Tag: Bengaluru south

  • ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    – ಹೈಕೋರ್ಟ್‌ನಲ್ಲಿ ಅರ್ಜಿ ಹಿಂದಕ್ಕೆ ಪಡೆಯಲಿರುವ ಜಾಲಿವುಡ್‌

    ಬೆಂಗಳೂರು: ಬಿಗ್‌ಬಾಸ್‌ಗೆ (Bigg Boss) ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಲಿವುಡ್‌ ಸ್ಟುಡಿಯೋಗೆ (Jollywood Studios and Adventures) ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯವರು ಸಮಸ್ಯೆ ಇತ್ಯರ್ಥ್ಯಕ್ಕೆ 10 ದಿನಗಳ ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಜಾಲಿವುಡ್‌ ಸ್ಟುಡಿಯೋ ಪರ ವಕೀಲ ವಿಶ್ವಾಸ್‌ ಗೌಡ ಮಾತನಾಡಿ, ಇಂದು ನಮ್ಮ ಕಕ್ಷಿದಾರರು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಮಾತನಾಡಿದ್ದಾರೆ. ಈಗ ಡಿಸಿಯವರು 10 ದಿನ‌ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  Bigg Boss | ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆಶಿ ಸಾಫ್ಟ್‌ ಕಾರ್ನರ್‌

    ಅ.6 ರಂದು ನೋಟಿಸ್‌ ನೀಡಿ ಅ.7 ರಂದು ಬೀಗ ಹಾಕಿದ್ದನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ಗೆ ರಿಟ್‌ ಅರ್ಜಿ ಹಾಕಿದ್ದೆವು. ಈಗ ಜಿಲ್ಲಾಡಳಿತ 10 ದಿನಗಳ ಕಾಲಾವಕಾಶ ನೀಡಿದ್ದರಿಂದ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಬೀಗ; ಸುದೀಪ್‌ಗೂ ಡಿಕೆಶಿಗೂ ತಂದಿಡೋದು ಬೇಡ: ಶಾಸಕ ಬಾಲಕೃಷ್ಣ

    ಇನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಯಾವುದೇ ಆದೇಶ ಪ್ರಕಟವಾಗಿಲ್ಲ.  ಅಧಿಕೃತ ಆದೇಶ ಪ್ರಕಟಗೊಂಡ ಬಳಿಕ  ಎಷ್ಟು ದಿನಗಳವರೆಗೆ  ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ ಎನ್ನುವುದು  ತಿಳಿಯಲಿದೆ.

    ಬಿಗ್‌ ಬಾಸ್‌ (Bigg Boss) ಮನೆಗೆ ಬೀಗ ಜಡಿದ ಬೆನ್ನಲ್ಲೇ ಜಾಲಿವುಡ್‌ ಸ್ಟುಡಿಯೋ(ವೇಲ್ಸ್‌ ಸ್ಟುಡಿಯೋ ಆಂಡ್‌ ಎಂಟರ್‌ಟೈನ್ಮೆಂಟ್‌ ಪ್ರೈ. ಲಿ.) ಇಂದು ಹೈಕೋರ್ಟ್‌ಗೆ (High Court) ತುರ್ತು ಅರ್ಜಿ ಸಲ್ಲಿಸಿತ್ತು. ಕೋರ್ಟ್‌ ಈ ಅರ್ಜಿಯನ್ನು ಪುರಸ್ಕರಿಸಿದ್ದು ನ್ಯಾ.ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಿಗದಿಯಾಗಿದೆ.

    ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲೇ ನಮ್ಮ ಅಹವಾಲು ಆಲಿಸದೇ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮಂದಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಕ್ಕೆ ತಡೆ ನೀಡಬೇಕು. ಅಷ್ಟೇ ಅಲ್ಲದೇ ಬೇರೆ ಯಾವುದೇ ಸಂಸ್ಥೆ ಹೊರಡಿಸುವ ಆದೇಶಕ್ಕೂ ತಡೆ ನೀಡಬೇಕೆಂದು ಕೋರಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

