Tag: bengluru

  • ಡಬಲ್ ಮರ್ಡರ್‌ಗೂ  ಹಿಂದುತ್ವ ಲಿಂಕ್- ಸುಳ್ಳು ಸುದ್ದಿ ಹಬ್ಬಿಸದಂತೆ ಖಾಕಿ ವಾರ್ನಿಂಗ್

    ಡಬಲ್ ಮರ್ಡರ್‌ಗೂ ಹಿಂದುತ್ವ ಲಿಂಕ್- ಸುಳ್ಳು ಸುದ್ದಿ ಹಬ್ಬಿಸದಂತೆ ಖಾಕಿ ವಾರ್ನಿಂಗ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Double Murder in Bengaluru) ವೈಯಕ್ತಿಕ ದ್ವೇಷದ ಕಾರಣದಿಂದ ಮಂಗಳವಾರ ನಡೆದಿದ್ದ ಇಬ್ಬರು ಉದ್ಯಮಿಗಳ ಕೊಲೆ ಪ್ರಕರಣಕ್ಕೆ ಬಿಜೆಪಿ (BJP) ನಾಯಕರು ಬೇರೆಯದ್ದೇ ಆಯಾಮ ನೀಡಲು ಪ್ರಯತ್ನಿಸಿದ್ದಾರೆ. ಈ ಜೋಡಿ ಕೊಲೆಯಲ್ಲಿ ರಾಷ್ಟ್ರವಾದವನ್ನು, ಹಿಂದುತ್ವವನ್ನು ಎಳೆತಂದಿದ್ದಾರೆ. ಇದನ್ನೂ ಓದಿ: ಡಬಲ್‌ ಮರ್ಡರ್‌ ಬಳಿಕ ಪಬ್ಲಿಕ್‌ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?

    ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ್ಮೇಲೆ ಟಾರ್ಗೆಟ್ ಕಿಲ್ಲಿಂಗ್ ನಡೀತಿದೆ ಎಂದು ಬಿಜೆಪಿಯ ಸಿಟಿ ರವಿ (CT Ravi) ಆರೋಪಿಸಿದ್ದಾರೆ. ಫಣೀಂದ್ರ, ವಿನುಕುಮಾರ್ ಹತ್ಯೆ ಮೇಲ್ನೋಟಕ್ಕೆ ವೈಯಕ್ತಿಕ ಅನಿಸುತ್ತದೆ. ಆದರೆ ಇವರೆಲ್ಲರೂ ರಾಷ್ಟ್ರೀಯ ಚಿಂತನೆಯಲ್ಲಿ ಗುರುತಿಸಿಕೊಂಡ ಜನ. ಹಾಗಿದ್ದಾಗ ಸರಣಿ ಹತ್ಯೆಯ ಹಿಂದೆ ಪಿತೂರಿ ಇದ್ಯಾ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಡಬಲ್ ಮರ್ಡರ್ ಬಳಿಕ ಹೋಟೆಲ್ ರೂಂನಲ್ಲಿ ತಣ್ಣಗೆ ಎಣ್ಣೆ ಪಾರ್ಟಿ – ಫೆಲಿಕ್ಸ್ ಸೇರಿ ಮೂವರು ಲಾಕ್

    ಸಿಟಿ ರವಿ ಮಾತ್ರವಲ್ಲ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ದಿಯೋಧರ್ ಕೂಡ ಟ್ವೀಟ್ ಮಾಡಿ, ಬೆಂಗಳೂರಲ್ಲಿ ಹಿಂದೂ ಶ್ರೀಗಳ ಹತ್ಯೆಯಾಗಿದೆ. ಟಿಪ್ಪು ಸಿದ್ದಾಂತಿಗಳಿಂದ ಕರ್ನಾಟಕಕ್ಕೆ ಅಪಾಯಕಾರಿ ಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಬೆಂಗಳೂರಲ್ಲಿ ಹಿಂದೂ ನಾಯಕನ ಹತ್ಯೆ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ನೆಟ್ಟಿಗರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಇಂತಹ ಸೂಕ್ಷ್ಮ ವಿಚಾರವನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ಇಂದ ಇರಿ, ಈ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ತನಿಖೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್‌ ಚಕ್ರದಡಿ ತಲೆಯಿಟ್ಟ ಪತಿ!

    Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್‌ ಚಕ್ರದಡಿ ತಲೆಯಿಟ್ಟ ಪತಿ!

    ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ (Shakthi Scheme) ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರಗಳು ಬಯಲಾಗ್ತಾನೇ ಇವೆ. ಇದೀಗ ಕುಡುಕ ಪತಿಯೊಬ್ಬ ಟ್ರಿಪ್‍ಗೆ ಹೋದ ತನ್ನ ಪತ್ನಿ (Wife) ಬಂದಿಲ್ಲವೆಂದು ಅವಾಂತರ ಸೃಷ್ಟಿಸಿದ್ದಾನೆ.

    ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಪತ್ನಿ ವಿರುದ್ಧ ಸಿಟ್ಟಿಗೆದ್ದ ಪತಿ ಬಸ್ ಟೈಯರ್‌ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪರಿಣಾಮ ಹೊಸಕೋಟೆ (Hosakote) ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಟ ಅನುಭವಿಸಿದರು.

    ನನ್ನ ಹೆಂಡತಿ ಟ್ರಿಪ್ ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯ (Siddaramaiah) ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ (Free Bus Ticket For Women) ರದ್ದುಗೊಳಿಸಿ. ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣವನ್ನು ತೆಗೆದು ವ್ಯಕ್ತಿ ಹಾಕಬೇಕೆಂದು ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಸ್ತ್ರೀ ಶಕ್ತಿ ಎಫೆಕ್ಟ್ – ಒಂದೇ ತಿಂಗಳಲ್ಲಿ ಹುಲಿಗೆಮ್ಮನ ಹುಂಡಿಯಲ್ಲಿ 1 ಕೋಟಿ ರೂ. ಕಾಣಿಕೆ ಸಂಗ್ರಹ

    ಕಂಠಪೂರ್ತಿ ಕುಡಿದಿರುವ ವ್ಯಕ್ತಿ ತೂರಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ ಬಸ್ ಟೈಯರ್‍ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೆರೆದ ಜನ ಆತನನ್ನು ರಕ್ಷಣೆ ಮಾಡಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರೀ ಬಸ್ ಸ್ಕೀಂಗೆ ಹೆಚ್ಚಾಯ್ತು ಬೇಡಿಕೆ- ನಿವೃತ್ತ ನೌಕರರಿಂದ ಉಚಿತ ಪ್ರಯಾಣಕ್ಕೆ ಬೇಡಿಕೆ

    ಫ್ರೀ ಬಸ್ ಸ್ಕೀಂಗೆ ಹೆಚ್ಚಾಯ್ತು ಬೇಡಿಕೆ- ನಿವೃತ್ತ ನೌಕರರಿಂದ ಉಚಿತ ಪ್ರಯಾಣಕ್ಕೆ ಬೇಡಿಕೆ

    ಬೆಂಗಳೂರು: ರಾಜ್ಯದಲ್ಲಿ 11 ರಿಂದ ನಾರಿಯರಿಗೆ ಫ್ರೀ ಬಸ್ (Free Bus Ticket) ಪ್ರಯಾಣ ಮಾಡಲು ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರು (Retired Employees) ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಅಂತ ಬೇಡಿಕೆ ಇಟ್ಟಿದ್ದಾರೆ.

    ನಿವೃತ್ತಿ ಹೊಂದಿದ ನೌಕರರ ಪತಿ/ಪತ್ನಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿ. ನಿವೃತ್ತರಾದ ಬಳಿಕ ಪ್ರಯಾಣಿಸಲು ಸಾರಿಗೆ ನಿಗಮ ವಾರ್ಷಿಕವಾಗಿ 500 ರೂ. ವನ್ನು ನಿಗಮಗಳು ವಸೂಲಿ ಮಾಡುತ್ತಿವೆ. 35 – 40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ 500 ವಸೂಲಿ ಮಾಡುವುದು ಸರಿಯಲ್ಲ. ನಿವೃತ್ತ ನೌಕರರಿಗೂ ಉಚಿತವಾಗಿ ಬಸ್‍ನಲ್ಲಿ ಅವಕಾಶ ನೀಡಬೇಕು ಅಂತಾ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜೂನ್‌ 11ರಿಂದ ಎಕ್ಸ್‌ಪ್ರೆಸ್‌ ಬಸ್ಸಿನಲ್ಲೂ ಮಹಿಳೆಯರಿಗೆ ಫ್ರೀ.. ಫ್ರೀ.. ಫ್ರೀ.

