Tag: bengluru

  • ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಬೆಂಗಳೂರು: ನಟ ದರ್ಶನ್ (Actor Darshan) ಹೊಡೆತದಿಂದಲೇ ರೇಣುಕಾಸ್ವಾಮಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿಯು ಚಾರ್ಜ್‌ಶೀಟ್‌ನಿಂದ (Chargesheet)  ಬಯಲಾಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukswamy Murder Case) ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಇದೀಗ ರೇಣುಕಾಸ್ವಾಮಿ ಸಾವಿಗೆ ದರ್ಶನ್ ಅವರ ಹೊಡೆತವೇ ಕಾರಣವಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಇವ್ನನ್ನು ಉಳಿಸಬೇಡಿ, ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದೇನು?

    ರೇಣುಕಾಸ್ವಾಮಿ ಸಾಯುವ ಮುನ್ನ ದರ್ಶನ್, ಆತನಿಗೆ ಮೂರು ಹೊಡೆತಗಳನ್ನು ಕೊಟ್ಟಿದ್ದರು ಎಂದು ಮಾಹಿತಿ ಹೊರ ಬಿದ್ದಿದೆ. ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್ 45 ನಿಮಿಷಗಳ ಕಾಲ ಪಟ್ಟಣಗೆರೆ ಶೆಡ್‌ನಲ್ಲಿದ್ದರು. ದರ್ಶನ್ ಆ ಮೂರು ಹೊದೆತದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದಿದೆ.

    ಮೊದಲ ಬಾರಿ 110 ಕೆಜಿಯ ದರ್ಶನ್ ನರಪೇತಲನಂತಿದ್ದ ರೇಣುಕಾಸ್ವಾಮಿ ಎದೆಗೆ ಶೂ ಕಾಲಿನಿಂದ ಒಂದೇ ಸಮನೆ ಒದ್ದಿದ್ದಾರೆ. ದರ್ಶನ್ ಮೊದಲ ಹೊಡೆತಕ್ಕೆ ರೇಣುಕಾಸ್ವಾಮಿಯ ಎದೆಯಲ್ಲಿನ ಮೂಳೆಗಳ ಮುರಿತವಾಗಿದೆ. ಎರಡನೇ ಬಾರಿ ದರ್ಶನ್, ರೇಣುಕಾಸ್ವಾಮಿಯನ್ನು ಸಿನಿಮೀಯ ಶೈಲಿಯಲ್ಲಿ ಎತ್ತಿ ಲಾರಿಗೆ ಬಿಸಾಕಿದ್ದಾರೆ. ಬಿಸಾಕಿದ ರಭಸಕ್ಕೆ ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿದೆ. ತಲೆ ಬುರುಡೆಗೆ ಏಟು ಬಿದ್ದು ರಕ್ತ ಹೆಪ್ಪುಗಟ್ಟಿದೆ.ಇದನ್ನೂ ಓದಿ: ಮಂತ್ರಾಲಯ ಗುರುರಾಯರ ಮೊರೆ ಹೋದ ನಟ ದರ್ಶನ್‌ ಪತ್ನಿ

    ಮೂರನೇ ಬಾರಿ ದರ್ಶನ್, ರೇಣುಕಾಸ್ವಾಮಿಗೆ ಅವನು ಪವಿತ್ರಾ ಗೌಡಗೆ ಕಳಿಸಿದ್ದ ಫೋಟೊವನ್ನು ತೋರಿಸಿದ್ದಾರೆ. ಇದೇ ಫೋಟೊ ಅಲ್ವೇನೊ ನೀನು ಕಳಿಸಿದ್ದು ನಿನ್ನ…..! ಎಂದು ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಮರ್ಮಾಂಗಕ್ಕೆ ಒದೆಯುತ್ತಿದ್ದಂತೆ ರೇಣುಕಾಸ್ವಾಮಿಗೆ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಈ ಮೂರು ಹೊಡೆತಗಳೇ ರೇಣುಕಾಸ್ವಾಮಿ ಸಾವಿಗೆ ಕಾರಣ ಎಂದು ಮಾಹಿತಿ ಹೊರಬಿದ್ದಿದ್ದು, ಎಫ್‌ಎಸ್‌ಎಲ್ (FSL) ರಿಪೋರ್ಟ್‌ನಲ್ಲಿ ಸಾವಿನ ರಹಸ್ಯ ಬಯಲಾಗಿದೆ.

  • ಪಬ್ಲಿಕ್‌ ಟಿವಿ ವಿದ್ಯಾ ಮಂದಿರಕ್ಕೆ ಚಾಲನೆ – ಬನ್ನಿ PG ಕಾಲೇಜ್‌, ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ

    ಪಬ್ಲಿಕ್‌ ಟಿವಿ ವಿದ್ಯಾ ಮಂದಿರಕ್ಕೆ ಚಾಲನೆ – ಬನ್ನಿ PG ಕಾಲೇಜ್‌, ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ

    ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತಿಯ ಮೂರನೇ ಆವೃತ್ತಿಯ ವಿದ್ಯಾಮಂದಿರ (Vidhya Mandira) ಶೈಕ್ಷಣಿಕ ಮೇಳಕ್ಕೆ (Education Expo) ಇಂದು ಚಾಲನೆ ಸಿಕ್ಕಿದೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವಥ್ ನಾರಾಯಣ್ ಮತ್ತು ರೇವಾ ಯೂನಿವರ್ಸಿಟಿಯ ಚಾನ್ಸಲರ್ ಡಾ. ಪಿ ಶ್ಯಾಮರಾಜು ಅವರು ಟೇಪ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಉದ್ಘಾಟನೆಯ ಬಳಿಕ ಅತಿಥಿಗಳ ಜೊತೆ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್ ಆರ್ ರಂಗನಾಥ್ (HR Ranganath) ಸ್ಟಾಲ್‌ ವೀಕ್ಷಣೆ ಮಾಡಿದರು.

     

    ಪಬ್ಲಿಕ್‌ ಟಿವಿ (PUBLiC TV) ಪ್ರಸ್ತುತ ಪಡಿಸುತ್ತಿರುವ AD6 ಅಡ್ವರ್ಟೈಸಿಂಗ್‌ ಸಹಯೋಗದಲ್ಲಿ ನಡೆಯುತ್ತಿರುವ ವಿದ್ಯಾಮಂದಿರ ಕಾರ್ಯಕ್ರಮ ಇಂದು ಮತ್ತು ನಾಳೆ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ. ಇದನ್ನೂಓದಿ:ಏರ್‌ಲಿಫ್ಟ್‌ ವೇಳೆ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ

     

    ಎರಡು ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಜುಕೇಷನ್‌ ಎಕ್ಸ್‌ಪೋ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬಹುದು. ಡಿಗ್ರಿ ಕೋರ್ಸ್ ಬಳಿಕ ಮುಂದೇನು ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ಪಬ್ಲಿಕ್ ಟಿವಿ ವಿದ್ಯಾಮಂದಿರ ಎಜುಕೇಶನ್ ಎಕ್ಸ್‌ಪೋ ಪರಿಹಾರ ನೀಡಲಿದೆ. ಇದನ್ನೂಓದಿ:ಪವಿತ್ರಾ ಗೌಡ ಮನೆಯಲ್ಲಿ ಸೊರಗಿ ಹೋಗಿದ್ದ ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್

    ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

  • ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

    ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ. ಅದರ ನಡುವೆ ನಮ್ಮ ಹಿರಿಯರು ನಮ್ಮತನವನ್ನು ಉಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು.

