ನವದೆಹಲಿ: ಚೀನಾ (China), ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಿದೆ. ಭಾರತಕ್ಕೂ ಈಗಾಗಲೇ ಒಮಿಕ್ರಾನ್ (Omicron) ಉಪತಳಿ ಬಿಎಫ್.7 (BF.7 Variant) ಲಗ್ಗೆಯಿಟ್ಟಿದೆ. ಈ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆಸಲಾಯಿತು.
ಸಭೆ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಮಾಸ್ಕ್ (Mask) ಧರಿಸುವುದು ಕಡ್ಡಾಯವಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಜೊತೆಗೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ. ಬಳಿಕ ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಕೋವಿಡ್ (Covid) ಉಪತಳಿಯ ಬಗ್ಗೆ ಕಣ್ಗಾವಲು ಇರಿಸುವ ಬಗ್ಗೆ ಪ್ರತಿಪಾದಿಸಲಾಯಿತು.
ವರ್ಚುವಲ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಈಗಾಗಲೇ ಭಾರತದಲ್ಲಿ ಪತ್ತೆಯಾಗಿದ್ದ ಎಲ್ಲಾ 4 ಬಿಎಫ್.7 ಸೋಂಕು ಪ್ರಕರಣಗಳಲ್ಲೂ ರೋಗಿಗಳು ಚೇತರಿಕೆ ಕಂಡು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೀಗಾಗಿ ಈ ಉಪ ರೂಪಾಂತರಿ ಕುರಿತಾಗಿ ಜನತೆ ಆತಂಕ ಪಡುವ ಅಗತ್ಯತೆ ಸದ್ಯಕ್ಕೆ ಇಲ್ಲ ಎಂದು ಅಭಯ ನೀಡಿದರು.
ಆದಾಗ್ಯೂ ದೇಶದ ಎಲ್ಲಾ ರಾಜ್ಯ ಸರ್ಕಾರಗಳೂ (State Government) ಕೋವಿಡ್‌ನ ಮತ್ತೊಂದು ಸಂಭಾವ್ಯ ಅಲೆ ಎದುರಿಸಲು ಆಸ್ಪತ್ರೆಗಳು ಸುಸಜ್ಜಿತವಾಗಿರಬೇಕು. ಮೂಲಸೌಕರ್ಯ ಸಂಬಂಧಿ ಸಮಸ್ಯೆಗಳಿದ್ದರೇ ಈಗಲೇ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದರು. ಇದನ್ನೂ ಓದಿ: ಹೊಸ ವರ್ಷ.. ಹಳೇ ವೈರಸ್; ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ – ಭಾರತದ ಕಥೆ ಏನು?
We have 8,000 beds for Covid in Delhi. Now, we aim to prepare 36,000 beds pertaining to Covid. We have a storage capacity of 928 mt tonne oxygen in Delhi: Delhi CM Arvind Kejriwal pic.twitter.com/aG7bcQOd4V
ಇನ್ನೂ ದೇಶಾದ್ಯಂತ ವಯಸ್ಕರಿಗೆ ಆದಷ್ಟು ಶೀಘ್ರವಾಗಿ ಮುನ್ನೆಚ್ಚರಿಕೆ ಡೋಸ್ ನೀಡುವ ಸಂಬಂಧ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಳಿಕ ದೇಶಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಔಷಧಗಳ ಸಂಗ್ರಹ, ಲಸಿಕೆ ಇದೆ ಎಂಬ ಮಾಹಿತಿಯನ್ನು ಪ್ರಧಾನಿ ಮೋದಿ ಅವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದರು. ಇದನ್ನೂ ಓದಿ: ಎಸಿ ಇರುವ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಸಲಹೆ : ಸುಧಾಕರ್
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ (Nareddra Modi), ಅಗತ್ಯ ಜೀವರಕ್ಷಕ ಔಷಧಗಳ ಲಭ್ಯತೆ ಮೇಲೆ ಕಣ್ಣಿಡಬೇಕು. ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಗೂ ಅಗತ್ಯ ಪ್ರಮಾಣದ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಭದ್ರತೆ ವಹಿಸಬೇಕು ಹಾಗೂ ವೃದ್ಧರ ಮೇಲೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
Kolkata, WB | As far as Covid is concerned we are looking into the situation & are keeping a close watch. We are monitoring the situation in the state as well. The committee is reviewing the situation: CM Mamata Banerjee pic.twitter.com/PO65pKFmb3
ಭಾರತದಲ್ಲಿ ನಾಲ್ಕು ಕೇಸ್: ಈಗಾಗಲೇ ಭಾರತದಲ್ಲಿ ಓಮಿಕ್ರಾನ್ ಬಿಎಫ್.7 ಉಪ ರೂಪಾಂತರಿ ಕೊರೊನಾ ವೈರಸ್‌ನ 4 ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ ಹಾಗೂ ಒಡಿಶಾಗಳಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ.