    ರಾಜ್ಯದಲ್ಲಿ ಅಂದಾಜು ಹತ್ತು ಸಾವಿರ ನಿವೃತ್ತ ನೌಕರರು ಇದ್ದಾರೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ ನಾಲ್ಕು ನಿಗಮಗಳ ನಿವೃತ್ತಿ ಹೊಂದಿದ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆಗೆ ಒತ್ತಾಯ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೆಎಸ್‍ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಆಗಸ್ಟ್ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ: ಯಾರು ಅರ್ಜಿ ಸಲ್ಲಿಕೆ ಮಾಡಬಹುದು?

     

  • RSS ನಿಷೇಧಿಸಲಿ ನೋಡೋಣ- ಬೊಮ್ಮಾಯಿ ಸವಾಲು

    RSS ನಿಷೇಧಿಸಲಿ ನೋಡೋಣ- ಬೊಮ್ಮಾಯಿ ಸವಾಲು

    ಬೆಂಗಳೂರು: ಆರ್ ಎಸ್‍ಎಸ್ (RSS) ನಿಷೇಧಿಸಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommi) ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಘಸಂಸ್ಥೆ ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಠೀಕರಣಕ್ಕೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಯಾರನ್ನು ತುಷ್ಠೀಕರಣ ಮಾಡ್ತಿದ್ದಾರೋ, ಅವರನ್ನೂ ಯಾಮಾರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಆರ್ ಎಸ್‍ಎಸ್, ಬಜರಂಗದಳ (Bajrangdal) ನಿಷೇಧದ ಬಗ್ಗೆ ಸಿಎಂ ಅವರು ತಮ್ಮ ಅಭಿಪ್ರಾಯ, ನಿಲುವು ಸ್ಪಷ್ಟಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನತೆಗೆ ತಿಳಿಸಲಿ. ಆರ್ ಎಸ್‍ಎಸ್ ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ. ಇಂತಹ ಸಾಹಸಕ್ಕೆ ಕೈಹಾಕಿದವರನ್ನು ಜನ ಈಗಾಗಲೇ ಮನೆಗೆ ಕಳಿಸಿದ್ದಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: RSS ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ: ನಳಿನ್ ಕುಮಾರ್ ಕಟೀಲ್

    ನೂತನ ಸರ್ಕಾರ ರಚನೆಯಾಗಿದೆ, ಎಂಟು ಜನ ಸಚಿವರಾಗಿದ್ದಾರೆ. ಈ ಸಚಿವರು ರಾಜ್ಯ, ಜನರ ಹಿತದೃಷ್ಟಿಯಿಂದ ಮಾತಾಡ್ತಿಲ್ಲ. ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಬದಲು ದ್ವೇಷದ ರಾಜಕಾರಣವೇ ಈ ಸರ್ಕಾರಕ್ಕೆ ಪ್ರಮುಖವಾಗಿದೆ. ಅವರು ಏನೇ ಕೇಸ್ ಹಾಕಿದರೂ ಸಮರ್ಥವಾಗಿ ಎದುರಿಸುತ್ತೇವೆ. ಹಿಂದೆನೂ ಅವರು ಕೇಸ್ ಗಳನ್ನು ಹಾಕಿದ್ರು. ಒಂದು ಚುನಾಯಿತ ಸರ್ಕಾರದ ಎದುರು ಹಲವು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡುವ ವಿಚಾರ ಎಲ್ಲೂ ಕಾಣ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಪ್ರಯತ್ನ ಆಗಿಲ್ಲ ಎಂದರು.

