Tag: Bescom Staff

  • ವಿದ್ಯುತ್ ಕಂಬವೇರಿ ಕುಡುಕನ ಹೈಡ್ರಾಮಾ – ಬೆಸ್ಕಾಂ ಅಧಿಕಾರಿಗಳಿಗೆ ಆತಂಕ

    ವಿದ್ಯುತ್ ಕಂಬವೇರಿ ಕುಡುಕನ ಹೈಡ್ರಾಮಾ – ಬೆಸ್ಕಾಂ ಅಧಿಕಾರಿಗಳಿಗೆ ಆತಂಕ

    ಚಿಕ್ಕಬಳ್ಳಾಪುರ: ಮದ್ಯವ್ಯಸನಿಯೊಬ್ಬ ವಿದ್ಯುತ್ ಕಂಬವನ್ನು ಏರಿ ನಿಂತು ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ.

    ಉಜ್ಜನಿ ಗ್ರಾಮದ ಸುಮಾರು 45 ವರ್ಷದ ವ್ಯಕ್ತಿ 11ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದ ವಿದ್ಯುತ್ ಕಂಬವನ್ನು ಏರಿ ನಿಂತಿದ್ದನು. ಅದೃಷ್ಟವಶಾತ್ ಇದೇ ರಸ್ತೆಯಲ್ಲಿ ಬಂದ ಬೆಸ್ಕಾಂ ಪವರ್ ಮೆನ್ ಮಂಜುನಾಯಕ್ ಗಮನಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ವಿದ್ಯುತ್ ಪೂರೈಕೆಯನ್ನು ತಕ್ಷಣವೇ ಕಡಿತಗೊಳಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    CHIKKABALLAPURA

    ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ದೌಡಾಯಿಸಿ ಹಲವು ನಿಮಿಷಗಳ ಕಾಲ ಮನವೊಲಿಸಿದ ನಂತರ, ಆತನನ್ನು ವಿದ್ಯುತ್ ಕಂಬದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳೆ, ಗಾಳಿಯಿಂದಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಬಸವಳಿಯುತ್ತಿರುವ ಬೆಸ್ಕಾಂ ಸಿಬ್ಬಂದಿಗೆ ಈ ರೀತಿಯ ಅನಾವಶ್ಯಕ ಘಟನೆ ತಲೆ ಬಿಸಿ ಮಾಡಿದೆ. 11ಕೆವಿ ವಿದ್ಯುತ್ ಪ್ರಸಾರವಾಗುತ್ತಿದ್ದ ತಂತಿಗಳು ಸ್ವಲ್ಪ ತಗುಲಿದ್ದರೂ, ಆತ ಕ್ಷಣ ಮಾತ್ರದಲ್ಲಿಯೇ ಸಾವನಪ್ಪಿರುತ್ತಿದ್ದ ಎಂಬ ಆತಂಕ ಬೆಸ್ಕಾಂ ಅಧಿಕಾರಿಗಳದ್ದಾಗಿತ್ತು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

  • ಪೊಲೀಸರ ಕಾಟಕ್ಕೆ ಬೇಸತ್ತ ಜೆಸ್ಕಾಂ ಸಿಬ್ಬಂದಿ- ಕೆಲಸ ಬಹಿಷ್ಕರಿಸಿ ಪ್ರತಿಭಟನೆ

    ಪೊಲೀಸರ ಕಾಟಕ್ಕೆ ಬೇಸತ್ತ ಜೆಸ್ಕಾಂ ಸಿಬ್ಬಂದಿ- ಕೆಲಸ ಬಹಿಷ್ಕರಿಸಿ ಪ್ರತಿಭಟನೆ

    ಯಾದಗಿರಿ: ಜೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಕಾಟಾಕ್ಕೆ ಬೇಸತ್ತು ನಾವು ಕೆಲಸ ಮಾಡಲ್ಲ ಅಂತ ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇದನ್ನೂ ಓದಿ: ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ

    ಲಾಕ್‍ಡೌನ್ ಆದಾಗಿಂದ ಯಾದಗಿರಿ ಟ್ರಾಫಿಕ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಜೆಸ್ಕಾಂ ಅಧಿಕಾರಿಗಳೆ ಟಾರ್ಗೆಟ್ ಅಂತೆ, ಬೆಸ್ಕಾಂ ಯಾವುದೇ ಸಿಬ್ಬಂದಿ ಅಥವಾ ಕಚೇರಿಯ ವಾಹನ ಕಂಡರೆ ಸಾಕು ಸೀಜ್ ಮಾಡ್ತಾರೆ ಫೈನ್ ಹಾಕ್ತಾರಂತೆ. ಹೀಗಾಗಿ ಜೆಸ್ಕಾಂ ಸಿಬ್ಬಂದಿ ನಾವು ಲಾಕ್‍ಡೌನ್ ಮುಗಿಯೊವರೆಗೂ ಕೆಲಸ ಮಾಡಲ್ಲ, ಪೊಲೀಸರ ಕಾಟ ಸಾಕಾಗಿದೆ ಅಂತ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ

    ಜೆಸ್ಕಾಂ ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆಯೇ ಮೂರ್ನಾಲ್ಕು ಬೈಕ್‍ಗಳನ್ನ ಸೀಜ್ ಮಾಡಿದ್ದಾರೆ. ನಾವು ಜೆಸ್ಕಾಂ ಸಿಬ್ಬಂದಿ ನಮ್ಮನ್ನ ಬಿಡಿ ಅಂದ್ರು ಐಡಿ ಕಾರ್ಡ ತೋರಿಸಿದರೂ ಬೈಕ್ ಸೀಜ್ ಮಾಡಿದ್ದಾರೆ, ಹೀಗಾಗಿ ನಾವು ಕೆಲಸ ಮಾಡಲ್ಲ ಅಂತ ಜೆಸ್ಕಾಂ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

    ಈ ವಿಷಯವನ್ನ ಗಂಭಿರವಾಗಿ ಪರಿಗಣಿಸಿ ಟ್ರಾಫಿಕ್ ಪಿಎಸೈ ಪ್ರದೀಪ್ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಎಸ್ ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ನಾವು ಕೂಡಾ ಸರ್ಕಾರಿ ಸೇವೆ ಮಾಡುವವರು ನಮ್ಮ ಕರ್ತವ್ಯಕ್ಕೆ ಅನುಕೂಲ ಮಾಡಿಕೊಡಬೇಕು, ಅನಗತ್ಯವಾಗಿ ತೊಂದರೆ ಕೊಟ್ಟವರ ಮೇಲೆ ಕ್ರಮ ಆಗಬೇಕು ಅಂತ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

  • ಕಾರ್ಮಿಕ ದಿನಾಚರಣೆ – ಪೌರಕಾರ್ಮಿಕರು, ಬೆಸ್ಕಾಂ ಸಿಬ್ಬಂದಿಗೆ ಪುಷ್ಪವೃಷ್ಟಿ

    ಕಾರ್ಮಿಕ ದಿನಾಚರಣೆ – ಪೌರಕಾರ್ಮಿಕರು, ಬೆಸ್ಕಾಂ ಸಿಬ್ಬಂದಿಗೆ ಪುಷ್ಪವೃಷ್ಟಿ

    ನೆಲಮಂಗಲ: ಕೊರೊನಾ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‍ಡೌನ್‍ನಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಮಸ್ಯೆ ಎದುರಾಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.

    ನೆಲಮಂಗಲ ನಗರದ ಬಸವಣ್ಣ ದೇವರಮಠದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ವಾಮೀಜಿಗಳ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಆಹಾರಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಭಾರತದ ಆರ್ಥಿಕತೆ ಕುಸಿತವಾಗಿದೆ. ಆರ್ಥಿಕತೆಗಿಂತ ಜನರ ಪ್ರಾಣ ಉಳಿಸುವುದು ಮುಖ್ಯವಾಗಿದ್ದು ಮುಂದೆ ಆರ್ಥಿಕತೆ ಚೇತರಿಗೆ ಪಡೆಯಲಿದೆ. ಕೊರೊನಾ ವಾರಿಯರ್ಸ್ ಕಾಯಕದಿಂದ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ ಎಂದರು.

    ಇದೇ ವೇಳೆ ನಗರಸಭೆ ವ್ಯಾಪ್ತಿಯ ಕೂಲಿ ಕಾರ್ಮಿಕರು ಹಾಗೂ ತಾಲೂಕಿನ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು, ಸಂಸದೆ ಶೋಭಾ ಕರಂದ್ಲಾಜೆ ಹೂವಿನ ಹಾರವಾಕುವ ಮೂಲಕ ಪುಷ್ಪವೃಷ್ಟಿ ಮಾಡಿ ಕಾರ್ಮಿಕ ದಿನಾಚರಣೆ ಶುಭಾಶಯ ಕೋರುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಬಸವಣ್ಣ ದೇವರ ಮಠದವತಿಯಿಂದ ಪೌರಕಾರ್ಮಿಕರಿಗೆ ಅಹಾರಕಿಟ್ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಬಸವಲಿಂಗಸ್ವಾಮೀಜಿ, ಎನ್‍ಡಿಎ ಅಧ್ಯಕ್ಷ ಮಲ್ಲಯ್ಯ, ನಗರಸಭೆ ಆರೋಗ್ಯ ನಿರೀಕ್ಷಕ ಬಸವರಾಜು, ಸದಸ್ಯ ಪೂರ್ಣಿಮಾ, ರಾಜಮ್ಮ ಮುಖಂಡರಾದ ಶಾಂತಕುಮಾರ್, ಹಂಚಿಪುರ ಮಂಜುನಾಥ್ ಮತ್ತಿತರರಿದ್ದರು.

