Tag: Bethlehem

  • ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಬೆತ್ಲೆಹೆಮ್‌ (ಪ್ಯಾಲೆಸ್ತೀನ್): ಜಗತ್ತಿನಾದ್ಯಂತ ಕ್ರಿಸ್ಮಸ್‌ (Christmas) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜೀಸಸ್‌ (Jesus Christ) ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮವಿಲ್ಲ. ಕ್ರಿಸ್ಮಟ್‌ ಟ್ರೀ ಕೂಡ ಇಲ್ಲ. ಈ ನೆಲದಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ.

    ಬೆತ್ಲೆಹೆಮ್‌ (Bethlehem) ಸಾಮಾನ್ಯವಾಗಿ ಕ್ರಿಸ್ಮಸ್‌ನಲ್ಲಿ ಅತ್ಯಂತ ಜನನಿಬಿಡವಾಗಿರುತ್ತದೆ. ಆದರೆ ಈ ವರ್ಷ ಯುದ್ಧದಿಂದಾಗಿ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ಪಟ್ಟಣ ಪ್ರವಾಸಿಗರು ಮತ್ತು ಯಾತ್ರಿಕರಿಲ್ಲದೇ ಬಣಗುಡುತ್ತಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಮಾರಕ ಅಂಗಡಿಗಳು ಖಾಲಿ ಖಾಲಿಯಾಗಿವೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಡೆಯಿತು. ಇದಾದ ಬಳಿಕ ಇಸ್ರೇಲ್‌ ಯುದ್ಧವನ್ನು ಘೋಷಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಮಿಲಿಟರಿ ದಾಳಿ ಮತ್ತು ಪಶ್ಚಿಮ ದಂಡೆಯಲ್ಲಿ ಹಿಂಸಾಚಾರದ ಹೆಚ್ಚಳವಾಗಿದೆ. ಹೀಗಾಗಿ ಬೆತ್ಲೆಹೆಮ್‌ಗೆ ವ್ಯಾಪಾರ ಮಾಲೀಕರು ಯಾರೂ ಬರುತ್ತಿಲ್ಲ.

    ಇದು ಪಟ್ಟಣಕ್ಕೆ (ಬೆತ್ಲೆಹೆಮ್‌) ಬಂದೊದಗಿದ ಅತ್ಯಂತ ಕೆಟ್ಟ ಕ್ರಿಸ್ಮಸ್‌ ದಿನವಾಗಿದೆ. ಬೆತ್ಲೆಹೆಮ್‌ ಅನ್ನು ಬಂದ್‌ ಮಾಡಲಾಗಿದೆ. ಕ್ರಿಸ್ಮಸ್ ಟ್ರೀ ಇಲ್ಲ, ಸಂತೋಷವಿಲ್ಲ, ಕ್ರಿಸ್ಮಸ್ ಉತ್ಸಾಹವಿಲ್ಲ ಎಂದು ಸ್ಥಳೀಯರು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಜೆರುಸಲೆಮ್‌ನ ದಕ್ಷಿಣದಲ್ಲಿರುವ ಬೆತ್ಲೆಹೆಮ್‌ ಜೀಸಸ್ ಜನಿಸಿದ ಪವಿತ್ರ ಸ್ಥಳ ಎಂದು ಕ್ರಿಶ್ಚಿಯನ್ನರು ನಂಬಿದ್ದಾರೆ. ನೇಟಿವಿಟಿ ಚರ್ಚ್ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಜನ ಕ್ರಿಸ್ಮಸ್‌ ಸಂದರ್ಭದಲ್ಲಿ ಬರುತ್ತಿದ್ದರು. ಸ್ಥಳೀಯರಿಗೆ ಪ್ರವಾಸಿಗರೇ ಆದಾಯ ಮೂಲವಾಗಿದ್ದರು. ಆದರೆ ಯುದ್ಧದಿಂದಾಗಿ ಕ್ರಿಸ್ಮಸ್‌ ಸಂಭ್ರಮ ಇಲ್ಲದಂತಾಗಿದೆ.

    ಕ್ರಿಸ್ಮಸ್‌ ಸಂದರ್ಭದಲ್ಲಿ ತುಂಬಿ ತುಳುಕುತ್ತಿದ್ದ ಹೋಟೆಲ್‌ಗಳು ಈಗ ಖಾಲಿ ಹೊಡೆಯುತ್ತಿವೆ. ಕ್ರಿಸ್ಮಸ್ ಬ್ರೇಕ್ಫಾಸ್ಟ್ ಇಲ್ಲ, ಕ್ರಿಸ್ಮಸ್ ಡಿನ್ನರ್ ಇಲ್ಲ, ಕ್ರಿಸ್ಮಸ್ ಬಫೆ ಇಲ್ಲ ಎಂದು ಹೋಟೆಲ್‌ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕಾದಲ್ಲಿ ಹಿಂದೂ ದೇಗುಲದ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ- ಭಾರೀ ಖಂಡನೆ

  • ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    – ಹಮಾಸ್ ಉಗ್ರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆ

    ಟೆಲ್ ಅವೀವ್: ಒಂದೆಡೆ ಗಾಜಾದ ಮೇಲೆ ಇಸ್ರೇಲ್ (Israel) ವೈಮಾನಿಕ ದಾಳಿ (Airstrike) ನಡೆಸಿದ್ದರೆ, ಇನ್ನೊಂದೆಡೆ ಹಮಾಸ್ (Hamas) ಬಂಡುಕೋರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಗಾಜಾದ ಮಾಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ಭೂಗತ ಸುರಂಗ ಜಾಲದಲ್ಲಿ ಸೆರೆಯಲ್ಲಿದ್ದ ಐವರು ಇಸ್ರೇಲಿ ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಗಾಜಾದ ಮೇಲೆ ಭಾನುವಾರ ರಾತ್ರಿ ಆರಂಭವಾದ ಇಸ್ರೇಲ್ ದಾಳಿ ಕ್ರಿಸ್‍ಮಸ್ ದಿನವಾದ ಸೋಮವಾರ ಬೆಳಗ್ಗೆವರೆಗೂ ಮುಂದುವರಿಯಿತು. ಈ ವೇಳೆ ಗಾಜಾದ ಅಲ್-ಬುರೇಜ್‍ನ ಮೇಲೆ ಇಸ್ರೇಲ್ ತೀವ್ರ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಾಘಜಿ ನಿರಾಶ್ರಿತರ ಶಿಬಿರದಲ್ಲಿ 70 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

    ಇದರ ನಡುವೆಯೇ ಬೆಥ್ ಲೆಹೆಮ್‍ನಲ್ಲಿ (Bethlehem) ಪ್ಯಾಲೇಸ್ತೇನಿ ಜನರು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅ.7ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಸೆರೆ ಹಿಡಿದಿತ್ತು. ಹಿಂದಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್ 200 ಪ್ಯಾಲೇಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!