Tag: Betageri Police

  • ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ

    ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ

    ಗದಗ: ಇಲ್ಲಿನ ವಿವೇಕಾನಂದ ನಗರ ಬಡಾವಣೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದೆ. ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಬೆನ್ನಟ್ಟಿದಾಗ, ಯುವಕ ಭಯದಿಂದ ತೆಂಗಿನ ಮರವೇರಿ ಕುಳಿತ ಘಟನೆ ನಡೆದಿದೆ.

    ಬಸವರಾಜ್ ಸೊಲ್ಲಾಪುರ ಎಂಬ ಯುವಕ ಸುಮಾರು 40 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್, ನಸುಕಿನ ಜಾವ ರೈಲಿನಲ್ಲಿ ಬಂದು ಗದಗದಲ್ಲಿ ಇಳಿದಿದ್ದ. ನಂತರ ವಿವೇಕಾನಂದ ಬಡಾವಣೆಯ ಮನೆ ಬಾಗಿಲು ಬಡಿದಿದ್ದ ಎನ್ನಲಾಗಿದೆ. ಇದನ್ನೂ ಓದಿ: ದಾವಣಗೆರೆ | ಇಬ್ಬರು ಬೈಕ್ ಕಳ್ಳರ ಬಂಧನ – 16.52 ಲಕ್ಷ ಮೌಲ್ಯದ 30 ಬೈಕ್ ವಶಕ್ಕೆ

    ಇದರಿಂದ ಭಯಗೊಂಡ ಸ್ಥಳೀಯರು ಆತನನ್ನು ಕಳ್ಳ ಎಂದು ಶಂಕಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಾಹನದ ಸೈರನ್ ಶಬ್ದ ಕೇಳುತ್ತಿದ್ದಂತೆ ಭಯಗೊಂಡ ಬಸವರಾಜ್, ತಪ್ಪಿಸಿಕೊಳ್ಳಲು ತೆಂಗಿನ ಮರ ಏರಿದ್ದ.

    ಸ್ಥಳೀಯರು ಕೆಳಗೆ ಇಳಿಯುವಂತೆ ಸಾಕಷ್ಟು ಮನವಿ ಮಾಡಿಕೊಂಡರೂ ಇಳಿಯದೇ ಸುಮಾರು ಎರಡರಿಂದ ಮೂರು ಗಂಟೆಗೂ ಹೆಚ್ಚು ಕಾಲ ಮರದಲ್ಲೇ ಕುಳಿತಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸಿದ್ದಾರೆ. ನಂತರ ಯುವಕನನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಅಕ್ರಮ ಅನ್ನಭಾಗ್ಯ ಅಕ್ಕಿ ದಂಧೆ ಅಡ್ಡೆ ಮೇಲೆ ದಾಳಿ – ಓರ್ವ ವಶಕ್ಕೆ

    ಅಕ್ರಮ ಅನ್ನಭಾಗ್ಯ ಅಕ್ಕಿ ದಂಧೆ ಅಡ್ಡೆ ಮೇಲೆ ದಾಳಿ – ಓರ್ವ ವಶಕ್ಕೆ

    ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಗದಗದ (Gadag) ಬೆಟಗೇರಿ ಬಣ್ಣದ ನಗರದಲ್ಲಿ ನಡೆದಿದೆ.

    ಅನ್ನಭಾಗ್ಯ ಅಕ್ಕಿಗೆ ಖದೀಮರು ಕನ್ನ ಹಾಕಿ, ರೂಮ್‌ನಲ್ಲಿ ಸುಮಾರು 20 ಕ್ವಿಂಟಲ್‌ನಷ್ಟು ಅಕ್ಕಿ ಸಂಗ್ರಹಿಸಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಅಕ್ಕಿ ದಂಧೆ ಜಾಲ ಪತ್ತೆಯಾಗಿದೆ. ಇದನ್ನೂ ಓದಿ: Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಅಕ್ರಮ ಅಕ್ಕಿ ದಂಧೆಯಲ್ಲಿ ಪಾಲ್ಗೊಂಡಿದ್ದ ಶ್ರಿಕಾಂತ್ ಭಜಂತ್ರಿ ಎಂಬಾತನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಪೊಲೀಸ್ (Betageri Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದಂಧೆಯ ಜಾಲವನ್ನು ಬೆನ್ನು ಹತ್ತಿದ್ದಾರೆ.

  • ಗದಗದಲ್ಲಿ ಅಂತರರಾಜ್ಯ ಖತರ್ನಾಕ್ ಕಳ್ಳರು ಅಂದರ್

    ಗದಗದಲ್ಲಿ ಅಂತರರಾಜ್ಯ ಖತರ್ನಾಕ್ ಕಳ್ಳರು ಅಂದರ್

    ಗದಗ: ಇಬ್ಬರು ಅಂತರರಾಜ್ಯ ಖತರ್ನಾಕ್ ಸರಗಳ್ಳರನ್ನ ಬಂಧಿಸುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಉತ್ತರ ಪ್ರದೇಶದ ರವಿ ಬಾವರಾ (33), ಶಾಹಿಲ್ ಮೊಹಮ್ಮದ್ (25) ಬಂಧಿತ ಕಳ್ಳರು. ಆ.03 ರಂದು ಶಿವಸಾಯಿ ನಗರದಲ್ಲಿ ಮಹಿಳೆಯೊಬ್ಬರು ಬೆಳಗ್ಗೆ ಬನ್ನಿ ಕಟ್ಟೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು 1 ಲಕ್ಷ 20 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರವನ್ನು ಕಿತ್ತು ಪರಾರಿಯಾಗಿದ್ದರು. ಇದನ್ನೂ ಓದಿ: ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ

    ಅಲ್ಲದೇ ಖದೀಮರು ಸಂಭಾಪೂರ ರಸ್ತೆಯ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಎಗರಿಸಿದ್ದರು. ಆ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ತವರು ಮನೆಯಿಂದ ಹಣ ತರದ ಪತ್ನಿಯನ್ನ ಬರ್ಬರವಾಗಿ ಕೊಂದ ಪತಿಗೆ ಮರಣದಂಡನೆ

    ಪ್ರಕರಣ ಬೆನ್ನತ್ತಿದ ಬೆಟಗೇರಿ ಬಡಾವಣೆ ಪೊಲೀಸರು ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನ ಹಾಗೂ ಡಿಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಕಾರ್ಯಚರಣೆ ಆರಂಭಿಸಿದ್ದರು. ಖದೀಮರು ಕ್ಯಾಟರಿಂಗ್ ಕೆಲಸ ಮಾಡುವುದರ ಜೊತೆಗೆ ಕಳ್ಳತನಕ್ಕೆ ಕೈ ಹಾಕಿದ್ದರು. ಬೈಕ್ ಕಳ್ಳತನ ಮಾಡಿ, ಅದೇ ಬೈಕ್‌ನಲ್ಲಿ ಸರಗಳ್ಳತನ ಮಾಡುತ್ತಿದ್ದರು. ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾದಾಗ ಅಲ್ಲಿಯೇ ಬಿಟ್ಟು, ಬಸ್ ಹತ್ತುತ್ತಿದ್ದರು. ನಂತರ ಪುನಃ ಬೇರೆ ಕಡೆ ಬೈಕ್ ಕಳ್ಳತನ ಮಾಡಿ, ಸರಗಳ್ಳತನವನ್ನು ಮುಂದುವರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಇದೀಗ ಈ ಇಬ್ಬರು ಅಂತರರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ ಒಟ್ಟು 5 ಲಕ್ಷ 94 ಸಾವಿರ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್, 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಧೀರಜ್ ಶಿಂಧೆ, ಪಿಎಸ್‌ಐ ಮಾರುತಿ ಜೋಗದಂಡಕರ್, ಬಿ.ಟಿ ರಿತ್ತಿ ಮತ್ತು ಅನೇಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಎಸ್ಪಿ ರೋಹನ್ ಜಗದೀಶ್ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.