    ಸಿಎಂ ಆಯ್ಕೆ ವಿಚಾರ, ಭಿನ್ನಾಭಿಪ್ರಾಯ ಗಮನಿಸಿದ್ದೇನೆ. ಅವರಲ್ಲಿರುವ ಎರಡು ಬಣಗಳು, ಮಂತ್ರಿಗಳ ಆಯ್ಕೆಯಲ್ಲಿ ಗೊಂದಲ ಎಲ್ಲ ನೋಡುತ್ತಿದ್ದೇನೆ. ಇದು ಎಲ್ಲೋ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ರೀತಿ ಇದೆ. ಒಂದೇ ಪಕ್ಷದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅನಿಸ್ತಿದೆ. ಕಳೆದ ಸಮ್ಮಿಶ್ರ ಸರ್ಕಾರವು ಲೋಕಸಭೆ ಚುನಾವಣೆವರೆಗೆ ಮಾತ್ರ ಇತ್ತು. ಈ ಸಮ್ಮಿಶ್ರ ಸರ್ಕಾರವೂ ಲೋಕಸಭೆ ಚುನಾವಣೆ ವರೆಗೆ ಮಾತ್ರ ಇರುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ಬಗ್ಗೆ ಬೊಮ್ಮಾಯಿ ಭವಿಷ್ಯ ನುಡಿದರು.

  • ಪುರಭವನದಲ್ಲಿ ಭಾರೀ ಹೈಡ್ರಾಮಾ – ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು

    ಪುರಭವನದಲ್ಲಿ ಭಾರೀ ಹೈಡ್ರಾಮಾ – ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು

    ಬೆಂಗಳೂರು: ಸಿಟಿ ಸಿವಿಲ್‌ ಕೋರ್ಟ್‌ (City Civil Court) ತಡೆ ನೀಡಿದ ಹಿನ್ನೆಲೆಯಲ್ಲಿ ʼಸಿದ್ದು ನಿಜಕನಸುಗಳುʼ ಪುಸ್ತಕ ಬಿಡುಗಡೆಗೆ ಕಾರ್ಯಕ್ರಮ ರದ್ದಾಗಿದೆ

    ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ʼಸಿದ್ದು ನಿಜಕನಸುಗಳು ಸಂಪುಟ 1ʼ (Siddu Nija Kanasugalu) ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.

    ಉನ್ನತ ಶಿಕ್ಷಣ ಸಚಿವ ಡಾ. ಸಿಎನ್‌ ಅಶ್ವತ್ಥನಾರಾಯಣ ಪುಸ್ತಕವನ್ನು ಬಿಡುಗಡೆಗೊಳಿಸಬೇಕಿತ್ತು. ಈ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ತಿಳಿದು ಪುರಭವವನದ ಬಳಿ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ – ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಪುಸ್ತಕ ಬಿಡುಗಡೆ ವಿಚಾರ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಅವರು ಕೋರ್ಟ್‌ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು.

    ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್‌ ಕೋರ್ಟ್‌ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.  ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್‌  ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.

    ತಡೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಾ? ಬೇಡವೇ ಎಂಬುದರ ಬಗ್ಗೆ ಆಯೋಜಕರ ನಡುವೆ ಗೊಂದಲ ಇತ್ತು. ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರೆ ಕೆಲವರು ಪುರಭವನದ ಒಳಗಡೆ ನುಗ್ಗಿದ್ದರು. ಹೀಗಾಗಿ ಒಳಗಡೆ ಭಾರೀ ಹೈಡ್ರಾಮಾವೇ ನಡೆದಿತ್ತು.

    ಕೊನೆಗೆ ಆಯೋಜಕರು ಇಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡುತ್ತೇವೆ ಎಂದು ವೇದಿಕೆ ಮೇಲೆ ಪ್ರಕಟಿಸಿದರು. ಪರಿಷತ್‌ ಸದಸ್ಯ, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿ, ಕೋರ್ಟ್‌ ಆದೇಶವನ್ನು ಗೌರವಿಸಿ ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ. ಮುಂದೆ ಪುಸ್ತಕ ಬಿಡುಗಡೆಯ ದಿನಾಂಕ ತಿಳಿಸಲಾಗುವುದು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ

    ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ

    ಬೆಂಗಳೂರು: ʼಸಿದ್ದು ನಿಜ ಕನಸುಗಳುʼ ಪುಸ್ತಕ ಬಿಡುಗಡೆ ಸಿಟಿ ಸಿವಿಲ್‌ ಕೋರ್ಟ್‌ (City Civil Court) ತಡೆ ನೀಡಿದೆ.

    ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ʼಸಿದ್ದು ನಿಜಕನಸುಗಳು ಸಂಪುಟ 1ʼ (Siddu Nija Kanasugalu) ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.

     

    ಉನ್ನತ ಶಿಕ್ಷಣ ಸಚಿವ ಡಾ. ಸಿಎನ್‌ ಅಶ್ವತ್ಥನಾರಾಯಣ್ ಪುಸ್ತಕವನ್ನು ಬಿಡುಗಡೆಗೊಳಿಸಬೇಕಿತ್ತು. ಈ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ತಿಳಿದು ಪುರಭವವನದ ಬಳಿ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಸಿದ್ದು ನಿಜಕನಸು ಪುಸ್ತಕಕ್ಕೆ ಸಿದ್ದರಾಮಯ್ಯ ಕೌಂಟರ್- ಸರಣಿ ಪೋಸ್ಟರ್ ಮೂಲಕ ತಿರುಗೇಟು

    ಪುಸ್ತಕ ಬಿಡುಗಡೆ ವಿಚಾರ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಅವರು ಕೋರ್ಟ್‌ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು.

    ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್‌ ಕೋರ್ಟ್‌ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.  ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್‌  ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪು ಮಗನೇ  ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಪುನೀತ್ ರಾಜ್‍ಕುಮಾರ್ (Puneeth RajKumar) ನಟನೆಯ ಗಂಧದ ಗುಡಿ (Gandhada Gudi)  ಡಾಕ್ಯುಮೆಂಟರಿ  ಮಾದರಿಯ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗುತ್ತಿದೆ. ಅಭಿಮಾನಿಗಳಿಗಾಗಿ ಟ್ರೈಲರ್ ನೋಡಲು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಚಿತ್ರಮಂದಿರಕ್ಕೆ ಪುನೀತ್ ಕುಟುಂಬ ಕೂಡ ಭಾಗಿಯಾಗಲಿದೆ.

    ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ (Raghevendra RajKumar), ಶಿವರಾಜ್ ಕುಮಾರ್ (Shivaraj Kumar), ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಕೂಡ ಭಾಗಿಯಾಗಲಿದ್ದಾರೆ. ಥಿಯೇಟರ್ ಗೆ ಹೋಗುವ ಮುನ್ನ ಬೆಳಗ್ಗೆ ರಾಘವೇಂದ್ರ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪುನೀತ್ ಜೊತೆಗಿರುವ ಫೋಟೋ (Photo) ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    ಸೋಷಿಯಲ್ ಮೀಡಿಯಾದಲ್ಲಿ ಭಾವುಕತೆಯಿಂದ ಕೆಲವು ಸಾಲುಗಳನ್ನು ಬರೆದಿರುವ ರಾಘಣ್ಣ, ಅಪ್ಪು ಮಗನೇ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನೀನೇ ನನ್ನ ಕೈ ಹಿಡಿದು ಕರೆದುಕೊಂಡು ಹೋಗುವಂತೆ ಭಾಸವಾಗುತ್ತಿದೆ ಎಂದು ಬರೆದಿದ್ದಾರೆ. ತಮ್ಮ ಕೈ ಹಿಡಿದುಕೊಂಡು ನರ್ತಕಿ ಚಿತ್ರಮಂದಿರದ ಒಳಗೆ ಅಪ್ಪು ಕರೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

    ಗಂಧದ ಗುಡಿ ಪುನೀತ್ ರಾಜ್‍ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್. ಇದು ಅವರ ಕೊನೆಯ ಸಿನಿಮಾ ಕೂಡ. ಲಾಕ್ ಡೌನ್ ವೇಳೆಯಲ್ಲಿ ಕಾಡಿನೊಳಗಿದ್ದು, ಕರುನಾಡ ವನ ಸಂಪತ್ತನ್ನು ಸೆರೆ ಹಿಡಿದಿದ್ದಾರೆ. ಪ್ರಾಣಿ, ಕಾಡು, ಪರಿಸರ, ಜಲಚರ ಹೀಗೆ ಅನೇಕ ಸಂಗತಿಗಳನ್ನು ಇದರಲ್ಲಿ ತಂದಿದ್ದಾರೆ. ಡಾಕ್ಯುಮೆಂಟರಿ ಮಾದರಿಯಲ್ಲಿರುವ ಈ ಚಿತ್ರದಲ್ಲಿ ಪುನೀತ್ ಪ್ರತಿ ದೃಶ್ಯದಲ್ಲೂ ಆವರಿಸಿಕೊಂಡಿದ್ದಾರೆ. ಇದರ ಟ್ರೈಲರ್ ಇಂದು ಬೆಳಗ್ಗೆ 9.45ಕ್ಕೆ ನರ್ತಕಿ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ: ಸಿ.ಟಿ ರವಿ

