Tag: Berlin

  • ಮೊದಲ ಮಗುವಿಗೆ 45 ವರ್ಷ – ಈಗ 66ನೇ ವಯಸ್ಸಿನಲ್ಲಿ 10ನೇ ಮಗು!

    ಮೊದಲ ಮಗುವಿಗೆ 45 ವರ್ಷ – ಈಗ 66ನೇ ವಯಸ್ಸಿನಲ್ಲಿ 10ನೇ ಮಗು!

    ಬರ್ಲಿನ್: 45 ವರ್ಷದ ಹಿಂದೆ ಮೊದಲ ಮಗುವಿಗೆ ಜನ್ಮ ನೀಡಿದ ಜರ್ಮನಿಯ ತಾಯಿಯೊಬ್ಬರು (German Woman) ಈಗ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ.

    ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ಟ್ (Alexandra Hildebrandt) ಬರ್ಲಿನ್‌ನ (Berlin) ಚೆಕ್‌ಪಾಯಿಂಟ್ ಚಾರ್ಲಿಯಲ್ಲಿರುವ ವಾಲ್ ಮ್ಯೂಸಿಯಂನ ಮಾಲೀಕೆ ಹಾಗೂ ನಿರ್ವಾಹಕಿಯಾಗಿ ಕೆಲಸ ಮಾಡುತ್ತಾರೆ. ಇದೇ ಮಾ.19 ರಂದು ಜರ್ಮನ್ ನಗರದ ಚರೈಟ್ ಆಸ್ಪತ್ರೆಯಲ್ಲಿ  (Charite Hospital) ಸಿಸೇರಿಯನ್ ಮೂಲಕ ಫಿಲಿಪ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.13 ಕೆ.ಜಿ ತೂಕ ಹೊಂದಿದ್ದು, ಆರೋಗ್ಯವಾಗಿದೆ.ಇದನ್ನೂ ಓದಿ:ಅಂಬುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ- 50ರ ಬಾಣಂತಿ ತಾಯಿ ಜೊತೆ ಇದ್ದ 22ರ ಮಗ

    70ರ ದಶಕದ ಉತ್ತರಾರ್ಧದಲ್ಲಿ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ಬಳಿಕ ಅವರಿಗೆ 50 ವರ್ಷ ತುಂಬಿದ ನಂತರ ಎಂಟು ಮಕ್ಕಳು ಜನಿಸಿದ್ದು, ಸಿಸೇರಿಯನ್ ಮೂಲಕ ಜನ್ಮ ನೀಡಿದ್ದಾರೆ. ಮೊದಲ ಮಗಳನ್ನು ಸ್ವೆಟ್ಲಾನಾ (46), ಆರ್ಟಿಯೋಮ್ (36), ಅವಳಿ ಮಕ್ಕಳಾದ ಎಲಿಜಬೆತ್ & ಮ್ಯಾಕ್ಸಿಮಿಲಿಯನ್ (12), ಅಲೆಕ್ಸಾಂಡ್ರಾ (10), ಲಿಯೋಪೋಲ್ಡ್ (8), ಅನ್ನಾ (7), ಮಾರಿಯಾ (4) ಹಾಗೂ ಕ್ಯಾಥರೀನಾ (2) ಇತ್ತೀಚಿಗೆ ಜನಿಸಿದ ಮಗುವನ್ನು ಫಿಲಿಪ್ ಎಂದು ತಿಳಿಸಿದ್ದಾರೆ.

    ಈ ಕುರಿತು ಹಿಲ್ಡೆಬ್ರಾಂಡ್ ಅವರು ಮಾತನಾಡಿ, ದೊಡ್ಡ ಕುಟುಂಬವನ್ನು ಬೆಳೆಸುವುದು ಅದ್ಭುತವಾದ ಸಂಗತಿ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಮುಖ್ಯವಾಗಿದೆ. ನಾನು ಯಾವಾಗಲೂ ಆರೋಗ್ಯಕರವಾಗಿರುವುದನ್ನು ತಿನ್ನುತ್ತೇನೆ. ದಿನನಿತ್ಯ ಒಂದು ಗಂಟೆ ಈಜು, ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ. ಧೂಮಪಾನ, ಮದ್ಯಪಾನ ಮಾಡುವುದಿಲ್ಲ ಎಂದು ತಿಳಿಸಿದರು.

    ಇನ್ನೂ ಹಿಲ್ಡೆಬ್ರಾಂಡ್ ಅವರ ಸ್ತ್ರೀರೋಗ ತಜ್ಞ ಡಾ.ವೋಲ್ಫ್ಗ್ಯಾಂಗ್ ಹೆನ್ರಿಚ್ ಮಾತನಾಡಿ, ಉತ್ತಮ ದೈಹಿಕ ರಚನೆ ಮತ್ತು ಮಾನಸಿಕ ಶಕ್ತಿಯಿಂದಾಗಿ ಅವರು ಸರಳವಾಗಿ ಗರ್ಭಧಾರಣೆ ಮಾಡಿಕೊಂಡಿದ್ದಾರೆ. ಅವರು ಇಲ್ಲಿಯವರೆಗೆ ಯಾವುದೇ ರೀತಿಯ ಗರ್ಭನಿರೋಧಕಗಳನ್ನು ಬಳಸದಿರುವುದು ಅವರಿಗೆ ಸಹಾಯಕವಾಗಿದೆ ಎಂದು ಹೇಳಿದರು.

    ವೃದ್ಧಾಪ್ಯದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ಇದೇ ಮೊದಲಲ್ಲ. 2023ರ ನವೆಂಬರ್‌ನಲ್ಲಿ ಉಗಾಂಡಾ ಮೂಲದ ಸಫಿನಾ ನಮಕ್ವಾಯಾ, 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು.ಇದನ್ನೂ ಓದಿ:ಸರ್ಕಾರ ಗಾಳಿಯೊಂದನ್ನ ಬಿಟ್ಟು ಎಲ್ಲಾ ಬೆಲೆ ಏರಿಕೆ ಮಾಡಿದೆ: ವಿಜಯೇಂದ್ರ ಕಿಡಿ

  • ‘ಪುಷ್ಪ 2’ ಶೂಟಿಂಗ್ ಮಧ್ಯ ಬರ್ಲಿನ್ ವಿಮಾನ ಹತ್ತಿದ ಅಲ್ಲು ಅರ್ಜುನ್

    ‘ಪುಷ್ಪ 2’ ಶೂಟಿಂಗ್ ಮಧ್ಯ ಬರ್ಲಿನ್ ವಿಮಾನ ಹತ್ತಿದ ಅಲ್ಲು ಅರ್ಜುನ್

    ಲ್ಲು ಅರ್ಜುನ್ (Allu Arjun) ಸದ್ಯ ಬರ್ಲಿನ್ (Berlin) ವಿಮಾನ ಏರಿದ್ದಾರೆ. ಪುಷ್ಪ 2 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೂ, ಈ ನಡುವೆ ಅವರು ಬರ್ಲಿನ್ ದೇಶಕ್ಕೆ ಹಾರಿದ್ದಾರೆ. ಆಗಸ್ಟ್ 15ಕ್ಕೆ ಪುಷ್ಪ 2 ಸಿನಿಮಾ ರಿಲೀಸ್ ಆಗುತ್ತಿದ್ದರೂ, ಇನ್ನೂ ಶೂಟಿಂಗ್ ಬಾಕಿ ಉಳಿದುಕೊಂಡಿದ್ದರೂ, ಏಕಾಏಕಿ ಅಲ್ಲು ವಿದೇಶಕ್ಕೆ ಹಾರಿದ್ದಕ್ಕೆ ಕಾರಣವಿದೆ.

    ಸದ್ಯ ಬರ್ಲಿನ್ ನಲ್ಲಿ 74ನೇ ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿದೆ. ಚಿತ್ರೋತ್ಸವದಲ್ಲಿ (Chirotsava) ಭಾಗಿ ಆಗುವುದಕ್ಕಾಗಿ ಭಾರತದಿಂದ ಕೆಲ ಕಲಾವಿದರು ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಅಲ್ಲು ಕೂಡ ಒಬ್ಬರು. ಹೈದಾರಾಬಾದ್ ಏರ್ ಪೋರ್ಟ್ ನಿಂದ ಅಲ್ಲು ಪ್ರಯಾಣ ಶುರು ಮಾಡಿದ್ದಾರೆ.

    ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿ ಆಗುವುದು ಪ್ರತಿಷ್ಠಿತ ಗೌರವ. ಆ ಗೌರವ ಸಿಗೋದು ತೀರಾ ಅಪರೂಪ. ಅದರಲ್ಲೂ ಭಾರತದಿಂದ ಅನೇಕರಿಗೆ ಇಂಥದ್ದೊಂದು ಗೌರವ ಪ್ರಾಪ್ತಿಯಾಗಿದೆ. ಈ ಬಾರಿ ಆ ಪಟ್ಟಿಯಲ್ಲಿ ಅಲ್ಲು ಕೂಡ ಇದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.

     

    ಪುಷ್ಪ 2 ಸಿನಿಮಾದ ಮತ್ತಷ್ಟು ದೃಶ್ಯಗಳು ಚಿತ್ರೀಕರಣ ಆಗಬೇಕು. ಐಟಂ ಡಾನ್ಸ್ ಕೂಡ ಶೂಟ್ ಆಗಬೇಕಿದೆಯಂತೆ. ಅದಕ್ಕಾಗಿ ನಾನಾ ಕಲಾವಿದರ ಹೆಸರು ಕೂಡ ಕೇಳಿ ಬಂದಿದೆ. ಅಲ್ಲು ವಾಪಸ್ಸಾದ ನಂತರ ಶೂಟಿಂಗ್ ಮುಂದುವರೆಯಲಿದೆ.

  • ಬಾಕ್ಸಿಂಗ್ ರಿಂಗ್‍ನಲ್ಲಿಯೇ ಹೃದಯಾಘಾತ – ಚಾಂಪಿಯನ್ ಮೂಸಾ ಯಮಕ್ ವಿಧಿವಶ

    ಬಾಕ್ಸಿಂಗ್ ರಿಂಗ್‍ನಲ್ಲಿಯೇ ಹೃದಯಾಘಾತ – ಚಾಂಪಿಯನ್ ಮೂಸಾ ಯಮಕ್ ವಿಧಿವಶ

    ಬರ್ಲಿನ್: ಬಾಕ್ಸಿಂಗ್ ತಾರೆ ಜರ್ಮನಿಯ ಚಾಂಪಿಯನ್ ಮೂಸಾ ಯಮಕ್ ಬಾಕ್ಸಿಂಗ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಯಮಕ್ (38) ಮ್ಯೂನಿಚ್‍ನಲ್ಲಿ ಉಗಾಂಡಾದ ಹಮ್ಝಾ ವಂಡೆರಾ ಅವರೊಂದಿಗೆ ಬಾಕ್ಸಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ರಿಂಗ್‍ನಲ್ಲಿಯೆ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಟರ್ಕಿಯ ಅಧಿಕಾರಿ ಹಸನ್ ತುರಾನ್ ಅವರು, ಯೂರೋಪಿಯನ್ ಹಾಗೂ ಏಷ್ಯಯನ್ ಚಾಂಪಿಯನ್‍ಗಳನ್ನು ಜಯಿಸಿರುವ ಅಲುಕ್ರಾದ ಬಾಕ್ಸರ್ ನಮ್ಮ ದೇಶದ ಹೆಮ್ಮೆಯ ಬಾಕ್ಸರ್‌ನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡು ಬಾರಿ ದು:ಖದಲ್ಲಿದ್ದೇವೆ ಎಂದಿದ್ದಾರೆ.

    ಮೂಸಾ ಯಮಕ್ ಅವರು ಪಂದ್ಯದ 3ನೇ ಸುತ್ತು ಪ್ರಾರಂಭವಾಗುವ ಮುಂಚೆಯೇ ಕುಸಿದು ಬಿದ್ದಿದ್ದಾರೆ. 2ನೇ ಸುತ್ತಿನಲ್ಲಿ ವಂಡೇರಾ ಅವರು ಯಮಕ್‍ಗೆ ದೊಡ್ಡ ಪಂಚ್ ಕೊಟ್ಟಿದ್ದರು. ಯಮಕ್ ಅವರು 3ನೇ ಸುತ್ತಿನಲ್ಲಿ ಮತ್ತೆ ವಾಂಡೆರಾ ಅವರೊಟ್ಟಿಗೆ ಪೈಪೋಟಿಗೆ ನಿಂತರು. ಆದರೆ 3ನೇ ಸುತ್ತು ಆರಂಭವಾಗುವ ಮುಂಚೆಯೇ ಕುಸಿದು ಬಿದ್ದಿದ್ದಾರೆ.

    ಈ ವೇಳೆ ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದಾರೆಂದು ವೈದ್ಯರ ತಂಡ ಘೋಷಣೆ ಮಾಡಿದೆ.

  • 2024 ಮೋದಿ ಒನ್ಸ್‌ಮೋರ್‌ – ಜರ್ಮನಿ ಭಾರತೀಯರಿಂದ ಘೋಷಣೆ

    2024 ಮೋದಿ ಒನ್ಸ್‌ಮೋರ್‌ – ಜರ್ಮನಿ ಭಾರತೀಯರಿಂದ ಘೋಷಣೆ

    ಬರ್ಲಿನ್: ಜರ್ಮನಿಯ ಬರ್ಲಿನ್‌ಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಅವರು ಜರ್ಮನಿಯ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಸಹ-ಅಧ್ಯಕ್ಷತೆಯಲ್ಲಿ ಬರ್ಲಿನ್‌ನಲ್ಲಿ ಕಾರ್ಯಕ್ರಮ ನಡೆಯಿತು.

    ಬರ್ಲಿನ್‌ನ ಮುಖ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಷಣ ಮಾಡಲು ವೇದಿಕೆಗೆ ಬರುತ್ತಿದ್ದಂತೆ ಅಲ್ಲಿ ನೆಲೆಸಿರುವ ಭಾರತೀಯರು `2024 ಒನ್ಸ್ಮೋರ್ ಮೋದಿ’ (2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು) ಎಂದು ಜಯಘೋಷ ಕೂಗಿದರು. ಇದನ್ನೂ ಓದಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ: ಹರಿಯಾಣ ಶಾಸಕ ಅಸೀಮ್‌ ಪ್ರತಿಜ್ಞೆ

    NARENDRA MODI (2)

    ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮೆಲ್ಲರನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಯುವಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇನ್ನಷ್ಟು ಖುಷಿ ನೀಡಿದೆ ಎಂದರು.

    ಈ ಹಿಂದೆ ವಿದೇಶಿಯರ ಆಳ್ವಿಕೆಯಿಂದ ದೇಶ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿತ್ತು. ಇಂದು ಅಭಿವೃದ್ಧಿಯ ಆದಿಯಲ್ಲಿ ಮುನ್ನಡೆಯುತ್ತಿದೆ. ದೇಶದ ಸಂಪನ್ಮೂಲದಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ ಎಂದೂ ಅವರು ಹೇಳಿದರು. ಇದನ್ನೂ ಓದಿ: ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

    ಮುಂದುವರಿದು, ಯಾವುದೇ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಇಂದು ಭಾರತದಲ್ಲಿ ಜೀವನ ಗುಣಮಟ್ಟ, ಶಿಕ್ಷಣದ ಗುಣಮಟ್ಟ ಸೇರಿದಂತೆ ಎಲ್ಲ ಕ್ಷೇತ್ರಗಳೂ ಮುನ್ನಡೆಯುತ್ತಿವೆ. ಅಧಿಕಾರ ಶಾಹಿಯಾಗಿದ್ದ ಕಚೇರಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿವೆ. ಸರ್ಕಾರ ತನ್ನ ಸುಧಾರಣೆಗಳ ಮೂಲಕ ದೇಶವನ್ನು ಪರಿವರ್ತಿಸುತ್ತಿದೆ ಎಂದು ತಿಳಿಸಿದರು.

    NARENDRA MODI (3)

    ಡಿಜಿಟಲ್ ಕ್ಷೇತ್ರದ ಬಗ್ಗೆ ರಾಜಕೀಯ ಇಚ್ಚಾಶಕ್ತಿಯಿದೆ. 2021ರಲ್ಲಿ ಪ್ರಪಂಚದಾದ್ಯಂತ ನಡೆದ ನೈಜ ಪಾವತಿಗಳಲ್ಲಿ ಶೇ.40 ರಷ್ಟು ಭಾರತದಲ್ಲೇ ನಡೆದಿದೆ. ಇದು ಡಿಜಿಟಲ್ ಇಂಡಿಯಾದ ಪೂರಕ ಬೆಳವಣಿಗೆ ಎಂದರು.

    ರೈತರ ಪರಿಹಾಧನ, ವಿದ್ಯಾರ್ಥಿವೇತನ ಇತರ ಸರ್ಕಾರದ ನೆರವುಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 10 ಸಾವಿರ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುತ್ತಿದೆ. ಹಾಗಾಗಿ ಯಾರಿಗೂ ವಂಚನೆಯಾಗುವುದಿಲ್ಲ. ಇನ್ನು ಮುಂದೆ `ನಾನು ದೆಹಲಿಯಿಂದ 1 ರೂ. ಕಳುಹಿಸಿದರೆ, ಜನರಿಗೆ 15 ಪೈಸೆ ಮಾತ್ರ ತಲುಪುತ್ತದೆ’ ಎಂದು ಯಾವ ಪ್ರಧಾನಿಯೂ ಹೇಳಬೇಕಾಗಿಲ್ಲ’ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು. ಇದನ್ನೂ ಓದಿ: ಜಹಾಂಗೀರ್‌ಪುರಿ ಹಿಂಸಾಚಾರ – ಆರೋಪಿಗಳನ್ನು ಮುಗ್ದರೆಂದ ಜಮಿಯತ್ ನಿಯೋಗ

    NARENDRA MODI (3) (1)

    ಭಾರತ ಕಳೆದ 3 ದಶಕಗಳಿಂದ ರಾಜಕೀಯ ಅಸ್ಥಿರ ವಾತಾವರಣ ಕಂಡಿತ್ತು. 30 ವರ್ಷಗಳ ನಂತರ 2014 ರಲ್ಲಿ ಪೂರ್ಣ ಬಹುಮತದ ಸರ್ಕಾರ ಸ್ಥಾಪಿತವಾದ ಮೇಲೆ 2019ರಿಂದ ಸರ್ಕಾರವನ್ನು ಬಲಪಡಿಸಲಾಗಿದೆ. ನಾವಿಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಜನಿಸಿದ ಮೊದಲ ಪ್ರಧಾನಿ ನಾನು. 100 ವರ್ಷಗಳ ಸ್ವಾತಂತ್ರ‍್ಯವನ್ನು ಆಚರಿಸುವ ಗುರಿಯತ್ತ ವೇಗವಾಗಿ ಹೆಜ್ಜೆ ಇಡುತ್ತಿದೆ ಭಾರತ ಎಂದು ಹೇಳಿದರು.

  • ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರೂ ಗೆದ್ದಿಲ್ಲ: ಮೋದಿ

    ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರೂ ಗೆದ್ದಿಲ್ಲ: ಮೋದಿ

    ಬರ್ಲಿನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಯಾರೂ ಕೂಡ ಗೆದ್ದಿಲ್ಲ. ಯುದ್ಧವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬರ್ಲಿನ್‍ನಲ್ಲಿ ತಿಳಿಸಿದ್ದಾರೆ.

    ಈ ಯುದ್ಧದಲ್ಲಿ ಯಾರು ವಿಜೇತರಾಗಿರುವುದಿಲ್ಲ ಮತ್ತು ಇದರಿಂದಾಗಿ ಎಲ್ಲರೂ ನಷ್ಟವನ್ನು ಅನುಭವಿಸಿರುತ್ತಾರೆ. ಆದ್ದರಿಂದ ನಾವು ಶಾಂತಿ ಪರವಾಗಿದ್ದೇವೆ ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ಸಭೆಯ ನಂತರ ಹೇಳಿದ್ದಾರೆ.

    ಉಕ್ರೇನ್ ಸಂಘರ್ಷದಿಂದಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿವೆ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯಾಗುತ್ತಿದೆ. ಇದು ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಬೆಳವಣಿಗೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಇಂದು ಕಂಠೀರವದಲ್ಲಿ ಖೇಲೋ ಇಂಡಿಯಾಗೆ ತೆರೆ – ಬೆಂಗಳೂರಿಗರೇ ಪರ್ಯಾಯ ಮಾರ್ಗ ಬಳಸಿ

    60ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮೋದಿ ಅವರು ಕಳವಳ ವ್ಯಕ್ತಪಡಿಸಿದರು. ಫೆಬ್ರವರಿ 24ರಂದು ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಆರಂಭಿಸಿದ್ದರಿಂದ ಸಾವಿರಾರು ನಾಗರಿಕರು ಸಾವನ್ನಪ್ಪಿದರು ಮತ್ತು ಲಕ್ಷಾಂತರ ಮಂದಿ ಸ್ಥಳಾಂತರಗೊಂಡರು. ಉಕ್ರೇನ್‍ನಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭವಾದಗಲಿಂದಲೂ, ನಾವು ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದ್ದೆವು. ವಿವಾದವನ್ನು ಪರಿಹರಿಸಲು ಮಾತುಕತೆಯೇ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

    ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ಮೂರು ದಿನಗಳ ಕಾಲ 3 ವಿದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರ ಆಮಂತ್ರಣದ ಮೇರೆಗೆ ಮೋದಿ ಮೇ. 2 ರಂದು ಬರ್ಲಿನ್‍ಗೆ ಭೇಟಿ ನೀಡಿದ್ದಾರೆ. ಅಲ್ಲಿ 6 ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಯಲ್ಲಿ ಮೋದಿ ಸಹ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಅಲ್ಲದೇ ವಾಣಿಜ್ಯ ದುಂಡುಮೇಜಿನ ಸಭೆಯಲ್ಲಿ ಕೈಗಾರಿಕಾ ಸಹಕಾರದ ಮೂಲಕ ಕೋವಿಡ್ ನಂತರದ ಸಮಯದಲ್ಲಿ ಉಭಯ ದೇಶಗಳ ಆರ್ಥಿಕತೆಯ ಪುನಶ್ಚೇತನದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಿದ್ದಾರೆ.

  • WFH ವೇಳೆ ಮೂಳೆ ಮುರಿತ – ಕೊನೆಗೂ ಕೋರ್ಟ್ ಮೊರೆ ಹೋಗಿ ವಿಮೆ ಪಡೆದ ಉದ್ಯೋಗಿ

    WFH ವೇಳೆ ಮೂಳೆ ಮುರಿತ – ಕೊನೆಗೂ ಕೋರ್ಟ್ ಮೊರೆ ಹೋಗಿ ವಿಮೆ ಪಡೆದ ಉದ್ಯೋಗಿ

    – ಉದ್ಯೋಗಿ ಕೆಲಸಕ್ಕೆ ಹೋಗುವಾಗ ಅಪಘಾತ ನಡೆದಿಲ್ಲ
    – ಹಾಸಿಗೆಯಿದ್ದ ಜಾರಿಬಿದ್ದಿದ್ದಕ್ಕೆ ವಿಮೆ ಕೊಡಲು ಸಾಧ್ಯವಿಲ್ಲ ಎಂದಿದ್ದ ಕಂಪನಿ
    – ವಿಮಾ ಕಂಪನಿಯ ವಾದ ತಿರಸ್ಕರಿಸಿದ ಕೋರ್ಟ್

    ಬರ್ಲಿನ್: ವರ್ಕ್ ಫ್ರಮ್ ಹೋಮ್( work from home) ಮೂಲಕ ಕೆಲಸ ಮಾಡುತ್ತಿದ್ದಾಗ ಬೆನ್ನು ಮೂಳೆ ಮುರಿದುಕೊಂಡ ಉದ್ಯೋಗಿಗೆ ವಿಮೆ ನೀಡಬೇಕೆಂದು ಜರ್ಮನಿ ಕೋರ್ಟ್ ಮಹತ್ವದ ಆದೇಶ ನೀಡಿದೆ.

    ಕೆಲಸ ಮಾಡುತ್ತಿದ್ದಾಗ ಅಚಾನಕ್ಕಾಗಿ ಕೆಳಗೆ ಬಿದ್ದು, ಬೆನ್ನು ಮೂಳೆ ಮುರಿದುಕೊಂಡ ಉದ್ಯೋಗಿಯು ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ ಕೋರ್ಟ್ ಖಡಕ್ ಸೂಚನೆಯನ್ನು ನೀಡಿ ಪರಿಹಾರ ನೀಡುವಂತೆ ಆದೇಶಿಸಿದೆ. ಇದನ್ನೂ ಓದಿ: ಆಸ್ಪತ್ರೆಗೆ ಕರೆದುಕೊಂಡುವ ಹೋಗುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

    ನಡೆದಿದ್ದೇನು?
    ಕೋವಿಡ್ ಲಾಕ್ ಡೌನ್ ಸಮಯದಲ್ಲಿ ವರ್ಕ್ ಫ್ರಮ್ ಹೋಮ್‍ನಲ್ಲಿದ್ದ ಉದ್ಯೋಗಿಯೊಬ್ಬರು ಹಾಸಿಗೆಯಿಂದ ಎದ್ದು ಕಂಪ್ಯೂಟರ್ ಇರುವ ಮೇಜಿನ ಬಳಿಗೆ ಹೋಗುವಾಗ ಜಾರಿ ಬಿದ್ದಿದ್ದರು. ಇದರಿಂದ ಉದ್ಯೋಗಿಯ ಬೆನ್ನುಹುರಿ ಮುರಿದಿತ್ತು. ಉದ್ಯೋಗಿ ಕೆಲಸಕ್ಕೆ ಹೋಗುವಾಗ ಅಪಘಾತ ನಡೆದಿಲ್ಲ ಎಂಬ ಕಾರಣವನ್ನು ನೀಡಿ ವಿಮಾ ಕಂಪನಿ ಪರಿಹಾರ ನೀಡಲು ನಿರಾಕರಿಸಿತ್ತು. ಇದನ್ನೂ ಓದಿ:  ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ವಿಮಾ ಕಂಪನಿಯ ನಿರ್ಧಾರದಿಂದ ಬೇಸತ್ತಿದ್ದ ಉದ್ಯೋಗಿ ಕೋರ್ಟ್‍ನಲ್ಲಿ ಪ್ರಶ್ನೆ ಮಾಡಿದ್ದರು. ಆದರೆ ಜರ್ಮನಿಯ ಎರಡು ಕೆಳಹಂತದ ನ್ಯಾಯಾಲಯಗಳು ಉದ್ಯೋಗಿಯ ಹಕ್ಕನ್ನು ತಿರಸ್ಕರಿಸಿದ್ದವು. ಆದರೆ ಈಗ ಸಾಮಾಜಿಕ ಭದ್ರತಾ ವ್ಯವಹಾರಗಳ ಫೆಡರಲ್ ನ್ಯಾಯಾಲಯವು ಉದ್ಯೋಗಿಯ ಪರವಾಗಿ ತೀರ್ಪು ನೀಡಿರುವುದರಿಂದ ಈಗ ವಿಶ್ವದೆಲ್ಲಡೆ ಸುದ್ದಿಯಾಗಿದೆ. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    ಕೋರ್ಟ್ ಹೇಳಿದ್ದೇನು?
    ಫೆಡರಲ್ ನ್ಯಾಯಾಲಯದ ಪ್ರಕಾರ, ವರ್ಕ್ ಫ್ರಮ್ ವೇಳೆ ಹಾಸಿಗೆಯಿಂದ ಕೆಲಸಕ್ಕೆ ಹೋಗುವುದನ್ನು ವಿಮೆಯ ವ್ಯಾಪ್ತಿಯೊಳಗೆ ಬರಲಿದೆ. ಕೆಲಸದ ವೇಳೆ ಉದ್ಯೋಗಿ ಹಾಸಿಗೆಯಿಂದ ಉಪಾಹಾರ ಸೇವಿಸದೇ ಟೇಬಲ್ ಮೇಲಿದ್ದ ಕಂಪ್ಯೂಟರ್ ಕಡೆಗೆ ಹೋಗುತ್ತಿದ್ದಾಗ ಉದ್ಯೋಗಿ ಗಾಯಗೊಂಡಿದ್ದಾನೆ. ಆದ್ದರಿಂದ ವಿಮೆ ಕಂಪನಿ ಉದ್ಯೋಗಿಗೆ ಪರಿಹಾರ ಪಾವತಿಸಬೇಕೆಂದು ತೀರ್ಪು ನೀಡಿದೆ. ಇದನ್ನೂ ಓದಿ: ಪಾಕ್‍ನೊಂದಿಗೆ ಮಾತುಕತೆ ಇಲ್ಲದೇ ಉಗ್ರವಾದ ಅಂತ್ಯ ಅಸಾಧ್ಯವಾಗಿದೆ: ಫಾರೂಕ್ ಅಬ್ದುಲ್ಲಾ

    ಜರ್ಮನ್ ಫೆಡರಲ್ ಕೋರ್ಟ್ ಉದ್ಯೋಗಿಯ ಪರವಾಗಿ ತೀರ್ಪು ನೀಡುವಾಗ, ಉದ್ಯೋಗಿ ಕೆಲಸ ಮಾಡುವ ಸ್ಥಳದಲ್ಲಿ ಟೆಲಿವರ್ಕಿಂಗ್ಅನ್ನು ಸಹ ಕಚೇರಿಯ ಎಂದು ಪರಿಗಣಿಸಲಾಗುತ್ತದೆ. ಟೆಲಿವರ್ಕಿಂಗ್ ಅಂದರೆ ಮನೆಯಿಂದ ಕೆಲಸ ಮಾಡುವುದಕ್ಕೆ ಕಂಪನಿ ನೀಡಿದ ಒಪ್ಪಿಗೆಯಾಗಿರುತ್ತದೆ. ಈ ವೇಳೆ ನಡೆದ ಈ ಘಟನೆಯ ಅಪಘಾತದ ವ್ಯಾಪ್ತಿಯಲ್ಲೇ ಬರುತ್ತದೆ. ಹೀಗಾಗಿ ಉದ್ಯೋಗಿ ವಿಮಾ ಪ್ರಯೋಜನವನ್ನು ಪಡೆಯಬೇಕು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

  • ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆ ಮಾಡಿದ ವಿಜ್ಞಾನಿಗಳು

    ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆ ಮಾಡಿದ ವಿಜ್ಞಾನಿಗಳು

    ಬರ್ಲಿನ್: ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆಯಾಗಿದೆ. ಮಾನವನ ಬೆರಳ ತುದಿಯಲ್ಲಿ ಕೂರುವಷ್ಟು ಚಿಕ್ಕದಾದ ಹೊಸ ಪ್ರಭೇದದ ಗೋಸುಂಬೆ (ಊಸರವಳ್ಳಿ)ಯನ್ನು ಮಡಗಾಸ್ಕರ್ ಮತ್ತು ಜರ್ಮನಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

    ವಿಶ್ವದ ಅತಿ ಚಿಕ್ಕದಾದ ಸರೀಸೃಪಗಳಿಗೆ ಸ್ಪರ್ಧೆ ನೀಡುವಂತಿದೆ ಊಸರವಳ್ಳಿಯಾಗಿದೆ. ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಹೊಸ ಪ್ರಬೇಧವನ್ನು ವರ್ಗೀಕರಿಸಿ, ಅದಕ್ಕೆ ಬ್ರುಕೇಶಿಯಾ ನಾನಾ ಎಂದು ಹೆಸರಿಟ್ಟಿದ್ದು, ಈ ಊಸರವಳ್ಳಿ ಫೋಟೋ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಜ್ಞಾನಿ ಫ್ರಾಂಕ್ ಗ್ಲಾವ್ ಹೇಳುವ ಪ್ರಕಾರ ಗಂಡು ಮಾದರಿಯ ಹೊಸ ಪ್ರಭೇದದ ದೇಹವು ಕೇವಲ 13.5 ಮಿಲಿಮೀಟರ್ ಉದ್ದವಿದೆ (1/2 ಇಂಚಿಗಿಂತ ಸ್ವಲ್ಪ ಹೆಚ್ಚು) ಇದೆ. ಈ ಹಿಂದೆ ಪತ್ತೆಯಾಗಿ ದಾಖಲೆಯನ್ನು ಸೃಷ್ಟಿಸಿದ್ದ, ಬ್ರೂಕೆಸಿಯಾ ಕುಟುಂಬದ ಮತ್ತೊಂದು ತಳಿಯ ಅಳತೆಗಿಂತ ಇದು ಕನಿಷ್ಠ 1.5 ಮಿ.ಮೀ ಚಿಕ್ಕದಾಗಿದೆ ಎಂದು ಅವರು ಹೇಳಿದ್ದಾರೆ.

    ಇಲ್ಲಿನ ಮ್ಯೂಸಿಕ್‍ನಲ್ಲಿರುವ ಬವೇರಿಯನ್ ರಾಜ್ಯ ಪ್ರಾಣಿಶಾಸ್ತ್ರ ಸಂಗ್ರಹಾಲಯದ ಸರೀಸೃಪಗಳ ತಜ್ಞ ಫ್ರಾಂಕ್ ಗ್ಲಾವ್, 2012 ರಲ್ಲಿ ಸ್ಥಳೀಯ ಮಾರ್ಗದರ್ಶಿಯೊಬ್ಬ ಪರ್ವತದ ಪಕ್ಕದಲ್ಲಿ ಚಿಕ್ಕದಾದ ಗಂಡು ಮತ್ತು ಸ್ವಲ್ಪ ದೊಡ್ಡದಾದ ಹೆಣ್ಣು ಜಾತಿಯ ಗೋಸುಂಬೆಯನ್ನು ಪತ್ತೆ ಮಾಡಿದ್ದರು. ಇಂಥ ಚಿಕ್ಕದಾದ ಗೋಸುಂಬೆ ಪ್ರಭೇದಗಳನ್ನು ಹುಡುಕಬೇಕೆಂದರೆ, ನಿಮ್ಮ ಮೊಣಕಾಲುಗಳನ್ನು ನೆಲಕ್ಕೆ ಒತ್ತಿ ಕುಳಿತು, ಸಣ್ಣ ಕಣ್ಣುಗಳನ್ನು ಮಾಡಿಕೊಂಡು ಅತ್ಯಂತ ಸೂಕ್ಷ್ಮವಾಗಿ ಹುಡುಕಬೇಕು. ಅವು ಅಷ್ಟು ಸಣ್ಣದಾದ ಪ್ರಭೇದಗಳು ಎಂದು ಫ್ರಾಂಕ್ ತಿಳಿಸಿದ್ದಾರೆ.

  • ‘ಬಳಕೆಯಾದ ಪತಿ’- ಗಂಡನನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಪತ್ನಿ

    ‘ಬಳಕೆಯಾದ ಪತಿ’- ಗಂಡನನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಪತ್ನಿ

    ಬರ್ಲಿನ್: ಆನ್‍ಲೈನ್ ನಲ್ಲಿ ಸಾಮಾನ್ಯವಾಗಿ ಹಳೆ ವಸ್ತುಗಳನ್ನು ಮಾರಾಟ ಮತ್ತು ಖರೀದಿ ಮಾಡುತ್ತಾರೆ. ಆದರೆ ಜರ್ಮನಿಯ ಮಹಿಳೆಯೊಬ್ಬಳು ಆನ್‍ಲೈನ್ ನಲ್ಲಿ ತನ್ನ ಪತ್ನಿಯನ್ನೇ ಮಾರಾಟಕ್ಕಿದ್ದ ಘಟನೆಯೊಂದು ನಡೆದಿದೆ.

    ಈ ಘಟನೆ ಹ್ಯಾಂಬರ್ಗ್ ನ ಜರ್ಮನಿಯಲ್ಲಿ ನಡೆದಿದ್ದು, 40 ವರ್ಷದ ಡೋರ್ಟೆ ಎಲ್ ಮದುವೆಯಾಗಿ ಏಳು ವರ್ಷ ಸಂಸಾರ ಮಾಡಿದ್ದ ಪತಿಯನ್ನೇ ಮಾರಾಟಕ್ಕಿಟ್ಟಿದ್ದಾಳೆ. ಈಕೆ ವೆಬ್ ಸೈಟ್ ಒಂದರಲ್ಲಿ ಪತಿಯನ್ನು ಮಾರಾಟ ಮಾಡುವ ಬಗ್ಗೆ ಪೋಸ್ಟ್ ಬರೆದು ಹಾಕಿದ್ದಾಳೆ. ಕ್ರಿಸ್‍ಮಸ್ ನ ಮೊದಲ ಎರಡು ದಿನದಿಂದ ನಾವು ಜೊತೆಯಾಗಿಲ್ಲ. ನಾನು ನನ್ನ ಪತಿಯನ್ನೇ ಬಿಟ್ಟು ಕೊಡಲು ಬಯಸುತ್ತೇನೆ. ಬೆಲೆಯ ಬಗ್ಗೆ ಮಾತನಾಡಲು ಸಂಪರ್ಕಿಸಿ ಎಂದು ಇ-ಮೇಲ್ ಮಾಡಿದ್ದಾಳೆ.

    ಪೋಸ್ಟ್ ನಲ್ಲೇನಿದೆ..?
    “ಆಸಕ್ತಿ ಹೊಂದಿರುವ ಮಹಿಳೆಯರಿಗಾಗಿ, ನಾನು ನನ್ನ ಪತಿಯಿಂದ ಬೇಸತ್ತು, ಅವರನ್ನು ಬಿಡಲು ನಿರ್ಧಾರ ಮಾಡಿದ್ದೇನೆ ಎಂದು ಮಹಿಳೆ ತನ್ನ ಪತಿಗೆ 1,439 ರೂ. ಗೆ ಬೆಲೆ ನಿಗದಿ ಮಾಡಿದ್ದಾಳೆ. ಬೆಲೆಯಲ್ಲಿ ಹೆಚ್ಚು- ಕಡಿಮೆ ಮಾಡಿಕೊಳ್ಳಲು ನನಗೆ ಸಂತೋಷವಿದೆ. ಆದರೆ ಇದರಲ್ಲಿ ವಿನಿಮಯ ಇಲ್ಲ. ದಯವಿಟ್ಟು ಇ-ಮೇಲ್ ಮೂಲಕ ವಿಚಾರಣೆ ಮಾಡಿ” ಎಂದು ಬರೆದಿದ್ದಾಳೆ. ಜೊತೆಗೆ ‘ಬಳಕೆಯಾದ ಪತಿ’ ಎಂಬ ತಲೆಬರೆಹ ಕೊಟ್ಟು ಅವರ ಫೋಟೋ ಮತ್ತು ಕ್ರಿಸ್‍ಮಸ್ ಟ್ರೀ ಹಾಕಿದ್ದಾಳೆ.

    ಎಲ್ಲರೂ ಈ ಜಾಹೀರಾತನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ನನಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ನಗುವ ಎಮೋಜಿಯನ್ನು ಕಳುಹಿಸುತ್ತಿದ್ದಾರೆ. ನಾನು ಇನ್ನೂ ಈ ಬಗ್ಗೆ ಮುಚ್ಚಿಡಲು ಇಷ್ಟಪಡುವುದಿಲ್ಲ. ನಾನು ಇದನ್ನು ಕೇವಲ ಮನೋರಂಜನೆಗಾಗಿ ಮಾಡಿದ್ದೆ ಎಂದು ಮಹಿಳೆ ಹೇಳಿದ್ದಾಳೆ.

    ಅಚ್ಚರಿ ಎಂದರೆ ಆಕೆಯ ಪತಿಗೆ ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ಜಾಹೀರಾತನ್ನು ನೋಡುವವರೆಗೂ ತಿಳಿದಿರಲಿಲ್ಲ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

    ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

    ಬರ್ಲಿನ್: ಸೆಕ್ಸ್ ಮಾಡುವ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸ್ ಅಧಿಕಾರಿಯೊರ್ವ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

    ಈ ಕುರಿತು ಪೊಲೀಸ್ ಅಧಿಕಾರಿಯ ಗೆಳತಿ ದೂರು ನೀಡಿದ್ದು, ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ 8 ತಿಂಗಳು ಜೈಲು ಶಿಕ್ಷೆ ಹಾಗೂ 3 ಸಾವಿರ ಯುರೋ(ಅಂದಾಜು 2.39 ಲಕ್ಷ ರೂ.) ದಂಡವನ್ನು ವಿಧಿಸಿದೆ. ಅಲ್ಲದೇ 96 ಯುರೋಗಳನ್ನು(ಅಂದಾಜು 7500 ರೂ.)ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.

    ಜರ್ಮನಿಯಲ್ಲಿ ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇಂತಹದ್ದೇ 2 ಪ್ರಕರಣಗಳು ಈ ಹಿಂದೆ ಸ್ವಿಜರ್ಲೆಂಡ್ ಹಾಗೂ ಕೆನಡಾದಲ್ಲಿ ವರದಿಯಾಗಿತ್ತು. ಇವುಗಳನ್ನು ರೇಪ್ ಹಾಗೂ ಲೈಂಗಿಕ ಕಿರುಕುಳ ಆರೋಪದ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಯುವತಿ ಕಾಂಡೋಮ್ ಬಳಕೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದಳು. ಈ ವೇಳೆ ಯುವತಿಗೆ ತಿಳಿಯದಂತೆ ಆತ ಕಾಂಡೋಮ್ ಬಿಚ್ಚಿಟ್ಟು ಲೈಂಗಿಕ ಕ್ರಿಯೆಗೆ ಮುಂದಾಗಿದ್ದ. ಇದನ್ನು ತಿಳಿದ ಯುವತಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 186.5 ಕೋಟಿ ವೆಚ್ಚದಲ್ಲಿ ತಯಾರಾಯ್ತು ಕ್ರಿಸ್ಮಸ್ ಟ್ರೀ!

    ಬರೋಬ್ಬರಿ 186.5 ಕೋಟಿ ವೆಚ್ಚದಲ್ಲಿ ತಯಾರಾಯ್ತು ಕ್ರಿಸ್ಮಸ್ ಟ್ರೀ!

    ಬರ್ಲಿನ್: ಜರ್ಮನ್‍ನ ಚಿನ್ನದ ವ್ಯಾಪಾರ ನಡೆಸುವ ಪ್ರೋ ಔರಮ್ ಕಂಪನಿಯು ಬರೋಬ್ಬರಿ ಚಿನ್ನದ ನಾಣ್ಯಗಳನ್ನು ಬಳಸಿ 186.5 ಕೋಟಿ ರೂ ವೆಚ್ಚದಲ್ಲಿ ಕ್ರಿಸ್ಮಸ್ ಟ್ರೀಯೊಂದನ್ನು ನಿರ್ಮಿಸಿದೆ.

    ಯುರೋಪ್ ಖಂಡದಲ್ಲಿಯೇ ಇಷ್ಟೊಂದು ದುಬಾರಿ ವೆಚ್ಚದ ಕ್ರಿಸ್ಮಸ್ ಟ್ರೀ ಈವರೆಗೂ ತಯಾರಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸುಮಾರು 186.5 ಕೋಟಿ ರೂ. (2.3 ಮಿಲಿಯನ್ ಯುರೋ) ವೆಚ್ಚದಲ್ಲಿ, 63 ಕೆ.ಜಿಯ ಶುದ್ದ ಚಿನ್ನದಲ್ಲಿ ತಯಾರಿಸಿದ 2,018 ಚಿನ್ನದ ನಾಣ್ಯಗಳನ್ನು ಬಳಸಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲದೆ ಕ್ರಿಸ್ಮಸ್ ಟ್ರೀಯ ತುದಿಯಲ್ಲಿ ಇಟ್ಟಿರುವ ನಕ್ಷತ್ರ ಆಕಾರದ ಚಿನ್ನದ ನಾಣ್ಯವೊಂದಕ್ಕೆ ಸುಮಾರು 17 ಲಕ್ಷ ರೂ. (21,000 ಯುರೋ) ಖರ್ಚಾಗಿದೆ

    ಈ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀ ಪಿರಾಮಿಡ್ ಆಕಾರದಲ್ಲಿದ್ದು, ಟ್ರೀ ತುದಿಯಲ್ಲಿ ಒಂದು ಚಿನ್ನದ ನಕ್ಷತ್ರವನ್ನು ಕೂಡ ಇರಿಸಲಾಗಿದೆ. ಯುರೋಪ್‍ನಲ್ಲಿಯೇ ಅತೀ ದುಬಾರಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಿದ ಹೆಗ್ಗಳಿಕೆಗೆ ಪ್ರೋ ಔರಮ್ ಕಂಪನಿ ಪಾತ್ರವಾಗಿದೆ.

    ಪ್ರೋ ಔರಮ್ ಕಂಪನಿಯ ಸಿಬ್ಬಂದಿ ಬೆಂಜಮಿನ್ ಸುಮ್ಮ ಮಾತನಾಡಿ, ಇತ್ತಿಚಿಗೆ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಇಳಿಮುಖವಾಗಿದೆ. ಇಲ್ಲದಿದ್ದರೆ ಈ ಕ್ರಿಸ್ಮಸ್ ಟ್ರೀ ಮೌಲ್ಯ ಇನ್ನೂ ಜಾಸ್ತಿಯಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಯುರೋಪ್‍ನಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಾರ್ವಜನಿಕ ಸಾಲ ಹೆಚ್ಚಾಗಿದೆ. ಆದರಿಂದ ಜನರು ತಮ್ಮ ಉಳಿತಾಯದ ಹಣವನ್ನು ಚಿನ್ನದ ಮೇಲೆ ಹಾಕುತ್ತಿದ್ದಾರೆ. ಹೀಗಾಗಿ ಚಿನ್ನದ ಮೌಲ್ಯ ಕುಸಿದಿದೆ ಎಂದು ಹೇಳಿದರು.

    ಕಂಪನಿಯ ಮ್ಯೂನಿಚ್ ಶಾಖೆಯಲ್ಲಿ ಸುಮಾರು 10 ಅಡಿ ಎತ್ತರದ ಅತೀ ದುಬಾರಿ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀಯನ್ನು ಡಿ. 15 ರಿಂದ ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ಪ್ರೋ ಔರಮ್ ಸಿಬ್ಬಂದಿ ತಿಳಿಸಿದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv