ಆನೇಕಲ್: ಕಳೆದ ಹಲವು ದಿನಗಳಿಂದ ಗಂಧದ ಮರ (Sandalwood) ಕಳ್ಳತನ (Theft) ಮಾಡುತ್ತಿದ್ದ ಖದೀಮನ ಮೇಲೆ ಫಾರೆಸ್ಟ್ ಬೀಟ್ ಸಿಬ್ಬಂದಿ ಗುಂಡು ಹಾರಿಸಿದ್ದು, ಕಳ್ಳ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬನ್ನೇರುಘಟ್ಟ (Bannerghatta) ಅರಣ್ಯ ಪ್ರದೇಶದ ಕಲ್ಕೆರೆಯಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಗಂಧದ ಮರಗಳ ಕಳ್ಳತನವಾಗುತ್ತಿತ್ತು. ಈ ಹಿನ್ನೆಲೆ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ರಾತ್ರಿ 2 ಗಂಟೆಯ ಸುಮಾರಿಗೆ ಕಳ್ಳ ಗಂಧದ ಮರ ಕಳ್ಳತನಕ್ಕೆ ಬಂದಿದ್ದ. ಈ ವೇಳೆ ಬೀಟ್ ಫಾರೆಸ್ಟ್ ಗಾರ್ಡ್ ವಿನಯ್ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: KRS ಡ್ಯಾಂನಿಂದ ಮತ್ತೆ ತಮಿಳುನಾಡಿಗೆ ನೀರು
ಗಸ್ತಿನ ವೇಳೆ ಕಳ್ಳನ ಮೇಲೆ ಫಾರೆಸ್ಟ್ ಗಾರ್ಡ್ ಫೈರಿಂಗ್ ಮಾಡಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ಮಗನ ರಕ್ಷಿಸಲು ಹೋದ ತಾಯಿಯೂ ಮಗನ ಜೊತೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.
ಕೋಳೂರು ಗ್ರಾಮದ ರೂಪಾ (35) ಹಾಗೂ ಮಗ (Son) ಹೇಮಂತ್ (9) ಮೃತ ದುರ್ದೈವಿಗಳು. ತಾಯಿ (Mother), ಅಜ್ಜಿ ಜೊತೆ ಕುರಿ ಮೇಯಿಸಲು ಹೋಗಿದ್ದ. ಈ ವೇಳೆ ಬಾಲಕ ಹೇಮಂತ್ ಕೃಷಿ ಹೊಂಡದಲ್ಲಿ ಕೈ, ಕಾಲು ತೊಳೆಯಲು ಹೋದಾಗ ಆಕಸ್ಮಿಕ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ಮಗ ಮುಳುಗಿದ್ದನ್ನ ಕಂಡ ತಾಯಿ ಆತನ ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ತಾಯಿಯೂ ಮಗನ ಜೊತೆ ನೀರಿನಲ್ಲಿ ಮುಳುಗಿದ್ದಾಳೆ. ಅಲ್ಲೇ ಇದ್ದ ಅಜ್ಜಿ ಸಹ ರಕ್ಷಣೆಗೆ ಮುಂದಾಗಿದ್ದು, ಆಕೆಯೂ ಇನ್ನೇನು ಮುಳುಗಿ ಹೋಗಬೇಕು ಅನ್ನವಷ್ಟರಲ್ಲಿ ಅಲ್ಲಿದ್ದ ಬಾಲಕಿಯೋರ್ವಳು ಆಕೆಗೆ ಡ್ರಿಪ್ ಪೈಪ್ ನೀಡಿ ಸಹಾಯ ಮಾಡಿದ್ದಾಳೆ. ಇದನ್ನೂ ಓದಿ: ನನ್ನ ವಿರುದ್ಧ ಡಿಕೆ ಸಹೋದರರಿಬ್ಬರು ಸ್ಪರ್ಧಿಸಲಿ: ಮುನಿರತ್ನ
ಘಟನೆಯಲ್ಲಿ ತಾಯಿ, ಮಗ ದಾರುಣ ಸಾವನ್ನಪ್ಪಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಮೃತರ ಕಣ್ಣುಗಳನ್ನು ದಾನ ಮಾಡಿ ಸಾವನಲ್ಲೂ ಸಹ ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ: ಕೆಸಿ ವೇಣುಗೋಪಾಲ್
LIVE TV
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಯೊಬ್ಬರು ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಿ ವೇಳೆ ಕಿರಿಕ್ ನಡೆದು ಇಬ್ಬರ ಹತ್ಯೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದ್ದು, ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರ ಹತ್ಯೆಯನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.
ಮೃತರನ್ನು ಭರತ್ ಹಾಗೂ ಪ್ರತಿಕ್ ಎಂದು ಗುರುತಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿತ ಧೀರಜ್ ಮುನಿರಾಜು ಯುವಕರಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದರು. ಬೆಳಗ್ಗೆಯಿಂದ ಕ್ರಿಕೆಟ್ ಪಂದ್ಯಾವಳಿಗಳು ಸುಸೂತ್ರವಾಗಿ ನಡೆಯುತ್ತಿದ್ದು, ಮಟ ಮಟ ಮಧ್ಯಾಹ್ನದ ವೇಳೆ ಕ್ರಿಕೆಟ್ ಗ್ರೌಂಡ್‌ಗೆ ಸ್ವಿಫ್ಟ್ ಕಾರಲ್ಲಿ ಬಂದಿದ್ದ ಹುಲಿಕುಂಟೆ ಗ್ರಾಮದ ಕೆಲ ಯುವಕರು ಕಿರಿಕ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ (Cricket) ಆಡುವಾಗ ಗ್ರೌಂಡ್ ಒಳಗೆ ಯಾಕೆ ಕಾರು ತಂದ್ರಿ ಎಂದು ಆಯೋಜಕರು, ಕ್ರಿಕೆಟ್ ಆಡುತ್ತಿದ್ದ ಯುವಕರು ಪ್ರಶ್ನಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಬಂದ ಯುವಕರಿಗೂ ಹಾಗೂ ಆಯೋಜಕರಿಗೂ ಗಲಾಟೆ ನಡೆದು ಕಾರಿನ ಗಾಜು ಜಖಂ ಮಾಡಿದ್ದಾರೆ. ಕ್ರಿಕೆಟ್ ಗ್ರೌಂಡ್‌ನಲ್ಲಿ ಕಾರು ಬಂದ ಕಾರಣಕ್ಕೆ ಆರಂಭವಾದ ಕಿರಿಕ್ ನಂತರ ಪೊಲೀಸ್ ಠಾಣೆಗೆ ಹೋಗಿದೆ. ಅದಾದ ಬಳಿಕ ಯುವಕರು ದೊಡ್ಡಬೆಳವಂಗಲ ಬಸ್ ನಿಲ್ದಾಣದತ್ತ ಬಂದಿದ್ದಾರೆ. ಈ ವೇಳೆ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಯುವಕರನ್ನು ಅವರು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದ್ದಾರೆ.
