Tag: bengaluru Shoe

  • ಅಪಾರ್ಟ್‌ಮೆಂಟ್‌ಗೆ ನುಗ್ಗಿ ಸ್ಪೋರ್ಟ್ಸ್ ಶೂ, ಚಪ್ಪಲಿ ಕಳ್ಳತನ!

    ಅಪಾರ್ಟ್‌ಮೆಂಟ್‌ಗೆ ನುಗ್ಗಿ ಸ್ಪೋರ್ಟ್ಸ್ ಶೂ, ಚಪ್ಪಲಿ ಕಳ್ಳತನ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯವಸ್ಥಿತವಾಗಿ ಶೂ ಕಳ್ಳತನ ಮಾಡುವ ಗ್ಯಾಂಗೊಂದು ಹುಟ್ಟಿಕೊಂಡಿದೆ.

    ಕಳೆದ ಶುಕ್ರವಾರ ಪೂರ್ವನಿಯೋಜನೆ ಎಂಬಂತೆ ವಿಠ್ಠಲ್ ನಗರದ ಪದ್ಮನಿಲಯ ರೆಸಿಡೆನ್ಸಿಗೆ ಐದು ಮಂದಿಯ ಗ್ಯಾಂಗ್ ನುಗ್ಗಿದೆ. ಅಪಾರ್ಟ್ ಮೆಂಟ್ ನಲ್ಲಿರುವ ಎಲ್ಲಾ ಪ್ಲ್ಯಾಟ್ ಗಳಿಗೆ ಹೋಗಿ ಮನೆ ಮುಂದೆ ಬಿಟ್ಟ ಸುಮಾರು 55 ಜೊತೆ ಸ್ಪೋರ್ಟ್ಸ್ ಶೂ ಹಾಗೂ ಚಪ್ಪಲಿಗಳನ್ನು ಬ್ಯಾಗಿನಲ್ಲಿ ಕದ್ದು ಪರಾರಿಯಾಗಿದೆ.

    ಮರುದಿನ ಬೆಳಗ್ಗೆ ಚಪ್ಪಲಿ ಇಲ್ಲದಿರುವುದನ್ನು ಗಮನಿಸಿದ ಅಪಾರ್ಟ್ ಮೆಂಟ್ ನಿವಾಸಿಗಳು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳು ನಸುಕಿವ ಜಾವ 3 ಗಂಟೆಗೆ ಸುಮಾರು 20 ಪ್ಲ್ಯಾಟ್ ಗಳಿಗೆ ಹೋಗಿ 55 ಜೊತೆ ಶೂಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ.

    ಈ ಸಂಬಂಧ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.