Tag: benngaluru

  • ಮಾಸ್ಕ್, ಸಾಮಾಜಿಕ ಅಂತರ ಕಾಪಾಡದಿದ್ದರೆ ಕಠಿಣ ಕ್ರಮ: ಸುಧಾಕರ್

    ಮಾಸ್ಕ್, ಸಾಮಾಜಿಕ ಅಂತರ ಕಾಪಾಡದಿದ್ದರೆ ಕಠಿಣ ಕ್ರಮ: ಸುಧಾಕರ್

    ಬೆಂಗಳೂರು: ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗ್ತಿದೆ. ಇತ್ತ ಮಹಾರಾಷ್ಟ್ರದಲ್ಲಿ ಕೂಡ ಏರಿಕೆಯಾಗ್ತಿದೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಮಾಸ್ಕ್ ಸಾಮಾಜಿಕ ಅಂತರ ಕಾಪಾಡಿ ಅಂತಾ ಹೇಳಿದ್ದಾರೆ. ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತೆ ಅಂತ ಸಿಎಂ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

    ಇಂದಿನಿಂದ ದೊಡ್ಡ ದೊಡ್ಡ ಜಾಹೀರಾತು ಕೊಟ್ಟು ಜಾಗೃತಿ ಮೂಡಿಸುತ್ತೇವೆ. ಲಸಿಕ ವಿತರಣೆ ಜಾಸ್ತಿ ಆಗಿದೆ. ಇದುವರೆಗೂ 15 ಲಕ್ಷ ಜನರಿಗೆ ನೀಡಿದ್ದೇವೆ. ಪ್ರತಿ ದಿನ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳಲ್ಲಿ 100 ಜನರಿಗೆ ಟೆಸ್ಟ್ ಮಾಡಲೇ ಬೇಕು. ಜನರಲ್ ಆಸ್ಪತ್ರೆಗಳಲ್ಲಿ 500 ಜನರಿಗೆ ಲಸಿಕೆ ಟಾರ್ಗೆಟ್ ನೀಡಿದ್ದೇವೆ. ಪ್ರತಿ ಸೋಂಕಿತ ವ್ಯಕ್ತಿಗೆ 20 ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಮಾಡಲೇ ಬೇಕು ಎಂದು ಅವರು ಹೇಳಿದರು.

    ಗಡಿ ರಾಜ್ಯಗಳಲ್ಲಿ ಸೋಂಕು ಏರಿಕೆ ಆಗಿರೋದೇ ಜಿಲ್ಲೆಗಳಲ್ಲಿ ಕೊರೊನಾ ಏರಿಕೆಗೆ ಪ್ರಮುಖ ಕಾರಣವಾಗಿದೆ. ಗಡಿ ಭಾಗಗಳಿಂದ ಹೆಚ್ಚು ಜನ ಬರುತ್ತಾ ಇರೋದೇ ಕೇಸ್ ಏರಿಕೆಗೆ ಕಾರಣ. ಸಭೆ ಸಮಾರಂಭಗಳಿಗೆ ಕಠಿಣ ರೂಲ್ಸ್ ಜಾರಿ ಆಗುತ್ತೆ ಎಂದರು.

    ಪ್ರತಿಭಟನೆ, ಸಿನಿಮಾ ಹಾಲ್ ಗಳಿಗೆ ಟಫ್ ರೂಲ್ಸ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾಳೆ ಪಿಎಂ ಜೊತೆ ಸಿಎಂ ವೀಡಿಯೋ ಕಾನ್ಫರೆನ್ಸ್ ಇದೆ. ಆ ಬಳಿಕ ಟಫ್ ರೂಲ್ಸ್ ಜಾರಿಯಾಗುತ್ತಾ ಕಾದು ನೋಡಬೇಕಿದೆ. ಪ್ರತಿಭಟನೆ, ಬಹಿರಂಗ ಸಭೆ-ಸಮಾರಂಭಗಳಿಗೆ ರೂಲ್ಸ್ ವಿಚಾರ ಕೂಡ ಆ ಬಳಿಕ ನಿರ್ಧಾರ ಆಗುತ್ತದೆ ಎಂದು ಸಚಿವ ಸುಧಾಕರ್ ವಿವರಿಸಿದ್ದಾರೆ.

  • ಮದುವೆಯಾಗಬೇಕಾದವಳು ಮಸಣಕ್ಕೆ – ಕಾಣೆಯಾದ ಯುವತಿ ಕೊಳೆತ ಶವವಾಗಿ ಪತ್ತೆ

    ಮದುವೆಯಾಗಬೇಕಾದವಳು ಮಸಣಕ್ಕೆ – ಕಾಣೆಯಾದ ಯುವತಿ ಕೊಳೆತ ಶವವಾಗಿ ಪತ್ತೆ

    – ಅನುಮಾನಾಸ್ಪದವಾಗಿ ಸಿಕ್ತು ಮೃತದೇಹ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಣೆಯಾದ ಯುವತಿ ಕೊಳೆತ ಶವವಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿಯ ಕೆರೆಯಲ್ಲಿ ಪತ್ತೆಯಾಗಿದ್ದಾಳೆ.

    ಹೌದು ಬೆಂಗಳೂರಿನ ಆಂಧ್ರಹಳ್ಳಿ ನಿವಾಸಿ ದೀಪ ಶವವಾಗಿ ಪತ್ತೆ ಯಾಗಿದ್ದಾಳೆ. ದೀಪ ಬಾವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದೆ. ಮದುವೆ ಫಿಕ್ಸ್ ಆಗುತ್ತಿದ್ದಂತೆ ಅಕ್ರಮ ಸಂಬಂಧ ಬಯಲಿಗೆ ಬರುತ್ತದೆ ಅಥವಾ ನಾದಿನಿ ಕೈ ತಪ್ಪಿ ಹೊಗುತ್ತಾಳೆ ಎಂದು ಬಾವನೇ ಕೊಲೆ ಮಾಡಿರಬಹುದಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

    ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭದ್ರಾವತಿ ಮೂಲದ ಪುನೀತ್‍ನ ಜೊತೆ ಮೃತ ದೀಪಳ ಮದುವೆಗೆ ಕುಟುಂಬಸ್ಥರು ಈಗಾಗಲೇ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಆದರೆ ವಿಪರ್ಯಾಸ ಎಂಬಂತೆ ದೀಪ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ತನಿಖೆಗೆ ಒತ್ತಾಯಿಸಿದ್ದಾರೆ.

    ಈ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದೀಗ ಶವವನ್ನು ಕೊರೊನಾ ಪರೀಕ್ಷೆ ಕಳುಹಿಸಲಾಗಿದೆ. ಕೊಲೆ ಮತ್ತು ಕೊರೊನಾ ಮಧ್ಯೆ ಆತಂಕದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಯದಲ್ಲಿ ಈಗ ಕಾಲ ಕಳೆಯವಂತಾಗಿದೆ.

  • ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ- ಭೀಕರ ಜಲಪ್ರವಾಹಕ್ಕೆ ಕೇರಳದಲ್ಲಿ 26 ಮಂದಿ ಮರಣ

    ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ- ಭೀಕರ ಜಲಪ್ರವಾಹಕ್ಕೆ ಕೇರಳದಲ್ಲಿ 26 ಮಂದಿ ಮರಣ

    – ರಾಜ್ಯ, ಕೇಂದ್ರದಿಂದ ನೆರವಿನ ಮಹಾಪೂರ

    ಬೆಂಗಳೂರು/ತಿರುವನಂತಪುರಂ: ಕರ್ನಾಟಕ ಮತ್ತು ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗ್ತಿದ್ದು, ಇನ್ನು ಮೂರು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ.

    ಈಗಾಗಲೇ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ. ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಅಧಿಕವಾಗಿದ್ದು, ಸದ್ಯ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗ್ತಿದೆ. ಹೊರ ಹರಿವು 1 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಇದೇ ಮೊದಲ ಬಾರಿ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಯಾಗ್ತಿರೋದು. ಇತ್ತ, ತುಂಗಾ, ಭದ್ರಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಪ್ರವಾಸಿಗರು ನದಿ ತೀರದ ಪ್ರದೇಶಗಳಿಗೆ ಹೋಗಬಾರದೆಂದು ಚಿಕ್ಕಮಗಳೂರು ಪೊಲೀಸರು ಮನವಿ ಮಾಡಿದ್ದಾರೆ.

    ಕೇರಳದಲ್ಲಿನ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ ಆಗಿದ್ದು, ಜನಜೀವನ ಅಕ್ಷರಶಃ ನರಕವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆರು ತಂಡಗಳನ್ನು ನಿಯೋಜಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ನಾಲ್ಕು ಹೆಚ್ಚುವರಿ ತಂಡಗಳನ್ನು ಕೋಝಿಕೋಡು ಬಳಿ ನಿಯೋಜಿಸಲಾಗಿದ್ದು, ದೆಹಲಿಯಲ್ಲಿರುವ ಎನ್‍ಡಿಆರ್‍ಎಫ್ ಸಹಾಯವಾಣಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿವೆ.

    26 ವರ್ಷಗಳ ಬಳಿಕ ಇಡುಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡ್ತಿರೋದ್ರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಪ್ರವಾಹ ಪರಿಸ್ಥಿತಿ ಬಗ್ಗೆ ಕೇರಳ ಸಿಎಂ ಪಿಣರಾಯ್ ವಿಜಯನ್ ಬಳಿ ಮಾಹಿತಿ ಪಡೆದ ಪ್ರಧಾನಿ ಮೋದಿ ಎಲ್ಲಾ ಅಗತ್ಯ ನೆರವು ಒದಗಿಸುವುದಾಗಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಕೂಡ ಕೇರಳದ ನೆರವಿಗೆ ಧಾವಿಸಿದ್ದು, 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಹಾಗೂ ವೈದ್ಯರ ತಂಡ ಕಳುಹಿಸಿ ಕೊಡಲು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಜೂನ್‍ನಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ ಉತ್ಪಾದನೆ ಆರಂಭ!

    ಬೆಂಗಳೂರು: ಆಪಲ್ ಕಂಪೆನಿಯ ಐಫೋನ್ ಉತ್ಪಾದನಾ ಘಟಕ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವೇ ತಿಂಗಳಿನಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ ಘಟಕ ಸ್ಥಾಪನೆ ನಡೆಸುವಂತೆ ರಾಜ್ಯ ಸರ್ಕಾರ ಐಫೋನ್ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡದ ಜೊತೆ ಮಾತುಕತೆ ನಡೆಸಿತ್ತು. ಈ ಮಾತುಕತೆ ಫಲ ಕೊಟ್ಟಿದ್ದು ಪೀಣ್ಯದಲ್ಲಿ ಘಟಕ ಸ್ಥಾಪಿಸಲು ಆಪಲ್ ಒಪ್ಪಿಗೆ ನೀಡಿದೆ.

    ಭಾರತಕ್ಕೆ ಅವಶ್ಯ ಇರುವಷ್ಟು ಐ ಫೋನ್ ಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಆಪಲ್ ಮುಂದಾಗಿದೆ. ಆದರೆ ಯಾವಾಗ ಈ ಘಟಕ ಆರಂಭವಾಗಲಿದೆ ಎನ್ನುವ ಮಾಹಿತಿ ಸ್ಟಷ್ಟವಾಗಿ ಸಿಕ್ಕಿಲ್ಲ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜೂನ್ ತಿಂಗಳಿನಲ್ಲಿ ಘಟಕ ಆರಂಭವಾಗುವ ಸಾಧ್ಯತೆಯಿದೆ.

    ಆಪಲ್ ಪ್ರಸ್ತುತ ಈಗ ಐಫೋನ್‍ಗಳನ್ನು ತೈವಾನ್ ಮೂಲದ ಫಾಕ್ಸ್ ಕನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಈ ಎರಡೂ ಕಂಪೆನಿಗಳ ಘಟಕಗಳು ಚೀನಾದಲ್ಲಿದ್ದು ಇಲ್ಲಿ ಎಲ್ಲ ಭಾಗಗಳನ್ನು ಜೋಡಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.

    ಐಫೋನ್ ಒಂದೊಂದು ಭಾಗಗಳನ್ನು ಒಂದೊಂದು ಕಂಪೆನಿ ತಯಾರಿಸುತ್ತದೆ. 3ಜಿ, 4ಜಿ, ಎಲ್‍ಟಿಇ ನೆಟ್‍ವರ್ಕ್ ಚಿಪ್ ಕ್ವಾಲಕಂ ಕಂಪೆನಿ ತಯಾರಿಸಿದರೆ ಎ ಸಿರೀಸ್ ಪ್ರೊಸೆಸರ್ ಸ್ಯಾಮ್ ಸಂಗ್ ತಯಾರಿಸುತ್ತದೆ. ಬ್ಯಾಟರಿ ಸನ್‍ವೊಡಾ/ ಸ್ಯಾಮ್ ಸಂಗ್ ಕಂಪೆನಿ ತಯಾರಿಸಿದರೆ,ಗ್ಲಾಸ್ ಸ್ಕ್ರೀನ್ ಮತ್ತೊದು ಕಂಪನಿ ತಯಾರಿಸುತ್ತದೆ. ಈ ಎಲ್ಲ ಕಂಪೆನಿಗಳ ಭಾಗಗಳು ಅಂತಿಮವಾಗಿ ಫಾಕ್ಸ್ ಕನ್ ಫ್ಯಾಕ್ಟರಿಯಲ್ಲಿ ಜೋಡನೆಯಾಗಿ ಮಾರುಕಟ್ಟೆಗೆ ಬರುತ್ತದೆ.