Tag: bengaluru rural

  • KSRTC ಬಸ್‌ ಬದಲಿಗೆ ಕಾರಿನಲ್ಲಿ ಮತಪೆಟ್ಟಿಗೆ ರವಾನೆ – ವಾಹನ ತಡೆದು ಗ್ರಾಮಸ್ಥರ ಆಕ್ರೋಶ

    KSRTC ಬಸ್‌ ಬದಲಿಗೆ ಕಾರಿನಲ್ಲಿ ಮತಪೆಟ್ಟಿಗೆ ರವಾನೆ – ವಾಹನ ತಡೆದು ಗ್ರಾಮಸ್ಥರ ಆಕ್ರೋಶ

    ರಾಮನಗರ: ಮತದಾನ ಮುಕ್ತಾಯವಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಬದಲಾಗಿ ಕಾರಿನಲ್ಲಿ ಮತಪೆಟ್ಟಿಗೆ ರವಾನೆ ಮಾಡುತ್ತಿದ್ದ ಚುನಾವಣಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕಾರನ್ನು ತಡೆದು ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ ಘಟನೆ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬೂತ್ ನಂ.46 ರ ಮತಪೆಟ್ಟಿಗೆಯನ್ನ ಕಾರಿನಲ್ಲಿ ರವಾನೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೂತ್ ನಂ-47ರ ಮತಗಟ್ಟೆಯನ್ನ ಬಸ್‌ನಲ್ಲಿ ರವಾನೆ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಎರಡೂ ಮತಪೆಟ್ಟಿಗೆಗಳನ್ನ ಬಸ್‌ನಲ್ಲೇ ರವಾನೆ ಮಾಡುವಂತೆ ಜನರು ಆಗ್ರಹಿಸಿದರು. ಸ್ಥಳಕ್ಕೆ ಚುನಾವಣಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದ ಘಟನೆ ನಡೆಯಿತು. ಇದನ್ನೂ ಓದಿ: ನಕಲಿ ಮತದಾನ ನಡೆದಿಲ್ಲ: ಉಡುಪಿ ಡಿ.ಸಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ

    ಮತಪೆಟ್ಟಿಗೆ ಕೊಂಡೊಯ್ಯುತ್ತಿದ್ದ ವಾಹನ ನಡೆದು ಗ್ರಾಮಸ್ಥರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಲಾಠಿ ಬೀಸಿ ಗ್ರಾಮಸ್ಥರನ್ನ ಪೊಲೀಸರು ಚದುರಿಸಿದರು. ಮತಪೆಟ್ಟಿಗೆ ರವಾನೆ ಮಾಡಲು ಗ್ರಾಮಸ್ಥರು ಬಿಡಲಿಲ್ಲ. ಆಗ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಪ್ರಹಾರ ನಡೆಸಿದರು.

    ಸ್ಥಳಕ್ಕೆ ಚನ್ನಪಟ್ಟಣ ತಹಸಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸ್ ಭದ್ರತೆಯಲ್ಲಿ ಮತಪೆಟ್ಟಿಗೆಗಳ ರವಾನೆ ಮಾಡಲಾಯಿತು. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಮತಪೆಟ್ಟಿಗೆಗಳ ರವಾನಿಸಿದರು. ಇದನ್ನೂ ಓದಿ: ವೋಟ್ ಮಾಡಿದ ಸ್ಯಾಂಡಲ್‌ವುಡ್ ನಟರು

  • ಮತದಾರರನ್ನ ಸೆಳೆಯಲು ಆನೇಕಲ್‍ನಲ್ಲಿ ವಿಭಿನ್ನ ಪ್ರಯತ್ನ

    ಮತದಾರರನ್ನ ಸೆಳೆಯಲು ಆನೇಕಲ್‍ನಲ್ಲಿ ವಿಭಿನ್ನ ಪ್ರಯತ್ನ

    ಆನೇಕಲ್: ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಗೆ (Loksabha Elections 2024) ಮತದಾನ ನಡೆಯುತ್ತಿದೆ. ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ ಹಾಕಿ, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಆನೇಕಲ್‍ನಲ್ಲಿ ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನವೊಂದು ನಡೆದಿದೆ.

    ಹೌದು. ಬಿಸಿಲಿನ ಬೇಗೆಯ ನಡುವೆಯೂ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ನೀಡುತ್ತಿದ್ದಾರೆ. ಹೀಗಾಗಿ ಬಿಸಿಲಿನ ದಗೆಗೆ ಬಿಸಿಲಿನ ದಗೆಗೆ ಪಾನಕ, ಮಜ್ಜಿಗೆ ನೀಡುವ ಮೂಲಕ ಮತದಾರರನ್ನು ಹುರಿದುಂಬಿಸಲಾಗುತ್ತಿದೆ. ಇದನ್ನೂ ಓದಿ: ತಪ್ಪದೇ ಮತದಾನ ಮಾಡಿ: ಕಾಂತಾರ ಬೆಡಗಿ ಸಪ್ತಮಿ ಗೌಡ

    ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಶಾಂತಿಪುರದಲ್ಲಿ ಮತದಾರರಿಗೆ ಪಾನಕ ನೀರು, ಮಜ್ಜಿಗೆ, ಹೆಸರುಬೇಳೆ ವಿತರಣೆ ಮಾಡಲಾಗುತ್ತಿದೆ. ಮತದಾರರು ಪಾನಕ ಕುಡಿದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅತ್ಯಂತ ಉತ್ಸಾದಿಂದಲೇ ಬಂದು ಸಾರ್ವಜನಿಕರು ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಬೆಳಗ್ಗೆ 9 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರದಲ್ಲಿ 8.39% ಮತದಾನವಾಗಿದೆ. ಇಲ್ಲಿ ಕಾಂಗ್ರೆಸ್ ನಿಂದ ಡಿ.ಕೆ ಸುರೇಶ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಡಾ. ಸಿ.ಎನ್ ಮಂಜುನಾಥ್ ಚುನಾವಣಾ ಅಖಾಡದಲ್ಲಿದ್ದಾರೆ.

  • Exclusive: ಪ್ರತಿದಿನ 50 ಕೋಟಿ ಕಾಸು ಮಾಡದೇ ಡಿಕೆಶಿ ಮಲಗೋದಿಲ್ಲವಂತೆ: ಹೆಚ್‌ಡಿಕೆ ಬಾಂಬ್‌

    Exclusive: ಪ್ರತಿದಿನ 50 ಕೋಟಿ ಕಾಸು ಮಾಡದೇ ಡಿಕೆಶಿ ಮಲಗೋದಿಲ್ಲವಂತೆ: ಹೆಚ್‌ಡಿಕೆ ಬಾಂಬ್‌

    – ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು ಎಂದ ಮಾಜಿ ಸಿಎಂ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ದಿನಕ್ಕೆ 50 ಕೋಟಿ ರೂ. ಇಲ್ಲದೇ ಮನೆಗೆ ಹೋಗಿ ನಿದ್ರೆ ಮಾಡೋದಿಲ್ಲವಂತೆ. ಇದನ್ನ ನಾನಲ್ಲ ಜನ ಹೇಳ್ತಾರೆ, ಕಾಂಗ್ರೆಸ್‌ನವರೇ ಮಾತಾಡ್ತಾರೆ ಅಂತ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ʻಪಬ್ಲಿಕ್ ಟಿವಿʼಗೆ (Public TV) ನೀಡಿದ ಸಂದರ್ಶನದಲ್ಲಿ ಅವರು ಮೈತ್ರಿ ಅನಿವಾರ್ಯತೆ ಕುರಿತು ಮಾತನಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಸಿ.ಎನ್‌ ಮಂಜುನಾಥ್‌ (Dr. CN Manjunath) ಗೆದ್ದೇ ಗೆಲ್ತಾರೆ ಎಂಬ ವಿಶ್ವಾಸ ವ್ಯಕ್ಯಪಡಿಸಿರುವ ಅವರು, ಡಿಕೆ ಶಿವಕುಮಾರ್‌ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.

    ಮುಂದುವರಿದು, ಕಾಂಗ್ರೆಸ್‌ನವರು (Congress) 10 ವರ್ಷ ಈ ಸರ್ಕಾರ ಇರುತ್ತೆ ಅಂತಾ ಹೇಳಿದ್ದಾರೆ. ಈ ಹಿಂದೆಯೂ 20 ವರ್ಷ ನಮ್ಮ ಸರ್ಕಾರ ಇರುತ್ತೆ ಅಂತಾ ಹೇಳಿದ್ದರು. ಇತಿಹಾಸ ತೆಗೆದು ನೋಡಿದ್ರೆ, ಏನಾಗಿದೆ ಅಂತಾ ಗೊತ್ತಾಗುತ್ತೆ. ಈಗ 136 ಪ್ಲಸ್‌ ಪ್ಲಸ್‌ ಪ್ಲಸ್‌ ಸೀಟ್‌ ಇದೆ ಅಂತಾರೆ. ಈ ಹಿಂದೆ ನಮಗೆ ಕಾಂಗ್ರೆಸ್‌ ಬೆಂಬಲ ಕೊಟ್ಟಾಗ ಎಷ್ಟಿತ್ತು? ಲೋಕಸಭಾ ಚುನಾವಣೆ (Lok Sabha Elections) ಆದ್ಮೇಲೆ ಎಷ್ಟು ದಿನ ಸರ್ಕಾರ ಇರುತ್ತೆ ಅಂತ ಗೊತ್ತಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

    ಬೆಂಗಳೂರಲ್ಲಿ (Bengaluru) ಸ್ಕ್ವೇರ್‌ಫಿಟ್‌ಗೆ 100 ರೂ. ಫಿಕ್ಸ್‌ ಮಾಡಿದ್ದಾರಂತೆ, ಪ್ರತಿ ದಿನಕ್ಕೆ 50 ಕೋಟಿ ರೂ. ಇಲ್ಲದೇ ಮನೆಗೆ ಹೋಗಿ ನಿದ್ರೆ ಮಾಡೋದಿಲ್ಲವಂತೆ. ಜನ ಮಾತ್ರ ಅಲ್ಲ, ಕಾಂಗ್ರೆಸ್‌ನವರೇ ಇದನ್ನ ಹೇಳ್ತಾರೆ. ಇಂಥವರು ಒಕ್ಕಲಿಗರನ್ನ ಉದ್ಧಾರ ಮಾಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ

    ಮತ್ತೆ ಜೈಲಿಗೆ ಹೋಗಬಹುದು?
    ಡಿಕೆ ಶಿವಕುಮಾರ್‌ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು. ಅವರು ಎಲ್ಲ ಅರಗಿಸಿಕೊಳ್ಳುವ ಶಕ್ತಿ ಇದೆ ಅಂತಾ ಹೇಳ್ತಾರೆ. ಅವರಿಗೆ ಹಣದಿಂದ ಯಾರನ್ನ ಬೇಕಾದರೂ ಕೊಂಡುಕೊಳ್ಳಬಹುದು ಅನ್ನೋ ಉದ್ಧಟತನ ಇರೋದು ಸತ್ಯ. ಅದರಿಂದ ನಾನು ಏನೇ ತಪ್ಪು ಮಾಡಿದರೂ ಅರಗಿಸಿಕೊಳ್ಳುವ ಶಕ್ತಿಯಿದೆ ಅನ್ನೋದು ಅವರ ಅಭಿಪ್ರಾಯ. ಮುಂದೆ ಭಗವಂತ ಅವರನ್ನ ನೋಡಿಕೊಳ್ತಾನೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

    ಮೈತ್ರಿ ಯಾಕೆ ಅನಿವಾರ್ಯ ಆಯ್ತು?
    ಇಂದಿನ ರಾಜಕೀಯ ಬೆಳವಣಿಗೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಮೈತ್ರಿ ಅನಿವಾರ್ಯ ಅನ್ನಿಸಿತು. ಕಳೆದ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷೆ ಮಾಡಿತ್ತು. ನಾವೂ ಸಹ ಅದ್ಭುತವಾಗಿ ಪಂಚರತ್ನ ಯಾತ್ರೆ ಮಾಡಿದ್ದರಿಂದ ಹೆಚ್ಚಿನ ಸ್ಥಾನಗಳನ್ನ ನಿರೀಕ್ಷೆ ಮಾಡಿದ್ದೆವು. ಅದು ಸಾಧ್ಯವಾಗಲಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಭ್ರಷ್ಟ ವ್ಯವಸ್ಥೆ ಆರಂಭವಾಯಿತು. ಯಾವ ಸರ್ಕಾರದಲ್ಲೂ ಇಂತಹ ಕೆಟ್ಟ ಆಡಳಿತ ನೋಡಲಿಲ್ಲ. ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಫಿಕ್ಸ್ ಮಾಡಿ ಲೂಟಿ ಮಾಡುವ ಕೆಲಸ ಶುರುವಾಯ್ತು. ಈ ರಾಜ್ಯವನ್ನ ಯಾವ ಮಟ್ಟಕ್ಕೆ ದಿವಾಳಿ ಮಾಡಬಹುದು ಅನ್ನೋದನ್ನ ನೆನಸಿಕೊಂಡಾಗ, ಪ್ರತಿಯೊಬ್ಬರಿಗೂ ಆತಂಕ ಆಗುತ್ತೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಗೂ ಮೈತ್ರಿ ಅನಿವಾರ್ಯವಾಯಿತು ಎಂದು ತಿಳಿಸಿದ್ದಾರೆ.

    ಈ ಬಾರಿ ಮೈತ್ರಿ ಪಕ್ಷ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹಾಕಿಕೊಂಡಿದೆ. ಕನಿಷ್ಠ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹೆಚ್‌ಡಿಕೆ ಶಪಥ ಮಾಡಿದ್ದಾರೆ. ಇದನ್ನೂ ಓದಿ: ರಾಮನವಿಯಂದು ಕೇಸರಿ ಶಾಲು,ರಾಮನ ಬಾವುಟ ಹಿಡಿದು ಕೆರಗೋಡಿಗೆ ಹೆಚ್‌ಡಿಕೆ ಭೇಟಿ

  • Exclusive: ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದು: ಕುಮಾರಸ್ವಾಮಿ

    Exclusive: ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದು: ಕುಮಾರಸ್ವಾಮಿ

    ಬೆಂಗಳೂರು/ಶಿವಮೊಗ್ಗ: ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಆಗಿದೆ. ಡಾ.ಸಿ.ಎನ್‌ ಮಂಜುನಾಥ್‌ (Dr. CN Manjunath) ಯಾವ ಪಕ್ಷದ ಸಿಂಬಲ್‌ನಲ್ಲಿ ನಿಂತರೂ ಒಂದೇ. ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಬೇಕು ಅನ್ನೋ ಕಾರಣಕ್ಕೆ ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ವಿ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಶಿವಮೊಗ್ಗದಲ್ಲಿಂದು ಚುನಾವಣಾ ಪ್ರಚಾರಕ್ಕೆ (Shivamogga Election Campaign) ತೆರಳಿದ್ದ ವೇಳೆ ʻಪಬ್ಲಿಕ್ ಟಿವಿʼಗೆ (Public TV) ನೀಡಿದ ಸಂದರ್ಶನದಲ್ಲಿ ಅವರು ಮೈತ್ರಿ ಅನಿವಾರ್ಯತೆಗಳ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

    ಈ ಬಾರಿ ಮಂಜುನಾಥ್‌ ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ. ಬೆಂಗಳೂರು ಗ್ರಾಮಾಂತರ (Bengalruu Rural) ಭಾಗದ ಜನರಿಗೆ ಮಂಜುನಾಥ್‌ ಅವರ ಬಗ್ಗೆ ವಿಶೇಷ ಅಭಿಮಾನ ಇದೆ. ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯೇ ಇದಕ್ಕೆ ಕಾರಣ. ಮಂಜುನಾಥ್‌ ಅವರಿಂದ ಆ ಭಾಗದಲ್ಲಿ ಜೀವ ಪಡೆದ ಜನ ಇಂದಿಗೂ ಅವರನ್ನು ನೆನಸುತ್ತಾರೆ. ಹಾಗಾಗಿ ಮಂಜುನಾಥ್‌ ಗೆದ್ದೇ ಗೆಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಬುದ್ಧಿವಂತ ಅಳಿಯನಿಗೆ ರಾಜಕೀಯ ಬೇಕಿತ್ತಾ?
    ದೇವೇಗೌಡರ (HD Devegowda) ಬುದ್ಧಿವಂತ ಅಳಿಯ ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು ಅಂತ ಇರಲಿಲ್ಲ. ಆದ್ರೆ ಬುದ್ಧಿವಂತ ದೇವೇಗೌಡರ ಕುಟುಂಬ ಲೆಕ್ಕಾಚಾರ ಮಾಡಿ ಬಿಜೆಪಿಯಿಂದ ನಿಲ್ಲಿಸಿದೆ ಎಂದು ಹೆಚ್‌ಡಿಕೆ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಇದೊಂದು ಭಾವನಾತ್ಮಕ ಕ್ಷಣ- ಚುನಾವಣಾ ಪ್ರಚಾರದ ಬ್ಯುಸಿನಲ್ಲೂ ಸೂರ್ಯ ತಿಲಕ ವೀಕ್ಷಿಸಿದ PM

    ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು ಅಂತಾ ಇರಲಿಲ್ಲ. ಹಲವು ಜನರು ರಾಜಕೀಯಕ್ಕೆ ಬರುವುದು ಸೂಕ್ತ ಅಂತಾ ವಿಶ್ಲೇಷಣೆ ಮಾಡಿದರು. ಆಗ ಮಂಜುನಾಥ್‌ ಹೆಸರು ಮುನ್ನೆಲೆಗೆ ಬಂತು. ಅಲ್ಲದೇ ಬಿಜೆಪಿಗೂ ಉತ್ತಮ ಅಭ್ಯರ್ಥಿಯನ್ನು ಕೊಟ್ಟ ಹೆಸರು ಬರುತ್ತೆ ಅಂತಾ ಹೇಳಿದಾಗ, ನಾನೇ ಅವರನ್ನು ಮನವೊಲಿಸುವ ಜವಾಬ್ದಾರಿ ತೆಗೆದುಕೊಂಡೆ. ದೇವೇಗೌಡರನ್ನೂ ಮನವೊಲಿಸುವ ಕೆಲಸ ಮಾಡಿದೆ. ರಾಜಕೀಯ ತಂತ್ರಗಾರಿಕೆ ವರ್ಕೌಟ್ ಆಗಬೇಕು ಅಂತ ನಾವೇ ಅವರನ್ನ ಬಿಜೆಪಿಯಿಂದ ನಿಲ್ಲಿಸಿದ್ವಿ ಎಂದು ತಿಳಿಸಿದ್ದಾರೆ.

    ಮೈತ್ರಿ ಯಾಕೆ ಅನಿವಾರ್ಯ ಆಯ್ತು?
    ಇಂದಿನ ರಾಜಕೀಯ ಬೆಳವಣಿಗೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಮೈತ್ರಿ ಅನಿವಾರ್ಯ ಅನ್ನಿಸಿತು. ಕಳೆದ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷೆ ಮಾಡಿತ್ತು. ನಾವೂ ಸಹ ಅದ್ಭುತವಾಗಿ ಪಂಚರತ್ನ ಯಾತ್ರೆ ಮಾಡಿದ್ದರಿಂದ ಹೆಚ್ಚಿನ ಸ್ಥಾನಗಳನ್ನ ನಿರೀಕ್ಷೆ ಮಾಡಿದ್ದೆವು. ಅದು ಸಾಧ್ಯವಾಗಲಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಭ್ರಷ್ಟ ವ್ಯವಸ್ಥೆ ಆರಂಭವಾಯಿತು. ಯಾವ ಸರ್ಕಾರದಲ್ಲೂ ಇಂತಹ ಕೆಟ್ಟ ಆಡಳಿತ ನೋಡಲಿಲ್ಲ. ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಫಿಕ್ಸ್ ಮಾಡಿ ಲೂಟಿ ಮಾಡುವ ಕೆಲಸ ಶುರುವಾಯ್ತು. ಈ ರಾಜ್ಯವನ್ನ ಯಾವ ಮಟ್ಟಕ್ಕೆ ದಿವಾಳಿ ಮಾಡಬಹುದು ಅನ್ನೋದನ್ನ ನೆನಸಿಕೊಂಡಾಗ, ಪ್ರತಿಯೊಬ್ಬರಿಗೂ ಆತಂಕ ಆಗುತ್ತೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಗೂ ಮೈತ್ರಿ ಅನಿವಾರ್ಯವಾಯಿತು ಎಂದು ತಿಳಿಸಿದ್ದಾರೆ.

    ಈ ಬಾರಿ ಮೈತ್ರಿ ಪಕ್ಷ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹಾಕಿಕೊಂಡಿದೆ. ಕನಿಷ್ಠ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹೆಚ್‌ಡಿಕೆ ಶಪಥ ಮಾಡಿದ್ದಾರೆ. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

  • ಸುರೇಶ್‌ಗೆ ವೋಟ್ ಹಾಕಿಲ್ಲ ಅಂದ್ರೆ ಹಕ್ಕು ಪತ್ರ ನೀಡಲ್ಲ: ಡಿಕೆಶಿಯಿಂದ ಬೆದರಿಕೆ, ಬಿಜೆಪಿ ಕಿಡಿ

    ಸುರೇಶ್‌ಗೆ ವೋಟ್ ಹಾಕಿಲ್ಲ ಅಂದ್ರೆ ಹಕ್ಕು ಪತ್ರ ನೀಡಲ್ಲ: ಡಿಕೆಶಿಯಿಂದ ಬೆದರಿಕೆ, ಬಿಜೆಪಿ ಕಿಡಿ

    – ಬಿಜೆಪಿಯಿಂದ ಬೆದರಿಕೆ ವಿಡಿಯೋ ಬಿಡುಗಡೆ

    ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ (Bengaluru Rural) ಡಿಕೆ ಬ್ರದರ್ಸ್ ಗೂಂಡಾಗಿರಿ, ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ (BJP) ಪದೇ ಪದೇ ಆರೋಪ ಮಾಡುತ್ತಿದೆ.

    ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸಭೆ ನಡೆಸಿ, ಡಿಕೆ ಸುರೇಶ್‌ಗೆ ವೋಟ್ ಹಾಕಿಲ್ಲ ಅಂದ್ರೆ ನಿಮಗೆ ನೀರು ಕೊಡಲ್ಲ ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.  ಇದನ್ನೂ ಓದಿ: ಫಸ್ಟ್‌ ಟೈಂ ಅತಿ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

    ಪೋಸ್ಟ್‌ನಲ್ಲಿ ಏನಿದೆ?
    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು. ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ನೀವು ಡಿಕೆ ಸುರೇಶ್‌ ಅವರಿಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ, ಹಕ್ಕು ಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿಕೆ ಶಿವಕುಮಾರ್‌ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ಜನತೆ ಏಪ್ರಿಲ್ 26 ರಂದು ಅಂತಿಮ ಮೊಳೆ ಹೊಡೆಯುವುದು ಖಚಿತ ನಿಶ್ಚಿತ ಖಂಡಿತ ಎಂದಿದೆ. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇದೇ ವೇಳೆ, ಕುಣಿಗಲ್ ರೈತ ಪ್ರೇಮ್ ಕುಮಾರ್ ತೋಟವನ್ನು ಕಾಂಗ್ರೆಸ್ಸಿಗರು ಸುಟ್ಟು ಹಾಕಿದ್ದಾರೆ. ಅಲ್ಲದೇ, ಪ್ರೇಮ್‌ಕುಮಾರ್‌ಗೆ ಬೆದರಿಕೆ ಹಾಕಿ ತಮಗೆ ಬೇಕಾದಂತೆ ಕೋತ್ವಲ್ ಬ್ರದರ್ಸ್ ಹೇಳಿಕೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

     

  • ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಎದುರಿಸುವ ಶಕ್ತಿಯಿದೆ: ಸಿಎನ್‌ ಮಂಜುನಾಥ್‌

    ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಎದುರಿಸುವ ಶಕ್ತಿಯಿದೆ: ಸಿಎನ್‌ ಮಂಜುನಾಥ್‌

    ಬೆಂಗಳೂರು: ಬೆಂಗಳೂರು ಗ್ರಾಮಾಂತರ (Bengaluru Rural) ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಅದನ್ನು ಎದುರಿಸುವ ಶಕ್ತಿಯಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ಹೇಳಿದ್ದಾರೆ.

    ಆದಿಚುಂಚನಗಿರಿ ಶ್ರೀಗಳ ದರ್ಶನ ಮಾಡಿದ ಬಳಿಕ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಭಯದ ವಾತಾವರಣವಿದೆ ಎಂದು ವರದಿಯಾಗುತ್ತಿದೆ. ಎಲ್ಲವನ್ನೂ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೊಬೈಲ್‌ ಡೇಟಾಗೆ 500 ರೂ. ಫ್ರೀ – ಅಖಿಲೇಶ್‌ ಯಾದವ್‌ ಘೋಷಣೆ

     

    ಡಿಕೆ ಸುರೇಶ್ (DK Suresh) ಏನು ಮಾಡಿಲ್ಲ ಬರೀ ಹೆದರಿಸುವ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮಂತ್ರಿ ಅಶ್ವಥ್‌ನಾರಾಯಣ್ ಆರೋಪಿಸಿದರು. ಅಷ್ಟೇ ಅಲ್ಲದೇ ಈ ಬಾರಿ ನೂರಕ್ಕೆ ನೂರು ಡಾಕ್ಟರ್ ಮಂಜುನಾಥ್‌ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಇದನ್ನೂ ಓದಿ: ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆಯಾ?; ದ್ವೀಪ ಎಲ್ಲಿದೆ? – ಭಾರತಕ್ಕೆ ಯಾಕೆ ಮುಖ್ಯ?

    ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್‌, ಜೆಡಿಎಸ್‌ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಅಳಿಯನನ್ನು ಬಿಜೆಪಿ ಸಿಂಬಲ್‌ನಲ್ಲಿ ನಿಲ್ಲಿಸುವ ಸ್ಥಿತಿ ದೇವೇಗೌಡರಿಗೆ ಬರಬಾರದಿತ್ತು ಎಂದು ಲೇವಡಿ ಮಾಡಿದರು.

    ಗಿಫ್ಟ್ ವೋಚರ್ ಆರೋಪಕ್ಕೂ ತಿರುಗೇಟು ನೀಡಿದ ಅವರು, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ ಗೆದ್ದೇ ಗೆಲ್ಲುತ್ತೇವೆ ನೋಡುತ್ತಿರಿ ಎಂದು ಸವಾಲು ಹಾಕಿದರು.

    ಇದಕ್ಕೆ ಕುಮಾರಸ್ವಾಮಿ, ನಾವು ನಾಲ್ಕು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಡಿಕೆಶಿ ಬಾಯಿತಪ್ಪಿ 28 ಎಂದು ಹೇಳುವ ಬದಲು 4 ಅಂತ ಹೇಳಿರಬೇಕು ಎಂದು ವ್ಯಂಗ್ಯವಾಡಿದರು.

  • ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಮೈತ್ರಿ (ಬಿಜೆಪಿ-ಜೆಡಿಎಸ್)‌ ಅಭ್ಯರ್ಥಿಯಾಗಿ ಡಾ. ಸಿ.ಎನ್.ಮಂಜುನಾಥ್‌ (C.N.Manjunath) ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಆಸ್ತಿ ವಿವರ ಘೋಷಿಸಿಕೊಂಡಿದ್ದು, 98.36 ಕೋಟಿ ಆಸ್ತಿ ಒಡೆಯರಾಗಿದ್ದಾರೆ.

    ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2023-24 ರ ಹಣಕಾಸು ವರ್ಷದಲ್ಲಿ 1.57 ಕೋಟಿ ಆದಾಯ ಬಂದಿದೆ. ಅದರಲ್ಲಿ 42,847 ರೂ. ಕೃಷಿಯಿಂದ ಬಂದ ಆದಾಯ. ಡಾ.ಮಂಜುನಾಥ್‌ ಪತ್ನಿ ಅನುಸೂಯ 1,57,01,260 ಕೋಟಿ ರೂ. ಆದಾಯ ಹೊಂದಿದ್ದಾರೆ. ಇದನ್ನೂ ಓದಿ: 62.82 ಕೋಟಿ ಒಡೆಯ ಹೆಚ್‌ಡಿಕೆ- ಪತಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆ!

    ಮಂಜುನಾಥ್‌ ಅವರ ಕೈಯಲ್ಲಿ 1,97,622 ರೂಪಾಯಿ ಇದೆ. 4ಕೋಟಿ ಮೌಲ್ಯದ ಒಟ್ಟು 6.79 ಕೆ.ಜಿ ಚಿನ್ನ ಹೊಂದಿದ್ದಾರೆ. 55 ಲಕ್ಷ ರೂ. ಮೌಲ್ಯದ ಎರಡು ಕಾರು ಹೊಂದಿದ್ದಾರೆ. ಒಟ್ಟು 6.98 ಕೋಟಿ ಚರಾಸ್ತಿ ಹಾಗೂ 36.65 ಕೋಟಿ ಸ್ಥಿರಾಸ್ತಿ ಇದೆ. 3.74 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ.

    ಹೆಂಡತಿ ಅನುಸೂಯ ಹೆಸರಲ್ಲಿ 17.36 ಕೋಟಿ ಚರಾಸ್ತಿ ಹಾಗೂ 35.30 ಕೋಟಿ ಸ್ಥಿರಾಸ್ತಿ ಇದೆ. ಅವರ ಪತ್ನಿ ಕೈಯಲ್ಲಿ 3,04,706 ರೂ. ಇದೆ. ಒಟ್ಟು 11.02 ಕೋಟಿ ರೂ. ಸಾಲ ಮಾಡಿದ್ದಾರೆ. 13 ಲಕ್ಷ ಬೆಲೆಬಾಳುವ ಒಂದು ಕಾರು ಹೊಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧೆ!

    ಮಂಜುನಾಥ್‌ ಅವರ ಅವಿಭಕ್ತ ಕುಟುಂಬದ ಹೆಸರಲ್ಲಿ 75 ಲಕ್ಷ ರೂ. ಚರಾಸ್ತಿ ಮತ್ತು 1.32 ಕೋಟಿ ಸ್ಥಿರಾಸ್ತಿ ಇದೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ.

  • ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ

    ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ

    – ಡಾ. ಮಂಜುನಾಥ್‌ ಪರ ಮತಯಾಚನೆ – ರೋಡ್‌ಶೋನಲ್ಲಿ ಘಟಾನುಘಟಿ ನಾಯಕರು ಭಾಗಿ

    ರಾಮನಗರ: ರಾಜ್ಯ ಬಿಜೆಪಿಯಲ್ಲೀಗ ಲೋಕಸಭೆ ಚುನಾವಣೆಯ ರಣೋತ್ಸಾಹ ಮೂಡಿದೆ. ಅಮಿತ್ ಶಾ (Amit Shah) ಅವರ ಮಿಂಚಿನ ಸಂಚಾರ ರಾಜ್ಯ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೂಸ್ಟ್ ನೀಡಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಅಮಿತ್ ಶಾ ಅವರು ಡಿಕೆ ಬ್ರದರ್ಸ್ ಭದ್ರ ಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರ ಚುನಾವಣಾ ಪ್ರಚಾರದ ಭಾಗವಾಗಿ ಚನ್ನಪಟ್ಟಣದಲ್ಲಿಂದು ಭರ್ಜರಿ ರೋಡ್ ಶೋ (Amit Shah Road Show) ನಡೆಸಿದ್ದಾರೆ. ಅಮಿತ್ ಶಾ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಡಾ. ಮಂಜುನಾಥ್, ನಿಖಿಲ್ ಕುಮಾರಸ್ವಾಮಿ, ಸಿ.ಪಿ ಯೋಗೇಶ್ವರ್ ಅವರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಯಾವ್ದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು – ಪಕ್ಷದ ಅಸಮಧಾನಿತರಿಗೆ ಅಮಿತ್ ಶಾ ವಾರ್ನಿಂಗ್

    ಜೈ ಶ್ರೀರಾಮ್- ಮೋದಿ… ಮೋದಿ.. ಘೋಷಣೆ:
    ರೋಡ್ ಶೋ ವೇಳೆ ಸೇರಿದ್ದ ಸಾವಿರಾರು ಜನ ಹಾಗೂ ಬಿಜೆಪಿ ಕಾರ್ಯಕರ್ತರು `ಜೈ ಶ್ರೀರಾಮ’ ಘೋಷಣೆ ಕೂಗಿದ್ದಾರೆ. ಮೆರವಣಿಗೆ ಉದ್ದಕ್ಕೂ `ಜೈ ಶ್ರೀರಾಮ್, ಮೋದಿ ಮೋದಿ’ ಅಂತಾ ಘೋಷಣೆ ಕೂಗುತ್ತಲೇ ಉತ್ಸಾಹ ಮೆರೆದಿದ್ದಾರೆ. ಇದೇ ವೇಳೆ ಅಮಿತ್ ಶಾ ಅವರು ಜನರ ಮೇಲೆ ಹೂಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳೋದೆ ಚಿಂತೆ, ಯಾಕಂದ್ರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ: ಅಮಿತ್ ಶಾ

    ಭಿಗಿ ಭದ್ರತೆ:
    ರೋಡ್ ಶೋ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರೋಡ್ ಶೋಗು ಮುನ್ನವೇ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳಗಳಿಂದ ತಪಾಸಣೆ ನಡೆಸಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

  • ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್‌ಡಿಕೆ ತೆಗೆದುಕೊಂಡಿದ್ದು ಯಾಕೆ?

    ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್‌ಡಿಕೆ ತೆಗೆದುಕೊಂಡಿದ್ದು ಯಾಕೆ?

    ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು , ಈ ಬಾರಿ ಇಲ್ಲಿ ಡಾ. ಮಂಜುನಾಥ್‌ (Dr. Manjunath) ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.

    ಹೌದು. 2019ರ ಚುನಾವಣೆಯಲ್ಲಿ ಡಿಕೆ ಸುರೇಶ್‌ (DK Suresh) ಒಬ್ಬರೇ ಕರ್ನಾಟಕದಿಂದ ಕಾಂಗ್ರೆಸ್‌ (Congress) ಸಂಸದರಾಗಿ ಆಯ್ಕೆ ಆಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಡೆದ ಪರಿಣಾಮ ಡಿಕೆ ಸುರೇಶ್‌ 2.06 ಲಕ್ಷ ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಜೆಡಿಎಸ್‌ ಮತಗಳು ಸುರೇಶ್‌ ಅವರಿಗೆ ಬಿದ್ದ ಕಾರಣ ಲೀಡ್‌ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಇವರನ್ನು ಸೋಲಿಸಲೇಬೇಕೆಂದು ಹೆಚ್‌ಡಿಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

    ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಯಾಕೆ?
    ಬಾವಾ ಡಾ. ಮಂಜುನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಲು ಒಪ್ಪಿಸಿದ್ದೇ ಕುಮಾರಸ್ವಾಮಿ. ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಕುಮಾರಸ್ವಾಮಿ ಮೇಲೆ ಆರೋಪಗಳು ಹೆಚ್ಚಾಗುತ್ತದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಅಲ್‌ ಜಜೀರಾ ನಿಷೇಧ – ಇದು ಉಗ್ರರ ವಾಹಿನಿ ಎಂದ ನೆತನ್ಯಾಹು

    ಮಂಜುನಾಥ್ ಅವರ ಚುನಾವಣೆ ಸ್ಪರ್ಧೆಗೆ ಅವರ ಪತ್ನಿ ಅನಸೂಯ ಮತ್ತು ಪುತ್ರ ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಇತ್ತು. ಮಾತುಕತೆಯ ವೇಳೆ ಬಾವನನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ಹೆಚ್‌ಡಿಕೆ ಮನವೊಲಿಕೆ ಮಾಡಿದ್ದರು. ಕುಮಾರಸ್ವಾಮಿ ಮಾತಿಗೆ ಒಪ್ಪಿ ಬಿಜೆಪಿಯಿಂದ ಸ್ಪರ್ಧೆಗೆ ಸಹೋದರಿ ಒಪ್ಪಿಗೆ ನೀಡಿದ್ದಾರೆ. ಈಗ ಹೆಚ್‌ಡಿಕೆ ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

    ಡಿಕೆ ಶಿವಕುಮಾರ್‌, ಡಿಕೆ ಸುರೇಶ್‌ ಚುನಾವಣೆ ಗೆಲ್ಲಲು ದೊಡ್ಡ ದೊಡ್ಡ ತಂತ್ರಗಾರಿಕೆ ಮಾಡುತ್ತಾರೆ. ರಾಜಕೀಯದಲ್ಲಿ ಅನುಭವ ಇಲ್ಲದ ಡಾ. ಮಂಜುನಾಥ್ ಅವರಿಗೆ ಇದನ್ನು ಸಹಿಸುವುದು ಕಷ್ಟ. ಹೀಗಾಗಿ ಕುಮಾರಸ್ವಾಮಿ ಬೆಂಗಾವಲು ನಿಂತು ಕೆಲಸ ಮಾಡಲು ಮುಂದಾಗಿದ್ದಾರೆ. ಒಂದು ವೇಳೆ ಡಾ.ಮಂಜುನಾಥ್ ಫಲಿತಾಂಶ ವ್ಯತಿರಿಕ್ತವಾದರೆ ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬ ಇಮೇಜ್‌ಗೂ ಧಕ್ಕೆ ಬೀಳುವ ಆತಂಕವಿದೆ.  ಇದನ್ನೂ ಓದಿ: ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು – ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ

    ಗೆದ್ದರೆ ಹ್ಯಾಟ್ರಿಕ್‌ ಸಾಧನೆ:
    2014, 2019ರ ಚುನಾವಣೆಗಳಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಡಿ.ಕೆ ಸುರೇಶ್‌ ಇದೀಗ ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿದ್ದಾರೆ. 2014ರಲ್ಲಿ ಡಿಕೆ ಸುರೇಶ್‌ 14,55,244 ಮತಗಳನ್ನು ಪಡೆದು, 2,31,480 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರಲ್ಲಿ 2,06,870 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹಾಗಾಗಿ ಹೈಕಮಾಂಡ್‌ ಸತತ 3ನೇ ಬಾರಿಗೆ ಬೆಂಗಳೂರು ಗ್ರಾಮಾಂತರದ ಟಿಕೆಟ್‌ ನೀಡಿದೆ.

     

  • ಡಿಕೆ ಸುರೇಶ್‌ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!

    ಡಿಕೆ ಸುರೇಶ್‌ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!

    ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಕಾಂಗ್ರೆಸ್‌ ಅಭ್ಯರ್ಥಿ ಡಿಕೆ ಸುರೇಶ್‌ (DK Suresh) 593 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಡಿಕೆ ಸುರೇಶ್‌ ಅವರು ಇಂದು ರಾಮನಗರ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

    2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) 338 ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿಕೆ ಸುರೇಶ್‌ ಅವರು ಈ ಬಾರಿ ಒಟ್ಟು 106.71 ಕೋಟಿ ರೂ. ಚರಾಸ್ತಿ, ಒಟ್ಟು 486.33 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಡಿ.ಕೆ.ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 (75%) ಕೋಟಿ ರೂ.ನಷ್ಟು ಏರಿಕೆ ಕಂಡಿದೆ.

    ತನ್ನ ಬಳಿ ಯಾವುದೇ ಕಾರು ಇಲ್ಲ. ಒಟ್ಟು 150.06 ಕೋಟಿ ರೂ ಸಾಲವನ್ನು ಹೊಂದಿರುವುದಾಗಿ ಸುರೇಶ್‌ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

    ತನ್ನ ಬಳಿ ಒಟ್ಟು 21,35,500 ರೂ. ಮೌಲ್ಯದ 1260 ಗ್ರಾಂ ಚಿನ್ನ ಮತ್ತು 2,10,000 ರೂ. ಮೌಲ್ಯದ 4886 ಗ್ರಾಂ ಬೆಳ್ಳಿ ಹೊಂದಿರುವುದಾಗಿ ಹೇಳಿದ್ದಾರೆ.ಒಟ್ಟು 32,75,50,472 ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದರೆ 210,47,68,159 ರೂ. ಮೌಲ್ಯದ ಕೃಷಿಯೆತರ ಭೂಮಿಯನ್ನು ಹೊಂದಿದ್ದಾರೆ. ಒಟ್ಟು 211,91,41,888 ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಡಿಕೆ ಸುರೇಶ್‌ ಹೊಂದಿದ್ದಾರೆ.  ಇದನ್ನೂ ಓದಿ: ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ

    150 ಕೋಟಿ ಸಾಲ: 50.06 ಕೋಟಿ ರೂ. ಸಾಲ ಇರುವುದಾಗಿಯೂ ಡಿಕೆ ಸುರೇಶ್‌ ತಿಳಿಸಿದ್ದಾರೆ. 7.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಆದಾಯ ಎಷ್ಟು?:  2019ರ ಮಾರ್ಚ್‌ ಅಂತ್ಯಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 1,12,17,630 ರೂ. 2020 ಹಣಕಾಸು ವರ್ಷದಲ್ಲಿ 3,71,38,390 ರೂ., 2021ರ ಹಣಕಾಸು ವರ್ಷದಲ್ಲಿ 32,51,35,700 ರೂ., 2022ರ ಹಣಕಾಸು ವರ್ಷದಲ್ಲಿ 2,29,82,360 ರೂ., 2023 ರ ಹಣಕಾಸು ವರ್ಷದಲ್ಲಿ 12,30,04,200 ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.