    78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಮೊದಲು ಕಿಚ್ಚು ಹಚ್ಚಿದ್ದೆ ಕರ್ನಾಟಕ. ನೂರು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮ ಗಾಂಧಿ (Mahatma Gandhi) ಕರ್ನಾಟಕದಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ಈ ದಿನವನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಾತನಾಡಿದರು. ಇದನ್ನು ಓದಿ : ಸ್ವಾತಂತ್ರ್ಯ ದಿನದ ಸಂಭ್ರಮ – ದೇಶಭಕ್ತಿ ಮೆರೆದ ಟೀಂ ಇಂಡಿಯಾ ಸ್ಟಾರ್ಸ್‌!

    ಸ್ವಾತಂತ್ರ್ಯ ಎಂದರೆ ಇತಿಹಾಸ ನೆನಪಿಸುವ ದಿನ. ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಇದ್ದೆವು, ಈಗ ಹೇಗೆ ಇದ್ದೇವೆ ಎಂದು ಅವಲೋಕನ ಮಾಡುವ ದಿನ. ಸ್ವಾತಂತ್ರ್ಯ ಎಂದರೆ ಬೆಲೆಕಟ್ಟಿ ಪಡೆಯುವ ವಸ್ತುವಲ್ಲ. ಅದು ನಮ್ಮ ಉಸಿರು. ಇದನ್ನು ಮಹಾತ್ಮ ಗಾಂಧಿ ಹೇಳಿದ್ದಾರೆ ಎಂದರು. ಇದನ್ನು ಓದಿ : ರಾಜ್ಯಪಾಲರಿಂದ ಧ್ವಜಾರೋಹಣ – ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗ್ತಿದೆ: ಗೆಹ್ಲೋಟ್

    ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಇದು. ಈ ಪಕ್ಷದಲ್ಲಿ ಇದ್ದೇವೆ ಅನ್ನುವುದೇ ಹೆಮ್ಮೆಯ ವಿಚಾರ. ನೆಹರೂ (Jawaharlal Nehru), ವಲ್ಲಭಭಾಯಿ ಪಟೇಲ್ (Sardar Vallabhbhai Patel) ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂಬ ಸುಳ್ಳು ಸುದ್ದಿ ಗಮನಿಸಿದ್ದೇವೆ. 6.5 ಲಕ್ಷ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಇದನ್ನು ಓದಿ : ತುಂಗಭದ್ರಾ ಜಲಾಶಯದಲ್ಲಿ ಭರದಿಂದ ಸಾಗಿದ ಗೇಟ್ ಅಳವಡಿಕೆ ಕಾರ್ಯ

    ವರ್ಷಪೂರ್ತಿ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದೇವೆ. ಅದಕ್ಕಾಗಿ ಒಂದು ಕಮಿಟಿ ರಚಿಸಿದ್ದೇವೆ. ಸಾರ್ವಜನಿಕ ವಲಯ ಕಟ್ಟಿ ಬೆಳಸಿದ್ದು ಕಾಂಗ್ರೆಸ್ ಪಕ್ಷ. ಅಂದು ಬ್ರಿಟಿಷರ ಪರ ನಿಂತಿದ್ದವರನ್ನು ತಿರಸ್ಕಾರ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಲು ಶ್ಯಾಮ್ ಪ್ರಸಾದ್ ಮುಖರ್ಜಿ ಪತ್ರ ಬರೆದಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು. ಇದನ್ನು ಓದಿ : ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ತ್ವರಿತ ತನಿಖೆ, ಶಿಕ್ಷೆಯ ಅಗತ್ಯವಿದೆ: ಮೋದಿ

    ಗ್ಯಾರಂಟಿ ನಿಲ್ಲಿಸುವ ಮಾತೇ ಇಲ್ಲ: ಸಿಎಂ
    ಯಾವ ಕಾರಣಕ್ಕೂ ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಸಿಎಂ ಸಿದ್ದರಾಮಯ್ಯ(CM Siddaramaiha) ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು. ಐದು ಗ್ಯಾರಂಟಿಗಳನ್ನು ರಾಜ್ಯಕ್ಕೆ ಕೊಟ್ಟು ದೇಶಕ್ಕೆ ಮಾದರಿಯಾಗಿದ್ದೇವೆ. ಭಾವನೆಯ ಬದುಕು ಬಿಟ್ಟು ಹಸಿವು ಮುಕ್ತ ರಾಜ್ಯವಾಗಬೇಕು ಎಂಬುದು ನಮ್ಮ ಆಶಯ. ಎಲ್ಲ ವರ್ಗದ ಜನರು ಬದುಕಬೇಕು ಎಂದರು. ಇದನ್ನು ಓದಿ : ಹಾಸನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ – 2,500 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ

  • ಮೊಬೈಲ್‍ನಲ್ಲಿ ಮಾತಾಡ್ತಿದ್ದಾಗ ದಾಳಿ- ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

    ಮೊಬೈಲ್‍ನಲ್ಲಿ ಮಾತಾಡ್ತಿದ್ದಾಗ ದಾಳಿ- ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

    ಬೆಂಗಳೂರು: ಹಳೆಯ ದ್ವೇಷದಿಂದ ಗ್ರಾಮ ಪಂಚಾಯತಿ ಸದಸ್ಯನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ (Hosakote) ನಡೆದಿದೆ.

    ಮೃತನನ್ನು ಅಮೀರ್ ಖಾನ್ (45) ಎಂದು ಗುರುತಿಸಲಾಗಿದೆ. ಇವರು ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯ್ತಿ ಸದಸ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲಿಸ್ ಠಾಣಾ ವ್ಯಾಪ್ತಿಯ ಬೈಲ್ ನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಗ್ರಾಮ ಪಂಚಾಯತಿ ಕಛೇರಿಯ ಬಳಿ ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಗ್ರಾಮದ ಮೆಹಬೂಬ್ ಇತರೊಂದಿಗೆ ಬಂದು ಲಾಂಗ್ ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇತ್ತ ಘಟನೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಮೀರ್ ಖಾನ್ ಅವರನ್ನು ಕೂಡಲೇ ಎಂ ವಿಜಿ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಅಮೀರ್ ಖಾನ್ ಮೃತಪಟ್ಟರು.

    ಘಟನಾ ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಎಂವಿಜೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದವನ ಮೇಲೆ ಕೊಲೆ ಆರೋಪದ ಸಂಚು – ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತೆ

  • ಡಾ. ಕೆ.ಎಸ್‌ ರಾಜಣ್ಣ ಪದ್ಮಶ್ರೀ ಸ್ವೀಕಾರ- ಹೃದಯ ಸ್ಪರ್ಶಿ ವೀಡಿಯೋ ಹಂಚಿಕೊಂಡ ಶೋಭಾ ಕರಂದ್ಲಾಜೆ

    ಡಾ. ಕೆ.ಎಸ್‌ ರಾಜಣ್ಣ ಪದ್ಮಶ್ರೀ ಸ್ವೀಕಾರ- ಹೃದಯ ಸ್ಪರ್ಶಿ ವೀಡಿಯೋ ಹಂಚಿಕೊಂಡ ಶೋಭಾ ಕರಂದ್ಲಾಜೆ

    ಬೆಂಗಳೂರು: ಹಿರಿಯ ನಟಿ ವೈಜಯಂತಿಮಾಲಾ, ನಟ ಚಿರಂಜೀವಿ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಯ ಹೃದಯಸ್ಪರ್ಶಿ ವೀಡಿಯೋವೊಂದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobh Karandlaje) ಶೇರ್‌ ಮಾಡಿಕೊಂಡಿದ್ದಾರೆ.

    ತಮ್ಮ ಎಕ್ಸ್‌ ಖಾತೆಯಲ್ಲಿ ಸಮಾಜ ಸೇವೆಗೆ ಡಾ. ಕೆ.ಎಸ್‌ ರಾಜಣ್ಣ (Dr. K.S Rajanna) ಅವರು ಪದ್ಮಶ್ರೀ (PadmaShree) ಪ್ರಶಸ್ತಿ ಸ್ವೀಕಾರ ಮಾಡುತ್ತಿರುವ ವೀಡಿಯೋ ಹಂಚಿಕೊಂಡ ಶೋಭಾ ಅವರು, ಎಂಥಹ ಹೃದಯಶ್ಪರ್ಶಿ ವೀಡಿಯೋ ಇದಾಗಿದೆ ಎಂದಿದ್ದಾರೆ. ಅಲ್ಲದೇ ನರೇಂದ್ರ ಮೋದಿಯವರ (Narendra Modi) ಭಾರತ, ಪ್ರತಿ ನಿಸ್ವಾರ್ಥ ಕಾರ್ಯವನ್ನು ಗೌರವಿಸುತ್ತದೆ. ಇದು ನಿಜವಾಗಿಯೂ ನವಚೈತನ್ಯ ತುಂಬಿದ ಭಾರತ ಎಂದು ಬರೆದುಕೊಂಡಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಒಟ್ಟು 132 ಜನರನ್ನು ಸನ್ಮಾನಿಸಿದರು. ಇದರಲ್ಲಿ ವಿಕಲಚೇತನ ಸಮಾಜ ಸೇವಕ ಡಾ.ಕೆ.ಎಸ್.ರಾಜಣ್ಣ ಅವರೂ ಒಬ್ಬರಾಗಿದ್ದು, ಪ್ರಶಸ್ತಿ ಸ್ವೀಕರಿಸಲು ಬಂದಾಗ ಎಲ್ಲರೂ ಅವರನ್ನೇ ನೋಡುತ್ತಿದ್ದರು. ಡಾ.ರಾಜಣ್ಣ ಅವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇಕ್‌ ಹ್ಯಾಂಡ್‌ ಕೊಟ್ಟರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರತ್ತ ತೆರಳಿ ಸನ್ಮಾನ ಸ್ವೀಕರಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಸಮಸ್ತ ಜನತೆಯ ಶುಭಾಶಯಗಳನ್ನು ಸ್ವೀಕರಿಸಿದರು. ಈ ವೇಳೆ ಯೋಧರೊಬ್ಬರು ಸಹಾಯ ಮಾಡಲು ಮುಂದಾದರು. ಆದರೆ ಡಾ.ರಾಜಣ್ಣ ಅವರು ಸಹಾಯ ಪಡೆಯಲು ನಿರಾಕರಿಸಿದರು. ಇದನ್ನೂ ಓದಿ: ಹಿರಿಯ ನಟಿ ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಕರ್ನಾಟಕ ಮೂಲದ ಡಾ.ರಾಜಣ್ಣ ಅವರು ಚಿಕ್ಕ ವಯಸ್ಸಿನಲ್ಲಿ ಪೋಲಿಯೊದಿಂದ ಕೈ-ಕಾಲುಗಳನ್ನು ಕಳೆದುಕೊಂಡರು. ಬಳಿಕ ಅವರು ತನ್ನ ಮೊಣಕಾಲುಗಳ ಸಹಾಯದಿಂದ ನಡೆಯಲು ಆರಂಭಿಸಿದರು. ಆದರೂ ಎದೆಗುಂದದ ರಾಜಣ್ಣ ಅವರು ತಾನು ಯಾರಿಗಿಂತ ಕಡಿಮೆ ಇಲ್ಲ ಎನ್ನುವಂತೆ ಛಲದಿಂದ ಕೆಲಸ ಮಾಡಲು ನಿರ್ಧರಿಸಿದರು. ಇದರ ಫಲವಾಗಿ ಇಂದು ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಡೆಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • 1983ರ ನಂತರ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ಶೂನ್ಯ ಮಳೆ-  ಕಾರಣವೇನು.?

    1983ರ ನಂತರ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ಶೂನ್ಯ ಮಳೆ-  ಕಾರಣವೇನು.?

    ಬೆಂಗಳೂರು: ಒಂದು ಸಮಯದಲ್ಲಿ ಬೆಂಗಳೂರು ಯಾವತ್ತೂ ಕೂಲ್‌ ಕೂಲ್‌ ಆಗಿರುತ್ತಿತ್ತು. ಯಾವುದೇ ಸೀಸನ್‌ ಇರಲಿ ಬೆಂಗಳೂರು ವೆದರ್‌ ಮಾತ್ರ ತಂಪು ತಂಪಾಗಿರುತ್ತಿತ್ತು. ಆದರೆ ಈ ಬಾರಿ ಸಿಲಿಕಾನ್‌ ಸಿಟಿಯ ವಾತಾವರಣವೇ ಬದಲಾದಂತಿದೆ. ಈ ಬಾರಿಯ ಬೇಸಿಗೆಯಲ್ಲಿಯಂತೂ ಬೆಂಗಳೂರಿನಲ್ಲಿ ಇದ್ದೇವಾ ಅಥವಾ ಬೇರೆ ಜಿಲ್ಲೆಯಲ್ಲಿ ಇದ್ದೇವಾ ಅನ್ನೋ ಫೀಲ್‌ ಬಂದಿದೆ. ಅದರಲ್ಲೂ ಏಪ್ರಿಲ್‌ ತಿಂಗಳು ಅಂತೂ ಬೆಂಗಳೂರು ಕಾದ ಕಾವಲಿಯಂತಾಗಿತ್ತು.