    ಮುರುಘಾ ಶ್ರೀ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ: ಸಿ.ಟಿ ರವಿ

    ಬೆಂಗಳೂರು: ಮುರುಘಾ ಶ್ರೀ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

    ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ತನಿಖೆಗೆ ಮೊದಲೇ ಅಪರಾಧಿ ಪಟ್ಟ ಕಟ್ಟಲು ಬರೋದಿಲ್ಲ. ಹಾಗೆಯೇ ನಿರಪರಾಧಿ ಅಂತ ಹೇಳೋಕು ಆಗಲ್ಲ ಅಂತ ತಿಳಿಸಿದರು.

    3-4 ದಶಗಳಿಂದ ದುರ್ಬಲ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಶ್ರೀಗಳು ಮಾಡಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ. ಸಿಎಂ ಕೂಡಾ ಇದನ್ನೇ ಹೇಳಿದ್ದಾರೆ. ಆಳಿನಿಂದ ಹಿಡಿದು ಅರಸನವರೆಗೂ ಕಾನೂನು ಒಂದೇ ಆಗಿರುತ್ತದೆ ಎಂದರು.  ಇದನ್ನೂ ಓದಿ: ನಮಾಜ್‌ ಮಾಡಿ ಹೇಗೇ ಸಂಭ್ರಮಿಸುತ್ತಾರೋ ಗಣೇಶೋತ್ಸವ ಮಾಡಿ ಸಂಭ್ರಮಿಸಲು ನಮಗೂ ಅವಕಾಶವಿದೆ: ಸಿಟಿ ರವಿ

    ತನಿಖೆ ಹಂತದಲ್ಲಿ ಇರೋವಾಗ ಮಾತನಾಡಿದ್ರೆ ತಪ್ಪಾಗುತ್ತೆ. ಯಡಿಯೂರಪ್ಪ ಸ್ವಾಮೀಜಿ ಪರ ಸಮರ್ಥನೆ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಏನಾದ್ರು ಹೇಳಿದ್ರೆ ಬೇರೆ ಬೇರೆ ರೀತಿ ಅರ್ಥೈಸುವಂತ ಸಾಧ್ಯತೆಗಳೇ ಜಾಸ್ತಿ ಇದೆ. ಇದನ್ನ ಕಾನೂನು ವ್ಯಾಪ್ತಿಗೆ ಬಿಟ್ಟು ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.

    ಯಾವುದೇ ರೀತಿ ಹೇಳಿಕೆಯನ್ನ ಕೊಟ್ಟರೆ ತಪ್ಪು ಅರ್ಥ ಬರಲಿದೆ. ಹೀಗಾಗಿ ಈ ಬಗ್ಗೆ ಹೆಚ್ಚೇನು ಹೇಳೋದಿಲ್ಲ. ಒಂದು ಗಾದೆ ಮಾತಿದೆ, ನದಿ ಮೂಲ, ಖುಷಿ ಮೂಲ, ಡ್ಯಾಶ್ ಮೂಲ ಕೆದಕೋಕೆ ಹೋಗಬಾರದಂತೆ. ಹೀಗಾಗಿ ಇದರ ಬಗ್ಗೆ ಕೆದಕೋದಕ್ಕೆ ಹೋಗುವುದಿಲ್ಲ. ತನಿಖೆ ಹಂತದಲ್ಲಿ ನಾನು ಹೇಳಿದ್ರೆ ಅದೇನೋ ಅರ್ಥ ಆಗುತ್ತೆ. ಹೀಗಾಗಿ ನಾನು ಹೆಚ್ಚು ಮಾತಾಡೋದಿಲ್ಲ ಎಂದರು.

    Live Tv
    [brid partner=56869869 player=32851 video=960834 autoplay=true]

  • ಪಕ್ಷಾಂತರ ಕೇವಲ ಊಹಾಪೋಹ: ಬೊಮ್ಮಾಯಿ

    ಪಕ್ಷಾಂತರ ಕೇವಲ ಊಹಾಪೋಹ: ಬೊಮ್ಮಾಯಿ

    ಬೆಂಗಳೂರು: ಬಿಜೆಪಿಯಿಂದ ಯಾರೂ ಪಕ್ಷಾಂತರ ಮಾಡುವ ಪ್ರಶ್ನೆಯೇ ಇಲ್ಲ. ಮೊದಲೂ ಇರಲಿಲ್ಲ. ಈಗಲೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಕ್ಷಾಂತರದ ಬಗ್ಗೆ ಸ್ಪಷ್ಟಣೆ ನೀಡಿದರು. ನಮ್ಮ ಪಕ್ಷದಿಂದ ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ನಿಖರವಾಗಿ ಹೇಳಬಹುದು. ಬೇರೆ ಪಕ್ಷದಿಂದ ಬಿಜೆಪಿಗೆ ಬರುವವರ ಬಗ್ಗೆ ಕಾಡು ನೋಡಿ ಎಂದರು. ಇದನ್ನೂ ಓದಿ: ನವೀನ್ ದೇಹ ತರುವ ಬಗ್ಗೆ ಮಾತುಕತೆ ನಡೀತಿದೆ: ಬೊಮ್ಮಾಯಿ

    ಮಾರ್ಚ್ 30 ಹಾಗೂ 31 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಪ್ರವಾಸದ ಕುರಿತು ಹಾಗೂ ಎಲ್ಲ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ‘ಪಂಚ’ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ- ಬಿಜೆಪಿಯಲ್ಲೂ ‘ಹೈ’ ಆಪರೇಷನ್..!

    ಅವಧಿ ಪೂರ್ವ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದ ಮುಖ್ಯ ಮಂತ್ರಿಗಳು ಸಂಪುಟ ವಿಸ್ತರಣೆ ಕುರಿತು ವರಿಷ್ಠರಿಂದ ಸೂಚನೆ ಬಂದ ಕೂಡಲೇ ದೆಹಲಿಗೆ ತೆರಳುವುದಾಗಿ ಹೇಳಿದರು. ಇದೇ ವೇಳೆ ಉಕ್ರೇನ್ ನಲ್ಲಿ ಬಾಂಬ್ ದಾಳಿ ನಿಂತ ಕೂಡಲೇ ನವೀನ್ ಮೃತ ದೇಹ ತರುವ ಬಗ್ಗೆ ಪ್ರಕ್ರಿಯೆಗೆ ಪುನಃ ಚಾಲನೆ ನೀಡಲಾಗುವುದು ಎಂದರು.

  • ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆ ವಿಚಾರ ತೀವ್ರ ಆಘಾತವನ್ನುಂಟುಮಾಡಿದೆ. ಇದೀಗ ಬಾರಿಂಗ್ ಆಸ್ಪತ್ರೆ ಆವರಣದಲ್ಲಿದ್ದ ಟೀ ಸ್ಟಾಲ್ ಯುವಕ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕ ಚಂದನ್, ಸೌಂದರ್ಯ ಅವರು ತುಂಬಾ ಅನೊನ್ಯವಾಗಿದ್ದರು. ತಮ್ಮ ಸ್ನೇಹಿತರ ಜೊತೆ ಆಗಾಗ ಟೀ ಸ್ಟಾಲ್ ಗೆ ಬರುತ್ತಿದ್ದರು. ಆದರೆ ಅವರು ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಅಂತ ಗೊತ್ತಿರಲಿಲ್ಲ. ಇದೀಗ ಆತ್ಮಹತ್ಯೆ ವಿಷಯ ತಿಳಿದ ಕೂಡಲೇ ನಮ್ಮ ಅಕ್ಕನೇ ಹೋದ್ರು ಅನ್ನೋ ತರ ಶಾಕ್ ಆಯ್ತು ಎಂದು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಸೌಂದರ್ಯನನ್ನು ಕಳೆದುಕೊಂಡ ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ವಿಭಿನ್ನವಾಗಿ ಪ್ರೆಗ್ನೆಸ್ಸಿ ಫೋಟೋಶೂಟ್ ಮಾಡಿಸಿಕೊಂಡ ನಟಿ ದಿಶಾ..!

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಶುಕ್ರವಾರ ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್‍ ಫ್ಲಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಮಟೆಯ ಸುಮಾರಿಗೆ ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಸೌಂದರ್ಯ ಸೂಸೈಡ್ ಮಾಡಿಕೊಂಡಿದ್ದಾರೆ.

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‍ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.