  • ವಿಶ್ವಪರಿಸರ ದಿನದಂದೇ ಬೆಸ್ಕಾಂ ಸಿಬ್ಬಂದಿಯಿಂದ ಮರಗಳ ಮಾರಣಹೋಮ

    ವಿಶ್ವಪರಿಸರ ದಿನದಂದೇ ಬೆಸ್ಕಾಂ ಸಿಬ್ಬಂದಿಯಿಂದ ಮರಗಳ ಮಾರಣಹೋಮ

    ಕೋಲಾರ: ಇಂದು ವಿಶ್ವ ಪರಿಸರ ದಿನ. ಎಲ್ಲೆಡೆ ಗಿಡ-ಮರಗಳನ್ನ ನೆಟ್ಟು ಪರಿಸರ ದಿನಾಚರಣೆ ಆಚರಣೆ ಮಾಡುತ್ತಿದ್ದರೆ, ಕೋಲಾರದಲ್ಲಿ ಈ ದಿನದಂತೆ ಬೆಸ್ಕಾಂ ಅಧಿಕಾರಿಗಳು ಮರಗಳ ಮಾರಣ ಹೋಮ ಮಾಡಿರುವ ಘಟನೆ ನಡೆದಿದೆ.

    ಮುಳಬಾಗಿಲು ತಾಲೂಕಿನ ಮೇಲ್‍ತಾಯಲೂರಿನಿಂದ ತಾಯಲೂರಿಗೆ ಇರುವ ರಸ್ತೆ ಬದಿಯಲ್ಲಿರುವ ಮರಗಳನ್ನು ಬೆಸ್ಕಾಂ ಸಿಬ್ಬಂದಿ ನಿರ್ದಾಕ್ಷಣ್ಯವಾಗಿ ಕಡಿದು ಹಾಕಿದ್ದಾರೆ. ಸುಮಾರು ವರ್ಷಗಳಿಂದ ಅರಣ್ಯ ಇಲಾಖೆಯವರು ಬೆಳಸಿದ್ದ ಮರಗಳನ್ನು ವಿದ್ಯುತ್ ತಂತಿಗೆ ತಗುಲುತ್ತವೆ ಎನ್ನುವ ಒಂದೇ ಕಾರಣಕ್ಕೆ ಮರಗಳನ್ನು ಕಡಿದು ಹಾಕಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಬೆಳೆಸಲಾಗಿದ್ದ ಸುಮಾರು 150ಕ್ಕೂ ಹೆಚ್ಚು ಮರಗಳನ್ನು ಈ ರೀತಿ ಕಡಿದು ಹಾಕಲಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಬೆಸ್ಕಾಂನವರು ಸಾಮಾನ್ಯವಾಗಿ ವಿದ್ಯುತ್ ತಂತಿಗಳಿಗೆ ತಾಗುವ ಮರದ ರೆಂಬೆಗಳನ್ನು ಮಾತ್ರ ಕತ್ತರಿಸುತ್ತಾರೆ. ಆದರೆ ಇಲ್ಲಿ ಮರಗಳನ್ನು ಬುಡ ಸಮೇತ ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಯವರು ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

    ಪರಿಸರ ದಿನದ ಆಚರಣೆ:
    ಇತ್ತ ವಿಶ್ವ ಪರಿಸರ ದಿನದ ಅಂಗವಾಗಿ ಕೋಲಾರ ನಗರದ ವಿವಿಧೆಡೆ ಹಲವು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಮೊದಲಿಗೆ ಎರಡನೇ ಅಪರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರದ ಕೋರ್ಟ್ ಆವರಣದಲ್ಲಿ ಗಿಡಕ್ಕೆ ಪೂಜೆ ಮಾಡಿ, ಹತ್ತಾರು ಗಿಡಗಳನ್ನ ನೆಡುವ ಮೂಲಕ ಪರಿಸರ ಜಾಗೃತಿ ಹಾಗೂ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು.

    ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ರೈಲ್ವೇ ನಿಲ್ದಾಣದ ಸಮೀಪ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಿಇಓ ಜಗದೀಶ್, ಎಸ್‍ಪಿ ರೋಹಿಣಿ ಕಟೋಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ನೂರಾರು ಗಿಡಗಳನ್ನ ನೆಡುವ ಮೂಲಕ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಇದೆ ವೇಳೆ ನಗರದ ಹಲವೆಡೆ ವಿವಿಧ ಸಂಘಟನೆಗಳ ಮುಖಂಡರು ಗಿಡಗಳನ್ನ ನೆಟ್ಟು ನಗರ ವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.