    ಹೌದು. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದ ವೀಕ್ಷಣಾಲಯವು ಏಪ್ರಿಲ್‌ನಲ್ಲಿ ಯಾವುದೇ ಮಳೆಯನ್ನು ದಾಖಲಿಸಿಲ್ಲ. ಇದು 1983 ರಿಂದ ಮೊದಲ ಬಾರಿಗೆ ದಾಖಲಾಗಿದೆ. ಹಾಗಿದ್ರೆ ಯಾವ ವರ್ಷದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಎಷ್ಟು ಮಳೆಯಾಗಿದೆ ಎಂಬುದನ್ನು ನೋಡೋವುದಾದರೆ, 2011 ರಲ್ಲಿ 217.1 ಮಿ.ಮೀ, 2012 ರಲ್ಲಿ 13.4 ಮಿ.ಮೀ, 2013 ರಲ್ಲಿ 23.3 ಮಿ.ಮೀ, 2014 ರಲ್ಲಿ 15, 2015 ರಲ್ಲಿ 226.5 ಮಿ.ಮೀ, 2016 ರಲ್ಲಿ 25.3 ಮಿ.ಮೀ, 2017 ರಲ್ಲಿ 30.4 ಮಿ.ಮೀ, 2018 ರಲ್ಲಿ 53.4 ಮಿ.ಮೀ, 2019 ರಲ್ಲಿ 17.8 ಮಿ.ಮೀ, 2020 ರಲ್ಲಿ 121.1 ಮಿ.ಮೀ, 2021 ರಲ್ಲಿ 118.2 ಮಿ.ಮೀ, 2022 ರಲ್ಲಿ 135.3 ಮಿ.ಮೀ, 2023 ರಲ್ಲಿ 9, 2024 ರಲ್ಲಿ ಶೂನ್ಯ ಮಳೆ ದಾಖಲಾಗಿದೆ.

    ಐಎಂಡಿ ಬೆಂಗಳೂರು ವೀಕ್ಷಣಾಲಯದ ಹಿರಿಯ ವಿಜ್ಞಾನಿ ಎ ಪ್ರಸಾದ್, ಈ ಏಪ್ರಿಲ್‌ನಲ್ಲಿ 41 ವರ್ಷಗಳಲ್ಲಿ ಅತ್ಯಂತ ಶುಷ್ಕ ಎಂದು ದೃಢಪಡಿಸಿದರು. 1983 ರ ನಂತರ ಬೆಂಗಳೂರಿನಲ್ಲಿ ಮಳೆಯಿಲ್ಲದೆ ಏಪ್ರಿಲ್ ಕಳೆದಿರುವುದು ಇದೇ ಮೊದಲು ಆಗಿದೆ. ಮಾನ್ಸೂನ್ ಋತುವಿನ ಮೊದಲು, ಎಲ್ ನಿನೋ ಸ್ಥಿತಿಯು ತಟಸ್ಥ ಅಥವಾ ಶೂನ್ಯಕ್ಕೆ ಪರಿವರ್ತನೆಯಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ, ನಂತರ ಲಾ ನಿನಾ ಪರಿಸ್ಥಿತಿಗಳ ಬೆಳವಣಿಗೆಯು ಮಾನ್ಸೂನ್ಗೆ ಉತ್ತಮವಾಗಿದೆ. ಈ ಮಾನ್ಸೂನ್ನಲ್ಲಿ ನಾವು ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.

    ತೀವ್ರ ಶಾಖದ ಕಾರಣಗಳ ಬಗ್ಗೆ ಕೇಳಿದಾಗ, ಜಾಗತಿಕ ತಾಪಮಾನ, ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಕಳಪೆ ಮೋಡಗಳ ರಚನೆ ಮತ್ತು ಎಲ್ ನಿನೋ ಈ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಮಳೆ ಕೊರತೆಗೆ ಕಾರಣವಾಗಿವೆ ಎಂದರು.

    ಬೆಂಗಳೂರು 2023 ರ ನವೆಂಬರ್‌ನಲ್ಲಿ ಸುಮಾರು 106.6 ಮಿಮೀ ಮಳೆಯನ್ನು ದಾಖಲಿಸಿದೆ. ಅಂದಿನಿಂದ ಯಾವುದೇ ಗಮನಾರ್ಹ ಮಳೆ ಇಲ್ಲ. 2023 ರ ಡಿಸೆಂಬರ್ ನಲ್ಲಿ 0.7 ಮಿಮೀ, 2024 ರ ಜನವರಿಯಲ್ಲಿ 2 ಮಿಮೀ ಮತ್ತು 2024 ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಮಳೆಯ ಕುರುಹು ಇಲ್ಲ. ಏಪ್ರಿಲ್ 19 ಮತ್ತು 20 ರಂದು ಕೆಲವು ಪ್ರದೇಶಗಳಲ್ಲಿ ಮಳೆಯಾದರೂ, ನಗರದ ವೀಕ್ಷಣಾಲಯವು ಅದನ್ನು ದಾಖಲಿಸಲಿಲ್ಲ.

    ಸಮುದ್ರ ಮಟ್ಟದಿಂದ 3,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಬೆಂಗಳೂರು ಇದೆ. ಹೀಗಾಗಿ ನಗರ ಆಹ್ಲಾದಕರ ಹವಾಮಾನವನ್ನು ಹೊಂದಿದ್ದು, ಪ್ರಪಂಚದಾದ್ಯಂತದ ಯುವ, ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸುತ್ತದೆ. ಆದಾಗ್ಯೂ, ಈ ಬಾರಿ, ಬೇಸಿಗೆಯು ಕಠಿಣವಾಗಿದೆ – ನವೆಂಬರ್ 2023 ರಿಂದ ಮಳೆಯಿಲ್ಲ, ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ ಮತ್ತು ನೀರು ಸರಬರಾಜು ಕಡಿಮೆಯಾಗಿದೆ ಮತ್ತು ನಿರ್ಬಂಧಿಸಲಾಗಿದೆ.