Live Tv
[brid partner=56869869 player=32851 video=960834 autoplay=true]
ಹೊಸ ವರ್ಷ ಸಮೀಪಿಸುತ್ತಿದೆ. ನ್ಯೂ ಇಯರ್ (New Year 2023) ಸಂಭ್ರಮಾಚರಣೆಗೆ ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಇದರ ಮಧ್ಯೆ ಹಳೇ ವೈರಸ್ ಭೀತಿ ಕೂಡ ಹುಟ್ಟುಕೊಂಡಿದೆ. ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ ಶುರುವಾಗಿದೆ. ಕೊರೊನಾ (Covid-19) ಭೀತಿಯಿಂದ ಹೊರಬಂದಿದ್ದ ವಿಶ್ವದ ಜನತೆಗೆ ಈಗ ಮತ್ತೆ ಆತಂಕ ಶುರುವಾಗಿದೆ. ಹೊಸ ವರ್ಷಕ್ಕೆ ಹಳೆ ವೈರಸ್ ಮತ್ತೆ ಕಂಟಕವಾಗಬಹುದೇ? ಹಾಗಾದ್ರೆ ಈಗ ಪರಿಸ್ಥಿತಿ ಹೇಗಿದೆ? ತಿಳಿಯೋಣ ಬನ್ನಿ.
ಚೀನಾದಲ್ಲಿ ಮತ್ತೆ ಕೊರೊನಾ ರಣಾರ್ಭಟ
ಕೊರೊನಾ ವೈರಸ್ ತವರು ಚೀನಾ (China). ಮಾರಣಾಂತಿಕ ವೈರಸ್ ಮೂಲಕ ವಿಶ್ವಾದ್ಯಂತ ಸಾವು-ನೋವು, ಆರ್ಥಿಕ ಕುಸಿತಕ್ಕೆ ಈ ಡ್ರ್ಯಾಗನ್ ರಾಷ್ಟ್ರವೇ ಕಾರಣ. ಆದರೆ ಆ ಜವಾಬ್ದಾರಿಯನ್ನೂ ಈವರೆಗೂ ಚೀನಾ ಹೊತ್ತುಕೊಂಡಿಲ್ಲ. ಕೋವಿಡ್-19, ಡೆಲ್ಟಾ, ಓಮಿಕ್ರಾನ್ (Omicron) ಹೀಗೆ ಮೂರು ಅಲೆಗಳ ಮೂಲಕ ಇಡೀ ಜಗತ್ತನ್ನು ವೈರಸ್ ಹಿಂಡಿ ಹಿಪ್ಪೆ ಮಾಡಿತ್ತು. ಅದಾದ ಬಳಿಕ ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುವ ಹೊತ್ತಿನಲ್ಲೇ ಈಗ ಮತ್ತೆ 4ನೇ ಅಲೆಯ ಭೀತಿ ಶುರುವಾಗಿದೆ.
