Tag: Bhadra Wildlife Sanctuary

  • ಭದ್ರಾ ಅಭಯಾರಣ್ಯದಲ್ಲಿ ಆಹಾರ ಸಿಗದೆ ಸಲಗ ಸಾವು

    ಭದ್ರಾ ಅಭಯಾರಣ್ಯದಲ್ಲಿ ಆಹಾರ ಸಿಗದೆ ಸಲಗ ಸಾವು

    ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ (Bhadra Wildlife Sanctuary) ವ್ಯಾಪ್ತಿಯ ಹೆಬ್ಬೆ ವಲಯದಲ್ಲಿ ಆನೆಯ (Elephant) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಒಂಟಿ ದಂತ ಹೊಂದಿದ್ದ ಸುಮಾರು 50 ವರ್ಷ ಪ್ರಾಯದ ಒಂಟಿ ಸಲಗ ಸಾವನ್ನಪ್ಪಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಳ್ಳ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತಿರುಗುವಾಗ ಆನೆಯ ಕಳೆಬರಹ ಪತ್ತೆಯಾಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಆನೆಯ ಎಡಗಾಲಿಗೆ ಪೆಟ್ಟಾಗಿದ್ದರಿಂದ ಕುಂಟುತ್ತಾ ಅರಣ್ಯದಲ್ಲಿ ಆಹಾರ ಹುಡುಕುತ್ತಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ಆನೆಯ ಮೃತ ದೇಹವನ್ನು ಅರಣ್ಯಾಧಿಕಾರಿ ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಈ ವೇಳೆ ಆನೆಯ ಹೊಟ್ಟೆಯಲ್ಲಿ ಆಹಾರ ಕಂಡು ಬಂದಿಲ್ಲ. ಹೀಗಾಗಿ ಆನೆ ಆಹಾರ ಸಿಗದೇ ಹಸಿವಿನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆನೆಯ ದಂತವನ್ನು ತೆಗೆದು ಆ‌ನೆಯ ಕಳೆಬರಹವನ್ನ ಅಲ್ಲಿಯೇ ಬಿಡಲಾಗಿದೆ.

    ಜ.30ರಂದು ಮೂಡಿಗೆರೆ-ಸಕಲೇಶಪುರ ಅರಣ್ಯ ಗಡಿ ವ್ಯಾಪ್ತಿಯಲ್ಲಿ ಕಾಡಾನೆಯೊಂದರ ಕಾಲು ಕಲ್ಲುಗಳ ನಡುವೆ ಸಿಲುಕಿ ಹೊರಬರಲಾರದೇ ಸಾವನ್ನಪ್ಪಿತ್ತು. ಇದನ್ನೂ ಓದಿ: ಚಾಮುಲ್‌ನಿಂದ ಹೈನುಗಾರರಿಗೆ ಯುಗಾದಿ ಗಿಪ್ಟ್ – ಲೀಟರ್ ಹಾಲಿಗೆ 4 ರೂ. ಹೆಚ್ಚಳ

  • ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ

    ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ

    ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ.

    ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಅರಣ್ಯದಲ್ಲಿ ಇತ್ತು. ಆಗ ಇಂದರ್ಫಿಸ್ಟ್ ಎಂಬ ಕಾಯಿಲೆಯಿಂದ ಈ ತಳಿ ಸಂಪೂರ್ಣ ನಾಶವಾಗಿತ್ತು. ಇದೀಗ ಮತ್ತೆ ಈ ತಳಿಯ ಕಾಡೆಮ್ಮೆ ಪತ್ತೆಯಾಗಿರೋದು ಈ ತಳಿಗಳ ಬೆಳವಣಿಗೆಯಾಗಿದೆ ಎಂದೇ ಭಾವಿಸಲಾಗಿದೆ.

    ಹುಲಿಗಳಲ್ಲಿ ಬಿಳಿ ಹುಲಿ, ಚಿರತೆಗಳಲ್ಲಿ ಕಪ್ಪು ಚಿರತೆ ಇರುವಂತೆ ಕಾಡೆಮ್ಮೆಗಳಲ್ಲಿ ಈ ರೀತಿ ಕಂಡು ಬರಲಿದೆ. ಇದನ್ನ ಇಂಗ್ಲಿಷಿನಲ್ಲಿ ಗಾರ್ ಎಂದು ಕರೆಯುತ್ತಾರೆ. ಈ ಸಂತತಿ ಈಗ ಮತ್ತೆ ಹೆಚ್ಚಾಗಿರೋದ್ರಿಂದ ಈ ರೀತಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಚಿನ್ನದ ಲೇಪನದಂತೆ ಹೊಳೆಯುವ ಕಾಡೆಮ್ಮೆಯೊಂದು ಕಂಡಿದ್ದು. ಈ ಭಾಗದಲ್ಲಿ ಈ ರೀತಿಯ ಕಾಡೆಮ್ಮೆ ಕಾಣ ಸಿಗುವುದು ವಿಶೇಷ.

    ಜಿಲ್ಲೆಯ ಮುತ್ತೋಡಿ ಅರಣ್ಯ ಹಲವು ವಿಚಿತ್ರ ಹಾಗೂ ವೈವಿಧ್ಯಮಯ ಘಟನೆಗೆ ಸಾಕ್ಷಿಯಾಗಿದೆ. ಈಗ ಸುಮಾರು 30-40 ವರ್ಷಗಳ ಹಿಂದೆಯೇ ನಾಶವಾಗಿರುವ ಪ್ರಾಣಿಗಳ ಸಂತತಿ ಒಂದು ಮತ್ತೆ ಅಭಿವೃದ್ಧಿ ಆಗಿರುವಂಥದ್ದು ಬೆಳಕಿಗೆ ಬಂದಂತಿದೆ. ಈ ಕಾಡೆಮ್ಮೆ ಇರುವುದು ಅಪರೂಪ, ನಿಸರ್ಗದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತದೆ. ಅಂತಹಾ ವಿಸ್ಮಯಗಳಲ್ಲಿ ಇದು ಕೂಡ ಸಹಜ. ನೋಡಲು ಬಂಗಾರದ ಲೇಪನವಾದಂತೆ ಕಾಣೋ ಈ ಕಾಡೆಮ್ಮೆ ನೋಡುಗರ ಗಮನ ಸೆಳೆದಿದೆ.