Tag: bengaluyru

  • ಭಕ್ತಿ ಮುಖ್ಯ ಅಂದಿದ್ದಾರಷ್ಟೇ- ಸಿಎಂ ಪರ ರಾಮಲಿಂಗಾ ರೆಡ್ಡಿ ಬ್ಯಾಟಿಂಗ್

    ಭಕ್ತಿ ಮುಖ್ಯ ಅಂದಿದ್ದಾರಷ್ಟೇ- ಸಿಎಂ ಪರ ರಾಮಲಿಂಗಾ ರೆಡ್ಡಿ ಬ್ಯಾಟಿಂಗ್

    ಬೆಂಗಳೂರು: ದೇಗುಲಗಳಲ್ಲಿ ಡ್ರೆಸ್ ಕೋಡ್ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ವಿರೋಧನೂ ಮಾಡಲಿಲ್ಲ, ಪರನೂ ಮಾತಾಡಲಿಲ್ಲ. ಭಕ್ತಿ ಮುಖ್ಯ ಅಂತಾ ಹೇಳಿದ್ದಾರೆ ಅಷ್ಟೇ ಎಂದು ಸಚಿವ ರಾಮಲಿಂಗಾ ರೆಡ್ಡಿಯವರು (Ramalinga Reddy) ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಜನ ದೇವಸ್ಥಾನಕ್ಕೆ ಹೋಗ್ತಾರೆ, ಬರ್ತಾರೆ. ಅದೇ ರೀತಿ ಅಂತಾ ಹೇಳಿದ್ದಾರೆ. ಖಾಸಗಿ ದೇವಾಲಯಗಳೂ ಇದ್ದಾವೆ. ಮಂತ್ರಾಲಯ, ಧರ್ಮಸ್ಥಳದಲ್ಲಿ ಪಂಚೆ ಹಾಕಿಕೊಂಡು ಹೋಗಬೇಕಾಗುತ್ತೆ. ತಕ್ಷಣಕ್ಕೆ ನಮ್ಮ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ನೀತಿ ಎಲ್ಲೂ ಇಲ್ಲ ಎಂದರು.

    ಹಂಪಿಗೆ ವಿದೇಶಿ ಪ್ರವಾಸಿಗರು ಜಾಸ್ತಿ ಬರುತ್ತಾರೆ. ಅಲ್ಲಿ ಬರ್ಮುಡಾ, ನಿಕ್ಕರ್ ಹಾಕಿಕೊಂಡು ಬರುತ್ತಾರೆ. ಹೀಗಾಗಿ ಅಲ್ಲಿ ಜಿಲ್ಲಾಧಿಕಾರಿಗಳು ಡ್ರೆಸ್ ಕೋಡ್ ಮಾಡಿದ್ದಾರೆ. ಸರ್ಕಾರದ ಮುಂದೆ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ. ದೇವಸ್ಥಾನದ ಆಡಳಿತ ಮಂಡಳಿಗಳು ವಸ್ತ್ರಸಂಹಿತೆ ಬಗ್ಗೆ ಪ್ರಸ್ತಾವನೆ ಬಂದರೆ ಆಮೇಲೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

    ಈಗ ಜಾತ್ರೆಗಳು ನಡೆಯುತ್ತಾ ಇರ್ತಾವೆ ಲಕ್ಷಾಂತರ ಜನ ಬರ್ತಾರೆ ಪಾಲನೆ ಕಷ್ಟ. ಈಗ ಯಲ್ಲಮ್ಮ ಗುಡ್ಡಕ್ಕೆ ಲಕ್ಷಾಂತರ ಜನ ಬರುತ್ತಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಜನ ಬರುತ್ತಾರೆ ಹೇಗೆ ಪಾಲನೆ?. ತಕ್ಷಣಕ್ಕೆ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ, ಬಂದರೆ ನೋಡೋಣ. ಒಂದೇ ಒಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ತಗೊಂಡಿದ್ದಾರೆ. ಅವರು ವಿದೇಶಿಗರಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಮದು ರಾಮಲಿಂಗಾ ರೆಡ್ಡಿಯವರು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ.

  • ಕೈ ತಪ್ಪಿದ ಸಚಿವ ಸ್ಥಾನ – ರೇಣುಕಾಚಾರ್ಯ ಕಣ್ಣೀರು

    ಕೈ ತಪ್ಪಿದ ಸಚಿವ ಸ್ಥಾನ – ರೇಣುಕಾಚಾರ್ಯ ಕಣ್ಣೀರು

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಇದರಲ್ಲಿ ಶಾಸಕ ರೇಣುಕಾಚಾರ್ಯ ಅವರ ಹೆಸರಲ್ಲಿ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕರು ಗದ್ಗದಿತರಾಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಲಾಬಿ ಮಾಡಿಲ್ಲ, ಲಾಬಿ ಮಾಡಿದ್ರೆ ನಾನೂ ಇಂದು ಮಂತ್ರಿಯಾಗುತ್ತಿದ್ದೆ. ಯಾರು ಸಮರ್ಥರಿದ್ದಾರೆ ಅವರಿಗೆ ಕೊಟ್ಟಿರಬಹುದು. ಹೀಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವರಿಗೆ ಒಳ್ಳೆಯದಾಗಲಿ. ಅವರಿಗೆ ನನ್ನ ಕಡೆಯಿಂದ ಶುವನ್ನು ಕೋರುತ್ತೇನೆ ಎನ್ನುತ್ತಲೇ ಭಾವುಕರಾಗಿದ್ದಾರೆ.

    ಈ ಹಿಂದೆ ಯಡಿಯೂರಪ್ಪರನ್ನು ಭೇಟಿಯಾದ್ರಿ. ಒಂದು ಹಂತದಲ್ಲಿ ನಾಯಕತ್ವ ಬದಲಾವಣೆಯಾಗಬಾರದು ಎಂದು ಪಟ್ಟು ಹಿಡಿದು ಸಹಿ ಸಂಗ್ರಹ ಕೂಡ ಮಾಡಿದ್ರಿ. ಆದರೆ ಇಂದು ಸಚಿವ ಸ್ಥಾನ ಸಿಕ್ಕಿಲ್ಲ. ಇದು ಈಗಾಗಲೇ ಮುಗಿದ ಅಧ್ಯಾಯ. ಹಳೆಯ ಕಥೆಯನ್ನು ಮತ್ತೆ ನೆನಪು ಮಾಡಿಕೊಳ್ಳುವುದು ಬೇಡ. ಕಥೆ ಕಥೆಯಾಗಿಯೇ ಉಳಿಯಲಿ. ನಾನು ಈವಾಗ ಏನು ಮಾತಾಡಿದ್ರೂ, ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಅಸಮಾಧಾನದಿಂದ ಮಾತಾಡಿದ್ದಾರೆ ಎಂದು ಆಗುತ್ತದೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಇಚ್ಛೆ ಪಡಲ್ಲ ಎಂದರು.

    ಕಳೆದ 8 ದಿನಗಳ ಹಿಂದೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾರೆ. ಇಮದು 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಮಾಡುತ್ತಿದ್ದಾರೆ. ಬಹುಶಃ ಅವರೆಲ್ಲ ಸಮರ್ಥರಿದಾರೆ. ಹಾಗಾಗಿ ಕೊಟ್ಟಿರಬಹುದು. ಅಧಿಕಾರಕ್ಕೋಸ್ಕರ ಅಂಟಿಕೊಳ್ಳುವ ವ್ಯಕ್ತಿ ನಾನಲ್ಲ. ನಾನು ಕೆಲಸ ಮಾಡಿದ್ದೀನಿ. ಅಧಿಕಾರ ನನ್ನ ಹಿಂದೆ ಬರಬೇಕು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಲಾಬಿ ಮಾಡಿಲ್ಲ. ಬೆಂಗಳೂರು, ಡೆಲ್ಲಿಯಲ್ಲಿ ಕುಳಿತುಕೊಂಡು ಲಾಬಿ ಮಾಡಬಹುದಿತ್ತು. ಆದರೆ ನಾನು ಕ್ಷೇತ್ರದ ಜನರ ಮಧ್ಯೆ ಇದ್ದೆ. ಕೆರೆ ಕಟ್ಟೆ ಒಡೆದು ಹೋಗಿ ಬೆಳೆ ನಾಶ ಆಗಿತ್ತು. ಅಲ್ಲಿ ಹೋಗಿ ಜಂಟಿ ಸಮೀಕ್ಷೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಬಂದಿದ್ದೇನೆ ಎಂದರು.

    ದಾವಣಗೆರೆ ಜಿಲ್ಲೆಗೆ ಬಹಳ ಅನ್ಯಾಯ ಆಗಿದೆ. ಶೈಕ್ಷಣಿಕವಾಗಿ, ವಾಣಿಜ್ಯ ಹಾಗೂ ಕೃಷಿಗೆ ಪ್ರಾಧಾನ್ಯತೆ ಇರುವ ಜಿಲ್ಲೆಯಾಗಿದೆ. ಹೀಗಾಗಿ ಜಿಲ್ಲೆಗೆ ಬಹಳ ಅನ್ಯಾಯ ಆಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೆ. ಅದನ್ನು ನೇರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಯಡಿಯೂರಪ್ಪ, ಅರುಣ್ ಸಿಂಗ್ ಗೂ ಹೇಳಿದ್ದೇವೆ. ಆದರೆ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ ಅಂದ್ರು.