Tag: Bhagat Raj

  • ‘ಸೂಟ್’ ಮೂಲಕ ಸಿನಿಮಾ ಕಥೆ ಹೇಳಲಿದ್ದಾರೆ ನಿರ್ದೇಶಕ ಭಗತ್ ರಾಜ್

    ‘ಸೂಟ್’ ಮೂಲಕ ಸಿನಿಮಾ ಕಥೆ ಹೇಳಲಿದ್ದಾರೆ ನಿರ್ದೇಶಕ ಭಗತ್ ರಾಜ್

    ದುವೆ ಮುಂತಾದ ಸಮಾರಂಭಗಳಲ್ಲಿ ‘ಸೂಟ್’ ಧರಿಸಿದರೆ ಒಂದು ಕಳೆ. ಅಂತಹ ಸೂಟ್ (The Suite) ಬಗ್ಗೆ ಸಿನಿಮಾವೊಂದು ಬರುತ್ತಿದ್ದು, ಬಿಡುಗಡೆಗೂ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಸೂಟ್ ನ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಮಾಲತಿ ಗೌಡ ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ರಾಮಸ್ವಾಮಿ ಈ ಚಿತ್ರದ ನಿರ್ಮಾಪಕರು.

    ಮೊದಲು ಮಾತನಾಡಿದ್ದ ನಿರ್ದೇಶಕ ಭಗತ್ ರಾಜ್ (Bhagat Raj), ಸೂಟ್ ಗೆ ಅದರದೇ ಆದ ವಿಶೇಷತೆ ಇದೆ. ಎಂದುಗೂ ಸೂಟ್ ಹಾಕದವರು, ಮದುವೆ ಆರತಕ್ಷತೆಯಲ್ಲಾದರೂ ಸೂಟ್ ಧರಿಸುವುದು ವಾಡಿಕೆ. ಅಂತಹ ಸೂಟ್ ನಮ್ಮ ಚಿತ್ರದ ಕಥಾನಾಯಕ. ಈ ಚಿತ್ರದಲ್ಲಿ ಸೂಟ್ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಸೂಟ್ ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಸೂಟ್ ಬಗ್ಗೆ ಅನೇಕ ಗಣ್ಯರು ತಮಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರ ಚಿತ್ರ ಮೂರು ಕಿರಣಗಳಿಂದ ಹೆಚ್ಚು ಪ್ರಕಾಶಿಸುತ್ತಿದೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್ ಸುಮಧುರ ಹಾಡುಗಳನ್ನು ನೀಡಿದ್ದಾರೆ.  ಛಾಯಾಗ್ರಾಹಕ ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಸೂಟ್ ನ ಅಂದವನೆ ಮತ್ತಷ್ಟು ಹೆಚ್ಚುಸಿದೆ‌.  ರೇಖಾಚಿತ್ರಗಳ ಮೂಲಕ ಕಿರಣ್ ನಮ್ಮ ಚಿತ್ರಕ್ಕೆ ಜೀವ ತುಂಬಿದ್ದಾರೆ. ಇವರೆ ಆ ಮೂರು ಕಿರಣಗಳು.  ಚಿತ್ರದಲ್ಲಿ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ.

    ಸಾಹಿತಿ ವಿ.ನಾಗೇಂದ್ರ ಪ್ರಸಾದ್  (Nagendra Prasad)ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ತಿಳಿಸಿ, ಸೂಟ್ ಬಗ್ಗೆ ತಾವು ಬರೆದಿರುವ ಕಾವ್ಯವನ್ನು ವಾಚಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪ್ರಣಯ ಮೂರ್ತಿ, ದೀಪ್ತಿ ಕಾಪ್ಸೆ, ಭೀಷ್ಮ ರಾಮಯ್ಯ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

    ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಹಾಜರಾಗದ ಸಂಗೀತ ನಿರ್ದೇಶಕ ಕಿರಣ್ ಶಂಕರ್ ಹಾಡುಗಳ ಹಾಗೂ ಹಾಡಿದವರ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದರು. ಛಾಯಾಗ್ರಾಹಕ ಕಿರಣ್ ಹಂಪಾಪುರ ಸೇರಿದಂತೆ ಅನೇಕ ತಂತ್ರಜ್ಞರು, ಕಲಾವಿದರು ಹಾಗೂ ಅತಿಥಿಗಳು ಆಡಿಯೋ ರಿಲೀಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದ ಸೂಟ್ ಚಿತ್ರಕ್ಕೆ ಅತಿಥಿದೇವೋ ಭವ ಎಂಬ ಅಡಿಬರಹವಿದೆ.

