Tag: Bengaluru T Shirt

  • Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    – ಮೋಸ್ಟ್‌ ವಾಂಟೆಡ್‌ಗಳಿರುವ ಹಿಂಡಲಗಾ ಜೈಲಿಗೆ ದರ್ಶನ್‌ ಶಿಫ್ಟ್‌ ಮಾಡಲು ಚಿಂತನೆ
    – ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ಗಳು ದಾಖಲಾಗಿವೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ರಿಂದ ದೂರು ನೀಡಲಾಗಿದ್ದು, ಮೂರು ಪ್ರಕರಣಗಳಲ್ಲಿ ಎರಡರಲ್ಲಿ ದರ್ಶನ್ ಎ1 ಆರೋಪಿಯನ್ನಾಗಿಸಲಾಗಿದೆ‌. 3ನೇ ಎಫ್ಐಆರ್ ಜೈಲು ಅಧಿಕಾರಿಗಳ ಮೇಲಾಗಿದ್ದು, ದರ್ಶನ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ.

    ಏನೇನು ಪ್ರಕರಣ – ಯಾರು ಆರೋಪಿ?
    1) ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1- ದರ್ಶನ್
    A2- ನಾಗರಾಜ್
    A3-ವಿಲ್ಸನ್ ಗಾರ್ಡನ್ ನಾಗ
    A4-ಕುಳ್ಳ ಸೀನಾ.

    2) ಮತ್ತೊಂದು ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1-ದರ್ಶನ್
    A2-ಧರ್ಮ
    A3-ಸತ್ಯ

    3)U/S 42, 54 (1(A) Prisons Act & 238, 323 BNS ಅಕ್ಟ್ ಅಡಿ ಎಫ್‌ಐಆರ್‌
    A1-ಸುದರ್ಶನ್ ಕೆ.ಎಸ್.
    A2-ಮುಜೀಬ್
    A3-ಪರಮೇಶ ನಾಯಕ್ ಲಮಾಣಿ
    A4- ಕೆ ಬಿ ರಾಯಮನೆ

    ಸಿಸಿಬಿ ದಾಳಿ; ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆ:
    ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೇಲು ಎಂಬಾತನ ಮೊಬೈಲ್‌ನಿಂದ ದರ್ಶನ್‌ ಜೈಲಿನಲ್ಲಿ ದರ್ಬಾರ್‌ ನಡೆಸುತ್ತಿರೋ ಫೋಟೋ ಸೋರಿಕೆ ಆಗಿತ್ತು, ಧರ್ಮ ಎಂಬಾತ ಮೊಬೈಲ್‌ನಿಂದ ದರ್ಶನ್‌ ವೀಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಸಿಸಿಬಿ ಅಧಿಕಾರಿಗಳ ಕೈಗೆ ಯಾವುದೇ ಮೊಬೈಲ್‌ ಸಿಕ್ಕಿಲ್ಲ ಅಂತ ಅಧಿಕಾರಿಗಳು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ ಸಿಸಿಬಿ ದಾಳಿ ನಡೆಯುತ್ತೆ ಅಂತ ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆಯಾಗಿತ್ತು ಎಂದೂ ಮೂಲಗಳು ತಿಳಿಸಿವೆ.

    ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ:
    ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ರನ್ನ ಮಂಗಳವಾರ ಅಥವಾ ಬುಧವಾರ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳು ಚರ್ಚೆ ಮಾಡ್ತಿದ್ದಾರೆ. ನಟೋರಿಯಸ್ ರೌಡಿ ನಾಗನ ಜೊತೆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ. ನೂರು ವರ್ಷಗಳ ಇತಿಹಾಸ ಇರುವ ಈ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರೋ ಖೈದಿಗಳು ಇದ್ದಾರೆ. ನಟೋರಿಯಸ್ ರೌಡಿಗಳು, ಸಮಾಜಘಾತಕರು, ದೇಶದ್ರೋಹಿಗಳು, ವಿಕೃತ ಕಾಮಿಗಳು ಇರುವಂತ ಜೈಲಿಗೆ ದರ್ಶನ್ ಅವರನ್ನ ಶಿಫ್ಟ್ ಮಾಡಲಾಗ್ತಿದೆ. ಖುದ್ದು ಸಿಎಂ ಸಿದ್ದಾರಮಯ್ಯ ಅವರೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ನೀಡಿದ್ದಾರೆ. ಮೋಸ್ಟ್ ವಾಟೆಂಡ್ ಕ್ರಿಮಿನಲ್ ಇರುವಂಥ ಜೈಲು ಇದಾಗಿದ್ದು, ದರ್ಶನ್ ಗೆ ಶಿಫ್ಟ್ ಮಾಡುವ ಮೂಲಕ, ಈಗಿನಿಂದಲೇ ಶಿಕ್ಷೆ ಕೊಡೋಕೆ ಸಿದ್ಧತೆ ನಡೆದಿದೆ.

    ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ:
    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸಂಜೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿರುವ ಪೊಲೀಸರು ಮಂಗಳವಾರ (ಆ.27) ಕೋರ್ಟ್‌ ಗಮನಕ್ಕೆ ತಂದು ಬಾಡಿವಾರೆಂಟ್ ಗೆ ಪಡೆಯಲು ತಯಾರಿ ನಡೆಸಿದ್ದಾರೆ. ಮಂಗಳವಾರ ಸಂಜೆಯೇ ದರ್ಶನ್‌ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

  • ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಫೋಟೋ ವೈರಲ್‌ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜೈಲಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ (Wilson Garden Naga) ರಾಯಲ್ ಲೈಫ್ ಒಂದೊಂದಾಗಿ ತೆರೆದುಕೊಳ್ತಿದೆ.

    ಬ್ರಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ಶೂ, ರುಚಿಯಾದ ಊಟ, ಕೈಯಲ್ಲಿ ಮೊಬೈಲ್, ಐಷಾರಾಮಿ ವೆಸ್ಟರ್ನ್ ಟಾಯ್ಲೆಟ್, ಹೈಟೇಕು ಹಾಸಿಗೆ, ಜಿಮ್ ಉಪಕರಣ, ಹೀಗೆ ಒಂದಾ ಎರಡಾ? ನಾಗನ ಐಷಾರಾಮಿ ಬ್ಯಾರಕ್ ನೋಡಿ ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿ

    ʻದಾಸʼನ ಜೊತೆ ಕುಳಿತು ಹರಟೆ ಹೊಡೆದಿದ್ದ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಧರಿಸಿದ್ದ ಬಾಲ್ಮೈನ್ ಟಿ-ಶರ್ಟ್ (T Shirt) ಬೆಲೆಯೇ 15-20 ಸಾವಿರ ರೂ. ಇದೆ ಎನ್ನಲಾಗಿದೆ. ದುಬೈ ಸೇರಿದಂತೆ ಫಾರಿನ್ ಕಾಸ್ಟ್ಲಿ ಬ್ರ್ಯಾಂಡ್ ಟಿ-ಶರ್ಟ್‌ಗಳನ್ನ ನಾಗ ಧರಿಸ್ತಿದ್ದಾನೆ. ಇದಲ್ಲದೇ ಬ್ಯಾರಕ್‌ನಲ್ಲಿ ಐದಾರು ಜೊತೆ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈಫ್ರೂಟ್ಸ್, ಫ್ರೂಟ್ಸ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆ

    ಇನ್ನೂ ನಾಗನ ಬ್ಯಾರಕ್‌ನಿಂದ ದಾಸನಿಗೆ ಊಟ ಹೋಗ್ತಿರೊ ಆರೋಪದ ನಡುವೆಯೇ ಫೋಟೊ ವೈರಲ್ ಆಗಿದೆ. ಇಷ್ಟಾದ್ರು ಖತರ್ನಾಕ್ ರೌಡಿಗಳನ್ನ ಶಿಫ್ಟಿಂಗ್ ಮಾಡ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಪೊಲೀಸ್‌ ಆಯುಕ್ತ ದಯಾನಂದ್ ಪತ್ರ ಕೂಡ ಬರೆದಿದ್ದರು. ಜೈಲಲ್ಲಿದ್ದಕೊಂಡೇ ಲಿಟಿಗೇಷನ್ ಪ್ರಾಪರ್ಟಿ ಸೇರಿದಂತೆ ಬೆದರಿಕೆ ಕಾಲ್ ಮಾಡ್ತಿರುವ ರೌಡಿಶೀಟರ್‌ಗಳ ವಿರುದ್ಧ ಕ್ರಮ ಆಗ್ತಿಲ್ಲ ಅನ್ನೋದಂತು ಸತ್ಯ. ಇದನ್ನೂ ಓದಿ: ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