Tag: BGS hospital

  • ದೇಹದಾನ, ಅಂಗಾಂಗದಾನಕ್ಕೆ ಮುಂದಾಗಿ ಮಾದರಿಯಾದ ನಟ ರಾಜವರ್ಧನ್

    ದೇಹದಾನ, ಅಂಗಾಂಗದಾನಕ್ಕೆ ಮುಂದಾಗಿ ಮಾದರಿಯಾದ ನಟ ರಾಜವರ್ಧನ್

    ನುಷ್ಯ ಸತ್ತ ಮೇಲೂ ಸಾರ್ಥಕ ಬಾಳು ಬಾಳಬೇಕು ಅಂದ್ರೆ ದೇಹ ಮಣ್ಣಾಗುವ ಬದಲು ದೇಹದಾನ (Body Donate) ಮಾಡಬೇಕೆಂದು ಹೇಳ್ತಾರೆ. ಇದೀಗ ಯುವ ನಟ ರಾಜವರ್ಧನ್ (Actor Rajavardhan) ಅಂತಹದ್ದೇ ಕಾರ್ಯಕ್ಕೆ ಮುಂದಾಗಿದ್ದಾರೆ. ದೇಹದಾನ ಮಾಡಲು ಒಪ್ಪಿರುವ ನಟ ಇತರರಿಗೆ ಮಾದರಿಯಾಗಿದ್ದಾರೆ.

    ಅಂಗಾಂಗ ಬೇಡಿಕೆಯುಳ್ಳವರ ಉಪಯೋಗಕ್ಕೆ ಬರುವುದನ್ನ ತೀರ್ಮಾನಿಸುವುದು ನಮ್ಮ ಕೈಯಲ್ಲಿರುತ್ತದೆ. ದಿವಂಗತ ನಟ ಲೋಕೇಶ್ ಸೇರಿದಂತೆ ಹಲವರು ದೇಹದಾನ ಮಾಡಿ ಸಾರ್ಥಕರಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಕೂಡ ನೇತ್ರದಾನ ಮಾಡಿ ಮಾದರಿಯಾಗಿದ್ದರು. ಇದೇ ಹಾದಿಯಾಗಿ ನಟ ರಾಜವರ್ಧನ್ ಅವರು ಅಂಗಾಂಗ ದಾನ ಮಾಡೋದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ – ಚಿರಂಜೀವಿ ರಿಯಲ್ ಹೀರೋ ಎಂದ ಫ್ಯಾನ್ಸ್

    ನೇತ್ರದಾನಕ್ಕೆ (Eye Donate) ಅನೇಕರಿಗೆ ಸ್ಫೂರ್ತಿಯಾದವರು ಡಾ.ರಾಜ್‌ಕುಮಾರ್, ದೇಹದಾನವೂ ಇನ್ನೂ ಶ್ರೇಷ್ಠವಾದ ದಾನ. ಉಸಿರು ಚೆಲ್ಲಿದ ಮೇಲೆ ಆರೋಗ್ಯವಂತ ಅಂಗಾಂಗ ಮಣ್ಣಾಗೋ ಬದಲು ಉಪಯುಕ್ತರಿಗೆ ಜೀವ ನೀಡಿದ್ರೆ ಎಷ್ಟೋ ಜನರನ್ನ ಉಳಿಸಬಹುದು. ದಾನಿಗಳು ಸತ್ತ ಮೇಲೂ ನಮ್ಮೊಂದಿಗೆ ಬದುಕುತ್ತಾರೆ. ಇದನ್ನೂ ಓದಿ: `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    ಇದೀಗ ನಟ ರಾಜವರ್ಧನ್ ಬಿಜಿಎಸ್ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವೊಂದರರಲ್ಲಿ ಪಾಲ್ಗೊಂಡು ಅದೇ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಹಾಗೂ ದೇಹದಾನ ಮಾಡೋದಾಗಿ ಘೋಷಿಸಿದ್ದಾರೆ. ಅಂದಹಾಗೆ ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ಕೂಡ ದೇಹದಾನ ಮಾಡಿದ್ದಾರೆ.

  • 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ಬೆನ್ನುನೋವಿನ ಶಸ್ತ್ರಚಿಕಿತ್ಸೆ (Surgery) ನೆಪ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದ ಆರೋಪಿ ನಟ ದರ್ಶನ್‌ (Darshan) 7 ವಾರಗಳ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸದೇ ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

    ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಕಳೆದ ಅಕ್ಟೋಬರ್‌ 31ರಂದು ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆದ 2-3 ದಿನಗಳ ಬಳಿಕ ದರ್ಶನ್‌ ಆಸ್ಪತ್ರೆಗೆ ದಾಖಲಾದರೂ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಫೋಟೋ ಸಹ ವೈರಲ್‌ ಆಗಿತ್ತು. ಇದೀಗ ಚಿಕಿತ್ಸೆ ಪಡೆಯದೇ ದರ್ಶನ್‌ ಡಿಸ್ಚಾರ್ಜ್‌ ಆಗಿದ್ದಾರೆ.

    ಫಿಸಿಯೋಥೆರಪಿ (Physiotherapy) ಮೂಲಕವೇ ಬೆನ್ನುನೋವು ಗುಣಪಡಿಸಿಕೊಳ್ಳುವ ಪ್ಲ್ಯಾನ್‌ ಮಾಡಿರುವ ದರ್ಶನ್‌ ಕುಟುಂಬ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದೆ. ಆಸ್ಪತ್ರೆಯ ಬಿಲ್‌ ಸೇರಿದಂತೆ, ಎಲ್ಲಾ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ದರ್ಶನ್‌ ತಮ್ಮ ಕಾರಿನಲ್ಲಿ ತೆರಳಿಳುತ್ತಿದ್ದಾರೆ, ನಟ ಧನ್ವೀರ್‌ ಕಾರು ಚಾಲನೆ ಮಾಡುತ್ತಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದಲೇ ಪತ್ನಿ ವಿಜಯಲಕ್ಷ್ಮಿ ಅವರು KA-03 NT-6633 ರೇಂಜ್ ರೋವರ್ ಕಾರಿನಲ್ಲಿ ಆಸ್ಪತ್ರೆ ಆವರಣಕ್ಕೆ ಆಗಮಿಸಿದ್ದರು. ಇದರೊಂದಿಗೆ ದರ್ಶನ್‌ ಪುತ್ರ, ನಟ ಧನ್ವೀರ್, ಸಹೋದರ ದಿನಕರ್ ಸಹ ಅಸ್ಪತ್ರೆ ಆವರಣದಲ್ಲೇ ಬೀಡುಬಿಟ್ಟಿದ್ದರು. ದರ್ಶನ್‌ ಡಿಸ್ಚಾರ್ಜ್‌ ಆಗುತ್ತಿದ್ದಂತೆ ನೇರ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರ ಫ್ಲಾಟ್‌ಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

    ಡಿ.11ಕ್ಕೆ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾದರೂ, ಕೋರ್ಟ್‌ ಅವಧಿ ವಿಸ್ತರಣೆ ಮಾಡಿತ್ತು. ಡಿ.13ರಂದು ನ್ಯಾ. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳಿಗೂ ರೆಗ್ಯೂಲರ್‌ ಬೇಲ್‌ ಮಂಜೂರು ಮಾಡಿತು.

    ಜಾಮೀನು ಸಿಕ್ಕಿದ್ದು ಹೇಗೆ?
    ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತು.

  • ಯಾವುದೇ ಕ್ಷಣದಲ್ಲಿ ಆರೋಪಿ ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಯಾವುದೇ ಕ್ಷಣದಲ್ಲಿ ಆರೋಪಿ ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ಬೆನ್ನುನೋವಿನಿಂದ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿ ನಟ ದರ್ಶನ್‌ (Darshan) ಇಂದು ಯಾವುದೇ ಕ್ಷಣದಲ್ಲಿ ಡಿಸ್ಚಾರ್ಜ್‌ ಆಗುವ ಸಾಧ್ಯತೆಗಳಿವೆ. ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ (Surgery) ಪಡೆಯದೇ 49 ದಿನಗಳ ನಂತರ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.

    ದರ್ಶನ್‌ ಕುಟುಂಬ ಫಿಸಿಯೋಥೆರಪಿ ಮೂಲಕವೇ ಬೆನ್ನುನೋವು ಗುಣಪಡಿಸಿಕೊಳ್ಳುವ ಪ್ಲ್ಯಾನ್‌ ಮಾಡಿದೆ, ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸುತ್ತಿದ್ದಾರೆ. ಆಸ್ಪತ್ರೆಯ ಬಿಲ್‌ ಸೇರಿದಂತೆ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

    ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಅವರು KA-03 NT-6633 ರೇಂಜ್ ರೋವರ್ ಕಾರಿನಲ್ಲಿ ಆಗಮಿಸಿದ್ದು, ಆಸ್ಪತ್ರೆ ಆವರಣದಲ್ಲಿದ್ದಾರೆ. ಇದರೊಂದಿಗೆ ದರ್ಶನ್‌ ಪುತ್ರ, ನಟ ಧನ್ವೀರ್, ಸಹೋದರ ದಿನಕರ್ ಸಹ ಅಸ್ಪತ್ರೆ ಆವರಣದಲ್ಲೇ ಬೀಡುಬಿಟ್ಟಿದ್ದಾರೆ. ದರ್ಶನ್‌ ಡಿಸ್ಚಾರ್ಜ್‌ ಆಗುತ್ತಿದ್ದಂತೆ ನೇರ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅವರ ಫ್ಲಾಟ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‌ ಅವರಿಗೆ ಶಸ್ತ್ರಚಿಕಿತ್ಸೆಗಾಗಿ ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿ.11ಕ್ಕೆ ಜಾಮೀನು ಅವಧಿ ಮುಕ್ತಾಯವಾದರೂ, ಅವಧಿ ವಿಸ್ತರಣೆ ಮಾಡಿತ್ತು. ಡಿ.13ರಂದು ನ್ಯಾ. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತು.

    ಜಾಮೀನು ಸಿಕ್ಕಿದ್ದು ಹೇಗೆ?
    ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತು.

  • ಆರೋಪಿ ದರ್ಶನ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ – ಫೋಟೋ ವೈರಲ್‌

    ಆರೋಪಿ ದರ್ಶನ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ – ಫೋಟೋ ವೈರಲ್‌

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ (Darshan) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸಹ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.

    6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್‌ ಕಳೆದ 4 ವಾರಗಳಿಂದ ಬಿಜಿಎಸ್‌ ಆಸ್ಪತ್ರೆಯಲ್ಲಿ (BGS Hospital) ಪಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮತ್ತೊಂದೆಡೆ ರೆಗ್ಯೂಲರ್‌ ಬೇಲ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಸೋಮವಾರ (ಡಿ.3) ವಿಚಾರಣೆ ಮುಂದುವರಿಯಲಿದೆ, ಈ ನಡುವೆ ದರ್ಶನ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕರುನಾಡಿಗೂ ತಟ್ಟಿದ ಚಂಡಮಾರುತದ ಬಿಸಿ – ಈ ಜಿಲ್ಲೆಗಳಲ್ಲಿಂದು ಶಾಲಾ, ಕಾಲೇಜುಗಳಿಗೆ ರಜೆ

    ತುರ್ತು ಚಿಕಿತ್ಸೆಗಾಗಿಯೇ ಹೈಕೋರ್ಟ್ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚಿಕಿತ್ಸೆಗಾಗಿಯೇ ದರ್ಶನ್ ಬೆಂಗಳೂರಿಗೆ ಬಂದು 32 ದಿನಗಳು ಮುಗಿದು ಹೋಗಿವೆ. ಇನ್ನೂ 9 ದಿನಗಳು ಕಳೆದರೆ ಮತ್ತೆ ದರ್ಶನ್ ಜೈಲಿಗೆ ವಾಪಸ್ಸಾಗಬೇಕು. ಅಷ್ಟರಲ್ಲಿ ರೆಗ್ಯೂಲರ್‌ ಬೇಲ್‌ ಸಿಕ್ಕರೆ ದರ್ಶನ್‌ ಸೇಫ್‌ ಅಂತ ಹೇಳಲಾಗ್ತಿದೆ.

    ಸದ್ಯಕ್ಕೆ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಆಗಿಲ್ಲ. ಕಾರಣ, ಅವರು ರಕ್ತದೊತ್ತಡದಿಂದ ಬಳಲ್ತಾ ಇದ್ದಾರಂತೆ. ಬಿಪಿ ಕಂಟ್ರೋಲ್‌ಗೆ ಬಾರದೇ ಇರೋ ಕಾರಣದಿಂದಾಗಿ ಇನ್ನೂ ಸರ್ಜರಿ ಮಾಡಲಾಗಿಲ್ಲವಂತೆ. ಹಾಗಂತ ಸರ್ಜರಿ ಆಗೋದೇ ಇಲ್ಲವಾ? ಈವರೆಗೂ ಅದು ಕಷ್ಟ ಕಷ್ಟ ಅಂತ ನಂಬಲಾಗಿತ್ತು. ಸರ್ಜರಿಗೆ ದರ್ಶನ್ ಮನಸು ಮಾಡದೇ ಇರೋ ಕಾರಣದಿಂದಾಗಿ, ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ದರ್ಶನ್ ಸರ್ಜರಿಗೆ ಒಪ್ಪಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. ಸರ್ಜರಿ ಆಗದೇ ಇದ್ದರೆ, ಡಬಲ್ ಸಂಕಷ್ಟ ಎದುರಾಗೋ ಕಾರಣದಿಂದಾಗಿ ಸರ್ಜರಿ ಮಾಡಿಸಿಕೊಳ್ಳೋಕೆ ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ದರ್ಶನ್ ಸರ್ಜರಿಗೆ ತರಾತುರಿಯಲ್ಲಿ ಪ್ಲ್ಯಾನ್‌ – ಜಾಮೀನು ಅವಧಿ ಉಳಿದಿರೋದು 11 ದಿನ ಮಾತ್ರ

  • ಆಪರೇಷನ್‌ಗೆ ದರ್ಶನ್ ಹಿಂದೇಟು- 10 ದಿನ ಮುಂದುವರಿಯುತ್ತೆ ಕನ್ಸರ್ವೇಟಿವ್ ಚಿಕಿತ್ಸೆ

    ಆಪರೇಷನ್‌ಗೆ ದರ್ಶನ್ ಹಿಂದೇಟು- 10 ದಿನ ಮುಂದುವರಿಯುತ್ತೆ ಕನ್ಸರ್ವೇಟಿವ್ ಚಿಕಿತ್ಸೆ

    ಬೆಂಗಳೂರು: ಆರೋಪಿ ದರ್ಶನ್ (Darshan) ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ಮತ್ತು ಕಾಲುನೋವಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಆದರೆ ದರ್ಶನ್ ಆಪರೇಷನ್‌ಗೆ ಹಿಂದೇಟು ಹಾಕುತ್ತಿದ್ದು, ಮುಂದಿನ 10 ದಿನಗಳ ಕಾಲ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ನಿರ್ಧರಿಸಲಾಗಿದೆ.

    ನಟ ದರ್ಶನ್‌ಗೆ ಈಗಾಗಲೇ ಕನ್ಸರ್ವೇಟಿವ್ ಚಿಕಿತ್ಸೆ ನೀಡುತ್ತಾ ಇದ್ದು, ಔಷಧಿ ಮತ್ತು ಮಾತ್ರೆಗಳನ್ನ ನೀಡಿ ಗುಣಮುಖ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ದರ್ಶನ್‌ಗೆ ಬೆನ್ನು ನೋವು ಮತ್ತು ಕಾಲು ನೋವು ಇನ್ನೂ ಕಡಿಮೆ ಆಗುತ್ತಿಲ್ಲ. ಹೀಗಾಗಿ ಮುಂದಿನ 10 ದಿನಗಳ ಕಾಲ ಕೂಡ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್‌ಗೆ ಬೆದರಿಕೆ: ಕೃತ್ಯದ ಹಿಂದೆ ನಟನ ವಿರುದ್ಧ ದೂರು ನೀಡಿದ್ದ ವಕೀಲನ ಫೋನ್‌!

    ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಹುಷಾರಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಒಪ್ಪದಿದ್ದರೆ ಹೆಚ್ಚಿನ ಚಿಕಿತ್ಸೆ ಅಥವಾ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ಪುಟಿನ್‌ ವಿಶ್‌ – ಮಾತುಕತೆಗೆ ಸಿದ್ಧ ಎಂದ ನಾಯಕರು

    ಮುಂದಿನ 10 ದಿನಗಳ ಕಾಲ ಚಿಕಿತ್ಸೆ ಹೇಗಿರಲಿದೆ:
    * 10 ದಿನಗಳ ಕಾಲ ಮುಂದುವರೆಯಲಿರೋ ಕನ್ಸರ್ವೇಟಿವ್ ಚಿಕಿತ್ಸೆ.
    * ಔಷದಿ, ಮಾತ್ರೆಗಳನ್ನ ನೀಡಿ ಗುಣಮುಖ ಮಾಡಲು ಪ್ರಯತ್ನಿಸುತ್ತಿರೋ ವೈದ್ಯರು.
    * ಸ್ಟ್ರೇಚ್ಚಿಂಗ್ ಎಕ್ಸಾಸೈಸ್ ಮಾಡಿಸಿ ಮೂಳೆ ನೋವನ್ನ ಗುಣಪಡಿಸಲಿರೋ ವೈದ್ಯರು.
    * ಬೆನ್ನು ನೋವು ಇರುವ ಭಾಗಕ್ಕೆ ಅಲ್ಟ್ರಾ ಸೌಂಡ್, ಶಾಖಾ ನೀಡಲಾಗುತ್ತದೆ.
    * ಒಂದಷ್ಟು ಸ್ಟ್ರೇಚರ್ ವ್ಯಾಯಾಮ ಮಾಡಿಸಲಿದ್ದಾರೆ.
    * ಸ್ಟ್ರೇಚ್ಚಿಂಗ್ ವ್ಯಾಯಾಮ ಮಾಡಿಸಿ ವಿಶ್ರಾಂತಿ ನೀಡಲಿದ್ದಾರೆ.
    * ಎರಡು ವಾರಗಳ ಕಾಲ ಪಿಜಿಯೋಥೆರಪಿ ಮಾಡಿ ಗುಣಮುಖ ಆಗದಿದ್ದರೆ ಕೊನೆಯ ಅಸ್ತ್ರ ಶಸ್ತ್ರಚಿಕಿತ್ಸೆ.
    * ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಗುಣಮುಖ ಆಗದಿದ್ದರೆ ನುರಿತ ವೈದ್ಯರ ಚಿಕಿತ್ಸೆ ಬೇರೆ ಆಸ್ಪತ್ರೆಗೆ ಹೋಗೋ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯದಲ್ಲಿ 423 ಆಸ್ತಿಗೆ ವಕ್ಫ್‌ ನೋಟಿಸ್‌ – ಯಾವ ಜಿಲ್ಲೆಯಲ್ಲಿ ನೋಟಿಸ್‌ ಹಿಂದಕ್ಕೆ ಪಡೆಯಲಾಗಿದೆ?

  • ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ಏನಿದೆ?

    ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ಏನಿದೆ?

    ಬೆಂಗಳೂರು: ನಟ ದರ್ಶನ್‌ಗೆ (Actor Darshan) ಚಿಕಿತ್ಸೆ ಮುಂದುವರೆದಿದ್ದು, ಇಂದು (ನ.6) ದರ್ಶನ್ ಪರ ವಕೀಲರು ಒಂದು ವಾರದ ಮೆಡಿಕಲ್ ರಿಪೋರ್ಟ್‌ನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಜೈಲಿನಲ್ಲಿದ್ದ ದರ್ಶನ್‌ಗೆ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದಂತೆ 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ. ಇದೀಗ ಬೆನ್ನು ನೋವಿಗಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಒಂದು ವಾರದಲ್ಲಿ ದರ್ಶನ್‌ಗೆ ನೀಡಲಾಗುವ ಚಿಕಿತ್ಸೆಯ ವರದಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ (High Court) ಸಲ್ಲಿಸಿದ್ದಾರೆ.ಇದನ್ನೂ ಓದಿ: ಶಿರೂರು ಗ್ರಾಮದ ವಸತಿ ಶಾಲೆ, 1,200 ಆಶ್ರಯ ಮನೆಗಳೆಲ್ಲವೂ ವಕ್ಫ್‌ ಆಸ್ತಿ – ಇಸ್ಲಾಮಿಯಾ ತಂಜೀಮ್ ಸಮಿತಿ ಪಟ್ಟು