  • ಗಾಂಜಾ ಮತ್ತಿನಲ್ಲಿ ಬಾಲಕಿಯ ರೇಪ್ ಮಾಡಿ ಹತ್ಯೆ – ಕಾಮುಕ ಅರೆಸ್ಟ್

    ಗಾಂಜಾ ಮತ್ತಿನಲ್ಲಿ ಬಾಲಕಿಯ ರೇಪ್ ಮಾಡಿ ಹತ್ಯೆ – ಕಾಮುಕ ಅರೆಸ್ಟ್

    ರಾಮನಗರ: ಗಾಂಜಾ ಮತ್ತಿನಲ್ಲಿ 14 ವರ್ಷದ ಬಾಲಕಿಯ ಮೇಲೆ ಆತ್ಯಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿ ರಾಯಚೂರು (Raichur) ಮೂಲದವನು ಎಂದು ತಿಳಿದು ಬಂದಿದೆ. ಬೆಂಗಳೂರು ದಕ್ಷಿಣದ (Bengaluru South) ತಾವರೆಕೆರೆ  ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಈ ಪ್ರಕರಣ ನಡೆದಿತ್ತು. ಬಾಲಕಿಯ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಮನೆಗೆ ಬಂದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಸಿಲಿಂಡರ್​​ನಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ, ಸಿಲಿಂಡರ್‌ನ್ನು ಹೊತ್ತೊಯ್ದು ಪಕ್ಕದ ಗ್ರಾಮದಲ್ಲಿ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ – ಪತಿಯನ್ನು ಕೊಂದು ಅಪಘಾತದಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಕೊಪ್ಪಳದಿಂದ (Koppal) ಹೊಟ್ಟೆಪಾಡಿಗಾಗಿ ಕೆಲಸಕ್ಕಾಗಿ ಬಾಲಕಿಯ ಕುಟುಂಬ ತಾವರೆಕೆರೆಗೆ ಬಂದು ನೆಲೆಸಿತ್ತು. ಬಾಲಕಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದಳು. ಬಾಲಕಿಯ ತಂದೆ, ತಾಯಿ, ಸಹೋದರ ಕೆಲಸಕ್ಕೆ ಹೋಗಿದ್ದ ವೇಳೆ ಆರೋಪಿ ಕೃತ್ಯ ಎಸಗಿ ಪರಾರಿಯಾಗಿದ್ದ.

    ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಕಲಿ ಚಿನ್ನ ಕೊಟ್ಟು 35 ಲಕ್ಷ ವಂಚನೆ – ಇಬ್ಬರು ಅರೆಸ್ಟ್

  • ಜಿಲ್ಲೆಯ ಹೆಸರು ಬದಲಾವಣೆಯಿಂದ ಜನಜೀವನ ಬದಲಾವಣೆ: ಡಿಕೆಶಿ

    ಜಿಲ್ಲೆಯ ಹೆಸರು ಬದಲಾವಣೆಯಿಂದ ಜನಜೀವನ ಬದಲಾವಣೆ: ಡಿಕೆಶಿ

    ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಜಿಲ್ಲೆಯ ಹೆಸರು ಬದಲಾವಣೆ ಮಾಡುವುದರಿಂದ ಜನಜೀವನ ಬದಲಾವಣೆಯಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಹಾರೋಹಳ್ಳಿ ತಾಲೂಕಿನ ಮರಳವಾಡಿಯಲ್ಲಿ ಸ್ಥಾಪನೆಯಾಗಿರುವ ನೂತನ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಕಟ್ಟಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ನನಗೂ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಂಠು ಅವರಿಗೆ ಸಂಸ್ಥೆಯ ಜಾಗ ಎಲ್ಲಿ ಒತ್ತುವರಿಯಾಗುತ್ತದೆಯೋ ಎನ್ನುವ ಆಂತಕವಿತ್ತು. ಈಗ ಸದರಿ ಜಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗುತ್ತಿರುವುದು ಸಮಾಧಾನ ತಂದಿದೆ. ರೂರಲ್ ಎಜುಕೇಶನ್ ಸೊಸೈಟಿ ಅವರು ನನ್ನನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಈ ಹಿಂದೆ ಡಿ.ಲಿಂಗೇಗೌಡರು, ಚನ್ನಬಸವೇಗೌಡರ ಕಾಲದಿಂದಲೂ ಈ ಬಗ್ಗೆ ನಾನು ಹೇಳುತ್ತಾ ಬಂದಿದ್ದೇನೆ. ಚನ್ನಬಸವೇಗೌಡರ ಕಾಲದಲ್ಲಿಯೇ ನರ್ಸಿಂಗ್ ಕಾಲೇಜು ಮಂಜೂರು ಆಗಿದ್ದರೂ ಕೂಡ ನನ್ನನ್ನು ಭೇಟಿ ಮಾಡಿದರೆ ಅವಮಾನ ಎಂದುಕೊಂಡು ಬಂದಿರಲಿಲ್ಲ ಎಂದರು.ಇದನ್ನೂ ಓದಿ: ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

    ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South) ಎಂದು ಹೆಸರು ಬದಲಾವಣೆಯಿಂದಾಗಿ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕೆಲವೊಬ್ಬರು ಇದನ್ನು ಟೀಕೆ ಮಾಡುತ್ತಿದ್ದಾರೆ. ಅವರುಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾವು ನಮಗೆ ಇರುವ ಹೆಸರನ್ನು ಉಳಿಸಿಕೊಂಡಿದ್ದೇವೆ. ಯಾರ ಹೆಸರನ್ನು ಕಿತ್ತುಕೊಂಡಿಲ್ಲ. ನಾನು ಈ ಹಿಂದೆ ಬೆಂಗಳೂರು ಗ್ರಾಮಾಂತರದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಸುರೇಶ್ ಅವರು ಬೆಂಗಳೂರು ಹಾಲು ಒಕ್ಕೂಟದ ಸದಸ್ಯರಾಗಿದ್ದಾರೆ. ಸಂಸತ್ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಕರೆಯಲಾಗುತ್ತದೆ. ಎಲ್ಲಿಂದ, ಎಲ್ಲಿಗೆ ಹೋದರೂ ಅಮೆರಿಕ ಎನ್ನುತ್ತಾರೆ. ಅದೇ ರೀತಿ ಇದೂ ಕೂಡ ಬೆಂಗಳೂರು. ಈಗಾಗಲೇ ರಾಮನಗರ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ.ನಷ್ಟು ಅನುದಾನ ನೀಡಲಾಗಿದೆ. ಇದರ ಬಗ್ಗೆ ಅವರು ಪಟ್ಟಿ ಬಿಡುಗಡೆ ಮಾಡುತ್ತಾರೆ. ಚನ್ನಪಟ್ಟಣ ಉಪಚುನಾವಣೆ ವೇಳೆ 300 ಕೋಟಿ ರೂ.ಗೂ ಹೆಚ್ಚು ಹಣ ಕ್ಷೇತ್ರಕ್ಕೆ ನೀಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಲಾಗಿದೆ. ಹಾರೋಹಳ್ಳಿ, ಕೋಡಹಳ್ಳಿ, ಸಾತನೂರು, ಕನಕಪುರ ಮುಖ್ಯರಸ್ತೆಗಳನ್ನು ಈ ಹಿಂದೆ ಅಗಲ ಮಾಡಲಾಯಿತು. ಆದ ಕಾರಣಕ್ಕೆ ಆಸ್ತಿ ಮೌಲ್ಯ ಹೆಚ್ಚಾಗಿದೆ. ರಸ್ತೆ ಅಗಲೀಕರಣ ಮಾಡಿದಷ್ಟು ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಪಿ.ಜಿ.ಆರ್.ಸಿಂಧ್ಯಾ ಅವರು ಮತಗಳು ಹೋಗುತ್ತವೆ ಎಂದು ರಸ್ತೆ ಅಗಲೀಕರಣ ಮಾಡಿರಲಿಲ್ಲ. 500 ಮತಗಳನ್ನು ನೋಡಲು ಹೋದರೆ 5 ಸಾವಿರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

    ಇನ್ನೂ ದುಡ್ಡು ಪಡೆದು ಮನೆ ನೀಡಿದ್ದೀರಿ ಎನ್ನುವ ಶಾಸಕ ಬಿ.ಆರ್.ಪಾಟೀಲ್ (BR Patil) ಆರೋಪದ ಬಗ್ಗೆ ಮಾತನಾಡಿ, ಇದೆಲ್ಲವೂ ಸುಳ್ಳು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನೀಡಬೇಕೋ ಆಯಾಯ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತಾರೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ, ಬಿ.ಆರ್.ಪಾಟೀಲ್ ಅವರಿಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಾನು ಅವರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಕಲಂ 371J ದಶಮಾನೋತ್ಸವ, ಬುಡಕಟ್ಟು ಉತ್ಸವ – ನಾಳೆ ರಾಯಚೂರಿಗೆ ಸಿಎಂ, ಡಿಸಿಎಂ

