Tag: bengluru

  • ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿ ಬಂಧನ

    ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿ ಬಂಧನ

    ಮುಂಬೈ: ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯಾ ಠಾಕ್ರೆಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

    ಜೈ ಸಿಂಗ್ ರಜಪೂತ್ ಬಂಧಿತ ಆರೋಪಿ. ಡಿಸೆಂಬರ್ 18 ರಂದು ಆ ಆರೋಪಿಯನ್ನು ಬಂಧಿಸಿ ಮುಂಬೈಗೆ ಕರೆ ತಂದಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಸೈಬರ್ ತಂಡ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಓಮಿಕ್ರಾನ್‌ ಸ್ಫೋಟ – ಇಂದು ಒಂದೇ ದಿನ 12 ಪ್ರಕರಣ ದೃಢ

    ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಡಿಸೆಂಬರ್ 23 ರಂದು ತಿಳಿಸಿದ್ದಾರೆ.

    ಆದಿತ್ಯಾ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಮಗನಾಗಿದ್ದು, ಆರೋಪಿಯು ಡಿಸೆಂಬರ್ 8 ರಂದು ಆದಿತ್ಯ ಠಾಕ್ರೆಗೆ ಕರೆ ಮಾಡಿದ್ದಾನೆ. ಆದರೆ ಆ ಕರೆಯನ್ನು ಅವರು ತೆಗೆದಿಲ್ಲ. ನಂತರದಲ್ಲಿ ಆರೋಪಿಯು ಸಚಿವರಿಗೆ ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟಮಟ್ಟದ ಸ್ಕೇಟಿಂಗ್ – ಏಕಾಂಶ್ ಕುಮಾರ್‌ಗೆ 1 ಬೆಳ್ಳಿ, 1 ಕಂಚಿನ ಪದಕ

    ಸೈಬರ್ ಪೊಲೀಸ್ ತಂಡವು ತನಿಖೆ ನಡೆಸಿದಾಗ ಆರೋಪಿಯು ಬೆಂಗಳೂರಿನಿಂದ ಕರೆ ಮಾಡಿರುವುದು ಗೊತ್ತಾಗಿದೆ. ಈ ಆಧಾರದಲ್ಲಿ ಜಾಡು ಹಿಡಿದು ಬೆಂಗಳೂರಿನಲ್ಲಿ ಬಂಧಿಸಿದಾರೆ. ಆ ವ್ಯಕ್ತಿಯನ್ನು ಹುಡುಕಿಕೊಂಡು ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ ಎಂದರು.

    ಆರೋಪಿಯನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆಯ ಸಮಯದಲ್ಲಿ ಆರೋಪಿಯು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಯಾಗಿರುವ ವಿಚಾರ ತಿಳಿದು ಬಂದಿದೆ.

  • ಮತ್ತೆ ಪ್ರೋ ಕಬಡ್ಡಿ ಹಬ್ಬ – ಇಂದಿನಿಂದ ಬೆಂಗಳೂರು ಬುಲ್ಸ್ ಅಭಿಯಾನ ಶುರು

    ಮತ್ತೆ ಪ್ರೋ ಕಬಡ್ಡಿ ಹಬ್ಬ – ಇಂದಿನಿಂದ ಬೆಂಗಳೂರು ಬುಲ್ಸ್ ಅಭಿಯಾನ ಶುರು

    ಬೆಂಗಳೂರು: ಕಬಡ್ಡಿ ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಬೆಂಗಳೂರು ಬುಲ್ಸ್ ತಂಡ ಸಹ ಪ್ರಶಸ್ತಿ ಗೆಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದೆ .

    ಕೊರೊನಾ ಕಾರಣದಿಂದ ಹಿಂದಿನ ಎರಡು ವರ್ಷಗಳ ಆವೃತ್ತಿ ನಡೆದಿರಲಿಲ್ಲ. ಸೀಸನ್ 6 ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಾ ಕಟ್ಟುನಿಟ್ಟಾದ ಬಯೋ ಬಬಲ್ ವ್ಯವಸ್ಥೆಯಲ್ಲಿ ತಂಡಗಳು ಕಣಕ್ಕೆ ಇಳಿಯಲಿವೆ.

    ಡಿಸೆಂಬರ್ 22 ರಂದು ರಾತ್ರಿ 7:30 ಗಂಟೆಗೆ ಯು ಮುಂಬಾ ತಂಡದೊಂದಿಗೆ ಬೆಂಗಳೂರು ಬುಲ್ಸ್ ಸೆಣೆಸಾಡಲಿದ್ದು ಪಂದ್ಯಾವಳಿಗೆ ಆರಂಭ ಸಿಗಲಿದೆ. ಎಲ್ಲ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿವೆ.

    ಆಯೋಜಕರು ಪಂದ್ಯಾವಳಿಯ ಮೊದಲ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ ನಲ್ಲಿ 4 ಮತ್ತು ಜನವರಿಯಲ್ಲಿ 7 ಪಂದ್ಯಗಳು ಸೇರಿ ಮೊದಲಾರ್ಧದಲ್ಲಿ ಬುಲ್ಸ್ 11 ಪಂದ್ಯಗಳನ್ನು ಆಡಲಿದೆ.

    ಬೆಂಗಳೂರು ಬುಲ್ಸ್ ಶಕ್ತಿ: ಪ್ರೋ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸದಾ ಫೇವರೇಟ್ ತಂಡ. ಜನವರಿ 2019 ರಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ಸೀಸನ್ 6 ರಲ್ಲಿ ಚಾಂಪಿಯನ್ ಆಗಿತ್ತು. ಎರಡನೇ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ದರೆ ಸೀಸನ್ 1 ಮತ್ತು 7 ರಲ್ಲಿ, ಸೆಮಿಫೈನಲ್ ಪ್ರವೇಶ ಮಾಡಿತ್ತು.

    ಈ ಬಾರಿ ಬೆಸ್ಟ್‌ ತಂಡ: ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ. ರೆಕಾರ್ಡ್ ಬ್ರೇಕಿಂಗ್ ರೈಡರ್ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸಲಿದ್ದಾರೆ.

    ಮೂರನೇ ಸೀಸನ್ ನಿಂದ ಪವನ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಪವನ್ ಹೆಸರು ಮಾಡಿದ್ದಾರೆ. ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಿ ಚಿನ್ನಕ್ಕೆ ಕೊರಳು ಒಡ್ಡಿದ್ದರು. ಪ್ರೋ ಕಬಡ್ಡಿ ಸೀಸನ್ 6 ಮತ್ತು 7 ರಲ್ಲಿ ಕ್ರಮವಾಗಿ “ಅತ್ಯಂತ ಮೌಲ್ಯಯುತ ಆಟಗಾರ” ಮತ್ತು “ಅತ್ಯುತ್ತಮ ರೈಡರ್” ಪುರಸ್ಕಾರಕ್ಕೆ ಪಾತ್ರವಾಗಿದ್ದರು.

    ಪ್ರೋ ಕಬಡ್ಡಿಯ ಅತ್ಯುತ್ತಮ ರೈಡರ್ ಗಳಲ್ಲಿ ಪವನ್ ಗೆ ಅಗ್ರಸ್ಥಾನವಿದೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ. ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ಅವರಿಂದ “ಬುಲ್ಡೋಜರ್” ಎಂದೇ ಕರೆಸಿಕೊಳ್ಳುತ್ತಾರೆ.

    ಅರ್ಜುನ ಪ್ರಶಸ್ತಿ ವಿಜೇತ ರಣಧೀರ್ ಲೀಗ್ ಆರಂಭದಿಂದಲೂ ಬುಲ್ಸ್ ತರಬೇತುದಾರರಾಗಿದ್ದವರು. ಅನೇಕ ಯುವ ಆಟಗಾರರನ್ನು ತಮ್ಮ ಗರಡಿಯಲ್ಲಿ ಪಳಗಿಸಿ ಪರಿಚಯಿಸಿದ್ದಾರೆ. ಈ ಬಾರಿ ಬುಲ್ಸ್ ಗೆ ಅತ್ಯುತ್ತಮ ನಾಯಕ ಮತ್ತು ಅತ್ಯುತ್ತಮ ಕೋಚ್ ಸಂಯೋಜನೆ ಇದೆ. 2014 ರಲ್ಲಿ ಪ್ರಾರಂಭವಾದ ಪ್ರೊ ಕಬಡ್ಡಿ ಹೊಸ ಜನರನ್ನು ತನ್ನ ಕಡೆ ಸೆಳೆದುಕೊಂಡಿತು. ಕಬಡ್ಡಿ ಆಸ್ವಾದಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತು.

    ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಬುಲ್ಸ್, ಪ್ರೊ ಕಬಡ್ಡಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದೆ. ಈಗ ಮತ್ತೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ

    ಸುದೀಪ್ ಕೊಂಡಾಡಿದ ತಂಡ: ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ತಂಡವನ್ನು ಹುರಿದುಂಬಿಸಿದ್ದಾರೆ. ‘ನಮ್ಮ ಊರು, ನಮ್ಮ ಆಟ, ನಮ್ಮ ಹುಡುಗರು, ನಮ್ಮ ಬುಲ್ಸ್’ ಎನ್ನುತ್ತ ಎಲ್ಲರೂ ಬೆಂಬಲ ನೀಡಲು ಕೇಳಿಕೊಂಡಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಎಂಟ್ರಿ ಕೊಡುವ ಕಿಚ್ಚ, ಸಖತ್ ಡೈಲಾಗ್ ಹೊಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಸುದೀಪ್ ಟ್ವಿಟ್ಟರ್ ನಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ. ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್.. ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್.. ನಿಮ್ಮ ಜೊತೆ ಬೆಂಗಳೂರು ಬುಲ್ಸ್ ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ ಎಂದು ಸುದೀಪ್ ಹೇಳಿದ್ದಾರೆ.

    ಬುಲ್ಸ್ ಟೈಟಲ್ ಪ್ರಾಯೋಜಕರಾಗಿ 1xnews ಜವಾಬ್ದಾರಿ ತೆಗೆದುಕೊಂಡಿದ್ದರೆ, ಹರ್ಬಲೈಫ್ ನ್ಯೂಟ್ರೇಶನ್ ಜವಾಬ್ದಾರಿ ಹೊತ್ತುಕೊಂಡಿದೆ . ನಿಪ್ಪಾನ್ ಪೇಂಟ್, ಬಿಗ್ ಎಫ್‌ಎಂ ಮತ್ತು ಪಿಕೆ ಕಾನ್ಷಿಯಸ್‌ನೆಸ್ ಕೂಡ ಬುಲ್ಸ್ ನೊಂದಿಗೆ ಬಾಂಧ್ಯವ್ಯ ಬೆಸೆದುಕೊಂಡಿವೆ. ಕೊರೊನಾ ಕಾರಣಕ್ಕೆ ಪಂದ್ಯಾವಳಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಇರುವಿದಿಲ್ಲ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು

    ಬೆಂಗಳೂರು ಬುಲ್ಸ್ ತಂಡ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್. ಕೋಚ್: ರಣಧೀರ್ ಸಿಂಗ್ ಸೆಹ್ರಾವತ್.

    ಬೆಂಗಳೂರು ಬುಲ್ಸ್ ತಂಡದ ಮೊದಲಾರ್ಧದ ವೇಳಾಪಟ್ಟಿ
    1. ಯು ಮುಂಬಾ ಡಿ. 22 ಬುಧವಾರ ಸಂಜೆ 7:30
    2. ತಮಿಳ್ ತಲೈವಾಸ್ ಡಿ. 24 ಶುಕ್ರವಾರ ರಾತ್ರಿ 8:30
    3. ಬಂಗಾಲ್ ವಾರಿಯರ್ಸ್ ಡಿ. 26 ಭಾನುವಾರ ರಾತ್ರಿ 8:30
    4. ಹರ್ಯಾಣ ಸ್ಟೀಲರ್ಸ್ ಡಿ. 30 ಗುರುವಾರ ರಾತ್ರಿ 8:30
    5. ತೆಲುಗು ಟೈಟಾನ್ಸ್ ಜ. 1 ಶನಿವಾರ ರಾತ್ರಿ 8:30
    6. ಪುಣೇರಿ ಪಲ್ಟಾನ್ ಜ. 2 ಭಾನುವಾರ ರಾತ್ರಿ 8:30
    7 ಜೈಪುರ್ ಪಿಂಕ್ ಪ್ಯಾಂಥರ್ಸ್ ಜ. 6 ಗುರುವಾರ ರಾತ್ರಿ 8:30
    8. ಯುಪಿ ಯೋದ್ಧಾ ಜ. 9 ಭಾನುವಾರ ರಾತ್ರಿ 8:30
    9. ದಬಾಂಗ್ ಡೆಲ್ಲಿ ಜ. 12 ಬುಧವಾರ ರಾತ್ರಿ 8:30
    10. ಗುಜರಾತ್ ಜೈಂಟ್ಸ್ ಜ. 14 ಶುಕ್ರವಾರ ರಾತ್ರಿ 8:30
    11. ಪಾಟ್ನಾ ಪೈರೇಟ್ಸ್ ಜ. 16 ಭಾನುವಾರ ರಾತ್ರಿ 8:30

  • ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು

    ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು

    ಬೆಂಗಳೂರು: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮೂವರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

    ವರ್ತೂರು ಪೊಲೀಸ್ ಠಾಣೆಯ ನಾಗಭೂಷಣ್, ಶಿವರಾಜ್, ನಾಗರಾಜ್ ಅಮಾನತ್ತಾದ ಸಿಬ್ಬಂದಿ. ಮನೆಗಳ್ಳತನ ಪ್ರಕರಣವೊಂದರ ಸಂಬಂಧ ಸಲ್ಮಾನ್ ಎಂಬಾತನನ್ನು ವರ್ತೂರು ಪೊಲೀಸರು ಕರೆ ತಂದಿದ್ದರು. ಸುಳ್ಳು ಆರೋಪದ ಮೇರೆಗೆ ಸಲ್ಮಾನ್‌ನನ್ನು ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದರು. ಈ ಸಂಬಂಧ ಸಲ್ಮಾನ್ ಕುಟುಂಬದವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ

    ಘಟನೆ ಸಂಬಂಧ ವೈಟ್‌ಫೀಲ್ಡ್ ಡಿಸಿಪಿ ದೇವರಾಜ್‌ಗೆ ಸಲ್ಮಾನ್ ಕುಟುಂಬಸ್ಥರು ದೂರು ನೀಡಿದ್ದರು. ಇಲಾಖಾ ತನಿಖೆ ವೇಳೆ ಕಾನೂನು ಪಾಲನೆ ಮಾಡದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿ ದೇವರಾಜ್ ಅವರು ವರ್ತೂರು ಠಾಣೆಯ ಮೂರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

  • ಇನ್ನೂ ಮುಗಿದಿಲ್ಲ ಗೊಂದಲ: ‘ಲಾಟರಿ’ ಮೂಲಕ ಗಣೇಶೋತ್ಸವಕ್ಕೆ ಅನುಮತಿ

    ಇನ್ನೂ ಮುಗಿದಿಲ್ಲ ಗೊಂದಲ: ‘ಲಾಟರಿ’ ಮೂಲಕ ಗಣೇಶೋತ್ಸವಕ್ಕೆ ಅನುಮತಿ

    ಬೆಂಗಳೂರು: ಗಣೇಶ ಚತುರ್ಥಿಗೆ 2 ದಿನ ಬಾಕಿದ್ದರೂ ಸಾರ್ವಜನಿಕ ಗಣೇಶೋತ್ಸವದ ಆಚರಣೆ ವಿಚಾರದಲ್ಲಿ ಹಲವು ಗೊಂದಲಗಳು ಬಗೆ ಹರಿದಿಲ್ಲ.

    ಒಂದು ವಾರ್ಡ್‍ಗೆ ಒಂದೇ ಗಣೇಶನನ್ನು ಕೂರಿಸಬಹುದು ಎಂದು ಸರ್ಕಾರ ಹೇಳಿದೆ. ಆದರೆ ಒಂದೊಂದು ವಾರ್ಡ್‍ನಲ್ಲಿ ಹತ್ತಾರು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೋರಿವೆ. ಹೀಗಾಗಿ ಯಾರಿಗೆ ಅನುಮತಿ ಕೊಡಬೇಕು? ಯಾರನ್ನು ಬಿಡಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಧಿಕಾರಿಗಳು, ಚೀಟಿ ಮೊರೆ ಹೋಗಿದ್ದಾರೆ.

    ಚೀಟಿಯಲ್ಲಿ ಯಾರ ಹೆಸರು ಬರುತ್ತದೋ ಅವರು ಗಣೇಶನನ್ನು ಕೂರಿಸಬಹುದಾಗಿದೆ. ಆದರೆ ಇದು ಎಲ್ಲಾ ಸಂಘಟನೆಗಳಿಗೆ ಒಪ್ಪಿಗೆಯಾಗಿಲ್ಲ. ಬೆಂಗಳೂರಿನ ಯಲಹಂಕ ವಲಯದ ಅಟ್ಟೂರು ವಾರ್ಡ್‍ನಲ್ಲಿ ಗಣೇಶ ಕೂರಿಸಲು ಅನುಮತಿ ನೀಡಿ ಎಂದು ಎರಡು ಅರ್ಜಿಗಳು ಬಂದಿದ್ದವು. ಲಾಟರಿ ಮೂಲಕ ಒಬ್ಬರಿಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲಿ ಸ್ಥಳ ನಿಗದಿ ವಿಚಾರದಲ್ಲಿಯೂ ಗೊಂದಲ ಉಂಟಾಗಿದೆ. ಅನುಮತಿಯನ್ನು ಪೊಲೀಸರು ಕೊಡಬೇಕಾ? ಬಿಬಿಎಂಪಿ ಎಂಜಿನಿಯರ್‍ಗಳಾ ಎಂಬುದು ಗೊತ್ತಾಗಿಲ್ಲ.  ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ 

    ಈ ಮಧ್ಯೆ, ನಾಲ್ಕು ಅಡಿ ಮೀರಿದ ಗಣೇಶನನ್ನು ಮಾರಿದ್ರೂ ದಂಡ, ಕೂರಿಸಿದ್ರೂ ದಂಡ ವಿಧಿಸಲು ಮಾರ್ಷಲ್‍ಗಳು ಮುಂದಾಗಿದ್ದಾರೆ. ಅಲ್ಲದೇ, ಗಣೇಶ ಮೂರ್ತಿಗಳನ್ನು ಸೀಜ್ ಮಾಡಲಾಗುತ್ತೆ ಎನ್ನಲಾಗಿದ್ದು, ಮಾರಾಟಗಾರರಿಗೆ ಹೊಸ ಪೀಕಲಾಟ ಶುರುವಾಗಿದೆ. ಗಣೇಶೋತ್ಸವದ ಗೊಂದಲಗಳು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿವೆ. ನಾಳೆ ಬಿಬಿಎಂಪಿಗೆ ಮುತ್ತಿಗೆ ಹಾಕಲು ಗಣೇಶೋತ್ಸವ ಸಮಿತಿ ನಿರ್ಧರಿಸಿದೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.64ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,102 ಹೊಸ ಕೊರೊನಾ ಕೇಸ್, 17 ಸಾವು

  • ನಟಿ ಸೋನಿಯಾ ಮನೆ ಮೇಲೆ ದಾಳಿ – ರಾಜಕಾರಣಿಗಳ ಮಕ್ಕಳಿಗೆ ಶಾಕ್

    ನಟಿ ಸೋನಿಯಾ ಮನೆ ಮೇಲೆ ದಾಳಿ – ರಾಜಕಾರಣಿಗಳ ಮಕ್ಕಳಿಗೆ ಶಾಕ್

    ಬೆಂಗಳೂರು:  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್ವಾಲ್ ಮನೆಯ ಮೇಲೆ ದಾಳಿ ನಡೆಸಿದ ಪೂರ್ವ ವಲಯದ ಪೊಲೀಸರು 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

    ಡಿಜೆ ಹಳ್ಳಿ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯ ಸಮಯದಲ್ಲಿ ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲ. ಭಾನವಾರ ರಾತ್ರಿ ಪಾರ್ಟಿಗೆ ಹೋಗಿದ್ದ ಆಕೆ ಮನೆಗೆ ಬಂದಿರಲಿಲ್ಲ.

    ದಾಳಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ಕರೆ ಮಾಡಿದ್ದಾರೆ. ಈ ವೇಳೆ ಆಕೆ ಕರೆಯನ್ನು ಸ್ವೀಕರಿಸಲಿಲ್ಲ. ಆ ಬಳಿಕ ಆಕೆಯ ತಂದೆಯಿಂದ ಫೋನ್ ಕರೆ ಮಾಡಿಸಿದ್ದಾರೆ. ಈ ವೇಳೆ ಆಕೆ ಮಧ್ಯಾಹ್ನ 12 ಗಂಟೆಗೆ ಬರುವುದಾಗಿ ಹೇಳಿದ್ದಾಳೆ. ಅಗರ್ವಾಲ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ತಂದೆಯಿಂದ ಕೀ ತೆಗೆಸಿ ಮನೆಯನ್ನು ಜಾಲಾಡಿದ್ದಾರೆ. ಈ ವೇಳೆ 40 ಗ್ರಾಂ ಗಾಂಜಾ ಪತ್ತೆಯಾಗಿದೆ.

    ಆರ್ಗ್ಯಾನಿಕ್ ಕಾಸ್ಮೆಟಿಕ್ ಕಂಪನಿ ನಡೆಸುತ್ತಿದ್ದ ಸೋನಿಯಾ ಜೊತೆ ಡಜನ್‍ಗಟ್ಟಲೇ ಸೆಲೆಬ್ರಿಟಿಗಳ ಲಿಂಕ್ ಇರುವುದು ಗೊತ್ತಾಗಿದೆ. ಎಲ್ಲಾ ಪಾರ್ಟಿಗಳಲ್ಲಿ ಸೋನಿಯಾ ಅಗರ್ವಾಲ್ ಮುಖಾಂತರ ಸೆಲೆಬ್ರಿಟಿಗಳು ಎಂಟ್ರಿ ಕೊಡುತ್ತಿದ್ದರು. ಇದನ್ನೂ ಓದಿ : ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

    ಥಾಮಸ್ ನಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ಸೋನಿಯಾ ಆ ಬಳಿಕ ಬೇಕಾದ ಸೆಲೆಬ್ರಿಟಿಗಳಿಗೆ ಪೂರೈಸುತ್ತಿದ್ದ ಬಗ್ಗೆ ಪೊಲೀಸರಿಗೆ ಬಲವಾದ ಸಂಶಯ ಮೂಡಿದೆ. ಕೆಲ ರಾಜಕಾರಣಿಗಳ ಮಕ್ಕಳು ಮತ್ತು ಸ್ಯಾಂಡಲ್‍ವುಡ್‍ನವರ ಜೊತೆ ಸೋನಿಯಾಗೂ ಉತ್ತಮ ಸಂಬಂಧ ಇತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದಾಳಿ ಯಾಕೆ?
    ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲೆಬ್ರಿಟಿ ಮಾಡೆಲ್ ಸೋನಿಯಾ  ಅಗರ್ವಾಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜಾಜಿನಗರ, ಪದ್ಮನಾಭನಗರದ, ಬೆನ್ಸೆನ್ ಟೌನ್ ನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ : ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ.. ಒಂದು ಮಾತ್ರೆ 1500 ರೂ.ಗೆ ಮಾರಾಟ

    15 ದಿನ ಹಿಂದೆ ಡ್ರಗ್ ಪೆಡ್ಲರ್ ಆರೋಪಿ ಥಾಮಸ್‍ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಆರೋಪಿ ಥಾಮಸ್ ಜೊತೆ ಈ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಬಂಧಿತ ವಿದೇಶಿ ಪ್ರಜೆ ಥಾಮಸ್ ಜೊತೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ನೇರವಾದ ಸಂಪರ್ಕ ಇತ್ತು. ಹಲವು ಪಾರ್ಟಿಗಳಿಗೆ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು ಎಲ್‍ಎಸ್‍ಡಿ(ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್) ಮಾತ್ರೆಗಳನ್ನು ಈತ ವಿತರಿಸಿದ್ದ. ವಿಚಾರಣೆ ವೇಳೆ ಥಾಮಸ್ ಸೆಲೆಬ್ರಿಟಿಗಳ ಒಂದಷ್ಟು ಹೆಸರುಗಳನ್ನ ಪ್ರಸ್ತಾಪಿಸಿದ್ದ.

  • ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

    ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

    ಬೆಂಗಳೂರು: ಡ್ರಗ್ಸ್ ಕೇಸ್ ಪ್ರಕರಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿ ಮನೆಗಳ ಮೇಲೆ ಬೆಳ್ಳಂಬೆಳಿಗ್ಗೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

    ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್‍ವಾಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜಾಜಿನಗರ, ಪದ್ಮನಾಭನಗರದ, ಬೆನ್ಸೆನ್ ಟೌನ್ ನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ.  ಇದನ್ನೂ ಓದಿ : ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ 

    15 ದಿನ ಹಿಂದೆ ಡ್ರಗ್ ಪೆಡ್ಲರ್ ಆರೋಪಿ ಥಾಮಸ್‍ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಥಾಮಸ್ ಜೊತೆ ಈ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

    ಈ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಡ್ರಗ್ಸ್ ಪತ್ತೆಯಾದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.ಇದನ್ನೂ ಓದಿ: ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

  • ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

    ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

    ನೆಲಮಂಗಲ: ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿ ಹಸು ರಕ್ಷಣೆಗೆ ತೆರಳಿದ್ದ ಗೋಪಾಲಕ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೇಕೆರೆಯಲ್ಲಿ ನಡೆದಿದೆ.

    ಲೋಕೇಶ್ ಮೃತಪಟ್ಟ ಗೋಪಾಲಕ. ಮನೆಯ ನೀರು ಕಾಯಿಸುವ ಒಲೆಯಿಂದ ವ್ಯಾಪಿಸಿದ ಅಗ್ನಿ ಅವಘಡ ಇಡೀ ಕೊಟ್ಟಿಗೆ ಮನೆಗೆ ವ್ಯಾಪಿಸಿದೆ.

    ಬೆಂಕಿ ಬಿದ್ದ ವಿಷಯ ತಿಳಿದು ಲೋಕೇಶ್‌ ಕೂಡಲೇ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಎಳೆದು ಹೊರ ತಂದಿದ್ದಾರೆ. ಈ ವೇಳೆ ನಾಲ್ಕು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

    ರಾತ್ರಿಯೇ ಶೇ.90 ರಷ್ಟು ಲೋಕೇಶ್‌ ಅವರ ದೇಹ ಸುಟ್ಟು ಹೋಗಿತ್ತು. ಗಂಭೀರವಾಗಿದ್ದ ಲೋಕೇಶ್‌ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್‌ ಮೃತಪಟ್ಟಿದ್ದಾರೆ.

  • ಮನೆ ಮುಂದೆ ರಸ್ತೆ ಬದಿ ಕಾರು ನಿಲ್ಲಿಸಿದ್ರೆ ಪಾವತಿಸಿ 5 ಸಾವಿರ ರೂ.

    ಮನೆ ಮುಂದೆ ರಸ್ತೆ ಬದಿ ಕಾರು ನಿಲ್ಲಿಸಿದ್ರೆ ಪಾವತಿಸಿ 5 ಸಾವಿರ ರೂ.

    – ಬೆಂಗಳೂರಿನಲ್ಲಿ ಜಾರಿಯಾಗಲಿದೆ ಹೊಸ ಪಾರ್ಕಿಂಗ್‌ ನೀತಿ
    – ಪ್ರಮುಖ ರಸ್ತೆಯಲ್ಲಿ ಹೆಚ್ಚು ಸಮಯ ನಿಲ್ಲಿಸಿದ್ದರೂ ಶುಲ್ಕ

    ಬೆಂಗಳೂರು: ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಯ ಪಕ್ಕ ರಸ್ತೆ ಬದಿ ವಾಹನಗಳನ್ನು ಪಾರ್ಕ್‌ ಮಾಡಿದರೆ ಶುಲ್ಕ ಕಟ್ಟಬೇಕು. ಪಾರ್ಕಿಂಗ್‌ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಪಾವತಿಗೆ ಸಿದ್ದರಾಗಿರಬೇಕು.

    ಹೌದು. ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಕೇಂದ್ರ ನಗರ ಸಾರಿಗೆ ಸಹಕಾರದೊಂದಿಗೆ ಪಾರ್ಕಿಂಗ್ ಶುಲ್ಕ ನಿಗದಿಯಾಗಿದ್ದು, ಆರು ತಿಂಗಳ ಒಳಗಡೆ ಹೊಸ ಪಾರ್ಕಿಂಗ್ ನೀತಿ ಜಾರಿಯಾಗುವ ಸಾಧ್ಯತೆಯಿದೆ.

    ನಮ್ಮ ಮೆಟ್ರೋ, ಓಲಾ ಸೇರಿದಂತೆ ಹಲವು ಸೇವೆಗಳಿಂದ ಹೊಸ ಪಾರ್ಕಿಂಗ್ ನೀತಿಗೆ ತಡೆ ಬಿದ್ದಿತ್ತು. ಆದರೆ ಸಾರ್ವಜನಿಕ ಸಾರಿಗೆ ಸಂಪರ್ಕ ಸುಧಾರಣೆ ನಡುವೆಯೂ ಪಾರ್ಕಿಂಗ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ಪಾರ್ಕಿಂಗ್ ನೀತಿ 2.0 ಗೆ ಕೇಂದ್ರ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ರೂಪಿಸಿದ್ದ ಪಾರ್ಕಿಂಗ್‌ ನೀತಿಗೆ ನಗರಾಭಿವೃದ್ಧಿ ಇಲಾಖೆ ಅಸ್ತು ಎಂದಿದೆ. ಕೇಂದ್ರ ನಗರ ಭೂ ಸಾರಿಗೆ ಆದೇಶವನ್ನು ಜಾರಿಗೆ ತರುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಈಗ ಬಿಬಿಎಂಪಿಗೆ ಸೂಚನೆ ನೀಡಿದೆ.

    ಶುಲ್ಕ ಎಷ್ಟು?
    ಪಾರ್ಕಿಂಗ್ ಶುಲ್ಕ ಯೋಜನೆ ಜಾರಿಗೆ ಬಂದಲ್ಲಿ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳು ಶುಲ್ಕ ಕಟ್ಟಬೇಕಾಗುತ್ತದೆ. ಸಣ್ಣ ಕಾರುಗಳಿಗೆ ವಾರ್ಷಿಕ 1 ಸಾವಿರ ರೂ., ಮಧ್ಯಮ ಕಾರುಗಳಿಗೆ 3 ಸಾವಿರ/ 4ಸಾವಿರ, ದೊಡ್ಡ ಕಾರುಗಳಿಗೆ ವಾರ್ಷಿಕ 5 ಸಾವಿರ ರೂಪಾಯಿ ವರೆಗೂ ಶುಲ್ಕ ವಿಧಿಸಲು ಚಿಂತನೆ ನಡೆದಿದೆ. ಮೊದಲಿಗೆ ನಗರದ ಎರಡು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ಸಿಗಲಿದ್ದು, ಬಳಿಕ ಹಂತ ಹಂತವಾಗಿ ನಗರದ ಇತರ ಪ್ರದೇಶಗಳಲ್ಲಿ ಜಾರಿಯಾಗಲಿದೆ.

    ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ವಾಕಿಂಗ್, ಸೈಕಲ್ ಓಡಿಸುವ ಹವ್ಯಾಸ ರೂಪಿಸಲು ಈ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗಬೇಕು. ರೆಸಿಡೆನ್ಸಿ ಏರಿಯಾದ ರಸ್ತೆಗಳಲ್ಲಿ ಗಂಟೆ ಗೊಮ್ಮೆ ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಬೇಕು. ಕನಿಷ್ಟ ದರ ಬಿಎಂಟಿಸಿ ಬಸ್ ನ 11 ಕಿ.ಮೀ ವ್ಯಾಪ್ತಿಗೆ ಎಷ್ಟಿರುತ್ತೋ ಅಷ್ಟು ಕಟ್ಟಬೇಕು ಎಂಬ ಪ್ರಸ್ತಾಪ ನೀತಿಯಲ್ಲಿದೆ.

    2012 ರಲ್ಲಿ ಬೆಂಗಳೂರು ಪಾರ್ಕಿಂಗ್ 2.0 ಯೋಜನೆ ಜಾರಿಗೆ ತರಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಾರ್ವಜನಿಕ ಸಾರಿಗೆಗಳಲ್ಲಿ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಪಾರ್ಕಿಂಗ್ ನೀತಿ 2.0 ಪಾರ್ಕಿಂಗ್ ನೀತಿಗೆ ತಡೆ ಬಿದ್ದಿತ್ತು. ರಾಜ್ಯ ನಗರ ಅಭಿವೃದ್ಧಿ ಇಲಾಖೆಯ ಆದೇಶದಲ್ಲಿ 2020ರ ಮೇ ವೇಳೆಗೆ ಬೆಂಗಳೂರಿನಲ್ಲಿ ಒಟ್ಟು 94 ಲಕ್ಷ ವಾಹನಗಳಿವೆ. ಪ್ರತಿವರ್ಷ ಶೇ.10 ರಷ್ಟು ಪ್ರಮಾಣದಲ್ಲಿ ಹೊಸ ವಾಹನಗಳು ಬೆಂಗಳೂರು ರಸ್ತೆಗೆ ಇಳಿಯುತ್ತಿದೆ.

    ನೀತಿಯಲ್ಲಿ ಏನಿದೆ?
    ವಾಹನ ಮಾಲೀಕರು ತಮ್ಮ ಮನೆಯ ಸಮೀಪದ ರಸ್ತೆಗಳಲ್ಲಿ ಪಾವತಿ ಆಧಾರದಲ್ಲಿ ವಾಹನಗಳ ನಿಲುಗಡೆ ಮಾಡಲು ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದರ ಜೊತೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚು ಸಮಯ ನಿಲುಗಡೆ ಮಾಡಿದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಶಾಲೆಗಳು ವಾಹನ ನಿಲುಗಡೆಗೆ ಸ್ವಂತ ಸ್ಥಳಾವಕಾಶ ಹೊಂದುವುದನ್ನು ಕಡ್ಡಾಯಗೊಳಿಸುವ ಅಂಶಗಳು ಹೊಸ ಪಾರ್ಕಿಂಗ್‌ ನೀತಿಯಲ್ಲಿವೆ.

    ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ, ವಲಯವಾರು ಪಾರ್ಕಿಂಗ್‌ ಕಾರ್ಯತಂತ್ರ ರೂಪಿಸುವುದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ನಿಗದಿ, ಟ್ರಕ್‌ಗಳಿಗೆ ವರ್ತುಲ ರಸ್ತೆಗಳ ಸಮೀಪದಲ್ಲೇ ಟರ್ಮಿನಲ್‌ ನಿರ್ಮಾಣ, ಪಾರ್ಕಿಂಗ್‌ ನಿರ್ವಹಣೆಗೆ ಹೊಸ ತಂತ್ರಜ್ಞಾನಗಳ ಅಳವಡಿಸಬೇಕು ಎಂಬ ಅಂಶಗಳಿವೆ.

  • ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ರವಿಕುಮಾರ್ ನೇಮಕ

    ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ರವಿಕುಮಾರ್ ನೇಮಕ

    ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ರವಿಕುಮಾರ್ ನೇಮಕವಾಗಿದ್ದಾರೆ. ಪಿ ರವಿಕುಮಾರ್ ಅವರನ್ನು ಮಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿ ಇಂದು ಸರ್ಕಾರ ಆದೇಶಿಸಿದೆ.

    ಹಾಲಿ ಸಿಎಸ್ ಟಿ ಎಂ ವಿಜಯ್ ಭಾಸ್ಕರ್ ಸೇವಾವಧಿ ನಾಳೆ ಮುಕ್ತಾಯವಾಗಲಿದ್ದು, ತೆರವಾಗಲಿರುವ ಸ್ಥಾನಕ್ಕೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಪಿ ರವಿಕುಮಾರ್‌ನ್ನು  ನೇಮಿಸಲಾಗಿದೆ.

    ಪಿ ರವಿಕುಮಾರ್ 1984ರ ಬ್ಯಾಚ್  ಐಎಎಸ್ ಅಧಿಕಾರಿಯಾಗಿದ್ದಾರೆ. ನಾಳೆ ವಿಧಾನಸೌಧದಲ್ಲಿ ಪಿ ರವಿಕುಮಾರ್‌ಗೆ ವಿಜಯಭಾಸ್ಕರ್ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಪಿ ರವಿಕುಮಾರ್ ಸರ್ಕಾರದ 38ನೇ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

    1984 ಬ್ಯಾಚ್‍ನ ಅಧಿಕಾರಿಯಾಗಿರುವ ರವಿ ಕುಮಾರ್ ಹಿರಿತನದ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ಕೇಡರ್‌ನ  ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ, ಸಹಕಾರ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಕೆಪಿಟಿಸಿಎಲ್ ಎಂಡಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರವಿ ಕುಮಾರ್ ಅವರ ಸೇವಾವಧಿ 2022ರ ಮೇ ವರೆಗೆ ಇದೆ. 1 ವರ್ಷ 5 ತಿಂಗಳು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ರವಿ ಕುಮಾರ್ ಸೇವೆಯಲ್ಲಿ ಇರಲಿದ್ದಾರೆ

  • ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್ ನೀಡಲು ಮುಂದಾದ ಬಿಎಂಟಿಸಿ

    ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್ ನೀಡಲು ಮುಂದಾದ ಬಿಎಂಟಿಸಿ

    ಬೆಂಗಳೂರು: ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ. ಇನ್ನು ಮುಂದೆ ಮಾರ್ಷಲ್ ಆರ್ಟ್ಸ್, ಕರಾಟೆಯನ್ನು ಲೇಡಿ ಕಂಡಕ್ಟರ್ ಗಳು ಕಲಿಯಲಿದ್ದಾರೆ.

    ಬಿಎಂಟಿಸಿ ಲೇಡಿ ಕಂಡಕ್ಟರ್ ತಂಟೆಗೆ ಬರೋ ಮುನ್ನ ಹುಷಾರ್ ಆಗಿರಬೇಕು. ಬಸ್‍ಗಳಲ್ಲಿ ಬೇಕಾ ಬಿಟ್ಟಿಯಾಗಿ ವರ್ತಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾಕೆಂದರೆ ಮಾರ್ಷಲ್ ಆರ್ಟ್ಸ್, ಕರಾಟೆ, ಸಮರ ಕಲೆಗಳಲ್ಲಿ ಬಿಎಂಟಿಸಿಯ ಲೇಡಿ ಕಂಡಕ್ಟರ್  ಎಕ್ಸ್ ಪರ್ಟ್ಸ್ ಆಗಲಿದ್ದಾರೆ.

    ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣೆ ತರಬೇತಿ ನೀಡಲು ಮುಂದಾಗಿದೆ. ಕೆಲಸದ ವೇಳೆ ಹಾಗೂ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ ದೂರು ದಾಖಲಾಗುತ್ತಿತ್ತು. ಮಹಿಳೆಯರ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವ ತರಬೇತಿ ನೀಡಲು ಬಿಎಂಟಿಸಿ ಮುಂದಾಗುತ್ತಿದೆ.

    ಮಹಿಳಾ ಕಂಡಕ್ಟರ್ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಡಿಫೆನ್ಸ್ ಟ್ರೈನಿಂಗ್ ಕರಾಟೆ, ಜೂಡೋ, ಸಮರ ಕಲೆ, ಸ್ವಯಂ ದೃಢೀಕರಣ, ಕಾನೂನು ಜ್ಞಾನ, ಸಾರ್ವಜನಿಕ ಭಾಷಣದ ಬಗ್ಗೆ ತರಬೇತಿಯನ್ನು ನೀಡಲು ಬಿಎಂಟಿಸಿ ಮುಂದಾಗಿದೆ. 21 ದಿನಗಳ ಕೋರ್ಸ್ ಇದಾಗಿದ್ದು, 42 ಗಂಟೆಗಳ ತರಬೇತಿ ಹಾಗೂ 120 ನಿಮಿಷಗಳ ಸೆಷನ್ ನಡೆಸಲಾಗುತ್ತದೆ.