    ಇನ್ನೂ ಬಿಜಿಎಸ್ ವೈದ್ಯರು ಆಪರೇಷನ್‌ಗೆ ಸಲಹೆ ನೀಡಿದ್ದರೂ ಅದಕ್ಕೆ ದರ್ಶನ್ ನಿರಾಕರಿಸಿದ್ದಾರೆ. ಈ ಹಿಂದೆ ಫ್ಯಾಕ್ಚರ್ ಆಗಿರೋದು ಒಂದು ಸಮಸ್ಯೆ ಇದೆ. ಆಪರೇಷನ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ದರ್ಶನ್ ಬೇಡ ಎಂದಿದ್ದು, ಕನ್ಸರ್ವೇಟಿವ್ ಟ್ರೀಟ್‌ಮೆಂಟ್ ಶುರು ಮಾಡಲಾಗಿದೆ.

    10 ರಿಂದ 15 ದಿನಗಳ ಕಾಲ ಕನ್ಸರ್ವೇಟಿವ್ ಚಿಕಿತ್ಸೆ ನೀಡಲಾಗುತ್ತದೆ. ಫಿಜಿಯೋಥೆರಪಿ, ವ್ಯಾಯಾಮ, ಔಷಧಿ, ಎಕ್ಸ್ಸೈಸ್ ಮೂಲಕ ಗುಣಮುಖ ಮಾಡುವ ಪ್ರಯತ್ನ ನಡೆಯುತ್ತದೆ. ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಗುಣಮುಖ ಆಗದಿದ್ದರೆ ಆಪರೇಷನ್ ಮಾಡಲು ನಿರ್ಧರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಏನಿದೆ?
    ದರ್ಶನ್‌ಗೆ ಚಿಕಿತ್ಸೆ ನೀಡುವ ಬಗ್ಗೆಗಿನ ವರದಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್ ಸಲ್ಲಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಮೊದಲ ವಾರದ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಇಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದಾರೆ.

    ಸದ್ಯ ದರ್ಶನ್‌ಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಫಿಸಿಯೋಥೆರಫಿಯೇ ಅಂತಿಮ ಅಲ್ಲ ಎನ್ನಿಸುತ್ತಿದೆ. ಫಿಸಿಯೋಥೆರಫಿಯಲ್ಲಿ ಗುಣಮುಖ ಆಗದಿದ್ದಲ್ಲಿ ಸರ್ಜರಿ ಮಾಡಲಾಗುವುದು. ರೋಗಿಗೆ ಶಸ್ತ್ರಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನೂ ಶಸ್ತ್ರಚಿಕಿತ್ಸೆಗೆ ದರ್ಶನ್ ಒಪ್ಪಿಗೆ ಸೂಚಿಸಿಲ್ಲ. ದರ್ಶನ್ ಒಪ್ಪಿಕೊಂಡಲ್ಲಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗುವುದು ಎಂಬ ವಿಚಾರ ವರದಿಯಲ್ಲಿದೆ ಎನ್ನಲಾಗುತ್ತಿದೆ.

    ಬೆನ್ನು ನೋವಿನ ಕಾರಣ ನಟ ದರ್ಶನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಈವರೆಗಿನ ಚಿಕಿತ್ಸೆ ಮತ್ತು ಮುಂದಿನ ಪ್ರಕ್ರಿಯೆಗಳ ಬಗ್ಗೆ ದರ್ಶನ್ ಪರ ವಕೀಲರು ಇಂದು ಹೈಕೋರ್ಟ್ಗೆ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ಇದರ ಪ್ರಕಾರ, ದರ್ಶನ್‌ಗೆ ಸರ್ಜರಿ ಮಾಡುವ ಬಗ್ಗೆ ವೈದ್ಯರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಫಿಸಿಯೋಥೆರಪಿ ಮಾಡಲಾಗ್ತಿದೆ. ಇದರಿಂದ ಗುಣಮುಖ ಆಗದಿದ್ರೆ ಸರ್ಜರಿ ಬಗ್ಗೆ ನಿರ್ಧಾರ ಮಾಡ್ತೀವಿ. ಒಂದೊಮ್ಮೆ ದರ್ಶನ್ ಒಪ್ಪಿಕೊಂಡ್ರೆ ಸರ್ಜರಿ ಮಾಡ್ತೀವಿ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

  • ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

    ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

    – ಕುಂಟುತ್ತಲೇ ಆಸ್ಪತ್ರೆಗೆ ಬಂದಿದ್ದ ಆರೋಪಿ ನಟ

    ಬೆಂಗಳೂರು: ಜಾಮೀನಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್‌ಗೆ (Actor Darshan) ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಚಿಕಿತ್ಸೆ ಕೊಡಬೇಕು ಎನ್ನುವುದೇ ಒಂದು ದೊಡ್ಡ ಚರ್ಚೆಯಾಗಿದೆ.

    ರೇಣುಕಾಸಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಅ.3 ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ ಒಂದು ದಿನ ಸಂಪೂರ್ಣ ವಿಶ್ರಾಂತಿಯ ಬಳಿಕ ನ.1ರಂದು ದರ್ಶನ್ ಕೆಂಗೇರಿಯ (Kengeri) ಬಿಜಿಎಸ್ ಆಸ್ಪತ್ರೆಗೆ (BGS Hospital) ದಾಖಲಾಗಿದ್ದಾರೆ.ಇದನ್ನೂ ಓದಿ: ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ

    ಆಸ್ಪತ್ರೆಗೆ ದಾಖಲಾದ ಬಳಿಕ ದರ್ಶನ್‌ಗೆ ಫಿಜಿಯೋಥೆರಪಿನಾ? ಅಥವಾ ಆಪರೇಷನ್‌ನಾ? ಎಂದು ಚರ್ಚೆ ನಡೆಯುತ್ತಿದೆ. ಇತ್ತ ಕಾಣಿಸಿಕೊಂಡಿರುವ ನೋವಿಗೆ ಎಕ್ಸಾಮಿನೇಷನ್ ಆಗುವ ತನಕ ಚಿಕಿತ್ಸೆ ಹೇಗೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಕೂಡ ರಿಪೋರ್ಟ್‌ಗಳಿಗಾಗಿ ಕಾಯುತ್ತಿದ್ದಾರೆ.

    ಈ ಹಿಂದೆ ಕೂಡ ಇದೇ ರೀತಿ ಬೆನ್ನು ನೋವಿಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ಮತ್ತೆ ಬೆನ್ನಿನಲ್ಲೇ ಸಮಸ್ಯೆ ಉಲ್ಬಣ ಆಗಿದ್ದು, ಆಪರೇಷನ್ ಬದಲು ವೈದ್ಯರು ಫಿಜಿಯೋಥೆರಪಿಗೆ ಹೆಚ್ಚು ಮನ್ನಣೆ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕುಟುಂಬದವರು ಸಹ ಶಸ್ರ್ತಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

    ದರ್ಶನ್‌ಗೆ ಉಂಟಾಗಿರುವ ಬೆನ್ನು ನೋವಿನಿಂದಾಗಿ ಎಡಗಾಲಿಗೂ ಕೂಡ ದೊಡ್ಡಮಟ್ಟದ ಸಮಸ್ಯೆಯಾಗಿ ಕಾಡುತ್ತಿದೆ. ಜೈಲಿಂದ ರಿಲೀಸ್ ಆದ ದಿನಕ್ಕೂ ನಿನ್ನೆ ಆಸ್ಪತ್ರೆಗೆ ಬಂದ ದಿನಕ್ಕೂ ನೋವು ಕೊಂಚ ಹೆಚ್ಚಾದಂತೆ ಕಾಣುತ್ತಿದೆ.

    ಸ್ಪೈನಲ್‌ ಕಾರ್ಡ್ (Spinal Cord) ಸಮಸ್ಯೆಯಿಂದ ಆರಂಭವಾದ ಬೆನ್ನುನೋವು, ಈಗ ಕಾಲುಗಳಿಗೂ ಸಮಸ್ಯೆ ಉಂಟುಮಾಡುತ್ತಿದೆ. ಹಾಗಾಗಿ ಬೆನ್ನು ನೋವು ಜೊತೆಗೆ ಎಡಗಾಲೂ ನೋವಿದ್ದರೆ ರೋಗಿಯ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಲಿದೆ? ಅದರಿಂದ ದೇಹದ ಮೇಲಾಗುವ ಪರಿಣಾಮ ಏನು? ಎನ್ನುವುದನ್ನು ವೈದ್ಯರು ತಿಳಿಸಬೇಕಾಗಿದೆ.

    ವೈದ್ಯರು ಹೇಳೋದೇನು?
    ವೈದ್ಯರ ಮಾಹಿತಿಯ ಪ್ರಕಾರ, ಮೊದಲಿಗೆ ಬೆನ್ನು ನೋವು ಹೆಚ್ಚಾಗುತ್ತಿದ್ದಂತೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ. ಬಳಿಕ ನಡೆಯಲು ಸಮಸ್ಯೆ ಎದುರಾಗಿ ಹಂತ ಹಂತವಾಗಿ ಸಮಸ್ಯೆ ಇರುವ ಕಾಲಿನಲ್ಲಿ ಮರಗಟ್ಟುವಿಗೆ ಶುರುವಾಗುತ್ತದೆ. ಆಗ ಕಾಲು ಬೆರಳಿನಿಂದ ಆರಂಭವಾಗಿ ಇಡೀ ಕಾಲಿಗೆ ವೇಗವಾಗಿ ಮರಗಟ್ಟುವಿಕೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಕಾಲಿನ ಚಲನೆಗೆ ಕೂಡ ಕಷ್ಟವಾಗಿ ಕಾಲು ಸಂಪೂರ್ಣ ನಿಶಕ್ತಿಗೆ ಒಳಗಾಗುತ್ತದೆ. ನಡೆಯಲು ಕಷ್ಟವಾದಾಗ, ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಶೀಘ್ರದಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕು ಎನ್ನುತ್ತಾರೆ ವೈದ್ಯರು.ಇದನ್ನೂ ಓದಿ: ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

  • ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್ – ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯರು ಹೇಳಿದ್ದೇನು?

    ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್ – ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯರು ಹೇಳಿದ್ದೇನು?

    – ದರ್ಶನ್ ಕಾಲಿನಲ್ಲಿ ವೀಕ್ನೆಸ್, ಎಡಗಾಲು ಸ್ಪರ್ಶತೆ ಕಡಿಮೆ
    – ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್‌ರೇಗೆ ಸಲಹೆ

    ಬೆಂಗಳೂರು: ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್ (Darshan) ಶುಕ್ರವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

    ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ನವೀನ್ ಅಪ್ಪಾಜಿ ಗೌಡ ಮಾತನಾಡಿ, ಇಂದು ಮಧ್ಯಾಹ್ನ 3:30 ಕ್ಕೆ ದರ್ಶನ್ ಅಡ್ಮಿಟ್ ಆದರು. ದರ್ಶನ್ ಕಾಲಲ್ಲಿ ವೀಕ್ನೆಸ್ ಇದೆ. ಎಡಗಡೆಯ ಕಾಲು ನೋವಿದೆ. ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್ ರೇ ಮಾಡಬೇಕಾಗುತ್ತೆ. ಎಡಗಡೆಯ ಕಾಲು ತುಂಬಾ ನೋವಿದೆ. ಬೆನ್ನುನೋವಿಗೆ ಸಂಬಂಧಿಸದಂತೆ ಪರೀಕ್ಷೆ ಮಾಡಬೇಕಾಗುತ್ತೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ಎಡಗಾಲು ಸ್ಪರ್ಶತೆ ಸ್ವಲ್ಪ ಕಡಿಮೆ ಆಗಿದೆ. ಎಕ್ಸಾಮಿನೇಷನ್ ಮುಗಿದ ಬಳಿಕ ಅಪರೇಷನ್ ಅಥವಾ ಫಿಸಿಯೋನಾ? ಅಥವಾ ಬೇರೆ ರೀತಿಯ ಚಿಕಿತ್ಸೆನಾ ಅಂತ ತಿಳಿಯಲಿದೆ. ಸದ್ಯಕ್ಕೆ ನೋವು ನಿವಾರಕ ನೀಡಲಾಗಿದೆ. ಎಕ್ಸಾಮಿನೇಷನ್ ರಿಪೋರ್ಟ್ ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

    ನಟ ದರ್ಶನ್‌ಗೆ ಬೆನ್ನುನೋವು, ಎಡಗಾಲು ನೋವು ಸಮಸ್ಯೆ ಹಾಗೂ ಎಡಗಾಲು ಸ್ಪರ್ಶತೆ ಕಡಿಮೆ ಇರೋದು ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಎಡಗಾಲು ನೋವಿಗೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಮೂರು ಪರೀಕ್ಷೆ ಮಾಡಿ ಬೆನ್ನು ನೋವಿಗೆ ಏನು ಚಿಕಿತ್ಸೆ ಕೊಡಬೇಕು ಎಂದು ವೈದ್ಯರು ನಿರ್ಧರಿಸಲಿದ್ದಾರೆ. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆಯಲ್ಲಿಂದು ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ

  • ಬಿಜಿಎಸ್ ಆಸ್ಪತ್ರೆಯಲ್ಲಿಂದು ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ

    ಬಿಜಿಎಸ್ ಆಸ್ಪತ್ರೆಯಲ್ಲಿಂದು ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ

    – ಕುಂಟುತ್ತಲೇ ಆಸ್ಪತ್ರೆಯೊಳಗೆ ಬಂದ ದರ್ಶನ್‌
    – ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಮನೆಗೆ ವಾಪಸ್‌

    ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿರುವ ಆರೋಪಿ ನಟ ದರ್ಶನ್ (Darshan) ಚಿಕಿತ್ಸೆಗಾಗಿ ಇಂದು (ನ.1) ಬೆಂಗಳೂರಿನ ಕೆಂಗೇರಿ ಬಳಿಯಿರುವ ಬಿಜಿಎಸ್ ಆಸ್ಪತ್ರೆ (BGS Hospital) ತಲುಪಿದ್ದಾರೆ.

    ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್‌ ಭದ್ರತೆಯೊಂದಿಗೆ (Police security) ಮನೆಯಿಂದ ಹೊರಟಿದ್ದ ದರ್ಶನ್‌ 3 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಕೂಡ ಜೊತೆಯಲ್ಲಿದ್ದರು. ಆಸ್ಪತ್ರೆ ಆವರಣಕ್ಕೆ ಬಂದ ಬಳಿಕ ಕುಂಟುತ್ತಲೇ ನಟ ಧನ್ವೀರ್‌ ಕೈ ಹಿಡಿದು ಒಳಗೆ ತೆರಳಿದರು. ಈ ವೇಳೆ ದರ್ಶನ್‌ ಭೇಟಿಗಾಗಿ ನಟಿ ಅಮೂಲ್ಯ, ಪತ್ನಿ ಜಗದೀಶ್ ಸಹ ಧಾವಿಸಿದ್ದರು.

