Tag: benga;uiru

  • ಗಮನಿಸಿ, ನಾಳೆ ಬೆಂಗಳೂರಲ್ಲಿ ಆಟೋ, ಟ್ಯಾಕ್ಸಿ ಸಿಗಲ್ಲ – ಚಾಲಕರ ಬೇಡಿಕೆಗಳು ಏನು?

    ಗಮನಿಸಿ, ನಾಳೆ ಬೆಂಗಳೂರಲ್ಲಿ ಆಟೋ, ಟ್ಯಾಕ್ಸಿ ಸಿಗಲ್ಲ – ಚಾಲಕರ ಬೇಡಿಕೆಗಳು ಏನು?

    ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ರಸ್ತೆಗೆ ಇಳಿಯುವ ಎನ್ನ ಎಚ್ಚರವಾಗಿರಿ. ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಾಳೆ ಆಟೋ- ಟ್ಯಾಕ್ಸಿ ಚಾಲಕರು ಮುಷ್ಕರ ಕರೆ ನೀಡಿದ್ದಾರೆ.

    ವಾಹನಗಳ ಸಾಲಮನ್ನಾ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತಾಗಿ 20 ಒಕ್ಕೂಟಗಳು ಸೇರಿ ನಾಳೆ ಮುಷ್ಕರಕ್ಕೆ ಕರೆ ನೀಡಿವೆ.

    ಬೇಡಿಕೆ ಏನು?
    – ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆ ಅಡಿಯಲ್ಲಿ ಆಟೋ ಚಾಲಕರಿಗೆ 1,00 ಲಕ್ಷ ರೂ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ 2,00 ಲಕ್ಷ ಸಾಲವನ್ನು ನೀಡಬೇಕು.
    – ಅಸಂಘಟಿತ ಚಾಲಕರ ನಿಗಮ ಸ್ಥಪನೆಯಾಗಬೇಕು.
    – ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಿಡಿಎ ಅಥವಾ ಗೃಹ ಮಂಡಳಿಯಿಂದ ಮನೆಗಳನ್ನು ಕಟ್ಟಿಸಿಕೊಡಬೇಕು.
    – ಕೊರೊನಾ ವೈರಸ್ ಸಂಕಷ್ಟದಲ್ಲಿ ಇರುವ ಚಾಲಕರ ವಾಹನಗಳನ್ನು ಅನಧಿಕೃತವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ದುಬಾರಿ ಬಟ್ಟಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು.

    -ವಾಹನಗಳ ಕಂತುಗಳ ಮೇಲಿನ ಹೆಚ್ಚುವರಿ ಬಡ್ಡಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಬಡ್ಡಿ ವಜಾ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.
    – ಹೊಸ ಆಟೋರಿಕ್ಷಾ ಮಾರಾಟ ತೆರಿಗೆಯನ್ನು 17% ರಿಂದ 5%ಕ್ಕೆ ಇಳಿಸಬೇಕು.
    – ನಕಲಿ ಆಟೋ ಪರ್ಮಿಟ್‍ಗಳನ್ನು ತಡೆಗಟ್ಟಲು, ಹೊಸದಾಗಿ ತಂದಿರುವ ಇ-ಪರ್ಮಿಟ್‍ಗೆ ಆಧಾರ್ ಲಿಂಕ್ ಹಾಗೂ ಮಾಲೀಕನೇ ಖುದ್ದು ಹೆಬ್ಬೆಟ್ಟು ಗುರುತು ನೀಡುವುದನ್ನು ಕಡ್ಡಾಯಗೊಳಿಸಬೇಕು.

    – 15 ವರ್ಷದ ಹಳೆಯ ವಾಹನಗಳ ಎಫ್‍ಸಿ (ವೆಹಿಕಲ್ ಫಿಟ್ನೆಸ್ ಸರ್ಟಿಫಿಕೇಟ್)ಗಳನ್ನು ಸಲ್ಲಿಸಿರುವುದನ್ನು ಕೂಡಲೇ ರದ್ದು ಮಾಡಬೇಕು.
    – ಅಟೋ ಮತ್ತು ಟ್ಯಾಕ್ಸಿ ಚಾಲಕರು ಲಾಕ್‍ಡೌನ್ ಸಮಯದಲ್ಲಿ ಕೊರೊನಾ ಹಾಗೂ ಇತರೆ ಖಾಯಿಲೆಗಳಿಂದ ಸೂಕ್ತ ಚಿಕಿತ್ಸೆ ದೊರೆಯದೆ ಮೃತರಾಗಿದ್ದಾರೆ. ಅಂತಹ ಕುಟುಂಬಗಳಿಗೆ ಸರ್ಕಾರವು 25 ಲಕ್ಷ ರೂ ಪರಿಹಾರವನ್ನು ನೀಡಬೇಕು.

