ಬೆಂಗಳೂರು: ಬೆಸ್ಕಾಂ ಟ್ರಾನ್ಸ್ಫಾರ್ಮರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕಂಬದ ಮೇಲಿಂದ ಕೆಳಗೆ ಬಿದ್ದ ಲೈನ್ ಮ್ಯಾನ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ನಡೆದಿದೆ.
ಉತ್ತರ ಕರ್ನಾಟಕ ಮೂಲದ ಪವನ್ ಮೃತ ಲೈನ್ ಮ್ಯಾನ್. ನಗರದ ಹೊರವಲಯದ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ಸ್ ಸಮಸ್ಯೆಯನ್ನು ಬಗೆಹರಿಸಲು ಪವನ್ ಹಾಗೂ ಮುರಳಿ ಅವರು ವಿದ್ಯುತ್ ಕಂಬವನ್ನು ಹತ್ತಿದ್ದರು ಜೊತೆಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
ಆದರೆ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಹರಿದ ಹಿನ್ನೆಲೆಯಲ್ಲಿ ವಿದ್ಯುತ್ ತಗುಲಿ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಲೈನ್ ಮ್ಯಾನ್ ಅವರಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್
ಪ್ರತಿಬಾರಿ ಅಮಾಯಕ ಲೈನ್ ಮ್ಯಾನ್‍ಗಳು ಸಾವನ್ನಪ್ಪುತ್ತಿದ್ದರೂ ಸಹ ಯಾವುದೇ ಕಾರಣಕ್ಕೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಬಡವರ ಜೀವಗಳ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಈ ಘಟನೆಗೆ ನೇರ ಹೊಣೆ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಸ್ಕಾಂ ಹಿರಿಯ ಅಧಿಕಾರಿಗಳ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನಗರದ ಹಲವಾರು ಪ್ರದೇಶಗಳಲ್ಲಿ ಇಂದಿನಿಂದ ಬುಧವಾರದವರೆಗೆ ವಿದ್ಯುತ್ ಕಡಿತ ಸಮಸ್ಯೆ ಎದುರಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೋರೇಶನ್ ಲಿಮಿಟೆಡ್ (ಕೆಪಿಟಿಸಿಎಲ್) ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಬೇಕಾಗುತ್ತದೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪದ್ಮನಾಭನಗರ ಜೆಪಿ ನಗರ 5 ನೇ ಹಂತ, ವೆಂಕಟಾದ್ರಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಮಾವಿನ ತೋಟ, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿನಗರ ಕೆರೆ, ಇಸ್ರೋ ಲೇಔಟ್, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಡಬ್ಲ್ಯೂ. ಗಾರ್ಡನ್ ಸೊಸೈಟಿ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯರಸ್ತೆ, ಸಿಆರ್ ಲೇಔಟ್, ಎಲ್‍ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಭವಾನಿ ನಗರ, ಬನಶಂಕರಿ 2ನೇ ಹಂತ, ಕದರ್ರನಹಳ್ಳಿ ನಗರ ಮುಖ್ಯರಸ್ತೆ, ಕೆಆರ್ ರಸ್ತೆ, ಬನಗಿರಿ ನಗರ, ಕಿಡ್ನಿ ಫೌಂಡೇಶನ್ ಮುಖ್ಯರಸ್ತೆ, ವೆಂಕಟಾದ್ರಿ ಲೇಔಟ್, ವಿವೇಕನಗರ, ಈಜಿಪುರ, ಜೋಗಿ ಕಾಲೋನಿ, ವಿನಾಯಕ ನಗರ, ಬಾಲಾಜಿ ಲೇಔಟ್, ಎಇಸಿಎಸ್ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ದೇವರಬಿಸನಹಳ್ಳಿ, ಮತ್ತು ನಾರಾಯಣ ನಗರದಲ್ಲಿ ವಿದ್ಯುತ್ ಕಡಿತಗೊಳ್ಳಿದೆ.
ಬೆಂಗಳೂರು ಉತ್ತರ ವಲಯದ ನಾರಾಯಣರಾವ್ ಕಾಲೋನಿ, ದ್ವಾರಕಾ ನಗರ, ಕ್ರಾಂತಿ ಕವಿ ಸರ್ವಜ್ಞ ರಸ್ತೆ, ನಾಗಪ್ಪ ಬ್ಲಾಕ್, ವೈಯಾಲಿಕಾವಲ್, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಅಂಬೇಡ್ಕರ್ ನಗರ, ನಂಜಪ್ಪ ಲೇಔಟ್ 1ನೇ ಮುಖ್ಯ, ಕೊಡಿಗೆಹಳ್ಳಿ, ವಿ. ಮೇದರಹಳ್ಳಿ, ಹೆಗಡೆ ನಗರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಶೆಟ್ಟಿಹಳ್ಳಿ, ಮತ್ತು ಮಲ್ಲಸಂದ್ರ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇದನ್ನೂ ಓದಿ: ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು
ಬೆಂಗಳೂರಿನ ಪಶ್ಚಿಮ ವಲಯಗಳಾದ ಮಳಗಲ್, ಪಂತರಪಾಳ್ಯ, ನಾಯಂಡಹಳ್ಳಿ, ಆಜಾದ್ ನಗರ ಚಾಮರಾಜಪೇಟೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಎಚ್‍ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ವಿದ್ಯಾಮಾನನಗರ, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಗಾಂಧಿ ಬ್ಯಾಂಕ್ ಲೇಔಟ್ ಸೇರಿದಂತೆ ಹಾನಿಗೊಳಗಾದ ಪ್ರದೇಶಗಳು ನಗರ, ಉಳ್ಳಾಲ ನಗರ, ಮಾರುತಿ ನಗರ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಮಲ್ಲತ್ತಳ್ಳಿ ಮತ್ತು ಭವಾನಿನಗರದಲ್ಲಿಯೂ ಸಹ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ದನ್ನೂ ಓದಿ: ಕಳೆದ 70 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ
ಬೆಂಗಳೂರಿನ ಪೂರ್ವ ವಲಯದ ಡಬಲ್ ರೋಡ್, ಲೀಲಾ ಪ್ಯಾಲೇಸ್ ಹತ್ತಿರ, ಮರ್ಫಿ ಟೌನ್, ನಾಗವಾರ ಪಾಳ್ಯ, ನಾಲಾ ರಸ್ತೆ, ಅಜ್ಮಲ್ಲಪ್ಪ ಲೇಔಟ್ ವರ್ತೂರು ರಸ್ತೆ, ಮಂಜುನಾಥ್ ನಗರ, ಎಚ್‍ಆರ್‍ಬಿಆರ್ 3ನೇ ಬ್ಲಾಕ್, ಸಿಎಂಆರ್ ರಸ್ತೆ, ರಾಮಯ್ಯ ಲೇಔಟ್, ಉದಯನಗರ ಮತ್ತು ಕಾಫಿ ಬೋರ್ಡ್ ಲೇಔಟ್‍ನಲ್ಲು ಕೂಡ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಕಡಿತಗೊಳ್ಳಿದೆ.
ಬೆಂಗಳೂರು: ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆ ಪರಿಹಾರ ಮಾಡಿ ಎಂದ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದ ಅಶೋಕ್ ಅವರು ಕ್ಷೇತ್ರದ ಕುಂದುಕೊರತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ಗಣೇಶ ಮಂದಿರ, ಪದ್ಮನಾಭನಗರ, ಕುಮಾರಸ್ವಾಮಿ ಬಡಾವಣೆ, ಚಿಕ್ಕಲ್ಲಸಂದ್ರ ಮುಂತಾದ ಕಡೆಗಳಲ್ಲಿ ಆಗುತ್ತಿರುವ ಕಸ ವಿಲೇವಾರಿ ಸಮಸ್ಯೆಗೆ ಚರ್ಚೆ ನಡೆಸಿದ ಅವರು, ಹತ್ತು ದಿನಗಳ ಒಳಗಾಗಿ ಎಲ್ಲ ಸಮಸ್ಯೆ ಬಗೆಹರಿಯಬೇಕು. ಅಲ್ಲಲ್ಲಿ ಬಿದ್ದಿರುವ ಮರಗಳು, ಕಟ್ಟಡದ ತ್ಯಾಜ್ಯಗಳನ್ನು ಬೇಗ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್
ನಾನು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸುತ್ತೇನೆ. ಅನಗತ್ಯವಾಗಿ ಮಂಜೂರಾಗಿರುವ ಆಟೋ ಟಿಪ್ಪರ್ ಗಳನ್ನು ತಕ್ಷಣದಿಂದಲೇ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ನಿಂದ ಮೃತಪಟ್ಟವರಲ್ಲಿ 653 ಜನರು ಪರಿಹಾರ ಅರ್ಹರು. ಅದರಲ್ಲಿ 103 ಜನರ ಅರ್ಜಿ ಈಗಾಗಲೇ ಸ್ವೀಕೃತಿಯಾಗಿದೆ. ಉಳಿದವುಗಳನ್ನು ಶೀಘ್ರವಾಗಿ ಅಂತಿಮ ರೂಪ ನೀಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಸಮನ್ವಯತೆ ಕೊರತೆಯಿಂದ ಪಾಟ್ ಹೋಲ್ ಸಮಸ್ಯೆ ಆಗಿದೆ. ಕ್ಷೇತ್ರದಾದ್ಯಂತ ಇರುವ ಪಾಟ್ ಹೋಲ್ ಗಳನ್ನು ಶೀಘ್ರವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ವಿಶೇಷಚೇತನರಿಗೆ ಅನುಕೂಲವಾಗಲೆಂದು ತ್ರಿಚಕ್ರ ವಾಹನ ನೀಡಲಾಯಿತು.
ಬೆಸ್ಕಾಂ ಅವರು ಪೋಲ್ ಗಳನ್ನು ವ್ಯವಸ್ಥಿತವಾಗಿ ಮುಚ್ಚಿಸದೇ ಇರುವದರಿಂದ ಸಾಕಷ್ಟು ಸವಾರರು ಬಿದ್ದು, ಅನಾಹುತಗಳಾಗಿದೆ. ಇಲಾಖೆಗಳ ಸಮನ್ವಯತೆ ಕೊರತೆಯಿಂದ ರಸ್ತೆಗಳು ಹಾಳಾಗುತ್ತಿದೆ. ಸಾರ್ವಜನಿಕ ಹಣವೂ ಪೋಲಾಗುತ್ತದೆ. ಇದಕ್ಕೆ ಹೊಸ ವ್ಯವಸ್ಥೆ ತರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. .
ಸಂಬಂಧಿಸಿದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಏಳು ದಿನಗಳ ಒಳಗಾಗಿ ಈ ಸಮಸ್ಯೆ ಪರಿಹಾರವಾಗದಿದ್ದರೆ ಎಲ್ಲರನ್ನೂ ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡಿದರು. ಬನಶಂಕರಿ ಬಸ್ ನಿಲ್ದಾಣದ ಒಳಚರಂಡಿ ಪೈಪ್ ಗಳನ್ನು ಜನವಸತಿ ಪ್ರದೇಶದ ಕಡೆ ಜೋಡಿಸಿರುವ ವಿಷಯ ತಿಳಿದು ಕೆಂಡಾಮಂಡಲರಾದ ಸಚಿವ ಅಶೋಕ್ ಶೀಘ್ರವಾಗಿ ಸಂಬಂಧ ಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್
ಕ್ಷೇತ್ರದಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಾನೇ ಖುದ್ದು ಪರಿಶೀಲನೆ ನಡೆಸುತ್ತೇನೆ. ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಪರಿಹಾರ ಮಾಡುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಕಂದಾಯ, ಬಿ ಡಬ್ಲು ಎಸ್ ಎಸ್ ಬಿ, ಬೆಸ್ಕಾಂ, ಆರೋಗ್ಯ, ಮಹಾನಗರಪಾಲಿಕೆ ಮುಂತಾದ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು. ಸಭೆಯ ನಂತರ ಅಶೋಕ್ ವಿಶೇಷಚೇತನರ ಬದುಕಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ತ್ರಿಚಕ್ರ ವಾಹನ ನೀಡಿದರು.
ಬೆಂಗಳೂರು: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮಂಗಳವಾರ( ಅಕ್ಟೋಬರ್ 12) ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.
ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಮತ್ತು ಒಡಿಶಾದ ಮಹಾನದಿ ಕೋಲ್‍ಫೀಲ್ಡ್ಸ್ ಲಿಮಿಟೆಡ್‍ನ ಗಣಿಗಳಿಂದ ಕರ್ನಾಟಕ ಕಲ್ಲಿದ್ದಲು ಹಂಚಿಕೆಯನ್ನು ಪಡೆದಿದ್ದು, ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಿದ್ಯುತ್ ಸ್ಥಗಿತಗೊಳಿಸುವ ಪ್ರದೇಶಗಳು:
ಜೆಪಿ ನಗರ 3 ನೇ ಹಂತ ಮತ್ತು ಜಯನಗರ ವಿಭಾಗದ ಬಿಜಿ ರಸ್ತೆ, ರಾಘವೇಂದ್ರ ಅಪಾರ್ಟ್‍ಮೆಂಟ್ ಮತ್ತು ಕೋರಮಂಗಲದ ಮುನ್ನೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 1.30 ರಿಂದ 4 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಅದೇ ರೀತಿ, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಬಿಕೆ ವೃತ್ತ, ಸುರಭಿ ನಗರ, ಹೊಸ ರಸ್ತೆ, ಕೋನಪ್ಪನ ಅಗ್ರಹಾರ ಮತ್ತು ಕ್ಲಬ್ ರಸ್ತೆ ವೃತ್ತ ಸೇರಿದಂತೆ ಎಚ್‍ಎಸ್‍ಆರ್ ಲೇಔಟ್ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಮತ್ತು ಜಯನಗರ ವಿಭಾಗದ ಆರ್‍ಬಿಐ ಲೇಔಟ್, ಎಸ್‍ಬಿಎಂ ಕಾಲೋನಿ, ಹರಿ ನಗರ, ಈಶ್ವರ ಲೇಔಟ್ ಮತ್ತು ಶಿವಶಕ್ತಿ ನಗರಗಳಂತಹ ಪ್ರದೇಶಗಳು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ದೀರ್ಘಾವಧಿಯ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ ನಿಧನ
ಬೆಸ್ಕಾಂ ಗ್ರಾಹಕರ ಗಮನಕ್ಕೆ,
ದಿನಾಂಕ 12.10.2021 ರಂದು ದಕ್ಷಿಣ ವೃತ್ತದ ಜಯನಗರ, ಕೋರಮಂಗಲ ಹಾಗೂ ಹೆಚ್.ಎಸ್.ಆರ್ ಲೇಔಟ್ ವಿಭಾಗಗಳಲ್ಲಿ ಅಡಚಣೆ ಉಂಟಾಗಲಿದೆ.
ಪಶ್ಚಿಮ ವಲಯಗಳಾದ ರಾಜಾಜಿನಗರ ವಿಭಾಗದ ಗೋವಿಂದರಾಜ್ ನಗರ, ಕೋಳಿಮನೆ ರಸ್ತೆ, ಸುಬಣ್ಣ ಗಾರ್ಡನ್, ಜಿಕೆಡಬ್ಲ್ಯೂ ಲೇಔಟ್, ವಿನಾಯಕ ಲೇಔಟ್, ಅನುಭವ ನಗರ, ಮಾರುತಿ ನಗರ, ಮತ್ತು ಗಂಗೊಂಡನ ಹಳ್ಳಿಯಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಮತ್ತು ಆರ್.ಆರ್.ನಗರ ವಿಭಾಗದ ಎಚ್.ಬಿ.ಸಮಾಜ ರಸ್ತೆ ಮತ್ತು ರಂಗನಾಥ ಕಾಲೋನಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6ರ ನಡುವೆ ವಿದ್ಯುತ್ ವ್ಯತ್ಯಯವಾಗಲಿದೆ. ಅದೇ ರೀತಿ, ಸಿರ್ಸಿ ವೃತ್ತದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ದ್ವಾರಕನಗರದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಂಗೇರಿ ವಿಭಾಗದ ಭೂಮಿಕಾ ಲೇಔಟ್, ಪತಂಗಿರಿ ಮತ್ತು ಕೃಷ್ಣಾ ಗಾರ್ಡನ್ ಕೂಡ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 5ರ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್
ಬೆಸ್ಕಾಂ ಗ್ರಾಹಕರ ಗಮನಕ್ಕೆ,
ದಿನಾಂಕ 12.10.2021 ರಂದು ಪಶ್ಚಿಮ ವೃತ್ತದ ರಾಜಾಜಿನಗರ, ಆರ್.ಆರ್ ನಗರ, ಕೆಂಗೇರಿ ವಿಭಾಗಗಳಲ್ಲಿ ಅಡಚಣೆ ಉಂಟಾಗಲಿದೆ.
ಪೂರ್ವ ವಲಯಗಳಾದ ಇಂದಿರಾನಗರ ವಿಭಾಗದ ಹೊಯ್ಸಳ ನಗರ, 11 ನೇ ಕ್ರಾಸ್ ಮತ್ತು ಮೀನಾಕ್ಷಿ ದೇವಸ್ಥಾನ ರಸ್ತೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತ ಇರುತ್ತದೆ. ಶಿವಾಜಿನಗರ ವಿಭಾಗದ ರಾಯಲ್ ಎನ್ಕ್ಲೇವ್ ಮತ್ತು ಪೊನಪ್ಪ ಲೇಔಟ್‍ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದೇ ರೀತಿ, ಭಾರತ್ ನಗರ ಮತ್ತು ಫಾತಿಮಾ ಲೇಔಟ್‍ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಮತ್ತು ದೂಪನಹಳ್ಳಿಯ ಕೆಲವು ಭಾಗಗಳಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಅಲ್ಲದೇ ವಿಧಾನಸೌಧ ವಿಭಾಗದ ರಾಜಭವನ ಮತ್ತು ಮಾಗಡಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕನ್ನಿಂಗ್‍ಹ್ಯಾಮ್ ರಸ್ತೆ ಮತ್ತು ಮೈಸೂರು ರಸ್ತೆಯಲ್ಲಿ ಮಧ್ಯಾಹ್ನ 2.30 ರಿಂದ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂ ಓದಿ: ತಾಯಿಯಾಗಿರುವ ವಿಚಾರ 2 ವರ್ಷಗಳ ನಂತ್ರ ಬಹಿರಂಗ ಪಡಿಸಿದ ಶ್ರಿಯಾ ಶರಣ್
ಬೆಸ್ಕಾಂ ಗ್ರಾಹಕರ ಗಮನಕ್ಕೆ,
ದಿನಾಂಕ 12.10.2021 ರಂದು ಪೂರ್ವ ವೃತ್ತದ ಇಂದಿರಾನಗರ್, ವೈಟ್ ಫೀಲ್ಡ್, ಶಿವಾಜಿನಗರ ಹಾಗೂ ವಿಧಾನಸೌಧ ವಿಭಾಗಗಳಲ್ಲಿ ಅಡಚಣೆ ಉಂಟಾಗಲಿದೆ.
ಇನ್ನೂ ಉತ್ತರ ವಲಯಗಳಾದ ಹೆಬ್ಬಾಳ ವಿಭಾಗದ ಕೋಗಿಲು ಲೇಔಟ್, ಅಗ್ರಹಾರ ಮತ್ತು ತಿರುಮೇನಹಳ್ಳಿ ಗ್ರಾಮದ ನಿವಾಸಿಗಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದೇ ರೀತಿಯ ಅಡೆತಡೆಗಳನ್ನು ಬಾಗಲೂರು ಕ್ರಾಸ್‍ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮತ್ತು ಎಂಎಲ್‍ಎ ಲೇಔಟ್ ಅನ್ನು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಸ್ಥಗಿತಗೊಳಿಸಲು ಸಮಯ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ
ಬೆಸ್ಕಾಂ ಗ್ರಾಹಕರ ಗಮನಕ್ಕೆ,
ದಿನಾಂಕ 12.10.2021 ರಂದು ಉತ್ತರ ವೃತ್ತದ ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ ಹಾಗೂ ಪೀಣ್ಯ ವಿಭಾಗಗಳಲ್ಲಿ ಅಡಚಣೆ ಉಂಟಾಗಲಿದೆ.
ಅದೇ ರೀತಿ, ಪೀಣ್ಯ ವಿಭಾಗದಲ್ಲಿ ಪೈಪ್‍ಲೈನ್ ರಸ್ತೆ, ಪ್ರಶಾಂತನಗರ ಸುತ್ತಮುತ್ತ, ಎಂಟಿಎಸ್ ಕಾಲೋನಿ, ಎಜಿಬಿಜಿ ಲೇಔಟ್, ಜಿಡಿ ನಾಯ್ಡು ಹಾಲ್ ರಸ್ತೆ ಮತ್ತು ಎಂಎಲ್ ಲೇಔಟ್ (ಮತ್ತಷ್ಟು ವಿಸ್ತರಣೆ) ಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಲ್ಲೇಶ್ವರ ವಿಭಾಗದ ಗಾಯತ್ರಿನಗರ ಮತ್ತು ಇ-ಬ್ಲಾಕ್ ರಾಜಾಜಿನಗರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಕಡಿತವಾಗಲಿದ್ದು, ಇದೇ ರೀತಿಯ ಸ್ಥಗಿತವನ್ನು ಎಚ್‍ಎಂಟಿ ಲೇಔಟ್‍ಗೆ ಬೆಳಗ್ಗೆ 10.30 ರಿಂದ ಸಂಜೆ 6 ರವರೆಗೆ ನಿಗದಿಪಡಿಸಲಾಗಿದೆ.
ತುಮಕೂರು: ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ಬೆಸ್ಕಾಂ ಸಿಬ್ಬಂದಿ ಮೇಲೆ ಗ್ರಾಮಸ್ಥರು ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ವೇಳೆ ಗ್ರಾಮಸ್ಥರು ಏಕಾಏಕಿ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಬೆಸ್ಕಾಂ ಶಾಖಾಧಿಕಾರಿ ರಾಜಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ
ಗ್ರಾಮಸ್ಥರು ಹಾಗೂ ಬೆಸ್ಕಾಂ ಸಿಬ್ಬಂದಿಗಳ ನಡುವೆ ಬಿಲ್ ವಿಚಾರವಾಗಿ ಮೊದಲು ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ಥಳೀಯರು ಬೆಸ್ಕಾಂ ಸಿಬ್ಬಂದಿಗೆ ಅಟ್ಟಾಡಿಸಿ ಕಲ್ಲು, ದೊಣ್ಣೆಗಳಲ್ಲಿ ಹಲ್ಲೆ ನಡೆಸಿದ್ದಾರೆ. ಲೈನ್‍ಮ್ಯಾನ್ ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬುವರ ಮೇಲೆಯೂ ಹಲ್ಲೆ ಮಾಡಲಾಗಿದೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡವರು ಶಿರಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಸ್ಥರು ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಇದೀಗ ವೈರಲ್ ಆಗ ತೊಡಗಿದೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಸಾಲ ಮನ್ನಾ ಮಾಡಿ – ಹೆಚ್‍ಡಿಕೆಗೆ ಪತ್ನಿ ಅನಿತಾ ಸಲಹೆ
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಬೆಸ್ಕಾಂ ಸಹಾಯಕ ಕಾರ್ಯನಿರ್ವಾರ್ಹಕ ಅಧಿಕಾರಿ ಶ್ರೀನಿವಾಸ್ ಮಂತ್ರೋಡಿ ಲಂಚಾವತಾರ ಇದೀಗ ಬಟ ಬಯಲಾಗಿದೆ.
ಎಇಇ ಶ್ರೀನಿವಾಸ್ ಮಂತ್ರೋಡಿಗೆ ಪ್ರತಿ ಫೈಲ್ ಗೆ ಸಹಿ ಹಾಕಬೇಕಂದ್ರೆ ಲಂಚ ನೀಡಬೇಕು. ಲಂಚ ನೀಡದಿದ್ದರೆ ಕೆಲಸವೇ ಆಗಲ್ಲವಂತೆ. ಇನ್ನೂ ಬಹುಮಟ್ಟಡಿ ಕಟ್ಟಡಕ್ಕೆ ವಿದ್ಯುತ್ ಪಡೆಯಬೇಕಾದರೇ ಕೆಲಸವೇ ಇಲ್ಲಿ ಆಗೋದಿಲ್ಲ. ಎಇಇ ಖಾಸಗಿಯಾಗಿ ನೇಮಕಗೊಂಡಿರೋ ಗುತ್ತಿಗೆದಾರರು ಹೋದರೆ ಮಾತ್ರ ಕೆಲಸ ಆಗುತ್ತಂತೆ. ಮುಖ್ಯವಾಗಿ ಪ್ರತಿಯೊಂದು ಫೈಲ್ ಗೂ ಸಹಿಗೆ ಈತ ಇಂತಿಷ್ಟು ಅಂತ ಲಂಚವನ್ನ ನಿಗದಿಪಡಿಸಿರುವ ಆರೋಪ ಕೇಳಿ ಬಂದಿದೆ.
ಅಧಿಕಾರಿಯ ಲಂಚದ ಮೆನು
* 1 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 300 ರೂ.
* 2 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 600 ರೂ.
* 3-4 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 1200 ರೂ.
* ರೈತರ ತೋಟದಲ್ಲಿ ಒಂದು ಕಂಬ ಹಾಕಲು 1,000 ರೂ.
* ಮೂರು ಕಂಬ ಹಾಕಿದ್ರೆ 3 ಸಾವಿರ ರೂ
* 25 ವ್ಯಾಟ್ ಟ್ರಾನ್ಸಫಾರ್ಮಾಗೆ 5 ಸಾವಿರ ರೂ.
* 100 ವ್ಯಾಟ್ ಟ್ರಾನ್ಸಫಾರ್ಮಾಗೆ 15 ಸಾವಿರ ರೂ.
ಹೀಗೆ ಒಂದೊಂದು ಕೆಲಸಕ್ಕೂ ಲಂಚವನ್ನ ನಿಗದಿ ಮಾಡಿದ್ದು, ಹಣ ಕೊಟ್ಟರೆ ಮಾತ್ರ ಆ ಫೈಲ್ ಗಳಿಗೆ ಸೈನ್ ಮಾಡ್ತಾರೆ. 11 ತಿಂಗಳ ಹಿಂದೆ ದೇವನಹಳ್ಳಿ ಎಇಇ ಆಗಿ ನೇಮಕಗೊಂಡ ಶ್ರೀನಿವಾಸ್, ಯಾರೇ ಮನೆಗೆ ಮೀಟರ್ ಸೇರಿದಂತೆ ಟ್ರಾನ್ಸ್ ಪಾರ್ಮ್ ಪಡೆಯಬೇಕಂದ್ರು ಪರಿಶೀಲನೆಗೆ ಅವರ ಹಿಂಬಾಲಕರನ್ನ ಕಳಿಸೋದು. ಮನೆಗಳ ಬಳಿ ಹೋಗುವ ಖಾಸಗಿ ಗುತ್ತಿಗೆದಾರರು ಅದು ಸರಿ ಇಲ್ಲ, ಇದು ಸರಿಯಲ್ಲ ಅಂತಾ ಹೇಳಿ ವಾಪಸ್ ಬರುತ್ತಾರೆ. ಆಗ ಎಇಇ ಬಳಿ ಬಂದು ಹಣವನ್ನ ಕೊಟ್ಟು ಫೈಲ್‍ಗೆ ಸಹಿ ಮಾಡಸಬೇಕು ಎಂಬ ಆರೋಪಗಳಿವೆ.
ವೀಡಿಯೋದಲ್ಲಿ ಏನಿದೆ?:
ಅಧಿಕಾರಿ ಸರ್ಕಾರಿ ಕೆಲಸ ಮಾಡೋದು ಬಿಟ್ಟು, ಗುತ್ತಿಗೆ ಕೆಲಸ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರೋದನ್ನು ರೈತರು ಹಾಗೂ ಕೆಲವರು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಫೈಲ್ ಅಧಿಕಾರಿ ಮುಂದೆ ಇಟ್ಟು, ಲಂಚದ ಹಣ ಪಕ್ಕದ ಡ್ರಾಯರ್ ನಲ್ಲಿ ಹಾಕಬೇಕು. ನಂತರ ಡ್ರಾಯರ್ ನಲ್ಲಿ ಹಣ ಎತ್ತಿಕೊಂಡು ಎಣಿಸಿ, ಜೇಬಿನಲ್ಲಿ ಇಟ್ಟುಕೊಂಡು ಎಇಇ ಸಹಿ ಮಾಡುತ್ತಿರೋ ದೃಶ್ಯಗಳು ಸೆರೆಯಾಗಿದೆ. ಇದನ್ನೂ ಓದಿ: ದುಬಾರಿಯಾದ ಪೆಟ್ರೋಲ್ – ಕಳ್ಳತನಕ್ಕಿಳಿದ ಯುವಕರು
ಹೀಗಾಗಿ ಇಂತಹ ಅಧಿಕಾರಿಯನ್ನ ಕೂಡಲೇ ಅಮಾನತು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ದೇವನಹಳ್ಳಿ ಬೆಸ್ಕಾಂನಲ್ಲಿರೋ ಎಇಇ ಶ್ರೀನಿವಾಸ್ ಮಂತ್ರೋಡಿಯ ಲಂಚವತಾರ ಎಲ್ಲೆಡೆ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಯ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ವಿಜಯಪುರದ ಯೋಧ ಹುತಾತ್ಮ
ಚಿತ್ರದುರ್ಗ: ನೀರಾವರಿ ಪಂಪ್‍ಸೆಟ್‍ಗೆ ಅಕ್ರಮವಾಗಿ ಹಾಕಿಕೊಂಡಿದ್ದ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬೆಸ್ಕಾಂ ಕಚೇರಿ ಬಳಿ ನಡೆದಿದೆ.
ಹಲವು ದಿನಗಳಿಂದ ಶಿವರಾಜ್ ಎನ್ನುವವರು ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ಹಾಕಿಕೊಂಡಿದ್ದರು. ಈ ಬಗ್ಗೆ ಲೈನ್‍ಮ್ಯಾನ್ ಕೇಶವ ಅವರು ಒಂದು ಬಾರಿ ಶಿವರಾಜ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ನಿನ್ನೆ ಆಕಸ್ಮಿಕವಾಗಿ ಲೈನ್ ಮ್ಯಾನ್ ಸ್ಥಳಕ್ಕೆ ಭೇಟಿ ನೀಡಿದ್ದಾಗಲು ಅಕ್ರಮ ಮತ್ತೆ ಮುಂದುವರೆದಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬೆಸ್ಕಾಂ ಕಚೇರಿಗೆ ಸಿಬ್ಬಂದಿ ಹಿಂತಿರುಗಿದ್ದರು.
ಇದರಿಂದಾಗಿ ಆಕ್ರೋಶಗೊಂಡ ಶಿವರಾಜ್ ಹಾಗೂ ಅವರ ಮಕ್ಕಳಾದ ಚೇತನ್ ಮತ್ತು ನಿತನ್ ಬೆಸ್ಕಾಂ ಕಚೇರಿ ಬಳಿ ಬಂದು ದಾಂಧಲೆ ಮಾಡಿದ್ದಾರೆ. ಬೆಸ್ಕಾಂ ಕಚೇರಿ ಮುಂಭಾಗದಲ್ಲೇ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಆಗ ಪರಸ್ಪರ ಸಿಬ್ಬಂದಿಗಳು ಹಾಗೂ ಶಿವರಾಜ್ ಕುಟುಂಬಸ್ತರ ನಡುವೇ ಮಾತಿನ ಚಕಮಕಿ, ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಬಳಿಕ ದಿಢೀರ್ ಎಂದು ಬೈಕ್‍ನಲ್ಲಿದ್ದ ಮಾರಾಕಾಸ್ತ್ರ ತೆಗೆದ ಶಿವರಾಜ್, ಬೆಸ್ಕಾಂ ಸಿಬ್ಬಂದಿಯಾಗಿರುವ ಕೇಶವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಈ ವೇಳೆ ಚಪ್ಪಲಿ ಹಾಗೂ ಕೋಲಿನಿಂದಲೂ ಸಹ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಲೋಪವಾಗಿಲ್ಲ. ಎರಡು ತಿಂಗಳ ಬಿಲ್ ಒಟ್ಟಿಗೆ ಬಂದಿರುವುದರಿಂದ ಗ್ರಾಹಕರಿಗೆ ಹೆಚ್ಚು ಅಂತ ಅನ್ನಿಸುತ್ತಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‍ಗೌಡ ಹೇಳಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅವರು, ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಅಕ್ರಮ ಆಗಿಲ್ಲ. ಗ್ರಾಹಕರಿಂದ ಒಂದೇ ಒಂದು ರೂಪಾಯಿ ಹೆಚ್ಚಾಗಿ ಬೆಸ್ಕಾಂ ತೆಗೆದುಕೊಂಡಿಲ್ಲ. ಕರೆಂಟ್ ಉಪಯೋಗಿಸದಿದ್ದರೂ ಫಿಕ್ಸೆಡ್ ಚಾರ್ಜ್ (ಮಿನಿಮಮ್) ಬಿಲ್ ಬಂದೇ ಬರುತ್ತದೆ. ಅದು ಕೂಡ ನಿಯಮದ ಅನ್ವಯ ಇರುತ್ತದೆ. ಕಂಪನಿಗಳ ವಿಚಾರದಲ್ಲೂ ಫಿಕ್ಸೆಡ್ ಚಾರ್ಜ್ ಬಂದೇ ಬರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್
ಮೀಟರ್ ರೀಡಿಂಗ್ ಅನ್ವಯ ಬಿಲ್ ಬಂದಿದೆ. ಗ್ರಾಹಕರು ಬಳಕೆ ಮಾಡಿದ ಯೂನಿಟ್‍ಗೆ ಬಿಲ್ ಬಂದಿದೆ. ಯೂನಿಟ್ ಬಳಕೆಯಲ್ಲಿ ಮೋಸ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕರೆಂಟ್ ಬಿಲ್ ಬಗ್ಗೆ ಯಾರಿಗಾದರು ಗೊಂದಲವಿದ್ದರೆ ಅವರು 1912 ನಂಬರಿಗೆ ಕರೆ ಮಾಡಿ ಪರಿಹಾರ ಮಾಡಿಕೊಳ್ಳಬಹುದು. ಯಾರಿಗೇ ಸಮಸ್ಯೆ ಇದ್ದರೂ ಅದನ್ನ ಪರಿಹಾರ ಮಾಡುತ್ತೇವೆ ಎಂದರು.
ಬಿಲ್ ಕಟ್ಟಿಲ್ಲ ಅಂದ್ರೆ ಜೂನ್‍ವರೆಗೂ ಯಾರಿಗೂ ಕರೆಂಟ್ ಕಟ್ ಮಾಡಲ್ಲ, ಈವರೆಗೂ ಮಾಡಿಲ್ಲ. ಕರೆಂಟ್ ಬಿಲ್ ಕಟ್ಟುವುಕ್ಕೆ ಬೇಕಾದ್ರೆ 3 ತಿಂಗಳ ಅವಕಾಶ ಕೊಡುತ್ತೇವೆ ಎಂದು ಹೇಳಿದರು.
ಉದ್ಯೋಗಿಗಳು, ಕಟ್ಟಡ, ವಾಹನ ಸಂಚಾರ, ದುರಸ್ತಿ ಸೇರಿದಂತೆ ಅನೇಕ ವಿಚಾರದಲ್ಲಿ ಬೆಸ್ಕಾಂ ಹಣ ವೆಚ್ಚ ಮಾಡುತ್ತದೆ. ಹೀಗಾಗಿ ಗ್ರಾಹಕರಿಂದ ಫಿಕ್ಸೆಡ್ ಚಾರ್ಜ್ ಪಡೆಯಲಾಗುತ್ತದೆ. ಉಳಿದ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಫಿಕ್ಸೆಡ್ ಚಾರ್ಜ್ ಪ್ರಮಾಣ ಅತಿ ಕಡಿಮೆ ಇದೆ ಎಂದು ತಿಳಿಸಿದರು.
ಲಾಕ್‍ಡೌನ್‍ನಿಂದಾಗಿ ಕಳೆದ ತಿಂಗಳು ಮನೆ ಮನೆಗೆ ಹೋಗಿ ಬಿಲ್ ಕೊಡಲು ಸಾಧ್ಯವಾಗಲಿಲ್ಲ. ನಮ್ಮ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಮೇ ನಲ್ಲಿ ಕರೆಂಟ್ ಬಿಲ್ ನೀಡಿದ್ದರಿಂದ ಗ್ರಾಹಕರಿಗೆ ಅದು ದೊಡ್ಡ ಮೊತ್ತವಾಗಿ ಕಾಣಿಸಿದೆ. ಹೀಗಾಗಿ ಇನ್ನುಮುಂದೆ ಗ್ರಾಹಕರ ಮೊಬೈಲ್ ನಂಬರ್ ಇಲ್ಲವೇ ಇಮೇಲ್ ಅಡ್ರೆಸ್ ಪಡೆದು ಆನ್‍ಲೈನ್ ಮೂಲಕ ಬಿಲ್ ನೀಡುವ ಹಾಗೂ ಹಣ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ.
ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.
ವಿದ್ಯುತ್ ನಿಗಮ ಮಾರ್ಚ್, ಏಪ್ರಿಲ್ ಬಿಲ್ ಸೇರಿಸಿ ಬಿಲ್ ಕೊಡುತ್ತಿದೆ. 2 ತಿಂಗಳ ಬಿಲ್ ಅಂದರೆ ಮಾಮೂಲಿನ 2 ಪಟ್ಟು ಅಂತಿದ್ದವರಿಗೆ ಶಾಕ್ ಆಗಿದೆ. 2 ಪಟ್ಟು ಬದಲಿಗೆ ನೂರಾರು ರೂಪಾಯಿ ಹೆಚ್ಚಾಗಿ ಬಿಲ್ ಬಂದಿದೆ. ತಿಂಗಳ ಸರಾಸರಿ ವಿದ್ಯುತ್ ಬಿಲ್ 500 ರೂಪಾಯಿ ಬರುತ್ತಿತ್ತು. ಆದರೆ ಈಗ 700, 800, 1400 ರೂಪಾಯಿವರೆಗೆ ಬಿಲ್ ಬಂದಿದೆ. ಮೀಟರ್ ರೀಡಿಂಗ್ ಮಾಡದೆ ಸರಾಸರಿಯಲ್ಲಿ ಬಿಲ್ ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯುತ್ ನಿಗಮವು ಸಾಫ್ಟ್‌ವೇರ್ ಸಮಸ್ಯೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಹೇಳಿದೆ. ಇತ್ತ ಬಿಲ್ ಲೋಪ-ದೋಷ ಶೀಘ್ರದಲ್ಲೇ ಸರಿಪಡಿಸ್ತೇವೆ ಅಂತ ಅಧಿಕಾರಿಗಳ ಸಬೂಬು ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಕೆಲವರು ಲಾಕ್‍ಡೌನ್ ಆರಂಭದಲ್ಲೇ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾರೆ. ಸುಮಾರು ಒಂದೂವರೆ ತಿಂಗಳು ಕರೆಂಟೇ ಬಳಸಿಲ್ಲ. ಆದರೂ ಅವರಿಗೆಲ್ಲಾ ಡಬಲ್, ತ್ರಿಬಲ್ ಬಿಲ್ ಬಂದುಬಿಟ್ಟಿದೆ.
ಬೆಂಗಳೂರು ಗ್ರಾಹಕ ಕೃಷ್ಣಪ್ಪ ಅವರಿಗೆ ಫೆಬ್ರವರಿನಲ್ಲಿ 2,397 ರೂ. ಬಿಲ್ ಬಂದಿತ್ತು. ಏಪ್ರಿಲ್ ಬಿಲ್ ಬಂದಿಲ್ಲ. ಆದರೂ ಪೇಟಿಎಂ ಮೂಲಕ ಅವರು 2,263 ರೂ. ಕಟ್ಟಿದ್ದಾರೆ. ಈಗ 5,409 ರೂ. ಬಿಲ್ ಬಂದಿದೆ.
ಕರೆಂಟ್ ಶಾಕ್ ಮರ್ಮ:
* ವಿದ್ಯುತ್ ಬಳಕೆ ಸ್ಲ್ಯಾಬ್ ಆಧಾರದಲ್ಲಿ ಬಿಲ್ ಕೊಡ್ತಿವೆ
* ವಿದ್ಯುತ್ ಬಳಕೆ ಆಧರಿಸಿ ಬರುವ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ
* ಉದಾ: ತಿಂಗಳಿಗೆ 30 ಯೂನಿಟ್ ಬಳಕೆಗೆ ಪ್ರತಿ ಯೂನಿಟ್‍ಗೆ 3.75 ರೂ. ಇದ್ದರೆ, 70 ಯೂನಿಟ್‍ವಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 5.20 ರೂಪಾಯಿ
* 100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 6.75 ರೂ.
* 100 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ 7.80 ರೂ. ಇದೆ.
* ಆದರೆ, ಮೀಟರ್ ರೀಡಿಂಗ್ ಸಂದರ್ಭದಲ್ಲಿ 2 ತಿಂಗಳು ಒಟ್ಟಾಗಿ ಬಿಲ್ ಮಾಡ್ತಿದ್ದಾರೆ.
* ಇದೇ ಡಬಲ್, ತ್ರಿಬಲ್ ಬಿಲ್ ಬರ್ತಿರೋದಕ್ಕೆ ಕಾರಣ
* ಕಂಪ್ಯೂಟರ್ ಸಾಫ್ಟ್‍ವೇರ್ ಈ ಬಿಲ್‍ಗಳನ್ನು ಸರಾಸರಿ ಆಧಾರದ ಮೇಲೆ ಜನರೇಟ್ ಮಾಡ್ತಿದೆ.
* ಸ್ಲ್ಯಾಬ್ ವಿಚಾರ ಸಂಬಂಧ ಸಾಫ್ಟ್‍ವೇರ್‍ನಲ್ಲಿ ಗೊಂದಲ ಆಗಿರೋ ಸಾಧ್ಯತೆ ಇದೆ.
ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಶಾಕ್ ಕೊಡಲು ಮುಂದಾಗಿದೆ. ತೆರಿಗೆ ಬಾಕಿದಾರರ ಮನೆಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರು ಮತ್ತು ವಿದ್ಯುತ್ ಕಡಿತಗೊಳ್ಳಲಿದೆ. ಏಕೆಂದರೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಬಿಬಿಎಂಪಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಆಸ್ತಿ ತೆರಿಗೆ ಬಿಬಿಎಂಪಿಗೆ ಪ್ರಮುಖ ಆದಾಯದ ಮೂಲ. ಪ್ರತಿ ವರ್ಷ ನಿಗದಿತ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಯೋಜನೆ ರೂಪಿಸಿದ್ರೂ ನಿರೀಕ್ಷಿತ ತೆರಿಗೆ ಮಾತ್ರ ಖಜಾನೆ ಸೇರುತ್ತಿಲ್ಲ. ಪ್ರಸಕ್ತ ವರ್ಷದಲ್ಲಿ 3500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆಯ ಮುಂದಿದ್ದು, ಇಲ್ಲಿಯವರಗೆ 2400 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಗುರಿ ತಲುಪಲು ಇನ್ನು 1100 ಕೋಟಿ ರೂ. ಸಂಗ್ರಹವಾಗಬೇಕಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಲ್ಲಿ ಬಹುತೇಕರು ಶ್ರೀಮಂತರು ಎನ್ನಲಾಗಿದೆ. ಸಕಾಲಕ್ಕೆ ಬಿಬಿಎಂಪಿಗೆ ಬರಬೇಕಾದ ತೆರಿಗೆ ಸಂಗ್ರಹವಾಗದೇ ಇರುವುದು ಪಾಲಿಕೆಯ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.
ದೊಡ್ಡ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಎಷ್ಟು ಬಾರಿ ನೋಟಿಸ್ ನೀಡಿದರೂ ತೆರಿಗೆ ಕಟ್ಟುವುದಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬೇಸತ್ತಿರೋ ಅಧಿಕಾರಿಗಳು ಮೇಯರ್ ಬಳಿ ವಾಸ್ತವತೆಯನ್ನು ವಿವರಿಸಿ ಕಠಿಣ ಕ್ರಮಕ್ಕೆ ಮುಂದಾಗುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಮೇಯರ್ ಗೌತಮ್ ಕುಮಾರ್ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮನೆಗಳಿಗೆ ನೀರು ಮತ್ತು ಕರೆಂಟ್ ಪೂರೈಸದಂತೆ ಮನವಿ ಮಾಡಿದ್ದಾರೆ. ಇದಕ್ಕೆ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮೊದಲ ಹಂತವಾಗಿ ಪ್ರತಿ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ತಲಾ 20 ಆಸ್ತಿ ಮಾಲೀಕರ ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಸಿದ್ಧತೆ ನಡೆಸಿದೆ. 8 ವಲಯಗಳಿಂದ ಅತೀ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ 160 ಆಸ್ತಿ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದು ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸೋದಾಗಿ ಮೇಯರ್ ಮುಂದಾಗಿದ್ದಾರೆ ಎನ್ನಲಾಗಿದೆ.