  • ರಾಮನಗರಕ್ಕೆ ಬೆಂಗಳೂರು ಹೆಸರು ಸೇರಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ: ಶೋಭಾ ಕರಂದ್ಲಾಜೆ ಕಿಡಿ

    ರಾಮನಗರಕ್ಕೆ ಬೆಂಗಳೂರು ಹೆಸರು ಸೇರಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ: ಶೋಭಾ ಕರಂದ್ಲಾಜೆ ಕಿಡಿ

    ಮಂಗಳೂರು: ಬೆಂಗಳೂರು(Bengaluru) ಎನ್ನುವ ಪದದಲ್ಲೇ ಲ್ಯಾಂಡ್ ಮಾಫಿಯಾ ಇದೆ. ರಾಮನಗರದ ಹೆಸರು ಬದಲಿಗೆ ಬೆಂಗಳೂರು ಸೇರಿಸಿದ್ದೇ ಲ್ಯಾಂಡ್ ಮಾಫಿಯಾಕ್ಕಾಗಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಕಿಡಿಕಾರಿದ್ದಾರೆ.

    ಸುಳ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸುತ್ತ ಯಾರು ಲ್ಯಾಂಡ್ ಮಾಫಿಯಾ ಮಾಡುತ್ತಿದ್ದಾರೋ ಅವರಿಗೆ ರಾಮನಗರ(Ramanagara) ಹೆಸರು ಬೇಕಾಗಿಲ್ಲ. ಅವರಿಗೆ ಬೆಂಗಳೂರು ಹೆಸರು ಬೇಕು. ಯಾಕೆಂದರೆ ಅವರ ಜಮೀನಿಗೆ ವ್ಯಾಲ್ಯೂ ಬರಬೇಕು. ಈ ಕಾರಣಕ್ಕಾಗಿ ರಾಮನಗರ ಹೆಸರು ತೆಗೆದು ಲ್ಯಾಂಡ್ ಮಾಫಿಯಾ ಶಕ್ತಿಗಳು, ದೊಡ್ಡ ದೊಡ್ಡ ಕುಳಗಳು ಬೆಂಗಳೂರು ದಕ್ಷಿಣ(Bengaluru South) ಎಂದು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ಸೆರೆಹಿಡಿದು ವೈರಲ್‌ ಮಾಡ್ತಿದ್ದವ ಅರೆಸ್ಟ್‌

    ರೈತರ ಜಮೀನು ಕಿತ್ಕೊಂಡು, ಬೇರೆಯವರಿಗೆ ಕೊಡುವ ದೊಡ್ಡ ಷಡ್ಯಂತ್ರ ಇದರ ಹಿಂದೆ ಅಡಗಿದೆ ರಾಮನಗರ ಜಿಲ್ಲೆಯ ಹೆಸರು ಉಳಿಸಲು ಅಲ್ಲಿನ ಜನರು ಆಗ್ರಹ ಮಾಡಬೇಕು ಎಂದಿದ್ದಾರೆ.

  • ರಾಮನಗರ ಹೆಸರು ಬದಲಾವಣೆ| ಹಿಂದೂಗಳು ತಮ್ಮ‌ ತಾಯ್ನಾಡಿನಲ್ಲಿ ಉಳಿಬೇಕಾದ್ರೆ ಕಾಂಗ್ರೆಸ್ ಸಾಯಬೇಕು: ಮಾಳವಿಯ

    ರಾಮನಗರ ಹೆಸರು ಬದಲಾವಣೆ| ಹಿಂದೂಗಳು ತಮ್ಮ‌ ತಾಯ್ನಾಡಿನಲ್ಲಿ ಉಳಿಬೇಕಾದ್ರೆ ಕಾಂಗ್ರೆಸ್ ಸಾಯಬೇಕು: ಮಾಳವಿಯ

    ನವದೆಹಲಿ: ರಾಮನಗರ (Ramanagara) ಜಿಲ್ಲೆ ಹೆಸರು‌ ಬದಲಾವಣೆ ವಿಚಾರವಾಗಿ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ (Amit Malviya) ಹಿಂದುತ್ವವನ್ನು ಲಿಂಕ್‌ ಮಾಡಿ ಕಾಂಗ್ರೆಸ್‌ (Congress) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಭಗವಾನ್ ರಾಮನ ಹೆಸರನ್ನ ಕೈ ಬಿಟ್ಟು ಬೆಂಗಳೂರು ದಕ್ಷಿಣ (Bengaluru South) ಎಂದು ಹೆಸರು ಬದಲಾಯಿಸಿದ್ದಾರೆ. ಹಿಂದೂಗಳ (Hindu) ಅಸ್ತಿತ್ವಕ್ಕೆ ಅಪಾಯ ಇದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ


    ಹಿಂದೂಗಳು ಮತ್ತು ಅವರ ನಂಬಿಕೆಗಳ ಬಗ್ಗೆ ಕಾಂಗ್ರೆಸ್‌ನ ತೀವ್ರ ದ್ವೇಷವು ನಮ್ಮ ನಾಗರಿಕತೆಯ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಹಿಂದೂಗಳು ತಮ್ಮ ಏಕೈಕ ತಾಯ್ನಾಡಿನಲ್ಲಿ ಉಳಿಯಬೇಕಾದರೆ ಕಾಂಗ್ರೆಸ್ ಸಾಯಬೇಕು. ಈ ಆಯ್ಕೆ ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋದಲ್ಲಿ ಡ್ರೋನ್‌ ದಾಳಿ!

    ಗುರುವಾರ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಕ್ಕೆ ಬಿಜೆಪಿ, ಜೆಡಿಎಸ್‌ ವಿರೋಧ ವ್ಯಕ್ತಪಡಿಸಿವೆ. ರಿಯಲ್‌ ಎಸ್ಟೇಟ್‌ ಅಭಿವೃದ್ಧಿಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

  • ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ – ಹಠ ಸಾಧಿಸಿ ಗೆದ್ದ ಡಿಕೆಶಿ

    ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ – ಹಠ ಸಾಧಿಸಿ ಗೆದ್ದ ಡಿಕೆಶಿ

    – ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಡಿಕೆಶಿ ಒತ್ತಾಸೆಯಂತೆ ಹೆಸರು ಬದಲಾವಣೆ

    ಬೆಂಗಳೂರು: ರಾಮನಗರ (Ramanagara) ಜಿಲ್ಲೆ ಹೆಸರು ಇನ್ಮುಂದೆ ಬೆಂಗಳೂರು ದಕ್ಷಿಣ (Bengaluru South) ಎಂದು ಬದಲಾಗಿದೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಈ ಕುರಿತು ಮಾತನಾಡಿದ ಡಿಕೆಶಿ, ರಾಮನಗರ ಹೆಡ್ ಕ್ವಾಟ್ರಸ್ ಅದೇ ಇರುತ್ತದೆ. ಯಾವುದೆ ಬದಲಾವಣೆ ಇಲ್ಲ. ಮೂಲ ಅದು ಬೆಂಗಳೂರು ಜಿಲ್ಲೆಯಾಗಿತ್ತು. ಇಂದಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಗಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

    ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸುವ ಪ್ರಯತ್ನವನ್ನು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

  • ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡೇ ಮಾಡ್ತೀವಿ – ಡಿಕೆಶಿಗೆ ನಿಖಿಲ್ ಸವಾಲ್

    ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡೇ ಮಾಡ್ತೀವಿ – ಡಿಕೆಶಿಗೆ ನಿಖಿಲ್ ಸವಾಲ್

    ಬೆಂಗಳೂರು: ರಾಮನಗರ (Ramanagara) ಜಿಲ್ಲೆ ಹೆಸರನ್ನ ಮರು ಸ್ಥಾಪನೆ ಮಾಡೇ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಜೆಡಿಎಸ್ ಯುವ ಘಟದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮರು ಸವಾಲು ಎಸೆದಿದ್ದಾರೆ.

    ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂಬ ಡಿಕೆ ಶಿವಕುಮಾರ್‌ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಹಣೆಬರಹ ಬರೆಯೋದು ಭಗವಂತ ಮತ್ತು ಏಳೂವರೆ ಕೋಟಿ ಜನತೆ. ರಾಜ್ಯದ ಜನತೆ ಕುಮಾರಸ್ವಾಮಿ ಹಣೆಬರಹ ಬರೆಯುತ್ತಾರೆ. ಕಾದು ನೋಡೊಣ ಭಗವಂತ ಯಾರ್ ಯಾರ್ ಹಣೆಬರಹ ಏನು ಬರೆಯುತ್ತಾನೆ. ಈಗಾಗಲೇ ಏನೇನು ಬರೆದಿದ್ದಾನೆ ಅಂತ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಎಂದು ಹೇಳಿದರು.

    ನಾವು ಯಾವತ್ತು ಡಿಕೆ ಶಿವಕುಮಾರ್ ಅವರನ್ನ ನೆನಪು ಮಾಡಿಕೊಳ್ಳೊಲ್ಲ. ಆದರೆ ಡಿಕೆ ಶಿವಕುಮಾರ್ ಹಾಗೆ ಹೇಳ್ತಾರೆ. ನೆನಪು ಮಾಡಿಕೊಂಡರೂ ನಾವು ಅವರಿಗೆ ಒಳ್ಳೆಯದಾಗಲಿ ಅಂತ ಹೇಳುತ್ತೇವೆ. ರಾಜಕೀಯವಾಗಿ ಅವರು ತೆಗೆದುಕೊಳ್ತಿರೋ ನಡೆಗಳು ಸರಿಯಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದ ವಿನೋದ್ ರಾಜ್ 

    ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದರೆ ಅನೇಕ ತಾಂತ್ರಿಕ ಸಮಸ್ಯೆ ಆಗಲಿವೆ. ರೆವಿನ್ಯೂ ರೆಕಾರ್ಡ್, ಸರ್ಕಾರದ ದಾಖಲೆಗಳು 5 ತಾಲೂಕುಗಳಲ್ಲಿ ಬದಲಾವಣೆ ಆಗಬೇಕು.ಪ್ರತಿನಿತ್ಯ ಜನ ತಾಲೂಕು ಕಚೇರಿಗೆ ಓಡಾಬೇಕು. ಓಟರ್ ಐಡಿ, ಗ್ಯಾಸ್ ಬಿಲ್ ಅಡ್ರೆಸ್ ಇರಬಹುದು. ಇವೆಲ್ಲ ಸಮಸ್ಯೆಗಳಾಗುತ್ತವೆ. ಅಷ್ಟು ಸುಲಭವಾಗಿ ಹೆಸರು ಬದಲಾವಣೆ ಮಾಡೋದು ಸಾಧ್ಯವಿಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

    2006 ರಲ್ಲಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರ, ರಾಮನಗರ ಅಂತ ಜಿಲ್ಲೆ ಮಾಡಿದ್ರು. ಅವತ್ತು ಯಾರೂ ವಿರೋಧ ಮಾಡದೇ ಎಲ್ಲರೂ ಸಹಮತ ವ್ಯಕ್ತಪಡಿಸಿದರು.ಇವತ್ತು ಈ ರಾಮನ (Rama) ಹೆಸರು ಅಳಿಸುವ ಪ್ರಯತ್ನವನ್ನ ಕಾಂಗ್ರೆಸ್ ಸರ್ಕಾರ ಮಾಡ್ತಿದೆ. ಇವರನ್ನು ಅ ರಾಮನೇ ನೋಡಿಕೊಳ್ತಾನೆ. ಮುಂದಿನ ದಿನಗಳಲ್ಲಿ ರಾಮನಗರದ ಇತಿಹಾಸ, ರಾಮನ ಇತಿಹಾಸ ಯಾರಿಗೂ ಅಳಿಸುವ ಶಕ್ತಿ ಇಲ್ಲ ಎಂದು ತಿರುಗೇಟು ನೀಡಿದರು.

    ಕಾಂಗ್ರೆಸ್ ಸರ್ಕಾರ ಇವತ್ತು ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಲಿ. ಸರ್ಕಾರ ಅವರ ಕೈಯಲ್ಲಿ ಇದ್ದು ಆಡಳಿತ ನಡೆಸುತ್ತಿದ್ದಾರೆ. ಮುಂದಿ‌ನ ದಿನಗಳಲ್ಲಿ ಭಗವಂತ, ರಾಜ್ಯದ ಜನತೆ ಕುಮಾರಸ್ವಾಮಿಗೆ ಶಕ್ತಿ ಕೊಡ್ತಾರೆ. ಆಗ ಮತ್ತೊಮ್ಮೆ ರಾಮನಗರ ಜಿಲ್ಲೆ ಹೆಸರು ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್‌ಗೆ ಸವಾಲ್ ಹಾಕಿದರು.

     

  • ರಾಮನಗರ ಜಿಲ್ಲೆ ‌ಹೆಸರು ಬದಲಾವಣೆ- ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಮಹತ್ವದ ನಿರ್ಧಾರ

    ರಾಮನಗರ ಜಿಲ್ಲೆ ‌ಹೆಸರು ಬದಲಾವಣೆ- ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಮಹತ್ವದ ನಿರ್ಧಾರ

    ಬೆಂಗಳೂರು: ರಾಮನಗರ (Ramanagara) ಜಿಲ್ಲೆ ಹೆಸರು ಬದಲಾವಣೆ ಮಾಡೋ ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ಹಠ ಕೊನೆಗೂ ಗೆದ್ದಿದೆ. ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯಾಗಿ ಮರು ನಾಮಕರಣ ಮಾಡುವ ನಿರ್ಧಾರಕ್ಕೆ ಇಂದು ನಡೆದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹೀಗಾಗಿ ಇನ್ನು ಮುಂದೆ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಜಿಲ್ಲೆ ಅಂತಾ ಮರು ಹೆಸರು ಪಡೆಯಲಿದೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ (H.K.Patil) ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ – ಮುಡಾ ಸೈಟ್ ಹಂಚಿಕೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

    ಜನರ ಬೇಡಿಕೆ ಮೇಲೆ ಈ ನಿರ್ಣಯ ಮಾಡಲಾಗಿದ್ದು, ಬ್ರ್ಯಾಂಡ್ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ‌ ಮಾಡಲಾಗಿದೆ ಅಂತ ತಿಳಿಸಿದರು. ರಾಮನಗರ ಜಿಲ್ಲೆಯ ಹೆಸರು ಮಾತ್ರ ಬದಲಾವಣೆ ಆಗಲಿದೆ. ಅದನ್ನ ಹೊರತುಪಡಿಸಿ ಉಳಿದ ಎಲ್ಲವೂ ಈಗ ಇರುವಂತೆ ಇರಲಿದೆ. ಇದು ಚುನಾವಣೆ ದೃಷ್ಟಿಯಿಂದ ಮಾಡಿರೋದಲ್ಲ. ಜನರ ಬೇಡಿಕೆ ಹಿನ್ನಲೆಯಲ್ಲಿ ಮಾಡಿದ್ದು ಅಂತ ಸಚಿವರು ಹೆಚ್.ಕೆ. ಪಾಟೀಲ್ ಸಮರ್ಥನೆ ಮಾಡಿಕೊಂಡರು.

  • ರಾಮನಗರ ಅನ್ನೋದಕ್ಕಿಂತ ಬೇರೊಂದು ಒಳ್ಳೆಯ ಪದ ಸಿಗಲ್ಲ: ಡಾ.ಮಂಜುನಾಥ್

    ರಾಮನಗರ ಅನ್ನೋದಕ್ಕಿಂತ ಬೇರೊಂದು ಒಳ್ಳೆಯ ಪದ ಸಿಗಲ್ಲ: ಡಾ.ಮಂಜುನಾಥ್

    – ಕೋಲಾರವನ್ನು ಬೆಂಗಳೂರು ಪೂರ್ವ ಮಾಡ್ತೀರಾ?
    – ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡ್ತೀರಾ?

    ರಾಮನಗರ: ಬೆಂಗಳೂರು ದಕ್ಷಿಣ (Bengaluru South) ಅಂತ ಹೆಸರು ಬದಲಾವಣೆಗೆ ಖಂಡತುಂಡವಾಗಿ ವಿರೋಧ ಮಾಡುತ್ತೇವೆ. ಯಾವುದೇ ಡಿಕ್ಷನರಿ ನೋಡಿದರೂ ರಾಮನಗರಕ್ಕಿಂತ (Ramanagara) ಒಳ್ಳೆಯ ಪದ ಬೇರೊಂದು ಸಿಗುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರದ ಬಿಜೆಪಿ ಸಂಸದ ಡಾ ಮಂಜುನಾಥ್‌ (Dr. CN Manjunath) ಹೇಳಿದ್ದಾರೆ.

    ರಾಮನಗರ ಜಿಲ್ಲೆಗೆ ಮರುನಾಮಕರಣ ವಿಚಾರ ಕುರಿತು ಮಾಗಡಿಯಲ್ಲಿ (Magadi) ಮಾತನಾಡಿದ ಅವರು, ಆ ಹೆಸರಿಗೆ ಭಾವನಾತ್ಮಕ, ಧಾರ್ಮಿಕ, ಪೌರಾಣಿಕ ಸಂಬಂಧ ಇದೆ. ಕೇವಲ ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗುವುದಿಲ್ಲ ಎಂದರು.  ಇದನ್ನೂ ಓದಿ: ಗ್ರಾಮೀಣ ಭಾಗಗಳಲ್ಲಿ ಟೆಲಿಕಾಂ ಸಂಪರ್ಕ ಸುಧಾರಣೆಗೆ ‘ಡಿಜಿಟಲ್‌ ಭಾರತ್‌ ನಿಧಿ’ – ಏನಿದು ಯೋಜನೆ?

     

    ಬೆಂಗಳೂರು ನಗರದ ಒಳಗೆ ಬೆಂಗಳೂರು ದಕ್ಷಿಣ ತಾಲೂಕು ಇದೆ. ಇನ್ನೊಂದು ಬೆಂಗಳೂರು ದಕ್ಷಿಣ ಜಿಲ್ಲೆ ಅಂದರೆ ಜನರಿಗೆ ಗೊಂದಲ ಆಗುತ್ತದೆ. ಈ ರೀತಿ ಮಾಡುವುದಾದರೆ ʼಬ್ರಾಂಡ್ ರಾಮನಗರʼ ಎಂದು ಅಭಿವೃದ್ಧಿ ಮಾಡಿ. ಮುಂದೆ ಕೋಲಾರವನ್ನು ಬೆಂಗಳೂರು ಪೂರ್ವ ಜಿಲ್ಲೆ ಮಾಡ್ತೀರಾ? ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ಮಾಡ್ತೀರಾ ಎಂದು ಪ್ರಶ್ನೆ ಕೇಳಿದರು. ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – ತೆರಿಗೆ ಪಾವತಿಸೋ ಮಂದಿಗೆ ಉಚಿತ ವಿದ್ಯುತ್‌ ಕಟ್

    ಬೆಂಗಳೂರು ಬೃಹತ್‌ ಆಗಿ ಬೆಳೆದಿದ್ದು ಅಲ್ಲೇ ಸಾಕಷ್ಟು ಮೂಲಭೂತ ಸಮಸ್ಯೆಗಳಿದೆ. ಭೂಮಿಗೆ ಬೆಲೆ ಜಾಸ್ತಿ ಆದರೆ ಪ್ರಯೋಜನ ಇಲ್ಲ. ಭೂಮಿಯಲ್ಲಿ ಬೆಳೆಯುವ ಬೆಳೆಗೆ ಬೆಲೆ ಜಾಸ್ತಿ ಆಗಬೇಕು. ಯಾವ ಉದ್ದೇಶಕ್ಕೆ ಈ ರೀತಿ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು.

     

    ರಾಮನಗರ ಹೆಸರನ್ನು ಬದಲಾವಣೆ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಇದು ರೇಷ್ಮೆನಾಡಾಗಿಯೇ ಉಳಿಯಬೇಕು. ರೈತರ ಜಿಲ್ಲೆಯಾಗಿಯೇ ಉಳಿಯಬೇಕು. ಇದು ವೈಜ್ಞಾನಿಕವಾಗಿಯೂ ಸಮಂಜಸ ಅಲ್ಲ ಎಂದು ಎಂದು ಹೇಳಿದರು.

  • ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ಬೆಂಗಳೂರು: ಲೋಕಸಭಾ ಚುನಾವಣೆಯ ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.

    ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ವಿರುದ್ಧ 2,77,083 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೂರ್ಯ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ಅವರಿಗೆ 7,50,830 ಮತಗಳು ಬಿದ್ದಿದೆ. ವಿಧಾನಸಭೆ ಸೋಲಿನ ಬಳಿಕ ಲೋಕಸಭೆಯಲ್ಲಿ ಗೆಲುವಿನ ನಿರೀಕ್ಷೆಯಲಿದ್ದ ಸೌಮ್ಯಾ ರೆಡ್ಡಿಯವರು 4,73,747 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಸೋಲಿನ ರುಚಿ ಕಂಡಿದ್ದಾರೆ. ಇನ್ನು 7830 ಮತಗಳು ನೋಟಾ ಚಲಾವಣೆಯಾಗಿದೆ.

    ಕಳೆದ ಮೂರು ದಶಕಗಳಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿದೆ. ಮುಖ್ಯವಾಗಿ ಇದು ದಿ. ಅನಂತ್ ಕುಮಾರ್ ಅವರ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರಿಗೆ 7,39,229 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ ಹರಿಪ್ರಸಾದ್ ಅವರು 4,08,037 ಮತಗಳನ್ನು ಪಡೆದು 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಸೋಲು ಅನುಭವಿಸಿದ್ದರು.