Tag: Bhagamathie

  • ಅನುಷ್ಕಾರನ್ನು ನೋಡಲು ಮುಖ ಮುಚ್ಚಿಕೊಂಡು ಬಂದ ಬಾಹುಬಲಿ

    ಅನುಷ್ಕಾರನ್ನು ನೋಡಲು ಮುಖ ಮುಚ್ಚಿಕೊಂಡು ಬಂದ ಬಾಹುಬಲಿ

    ಹೈದರಾಬಾದ್: ಟಾಲಿವುಡ್‍ನಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೇಮಾಂಕುರದ ಬಗ್ಗೆ ಪ್ರತಿನಿತ್ಯ ಹೊಸ ಸುದ್ದಿಗಳು ಸಿನಿ ಅಂಗಳದಿಂದ ಹರಿದು ಬರುತ್ತಿವೆ. ಇಬ್ಬರೂ ಸ್ಟಾರ್‍ಗಳು ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಇತ್ತೀಚೆಗೆ ಪ್ರಭಾಸ್, ಅನುಷ್ಕಾರನ್ನು ನೋಡಲು ಭಾಗಮತಿ ಸೆಟ್‍ಗೆ ತೆರಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಸದ್ಯ ಅನುಷ್ಕಾ ಶೆಟ್ಟಿ ತಮ್ಮ ಮುಂಬರುವ ‘ಭಾಗಮತಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಪ್ರಭಾಸ್ ಸ್ವತಃ ‘ಭಾಗಮತಿ’ ಸೆಟ್‍ಗೆ ತೆರಳಿ ಅನುಷ್ಕಾರನ್ನು ಭೇಟಿಯಾಗಿದ್ದಾರೆ. ಸೆಟ್ ಪ್ರವೇಶಕ್ಕೂ ಮುನ್ನ ಯಾರಿಗೂ ತಿಳಿಯಬಾರದೆಂದು ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡು ಬಂದಿದ್ದಾರೆ.

    ಪ್ರಭಾಸ್ ‘ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ತಮ್ಮ ಬ್ಯೂಸಿ ಶೆಡ್ಯೂಲ್‍ನಲ್ಲಿಯೂ ಅನುಷ್ಕಾ ಅವರನ್ನ ಭೇಟಿ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಭಾಗಮತಿ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ತನ್ನ ಟೀಸರ್ ಮತ್ತು ಟ್ರೇಲರ್‍ನಿಂದ ಹುಟ್ಟು ಹಾಕಿದೆ. ಭಾಗಮತಿ ಟ್ರೇಲರ್ ಬಿಡುಗೊಂಡಾಗ ಪ್ರಭಾಸ್ ಫೇಸ್‍ಬುಕ್‍ನಲ್ಲಿ “ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಭಾಗಮತಿ ಸಿನಿಮಾ ಟೀಸರ್ ಹಾಕಿಕೊಂಡು ಅನುಷ್ಕಾ ಶೆಟ್ಟಿಗೆ ಶುಭಕೋರಿದ್ದರು.

    ಈ ಹಿಂದೆ ತಮ್ಮ ಮದುವೆಯ ಕುರಿತು ಮಾತನಾಡಿದ ಪ್ರಭಾಸ್, ನನಗೆ ಈಗಾಗಲೇ 6 ಸಾವಿರ ಮದುವೆ ಪ್ರಸ್ತಾಪಗಳು ಬಂದಿದ್ದು, ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಅವುಗಳನ್ನು ನಿರಾಕರಿಸಿದ್ದಾಗಿ ತಿಳಿಸಿದ್ದರು. ಅಲ್ಲದೇ ನಟಿ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವ ಕುರಿತು ವದಂತಿಗಳು ಹಬ್ಬಿದ್ದವು. ಇದನ್ನ ನಿರಾಕರಿಸಿದ್ದ ಪ್ರಭಾಸ್, ನಾನೂ ಹಾಗೂ ಅನುಷ್ಕಾ ನಮ್ಮಿಬ್ಬರ ಬಗ್ಗೆ ಡೇಟಿಂಗ್ ವದಂತಿಗಳು ಬರಬಾರದು ಎಂದು ನಿರ್ಧರಿಸಿದ್ದೆವು ಎಂದು ಹೇಳಿದ್ದರು.

    ಪ್ರಸ್ತುತ ಪ್ರಭಾಸ್ ಸುಜೀತ್ ನಿರ್ದೇಶನದ ‘ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾಗಮತಿ ಚಿತ್ರದ ಪ್ರಮೋಶನಲ್ ವಿಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಭಾಸ್ ಚಿತ್ರೀಕರಣದ ಸೆಟ್ ಗೆ ಭೇಟಿ ನೀಡಿರುವುದು ಕಂಡು ಬಂದಿದೆ.

  • ಅಯ್ಯೋ, ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೊಂದು ಸ್ಯಾಡ್ ನ್ಯೂಸ್!

    ಅಯ್ಯೋ, ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೊಂದು ಸ್ಯಾಡ್ ನ್ಯೂಸ್!

    ಹೈದರಾಬಾದ್: ಟಾಲಿವುಡ್ ನ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಅಭಿಮಾನಿಗಳೊಂದಿಗೆ ಸ್ಯಾಡ್ ನ್ಯೂಸ್ ಬಂದಿದೆ. ಹೌದು, ನಟಿ ಅನುಷ್ಕಾ ಶೆಟ್ಟಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.

    ಬೆನ್ನು ನೋವಿನಿಂದಾಗಿ ಅನುಷ್ಕಾ ಕೆಲವು ದಿನಗಳಿಂದ ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಇನ್ನು ನೋವು ಕಡಿಮೆ ಆಗುವರೆಗೂ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನನ್ನ ಮೊದಲ ಕ್ರಷ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಅನುಷ್ಕಾ ಶೆಟ್ಟಿ

    ಅನುಷ್ಕಾಗೆ ಹಲವು ದಿನಗಳಿಂದ ಬೆನ್ನು ನೋವಿದ್ದು, ಹೀಗಾಗಿ ಅವರು ವಿಶ್ರಾಂತಿಯನ್ನು ಬಯಸುತ್ತಿದ್ದಾರೆ. ಈ ಹಿಂದೆ ಅನುಷ್ಕಾ ‘ಸೈಜ್ ಝೀರೋ’ ಸಿನಿಮಾಗಾಗಿ ದಿಡೀರ್ ಅಂತಾ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಅತಿ ಹೆಚ್ಚು ತೂಕದ ಪರಿಣಾಮ ಅನುಷ್ಕಾಗೆ ಬೆನ್ನು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನ್ಯಾಚುರಲ್ ಸ್ಪಾ ಥೆರಪಿಗಾಗಿ ಅನುಷ್ಕಾ ಕೊಯಂಬತ್ತೂರು ಮತ್ತು ಕೇರಳಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    ಚಿಕಿತ್ಸೆಯ ಬಳಿಕ ತಮ್ಮ ಮುಂಬುರುವ ಭಾಗಮತಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಭಾಗಮತಿ ಸಿನಿಮಾಗೆ ನಿರ್ದೇಶಕ ಜಿ. ಅಶೋಕ್ ಆ್ಯಕ್ಷನ್ ಕಟ್ ಹೇಳಿದ್ದು, ಆದಿ ಪಿನಿಶೆಟ್ಟಿ, ಜಯರಾಮ್, ಉನ್ನಿ ಮುಕುಂದನ್, ಆಶಾ ಶರತ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಒಳಗೊಂಡಿದೆ. ಭಾಗಮತಿ ಸಿನಿಮಾ ತೆಲಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ 2018 ಜನವರಿ 26ರಂದು ತೆರೆಕಾಣಲಿದೆ.

    ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದು ಕಾರು ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ಅನುಷ್ಕಾ – ಕಾರಿನ ಬೆಲೆ ಎಷ್ಟು ಗೊತ್ತಾ?

    ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?