Tag: Bhadra canal

  • ಚಿಕ್ಕಮಗಳೂರು | ದೇವಸ್ಥಾನಕ್ಕೆ ಬಂದಿದ್ದ ದಂಪತಿ ಭದ್ರಾ ನಾಲೆಯಲ್ಲಿ ಮುಳುಗಿ ಸಾವು, ಆತ್ಮಹತ್ಯೆ ಶಂಕೆ

    ಚಿಕ್ಕಮಗಳೂರು | ದೇವಸ್ಥಾನಕ್ಕೆ ಬಂದಿದ್ದ ದಂಪತಿ ಭದ್ರಾ ನಾಲೆಯಲ್ಲಿ ಮುಳುಗಿ ಸಾವು, ಆತ್ಮಹತ್ಯೆ ಶಂಕೆ

    ಚಿಕ್ಕಮಗಳೂರು: ತರೀಕೆರೆ (Tarikere) ತಾಲೂಕಿನ ಲಕ್ಕವಳ್ಳಿ (Lakkavalli) ಬಳಿ ದೇವರ ದರ್ಶನಕ್ಕೆ ತೆರಳಿದ್ದ ದಂಪತಿ ಭದ್ರಾ ಜಲಾಶಯದ (Bhadra Dam) ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

    ಮೃತರನ್ನ ವಿಠಲ (48) ಹಾಗೂ ಗಂಗಮ್ಮ (40) ಎಂದು ಗುರುತಿಸಲಾಗಿದೆ. ಮೃತ ದಂಪತಿ ಮೂಲತಃ ಶಿವಮೊಗ್ಗದ ಭದ್ರಾವತಿ (Bhadravathi) ತಾಲೂಕಿನ ಶಂಕರಪುರ ನಿವಾಸಿಗಳು. ದಂಪತಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಜಗದಾಂಭಾ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬಂದವರು ಭದ್ರಾ ಜಲಾಶಯದ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

    ಅವರು ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಭದ್ರಾ ಜಲಾಶಯದ ಬಳಿ ಗಂಗೆ ಪೂಜೆ ಮಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೋ ಗೊತ್ತಾಗಿಲ್ಲ. ಆದರೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ನಾಲೆ ಬಳಿ ಹೋಗಿದ್ದನ್ನ ಸ್ಥಳಿಯರು ನೋಡಿದ್ದಾರೆ. ಹಾಗಾಗಿ, ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೂ ಕೂಡ ಲಕ್ಕವಳ್ಳಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳಿಯರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಗಂಗಮ್ಮ ಮೃತದೇಹ ಪತ್ತೆಯಾಗಿದ್ದು, ವಿಠಲ ಅವರ ಮೃತದೇಹ ಪತ್ತೆಯಾಗಿಲ್ಲ.

    ಕತ್ತಲಾಗಿದ್ದರಿಂದ ಪೊಲೀಸರು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ

  • ದಾವಣಗೆರೆ | ಆಟ ಆಡುವಾಗ ಭದ್ರಾ ನಾಲೆಗೆ ಬಿದ್ದು ಕೊಚ್ಚಿ ಹೋದ ಬಾಲಕ

    ದಾವಣಗೆರೆ | ಆಟ ಆಡುವಾಗ ಭದ್ರಾ ನಾಲೆಗೆ ಬಿದ್ದು ಕೊಚ್ಚಿ ಹೋದ ಬಾಲಕ

    ದಾವಣಗೆರೆ: ಬಾಲಕನೊಬ್ಬ ಆಟ ಆಡುವಾಗ ಭದ್ರಾ ನಾಲೆಗೆ (Bhadra Canal) ಬಿದ್ದು ಕೊಚ್ಚಿಕೊಂಡು ಹೋದ ಘಟನೆ ದಾವಣಗೆರೆ (Davanagere) ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು ಆವರಗೆರೆ ಗೋಶಾಲೆ ನಿವಾಸಿ ಷಣ್ಮುಖಾಚಾರಿ ಎಂಬವರ ಪುತ್ರ ಮನೋಜ್ (9) ಎಂದು ಗುರುತಿಸಲಾಗಿದೆ. ಬಾಲಕ 3ನೇ ತರಗತಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಬಾಲಕ ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜೊತೆ ನಾಲೆ ಬಳಿ ಬಂದಿದ್ದ. ಇದನ್ನೂ ಓದಿ: ಹಾಸನ | ಸಲೂನ್‌ಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಆರೋಪ – ಪ್ರಕರಣ ದಾಖಲು

    ಅಗ್ನಿಶಾಮಕದಳ ಹಾಗೂ ಈಜುಗಾರರ ಮೂಲಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸತತ ಕಾರ್ಯಾಚರಣೆ ಮಾಡಿದರು ಮನೋಜ್ ಮೃತದೇಹ ಪತ್ತೆಯಾಗಿದೆ.

    ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಾವಣಗೆರೆ | ದೇಶಾದ್ಯಂತ ಹಲವರ ಖಾತೆಗಳಿಂದ 150 ಕೋಟಿ ಎಗರಿಸಿದ್ದ ಸೈಬರ್‌ ವಂಚಕ ಅರೆಸ್ಟ್‌

  • ಭದ್ರಾ ನಾಲೆಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆ ಶವ

    ಭದ್ರಾ ನಾಲೆಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆ ಶವ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೂರಾರು ಕಿ.ಮೀ. ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ನೇಹಿತರ ಜೊತೆ ಈಜಲು ಹೋದ 22 ವರ್ಷದ ಯುವಕ ಸಾವನಪ್ಪಿದ ಘಟನೆ ಮಾಸುವ ಮುನ್ನವೇ ಇಂದು ತರೀಕೆರೆ ತಾಲೂಕಿನ ದೊಡ್ಡ ಕುಂದೂರು ಗ್ರಾಮದ ಬಳಿ ಮಹಿಳೆಯ ಮೃತದೇಹ ತೇಲಿ ಬಂದಿದೆ.

    ಮೃತ ಮಹಿಳೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಸುಮಾರು 24 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಲಕ್ಕವಳ್ಳಿ ಪೊಲೀಸರು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಭದ್ರಾ ನಾಲೆಯಲ್ಲಿ ನೀರು ವೇಗವಾಗಿ ಹರಿಯುತ್ತಿದ್ದ ಕಾರಣ ಸ್ಥಳೀಯರು ನಾಲೆ ಮಧ್ಯೆ ಇರುವ ನೀರಿನ ಪೈಪ್ ಸಹಾಯ ಪಡೆದು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹವನ್ನು ಎಳೆದು ತಂದಿದ್ದಾರೆ. ಇದನ್ನೂ ಓದಿ: ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆ- ಕೊಂದು ಯುವತಿಯ ಕೈ ಕಾಲು, ರುಂಡ, ಮುಂಡ ಬೇರೆ ಬೇರೆ ಮಾಡಿದ ಸೈಕೋ ಕಿಲ್ಲರ್

    ಸ್ಥಳಕ್ಕೆ ಭೇಟಿ ನೀಡಿದ ಲಕ್ಕವಳ್ಳಿ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನೂರಾರು ಕಿ.ಮೀ. ಮಾರ್ಗದಲ್ಲಿ ಈಗಾಗಲೇ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಾಲ್ಕೈದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಸಾವನ್ನಪ್ಪಿರುವ ಮಹಿಳೆ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಕೊಲೆಯೋ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: 18 ವರ್ಷದ ಯುವತಿಯ ಕತ್ತು ಕೊಯ್ದು ಕೊಲೆ- ಅತ್ಯಾಚಾರದ ಶಂಕೆ

    ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೇವಲ ಜನರಷ್ಟೇ ಪ್ರಾಣ ಕಳೆದುಕೊಳ್ಳುತ್ತಿರುವುದು ಅಷ್ಟೇ ಅಲ್ಲದೆ ಜಾನುವಾರುಗಳು ಕೂಡ ಸಾವನ್ನಪ್ಪುತ್ತಿವೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮೇಯುವಾಗ ಆಯತಪ್ಪಿ ಬಿದ್ದ ರಾಸು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದೆ. ಇದೇ ರೀತಿ ಕೊಚ್ಚಿ ಹೋಗುತ್ತಿದ್ದ ಹಸುವೊಂದನ್ನು ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಮೇಲಿಂದ ಮೇಲೆ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಆದ್ದರಿಂದ ಜಿಲ್ಲೆಯ ಜನರ ಒಂದೇ ಒಂದು ಒಕ್ಕೋರಲ ಕೂಗೆಂದರೆ, ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯ ಎರಡೂ ಬದಿಯಲ್ಲಿ ತಂತಿ ಬೇಲಿ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಮಾಡಿ, ನಾಲಿಗೆ ಕತ್ತರಿಸಿ ಚಿತ್ರಹಿಂಸೆ – ಚಿಕಿತ್ಸೆ ಫಲಿಸದೆ 20ರ ಯುವತಿ ಸಾವು

  • ಜೀವದ ಹಂಗು ತೊರೆದು ಸಮವಸ್ತ್ರದಲ್ಲೇ ನೀರಿಗಿಳಿದು ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ಜೀವದ ಹಂಗು ತೊರೆದು ಸಮವಸ್ತ್ರದಲ್ಲೇ ನೀರಿಗಿಳಿದು ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    – ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಣೆ

    ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವನ್ನ ಅಗ್ನಿಶಾಮಕ ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಿಸಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸಮತಳ ಗ್ರಾಮದಲ್ಲಿ ನಡೆದಿದೆ.

    ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯುದ್ಧಕ್ಕೂ ಎಲ್ಲೂ ಸರ್ಕಾರ ಬೇಲಿಯನ್ನು ನಿರ್ಮಿಸಿಲ್ಲ. ಆದ್ದರಿಂದ ಮೇಯುವಾಗ ಆಯಾ ತಪ್ಪಿ ಬಿದ್ದ ಹುಸು ಜೀವ ಉಳಿಸಿಕೊಳ್ಳಲು ಹೋರಾಡುತ್ತಿತ್ತು. ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಲೇ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಹಸುವನ್ನು ಕಂಡು ಸ್ಥಳೀಯರು ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳ ಗಮನಕ್ಕೆ ತಂದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಮವಸ್ತ್ರದ್ಲಲಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನೀರಿನಲ್ಲಿ ಧುಮುಕಿ ಹಸುವನ್ನ ರಕ್ಷಿಸಿದ್ದಾರೆ.

    ಸುಮಾರು ಅರ್ಧಗಂಟೆಗಳ ಕಾಲ ನೀರಿನಲ್ಲಿಯೇ ಹಸುವಿಗೆ ಹಗ್ಗ ಕಟ್ಟಿ ಅದನ್ನು ಕಾಲುವೆಯ ಒಂದು ಬದಿಗೆ ಎಳೆತಂದು ಬಳಿಕ ಸ್ಥಳೀಯರ ಸಹಾಯದಿಂದ ಹುಸುವನ್ನು ರಕ್ಷಿಸಿ ಮೇಲೆ ತಂದಿದ್ದಾರೆ. ಆದರೆ ಕಳೆದ ಮೂರು ದಿನಗಳ ಹಿಂದೆ ಇದೇ ರೀತಿ ಅಜ್ಜಂಪುರದ ಸಮೀಪ ಇದೇ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಬಿದ್ದಿದ್ದ ಹಸುವೊಂದನ್ನು ಸ್ಥಳೀಯರು ರಕ್ಷಿಸಲು ಮುಂದಾಗಿದ್ದರು. ನೀರು ವೇಗವಾಗಿ ಹರಿಯುತ್ತಿದ್ದ ಕಾರಣ ಹಸುವನ್ನ ಜೆಸಿಬಿ ಮೂಲಕವೂ ರಕ್ಷಿಸಲು ಮುಂದಾಗಿದ್ದರು. ಆದರೆ ಸ್ಥಳೀಯರ ಕೆಲಸ ಫಲ ಕೊಡಲಿಲ್ಲ. ಹಸು ಕೊಚ್ಚಿ ಹೋಗಿ ಸಾವನ್ನಪ್ಪಿತು. ಅಷ್ಟೆ ಅಲ್ಲದೇ ಕಳೆದ ಎರಡು ದಿನಗಳ ಹಿಂದಷ್ಟೆ ಈಜಲು ಹೋಗಿದ್ದ 22 ವರ್ಷದ ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ.

