Tag: Bha. Ma.Harish

  • ಸಿಎಂ, ಡಿಸಿಎಂ ಬಳಿ ಹಲವು ಮನವಿ ಇಟ್ಟ ಫಿಲ್ಮ್ ಚೇಂಬರ್

    ಸಿಎಂ, ಡಿಸಿಎಂ ಬಳಿ ಹಲವು ಮನವಿ ಇಟ್ಟ ಫಿಲ್ಮ್ ಚೇಂಬರ್

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber) ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ ಚಲನಚಿತ್ರೋದ್ಯಮದ ಬೆಳವಣಿಗೆಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದು, ಯಾವತ್ತೂ ಚಿತ್ರೋದ್ಯಮವು ತಮ್ಮನ್ನು ಅತ್ಯಂತ ಪೂಜ್ಯ ಸ್ಥಾನದಲ್ಲಿ ಗೌರವಿಸುತ್ತಾ ಬಂದಿರುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಚಲನಚಿತ್ರೋದ್ಯಮದ ಕೆಳಕಂಡ ಬೇಡಿಕೆಗಳನ್ನು ಈಡೇರಿಸಿಕೊಡುವ ಮೂಲಕ ಕನ್ನಡ ಚಿತ್ರರಂಗವು ಉಳಿದು, ಬೆಳೆಯಲು ಸಹಕರಿಸಬೇಕು’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ (Bha.Ma. Harish) ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಇದೇ ವೇಳೆ ಮಂಡಳಿಯ ಪದಾಧಿಕಾರಿಗಳಾದ ಹೆಚ್ ಸಿ ಶ್ರೀನಿವಾಸ, ಸುಂದರ್ ರಾಜ್, ಕುಶಾಲ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಕೆವಿ ಚಂದ್ರಶೇಖರ್ ಉಪಸ್ಥಿತರಿದ್ದರು.

    ನಿರ್ಮಾಪಕರು ಚಿತ್ರ ತಯಾರಿಸಿ, ಪಕ್ಕದ ರಾಜ್ಯದದಲ್ಲಿ ಪ್ರದರ್ಶನಕ್ಕೆ ಬೇಕಾಗುವಂತಹ ಡಿಜಿಟಲ್ ಡಿಸಿಪಿ ಪಡೆಯಬೇಕಾಗಿದ್ದು, ಇಂದಿಗೂ ನಿರ್ಮಾಪಕರಿಗೆ ಕಷ್ಟಕರವಾಗಿದೆ. ವರ್ಷಕ್ಕೆ ಅಂದಾಜು 350 ಕನ್ನಡ ಚಲನಚಿತ್ರಗಳು ನಿರ್ಮಾಣಗೊಂಡು ಬಿಡುಗಡೆಗೊಳ್ಳುತ್ತಿವೆ. ಆದಕಾರಣ ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯ ವ್ಯಯದಲ್ಲಿ ಹಣ ನಿಗದಿಪಡಿಸಿಕೊಡಬೇಕಾಗಿ ವಿನಂತಿಸುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆ’ ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ರಾಜ್ಯದ ಚಿತ್ರಮಂದಿರಗಳಲ್ಲಿನ ಪ್ರೊಜೆಕ್ಟರ್‌ಗಳು ವಿದೇಶದಿಂದ, ಅದರಲ್ಲೂ ಒಬ್ಬರು ಇಬ್ಬರು. ಸರ್ವೀಸ್ ಪ್ರೊವೈಡರ್‌ನಿಂದ ಪಡೆಯಬೇಕಾಗಿದೆ. ಈ ಕ್ರಮದಿಂದ ಚಿತ್ರಮಂದಿರಗಳು ಇಂದಿಗೂ ಬಾಡಿಗೆ ರೂಪದಲ್ಲಿ ಪಡೆದು ಪ್ರದರ್ಶನ ನಡೆಸುತ್ತಿದ್ದು, ಸ್ವಂತ ಪ್ರೊಜೆಕ್ಟರ್ ಖರೀದಿಸಲು 40-50 ಲಕ್ಷ ರೂ. ಬಂಡವಾಳ ಹೂಡಬೇಕಾಗುತ್ತದೆ. ಈ ರೀತಿಯ ಪ್ರೋತ್ಸಾಹಕ್ಕೆ ತಲಾ ಒಂದು ಪ್ರೊಜೆಕ್ಟರ್ ಖರೀದಿಗೆ 10 ರಿಂದ 15 ಲಕ್ಷ ರೂಪಾಯಿ ಸಹಾಯಧನ ನೀಡಿದರೆ ಪ್ರದರ್ಶಕರು ಸ್ವಾವಲಂಬಿಯಾಗಿ ಉದ್ಯಮವನ್ನು ಬೆಳೆಸಲು ಸಹಾಯವಾಗುತ್ತದೆ. ಆದಕಾರಣ ಪ್ರಾರಂಭಿಕ ಹಂತದಲ್ಲಿ 20 ಕೋಟಿ ರೂಪಾಯಿ ಹಣವನ್ನು ನಿಗದಿಪಡಿಸಿ ಕೊಡಬೇಕಾಗಿ ಕೋರುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ’ ಎಂದು ವಾಣಿಜ್ಯ ಮಂಡಳಿ ಅರ್ಜಿಯಲ್ಲಿ ತಿಳಿಸಿದೆ.

    ಎಲ್ಲಾ ಸಮಸ್ಯೆಗಳಿಗೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಸ್ಪಂದಿಸಿದ್ದಾರೆ. ಕಲಪ ಮುಗಿದ ಬಳಿಕ ವಾಣಿಜ್ಯ ಚಲನಚಿತ್ರ ಮಂಡಳಿಯಲ್ಲಿಯೇ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷರ ನಿಯೋಗ

    ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷರ ನಿಯೋಗ

    ರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಅವರ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (Siddaramaiah) ಭೇಟಿ ಮಾಡಿ, ಸಿನಿಮಾ ರಂಗದ ಕುರಿತಾದ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಸಿಎಂ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭಾ.ಮಾ ಹರೀಶ್, ಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಿಎಂ ಗಮನಕ್ಕೆ ತಂದಿದ್ದೇವೆ ಅಂದರು.

    ‘ವಾಣಿಜ್ಯ ಮಂಡಳಿ ವತಿಯಿಂದ ಒಂದಷ್ಟು ಸಮಸ್ಯೆಗಳ ಬಗ್ಗೆ ಸಿಎಂ ಅವರಿಗೆ ಮನವಿ ಕೊಟ್ಟಿದ್ದೇವೆ.  ಚಿತ್ರರಂಗದ ಧ್ಯೇಯೋದ್ದೇಶಗಳ ಬಗ್ಗೆಯೂ ಸಿಎಂ ಮುಂದೆ ಪ್ರಸ್ತಾಪ ಮಾಡಲಾಯ್ತು. ಅದರಲ್ಲೂ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಹಾಗೂ  ಕಂಠೀರವ ಸ್ಟುಡಿಯೋ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಯಿತು. ಈ ಎರಡೂ ಹುದ್ದೆಗಳನ್ನು ಸಿನಿಮಾದವರಿಗೆ ಕೊಡಿ ಅಂತ ಕೇಳಿದ್ದೇವೆ. ಸಿಎಂ ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ’ ಎಂದಿದ್ದಾರೆ ಭಾ.ಮಾ.ಹರೀಶ್. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ಇದೇ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿಯಲ್ಲಿನ ಗೊಂದಲಗಳ ಬಗ್ಗೆ ಮಾತನಾಡಿದ ಭಾ.ಮಾ. ಹರೀಶ್, (Bha.Ma.Harish) ‘ಸೆನ್ಸಾರ್ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಸೆನ್ಸಾರ್ ಮಂಡಳಿಯಲ್ಲಿನ ಸಮಸ್ಯೆಗಳ ಕುರಿತು ಈ ಹಿಂದೆ ಲೋಕಸಭಾ ಸಂಸದರಿಗೆ ಮನವಿ ಮಾಡಿದ್ದೇವೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸೆನ್ಸಾರ್ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಿ ಎಂದು ಕೇಳಿದ್ದೆವು. ಆದರೆ, ಸೆನ್ಸಾರ್ ಮಂಡಳಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದ್ದರಿಂದ ಸಮಸ್ಯೆ ಆಗ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟ ಲೋಕಸಭೆ ಸದಸ್ಯರಿಗೆ ಮತ್ತೆ ಭೇಟಿಯಾಗಿ ಮನವಿ ಮಾಡುತ್ತೇವೆ’ ಎಂದರು.

  • ನಟ ಚೇತನ್ ವಿರುದ್ಧ ಸಿಡಿದೆದ್ದ ಚಿತ್ರರಂಗ : ಸರಿ ಹೋಗದಿದ್ದರೆ ಅಸಹಕಾರ

    ನಟ ಚೇತನ್ ವಿರುದ್ಧ ಸಿಡಿದೆದ್ದ ಚಿತ್ರರಂಗ : ಸರಿ ಹೋಗದಿದ್ದರೆ ಅಸಹಕಾರ

    ದಿನಗಳು ಖ್ಯಾತಿಯ ನಟ, ಸಾಮಾಜಿಕ ಹೋರಾಟಗಾರ ನಟ ಚೇತನ್ (Chetan) ವಿರುದ್ಧ ಚಿತ್ರರಂಗ ಸಿಡಿದೆದ್ದಿದೆ. ಚಿತ್ರರಂಗದ ವಿರುದ್ಧ ಮಾತನಾಡುತ್ತಾ ಬಂದಿರುವ ಚೇತನ್ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದೆ. ಈಗಾಗಲೇ ಹಲವಾರು ಬಾರಿ ಚಿತ್ರೋದ್ಯಮದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಚೇತನ್, ಆಗಾಗ್ಗೆ ಅದನ್ನು ಮುಂದುವರೆಸುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಅಂಬರೀಶ್ (Ambarish) ಸ್ಮಾರಕ ವಿಚಾರವಾಗಿ ವ್ಯಂಗ್ಯವಾಗಿ ಚೇತನ್ ಟ್ವೀಟ್ ಮಾಡಿದ್ದರು. ಈ ಹಿಂದೆಯೂ ಪುನೀತ್ ರಾಜ್ ಕುಮಾರ್ ಸ್ಮಾರಕ ವಿಚಾರವಾಗಿಯೂ ಅವರು ಮಾತನಾಡಿದ್ದರು.

    ಕಲಾವಿದರ ಸಂಘ ಸೇರಿದಂತೆ ಹಲವು ಅಂಗ ಸಂಸ್ಥೆಗಳು ಚೇತನ್ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿಯಲ್ಲಿ ಸುದ್ದಿಗೋಷ್ಠಿ ಆಯೋಜನೆಯಾಗಿತ್ತು. ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಚೇಂಬರ್ ಅಧ್ಯಕ್ಷ ಭಾಮ‌ ಹರೀಶ್ (Bha.Ma.Harish), ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (Umesh Bankar) ಹಾಗೂ ಪದಾಧಿಕಾರಿಗಳು ಚೇತನ್ ವಿರುದ್ಧದ ಕ್ರಮಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

    ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ. ಮಾ. ಹರೀಶ್ ಮಾತನಾಡಿ, ‘ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಟ್ಟು ಇತ್ತಿಚೆಗೆ ಉದ್ಘಾಟನೆ ಆಗಿದೆ. ಇದರ ವಿರುದ್ಧ ನಟ ಚೇತನ್ ಮಾತನಾಡಿದ್ದಾರೆ. ಉದ್ಘಾಟನೆ ಇಡೀ ಇಂಡಸ್ಟ್ರಿಯ ಒತ್ತಾಯ ಆಗಿತ್ತು. ಎಲ್ಲರೂ ಅದನ್ನು ಸುಲಲಿತವಾಗಿ ನಡೆಸಿಕೊಟ್ಟರು. ನಮ್ಮ ಕುಟುಂಬದಲ್ಲಿಯೇ ಆಗಾಗ ಗೊಂದಲ ಆಗುತ್ತೆ. ಚೇತನ್ ಮುಜುಗರವಾಗುವಂತ ಹೇಳಿಕೆ ನೀಡುತ್ತಾ ಇರುತ್ತಾರೆ. ಅಂಬರೀಶ್ ಅವರ ವಿಚಾರದಲ್ಲಿ ಸ್ಮಾರಕ ನಿರ್ಮಾಣ ಕುಟುಂಬದ ಒತ್ತಾಯ ಅಂತ ಚೇತನ್ ಆರೋಪ ಮಾಡ್ತಾರೆ. ಆದರೆ ಅದು ಕುಟುಂಬದ ಒತ್ತಾಯ ಅಲ್ಲ ಇಂಡಸ್ಟ್ರಿಯದ್ದು ಆಗಿತ್ತು ಎಂದು ಚೇತನ್ ಗೆ ಈ ಮೂಲಕ ಹೇಳಲು ಬಯಸುತ್ತೇನೆ. ಇದು ಸುಮಲತಾ ಒತ್ತಾಯ ಅಲ್ಲ’ ಎಂದರು.

    Actor chetan (1)

    ಉಮೇಶ್ ಬಣಕಾರ ಮಾತನಾಡಿ, ‘ನಮ್ಮ ಚಿತ್ರರಂಗದ ವಿಚಾರಕ್ಕೆ ಅಂಬರೀಶ್ ತುಂಬಾ ಸ್ಪಂದಿಸಿದ್ದಾರೆ. ನಮ್ಮ ಕುಟುಂಬದಲ್ಲಿಯೇ ಇದ್ದುಕೊಂಡು ಆರೋಪ ಮಾಡಿದರೆ ನೋವಾಗುತ್ತೆ. ಅಣ್ಣಾವ್ರದ್ದೇ ಆಗಲಿ, ಅಂಬರೀಶ್,  ಅಪ್ಪು ಅವರದ್ದಾಗಲಿ ಕುಟುಂಬದವರ ಒತ್ತಾಯವಲ್ಲ. ಚೇತನ್ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯಾರು ಕೇಳದೆ ಇದ್ದರು ಹೇಳಿಕೆ ಕೊಡುತ್ತಿದ್ದಾರೆ. ನಿನ್ನೆಯೆಲ್ಲಾ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಜೊತೆ, ಕಲಾವಿದರ ಸಂಘದಲ್ಲೂ ಚರ್ಚೆ ಮಾಡಿದ್ದೇವೆ. ಆತನೂ ನಮ್ಮ ಚಿತ್ರರಂಗದ ವ್ಯಕ್ತಿಯೇ. ಹೀಗಾಗಿ ತಿಳಿ ಹೇಳಿ ಎಂಬ ಮಾತುಗಳು ಕೇಳಿ ಬಂದಿದೆ. ಬುದ್ದಿ ಹೇಳಿದಾಗಲೂ ಸರಿ ಹೋಗಲಿಲ್ಲ ಎಂದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಡೀ ಇಂಡಸ್ಟ್ರಿ ಆತನ ವಿರುದ್ಧ ಅಸಹಕಾರದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಬೇಕು ಎಂದುಕೊಂಡಿದ್ದೇವೆ’ ಎಂದರು.

    ಈ ಕುರಿತಾಗಿ ಚೇತನ್ ಅವರನ್ನು ಸಂಪರ್ಕಿಸಿ ಎಲ್ಲರೂ ಕೂತು ಅವರ ಜೊತೆ ಮಾತನಾಡುತ್ತೇವೆ. ಮಾತು ಕೇಳದೆ ಹೋದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ಮತ್ತೆ ಕೂತು ತೀರ್ಮಾನ ಮಾಡುತ್ತೇವೆ. ಈ ಹಿಂದೆ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿದ್ರು. ಅದು ಕೋರ್ಟ್ ನಲ್ಲಿ ಸುಳ್ಳು ಆಗಿದೆ. ಅರ್ಜುನ್ ಸರ್ಜಾ ಪರ ಜಯ ಸಿಕ್ಕಿದೆ. ಅದರ ಹಿಂದೆ ಯಾರೆಲ್ಲ ಇದ್ದರೂ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಎನ್ನುವ ಮಾತುಗಳೂ ಸುದ್ದಿಗೋಷ್ಠಿಯಲ್ಲಿ ಕೇಳಿ ಬಂದವು.

  • ಫಿಲ್ಮ್ ಚೇಂಬರ್ ನಟ ಅನಿರುದ್ಧ ಅವರನ್ನು ಕರೆದದ್ದು ಯಾಕೆ?

    ಫಿಲ್ಮ್ ಚೇಂಬರ್ ನಟ ಅನಿರುದ್ಧ ಅವರನ್ನು ಕರೆದದ್ದು ಯಾಕೆ?

    ಕೆಲವೇ ಹೊತ್ತಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಅನಿರುದ್ಧ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿರ್ದೇಶಕ ಎಸ್.ನಾರಾಯಣ್, ಸಂಜೆ ವಾಣಿಜ್ಯ ಮಂಡಳಿಯವರು ಅನಿರುದ್ಧ ಅವರನ್ನು ಕರೆದಿದ್ದಾರೆ. ಅಲ್ಲಿ ಏನು ಆಗುತ್ತದೆಯೋ ನೋಡೋಣ ಎಂದು ಹೇಳಿದ್ದರು. ಆದರೆ, ಈ ವಿಚಾರಕ್ಕೂ ವಾಣಿಜ್ಯ ಮಂಡಳಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಎದುರಾಗಿದೆ. ಅನಿರುದ್ಧ ಅವರನ್ನು ದೂರ ಇಟ್ಟಿದ್ದು ಕಿರುತೆರೆ ನಿರ್ಮಾಪಕರ ಸಂಘ. ಅದಕ್ಕೂ ವಾಣಿಜ್ಯ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಆದರೂ, ಮಧ್ಯ ಪ್ರವೇಶ ಮಾಡಿದ್ದು ಅಚ್ಚರಿ ಮೂಡಿಸಿದೆ.

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ‘ಗಲಾಟೆ ಆಗಿದ್ದು ಕಿರುತೆರೆ ನಿರ್ಮಾಪಕರ ಸಂಘಕ್ಕೂ ಮತ್ತು ಅನಿರುದ್ಧ ಅವರಿಗೂ ನಿಜ. ಆದರೆ, ಅನಿರುದ್ಧ ಅವರು ವಾಣಿಜ್ಯ ಮಂಡಳಿಯ ಸದಸ್ಯರು ಮತ್ತು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವ ಎಸ್.ನಾರಾಯಣ್ ಅವರು ಸಿನಿಮಾ ರಂಗದವರು. ಅದಕ್ಕೂ ಹೆಚ್ಚಾಗಿ ಈ ವಿಷಯವನ್ನು ಸೌಹಾರ್ದಯುತವಾಗಿ ಮುಗಿಸಿಕೊಡಿ ಎಂದು ಅನಿರುದ್ಧ ಮಂಡಳಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಕರೆಯಿಸಿಕೊಂಡು ಮಾತನಾಡಲಿದ್ದೇವೆ’ ಅಂದರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

    ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.

