Tag: Bengaluru Woman

  • ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    – ಮನುಷ್ಯರು ಹೀಗೆ ಮಾಡ್ತಾರಾ ಅಂತರ ಕಣ್ಣೀರಿಟ್ಟ ಮಹಾಲಕ್ಷ್ಮಿ ತಾಯಿ

    ಬೆಂಗಳೂರು: ಕೊಲೆ ಮಾಡಿದ್ಮೇಲೆ ಜೀವನೇ ಇರಲ್ಲ. ಅಂತದ್ರಲ್ಲಿ ದೇಹವನ್ನ ತುಂಡು ತುಂಡಾಗಿ ಕತ್ತರಿಸ್ತಾನೆ ಅಂದ್ರೆ ಹಂತಕನ ಮನಸ್ಸು ಅದೆಷ್ಟು ಕ್ರೂರವಾಗಿರಬೇಕು ಅನ್ನೋದು ಫೋಟೋವೊಂದರಿಂದ ಗೊತ್ತಾಗಿದೆ.

    ಹೌದು. ಗಂಡನಿಂದ ದೂರಾಗಿದ್ದ ಮಹಿಳೆಯನ್ನ (Bengaluru Woman) ಕೊಲೆ ಮಾಡಿ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ, ಹಂತಕನ ಈ ಕ್ರೂರತ್ವ ಕುಟುಂಬದವರೇ ಬೆಚ್ಚಿ ಬೆರಗಾಗಿದ್ದಾರೆ. ಈ ಫೋಟೋ ಸಹ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಲೆಯಾದ ಮಹಿಳೆ ತಾಯಿ ಮೀನಾ, ಮನೆ ಬೀಗ ತೇಗೆದಾಗ ಮಹಾಲಕ್ಷ್ಮಿ ದೇಹ ತುಂಡಾಗಿ ಫ್ರೀಡ್ಜ್‌ನಲ್ಲಿತ್ತು. ಕೊನೆಯದ್ದಾಗಿ ರಕ್ಷಾಬಂಧನ ಹಬ್ಬದಂದು ನೋಡಿದ್ದು, ನನಗೆ ಮನೆ ಓನರ್ ಫೋನ್‌ ಮಾಡಿದ್ರು. ಮನುಷ್ಯರು ಅನ್ನಿಸಿಕೊಂಡವರು ಇಂತಹ ಕೆಲಸ ಮಾಡ್ತಾರಾ? ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.

    ಇನ್ನೂ ಮೃತ ಮಹಾಲಕ್ಷ್ಮಿ ಪತಿ ಹೇಮಂತ ಮಾತನಾಡಿ, ಮದುವೆಯಾಗಿ 6 ವರ್ಷ ಆಗಿತ್ತು. ಓನರ್‌ ಈಚೆಗೆ ರೂಂ ನಿಂದ ವಾಸನೆ ಬರ್ತಿದೆ ಅಂತ ಫೋನ್‌ ಮಾಡಿದ್ದರು. ಬಂದು ನೋಡಿದಾಗ ಹೀಗಾಗಿತ್ತು. ಮೂಲತಃ ನೇಪಾಳ ಆದ್ರು ಅವರ ಅಪ್ಪ ಇಲ್ಲೇ ನೆಲೆಸಿದ್ದರು. ಮಹಾಲಕ್ಷ್ಮಿ ಇಲ್ಲೇ ಹುಟ್ಟಿ ಬೆಳೆದವರು. ನಾನು ಬೇರೆ ಇರ್ತಿನಿ ಅಂತ ಹೇಳಿದ್ದರು. ಹಾಗಾಗಿ 9 ತಿಂಗಳಿಂದ ದೂರ ಇದ್ವಿ. ಮಗು ನನ್ನ ಜೊತೆಯೇ ಇದೆ ಎಂದಿದ್ದಾರೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    ನಾನು ಮಹಾಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿರಲಿಲ್ಲ. ಅಶ್ರಫ್ ಮೇಲೆ ದೂರು ಕೊಟ್ಟಿದ್ದಿನಿ, ಮೇ ತಿಂಗಳಲ್ಲಿ ನನಗೆ ಇವರ ಸಂಬಂಧಧ ಬಗ್ಗೆ ಗೊತ್ತಾಯ್ತು. 25 ದಿನಗಳ ಹಿಂದೆ ನೆಲಮಂಗಲದಲ್ಲಿ ಭೇಟಿ ಮಾಡಿದ್ದೆ, ಆಗ ಕೋಪ ಇರಲಿಲ್ಲ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ:  ನಾಗಮಂಗಲ ಗಲಭೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ – ಚಿಕ್ಕಬಳ್ಳಾಪುರದಲ್ಲಿ ಗಣೇಶ ವಿಸರ್ಜನೆಗೆ 600 ಪೊಲೀಸರ ಭದ್ರತೆ

  • Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    – 10 ದಿನಗಳ ಹಿಂದೆಯೇ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು; ರಹಸ್ಯ ಸ್ಫೋಟ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಡೆಡ್ಲಿ ಮರ್ಡರ್‌ವೊಂದು ನಡೆದಿದೆ. 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನ ವ್ಯಕ್ತಿಯೋರ್ವ ರಣಭೀಕರವಾಗಿ ಹತ್ಯೆಗೈದಿದ್ದಾನೆ. ಮಹಿಳೆಯ ಮೃತದೇಹವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವ (Fridge) ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ನಗರದ ವೈಯಾಲಿಕಾವಲ್‌ನ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.

    10 ದಿನಗಳ ಹಿಂದೆಯೇ ಮೊಬೈಲ್‌ ಸ್ವಿಚ್‌ಆಫ್‌:
    ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹತ್ತು ದಿನಗಳ ಹಿಂದೆಯೇ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಮಹಾಲಕ್ಷ್ಮಿ ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗಿಲ್ಲ. ವಾಸವಿರುವ ಮನೆಯ ಬಳಿಯೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. 10 ದಿನಗಳ ಹಿಂದೆಯೇ ಮಹಾಲಕ್ಷ್ಮಿ ಮೊಬೈಲ್ (Mobile) ಸಹ ಸ್ವಿಚ್‌ಆಫ್‌ ಆಗಿದೆ. ಹಾಗಾಗಿ 10 ದಿನಗಳ ಹಿಂದೆಯೇ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೌರಿಂಗ್ ಆಸ್ಪತ್ರೆಯಲ್ಲಿಂದು ಮರೋಣತ್ತರ ಪರೀಕ್ಷೆ:
    ಮಹಾಲಕ್ಷ್ಮಿ ಮೃತದೇಹ ತುಂಡುಗಳ ಮರಣೋತ್ತರ ಪರೀಕ್ಷೆ ಭಾನುವಾರ (ಇಂದು) ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ನಡೆಯಲಿದೆ. ಬೆಳಗ್ಗೆ 10 ಘಂಟೆ ಬಳಿಕ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಶುರುವಾಗಲಿದೆ. ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ – 13 ಮಕ್ಕಳು ಸೇರಿ 22 ಮಂದಿ ಸಾವು

    ಹೇಗೆ ನಡೆಯುತ್ತೆ ಭೀಕರ ಕೊಲೆಯ ಪೋಸ್ಟ್ ಮಾರ್ಟಂ?
    1 ಮೊದಲು ಪ್ರತಿ ಪೀಸ್‌ಗೂ ನಂಬರಿಂಗ್ ಮಾಡಲಾಗುತ್ತೆ
    2 ಪ್ರತಿ ಪೀಸ್ಸ್‌ನ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಮಾಡಲಾಗುತ್ತೆ, ಸಿಟಿ ಸ್ಕ್ಯಾನ್ ಎಕ್ಸರೇ ಹೀಗೆ
    3 ಆಯ್ದ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
    4 ಆಯ್ದ ತುಂಡುಗಳ ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
    5 DNA ಪರೀಕ್ಷೆ ಮಾಡಲಾಗುತ್ತೆ
    6 ಅವಶ್ಯವಿದ್ದರೆ ಬಾಡಿ ರಿ ಅಸ್ಸೆಂಬಲ್ ಮಾಡಲಾಗುತ್ತೆ
    7 ಅಂತಿಮವಾಗಿ ಕಂಡು ಬಂದ ಅಂಶಗಳ ಕುರಿತು ವರದಿಯನ್ನ ಸಿದ್ಧಪಡಿಸಲಾಗುತ್ತೆ

    ಫ್ರಿಡ್ಜ್‌ನಿಂದ ರಕ್ತ ತೊಟ್ಟಿಕ್ಕುತ್ತಿತ್ತು:
    ದೇಹದ ಪೀಸ್‌ಗಳನ್ನ ನೀಟಾಗಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ ಕಾರಣ ದೇಹದ ಪೀಸ್‌ಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಬಿಲ್ಡಿಂಗ್‌ಗೆ ಎಫ್‌ಎಸ್‌ಎಲ್ ಟೀಂ ಎಂಟ್ರಿ ಕೊಟ್ಟಾಗ ಮೃತದೇಹದ ದುರ್ವಾಸನೆ ಬರುತ್ತಿತ್ತಂತೆ, ಅಷ್ಟೇ ಅಲ್ಲ ಫ್ರಿಡ್ಜ್‌ನೊಳಗೆ ಇಟ್ಟಿದ್ದ ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕುತ್ತಿದ್ದವು ಎನ್ನಲಾಗಿದೆ. ಕರೆಂಟ್ ಹೋದಂತ ಸಂಧರ್ಬದಲ್ಲಿ ಒಂದಷ್ಟು ರಕ್ತ ಫ್ರಿಡ್ಜ್ ನಿಂದ ಕೆಳ ಬಿದ್ದಿತ್ತು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಡಿಸಿಗೆ ಧಮ್ಕಿ ಹಾಕ್ತಿದ್ದಾರೆ, ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿಕೆಶಿ ಗರಂ

    https://youtu.be/_6AUt6S8aQM?si=-30qMwrG26AuzF7y

  • ನೀರು ಕುಡಿಯೋ ನೆಪದಲ್ಲಿ ಬಂದು ಎಳೆದಾಡಿದ – ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ನೀರು ಕುಡಿಯೋ ನೆಪದಲ್ಲಿ ಬಂದು ಎಳೆದಾಡಿದ – ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ಬೆಂಗಳೂರು: ಫುಡ್ ಡೆಲಿವರಿ ಬಾಯ್‌ (Food Delivery Boy) ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದ್ದು, ಇಲ್ಲಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡೆಲಿವರಿ ಬಾಯ್ ಬಿ.ಆಕಾಶ್ ವಿರುದ್ಧ ದೂರು ದಾಖಲಾಗಿದೆ.

    ನಡೆದಿದ್ದೇನು?
    ಕಳೆದ ಮಾರ್ಚ್ 17ರಂದು (ಭಾನುವಾರ) ಸಂಜೆ 6:30ರ ವೇಳೆಗೆ ಹೆಚ್‌ಎಎಲ್ ಪೊಲೀಸ್ ಠಾಣಾ (HAL Police Station) ವ್ಯಾಪ್ತಿಯ ಮನೆಯೊಂದಕ್ಕೆ ಫುಡ್ ಡೆಲಿವರಿ ನೀಡಲು ಹೋಗಿದ್ದ. ಫುಡ್ ನೀಡಿದ ಬಳಿಕ ವಾಶ್‌ ರೂಂ ಉಪಯೋಗಿಸಲು ಮನವಿ ಮಾಡಿ, ಮನೆಯೊಳಕ್ಕೆ ಎಂಟ್ರಿಕೊಟ್ಟಿದ್ದಾನೆ. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ – ಲವ್ ಜಿಹಾದ್‌ಗೆ ಮುಂದಾಗಿದ್ದ, ಮತಾಂತರಕ್ಕೆ ಯತ್ನಿಸಿದ್ದನಂತೆ ಯುವಕ

    ಬಳಿಕ ಯುವತಿಗೆ ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಆಕೆ ನೀರು ತರಲು ಒಳಗೆ ಹೋದಾಗ ತಾನೂ ಹಿಂಬಾಲಿಸಿ ಹೋಗಿದ್ದಾನೆ. ನಂತರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ, ಅನುಚಿತವಾಗಿ ವರ್ತಿಸಿದ್ದಾನೆ.

    ಘಟನೆ ಸಂಬಂಧ ಯುವತಿ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

  • ನಮ್ಮ ಮೆಟ್ರೋದಲ್ಲಿ ಕಾಮುಕನ ಚೇಷ್ಟೆ – ಖಾಸಗಿ ಅಂಗ ಸ್ಪರ್ಶಿಸಿ ಯುವತಿಗೆ ಕಿರುಕುಳ

    ನಮ್ಮ ಮೆಟ್ರೋದಲ್ಲಿ ಕಾಮುಕನ ಚೇಷ್ಟೆ – ಖಾಸಗಿ ಅಂಗ ಸ್ಪರ್ಶಿಸಿ ಯುವತಿಗೆ ಕಿರುಕುಳ

    – ಯುವಕನಿಗೆ ಹಿಗ್ಗಾಮುಗ್ಗ ತರಾಟೆ, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆಸಾಮಿ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಯುವತಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರು (Bengaluru) ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕನೋರ್ವ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಮೆಟ್ರೋದಿಂದ ಇಳಿಯುತ್ತಿದ್ದಂತೆ ಯುವತಿ (Bengaluru Woman), ಯುವಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾಳೆ.

    ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾಳೆ. ಬಳಿಕ ನೀನು ಇಲ್ಲಿಂದ ಹೋಗೋಹಾಗಿಲ್ಲ, ನಿನಗೆ ಶಿಕ್ಷೆ ಆಗಲೇಬೇಕು, ಮಾತನಾಡದಿದ್ರೆ ನಮಗೆ ನ್ಯಾಯ ಸಿಗಲ್ಲ ಎಂದು ಪಟ್ಟು ಹಿಡಿದು ಕ್ರಮಕ್ಕೆ ಒತ್ತಾಯಿಸಿದ್ದಾಳೆ. ಬಳಿಕ ವಿಚಾರಣೆ ನಡೆಸಿ ಮೆಟ್ರೊ ಅಧಿಕಾರಿಗಳು ಯುವಕನನ್ನ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯುವಕ ತಪ್ಪೊಪ್ಪಿಕೊಂಡ ಬಳಿಕ ಇನ್ನೊಮ್ಮೆ ಹೀಗೆ ಮಾಡದಂತೆ ಕ್ಷಮೆ ಕೇಳಿಸಿ ಕಳುಹಿಸಿದ್ದಾರೆ.

    ಘಟನೆ ನಡೆದ ಒಂದು ವಾರದ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿದ್ದ ಯುವಕ ಮೂಲತಃ ಉತ್ತರ ಭಾರತದ ನಿವಾಸಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನವೇ ನಮಗೆ ಹೆರಿಗೆಯಾಗಲಿ: ವೈದ್ಯರ ಬಳಿ ಗರ್ಭಿಣಿಯರ ಮನವಿ

    ಮೆಟ್ರೋದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ?
    ಮೆಟ್ರೋದಲ್ಲಿ ಯುವತಿಯೊಂದಿಗಿನ ಅಸಭ್ಯ ವರ್ತನೆ ಕಂಡುಬಂದ ಬಳಿಕ ಮಹಿಳೆಯರಿಗೆ ಮೆಟ್ರೋದಲ್ಲಿ ರಕ್ಷಣೆ ಇಲ್ವಾ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಬಿಎಂಟಿಸಿ ಸಾರಿಗೆ ಇಲಾಖೆಯು ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್‌ಗಳನ್ನ ಅಳವಡಿಸಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಮಹಿಳಾ ಸುರಕ್ಷತೆಗೆ ಹೆಚ್ಚುವರಿ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಅಫ್ಘಾನ್‌ ವಿರುದ್ಧ T20 ಸರಣಿಗೆ‌ ಬಲಿಷ್ಠ ತಂಡ ಪ್ರಕಟ – ಟೀಂ ಇಂಡಿಯಾಕ್ಕೆ ರೋಹಿತ್‌ ಸಾರಥಿ, ಕೊಹ್ಲಿ ಕಂಬ್ಯಾಕ್‌

  • ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದೂ ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ, ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತಾ ಅರ್ಥವಲ್ಲ. ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು ಅಂತಾ ಬಣ್ಣದ ಮಾತುಗಳನ್ನಾಡಿದರೆ ಅದು ಎದ್ವಾತದ್ವಾ ಪ್ರೀತಿ ಇದೆ ಅಂತಲ್ಲ. ಈ ಡೈಲಾಗ್‌ಗಳನ್ನ ನಿತ್ಯ ಪ್ರೇಮಿಗಳಿಂದ ಕೇಳುತ್ತಲೇ ಇರುತ್ತೇವೆ.

    ಬೆಂಗಳೂರಿನ ಮಹಿಳೆಯೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಪತಿಯ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, `ಮುಂದಿನ ರೀಲ್‌ನಲ್ಲಿ ಅಂತಿಮ ಪ್ರೀತಿ’ ಎಂದೂ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮಹಿಳೆಯ ಫೋಟೋ ಹಂಚಿಕೊಳ್ಳಲಾಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋದಲ್ಲಿನ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾಳೆ. 2.68 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನ ಲೈಕ್ ಮಾಡಿದ್ದಾರೆ.

    ಮಹಿಳೆಯ ಫೋಟೋವನ್ನು ನೋಡಿ ಕೆಲವರು ಇದು ಪಕ್ಕಾ ಟ್ರೂ ಲವ್ ಅಂತಾ ಹೊಗಳಿದರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್, ನಾನು ನನ್ನ ಲೈಕ್ ಅನ್ನು ಕ್ಯಾನ್ಸಲ್ ಮಾಡ್ತೀನಿ. ಇದು ಮೂರ್ಖತನ, ನಿಜವಾದ ಪ್ರೀತಿಯನ್ನ ಈ ರೀತಿ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

  • ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

    ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

    – ರಕ್ಷಣೆ ಕೋರಿದ ವಿಡಿಯೋ ವೈರಲ್
    – ಭಾರತದ ರಾಯಭಾರಿಯಿಂದ ಮಹಿಳೆಯ ರಕ್ಷಣೆ

    ದುಬೈ: ಯುಎಇಯ ಶಾರ್ಜಾದಲ್ಲಿ ಪತಿ ಕಿರುಕುಳ ಕೊಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ರಕ್ಷಣೆ ಕೋರಿ ವಿಡಿಯೋ ಟ್ವೀಟ್ ಮಾಡಿದ್ದರು. ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

    ಬೆಂಗಳೂರು ಮೂಲದ ಜಸ್ಮಿನ್ ಸುಲ್ತಾನಾ ಅವರನ್ನು ಮೊಹಮದ್ ಕಿಝಾರುಲ್ಲಾ ಮದುವೆಯಾಗಿದ್ದನು. ಬಳಿಕ ಪತ್ನಿಯನ್ನು ಯುಎಇಯ ಶಾರ್ಜಾಗೆ ಮೊಹಮದ್ ಕರೆದೊಯ್ದಿದ್ದನು. ಅಲ್ಲಿ ಮಹಿಳೆಗೆ ಪತಿ ನಿರಂತರ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮಾನಸಿಕ ಹಾಗೂ ದೈಹಿಕವಾಗಿ ತನಗೆ ಕೊಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ಮಹಿಳೆ ರಕ್ಷಣೆ ಕೋರಿ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದರು. ವಿಡಿಯೋದಲ್ಲಿ ನನಗೆ ಪತಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಹಾಗೂ ಮಕ್ಕಳನ್ನು ರಕ್ಷಿಸಿ. ಭಾರತಕ್ಕೆ ನಾನು ವಾಪಸ್ ಹೋಗಲು ಸಹಾಯ ಮಾಡಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದರು.

    ಈ ವಿಡಿಯೋ ಟ್ವೀಟ್‍ಗೆ ಪ್ರಧಾನಿ ನರೇಂದ್ರ ಮೋದಿ, ದುಬೈ ಪೊಲೀಸ್ ಹಾಗೂ ಭಾರತೀಯ ರಾಯಭಾರಿಯ ಹ್ಯಾಶ್ ಟ್ಯಾಗ್ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.

    ಈ ಬಗ್ಗೆ ಶಾರ್ಜಾ ಪೊಲೀಸರು ಟ್ವೀಟ್ ಮಾಡಿ, ಭಾರತೀಯ ಮಹಿಳೆಯೊಬ್ಬರಿಗೆ ಆಕೆಯ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಈಗಾಗಲೇ ಈ ಸಂಬಂಧ ಮಹಿಳೆಯ ದೂರು ಪಡೆದು ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಮಹಿಳೆಯನ್ನು ನಾವು ಭೇಟಿ ಮಾಡಿದ್ದೇವೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಸ್ಥಳೀಯ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಾವು ಕೂಡ ಆರೋಪಿಯನ್ನು ವಿಚಾರಣೆ ನಡೆಸಲಿದ್ದೇವೆ. ಮಹಿಳೆಗೆ ತಮ್ಮಿಂದ ಆಗುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದೆ.

    ಅಧಿಕಾರಿಗಳು ರಕ್ಷಿಸಿದ ಬಳಿಕ ಮಹಿಳೆ ಪ್ರತಿಕ್ರಿಯಿಸಿ, ಟ್ವಿಟ್ಟರ್ ಹಾಗೂ ನನ್ನ ಸಹಾಯಕ್ಕೆ ಬಂದ ಎಲ್ಲರಿಗೂ ಧನ್ಯವಾದ. ನನಗೆ ಮೆಸೇಜ್ ಮಾಡಿ ಬೆಂಬಲಕ್ಕೆ ನಿಂತು, ನನ್ನ ನೋವಿಗೆ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈಗ ಪತಿಯ ಕಿರುಕುಳದಿಂದ ಮುಕ್ತಿ ಪಡೆದಿದ್ದೇನೆ. ಈಗಾಗಲೇ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ವರ್ಷ ನಾನು ದಾಂಪತ್ಯ ಜೀವನದಲ್ಲಿ ಅನುಭವಿಸಿದ ನೋವು, ಕಿರುಕುಳಕ್ಕೆ ಮುಕ್ತಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಮಹಿಳೆಯ ಟ್ವೀಟ್‍ಗೆ ಬೆಂಗಳೂರು ಪೊಲೀಸರು ರೀ-ಟ್ವೀಟ್ ಮಾಡಿ, ದಯವಿಟ್ಟು ಬೆಂಗಳೂರಿನ ನಿಮ್ಮ ವಿಳಾಸವನ್ನು ನಮಗೆ ಮೆಸೇಜ್ ಮಾಡಿ ಎಂದು ಹೇಳಿದ್ದಾರೆ.