Tag: Better.com

  • ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ವಾಷಿಂಗ್ಟನ್: ಸಂಸ್ಥೆಯ ಆರ್ಥಿಕ ನಿರೀಕ್ಷೆ ಹಾಗೂ ಕಾರ್ಯಕ್ಷಮತೆಯ ಬಗ್ಗೆ ಹೂಡಿಕೆದಾರರನ್ನು ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬೆಟರ್ ಡಾಟ್ ಕಾಮ್‌ನ ಮುಖ್ಯ ಕಾರ್ಯನಿರ್ವಾಹಕ ವಿಶಾಲ್ ಗಾರ್ಗ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

    ಸಾಫ್ಟ್‌ಬ್ಯಾಂಕ್ ಬೆಂಬಲಿತ ಕಂಪನಿಯ ಮಾರಾಟ ಹಾಗೂ ಕಾರ್ಯಾಚರಣೆಗಳ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಸಾರಾ ಪಿಯರ್ಸ್ ತನ್ನ ಮೊಕದ್ದಮೆಯಲ್ಲಿ ಗಾರ್ಗ್ ತನ್ನ ಆರ್ಥಿಕ ಸ್ಥಿತಿಯ ಕಾರಣ ಹೂಡಿಕೆದಾರರು ಹಿಂದೇಟು ಹಾಕುವ ಸಂದರ್ಭ ಎಸ್‌ಪಿಎಸಿ ಯೊಂದಿಗೆ ವಿಲೀನವಾಗುವ ಬಗ್ಗೆ ತಪ್ಪಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಡಿ ಸಮನ್ಸ್ – ವಿಚಾರಣೆಯಿಂದ ವಿನಾಯಿತಿ ಕೋರಿದ ಸೋನಿಯಾ

    ನ್ಯಾಯಾಲಯದಲ್ಲಿ ಪಿಯರ್ಸ್ ಸಲ್ಲಿಸಿದ ಮೊಕದ್ದಮೆಯಲ್ಲಿ ಈ ಒಪ್ಪಂದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೂ ಆರ್ಥಿಕ ಪರಿಹಾರ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಟರ್ ಡಾಟ್ ಕಾಮ್‌ನ ವಕೀಲರು, ಕಂಪನಿಯ ಹಣಕಾಸು, ಲೆಕ್ಕಪತ್ರದ ಬಗ್ಗೆ ವಿಶ್ವಾಸವಿದೆ ಹಾಗೂ ಈ ಮೊಕದ್ದಮೆಯನ್ನು ನಾವು ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

    ಕಳೆದ ವರ್ಷ ಬೆಟರ್ ಡಾಟ್ ಕಾಮ್ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಷೇರು ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂಬಂಧ ಬೆಟರ್ ಡಾಟ್ ಕಾಮ್ ವಿಶೇಷ ಉದ್ದೇಶದ ಸ್ವಾದೀನ ಕಂಪನಿ ಅರೋರಾ ಜೊತೆ ವಿಲೀನ ಮಾಡಿಕೊಂಡಿತ್ತು. 7.7 ಶತಕೋಟಿ ಡಾಲರ್(ಸುಮಾರು 59 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಈ ವಿಲೀನ ಪ್ರಕ್ರಿಯೆ ಶೀಘ್ರವೇ ಕೊನೆಯಾಗುವ ಸಾಧ್ಯತೆಯಿದೆ.

  • Better.com ಬಳಿಕ ಇನ್ನೊಂದು ಕಂಪನಿ- ಝೂಮ್ ಕಾಲ್‌ನಲ್ಲಿ 800 ಉದ್ಯೋಗಿಗಳ ವಜಾ

    Better.com ಬಳಿಕ ಇನ್ನೊಂದು ಕಂಪನಿ- ಝೂಮ್ ಕಾಲ್‌ನಲ್ಲಿ 800 ಉದ್ಯೋಗಿಗಳ ವಜಾ

    ಲಂಡನ್: ಈ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯ ಮುಖ್ಯಸ್ಥ ವಿಶಾಲ್ ಗಾರ್ಗ್ ತನ್ನ 900 ಉದ್ಯೋಗಿಗಳನ್ನು ಝೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ವಜಾಗೊಳಿಸಿ ಭಾರೀ ಸುದ್ದಿಯಾಗಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ಬ್ರಿಟಿಷ್ ಮೂಲದ ಕಂಪನಿಯಲ್ಲಿ ನಡೆದಿದೆ.

    ಬ್ರಿಟನ್ ಮೂಲದ ಶಿಪ್ಪಿಂಗ್ ಕಂಪನಿಯೊಂದು ತನ್ನ ಸುಮಾರು 800 ಉದ್ಯೋಗಿಗಳನ್ನು ಆನ್‌ಲೈನ್ ಝೂಮ್ ಕಾಲ್‌ನಲ್ಲಿ ವಜಾಗೊಳಿಸಿದ ಘಟನೆ ನಡೆದಿದೆ. ಬೆಟರ್ ಡಾಟ್ ಕಾಂ ಬಳಿಕ ಝೂಮ್ ಕಾಲ್ ಮುಖಾಂತರ ಉದ್ಯೋಗಿಗಳನ್ನು ವಜಾಗೊಳಿಸಿದ 2 ನೇ ಕಂಪನಿ ಎಂದೇ ಸುದ್ದಿಯಾಗುತ್ತಿದೆ. ಇದೀಗ ಝೂಮ್ ವೀಡಿಯೋ ಕಾಲ್ ಅಪ್ಲಿಕೇಶನ್ ಅನ್ನು ಕಂಪನಿಯಿದ ಉದ್ಯೋಗಿಗಳನ್ನು ವಜಾಗೊಳಿಸಲೆಂದೇ ಬಳಕೆ ಮಾಡಲಾಗುತ್ತಿದೆ ಎಂದು ಹಾಸ್ಯಾಸ್ಪದವಾಗಿ ಹೇಳಲಾಗುತ್ತಿದೆ. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

    ಬ್ರಿಟನ್ ಮೂಲದ ಪಿ ಆಂಡ್ ಒ ಹೆಸರಿನ ಶಿಪ್ಪಿಂಗ್ ಕಂಪನಿ ಮಾರ್ಚ್ 17 ರಂದು ತನ್ನ 800 ಉದ್ಯೋಗಿಗಳನ್ನು ಝೂಮ್ ಕರೆ ಮೂಲಕ ವಜಾ ಗೊಳಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಕೇವಲ 3 ನಿಮಿಷಗಳಲ್ಲಿ ಝೂಮ್ ಕರೆಯಲ್ಲಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ವಜಾಗೊಳಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಖಾಲಿ ಸ್ಟ್ರಾಲರ್ಸ್ ಸಾಲಾಗಿಟ್ಟು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್

    ಪಿ ಆಂಡ್ ಒ ಕಂಪನಿ ಕಳೆದ 2 ವರ್ಷಗಳಿಂದ ನಷ್ಟ ಅನುಭವಿಸುತ್ತಿರುವುದರಿಂದ ತನ್ನ ಉದ್ಯೋಗಿಗಳನ್ನು ವಜಾ ಗೊಳಿಸುತ್ತಿರುದಾಗಿ ತಿಳಿಸಿದೆ. ಕೆಲವು ತಿಂಗಳ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯೂ ತನ್ನ 900 ಉದ್ಯೋಗಿಗಳನ್ನು ಝೂಮ್ ಕರೆಯ ಮೂಲಕ ವಜಾ ಗೊಳಿಸಿತ್ತು. ಬಳಿಕವೂ ನಷ್ಟದಲ್ಲಿದ್ದ ಕಂಪನಿ ಇ-ಮೇಲೆ ಮುಖಾಂತರ 4 ಸಾವಿರ ಉದ್ಯೋಗಿಳನ್ನು ವಜಾ ಗೊಳಿಸಿದೆ. ಹೀಗೆ ಕಂಪನಿ ಶೇ.50 ರಷ್ಟು ಉದ್ಯೋಗಿಗನ್ನು ವಜಾ ಗೊಳಿಸಿದೆ.

  • ಮತ್ತೆ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರಾ ವಿಶಾಲ್ ಗಾರ್ಗ್?

    ವಾಷಿಂಗ್ಟನ್: ಬೆಟರ್ ಡಾಟ್ ಕಾಂ (Better.com)ನ ಭಾರತ-ಅಮೆರಿಕಾ ಮುಖ್ಯಸ್ಥ ಮತ್ತೆ ತನ್ನ 4,000 ಉದ್ಯೋಗಿಗಳನ್ನು ವಜಾಗೊಳಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಬೆಟರ್ ಡಾಟ್ ಕಾಂ ಕಂಪನಿ ಭಾರತ ಹಾಗೂ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದೀಗ 4,000 ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸಿದ್ದಲ್ಲಿ ಸುಮಾರು ಶೇ.50 ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿದಂತಾಗುತ್ತದೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

    3 ತಿಂಗಳ ಹಿಂದೆ ವಿಶಾಲ್ ಗಾರ್ಗ್ ಕಂಪನಿಯ ಜೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ತನ್ನ 900 ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಮೂಲಕ ಭಾರೀ ಸುದ್ದಿಯಾಗಿದ್ದ ಗಾರ್ಗ್ ಮತ್ತೆ ತನ್ನ ಕಂಪನಿಯ 4,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

    2021ರ ಡಿಸೆಂಬರ್‌ನಲ್ಲಿ ಕಂಪನಿಯ ಶೇ.9 ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದರಿಂದ ಜಾಗತಿಕವಾಗಿ ಟ್ರೋಲ್ ಆಗಿದ್ದರು. ಇದರಿಂದ ಮುಜುಗರಕ್ಕೊಳಗಾಗ ಗಾರ್ಗ್ ಬಳಿಕ ಕ್ಷಮೆಯನ್ನೂ ಕೇಳಿದ್ದರು.

  • ಏಕಾಏಕಿ 900 ಮಂದಿ ನೌಕರರ ವಜಾಗೊಳಿಸಿದ್ದ ರೀತಿಗೆ ಕ್ಷಮೆಯಾಚಿಸಿದ CEO

    ಏಕಾಏಕಿ 900 ಮಂದಿ ನೌಕರರ ವಜಾಗೊಳಿಸಿದ್ದ ರೀತಿಗೆ ಕ್ಷಮೆಯಾಚಿಸಿದ CEO

    ನವದೆಹಲಿ: ಹಠಾತ್ತನೆ 900ಕ್ಕೂ ಹೆಚ್ಚು ಯುಎಸ್ ಮತ್ತು ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದ ರೀತಿಗೆ Better.com ಸಿಇಒ ವಿಶಾಲ್ ಗಾರ್ಗ್ ಕ್ಷಮೆಯಾಚಿಸಿದರು.

    Better.com  ಸಿಇಒ ಕಳೆದ ವಾರ ಜೂಮ್ ಮಿಟಿಂಗ್ ನಲ್ಲಿ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಶಾಲ್ ಅವರು ಜನರ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಹಿನ್ನೆಲೆ ಅವರು ಅಡಮಾನ ಕಂಪನಿಯಲ್ಲಿ ವಜಾ ಮಾಡುವ ಕಾರ್ಯ ನಿರ್ವಹಿಸುವ ರೀತಿಗೆ ಕ್ಷಮೆಯಾಚಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು

    ನಾನು ಈ ಸುದ್ದಿಯನ್ನು ಹೇಳುವಾಗ ತುಂಬಾ ಕಷ್ಟವಾಗಿತ್ತು. ಆದರೆ ಈಗ ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಬರೆದು ಕ್ಷಮೆಯನ್ನು ಕೇಳಿದರು. ಹಠಾತ್ತನೆ ವಜಾ ಮಾಡಲು ಕಾರಣವೇನು? ಎಂದು ಕೇಳಿದಾಗ, ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯಲ್ಲಿ ಬದಲಾವಣೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಭಾರತೀಯ-ಅಮೆರಿಕನ್ ಸಿಇಒ ಹೇಳಿದ್ದರು. .