    ಇಂದು ಅನಿರುದ್ಧ ಅವರ ಜೊತೆ ಭಾ.ಮಾ ಹರೀಶ್ ಅವರು ಮಾತನಾಡುತ್ತಿದ್ದು, ನಾಳೆ ಕಿರುತೆರೆಯ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರೊಂದಿಗೆ ಮಾತನಾಡುತ್ತಿದ್ದಾರೆ. ಆಗಿರುವ ಸಮಸ್ಯೆಯನ್ನು ಕೇಳಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

    ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಎರಡ್ಮೂರು ವರ್ಷಗಳ ನಂತರ ನಾಳೆ ನಡೆಯುತ್ತಿದೆ. ಈ ಚುನಾವಣೆ ಮಾಡಲು ಏನೆಲ್ಲ ಕಸರತ್ತುಗಳನ್ನು ಮಾಡಲಾಯಿತು. ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಮೂಲಕ ಚುನಾವಣೆ ಮಾಡಲು ಒತ್ತಡ ಹೇರಲಾಗಿತ್ತು. ಇದೆಲ್ಲವೂ ಹೈ ಡ್ರಾಮಾ ಆಗಿ ಇದೀಗ ನಾಳೆ ಚುನಾವಣೆ ನಡೆಯುತ್ತಿದೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ಈ ಬಾರಿಯ ಚುನಾವಣೆ ವಿಶೇಷ ಅಂದರೆ, ನಿರ್ಮಾಪಕ ಭಾ.ಮಾ.ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದ್ ತಂಡದ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಈ ಎರಡೂ ತಂಡಕ್ಕೆ ಹಲವರು ತಮ್ಮ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಜಯಮಾಲಾ ಸೇರಿದಂತೆ ಹಲವರು ಭಾ.ಮಾ.ಹರೀಶ್ ತಂಡಕ್ಕೆ ಬೆಂಬಲ ಸೂಚಿಸಿದ್ದರೆ, ಮೊನ್ನೆಯಷ್ಟೇ ಸಾ.ರಾ.ಗೋವಿಂದ್ ಮತ್ತು ತಂಡ ರಾಘವೇಂದ್ರ ರಾಜ್ ಕುಮಾರ್ ಭೇಟಿ ಮಾಡಿದೆ. ಈ ಹಿಂದೆ ಭಾ.ಮಾ.ಹರೀಶ್ ಮತ್ತು ತಂಡ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿತ್ತು.  ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಕುಟುಂಬ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೇರವಾಗಿ ಕಣಕ್ಕೆ ಇಳಿಯುವುದು ಕಡಿಮೆ. ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೇಗೌಡರು ಚುನಾವಣೆ ನಿಂತಾಗಲೂ ಡಾ.ರಾಜ್ ಕುಮಾರ್ ಮಕ್ಕಳು ನೇರವಾಗಿ ಎಲ್ಲಿಯೂ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಒಂದೊಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಹತ್ತು ವರ್ಷಗಳ ನಂತರ ತೆಲುಗಿಗೆ ಡಬ್ ಆಯಿತು ಯಶ್ ನಟನೆಯ ಲಕ್ಕಿ ಸಿನಿಮಾ

    ಹಾಗಂತ ಇದೇ ತಂಡಕ್ಕೆ ನನ್ನ ಬೆಂಬಲ ಎಂದು ಬಹಿರಂಗವಾಗಿ ಹೇಳಿಕೊಳ್ಳದೇ ತಮ್ಮನ್ನು ಭೇಟಿಗೆ ಬಂದ ತಂಡಗಳೊಂದಿಗೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆತ್ಮೀಯವಾಗಿ ಫೋಟೋ ತಗೆಸಿಕೊಂಡು ಕುತೂಹಲಕ್ಕೆ ಕಾರಣವಾಗಿದ್ದಾರೆ. ನಾಳೆ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದ್ದು, ಯಾರೆಲ್ಲ ಈ ಬಾರಿ ಅಧಿಕಾರಿದ ಚುಕ್ಕಾಣೆ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಕಾರಣವಾಗಿದೆ. ಎರಡೂ ತಂಡದಲ್ಲೂ ಪ್ರಭಾವಿ ವ್ಯಕ್ತಿಗಳೇ ಇರುವುದರಿಂದ ಸಂಜೆ ಹೊತ್ತಿಗೆ ಫಲಿತಾಂಶ ಸಿಗಲಿದೆ.