    ಸದ್ಯ ತಜ್ಞವೈದ್ಯರು ಪ್ರಾಥಮಿಕ ಕಾರ್ಯ ಶುರು ಮಾಡಿದ್ದು, ರೋಗಿಯ ಹೆಸರು ವಿವರ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್‌ ಮಾಡಲಿರುವ ವೈದ್ಯರು, ಬಳಿಕ ಮುಂದಿನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ. ಇಂದು ದರ್ಶನ್‌ ಬೆನ್ನುನೋವಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಗಿಸಿದ ನಂತರ ನಟ ಮನೆಗೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.

    ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ:
    ದರ್ಶನ್‌ ಚಿಕಿತ್ಸೆಗೆ ದಾಖಲಾದ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್‌ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್‌ ಅಳವಡಿಸಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

    ಈಗಾಗಲೇ ದರ್ಶನ್‌ ಕುಟುಂಬದವರು ಬೆನ್ನುನೋವಿನ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಫಿಸಿಯೋ ಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಮನವಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಕುಟುಂಬ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

    ಇಬ್ಬರು ತಜ್ಞರ ಸಲಹೆ ಪಡೆದಿದ್ದ ದರ್ಶನ್‌ ಕುಟುಂಬ:
    ದರ್ಶನ್‌ ಕುಟುಂಬಸ್ಥರು ಗುರುವಾರ ಸಂಜೆಯೇ ನರ ರೋಗ ತಜ್ಞ ಡಾ.ನವೀನ್‌ ಅವರಿಂದ ಬೆನ್ನುನೋವಿನ ಕುರಿತು ಆರೋಗ್ಯ ಸಲಹೆ ಪಡೆದುಕೊಂಡಿದ್ದರು. ಮೊಬೈಲ್ ನಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಪ್ರತಿ ಕಳುಹಿಸಿ ತಜ್ಞ ವೈದ್ಯರ ಅಭಿಪ್ರಾಯ ಪಡೆದುಕೊಂಡಿದ್ದರು. ಅದೇ ರೀತಿ ಜಯನಗರದ ಅಪೊಲೋ ಆಸ್ಪತ್ರೆಯ ವೈದ್ಯರಾದ ಡಾ. ಕೃಷ್ಣ ಚೈತನ್ಯ ಅವರನ್ನೂ ಕುಟುಂಬ ಸಂಪರ್ಕಿಸಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ಬರೋಬ್ಬರಿ 5 ತಿಂಗಳ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಮೊನ್ನೆಯಷ್ಟೇ ಜೈಲಿನಿಂದ ರಿಲೀಸ್‌ ಆಗಿದ್ದರು. ಬೆನ್ನುನೋವಿನ ಉಲ್ಬಣಗೊಂಡ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಷರತ್ತುಬದ್ಧ ಜಾಮೀನನ್ನು ಕೋರ್ಟ್‌ ಮಂಜೂರು ಮಾಡಿತ್ತು. ಆಸ್ಪತ್ರೆಗೆ ದಾಖಲಾದ ಒಂದು ವಾರದ ಬಳಿಕ ವೈದ್ಯಕೀಯ ವರದಿ ನೀಡುವಂತೆ ಕೋರ್ಟ್‌ ಷರತ್ತು ವಿಧಿಸಿದೆ.

  • ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿದ್ದ ಆರೋಪಿ ನಟ ದರ್ಶನ್ (Actor Darshan) ಚಿಕಿತ್ಸೆಗಾಗಿ ಇಂದು (ನ.1) ಬೆಂಗಳೂರಿನ ಕೆಂಗೇರಿ (Kengeri) ಬಳಿಯಿರುವ ಬಿಜಿಎಸ್ ಆಸ್ಪತ್ರೆಯತ್ತ (BGS Hospital) ಹೊರಟಿದ್ದಾರೆ.

    ಮಧ್ಯಾಹ್ನ 2:40 ಸುಮಾರಿಗೆ ದರ್ಶನ್ ಪೊಲೀಸ್ ಭದ್ರತೆಯೊಂದಿಗೆ ಮನೆಯಿಂದ ಹೊರಟಿದ್ದಾರೆ. ಆಸ್ಪತ್ರೆಯಲ್ಲಿ ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡಲಿರುವ ವೈದ್ಯರು, ಬಳಿಕ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವ ಕೆಲಸ ಆರಂಭಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.ಇದನ್ನೂ ಓದಿ:ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾಗೆ ಟೈಟಲ್ ಫಿಕ್ಸ್

    ಆಸ್ಪತ್ರೆಗೆ ಬಿಗಿ ಭದ್ರತೆ:
    ಬಿಜಿಎಸ್ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ದರ್ಶನ್ ಬೆಳಗ್ಗೆ ಮಲ್ಲೇಶ್ವರಂನಲ್ಲಿರೋ (Malleshwaram) ಆರ್ಥೋ ಕ್ಲಿನಿಕ್‌ಗೆ (Ortho Clinic) ಭೇಟಿ ನೀಡಿದ್ದರು. ದರ್ಶನ್ ಚಿಕಿತ್ಸೆಗಾಗಿ ದಾಖಲಾಗಲಿರುವ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ಹಾವೇರಿ ಜಿಲ್ಲೆಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ- ಊರು ಬಿಟ್ಟ ಮುಸ್ಲಿಂ ಕುಟುಂಬಗಳು