ ಮ್ಯೂಸಿಯಂನಲ್ಲಿ 36/13 ಅಳತೆ 114 ಕೋಣೆಗಳಿವೆ. ಇದರಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಭಗವದ್ಗೀತೆಯ ಶ್ಲೋಕಗಳ ಸಾರಾಂಶವನ್ನು ತಿಳಿಸಲಾಗಿದೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲೆಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ ಟ್ವೀಟ್ 

    BASAVARAJ BOMMAI

    ಈಶ್ವರಿ ವಿವಿ ಸಂಚಾಲಕಿ ಬ್ರಹ್ಮಕುಮಾರಿ ನಿರ್ಮಲಾದೇವಿಯವರು ಈ ಬಗ್ಗೆ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ್ದು, 1,500 ಜನರ ಸಾಮರ್ಥ್ಯದ ಆಧ್ಯಾತ್ಮಿಕ ತರಬೇತಿ ಸಭಾಂಗಣ ಹಾಗೂ ಆಧ್ಯಾತ್ಮಿಕ, ಯೋಗ ತರಬೇತಿ ಶಿಕ್ಷಣ ನೀಡಲಾಗುತ್ತದೆ. 200 ಜನರಿಗೆ ಅನುಕೂಲವಾಗುವಂತೆ ವಸತಿ ವ್ಯವಸ್ಥೆ ನಿರ್ಮಿಸಲಾಗಿದೆ.

    15 ರಂದು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿ ವಿವಿಧ ಸಚಿವರು ಹಾಗೂ ಈಶ್ವರಿ ವಿವಿಯ ರಾಜ ಋಷಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಇದನ್ನೂ ಓದಿ:  ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ 

  • ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಬಿಸಿ ನಾಗೇಶ್

    ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಬಿಸಿ ನಾಗೇಶ್

    ಬೆಂಗಳೂರು: ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ವಿಭಾಗದಲ್ಲಿ ಸೇರ್ಪಡೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೈತಿಕ ಶಿಕ್ಷಣದ ಬಗ್ಗೆ ಪಠ್ಯದಲ್ಲಿ ಸೇರಿಸುವ ಬೇಡಿಕೆಗಳು ಬಂದಿದೆ. ಹೀಗಾಗಿ ಪಂಚತಂತ್ರ, ರಾಮಾಯಣ, ಮಹಾಭಾರತ ಸೇರಿದಂತೆ ಮಾರಲ್ ಸೈನ್ಸ್ ಅಂಶಗಳನ್ನು ಸೇರಿಸುತ್ತೇವೆ. ಇದರ ಜೊತೆಗೆ ಈ ವರ್ಷದಿಂದಲೇ ಭಗವದ್ಗೀತೆ ಸಹ ಸೇರ್ಪಡೆ ಆಗುತ್ತದೆ. ಆದರೆ ಪರೀಕ್ಷೆಗೆ ಈ ವಿಷಯ ಇರುವುದಿಲ್ಲ. ಇದು ನೈತಿಕ ಶಿಕ್ಷಣದ ಭಾಗವಾಗಿಯಷ್ಟೇ ಇರಲಿವೆ ಎಂದರು.

    2022-23ನೇ ಸಾಲಿನಿಂದಲೇ ನೈತಿಕ ಶಿಕ್ಷಣದ ವಿಭಾಗದಲ್ಲಿ ಭಗವದ್ಗೀತೆ ಸೇರ್ಪಡೆಗೆ ಸರ್ಕಾರದಿಂದ ನಿರ್ಧರಿಸಲಾಗಿದೆ. ಮಕ್ಕಳ ನೈತಿಕ ಶಿಕ್ಷಣದ ಭಾಗವಾಗಿ ಇರುತ್ತದೆ. ಆ ಧರ್ಮ, ಈ ಧರ್ಮ ಎಂದು ವಿಭಾಗ ಮಾಡೊಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಹಿಜಬ್ ಧರಿಸಿ ಪರೀಕ್ಷೆಗೆ ಬರುವಂತಿಲ್ಲ: ಏಪ್ರಿಲ್ 22ರಿಂದ ಪ್ರಾರಂಭವಾಗುವ ಪಿಯುಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಡಿಸಿ, ಎಸ್ಪಿಗಳ ಜೊತೆ ಸಭೆ ನಡೆಸಲಾಗಿದೆ. ಆದರೆ ಪರೀಕ್ಷೆಗೆ ಹಿಜಬ್ ನಿಷೇಧಿಸಲಾಗಿದೆ. ಸಮವಸ್ತ್ರದಲ್ಲೇ ಪರೀಕ್ಷೆಗೆ ಬರಬೇಕು. ಧಾರ್ಮಿಕ ಭಾವನೆಯ ಸಮವಸ್ತ್ರ ಧರಿಸಲು ಅವಕಾಶ ಇಲ್ಲ. ಶಾಲಾ ಆಡಳಿತ ಮಂಡಳಿ ನೀಡಿರುವ ಸಮವಸ್ತ್ರ ಹಾಕಿಕೊಂಡು ಬರಬೇಕು. ಈವರೆಗೆ ಹಿಜಬ್ ಧರಿಸುತ್ತೇವೆ ಎಂದು ಯಾರೂ ಮನವಿ ಮಾಡಿಲ್ಲ ಎಂದು ತಿಳಿಸಿದರು.

    ಪರೀಕ್ಷಾ ಕೇಂದ್ರದಲ್ಲಿ ಉಪನ್ಯಾಸಕರು ಹಿಜಬ್ ಹಾಕಬಾರದು. ಉಪನ್ಯಾಸಕರು ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಇದೊಂದು ಸೂಕ್ಷ್ಮ ವಿಚಾರವಾಗಿದೆ ಎಂದ ಅವರು, ವಿದ್ಯಾರ್ಥಿಗಳು ಪರಿಕ್ಷೆಯನ್ನು ಕೂಲ್ ಆಗಿ ತಗೊಂಡು, ಆರಾಮವಾಗಿ ಬರೆಯಬೇಕು. ಪೂರ್ವ ಸಿದ್ಧತೆ, ಮಾಡೆಲ್ ಪ್ರಶ್ನೆ ಪತ್ರಿಕೆ ಇದ್ದ ರೀತಿಯೇ ಇರುತ್ತದೆ. ಎಸ್‍ಎಸ್‍ಎಲ್ಸಿ ಪರೀಕ್ಷೆ ಮಾದರಿಯಲ್ಲಿ ಮಕ್ಕಳ ಸ್ನೇಹಿ ಪರೀಕ್ಷೆ ಇರುತ್ತದೆ. ಪೋಷಕರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಏಪ್ರಿಲ್ 22 ರಿಂದ ಮೇ 18ವರೆಗೆ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಲೀಕ್ ಆಗಿಲ್ಲ: ಎಸ್‍ಎಸ್‍ಎಲ್‍ಸಿ ಯಾವುದೇ ಪೇಪರ್ ಲೀಕ್ ಆಗಿಲ್ಲ. ಈ ಬಗ್ಗೆ ತನಿಖೆ ಮಾಡಿದ್ದೇವೆ. ಪರೀಕ್ಷೆ ಶುರುವಾದ 2 ಗಂಟೆ ನಂತರ ಮೊಬೈಲ್‍ನಲ್ಲಿ ಪ್ರಶ್ನೆ ಪತ್ರಿಕೆ ತೆಗೆದು ಹಾಕಿದ್ದಾರೆ ಎಂದರು.

    ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ರಿಪೀಟರ್ಸ್ ಹೆಚ್ಚು ಗೈರು ಆಗಿದ್ದಾರೆ. ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಗೈರು ಆಗಿಲ್ಲ. ಮೇ 2ನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಮಾಡುತ್ತೇವೆ. ದಿನಾಂಕ ಶೀಘ್ರವೇ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

    tippu

    ಆಧಾರವಿಲ್ಲದ ವಿಷಯಕ್ಕೆ ಕತ್ತರಿ: ಶಾಸಕ ಅಪ್ಪಚ್ಚು ರಂಜನ್ ಟಿಪ್ಪುವಿನ ಪಠ್ಯ ತೆಗೆಯಬೇಕು ಎಂದು ಮನವಿ ಮಾಡಿದ್ದರು. ತೆಗೆಯಲಿಲ್ಲ ಅಂದರೆ ಟಿಪ್ಪುವಿನ ಎಲ್ಲಾ ಮುಖ ತೋರಿಸಿ ಎಂದು ಹೇಳಿದ್ದಾರೆ. ಹೀಗಾಗಿ ಟಿಪ್ಪು ಕುರಿತಾತ ಕೆಲವು ಅಂಶಗಳನ್ನು ತೆಗೆಯಲಾಗಿದೆ. ಟಿಪ್ಪುವಿನ ಬಗ್ಗೆ ಯಾವುದಕ್ಕೆ ಆಧಾರವಿಲ್ಲವೋ ಆ ವಿಷಯವನ್ನು ಮಾತ್ರ ಪಠ್ಯದಲ್ಲಿ ತೆಗೆಯಲಾಗಿದೆ. ಮೈಸೂರು ಹುಲಿ ಅನ್ನೋದನ್ನ ತೆಗೆದಿಲ್ಲ. ಯಾವ ಅಂಶ ತೆಗೆಯಲಾಗಿದೆ ಅಂತ ಮುಂದಿನ ವಾರ ಸುದ್ದಿಗೋಷ್ಠಿ ಮಾಡಿ ಹೇಳುತ್ತೇನೆ ಎಂದು ತಿಳಿಸಿದರು.

  • ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

    ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

    ಕೊಪ್ಪಳ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಭಗವದ್ಗೀತೆ ನಮ್ಮ ದೇಶದ ಅಸ್ಮೀತೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಧರ್ಮ ಗ್ರಂಥವನ್ನ ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪರಿಚಯ ಮಾಡಿಕೊಟ್ಟಿದ್ದೆ ಕಾಂಗ್ರೆಸ್. ದೂರದರ್ಶನದ ಮೂಲಕ ಭಗವದ್ಗೀತೆಯನ್ನು ಪ್ರಚಾರ ಮಾಡಿದ್ದು ನಮ್ಮ ಪಕ್ಷ. ಇದರ ಜೊತೆಗೆ ದೇಶದ ಎಲ್ಲಾ ಧರ್ಮವನ್ನ ಕಾಂಗ್ರೆಸ್ ಗೌರವಿಸಿತ್ತದೆ ಎಂದಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

    ಇದೇ ವೇಳೆ ನಮ್ಮ ನಿರೀಕ್ಷೆಯಷ್ಟು ಡಿಜಿಟಲ್ ಸದಸ್ಯತ್ವ ಮಾಡಿಸುತ್ತೇವೆ. ಇನ್ನೂ 7 ದಿನ ಸಮಯ ಇದೆ. ನಾವು ನಿರೀಕ್ಷೆ ರೀಚ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತರಿಗೆ ಮಧ್ಯರಾತ್ರಿಯ ಸರ್ಪ್ರೈಸ್ ಕೊಟ್ಟ RRR ಟೀಮ್..!