    ಕಳೆದ ಮೂರು ತಿಂಗಳಲ್ಲಿ ಸುಮಾರು ನಾಲ್ಕೈದು ಜನ ಇದೇ ಭದ್ರಾ ಮೇಲ್ದಂಡೆ ಯೋಜನೆಗೆ ಬಲಿಯಾಗಿದ್ದಾರೆ. ಹಾಗಾಗಿ ಸ್ಥಳೀಯರು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿ, ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನೂರಾರು ಕಿ.ಮೀ. ಸಾಗಿದೆ. ಎಲ್ಲೂ ಕೂಡ ನಾಲೆಯ ಎರಡೂ ಬದಿಗೆ ತಂತಿ ಬೇಲೆ ನಿರ್ಮಿಸಿಲ್ಲ. ಹಾಗಾಗಿ ಸಾವು-ನೋವುಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ನಾಲೆಯ ಎರಡು ಬದಿಗೆ ತಂತಿ ಬೇಲಿ ನಿರ್ಮಿಸಿಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

    ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

    ಚಿಕ್ಕಮಗಳೂರು: ಮೂರು ತಿಂಗಳ ಗಂಡು ಮಗುವನ್ನ ಹೆತ್ತ ತಾಯಿಯೇ ನಾಲೆಗೆ ಎಸೆದು ಕೊಂದ ಅಮಾನವೀಯ ಘಟನೆ ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.

    ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಮಗುವನ್ನು ನಾಲೆಗೆ ಎಸೆದ ತಾಯಿ. ಮೂರು ತಿಂಗಳ ತೇಜಸ್ ಮೃತ ಕಂದಮ್ಮ ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಮಲ ಹಾಗೂ ಆಕೆಯ ಅತ್ತೆ ಮಗುವಿಗೆ ಹುಷಾರಿರಲಿಲ್ಲ ಎಂದು ತರೀಕೆರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ತಡರಾತ್ರಿ ಮಗು ಅಳುತ್ತಿತ್ತು ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಿರಲಿಲ್ಲ. ಈ ವೇಳೆ ಕಮಲ ಸಮಾಧಾನ ಮಾಡಿಸಿಕೊಂಡ ವಾಪಾಸ್ ಬರುತ್ತೇನೆ ಎಂದು ಅತ್ತೆ ಬಳಿ ಹೇಳಿ ಮಗುವನ್ನು ಎತ್ತುಕೊಂಡು ಹೋಗಿದ್ದಳು.

    ಆದರೆ ಮಗುವನ್ನು ಎತ್ತಿಕೊಂಡು ಬಂದ ತಾಯಿ ತರೀಕೆರೆಯಿಂದ ೪ ಕಿ.ಮೀ ದೂರವಿರುವ ಹಳಿಯಾರು ಗ್ರಾಮಕ್ಕೆ ನಡೆದುಕೊಂಡು ಬಂದು, ಅಲ್ಲಿರುವ ಭದ್ರಾ ನಾಲೆಯಲ್ಲಿ ಮಗುವನ್ನು ಎಸೆದು ಮತ್ತೆ ಆಸ್ಪತ್ರೆಗೆ ಹೋಗಿ ಏನು ಗೊತ್ತಿಲ್ಲದಂತೆ ಮಲಗಿಕೊಂಡಿದ್ದಳು. ಇತ್ತ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ನೀರು ಹರಿಯುತ್ತಿದ್ದ ರಭಸಕ್ಕೆ ಮಗು ಮೃತದೇಹ ಹರಿದುಬಂದು ಹಳಿಯಾರು ಗ್ರಾಮದಿಂದ ೫ ಕಿ.ಮೀ ದೂರವಿರುವ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಪತ್ತೆಯಾಗಿದೆ.

    ನಾಲೆಯಲ್ಲಿ ಮಗುವಿನ ಮೃತದೇಹ ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಮೃತದೇಹವನ್ನು ನಾಲೆಯಿಂದ ಹೊರತಗೆದು, ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಾಗ ಆರೋಪಿ ತಾಯಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.