  • ‘ಠಾಣೆ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಧ್ರುವ ಸರ್ಜಾ

    ‘ಠಾಣೆ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಧ್ರುವ ಸರ್ಜಾ

    ಗಾಯತ್ರಿ ಎಂ ನಿರ್ಮಿಸಿರುವ “ಠಾಣೆ” (Thane) ಚಿತ್ರದ ಪೋಸ್ಟರ್ ಧ್ರುವ ಸರ್ಜಾ (Dhruva Sarja) ಅವರಿಂದ ಬಿಡುಗಡೆಯಾಗಿದೆ. ಈ ಪೋಸ್ಟರ್ ನೋಡಿದರೆ ಇಡೀ ಚಿತ್ರ ನೋಡಿದ ಹಾಗೆ ಆಗುತ್ತಿದೆ. ಪೋಸ್ಟರ್ (Poster) ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಧ್ರುವ ಸರ್ಜಾ ಹಾರೈಸಿದರು.

    ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ, ಕೌರವ ವೆಂಕಟೇಶ್ ಸೇರಿದಂತೆ ಅನೇಕ ಸಾಹಸ ನಿರ್ದೇಶಕರ ಬಳಿ ಕೆಲಸ ಮಾಡಿರುವ ಪ್ರಕಸಂ ತಂಡದ ಪ್ರವೀಣ್ “ಠಾಣೆ” ಚಿತ್ರದ ನಾಯಕ. ಭರತ ನಾಟ್ಯ ಸೇರಿದಂತೆ ಅನೇಕ ಕಲೆಗಳಲ್ಲಿ ನೈಪುಣ್ಯತೆ ಪಡೆದಿರುವ ಮೈಸೂರಿನ ಹರಿಣಾಕ್ಷಿ ಈ ಚಿತ್ರದ ನಾಯಕಿ. ಪಿ.ಡಿ.ಸತೀಶ್, ರಾಜ್ ಬೆಳವಾಡಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್, ರಾಮನಾಥ್ ಋಗ್ವೇದಿ, ಗುರುಪ್ರಸಾದ್ ಮುಂತಾದವರ ಬಳಿ ಕಾರ್ಯ ನಿರ್ವಹಿಸಿರುವ ಎಸ್ ಭಗತ್ ರಾಜ್ (Bhagat Raj) ಈ ಚಿತ್ರದ ನಿರ್ದೇಶಕರು. ನಾವು ಧರಿಸುವ ಸೂಟ್ ಮೇಲೆ ಒಂದು ಕಥೆ ರಚಿಸಿ, ನಿರ್ದೇಶಿಸಿರುವ “ದಿ ಸೂಟ್” ಭಗತ್ ರಾಜ್ ನಿರ್ದೇಶನದ ಮೊದಲ ಚಿತ್ರ. “ಠಾಣೆ” ಎರಡನೇ ಚಿತ್ರ. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    “ಠಾಣೆ” 1962 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ನಗರಗಳು ಬೆಳೆದರು, ಸ್ಲಂಗಳು ಬೆಳೆಯುವುದಿಲ್ಲ. ಅದು ಬೆಳೆಯಲು ಕೆಲವರು ಬಿಡುವುದು ಇಲ್ಲ. ಸ್ಲಂ ನಲ್ಲೇ ಹುಟ್ಟಿಬೆಳೆದ ಯುವಕ‌ನೊಬ್ಬ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಹೋರಾಡುವ ಕಥೆಯಿದು. ಆ ಕಾಲಘಟ್ಟದ ಕಥೆಯಾಗಿರುವುದರಿಂದ ಬೆಂಗಳೂರಿನ ಹಳೆ ಬಡಾವಣೆಗಳಾದ ಶ್ರೀರಾಮಪುರ, ಶಿವಾಜಿ ನಗರ ಮುಂತಾದ ಕಡೆ ಹಳೆಯ ಜಾಗಗಳನ್ನು ಹುಡುಕಿ ಚಿತ್ರೀಕರಣ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

    ಎರಡು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ. ಸಾಗರದ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಸಂಕಲನ, ಪ್ರವೀಣ್ ಜಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವ ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರಿಗೂ ಸಾಹಸ ಸಂಯೋಜನೆ ಮಾಡಿ ಅನುಭವವಿರುವುದರಿಂದ ಅವರ ಅಭಿನಯದಲ್ಲಿ ಸಾಹಸ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿದೆ. “ಠಾಣೆ” ಚಿತ್ರದಲ್ಲಿ ಪ್ರವೀಣ್, (Praveen) ಕಾಳಿ  ಎಂಬ ಪಾತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. C/O ಶ್ರೀರಾಮಪುರ ಎಂಬ ಅಡಿಬರಹ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]