    ಒಟ್ಟಿನಲ್ಲಿ ಬಿಸಿಲ ದಗೆಗೆ ಐಟಿಬಿಟಿ ಸಿಟಿ ಕಂಗಾಲಾಗಿದೆ. ಕಳೆದ 41 ವರ್ಷಗಳಲ್ಲಿ ಮೊದಲ ಬಾರಿಗೆ ಈ ವರ್ಷ ಏಪ್ರಿಲ್ ನಲ್ಲಿ ಮಳೆ ಬಂದಿಲ್ಲ. ಬಿಸಿಲ ಝಳಕ್ಕೆ ಉದ್ಯಾನಗರಿ ದಾಖಲೆ ಬರೆದಿದೆ. ಈ ಮೂಲಕ 1983ರಲ್ಲಿ ನ ವಿದ್ಯಮಾನ ಮತ್ತೆ ಮರುಕಳಿಸಿದೆ. ಶೇಕಡಾ ನೂರರಷ್ಟು ಮಳೆ ಕೊರತೆ ಎದುರಿಸಿದೆ. 1983 ರಲ್ಲಿ ಏಪ್ರಿಲ್ ತಿಂಗಳಲ್ಲಿ ಈ ವರ್ಷದಂತೆ ಮಳೆ ಆಗಿರಲಿಲ್ಲ. ಅದಾದ ಬಳಿಕ ಏಪ್ರಿಲ್ ತಿಂಗಳಲ್ಲಿ ಪ್ರತಿ ವರ್ಷ ಸಿಟಿಯಲ್ಲಿ ಮಳೆಯಾಗ್ತ ಇತ್ತು. ಆದರೆ ಈ ವರ್ಷ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆ ದಾಖಲಾಗಿದ್ದು, ಜನ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದಾರೆ.

    ಏಪ್ರಿಲ್ 19 ಮತ್ತು 20 ರಂದು, ನಗರದ ಕೆಲವು ಭಾಗಗಳಲ್ಲಿ ಸ್ವಲ್ಪ ತುಂತುರು ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಹೀಗೆ ಸುಮಾರು 12 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯ ಕೊರತೆ ಉಂಟಾಗಿದೆ. 8 ವರ್ಷಗಳ ಬಳಿಕ ಅತಿ ಕೆಟ್ಟ ಬೇಸಿಗೆಗೆ ಕರುನಾಡು ಸಿಲುಕಿದೆ. 2016 ರ ಬಳಿಕ ರಾಜ್ಯ ಕಂಡಂತಹ ಭೀಕರ ಬರಗಾಲ ದಾಖಲಾಗಿದೆ. 2016 ರ ಬಳಿಕ ತಾಪಮಾನ ಏರಿಕೆ, ಅತಿ ಬಿಸಿಲಿನ ದಿನಗಳು, ಶೂನ್ಯ ಮಳೆ ಎದುರಿಸಿ ಕರುನಾಡು ಕಂಗಾಲಾಗಿದೆ. 2016 ಏಪ್ರಿಲ್ ಸರಾಸರಿ ದಾಖಲೆ ಮೀರಿ ತಾಪಮಾನ ದಾಖಲಾಗಿದೆ.

    2016 ಏಪ್ರಿಲ್ ನಲ್ಲಿ ಸರಾಸರಿ ತಾಪಮಾನ 36.51 ಡಿಗ್ರಿ ತಾಪಮಾನ ದಾಖಲಾಗುವ ಮೂಲಕ 2024 ರ ಈ ವರ್ಷದ ಏಪ್ರಿಲ್ ನಲ್ಲಿ ಸರಾಸರಿ ತಾಪಮಾನ 36.64 ಡಿಗ್ರಿಗೆ ಏರಿಕೆಯಾಗಿದೆ. 2016 ಏಪ್ರಿಲ್ ತಿಂಗಳಲ್ಲಿ 11 ದಿನಗಳು 37 ಡಿಗ್ರಿ ತಾಪಮಾನ ದಾಟಿತ್ತು, ಈ ಬಾರಿ 17 ದಿನಗಳು 37 ಡಿಗ್ರಿ ತಾಪಮಾನ ದಾಟಿದೆ. 2016 ರಲ್ಲಿ ತಾಪಮಾನ 2 ದಿನ 38 ಡಿಗ್ರಿ ತಾಪಮಾನ ದಾಖಲಾಗಿತ್ತು. ಈ ಬಾರಿ 3 ದಿನಗಳು 38 ಡಿಗ್ರಿ ದಾಟಿದೆ. ಈ ಮೂಲಕ 2024 ರಲ್ಲಿ 2016 ಕ್ಕಿಂತ ಕೆಟ್ಟ ಬೇಸಿಗೆಯನ್ನು ಸಹಿಸಬೇಕಿದೆ. ಜೊತೆಗೆ ಈ ಬಾರಿ ಕಳೆದ ನವೆಂಬರ್ ನಿಂದ ಇಲ್ಲಿಯ ತನಕ ಸತತ 6 ತಿಂಗಳ‌ ಒಣ ಹವೆ ಎದುರಿಸಿದೆ. ಒಟ್ಟಾರೆಯಾಗಿ 1983 ರ ಬಳಿಕ ಏಪ್ರಿಲ್ ನಲ್ಲಿ ದಾಖಲಾದ ಅತಿ ಹೆಚ್ಚಿನ ಒಣಹವೆ ಉಂಟಾದ ವರ್ಷ ಇದಾಗಿದೆ.‌

  • ಕರಸೇವಕರ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಗಡುವು: ಬಿ.ವೈ.ವಿಜಯೇಂದ್ರ

    ಕರಸೇವಕರ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಗಡುವು: ಬಿ.ವೈ.ವಿಜಯೇಂದ್ರ

    ಬೆಂಗಳೂರು: ಶ್ರೀನಗರದ ಲಾಲ್‍ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್ ಜೋಷಿಯವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ಪೊಲೀಸರ ರಾಜ್ಯ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಎಚ್ಚರಿಸಿದರು.

    ರಾಮ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ (Freedom Park) ಇಂದು ನಡೆದ ಬಿಜೆಪಿ (BJP) ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳಿಗೆ 48 ಗಂಟೆಗಳ ಗಡುವು ಕೊಡುತ್ತೇವೆ. ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಮಾಡದಿದ್ದರೆ, ಬಿಜೆಪಿ ಯುವಮೋರ್ಚಾ ವತಿಯಿಂದ ಹುಬ್ಬಳ್ಳಿ ಪೊಲೀಸ್ ಠಾಣೆಗೆ (Hubballi Police Station) ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇಂದು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಅವಶ್ಯಕತೆ ಬಂದರೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಮೊಘಲರ ಆಡಳಿತ, ತಾಲಿಬಾನ್ (Taliban) ಆಡಳಿತ ಇದೆಯೇ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಹಿಂದೂ ಹಕ್ಕುಗಳನ್ನು ತುಳಿಯುವ ಕೆಲಸ, ಹಿಂದೂ ವಿರೋಧಿ ನೀತಿ ನಿಮ್ಮದು. ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೇ ತೊಂದರೆ: ಯತೀಂದ್ರ ಸಿದ್ದರಾಮಯ್ಯ

    ಪಿಎಫ್‍ಐ (PFI) ವಿರುದ್ಧ ಇದ್ದ ಕೇಸುಗಳನ್ನು ರದ್ದು ಮಾಡಿದ್ದ ಸರ್ಕಾರ ಕಾಂಗ್ರೆಸ್ಸಿನದು. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ. ಕನ್ನಡ ವಿರೋಧಿ ಸರ್ಕಾರ ಇದು. ರೈತರ ವಿರುದ್ಧ ಕೇಸು ಹಾಕುತ್ತಿದ್ದಾರೆ. ಹಿಂದೂ, ರಾಮ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಮಂದಿರ (Ram mandir Ayodhya) ನಿರ್ಮಾಣದ ಕನಸು ನನಸಾಗುತ್ತಿದೆ. ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿದೆ. ಎಲ್ಲ ಕಡೆ ಉತ್ಸಾಹ, ಸಂತಸದ ವಾತಾವರಣ ಇದೆ ಎಂದು ವಿವರಿಸಿದರು.