    ಕಳೆದ ವಾರ ವಿಶಾಲ್ ಗಾರ್ಗ್ ಅವರು ಜೂಮ್ ಮೀಟಿಂಗ್ ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಇಂದು ನಿಮಗೆ ಒಳ್ಳೆಯ ಸುದ್ದಿಯನ್ನು ಹೇಳಲು ಬಂದಿಲ್ಲ. ಮಾರುಕಟ್ಟೆ ಬದಲಾಗಿದೆ, ನಾವು ಬದುಕಲು ಮುಂದೆ ಸಾಗಬೇಕು. ಆಶಾದಾಯಕವಾಗಿ, ಧೈರ್ಯದಿಂದ ನಮ್ಮನ್ನು ನಾವು ಅಭಿವೃದ್ಧಿಪಡಿಸಲು ಮುಂದಾಗಬೇಕು. ಇದು ನೀವು ಕೇಳಲು ಬಯಸುವ ಸುದ್ದಿಯಲ್ಲ. ಆದರೆ ಕೊನೆಯದಾಗಿ ಇದು ನನ್ನ ನಿರ್ಧಾರವಾಗಿತ್ತು. ನೀವು ಅದನ್ನು ನನ್ನಿಂದಲ್ಲೇ ಕೇಳಬೇಕೆಂದು ನಾನು ಬಯಸುತ್ತೇನೆ. ಇದು ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ. ನನ್ನ ವೃತ್ತಿಜೀವನದಲ್ಲಿ ಇದು ಎರಡನೇ ಬಾರಿಗೆ ಈ ರೀತಿಯ ನಿರ್ಧಾರವನ್ನು ಮಾಡುತ್ತಿದ್ದೇನೆ ಎಂದಿದ್ದರು. ಇದನ್ನೂ ಓದಿ: ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO

    ನಾನು ಇದನ್ನು ಮಾಡಲು ಬಯಸುವುದಿಲ್ಲ. ಹಿಂದೆ ಈ ರೀತಿ ನಾನು ಮಾಡಿದ್ದಕ್ಕೆ ನಾನು ಅತ್ತಿದ್ದೆ. ಈ ಬಾರಿ ನನಗೆ ಸ್ವಲ್ಪ ಧೈರ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾವು ಕಂಪನಿಯ ಸುಮಾರು 15% ಉದ್ಯೋಗಿಗಳನ್ನು ವಜಾಗೊಳಿಸಿದ್ದೆವು. ಇಂದು ದುರದೃಷ್ಟಕರವಾಗಿ ನೀವು ಈ ಗುಂಪಿನ ಭಾಗವಾಗಿದ್ದೀರಿ. ಇಲ್ಲಿಗೆ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದರು.

    2016 ರಲ್ಲಿ Better.com ಸ್ಥಾಪನೆಯಾಗಿದ್ದು, ನ್ಯೂಯಾರ್ಕ್‍ನಲ್ಲಿ ಇದರ ಪ್ರಧಾನ ಕಛೇರಿ ಇದೆ. Better.com ತನ್ನ ಆನ್‍ಲೈನ್ ಪ್ಲಾಟ್‍ಫಾರ್ಮ್ ಮೂಲಕ ಮನೆಮಾಲೀಕರಿಗೆ ಅಡಮಾನ ಮತ್ತು ವಿಮಾ ಉತ್ಪನ್ನಗಳನ್ನು ನೀಡುತ್ತದೆ.