Tag: Bhadra Reservoir

  • ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

    ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

    ಚಿತ್ರದುರ್ಗ: ಕಳೆದ ಒಂದು ಶತಮಾನದಲ್ಲಿ 70 ವರ್ಷ ಬರ ಅನುಭವಿಸಿದ್ದ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ (Vani Vilasapura Dam) ಭರ್ತಿಯಾಗಿ ಕೋಡಿಬಿದ್ದಿದೆ.

    ಕೋಟೆ ನಾಡಿನ ಏಕೈಕ ಜಲಾಶಯ ನಿರ್ಮಾಣವಾದ ಬಳಿಕ 3ನೇ ಬಾರಿಗೆ ಕೋಡಿಬಿದ್ದ ಜಲಾಶಯ ಬರದ ನಾಡಿಗೆ ಜೀವಕಳೆ ತಂದಿದೆ. ಕೊನೆಯಬಾರಿಗೆ 2022ರಲ್ಲಿ ಜಲಾಶಯ ಕೋಡಿ ಬಿದ್ದಿತ್ತು. ಆದ್ರೆ ಇತ್ತೀಚೆಗೆ ಭದ್ರಾ ಜಲಾಶಯದ ನೀರು ಹರಿದ ಪರಿಣಾಮ ವಿವಿ ಸಾಗರ ಜಲಾಶಯ 3ನೇ ಬಾರಿಗೆ ಕೋಡಿಬಿದ್ದಿದೆ. ಇದನ್ನೂ ಓದಿ: ಪ್ರೀತಿಸುವಂತೆ ಮುಸ್ಲಿಂ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ

    ಜಲಾಶಯ ಭರ್ತಿಯಿಂದ ನೂರಾರು ಕಿಮೀ ವರೆಗೆ ಅಂತರ್ಜಲದ ಮಟ್ಟ ಹೆಚ್ಚಾಗಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ರೈತರು ಸಂಭ್ರಮಿಸಿದ್ದಾರೆ. ಜಲಾಶಯ ಭರ್ತಿಯಾದ ಹಿನ್ನೆಲೆ ರೈತಮುಖಂಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜ.18 ರಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ.

    1907 ರಲ್ಲಿ ಮೈಸೂರು ಒಡೆಯರಾದ ಕೃಷ್ಣರಾಜ ಒಡೆಯರ್ ಈ ಜಲಾಶಯ ನಿರ್ಮಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು

  • ಭದ್ರಾ ರಿಸರ್ವ್ ಫಾರೆಸ್ಟ್‌ನಲ್ಲಿ ಆನೆ ಹಣೆಗೆ ಗುಂಡು – ದಂತ ಚೋರರ ಕಾಟ ಸಕ್ರಿಯವಾ?

    ಭದ್ರಾ ರಿಸರ್ವ್ ಫಾರೆಸ್ಟ್‌ನಲ್ಲಿ ಆನೆ ಹಣೆಗೆ ಗುಂಡು – ದಂತ ಚೋರರ ಕಾಟ ಸಕ್ರಿಯವಾ?

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯದ (Bhadra Reserve Forest) ವ್ಯಾಪ್ತಿಯಲ್ಲಿ ಆನೆಯ ಕಳೆಬರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಭದ್ರಾ ಅಭಯಾರಣ್ಯದ ಹುಲಿ ಮೀಸಲು ಅರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದ ಅಲ್ದಾರ ಸಮೀಪದ ಬೈರಾಪುರ ಹಿನ್ನೀರಿನ ದಟ್ಟಅರಣ್ಯ ಪ್ರದೇಶದಲ್ಲಿ ಆನೆಯ ಕಳೆಬರಹ ಪತ್ತೆಯಾಗಿದೆ. ಆನೆ ಮೃತಪಟ್ಟು ಸುಮಾರು ಒಂದು ತಿಂಗಳು ಕಳೆದಿದೆ. ಆನೆಯ (Elephant) ಅಸ್ತಿ ಪಂಜರ ಸ್ಥಳೀಯ ಮೀನುಗಾರಿಗೆ ಕಂಡು ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ (Forest Department) ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಫ್ರಿಕಾದ ಮಹಿಳೆಗೆ ಏಕಕಾಲದಲ್ಲೇ ಎರಡು ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗ್ಳೂರು ವೈದ್ಯರು