    ರಾಜ್ಯ, ದೇಶದಲ್ಲಿ ಹಬ್ಬದ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ಹಿಂದೂವಿರೋಧಿ ಕಾಂಗ್ರೆಸ್ ಸರ್ಕಾರ, ಪ್ರಭು ಶ್ರೀರಾಮಚಂದ್ರ ವಿರೋಧಿ ಸರ್ಕಾರವು ಮಂತ್ರಾಕ್ಷತೆ ಕೊಡುವುದನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಹಿಂದೂಗಳ ಮನಸ್ಸಿಗೆ ನೋವಾಗುವ ಹೇಳಿಕೆ ಕೊಡುತ್ತಿದ್ದಾರೆ. ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯವರ ಬಂಧನದ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. 31 ವರ್ಷಗಳ ಹಿಂದಿನ ಕೇಸು ಇದಾಗಿದೆ. ಈಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.

    ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಅವರು ಮಾತನಾಡಿ, ಹೆಸರಿನಲ್ಲಿ ರಾಮ ಇದ್ದರೆ ಸಾಕೇ? ನಿಮ್ಮ ಮನಸ್ಸಿನಲ್ಲಿ ರಾಮ ಇರಬೇಕಿತ್ತು ಎಂದು ಮುಖ್ಯಮಂತ್ರಿಗಳ ಕ್ರಮವನ್ನು ಟೀಕಿಸಿದರು. ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು. ಓಲೈಕೆ ರಾಜಕಾರಣ ನಿಮ್ಮದಲ್ಲವೇ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಪಕ್ಷದ ನೀತಿ ಕುಲಗೆಟ್ಟದ್ದು. ಹಿಜಬ್ ಪರ, ಶ್ರೀರಾಮನ ವಿರುದ್ಧ ನೀತಿಯಿಂದ ಜನತೆ ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ ಅವರು ನುಡಿದರು. ಹಿಂದೂಗಳು ತೂಕಡಿಕೆ ಬಿಡಬೇಕು. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ರಕ್ಷಿಸಲು ನಾವು ಕಟಿಬದ್ಧರಾಗಬೇಕು ಎಂದು ತಿಳಿಸಿದರು. ಸಿದ್ದರಾಮಯ್ಯನವರ ಸರ್ಕಾರವು ತಮ್ಮ ಕೀಳುಮಟ್ಟದ ರಾಜಕಾರಣವನ್ನು ಬಿಡಬೇಕು ಎಂದು ಒತ್ತಾಯಿಸಿದರು.

    ರಾಜ್ಯದ ಕಾಂಗ್ರೆಸ್ ಸರ್ಕಾರವು ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ ಎಂದು ಶಾಸಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ ಮಾರ್ ಅವರು ತಿಳಿಸಿದರು. 1992ರಲ್ಲಿ ಕರಸೇವಕರನ್ನು ಹತ್ಯೆ ಮಾಡಲು ಮುಂದಾಗಿತ್ತು. ಈಗ ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಹಿಂದೂವಿರೋಧಿ ನೀತಿ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು. ಅಲ್ಪಸಂಖ್ಯಾತರ ಬಗ್ಗೆ ಅತಿಯಾದ ಒಲವು ನಿಮ್ಮದು. ಹಿಂದೆ ಟಿಪ್ಪು ಜಯಂತಿ ಮಾಡಿದ್ದೀರಿ. ಕನ್ನಡ ಭಾಷಾ ಹೋರಾಟಗಾರರನ್ನು ಬಂಧಿಸುತ್ತೀರಿ. ರೈತ ವಿರೋಧಿ ನಿಲುವು ನಿಮ್ಮದು ಎಂದು ಸಿದ್ದರಾಮಯ್ಯರ ಸರ್ಕಾರದ ವಿರುದ್ಧ ಆಕ್ಷೇಪ ಸೂಚಿಸಿದರು.

    ಈ ಸರ್ಕಾರ ಹಿಂದೂ ವಿರೋಧಿ, ರೈತ ವಿರೋಧಿ, ಕನ್ನಡ ವಿರೋಧಿ ಎಂದು ಟೀಕಿಸಿದರು. ಈ ಹೋರಾಟ ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಇದೇ ವೇಳೆ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಅವರು ಮಾತನಾಡಿ, ರಾಮಮಂದಿರ ನಮ್ಮ ಸ್ವಾಭಿಮಾನದ ಸಂಕೇತ ಎಂದು ನುಡಿದರು.

    ಹಲವಾರು ಸವಾಲುಗಳ ಬಳಿಕ ಇದರ ಪುನರ್ ನಿರ್ಮಾಣವಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಸಂಭ್ರಮ ಪಡುವ ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಕ್ರಮ ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ ಎಂದು ತಿಳಿಸಿದರು. ಕರಸೇವಕರು ನೈಜ ರಾಷ್ಟ್ರ ಭಕ್ತರು. ಅವರನ್ನು ಗೌರವಿಸುವ ಬದಲಾಗಿ ಬಂಧಿಸುವ ಕಾರ್ಯ ನಡೆದಿದೆ ಎಂದು ಟೀಕಿಸಿದರು. ಸರ್ಕಾರ ತನ್ನ ಭಂಡತನ ಕೈಬಿಡಬೇಕು. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.

    ಮಾಜಿ ಸಿಎಂ, ಸಂಸದ ಡಿ.ವಿ. ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ರವಿಸುಬ್ರಹ್ಮಣ್ಯ, ವಿಧಾನಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಸೇರಿ ಅನೇಕ ಮುಖಂಡರು, ಶಾಸಕರು, ಮಾಜಿ ಸಚಿವರು, ರಾಜ್ಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  • ಕಾರಜೋಳರ ಮೇಲೆ ಹಲ್ಲೆ ಯತ್ನದ ಹಿಂದೆ ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಕೈವಾಡ- ಪಿ.ರಾಜೀವ್ ಆರೋಪ

    ಕಾರಜೋಳರ ಮೇಲೆ ಹಲ್ಲೆ ಯತ್ನದ ಹಿಂದೆ ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಕೈವಾಡ- ಪಿ.ರಾಜೀವ್ ಆರೋಪ

    ಬೆಂಗಳೂರು: ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಹಲ್ಲೆಗೆ ಪ್ರಯತ್ನ ಮಾಡಿದ್ದನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ.ರಾಜೀವ್ (P Rajeev) ಅವರು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾರಜೋಳರವರ ಮೇಲೆ ಹಲ್ಲೆ ನಡೆಸಲು ದುಷ್ಪ್ರೇರಣೆ ಮಾಡಿ, ಒಳಸಂಚನ್ನು ಮಾಡಿರುವುದರಲ್ಲಿ ಡಾ.ಎಚ್.ಸಿ.ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪಿಸಿದರು.

    ದಲಿತರಿಗೆ ಮೀಸಲಿಟ್ಟ ಹಣವನ್ನು ಈ ಸರ್ಕಾರ ದುರ್ಬಳಕೆ ಮಾಡಿದೆ. ಇದು ದಲಿತ ಸಮುದಾಯಗಳಿಗೆ ಅರ್ಥ ಆದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುವ ಭಯ ಸರ್ಕಾರ, ಕಾಂಗ್ರೆಸ್ಸನ್ನು ಕಾಡುತ್ತಿದೆ ಎಂದರು. ದಲಿತರಿಗೆ ಈ ವಿಚಾರ ಗೊತ್ತಾಗಬಾರದು, ಯಾರೂ ಇದನ್ನು ತಿಳಿಸಬಾರದೆಂಬ ದುರುದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷವು ಕಾರಜೋಳರ ಮೇಲೆ ಹಲ್ಲೆಗೆ ಪ್ರೇರಣೆ ಕೊಟ್ಟಿದೆ. ತೆರೆಮರೆಯ ಕೆಲಸ ಮಾಡಿದೆ ಎಂದೂ ಅವರು ಆಕ್ಷೇಪಿಸಿದರು.

    ಗೃಹಜ್ಯೋತಿ ಯೋಜನೆಯಡಿ (Gruhajyothi Scheme) ಎಸ್‍ಇಪಿಟಿಎಸ್‍ಪಿಯಡಿ 2,400 ಕೋಟಿ ಇಟ್ಟಿದ್ದಾರೆ. ಅದೇ ರೀತಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 2,800 ಕೋಟಿ ಇಟ್ಟಿದ್ದಾರೆ. ಈ 2,800 ಕೋಟಿ ಹಣದಲ್ಲಿ 90% ದಲಿತರಿಗೆ ಪ್ರಯೋಜನ ಸಿಗುತ್ತದೆ. ಹಾಗಿದ್ದರೆ 2400 ಕೋಟಿಯನ್ನು ಮತ್ತೆ ಇಟ್ಟದ್ಯಾಕೆ ಎಂದು ಪ್ರಶ್ನಿಸಿದರು. ಇದೆಲ್ಲವೂ ದಲಿತ ಸಮುದಾಯ, ದಲಿತ ಮುಖಂಡರಿಗೆ ತಿಳಿದರೆ ಈ ಸರ್ಕಾರವು ಸುಮಾರು 10 ಸಾವಿರ ಕೋಟಿ ಹಣವನ್ನು ದಲಿತ ಸಮುದಾಯಕ್ಕಾಗಿ ಮತ್ತೆ ಕೊಡಬೇಕಾಗುತ್ತದೆ. ಅದೇ ಭಯವು ಸಿದ್ದರಾಮಯ್ಯರನ್ನೂ ಕಾಡುತ್ತಿದೆ. ದಲಿತರು ಜಾಗೃತ ಆಗಬಾರದು. ಈ ಸಂಬಂಧ ತಿಳುವಳಿಕೆ ಕೊಡುವ ಕೆಲಸವನ್ನು ಮಾಡಬಾರದೆಂಬ ಉದ್ದೇಶದಿಂದ ಭಯ ಹುಟ್ಟಿಸಲು ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ಸಮುದಾಯದ ದೊಡ್ಡ ನಾಯಕ ಗೋವಿಂದ ಕಾರಜೋಳ (Govind Karajola) ಅವರ ಮೇಲೆ ಹಲ್ಲೆ ಮಾಡಿ, ಆ ಮೂಲಕ ದಲಿತ ಜಾಗೃತ ಮನಸ್ಸುಗಳಿಗೆ ಸಂದೇಶ ಕೊಡಲು ಹೊರಟಿದ್ದರು ಎಂದು ವಿಶ್ಲೇಷಿಸಿದರು.

    ಹಲ್ಲೆ, ಕಾಂಗ್ರೆಸ್ ಕೈವಾಡದಿಂದ ನಡೆದಿದೆ ಎಂದು ಪಿ.ರಾಜೀವ್ ಅವರು ಆರೋಪಿಸಿದರು. ಸದನದಲ್ಲಿ ಮಹದೇವಪ್ಪ ಅವರು ದಲಿತರ ದಾರಿತಪ್ಪಿಸುವ ಉತ್ತರ ಕೊಟ್ಟಿದ್ದಾರೆ. 11 ಸಾವಿರ ಕೋಟಿ ಹಣವನ್ನು ದಲಿತರಿಗಾಗಿ ಬಳಸುವಂತಾಗಲು ತೀವ್ರತರದ ಹೋರಾಟ ಮಾಡುತ್ತೇವೆ. ದಲಿತ ಮುಖಂಡರು, ದಲಿತ ಸಂಘಟನೆಗಳು, ದಲಿತ ಶಾಸಕರಿಗೆ ಮಾಹಿತಿ, ಅಂಕಿ ಸಂಖ್ಯೆ ಕೊಟ್ಟು ಸರ್ಕಾರ ಮಾಡಿದ ಅನ್ಯಾಯದ ವಿವರ ನೀಡಿ ಆಂದೋಲನ ರೂಪಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

  • ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?

    ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?

    ಬೆಂಗಳೂರು: ಇದೇ 27ಕ್ಕೆ ಆಟೋ, ಟ್ಯಾಕ್ಸಿ, ಕ್ಯಾಬ್ ಹಾಗೂ ಖಾಸಗಿ ಬಸ್ ಸಂಘಟನೆಗಳು ಬಂದ್‍ಗೆ (Bengaluru Bandh) ಕರೆಕೊಟ್ಟಿವೆ. ಸರ್ಕಾರದ ಶಕ್ತಿಯೋಜನೆಯಿಂದ (Shakthi Scheme) ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಸರ್ಕಾರ ಸಂಘಟನೆಗಳ ಮನವೊಲಿಕೆಗೆ ಮುಂದಾಗಿದೆ.

    ಸರ್ಕಾರದ ಶಕ್ತಿಯೋಜನೆ ಅದ್ಭುತವಾಗಿ ಯಶಸ್ಸು ಕಂಡಿದೆ. ಇದರಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಆಟೋ (Auto), ಕ್ಯಾಬ್ (Cab) ಹಾಗೂ ಖಾಸಗಿ ಬಸ್ (Private Bus) ಮಾಲೀಕರು ಇದೀಗ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆ ಜುಲೈ 27ಕ್ಕೆ 23 ಸಂಘಟನೆಗಳು ಸೇರಿದ ಖಾಸಗಿ ಸಾರಿಗೆ ಒಕ್ಕೂಟ ಸಾಮೂಹಿಕವಾಗಿ ಬಂದ್ ಆಚರಸಿ ಸರ್ಕಾರಕ್ಕೆ ಪ್ರತಿರೋಧ ಒಡ್ಡಲು ಮುಂದಾಗಿದೆ. ಜುಲೈ 27ಕ್ಕೆ ಬೆಂಗಳೂರಲ್ಲಿ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಮಾಡಲು ಮುಂದಾಗಿತ್ತು. ಆದರೆ ಇದರ ಮಹತ್ವ ಅರಿತುಕೊಂಡಿರುವ ಸರ್ಕಾರ ಖಾಸಗಿ ಸಾರಿಗೆ ಒಕ್ಕೂಟಗಳ ಮನವೊಲಿಕೆಗೆ ಮುಂದಾಗಿದೆ.

    ಖಾಸಗಿ ಸಾರಿಗೆ ಇಲಾಖೆ ಜುಲೈ 27ಕ್ಕೆ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆ ಇಂದು ಸಾರಿಗೆ ಇಲಾಖೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಬಂದ್‍ಗೆ ಕರೆ ಹಾಗೂ ಬೆಂಬಲ ಕೊಟ್ಟಿರುವ ಸಂಘಟನೆಗಳ ಆಹವಾಲು ಸ್ವೀಕರಿಸಲಿದ್ದು, ಆಗುತ್ತಿರುವ ಅನಾನೂಕಲಗಳನ್ನು ಆಲಿಸಲಿದ್ದಾರೆ.ಒಂದು ವೇಳೆ ಇಂದಿನ ಸಭೆ ಯಶಸ್ವಿಯಾದರೆ ಬಂದ್ ವಾಪಾಸ್ ಪಡೆಯುವ ಸಂಭವವಿದೆ.

    `ಬಂದ್’ಗೆ ಮನವೊಲಿಸುತ್ತಾ ಸರ್ಕಾರ..?: ಖಾಸಗಿ ಚಾಲಕ, ಮಾಲೀಕರ ಹಿತದೃಷ್ಟಿಯಿಂದ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬಹುದು. ಆಟೋ, ಕ್ಯಾಬ್ ಚಾಲಕರಿಗೆ ಮಾಸಿಕ 10 ಸಾವಿರ ಪರಿಹಾರ ಧನ ನೀಡುವ ಸಾಧ್ಯತೆಗಳಿವೆ. ರ್ಯಾಪಿಡೋ ಸೇವೆಯನ್ನು ಹಿಮಾಚಲ ಪ್ರದೇಶ, ದೆಹಲಿ, ಅಸ್ಸಾಂನಂತೆ ಸಂಪೂರ್ಣ ನಿಷೇಧ ಮಾಡಬಹುದು. ಟೂರಿಸ್ಟ್ ಹಾಗೂ ಕಾಂಟ್ರಾಕ್ಟ್ ಬಸ್‍ಗಳ ಮೇಲಿನ ರಸ್ತೆ ತೆರಿಗೆ ಕಡಿತಗೊಳಿಸಬಹುದು. ಎಲ್ಲೋ ಬೋರ್ಡ್ ಗಾಡಿಗಳ ಜೀವಿತಾವಧಿ ತೆರಿಗೆ ಕಡಿತಗೊಳಿಸಬಹುದು.

    ಹೀಗೆ ಇಂದಿನ ಸಭೆಯಲ್ಲಿ ಹಲವು ರೀತಿಯ ಬೇಡಿಕೆಯನ್ನು ಸಂಘಟನೆಗಳು ಸರ್ಕಾರದ ಮುಂದಿಡಲಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಕಾರ್ಮಿಕರ ಬದುಕಿಗೆ ಪೆಟ್ಟು ಬಿದ್ದಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಸರ್ಕಾರ ಯಾವ ರೀತಿ ಸ್ಪಂದಿಸುತ್ತೋ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ: ಹೆಚ್‍ಡಿಕೆ

    ನಮ್ಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ: ಹೆಚ್‍ಡಿಕೆ

    ಬೆಂಗಳೂರು: ಇಸ್ರೋ (ISRO) ವಿಜ್ಞಾನಿಗಳನ್ನು ಅಭಿನಂದಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಚಂದ್ರಯಾನ-3ರ ನೌಕೆಯನ್ನು ಉಡಾವಣೆ ಮಾಡಿ ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ ಮಾಡಿದ ಇಸ್ರೋ ಸಂಸ್ಥೆಯನ್ನು ಹಾಗೂ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ. ಇಡೀ ದೇಶವೇ ಹೆಮ್ಮೆಪಡುತ್ತದೆ. 45 ದಿನಗಳ ಐತಿಹಾಸಿಕ ಚಂದ್ರಯಾನ-3 (Chandrayaan 3) ಯಶಸ್ವಿಯಾಗಿ ಆರಂಭವಾಗಿದೆ. ಅಪರಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದಿರನ ಅಂಗಳಕ್ಕೆ ನೌಕೆಯನ್ನು ಉಡ್ದಯನ ಮಾಡಿದ ಇಸ್ರೋ, ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನ್ನದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು

    ಇಸ್ರೋದ ಪ್ರತಿ ಯೋಜನೆಗೂ ಕರ್ನಾಟಕದ ಕೊಡುಗೆ ಇರುತ್ತದೆ. ಅದೇ ರೀತಿ, ಚಂದ್ರಯಾನ-3ಕ್ಕೂ ಕರುನಾಡಿನ ಕಾಣಿಕೆ ಅಪಾರ. ಜಗತ್ತು ಭಾರತವನ್ನು ಕರ್ನಾಟಕದ ಮೂಲಕ ನೋಡುವ ಈ ಅವಿಸ್ಮರಣೀಯ ಕ್ಷಣವನ್ನು ದೃಶ್ಯ ಮಾಧ್ಯಮದ ಮೂಲಕ ನಾನೂ ಕಣ್ತುಂಬಿಕೊಂಡೆ ಎಂದಿದ್ದಾರೆ. ಉಡಾವಣೆಯಾದ ಕೆಲ ಕ್ಷಣಗಳಲ್ಲೇ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವ 6 ವಾರಗಳ ರೋಮಾಂಚನಕಾರಿ ಮಿಷನ್ ಗೆ ಚಾಲನೆ ದೊರೆತಿದೆ. ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಸೇರಿ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಇತರೆ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಿಎಂ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]