Tag: Bettale

  • ಹಣ ಪಡೆದು ಬೆತ್ತಲೆ ನಾಟಕ: ನಟಿ ಶ್ರೀರೆಡ್ಡಿ ರಹಸ್ಯ ಬಯಲು

    ಹಣ ಪಡೆದು ಬೆತ್ತಲೆ ನಾಟಕ: ನಟಿ ಶ್ರೀರೆಡ್ಡಿ ರಹಸ್ಯ ಬಯಲು

    ನಗೆ ಅನ್ಯಾಯವಾಗಿದೆ,  ಲೈಂಗಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ಹಲವಾರು ಬಾರಿ ತೆಲುಗು ನಿರ್ಮಾಪಕರ ಸಂಘ, ಕಲಾವಿದರ ಸಂಘದ ಮುಂದೆ ಬೆತ್ತಲೆಯಾಗಿ ಪ್ರತಿಭಟನೆ (Protest) ಮಾಡಿದ್ದ ನಟಿ ಶ್ರೀರೆಡ್ಡಿ (Srireddy) ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಬಂದಿದೆ. ಬೇರೆಯವರಿಂದ ಹಣ ಪಡೆದುಕೊಂಡು ಹೀಗೆ ಬೆತ್ತಲೆ (Bettale) ನಾಟಕ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ಹೊರ ಹಾಕಲಾಗುವುದು ಎಂದು ಉದ್ಯಮದವರು ಹೇಳುತ್ತಿದ್ದಾರೆ.

    ಶ್ರೀರೆಡ್ಡಿ ಈ ಹಿಂದೆ ಮೀಟೂ ಆರೋಪ ಮಾಡಿದ್ದರು. ಅದರಲ್ಲೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರೆಡ್ಡಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು ಈ ಸಂದರ್ಭವನ್ನು ನೆನಪಿಸಿಕೊಂಡು ಲೈವ್ ಮಾಡಿದ್ದ ಶ್ರೀರೆಡ್ಡಿ ಮತ್ತೆ ನರೇಶ್ ಹಾಗೂ ಪವಿತ್ರಾ ವಿಷಯವನ್ನು ಪ್ರಸ್ತಾಪಿಸಿದ್ದರು. ‘ನಾನು ಮೀಟೂ ವಿರುದ್ಧ ಪ್ರತಿಭಟನೆ ನಡೆಸಿದಾಗ ನರೇಶ್‌, ಆ್ಯಸಿಡ್‌ನಿಂದ ಕೈ ತೊಳಯಬೇಕು ಎಂದು ಕಾಮೆಂಟ್ ಮಾಡಿದ್ದರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ’ ಎಂದು ಕಾಮೆಂಟ್ ಮಾಡಿದ್ದರು.

    ಯಾರ ಬದುಕಿನಲ್ಲೂ ಯಾರು ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ಪವಿತ್ರಾ ಲೋಕೇಶ್ ಕುರಿತಾಗಿಯೂ ಮಾತನಾಡಿದ್ದ ಶ್ರೀರೆಡ್ಡಿ, ರಮ್ಯಾ ಅವರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಹಿಳೆ ಅಂದಾಕ್ಷಣ ಅವರ ಶೀಲವನ್ನು ಶಂಕಿಸಲಾಗುತ್ತದೆ. ರಮ್ಯಾ ಮೇಲೂ ಅದೇ ಆಗಿದೆ. ಆದರೆ, ನಿಜವಾಗಿಯೂ ಜನರ ಮುಂದೆ ಬೆತ್ತಲೆ ಆದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನರೇಶ್ ಅವರನ್ನು ಕೇಳಿದ್ದರು.

     

    ಶ್ರೀರೆಡ್ಡಿ ಲೈವ್ ಗೆ ಬಂದು ಮತ್ತೆ ಹಲವು ಕಲಾವಿದರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಅವರು ಜೀವನವೂ ಇದೇ ಹಾದಿಯಲ್ಲಿದೆ. ಮುಂದೆ ಜನರಿಗೂ ಗೊತ್ತಾಗಲಿದೆ ಎಂದು ಅಬ್ಬರಿಸಿದ್ದರು. ಶ್ರೀರೆಡ್ಡಿ ಲೈವ್ ಗೆ ಬರುತ್ತಿದ್ದಂತೆಯೇ ಮೀಟೂ ಚಳವಳಿ ಮತ್ತೆ ಆರಂಭವಾಗಲಿದೆಯಾ ಅನ್ನುವ ಅನುಮಾನವನ್ನಂತೂ ಅವರು ಹುಟ್ಟು ಹಾಕಿದ್ದರು. ಇದೆಲ್ಲದ ಹಿಂದೆ ಹಣದ ವಾಸನೆ ಇದೆ ಎನ್ನಲಾಗುತ್ತಿದೆ.

  • ಖ್ಯಾತ ನಿರ್ಮಾಪಕನ ಆಫೀಸ್ ಮುಂದೆ ಬೆತ್ತಲೆಯಾಗಿ ಪ್ರತಿಭಟನೆಗೆ ಕೂತ ನಟಿ

    ಖ್ಯಾತ ನಿರ್ಮಾಪಕನ ಆಫೀಸ್ ಮುಂದೆ ಬೆತ್ತಲೆಯಾಗಿ ಪ್ರತಿಭಟನೆಗೆ ಕೂತ ನಟಿ

    ನಿರ್ಮಾಪಕರೊಬ್ಬರು ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ನಿರ್ಮಾಪಕನ ಆಫೀಸ್ ಮುಂದೆ ಬೆತ್ತಲೆಯಾಗಿ ಪ್ರತಿಭಟನೆ ಮಾಡಿದ ಘಟನೆ ತೆಲುಗು ಚಿತ್ರೋದ್ಯಮದಲ್ಲಿ ನಡೆದಿದೆ. ತೆಲುಗು ಸಿನಿಮಾ ರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ತಯಾರಿಸಿದ ನಿರ್ಮಾಪಕ ಹಾಗೂ ವಿತರಕರೂ ಆಗಿರುವ ಬನ್ನಿ ವಾಸು ಆಫೀಸ್ ಮುಂದೆ ಹೈಡ್ರಾಮಾ ನಡೆದಿದ್ದು, ನಟಿ ಸುನಿತಾ ಬೋಯಾ ಬೆತ್ತಲೆಯಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಬೆಳಗ್ಗೆ ಬನ್ನಿ ವಾಸು ಅವರ ಗೀತಾ ಆರ್ಟ್ಸ್ ಕಚೇರಿ ಮುಂದೆ ಬಂದ ನಟಿ ಸುನಿತಾ ಬೋಯಾ, ಬೆತ್ತಲೆಯಾಗಿ ಪ್ರತಿಭಟನೆಗೆ ಕೂತಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಟಿಯನ್ನು ವಶಕ್ಕೆ ಪಡೆದಿದ್ದಾರೆ. ಆನಂತರ ಆಕೆಗೆ ಬಟ್ಟೆ ಹಾಕಿ ಸಮಾಧಾನದ ಮಾತುಗಳನ್ನೂ ಆಡಿದ್ದಾರೆ. ಸುನಿತಾಗೆ ಆದ ಮೋಸವನ್ನು ಕೇಳಿದ್ದಾರೆ. ನಂತರ ಆಕೆಗೆ ಸ್ವಲ್ಪ ಹಣ ಕೊಟ್ಟೂ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಬನ್ನಿ ವಾಸು ನಿರ್ಮಾಣದ ಧಾರಾವಾಹಿಯಲ್ಲಿ ಸುನಿತಾ ನಟಿಸುತ್ತಿದ್ದರಂತೆ. ಅವರಿಗೆ ಕೊಡಬೇಕಾದ ಹಣವನ್ನು ಪಾವತಿಸಿಲ್ಲವಂತೆ. ಹಾಗಾಗಿ ತಮಗೆ ಬದುಕು ನಡೆಸಲೂ ಕಷ್ಟವಾಗುತ್ತಿದೆ. ನನಗೆ ದುಡ್ಡು ಕೊಡದೇ ಸತಾಯಿಸುತ್ತಿದ್ದಾರೆ ಎಂದು ನಟಿ ಪೊಲೀಸ್ ಮುಂದೆ ಹೇಳಿಕೊಂಡಿದ್ದಾರೆ. ಕೂಡಲೇ ವಾಸು ಅವರನ್ನು ಪೊಲೀಸರು ಸಂಪರ್ಕಿಸಿ, ಹಣ ಕೊಡುವ ಭರವಸೆಯನ್ನೂ ನಟಿಗೆ ಕೊಟ್ಟಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ನಟ ವಿಜಯ್ ದೇವರಕೊಂಡನ ಸಂಪೂರ್ಣ ಬೆತ್ತಲೆ ನೋಡ್ಬೇಕಂತೆ ಈ ನಟಿ

    ಸ್ಟಾರ್ ನಟ ವಿಜಯ್ ದೇವರಕೊಂಡನ ಸಂಪೂರ್ಣ ಬೆತ್ತಲೆ ನೋಡ್ಬೇಕಂತೆ ಈ ನಟಿ

    ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯ ಪಾಂಡೆ ನಡುವಿನ ಗಾಸಿಪ್ ಗಳು ಎರಡೂ ಸಿನಿಮಾ ರಂಗದಲ್ಲೂ ದಟ್ಟವಾಗಿದೆ. ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು ಎನ್ನುವುದನ್ನು ಇದೇ ಅನನ್ಯ ಪಾಂಡೆ ಹೇಳಿದ್ದರು. ಅಲ್ಲದೇ, ಸದ್ಯ ಅನನ್ಯ ಪಾಂಡೆ ಜೊತೆಯೇ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎಂದೂ ಸುದ್ದಿ ಆಗಿತ್ತು. ಇವರಿಬ್ಬರೂ ಮಧ್ಯರಾತ್ರಿ ಓಡಾಡುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದವು. ಇದೀಗ ಮತ್ತೊಂದು ವಿಚಿತ್ರ ಸುದ್ದಿ ಬಿಟೌನ್ ನಿಂದ ಹರಿದು ಬಂದಿದೆ.

    ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಇಬ್ಬರೂ ಭಾಗಿಯಾಗಿದ್ದರು. ತಮ್ಮ ಕೆರಿಯರ್ ಗಿಂತಲೂ ಡೇಟಿಂಗ್, ಸೆಕ್ಸ್ ಹೀಗೆ ಖಾಸಗಿ ಸಂಗತಿಗಳನ್ನೇ ಹೆಚ್ಚು ಹಂಚಿಕೊಂಡಿದ್ದರು. ಇದೇ ವೇಳೆಯಲ್ಲಿ ಅನನ್ಯ ಪಾಂಡೆ ವಿಚಿತ್ರ ಬಯಕೆಯೊಂದನ್ನು ಶೋನಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಮುಜಗರವಿಲ್ಲದೇ ‘ನೀವು ವಿಜಯ್ ದೇವರಕೊಂಡ ಅವರನ್ನು ಬೆತ್ತಲೆಯಾಗಿ ನೋಡುವುದಕ್ಕೆ ಇಷ್ಟಪಡುತ್ತೀರಾ’ ಎಂದು ಕರಣ್ ಶೋನಲ್ಲಿ ಕೇಳುತ್ತಾರೆ. ಕ್ಷಣವೂ ಯೋಚಿಸದ ಅನನ್ಯ ಪಾಂಡೆ. ಸಂಪೂರ್ಣ ಬೆತ್ತಲೆಯಾಗಿ ನೋಡುವುದಕ್ಕೆ ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ

    ಸದ್ಯ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಲೈಗರ್ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕಾಗಿಯೇ ವಿಜಯ್ ಅವರಿಂದ ರಶ್ಮಿಕಾ ಮಂದಣ್ಣ ದೂರ ಇದ್ದಾರೆ ಎನ್ನುವ ಸುದ್ದಿಯೂ ಇದೆ. ಈ ನಡುವೆ ಇಂತಹ ಮಾತುಗಳು ರಶ್ಮಿಕಾ ಮಂದಣ್ಣ ಅಭಿಮಾನಿಗಳನ್ನು ಕೆರಳಿಸಿವೆ. ಅನನ್ಯ ಮಾತಿಗೆ ನೆಗೆಟಿವ್ ಕಾಮೆಂಟ್ ಗಳು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]