ಸ್ವಿಫ್ಟ್ ಕಾರಲ್ಲಿ ಬಂದವರು ಪೆಪ್ಪರ್ ಸ್ಪ್ರೈ ಮಾಡಿ ಸಿಕ್ಕ ಸಿಕ್ಕವವರಿಗೆ ಚಾಕು ಮೂಲಕ ಇರಿದಿದ್ದು, ಘಟನೆಯಲ್ಲಿ ಭರತ್ ಮರ್ಮಾಂಗಕ್ಕೆ ಇರಿದಿದ್ರೇ ಹಾಗೂ ಪ್ರತೀಕ್‌ಗೆ ಎದೆಭಾಗಕ್ಕೆ ಇರಿದಿದ್ದಾರೆ. ಈ ವೇಳೆ ಭರತ್ ಹಾಗೂ ಪ್ರತಿಕ್ ಗಂಭೀರ ಗಾಯಗೊಂಡಿದ್ದು, ಅವರನ್ನು ದೊಡ್ಡಬಳ್ಳಾಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದನ್ನೂ ಓದಿ:ಕರ್ನಾಟಕ ತಲಾ ಆದಾಯ: 2.65 ಲಕ್ಷದಿಂದ 3.01 ಲಕ್ಷಕ್ಕೆ ಏರಿಕೆ
ಸದ್ಯ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ದೊಡ್ಡಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಗುವಿನ ವಾತವಾರಣ ಮನೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರ ಮೃತದೇಹಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕೊಲೆ ಮಾಡಿದ ಯುವಕರು ತಾವು ಬಂದಿದ್ದ ಅದೇ ಸ್ವಿಫ್ಟ್ ಕಾರಿನಲ್ಲಿ ಎಸ್ಕೇಪ್ ಆಗಿದ್ದು, ಆರೋಪಿಗಳು ಯಾರು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮದು ರೈತ ಪರ ಸರ್ಕಾರ: ಬೊಮ್ಮಾಯಿ
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಆರಂಭವಾದ ಮೋದಿ (Narendra Modi) ಬ್ರ್ಯಾಂಡ್ ಅಸ್ತ್ರ ಪ್ರಯೋಗ ಯಶಸ್ವಿಯಾಗಿ ಮುಂದುವರಿದಿದೆ. ಪ್ರತಿ ಬಾರಿಯೂ ಒಂದೊಂದು ವಿಭಾಗವಾರು ಜಿಲ್ಲೆಗಳನ್ನೇ ಫೋಕಸ್ ಮಾಡಿಕೊಂಡು ಬರುತ್ತಿರುವ ಪ್ರಧಾನಿ ಮೋದಿಯವರ ಈ ಬಾರಿಯ ಚಿತ್ತ ನೆಟ್ಟಿದ್ದು ಬಯಲು ಸೀಮೆ ಜಿಲ್ಲೆಗಳ ಮೇಲೆ.
ಸೋಮವಾರ ಬೆಂಗಳೂರು ಗ್ರಾಮಾಂತರ (Bengaluru Rural) ಹಾಗೂ ತುಮಕೂರು (Tumakuru) ಜಿಲ್ಲೆಗಳಲ್ಲಿ ಮೋದಿ ಅಬ್ಬರ ಜೋರಾಗಿಯೇ ಇತ್ತು. ಬಯಲು ಸೀಮೆಯ 2 ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ 4 ಜಿಲ್ಲೆಗಳ ಮೇಲೆ ಫೋಕಸ್ ಮಾಡಿದ್ದರು ಪ್ರಧಾನಿ ಮೋದಿ. ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಆದ ಮೋದಿ ಮೋಡಿ, ಪಕ್ಕದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮೇಲೂ ಪ್ರಭಾವ ಬೀರಿದೆ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಪಾರ್ಥೇನಿಯಂ ಇದ್ದಂತೆ – ಹೆಚ್‌ಡಿಕೆ ಟೀಕೆ
ಬಯಲು ಸೀಮೆ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿಯವರು ತಮ್ಮ ಭಾಷಣದ ಮೂಲಕ ಮೋಡಿ ಮಾಡಿದ್ರು. ಕೇಂದ್ರ ಬಜೆಟ್ ಬಗ್ಗೆ ಸುದೀರ್ಘವಾಗಿ ಮಾತಾಡಿದ ಪ್ರಧಾನಿ, ಕರ್ನಾಟಕದ ಕಸುಬುದಾರ ವರ್ಗದವರು, ರೈತ ಸಮಯದಾಯ, ಶ್ರಮಿಕರು, ಮಹಿಳೆಯರಿಗೆ ಹೇಗೆ ಅನುಕೂಲಕರವಾಗಿದೆ ಎಂದು ವಿವರಿಸಿದರು. ತಮ್ಮ ಭಾಷಣದುದ್ದಕ್ಕೂ ಅಭಿವೃದ್ಧಿ ಮಂತ್ರದ ಜಪ ಪಠಿಸಿದರು.
ಇದೀಗ ಪ್ರಧಾನಿ ಮೋದಿಯವರ ಈ ಭರವಸೆದಾಯಕ ಭಾಷಣದೊಳಗೆ ಲಾಭದ ಬೆಳೆ ತೆಗೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಟಾರ್ಗೆಟ್ ಅನ್ನು ಬಿಜೆಪಿ ನಾಯಕರು ಹಾಕಿಕೊಂಡಿದ್ದಾರೆ. ನಾಲ್ಕು ಜಿಲ್ಲೆಗಳಲ್ಲೂ ಒಟ್ಟು 26 ವಿಧಾನಸಭೆ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆ, ಸ್ಥಳೀಯ ನಾಯಕತ್ವಕ್ಕೆ ಒತ್ತು ಕೊಡಲಾಗ್ತಿದೆ. ಈಗ ಮೋದಿಯವರಿಂದಾಗಿ ಪಕ್ಷದ ಕಾರ್ಯಕರ್ತರಲ್ಲೂ ಹುಮ್ಮಸ್ಸು ಹೆಚ್ಚಾಗಿದೆ. ಹೀಗಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿಕೊಂಡು 26 ಕ್ಷೇತ್ರಗಳ ಪೈಕಿ 12+ ಸೀಟ್ ಗೆಲ್ಲಲು ಬಿಜೆಪಿ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಯಾವ ಜಾತಿಯ ಬಗ್ಗೆಯೂ ಹೀನಾಯವಾಗಿ ಮಾತಾಡಬಾರದು: ಡಿ.ಸಿ ತಮ್ಮಣ್ಣ
ಸದ್ಯ ತುಮಕೂರಿನಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 01 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಈಗ ಮೋದಿಯವರ ನೆರವಿನ ಮೂಲಕ ಕೈ-ತೆನೆ ಕೋಟೆಗಳನ್ನು ವಶಪಡಿಸಿಕೊಳ್ಳಲು ಬಿಜೆಪಿ ತಂತ್ರ ಹೆಣೆದಿದೆ. ಮೋದಿಯವರ ಅಭಿವೃದ್ಧಿ+ಜಾತಿ+ಸಣ್ಣ ಕಸುಬುದಾರ ವರ್ಗ ಕೇಂದ್ರಿತ ಭಾಷಣದ ಮೇಲೆ ವಿಶ್ವಾಸ ಇರಿಸಿ, ಆ ಭರವಸೆಯಲ್ಲೇ ಹೆಚ್ಚಿನ ಸೀಟ್ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಯಲು ಸೀಮೆಯ ಕೈ-ತೆನೆ ಕೋಟೆಗಳಲ್ಲಿ ಕಮಲ ಅರಳಿಸುವ ಮೋದಿ ಸ್ಟ್ರಾಟಜಿ ಕೈಹಿಡಿಯುತ್ತಾ ಅಂತ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಾಥಮಿಕ ಶಾಲೆಯ (Government School) ಅವರಣದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.
ಯುವಕ ಮರಕ್ಕೆ (Tree) ಪಂಚೆಕಟ್ಟಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಪಂಚೆ ಹರಿದು ಯುವಕ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ತಲೆಯಿಂದ ತೀವ್ರ ರಕ್ತ ಸ್ರಾವವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್ ಪಂತ್ ಮೊದಲ ರಿಯಾಕ್ಷನ್
ಮೃತನ ಸಂಬಂಧಿಕರು ಸ್ಥಳ ಆಗಮಿಸಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ (Suicide) ಮಾಡಿಕೊಳ್ಳುವ ಸಮಸ್ಯೆ ಏನೂ ಇರಲಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ (Fair) ಕೊಂಡ ಹಾಯುವಾಗ ಮಹಿಳೆ (Woman) ಬಿದ್ದು, ಗಂಭೀರ ಗಾಯವಾದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.
ದೇವಸ್ಥಾನದ ಅರ್ಚಕಿ ಅನುಜೋಗತಿಯಮ್ಮ ಕೊಂಡದಲ್ಲಿ ಬಿದ್ದ ಮಹಿಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಶಾಂತಿನಗರದ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೊತ್ಸವದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಕಳೆದ ರಾತ್ರಿ ದೇವಿಗೆ ಪೂಜೆ ಸಲ್ಲಿಸಿ ಆರತಿ ಮೂಲಕ ಕೊಂಡಹಾಯುವ ಪದ್ಧತಿ ಆಚರಣೆಯಿದೆ. ಈ ಹಿನ್ನೆಲೆಯಲ್ಲಿ ಕೊಂಡಹಾಯುವಾಗ ಅನುಜೋತಿಯಮ್ಮ ಕೊಂಡದಲ್ಲಿ ಬಿದ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೆಕ್ಕುಗಳ ಕಾಟ- ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ
ಚಿಕ್ಕಬಳ್ಳಾಪುರ: ಬಿಬಿಎಂಪಿ (BBMP) ಕಸದ ಲಾರಿ ಹಾಗೂ ಬೈಕ್ (Bike) ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಡೆದಿದೆ.
ಮೃತರು ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಮಹೇಶ್ (27), ಮಾರುತಿ (24) ಎಂದು ಗುರುತಿಸಲಾಗಿದೆ. ತಾಲೂಕಿನ ಮಧುರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ದೊಡ್ಡಬಳ್ಳಾಪುರದ ಬಳಿಯ ಎಂಎಸ್ ಜಿಪಿ ಘಟಕಕ್ಕೆ ಕಸ ಸುರಿಯಲು ಬೆಂಗಳೂರಿಂದ ಬಂದ ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ರಸ್ತೆಯಲ್ಲಿ ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಂತರ ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಹಿಂದೂ ಸಂಕೇತ ಬಳಸಿ, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ – ಪೇಜಾವರ ಶ್ರೀ ಬೇಸರ
ಈ ವೇಳೆ ಲಾರಿಯ ಚಾಲಕ ಪಾನಮತ್ತನಾಗಿದ್ದು, ತಡೆಯಲು ಹೋದ ಕಾರಿಗೂ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಮೃತ ಯುವಕರ ಶವವನ್ನು ತೆರವು ಮಾಡಲು ಬಿಡದೆ, ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ಮತ್ತಿತರರು ಭೇಟಿ ನೀಡಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಸಹ ಓರ್ವ ಬೈಕ್ ಸವಾರ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದ. ಈಗ ಇಬ್ಬರು ಸಾವನ್ನಪ್ಪಿದ್ದು ಬಿಬಿಎಂಪಿ ಕಸದ ಲಾರಿಗಳ ವಿರುದ್ಧ ಸ್ಥಳೀಯರು ತಿರುಗಿಬಿದ್ದು ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಪ್ರೀತಿ-ಪ್ರೇಮ (Love) ಅಂತಾ ಸುತ್ತಾಡಿ ಕೊನೆಗೆ ಮನೆಯವರು ನೋಡಿದ ಹುಡುಗನನ್ನೇ ವರಿಸಿದ ಪ್ರಿಯತಮೆಯನ್ನು ಭಗ್ನಪ್ರೇಮಿಯೊಬ್ಬ ಚಾಕುನಿಂದ ಇರಿದು ಕೊಂದಿರುವ (Murder) ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಏನಿದು ಪ್ರಕರಣ?
ಮೃತ ಸೌಮ್ಯ ಹಾಗೂ ಸುಬ್ರಹ್ಮಣ್ಯ ಇಲ್ಲಿನ ನಾಗವಾರ ಬಳಿಯ ಕಾಫಿ ಡೇ (Coffee Day) ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು (Lovers). ಆದರೆ ಸೌಮ್ಯಾಳಿಗೆ ಕಳೆದ 15 ದಿನಗಳ ಹಿಂದೆಯಷ್ಟೇ ಬೇರೆ ಯುವಕನೊಂದಿಗೆ ಮದುವೆ ನಡೆದಿತ್ತು. ಮದುವೆ ಬಳಿಕ ತವರು ಮನೆಗೆ ಸೌಮ್ಯ ಬಂದಿರುವ ವಿಷಯ ತಿಳಿದುಕೊಂಡ ಸುಬ್ರಹ್ಮಣ್ಯ ಮನೆಯಲ್ಲೇ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ. ನಿನ್ನೆ ತಡರಾತ್ರಿ ಯುವತಿ ಗ್ರಾಮಕ್ಕೆ ಆಗಮಿಸಿ ಮನೆಯವರು ಗಣೇಶನ ಪೂಜೆಗೆ (Ganesha Puja) ತೆರಳಿದ್ದ ವೇಳೆ ಏಕಾಂಗಿಯಾಗಿದ್ದ ಸೌಮ್ಯಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಎಕ್ಸ್‌ಬಾಯ್‌ಫ್ರೆಂಡ್‌ಗೆ ಮತ್ತೆ ಲವ್ ಯೂ ಎಂದ ಜಾನ್ವಿ ಕಪೂರ್
ಪೂಜೆ ಮುಗಿಸಿ ಬಂದಕೂಡಲೇ ಮನೆಯಲ್ಲಿ ರಕ್ತಸಿಕ್ತಳಾಗಿ ಬಿದ್ದಿದ್ದ ಸೌಮ್ಯಾಳನ್ನು ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಸೌಮ್ಯ ಮೃತಪಟ್ಟಿದ್ದಾಳೆ. ಇತ್ತ ಸುಬ್ರಹ್ಮಣ್ಯ ಸಹ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಸುಬ್ರಹ್ಮಣ್ಯ ಆಸ್ಪತ್ರೆಗೆ ದಾಖಲಾದ ಮಾಹಿತಿ ಇನ್ನೂ ಗಮನಕ್ಕೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರ ಪೊಲೀಸ್ ಠಾಣೆಯಲ್ಲಿ (Police Case) ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕುಡಿದ ಮತ್ತಿನಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.
ಅಜಯ್ ಮೃತನಾಗಿದ್ದಾನೆ. ಈತ ನಾಯಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಸಾವನ್ನಪಿದ್ದಾನೆ. ಮುತ್ಯಾಲಮಡು ಪ್ರವಾಸಿ ತಾಣದ ಬಳಿ ಅಪಘಾತ ನಡೆದಿದೆ. ಇದನ್ನೂ ಓದಿ: ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ
ಅಜಯ್ ನಿನ್ನೆ ಸಂಜೆ ಸ್ನೇಹಿತರ ಜೊತೆ ಪಾರ್ಟಿ ಮಾಡಲೆಂದು ಹೋಗಿದ್ದನು. ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮರಕ್ಕೆ ಬೈಕ್ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಅಜಯ್ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ. ಬೆಳೆಗ್ಗೆ ವೇಳೆ ಅಲ್ಲಿ ಹೋದ ಜನ ಗಮನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೆ ಇದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕರ ವಸೂಲಿಗಾರನ ವಿರುದ್ಧ ಟ್ಯಾಕ್ಸ್ ವಸೂಲಿಯಲ್ಲಿ ಅಕ್ರಮದ ಆರೋಪ ಹೊರಿಸಿ ನೋಟೀಸ್ ನೀಡಿದ್ದರು. ಇದರಿಂದ ಮನ ನೊಂದ ಚಂದ್ರಶೇಖರ್ ಸಭೆಯಲ್ಲಿಯೇ ಮಾತಿಗೆ ಮಾತು ಬೆಳೆದು ವಿಷ ಸೇವಿಸಿದ್ದರು. ತಕ್ಷಣವೇ ಜೊತೆಗಿದ್ದ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ನೀಡಲಾಗಿದ್ದು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.