ಹೌದು, ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಜೋರಾಗಿದೆ. ಕೊರೊನಾ ಉಪತಳಿಯು ಬಹು ವೇಗವಾಗಿ ದೇಶಾದ್ಯಂತ ಹರಡುತ್ತಿರುವುದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಚೀನಾದಲ್ಲಿ ಲಕ್ಷಾಂತರ ಜನ ಸೋಂಕಿಗೆ ತುತ್ತಾಗುತ್ತಿದ್ದು, ಆಸ್ಪತ್ರೆಗಳು ಫುಲ್ ಆಗಿವೆ. ಸ್ಮಶಾನಗಳಲ್ಲಿ ಹೆಣಗಳ ರಾಶಿ ಕಾಣುತ್ತಿದೆ. ವೈದ್ಯರು ಸಹ ಚಿಕಿತ್ಸೆ ನೀಡುತ್ತಲೇ ಕುಸಿದು ಬೀಳುತ್ತಿದ್ದಾರೆ. ಈ ಭಯಾನಕ ದೃಶ್ಯಗಳು ಜಗತ್ತನ್ನು ಮತ್ತೆ ಕಂಗೆಡಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್ ಸುನಾಮಿಗೆ ಕಾರಣ ಏನು?
ಶೂನ್ಯ ಕೋವಿಡ್ ನಿಯಮಕ್ಕೆ ರೊಚ್ಚಿಗೆದ್ದ ಜನ
ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ʼಶೂನ್ಯ ಕೋವಿಡ್ʼ (Zero Covid) ಕಠಿಣ ನಿಯಮಾವಳಿಗಳ ವಿರುದ್ಧ ಚೀನಾದ ಜನತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಜನರು ಮನೆಯಲ್ಲೇ ಬಂಧಿಯಾಗಿರಬೇಕು, ಪ್ರಮುಖ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂಬುದು ಸೇರಿದಂತೆ ಅನೇಕ ಕಠಿಣ ನಿಯಮಗಳನ್ನು ಚೀನಾದಲ್ಲಿ ಜಾರಿಗೊಳಿಸಲಾಗಿತ್ತು. ಇದರಿಂದ ತತ್ತರಿಸಿಹೋಗಿದ್ದ ಜನತೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಠಿಣ ನಿಯಮಗಳ ಪೈಕಿ ಕೆಲವು ನಿರ್ಬಂಧಗಳಿಗೆ ವಿನಾಯಿತಿ ನೀಡಲಾಯಿತು. ಈಗ ಮತ್ತೆ ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿಸಿದೆ.
ಏನಿದು ಬಿಎಫ್.7 ಉಪತಳಿ?
ವೈರಸ್‌ಗಳು ರೂಪಾಂತರಗೊಂಡಾಗ, ಉಪ ರೂಪಾಂತರಿಗಳನ್ನು ರಚಿಸುತ್ತವೆ. SARS-CoV-2 ನ ಮುಖ್ಯ ವೈರಸ್ ಮತ್ತು ಉಪ ವೈರಸ್‌ಗಳು ಮೊಳಕೆಯೊಡೆಯುತ್ತವೆ. BF.7, BA.5.2.1.7 ನಂತೆಯೇ ಇರುತ್ತದೆ. ಇದು ಒಮಿಕ್ರಾನ್ ಉಪ ರೂಪಾಂತರಿ BA.5 ನ ಉಪ ವಂಶವಾಗಿದೆ. ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ BF.7 ಉಪ ತಳಿಯು BA.5ನ ವಂಶಾವಳಿಯಾಗಿದೆ. ಇದು ಕಡಿಮೆ ಅವಧಿಯಲ್ಲಿ ಹೆಚ್ಚು ಹರಡುವ ರೂಪಾಂತರವಾಗಿದೆ. ಇದು ಮರು-ಸೋಂಕನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಕೋವಿಡ್-19 ಲಸಿಕೆ ಪಡೆದುಕೊಂಡವರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳಬಹುದು.
‘ಸೆಲ್ ಹೋಸ್ಟ್ ಮತ್ತು ಮೈಕ್ರೋಬ್’ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, BF.7 ರೂಪಾಂತರ ಉಪ-ತಳಿಯು ಮೂಲ ವುಹಾನ್ ವೈರಸ್‌ಗಿಂತ 4.4 ಪಟ್ಟು ಹೆಚ್ಚಿನ ತಟಸ್ಥೀಕರಣ ಪ್ರತಿರೋಧವನ್ನು ಹೊಂದಿದೆ. ಅಂದರೆ ಕೊರೊನಾ ವೈರಸ್ ಲಸಿಕೆಯ ಮೂಲಕ ಜನರು ಪಡೆದುಕೊಂಡಿರುವ ಪ್ರತಿರೋಧಕ ಶಕ್ತಿಗಿಂತಲೂ ಈ ರೋಗಾಣು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿಯೇ ಲಸಿಕೆ ಪಡೆದುಕೊಂಡವರು ಸಹಿತ ಈ ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ. ಇದನ್ನೂ ಓದಿ: ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್
ಬಿಎಫ್.7 ಉಪ ತಳಿ ಲಕ್ಷಣಗಳೇನು?
ಓಮಿಕ್ರಾನ್ ರೂಪಾಂತರದ BF.7 ಉಪ-ತಳಿ ಲಕ್ಷಣ ಕೊರೊನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಅಂತೆಯೇ ಓಮಿಕ್ರಾನ್ ರೂಪಾಂತರದ ಬಿಎಫ್.7 ಉಪ-ತಳಿಯ ಲಕ್ಷಣಗಳೆಂದರೆ, ಜ್ವರ, ಗಂಟಲು ನೋವು, ಮೂಗು ಸ್ರವಿಸುವಿಕೆ, ಕೆಮ್ಮು, ಉಸಿರಾಟದ ಸಮಸ್ಯೆ.
ಮಧುಮೇಹಿಗಳಿಗೆ ಮಾಸ್ಕ್ ಕಡ್ಡಾಯ
‘ಕೋವಿಡ್–19 ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು (ಕೋಮಾರ್ಬಿಡಿಟಿ), ವಯಸ್ಸಾದವರು ಜನಜಂಗುಳಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂಬುದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಸಲಹೆಯಾಗಿದೆ. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್ ಅಗತ್ಯವಿಲ್ಲ : IMA
ಭಾರತದಲ್ಲಿ ಭೀತಿ.. ಎಚ್ಚರಿಕೆ!
ನೆರೆಯ ಚೀನಾದಲ್ಲಿ ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಭಾರತದಲ್ಲಿ ಭೀತಿ ಉಂಟು ಮಾಡಿದೆ. ಕೂಡಲೇ ಎಚ್ಚೆತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈ ಅಲರ್ಟ್ ಆಗಿವೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವ ಕುರಿತು ಸಭೆಗಳನ್ನು ನಡೆಸುತ್ತಿವೆ.
ಭಾರತದಲ್ಲಿ (India Covid) ಲಾಕ್‌ಡೌನ್ ಮಾಡುವ ಪರಿಸ್ಥಿತಿಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ ಗೋಯಲ್ ಹೇಳಿದ್ದಾರೆ. ಶೇ.95 ರಷ್ಟು ಜನರು ಈಗಾಗಲೇ ಲಸಿಕೆಯನ್ನು ಪಡೆದಿರುವ ಕಾರಣ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಇಲ್ಲ. ಭಾರತೀಯರು ಚೀನಾದ ಜನರಿಗಿಂತ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಭಾರತವು ಕೋವಿಡ್ ಮೂಲಭೂತ ಅಂಶಗಳಾದ ಪರೀಕ್ಷೆ, ಚಿಕಿತ್ಸೆ, ಪತ್ತೆಹಚ್ಚುವಿಕೆಗೆ ಮರಳಬೇಕು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಹೇಗಿದೆ ಕೊರೊನಾ ಪರಿಸ್ಥಿತಿ?
ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 185 ಹೊಸ ಪ್ರಕರಣಗಳು ದೃಢಪಟ್ಟರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,402 ಕ್ಕೆ ಇಳಿದಿದೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,76,515) ದಾಖಲಾಗಿದೆ. ಒಟ್ಟು 5,30,681 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,42,432 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ ದೇಶದಲ್ಲಿ 220.03 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಇದನ್ನೂ ಓದಿ: ಎಸಿ ಇರುವ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಸಲಹೆ : ಸುಧಾಕರ್
ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ
ಚೀನಾದ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಹಾಗೂ ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಜಪಾನ್, ಸೌತ್ ಕೊರಿಯಾ, ಬ್ರೆಜಿಲ್, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿಫ್.7 ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ.
ನ್ಯೂ ಇಯರ್‌ಗೆ ನಿರ್ಬಂಧ?
ನ್ಯೂ ಇಯರ್ ಸಮೀಪಿಸುತ್ತಿರುವ ಹೊತ್ತಲ್ಲೇ ಕೊರೊನಾ ವೈರಸ್ ಭೀತಿ ಮತ್ತೆ ಶುರುವಾಗಿದೆ. ಇದರಿಂದ ನ್ಯೂ ಇಯರ್ ಸಂದರ್ಭದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ಈಗಾಗಲೇ ಮಾಸ್ಕ್ ಕಡ್ಡಾಯಕ್ಕೆ ಆದೇಶ ಹೊರಡಿಸುವ ಸಂಬಂಧ ಸುಳಿವು ಸಿಕ್ಕಿದೆ. ನ್ಯೂ ಇಯರ್ ವಿಜೃಂಭಣೆ ಆಚರಣೆಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಅನೇಕ ನಿರ್ಬಂಧಗಳೊಂದಿಗೆ ಸಂಭ್ರಮಾಚರಣೆಗೆ ಈ ಬಾರಿ ಅವಕಾಶ ಕಲ್ಪಿಸಬಹುದು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಚೀನಾದ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ (Corona Virus) ಓಮಿಕ್ರಾನ್‌ನ ಉಪತಳಿ ಬಿಎಫ್.7 (BF.7 Variant) ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ.
ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ (Gujarat) ಹಾಗೂ ಒಡಿಶಾ (Odisha) ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು (Serum Institute of India) ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ.
ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ವೈರಸ್‌ನ ಈ ಬಿಎಫ್.7 ಉಪತಳಿಯೇ ಕಾರಣ ಎಂದು ಮೂಲಗಳು ತಿಳಿಸಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿಫ್.7 ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್ ಸುನಾಮಿಗೆ ಕಾರಣ ಏನು?
ಚೀನಾದಲ್ಲಿ (China) ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕು ವೇಗವಾಗಿ ಹರಡುತ್ತಿದೆ. ಚೀನಾ ಪ್ರಜೆಗಳ ದೇಹದಲ್ಲಿ ಈ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕಿನಿಂದಾಗಿ ವೃದ್ಧಿಸಿರುವ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರಬಹುದು. ಇಲ್ಲವೇ, ಅವರಿಗೆ ನೀಡಿರುವ ಲಸಿಕೆಯು ಪರಿಣಾಮಕಾರಿಯಾಗಿರದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್
ಭಾರತದಲ್ಲಿ ಈಗಾಗಲೇ ಎಲ್ಲ ರಾಜ್ಯಗಳೂ ಅಲರ್ಟ್ ಆಗಿದ್ದು, ಸಾರ್ವಜನಿಕರು ಜಾಗೃತವಾಗಿರುವಂತೆ ಸೂಚಿಸಿವೆ. ಜನರು ಗುಂಪಿನಲ್ಲಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಉಪತಳಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್‌ಗೆ ಮಾದರಿ ಕಳುಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೇಳಿದೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 129 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿದೆ.