Tag: bengalurum

  • ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ: ಡಿಕೆಶಿ ಸ್ಪಷ್ಟನೆ

    ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ: ಡಿಕೆಶಿ ಸ್ಪಷ್ಟನೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್‌ನಿಂದ (Congress) ಹೊಂದಾಣಿಕೆ ರಾಜಕಾರಣ ನಡೆದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈ ಕುರಿತು ಮಾತನಾಡಿದ ಅವರು, ಯಾವ ಹೊಂದಾಣಿಕೆ ರಾಜಕಾರಣವೂ ನಡೆದಿಲ್ಲ. ಎಲ್ಲವೂ ಸುಳ್ಳು. ರಾಜ್ಯದಲ್ಲಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ ಎಂದರು. ಇದನ್ನೂ ಓದಿ: ಪ್ರತಿವರ್ಷ ಜೂನ್‌ 25ರಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ – ಅಮಿತ್‌ ಶಾ ಘೋಷಣೆ

    ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎನ್ನುವ ಕೆಲವು ನಾಯಕರ ಆರೋಪದ ಬಗ್ಗೆ ಮಾತನಾಡಿದ ಅವರು, ಚುನಾವಣೆ ಹೊತ್ತಿನಲ್ಲಿ ತಳಮಟ್ಟದ ಪರಿಸ್ಥಿತಿಯನ್ನು ಸರಿಯಾಗಿ ಅರಿಯಲು ಆಗಲಿಲ್ಲ. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿ ಎಂದು ನಾವೇ ಒಂದಷ್ಟು ಜನ ಮಂತ್ರಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳಿದ್ದೆವು. ಇದರಲ್ಲಿ ಒಂದಷ್ಟು ಜನ ಗೆದ್ದಿದ್ದಾರೆ. ಒಂದಷ್ಟು ಜನ ಸೋತಿದ್ದಾರೆ. ಮುಂದಕ್ಕೆ ಇವರುಗಳು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ, ಬೆಳೆಯುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಕೇಸ್ – ಮಾಜಿ ಸಚಿವ ನಾಗೇಂದ್ರ ಬಂಧನ!

    ಎಲ್ಲಾ ಕಾರ್ಯಕರ್ತರು, ಮುಖಂಡರು, ಗೆದ್ದವರು, ಸೋತವರು ಎಲ್ಲರು ಸೇರಿ ಎಐಸಿಸಿ ಸತ್ಯಶೋದನಾ ಸಮಿತಿಗೆ ಪರಿಸ್ಥಿತಿ ಅರಿಯಲು ಅಹವಾಲು ಸಲ್ಲಿಸಿದ್ದೆವು. ಅದರಂತೆ ಎಲ್ಲರು ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದಕ್ಕೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ‘ಕೈ’ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

    ಮುಡಾ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭಾ ಕಲಾಪ ಬರುತ್ತಿರುವ ಕಾರಣ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅವರು ಮಾಡಿರುವ ದರಿದ್ರವನ್ನು ಅವರೇ ಬಯಲು ಮಾಡುತ್ತಿದ್ದಾರೆ. ಇದಕ್ಕೆ ಸದನದಲ್ಲಿ ಏನು ಉತ್ತರ ಕೊಡಬೇಕೊ ಅದನ್ನು ಕೊಡುತ್ತೇವೆ ಎಂದರು. ಇದನ್ನೂ ಓದಿ: ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ಸಂಸದ ಡಾ.ಮಂಜುನಾಥ್ ವಿರೋಧ – ಸಿಎಂಗೆ ಪತ್ರ

  • ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು

    ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು

    ಬೆಂಗಳೂರು: ಹೃದಯಾಘಾತದಿಂದ ಇಂದು ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ತಮ್ಮ ಕಣ್ಣುಗಳನ್ನು ದಾನ ಮಾಡಲಾಗಿದೆ.

    ಕನ್ನಡದ ಮೇರು ನಟರಾಗಿದ್ದ ಡಾ. ರಾಜ್ ಕುಮಾರ್ ಕೂಡ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ಇದೀಗ ಪುನೀತ್ ಅವರು ಕೂಡ ಅದೇ ದಾರಿ ಹಿಡಿದಿದ್ದು, ಅಪ್ಪನಂತೆ ಮಗನೂ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ನೇತ್ರದಾನದ ಕುರಿತು ಪುನೀತ್ ಅವರು ಹಲವು ಸಂದರ್ಭಗಳಲ್ಲಿ ಜಾಗೃತಿಯನ್ನು ಕೂಡ ಮೂಡಿಸಿದ್ದರು. ಇದೀಗ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ.

    ನಿನ್ನೆ ರಾತ್ರಿಯೇ ಅಪ್ಪುಗೆ ಲಘು ಹೃದಯಾಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಎಂದಿನಂತೆ ಇಂದು ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಮನೆ ಹುಡುಗ ಏಕಾಏಕಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಸಿಜಿ ಮಾಡಿಸಿ ನಂತರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಧ್ಯಾಹ್ನ ನಟ ಇಹಲೋಕ ತ್ಯಜಿಸಿದ್ದು, ಕುಟುಂಬ, ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗವೇ ಕಣ್ಣೀರಾಗಿದೆ.

    ಅಪ್ಪು ಅವರು ಪತ್ನಿ ಅಶ್ವಿನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ನಟರು, ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

  • ಸೋತಂತೆ ನಟಿಸಿದ ದೋಸ್ತಿಗಳಿಂದಾಗಿ ಎಡವುತ್ತಾರಾ ಬಿಎಸ್‍ವೈ?

    ಸೋತಂತೆ ನಟಿಸಿದ ದೋಸ್ತಿಗಳಿಂದಾಗಿ ಎಡವುತ್ತಾರಾ ಬಿಎಸ್‍ವೈ?

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಿದ್ದು ನೂತನ ಸರ್ಕಾರ ರಚನೆಯಾದರೂ ದೋಸ್ತಿಗಳ ಅಧಿಕಾರದ ಕನಸು ಹಾಗೆ ಇದೆಯಾ ಅನ್ನೋ ಅನುಮಾನವೊಂದು ಇದೀಗ ಮೂಡಿದೆ.

    ಸೋತಂತೆ ನಟಿಸಿದ್ದ ದೋಸ್ತಿಗಳು ಒಳಗೊಳಗೆ ಯಡಿಯೂರಪ್ಪಗೆ ಖೆಡ್ಡಾ ತೋಡುತ್ತಿದ್ದಾರೆ. ಈ ಮೂಲಕ ಪ್ರಮಾಣವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ ಯಡಿಯೂರಪ್ಪ ಬಹುಮತ ಸಾಬೀತಲ್ಲಿ ಎಡವುತ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

    ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಬಂಡಾಯ ಶಾಸಕರಿಬ್ಬರು ಕರೆ ಮಾಡಿದ ಬೆಳವಣಿಗೆ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ವೇದಿಕೆಯಾಗಿದೆ. ಆತ್ಮ ವಿಶ್ವಾಸದಲ್ಲಿದ್ದ ಬಿಜೆಪಿ ನಾಯಕರು ನಮ್ಮೊಂದಿಗೆ ಇರುವ ಬಂಡಾಯಗಾರರ ಪೈಕಿ ಯಾರು ಕೈ ಕೊಡ್ತಾರೆ, ಯಾರು ವಿರೋಧಿ ಪಾಳಯ ಸೇರ್ತಾರೆ ಅನ್ನೋ ಆತಂಕಕ್ಕೆ ಒಳಗಾಗುವಂತಾಗಿದೆ.

    ಇತ್ತ ಬಂಡಾಯ ಶಾಸಕರನ್ನ ಲೆಕ್ಕದಿಂದ ಕೈ ಬಿಟ್ಟು ಅವರ ವಿರುದ್ಧ ಅನರ್ಹತೆಯ ಸಮರ ಸಾರಿದ್ದ ದೋಸ್ತಿ ಪಾಳಯ, ಈ ಹೊಸ ಬೆಳವಣಿಗೆಯಿಂದ ಹೊಸ ನಿರೀಕ್ಷೆಯೊಂದಿಗೆ ಲೆಕ್ಕಾಚಾರ ಆರಂಭಿಸಿದೆ. ಸಿದ್ದರಾಮಯ್ಯರಿಗೆ ಕರೆ ಮಾಡಿ ಮಾತನಾಡಿಸಲು ಯತ್ನಿಸಿದ್ದ ಶಾಸಕರು ವಾಪಾಸ್ ಬಂದರೆ ಬಿಜೆಪಿಯ ವಿರುದ್ಧ ಯಾವ ಅಸ್ತ್ರ ಬೇಕಾದರು ಬಳಸಬಹುದು ಎಂದು ಹೇಳಲಾಗುತ್ತಿದೆ.

    ಸರ್ಕಾರ ರಚಿಸಿದ ಯಡಿಯೂರಪ್ಪ ಯಾವ ಕ್ಷಣದಲ್ಲಿ ಬೇಕಾದರೂ ಬಹುಮತ ಸಾಬೀತಿನಲ್ಲಿ ಎಡವಬಹುದು. ಹೀಗೆ ಕೈ ಕೊಟ್ಟು ಹೋದ ಶಾಸಕರನ್ನ ಯಾವ ಕಾರಣಕ್ಕೂ ವಾಪಾಸ್ ಸೇರಿಸಲ್ಲ ಎನ್ನುತ್ತಿದ್ದ ದೋಸ್ತಿಗಳು, ಶಾಸಕರ ಫೋನ್ ಕಾಲ್ ನಂತರ ಒಳಗೊಳಗೆ ಹೊಸ ಲೆಕ್ಕಾಚಾರ ಆರಂಭಿಸಿದ್ದಾರೆ.

    ಮೈತ್ರಿ ನಾಯಕ ಈ ಲೆಕ್ಕಾಚಾರ ದೋಸ್ತಿಗಳನ್ನ ಮತ್ತೆ ಅಧಿಕಾರದ ಗದ್ದುಗೆ ಏರಿಸುತ್ತಾ, ಇಲ್ಲಾ ಬಿಜೆಪಿ ನಾಯಕರ ಅಧಿಕಾರದ ಕನಸನ್ನ ನುಚ್ಚುನೂರು ಮಾಡುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.