    ಆನೆ ಹಣೆಯ ಭಾಗಕ್ಕೆ ಗುಂಡು ಹೊಡೆದಿರುವ ಗುರುತು ಪತ್ತೆಯಾಗಿದೆ. ಆನೆ ಹಣೆಯ ಮಧ್ಯ ಭಾಗದಲ್ಲಿ ಸುಮಾರು ಎರಡು ಇಂಚು ಅಗಲದ ಗುಂಡಿನ ರಂಧ್ರ ಎದ್ದು ಕಾಣುತ್ತಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆನೆ ದಂತಕ್ಕಾಗಿ ದಂತಚೋರರ ಗ್ಯಾಂಗ್‌ ಭದ್ರಾ ಅಭಯಾರಣ್ಯ ಭಾಗದಲ್ಲಿ ಸಕ್ರಿಯವಾಗಿದ್ಯಾ? ಎಂಬ ಪ್ರಶ್ನೆ ಮೂಡಿದೆ. ಈ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯ ಕಳೆಬರವನ್ನ ಸರಿಯಾಗಿ ತಪಾಸಣಾ ಮಾಡಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಜಿತಿಯಾ ಪವಿತ್ರ ಸ್ನಾನದ ವೇಳೆ ಅವಘಡ – ಬಿಹಾರದಲ್ಲಿ 37 ಮಕ್ಕಳು ಸೇರಿ 46 ಮಂದಿ ನದಿಯಲ್ಲಿ ಮುಳುಗಿ ದುರ್ಮರಣ

    ಆನೆಯನ್ನು ದಂತಕ್ಕಾಗಿ ಹತ್ಯೆ ಮಾಡಿರುವ ಅನುಮಾನ ಸ್ಥಳೀಯರನ್ನ ಕಾಡುತ್ತಿದೆ. ಏಕೆಂದರೆ ಆನೆ ಸತ್ತ ಜಾಗದಲ್ಲಿ ಆನೆಯ ಯಾವುದೇ ದಂತಗಳು ಕಂಡು ಬಂದಿಲ್ಲ. ಅಲ್ಲದೇ ರಾತ್ರಿ ವೇಳೆ ಭದ್ರಾ ಹಿನ್ನೀರಿನಲ್ಲಿ ಬೋಟ್‌ಗಳ ಮೂಲಕ ಅಭಯಾರಣ್ಯಕ್ಕೆ ಕಳ್ಳಸಾಗಣೆ ಮಾಡಲು ಕಾಡ್ಗಳ್ಳರು ಬರುವುದು ಹೆಚ್ಚಾಗಿದೆ ಎಂಬ ಆರೋಪವೂ ಬಲವಾಗಿದೆ. ಇದನ್ನೂ ಓದಿ: Badlapur Encounter | ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ದೇವೇಂದ್ರ ಫಡ್ನವೀಸ್

    ಭದ್ರಾ ಹಿನ್ನೀರಿನಲ್ಲಿ ಆನೆಗಳ ಹಿಂಡು ವ್ಯಾಪಕವಾಗಿವೆ. ಆನೆ ದಂತಕ್ಕೆ ಭಾರಿ ಬೇಡಿಕೆ ಇದ್ದು ಕಳೆದ ವರ್ಷ ಕೂಡ ಮುತ್ತೋಡಿ ಅರಣ್ಯದ ಜಾಗರ ಗ್ರಾಮದ ಸಮೀಪ ಆನೆ ಕೊಂದು ದಂತ ಅಪಹರಿಸಲಾಗಿತ್ತು. ಆನೆ ಸತ್ತು ತಿಂಗಳಾದರೂ ಅರಣ್ಯ ವ್ಯಾಪ್ತಿಯಲ್ಲಿ ಗಸ್ತುತಿರುಗುವ ಅಧಿಕಾರಿಗಳಿಗೂ ಗೊತ್ತಾಗಲಿಲ್ಲ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ.‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನೆಗಳ ಮೇಲಿನ ದಾಳಿ ಮುಂದುವರಿದಿದೆ. ಹಿರಿಯ ಅರಣ್ಯಾಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಪರಿಸರವಾದಿಗಳು ಹಾಗೂ ಸ್ಥಳಿಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಅರುಣಾಚಲ ಪ್ರದೇಶದ ಹಾಸ್ಟೆಲ್ ವಾರ್ಡನ್‌ಗೆ ಗಲ್ಲು ಶಿಕ್ಷೆ

  • ಭದ್ರಾ ಜಲಾಶಯ ಭರ್ತಿ- 2 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಕ್ಕೆ

    ಭದ್ರಾ ಜಲಾಶಯ ಭರ್ತಿ- 2 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಕ್ಕೆ

    – ಮಲೆನಾಡಿನಲ್ಲಿ ಭರ್ಜರಿ ಮಳೆ

    ಶಿವಮೊಗ್ಗ: ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಬಾರಿಯೂ ಭರ್ಜರಿ ಮಳೆಯಾಗಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಮಲೆನಾಡು ಭಾಗದಲ್ಲಿ ಸಹ ಭರ್ಜರಿ ಮಳೆಯಾಗಿದ್ದು, ಭದ್ರಾ ಜಲಾಶಯ ಸಹ ತುಂಬಿದೆ. ಹೀಗಾಗಿ 2 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.

    ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದ ಭಾಗದಲ್ಲಿ ಸತತ ಮಳೆಯಾಗಿದ್ದು, ಈ ಹಿನ್ನೆಲೆ ಭದ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಭದ್ರಾ ಜಲಾಶಯದಿಂದ ಇಂದು 4 ಗೇಟುಗಳು ಮೂಲಕ ಒಟ್ಟು 2,288 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಭದ್ರಾ ಎಡದಂಡೆ, ಬಲದಂಡೆ ನಾಲೆಗಳಿಗೂ ನೀರು ಹರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಭದ್ರಾ ಅಣೆಕಟ್ಟು 186 ಅಡಿ ಪೂರ್ಣ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಡ್ಯಾಂನಲ್ಲಿ 185.7 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 71,116 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಈ ಆಣೆಕಟ್ಟು ಹೊಂದಿದೆ. ಸದ್ಯ 70,012 ಟಿಎಂಸಿ ನೀರು ಸಂಗ್ರಹವಾಗಿದೆ. ನದಿಗೆ 400 ಕ್ಯೂಸೆಕ್, ಎಡದಂಡೆ ನಾಲೆಗೆ 100 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 917 ಕ್ಯೂಸೆಕ್ ಸೇರಿದಂತೆ ಒಟ್ಟು 2,288 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.

    ಇನ್ನೂ ವಿಶೇಷವೆಂಬಂತೆ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಅಣೆಕಟ್ಟು ತುಂಬಿದೆ. ನೀರನ್ನು ಹೊರ ಬಿಡುತ್ತಿದ್ದಂತೆ ಡ್ಯಾಂನಿಂದ ಹಾಲ್ನೊರೆಯಂತೆ, ಧುಮ್ಮಿಕ್ಕುತ್ತಿದೆ. ನೀರು ಹರಿಯುವುದನ್ನು ನೋಡಲು ಹೆಚ್ಚು ಜನ ಧಾವಿಸಿದ್ದು, ಮನೋಹರ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.