Tag: Bengaluru surgeon

  • ಪತ್ನಿ ಕೊಲೆಗೆ PROPOFOL ಅನಸ್ತೇಷಿಯಾ ಇಂಜೆಕ್ಷನ್ ಖರೀದಿ – ಸತ್ಯ ಬಾಯ್ಬಿಟ್ಟ ಕಿಲ್ಲರ್‌ ಡಾಕ್ಟರ್‌

    ಪತ್ನಿ ಕೊಲೆಗೆ PROPOFOL ಅನಸ್ತೇಷಿಯಾ ಇಂಜೆಕ್ಷನ್ ಖರೀದಿ – ಸತ್ಯ ಬಾಯ್ಬಿಟ್ಟ ಕಿಲ್ಲರ್‌ ಡಾಕ್ಟರ್‌

    – ನಾನು ಸರ್ಜನ್ ಅಂತ ಪ್ರಿಸ್ಕ್ರಿಪ್ಷನ್ ತೋರಿಸಿ ಮೆಡಿಕಲ್ ಸ್ಟೋರ್‌ನಲ್ಲಿ ಖರೀದಿ

    ಬೆಂಗಳೂರು: ಡಾಕ್ಟರ್ ಪತಿಯಿಂದ ಪತ್ನಿ ಡಾ. ಕೃತಿಕಾ ರೆಡ್ಡಿ (Kruthika Reddy) ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಆರೋಪಿ ನಾನು ಸರ್ಜನ್ ಅಂತಾ ಮೆಡಿಕಲ್ ಶಾಪ್‌ನವರಿಗೆ ಹೆದರಿಸಿ ಅನಸ್ತೇಷಿಯಾ ಇಂಜೆಕ್ಷನ್ (Injection) ಖರೀದಿ ಮಾಡಿದ್ದನ್ನ ಪತ್ತೆ ಮಾಡಿದ್ದಾರೆ.

    Krutkia Reddy Mahendra Reddy

    ವೈದ್ಯ ಪತಿ ಮಹೇಂದ್ರ ರೆಡ್ಡಿಯಿಂದ (Mahendra Reddy) ಡಾಕ್ಟರ್ ಪತ್ನಿ ಕೃತಿಕಾ ರೆಡ್ಡಿಗೆ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿ ಅರೆಸ್ಟ್ ಆಗಿದ್ದು ಗೊತ್ತೇ ಇದೆ. ಇದೀಗ ಆರೋಪಿ ಡಾಕ್ಟರ್ ಮಹೇಂದ್ರ ರೆಡ್ಡಿಯಿಂದ ಪೊಲೀಸ್ರು ಪ್ರಮುಖ ವಿಚಾರ ಬಾಯ್ಬಿಡಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಸತ್ಯ ಕಕ್ಕಿದ್ದಾನೆ. ಮಾರತಹಳ್ಳಿ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡದಿಂದ ನಿರಂತರ ವಿಚಾರಣೆ ವೇಳೆ ಅನಸ್ತೇಷಿಯಾ ಖರೀದಿ ಮಾಡಿದ್ದು ಎಲ್ಲಿ ಅಂತಾ ಆರೋಪಿ ಬಾಯ್ಬಿಟ್ಟಿದ್ದಾನೆ. Propofol ಎಂಬ ಅನಷ್ತೇಷಿಯಾವನ್ನ ಕೊಟ್ಟು ಹೆಂಡ್ತಿಯನ್ನ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಅಂದು ಸ್ವತಃ ತಾನೇ ಡ್ರಗ್ಸ್ ಖರೀದಿ ಮಾಡಲು ಮೆಡಿಕಲ್ ಶಾಪ್ ಒಂದಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾನೆ.

    bengaluru doctor kills wife using anesthesia 1

    ನಾನು ಡಾಕ್ಟರ್ Propfol ಬೇಕು ಅಂತಾ ಆರೋಪಿ ಮಹೇಂದ್ರ ರೆಡ್ಡಿ ಮೆಡಿಕಲ್ ಸ್ಟೋರ್ ನವರ ಬಳಿ ಕೇಳಿದ್ದಾನೆ. ಪ್ರೊಪೊಫೋಲ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಅಂತಾ ಮೆಡಿಕಲ್‌ನವರು ಹೇಳಿದ್ದಾರೆ. ಆಗ ತಾನೊಬ್ಬ ಸರ್ಜನ್ ಅಂತಾ ತಾನೆ ಬರೆದಿದ್ದ ಪ್ರಿಸ್ಕ್ರಿಪ್ಸನ್ ನೀಡಿ ನನಗೆ ಟ್ರೀಟ್ಮೆಂಟ್‌ಗಾಗಿ ಬೇಕಿದೆ ಎಂದು ಹೇಳಿ ಮೆಡಿಸಿನ್ ಅನ್ನು ಖರೀದಿ ಮಾಡಿದ್ದ. ಇತ್ತ ನೋವಿನಿಂದ ಬಳಲಿ ಮನೆಯಲ್ಲಿ ಮಲಗಿದ್ದ ಪತ್ನಿ ಕೃತಿಕಾಳಿಗೆ ರಾತ್ರಿ ವೇಳೆ ತೆರಳಿ ಐವಿ ಮೂಲಕ Propofol ನೀಡಿದ್ದ. ಇದು ಓವರ್ ಡೋಸ್ ಆಗಿ ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತವಾಗಿ ಇರಲಿಲ್ಲ.

    ಇಂಜೆಕ್ಷನ್ ಪವರ್‌ಗೆ ಕೃತಿಕಾ ಮೊದಲು ನಿದ್ರೆಗೆ ಜಾರಿ ನಂತ್ರ ಕೋಮಾಗೆ ಜಾರಿದ್ಲು. ಕೋಮಾದಿಂದ ಹೊರ ತರಲು ಮೆಡಿಸನ್ ನೀಡದ ಕಾರಣ ಕೋಮಾದಲ್ಲೇ ಉಸಿರು ಚೆಲ್ಲಿದ್ದಾಳೆ. ಈ ವೇಳೆ ರಾತ್ರಿಯೆಲ್ಲಾ ಕೃತಿಕ ಜೊತೆಗೆ ಅದೇ ರೂಮ್ ನಲ್ಲಿಯೇ ಆರೋಪಿ ಮಹೇಂದ್ರ ರೆಡ್ಡಿ ಮಲಗಿದ್ದ. ಸದ್ಯ ಆರೋಪಿ ಅನಸ್ತೇಷಿಯಾ ಮೆಡಿಸನ್ ಕೊಂಡಿದ್ದ ರಹಸ್ಯ ಬೇಧಿಸಿರೊ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

  • ಬಗೆದಷ್ಟು ಬಯಲಾಗ್ತಿದೆ ಕಿಲ್ಲರ್ ಡಾಕ್ಟರ್ ರಹಸ್ಯ; ಹೆಂಡ್ತಿ ಕೊಲ್ಲಲು ಸಹೋದರನ ಮೆಡಿಕಲ್‌ನಲ್ಲಿ ಅನಸ್ತೇಷಿಯಾ ಖರೀದಿ?

    ಬಗೆದಷ್ಟು ಬಯಲಾಗ್ತಿದೆ ಕಿಲ್ಲರ್ ಡಾಕ್ಟರ್ ರಹಸ್ಯ; ಹೆಂಡ್ತಿ ಕೊಲ್ಲಲು ಸಹೋದರನ ಮೆಡಿಕಲ್‌ನಲ್ಲಿ ಅನಸ್ತೇಷಿಯಾ ಖರೀದಿ?

    – ವೈದ್ಯೆ ಕೃತಿಕಾ ರೆಡ್ಡಿ ಸಾವಿನ ಹಿಂದೆ `ಅವಳ’ನೆರಳು..?

    ಬೆಂಗಳೂರು: ಹೆಂಡತಿಯನ್ನು ಹೀಗೂ ಕೊಲೆ ಮಾಡಬಹುದಾ ಎಂಬ ಸುದ್ದಿ ನಿಜಕ್ಕೂ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಅನಸ್ತೇಷಿಯಾ (Anesthesia) ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನ ಕಿಲ್ಲರ್ ಡಾಕ್ಟರ್ ಮರ್ಡರ್ ಮಾಡಿರುವುದು ಹೆತ್ತೊಡಲಿಗೆ ಕಿಚ್ಚು ಹಚ್ಚುವಂತಿ ಮಾಡಿದೆ. ಮಗಳೂ ವೈದ್ಯೆ. ಆಕೆಯ ಬದುಕು ಸುಂದರವಾಗಿರಲಿ ಎಂದು ಪೋಷಕರು ವೈದ್ಯನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆ ಕಿರಾತಕ ತಾಳಿ ಕಟ್ಟಿ, ಹಸೆಮಣೆ ಏರಿದ್ದ ಪತ್ನಿಯನ್ನೇ ಕೊಂದಿದ್ದಾನೆ. ವೈದ್ಯಕೀಯ ವಿದ್ಯೆ ಬಳಸಿ ಮುದ್ದಾಗಿದ್ದ ಮಡದಿಯ ಉಸಿರು ನಿಲ್ಲಿಸಿದ್ದಾನೆ. ಆತನೇ ಡಾ. ಕೃತಿಕಾ ರೆಡ್ಡಿ ಕೊಂದ ಕೊಲೆಗಾರ ಡಾ. ಮಹೇಂದ್ರ ರೆಡ್ಡಿ.

    ಬೇರೆ ಯುವತಿ ಜೊತೆ ಕಳ್ಳಸಂಬಂಧ?
    ವೈದ್ಯನಾಗಿದ್ದ ಪತಿ, ವೈದ್ಯೆ ಪತ್ನಿಯನ್ನ ಕೊಂದ ಪ್ರಕರಣದಲ್ಲಿ ಟ್ವಿಸ್ಟ್‌ಗಳು ಸಿಗುತ್ತಿವೆ. ಕೊಲೆಗಾರ ಡಾ. ಮಹೇಂದ್ರ ರೆಡ್ಡಿ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿಬಂದಿವೆ. ಪ್ರೇಯಸಿಗೋಸ್ಕರ ಪತ್ನಿ ಕೃತಿಕಾ ರೆಡ್ಡಿಯನ್ನ (Krutkia Reddy) ಕೊಲೆ ಮಾಡಿದ್ದಾನೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ವೃತ್ತಿಯಲ್ಲಿ ವೈದ್ಯನಾಗಿರುವ ಆತ, ಬೇರೆ-ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಶಂಕಿಸಿದ್ದು, ಇದೇ ಕಾರಣಕ್ಕೆ ಕೃತಿಕಾಳನ್ನ ಹತ್ಯೆಗೈದಿದ್ದಾರೆನೆ ಎಂದು ಆಕೆಯ ತಂದೆ ಮುನಿರೆಡ್ಡಿ ದೂರಿದ್ದಾರೆ.

    ಸಹೋದರ ಮೆಡಿಕಲ್‌ನಲ್ಲಿ ಅನಸ್ತೇಷಿಯಾ ಖರೀದಿ?
    ಇನ್ನೂ ಡಾ.ಕೃತಿಕಾ ಕೊಲೆ ಮಾಡುವುದಕ್ಕೆ ಮಹೇಂದ್ರ ರೆಡ್ಡಿ (Mahendra Reddy) ಅನಸ್ತೇಷಿಯಾ ಬಳಕೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಆದ್ರೆ, ಈ ಮೆಡಿಸನ್ ಖರೀದಿ ಮಾಡಿದ್ದೆಲ್ಲಿ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿ ಮಹೇಂದ್ರ, ತಾನು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಮಡಿವಾಳದಲ್ಲಿರುವ ಆತನ ಸಹೋದರನ ಮೆಡಿಕಲ್ ಶಾಪ್‌ನಲ್ಲಿ ಅನಸ್ತೇಷಿಯಾ ಖರೀದಿ ಮಾಡಿದ್ದಾನೆಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಇತ್ತ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಇರುವ ಗ್ಯಾಸ್ಟ್ರೋ ಎಂಟ್ರಾಲಜಿ ಸಂಸ್ಥೆ, ಜುಲೈನಲ್ಲಿಯೇ ಆರೋಪಿ ಮಹೇಂದ್ರ ಕೆಲಸ ಬಿಟ್ಟಿದ್ದಾನೆಂದು ತಿಳಿಸಿದೆ. ಮಾರ್ಚ್‌ನಿಂದ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಸೇವೆ ಮಾಡ್ತಿದ್ದ ಕಿಲ್ಲರ್ ಡಾಕ್ಟರ್ ಜುಲೈನಲ್ಲಿ ಕೆಲಸದಿಂದ ಬಿಡುಗಡೆ ಆಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ದಾಲ್‌ ಸರೋವರ ಸೇರಿ 6 ಸ್ಥಳದಲ್ಲಿ ನಡೆದಿದ್ದ ವೆಡ್ಡಿಂಗ್ ಶೂಟ್
    ಪತಿ ಮಹೇಂದ್ರ ರೆಡ್ಡಿಯಿಂದ ಕೊಲೆಯಾದ ಪತ್ನಿ ಕೃತಿಕಾ ರೆಡ್ಡಿ ಅದೆಷ್ಟೋ ಕನಸು ಕಟ್ಟಿಕೊಂಡು ಮದುವೆಯಾಗಿದ್ಲು. ತಾನು ವೈದ್ಯೆಯಾಗಿದ್ದು ಜನರ ಜೀವ ಉಳಿಸುವ ದೇವತೆಯಾಗಿದ್ಲು. ಕೃತಿಕಾ-ಮಹೇಂದ್ರರ ಮದುವೆ ಭಾರಿ ಅದ್ಧೂರಿಯಾಗಿ ನಡೆದಿತ್ತು. ಇನ್ನು, ಕೃತಿಕಾ ಆಗರ್ಭ ಶ್ರೀಮಂತೆಯಾಗಿದ್ದಳು. ಆಕೆಯ ತಂದೆ ಮುನಿರೆಡ್ಡಿ ನೂರಾರು ಕೋಟಿಯ ಒಡೆಯರಾಗಿದ್ದಾರೆ. ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿಸಿದ್ರು. ಇದಷ್ಟೇ ಅಲ್ಲ ಪ್ರೀ ವೆಡ್ಡಿಂಗ್ ಶೂಟ್ ಕೂಡ ಭರ್ಜರಿಯಾಗಿಯೇ ಮಾಡಿಸಿದ್ರು. ಕಾಶ್ಮೀರ ಸೇರಿ ಒಂದಲ್ಲ ಎರಡಲ್ಲ ಬರೋಬ್ಬರಿ 6 ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿತ್ತು. 2024ರ ಫೆಬ್ರವರಿಯಲ್ಲಿ ಕಾಶ್ಮೀರಕ್ಕೆ ತೆರಳಿದ್ದ ಜೋಡಿ ಮೇ 26ರಂದು ಹೊಸಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ವೈದ್ಯ ರಕ್ಕಸನಾಗಿ. ಕೃತಿಕಾಳನ್ನ ಕೊಂದಿದ್ದಾನೆ.

  • ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?

    ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?

    ಬೆಂಗಳೂರು: ಅನಸ್ತೇಶಿಯಾ ಕೊಟ್ಟು ವೈದ್ಯ ಪತ್ನಿಯನ್ನೇ ವೈದ್ಯ ಪತಿ ಮರ್ಡರ್ ಮಾಡಿದ ಘಟನೆ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. 11 ತಿಂಗಳ ಹಿಂದೆ ಡಾ.ಕೃತಿಕಾ (Krutkia Reddy) ರೆಡ್ಡಿ-ಡಾ.ಮಹೇಂದ್ರ ರೆಡ್ಡಿಗೆ (Mahendra Reddy) ಮದುವೆಯಾಗಿತ್ತು. ಇಬ್ಬರೂ ವಿಕ್ಟೋರಿಯಾದಲ್ಲಿ ಕೆಲಸ ಮಾಡ್ತಿದ್ದರು. ಇದೀಗ ಕೃತಿಕಾ ಸಾವಿನ ನಂತ್ರ ಸ್ಫೋಟಕ ರಹಸ್ಯಗಳು ಬೆಳಿಕಿಗೆ ಬಂದಿವೆ.

    ಕೊಲೆಯಾದ ಕೃತಿಕಾ ಆಗರ್ಭ ಶ್ರೀಮಂತೆ
    ಹೌದು. ಗಂಡನಿಂದಲೇ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಆಗರ್ಭ ಶ್ರೀಮಂತೆ. ಕುಟುಂಬದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ತಂದೆ ಮುನಿರೆಡ್ಡಿ ನೂರಾರು ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಮುನ್ನೇಕೊಳಲುವಿನಲ್ಲಿ ಮುನಿರೆಡ್ಡಿ ಜಮೀನ್ದಾರರಾಗಿದ್ದು, ತಿಂಗಳಿಗೆ ಹತ್ತಾರು ಲಕ್ಷ ಬಾಡಿಗೆಯೇ ಬರುತ್ತೆ. ಹೀಗಾಗಿ ಮಗಳನ್ನ ಅದ್ಧೂರಿಯಾಗಿಯೇ ಮದ್ವೆ ಮಾಡಿಕೊಟ್ಟಿದ್ದರು. ಇತ್ತ ಕೊಲೆಗಡುಕ ಡಾಕ್ಟರ್‌ ಮಹೇಂದ್ರ ರೆಡ್ಡಿ ಕುಟುಂಬ ಕೂಡ ಕಡಿಮೆ ಏನಿರಲಿಲ್ಲ. ಆದ್ರೂ ಮಹೇಂದ್ರ ಕ್ಲಿನಿಕ್ ಆರಂಭಿಸಲು ಮುನಿರೆಡ್ಡಿಯೇ ಹಣಕಾಸಿನ ನೆರವು ನೀಡಿದ್ರು ಎಂದು ತಿಳಿದುಬಂದಿದೆ.

    ಬೇರೆ ಯುವತಿ ಜೊತೆಗೆ ಅಕ್ರಮ ಸಂಬಂಧ ಶಂಕೆ
    ಈ ನಡುವೆ ಮಹೇಂದ್ರ ರೆಡ್ಡಿಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಅಕ್ರಮ ಸಂಬಂಧದಿಂದಲೇ ಮಗಳನ್ನ ಕೊಲೆ ಮಾಡಿರುವುದಾಗಿ ವೈದ್ಯ ಪತಿ ವಿರುದ್ಧ ಕೃತಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಕ್ರಮ ಸಂಬಂಧ ಇರೋದು ದೃಢವಾದಂತೆ ಕಾಣ್ತಿದೆ. ಆದ್ರೆ ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆಯೇ ಅನ್ನೋದು ಇನ್ನೂ ನಿಗೂಢ. ಹೀಗಾಗಿ ಹಲವು ಆಯಾಮಗಳಲ್ಲಿ ಮಾರತ್ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

  • ಪತಿಯಿಂದ ವೈದ್ಯೆ ಹತ್ಯೆ; ಮಗಳಿಗಾಗಿ ಕಟ್ಟಿಸಿದ್ದ 4 ಕೋಟಿ ರೂ. ಮನೆ ಇಸ್ಕಾನ್‌ಗೆ ದಾನ ಮಾಡಿದ ತಂದೆ

    ಪತಿಯಿಂದ ವೈದ್ಯೆ ಹತ್ಯೆ; ಮಗಳಿಗಾಗಿ ಕಟ್ಟಿಸಿದ್ದ 4 ಕೋಟಿ ರೂ. ಮನೆ ಇಸ್ಕಾನ್‌ಗೆ ದಾನ ಮಾಡಿದ ತಂದೆ

    ಬೆಂಗಳೂರು: ನಗರದಲ್ಲಿ ವೈದ್ಯೆಯೊಬ್ಬರು ಪತಿಯಿಂದಲೇ ಹತ್ಯೆಗೀಡಾಗಿದ್ದಾರೆ. ಮಗಳಿಗಾಗಿ ಕಟ್ಟಿಸಿದ್ದ 4 ಕೋಟಿ ಮೌಲ್ಯದ ಮನೆಯನ್ನು ತಂದೆ ಇಸ್ಕಾನ್‌ಗೆ (Iskcon) ದಾನ ಮಾಡಿದ್ದಾರೆ.

    ಅನಸ್ತೇಶಿಯಾ ನೀಡಿ ಪತ್ನಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

    ಬಂಧಿತನನ್ನು ಡಾ.ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಯವರಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಕೊಲೆ ಮಾಡಿದ್ದ. ಇದು ಸಹಜ ಸಾವು ಎಂಬಂತೆಯೇ ಆರೋಪಿ ಬಿಂಬಿಸಿದ್ದ. ಕೊಲೆ ಮಾಡಿದ ಆರು ತಿಂಗಳ ಬಳಿಕ ಹಂತಕನ ಸಂಚು ಬಯಲಾಗಿದೆ. ಡರ್ಮೆಟಾಲಜಿಸ್ಟ್ ಆಗಿದ್ದ ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದರು. ಆರೋಪಿ ಮಹೇಂದ್ರ ರೆಡ್ಡಿ ಸಹ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ.

    ಮಗಳ ಸಾವಿನ ನೋವಿನಲ್ಲಿ ತಂದೆ ಮುನಿರೆಡ್ಡಿ ಇದ್ದಾರೆ. ಮಗಳು ವಾಸವಿದ್ದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ್ದಾರೆ. ಮಗಳಿಗಾಗಿ ನಾಲ್ಕು ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ದರು. ಮಗಳ ನೆನಪು ಕಾಡುತ್ತೆ ಎಂದು ಇಸ್ಕಾನ್ ದೇವಸ್ಥಾನಕ್ಕೆ ಮನೆ ದಾನ ಮಾಡಿದ್ದಾರೆ. ಇದನ್ನೂ ಓದಿ: ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ಹೃದಯಸ್ತಂಭನದಿಂದ ನಿಧನ

    2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.