    – ಓಲಾ ಮತ್ತು ಉಬರ್ ನಂತಹ ಆ್ಯಪ್ ಆಧಾರಿತ ಬೃಹತ್ ಕಂಪನಿಗಳ ಪೈಪೋಟಿಯನ್ನು ತಡೆಗಟ್ಟಬೇಕು.
    – ವಾಹನಗಳಿಗೆ ಸರ್ಕಾರವು ನಿಗದಿ ಪಡಿಸಿರುವ ದರವನ್ನು ನೀಡಬೇಕು. ವಾಹನಗಳಿಗೆ ಮೀಟರ್ ಅಳವಡಿಕೆಯನ್ನು ಮಾಡಬೇಕು.
    – ಕಮಿಷನ್ ವಸೂಲಿಗೆ ತಡೆಹಾಕಬೇಕು. ಜಿಎಸ್‍ಟಿ ಹೇರಿಕೆಯನ್ನು ಕೈಬಿಡಬೇಕು.
    – ಓಲಾ ಮತ್ತು ಉಬರ್ ಸಂಸ್ಥೆಯ ಮಾದರಿಯಲ್ಲಿ ಸರ್ಕಾರವು ಆ್ಯಪ್ ಆಧಾರಿತ ಸಂಸ್ಥೆಯನ್ನು ಸ್ಥಾಪಿಸಬೇಕು.

  • ಕಸಮುಕ್ತ ಬೆಂಗ್ಳೂರಿಗೆ ನೀಡಿದ್ದ ಡೆಡ್‍ಲೈನ್ ಇಂದು ಮುಕ್ತಾಯ – ಹೈಕೋರ್ಟ್ ಗೆ ಬಿಬಿಎಂಪಿ ಏನ್ ಹೇಳುತ್ತೆ

    ಕಸಮುಕ್ತ ಬೆಂಗ್ಳೂರಿಗೆ ನೀಡಿದ್ದ ಡೆಡ್‍ಲೈನ್ ಇಂದು ಮುಕ್ತಾಯ – ಹೈಕೋರ್ಟ್ ಗೆ ಬಿಬಿಎಂಪಿ ಏನ್ ಹೇಳುತ್ತೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಮುಕ್ತಗೊಳಿಸಲು ಹೈಕೋರ್ಟ್ ನೀಡಿದ್ದ ಡೆಡ್‍ಲೈನ್ ಇಂದಿಗೆ ಮುಗಿಯಲಿದೆ. ಆದ್ರೆ ಶೇ.100 ರಷ್ಡು ಸ್ವಚ್ಛ ಬೆಂಗಳೂರು ಮಾತ್ರ ಪಾಲಿಕೆಯಲ್ಲಿ ಸಾಧ್ಯವಾಗಿಲ್ಲ.

    ರಾತ್ರಿ ಪಾಳಿಯಲ್ಲಿ ಪ್ರಹರಿ ವಾಹನ ಬಳಸಿ ನೈಟ್ ಬೀಟ್ ಮಾಡಿ ಬ್ಲಾಕ್ ಪಾಯಿಂಟ್ ತೆಗೆಸುವ ಯತ್ನ ನಡೆಯುತ್ತಿದೆ. ಇತ್ತ ಪಾಲಿಕೆ ಆರೋಗ್ಯಾಧಿಕಾರಿಗಳು ಸಹ ಸಾರ್ವಜನಿಕರಿಗೆ ಕಸ ಹಾಕದ ಬಗ್ಗೆ ಅರಿವು ಮೂಡಿಸಿ, ಎರಡನೇ ಬಾರಿ ಅದೇ ತಪ್ಪು ಮಾಡಿದ್ರೆ ಮಾತ್ರ 500 ರೂ ದಂಡ ಹಾಕುವ ಕ್ರಮಕ್ಕೆ ಮುಂದಾಗಿದ್ದಾರೆ.

    ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ದೀಪಾವಳಿ ಹಬ್ಬಕ್ಕೂ ಮೊದಲೇ ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸಿ ಎಂದು ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿತ್ತು. ಕಸ ವಿಲೇವಾರಿ ಕೋರಿ ನರಸಿಂಹಮೂರ್ತಿ ಸೇರಿ 11 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತ್ತು. ಬಿಬಿಎಂಪಿ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತ್ ರೆಡ್ಡಿ ಅವರು, ಈಗಾಗಲೇ ಬೆಂಗಳೂರು ನಗರವನ್ನು ಶೇ.95ರಷ್ಟು ಕಸ ಮುಕ್ತಗೊಳಿಸಲಾಗಿದ್ದು, ಶೇ.5ರಷ್ಟು ಮಾತ್ರ ಕಸ ವಿಲೇವಾರಿ ಆಗದೆ ಹಾಗೆಯೇ ಉಳಿದಿದೆ. ಇದನ್ನೂ 48 ಗಂಟೆಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಪೀಠಕ್ಕೆ ತಿಳಿಸಿದ್ದರು.

    ಅರ್ಜಿದಾರರ ಪರ ವಾದಿಸಿದ ವಕೀಲರು, ನಗರದಲ್ಲಿ ಕಸ ಉಳಿದಿರುವ ಜಾಗವನ್ನು ಗುರುತಿಸಿ ಸ್ನೇಹಿತರು ನಮ್ಮ ಮೊಬೈಲ್‍ಗೆ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ದೀಪಾವಳಿ ಹಬ್ಬದ ಮುಂಚಿತವಾಗಿಯೇ ಬೆಂಗಳೂರು ನಗರವನ್ನು ಕಸ ಮುಕ್ತ ನಗರವನ್ನಾಗಿಸಿ ಎಂದು ಸೂಚಿಸಿ, ವಿಚಾಣೆಯನ್ನು ಇಂದಿಗೆ ಮುಂದೂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv