ನೆಲಮಂಗಲ: ತಂಗಿಯ ಸೀಮಂತಕ್ಕೆಂದು ಬಂದಿದ್ದ ಅಕ್ಕನಿಗೆ ಬಸ್ಸಿನಿಂದ ಇಳಿಯುವಾಗ ಕಾರು ಡಿಕ್ಕಿಯಾಗಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲದ (Nelamangala) ಮಾದವಾರ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತ ಜಯಶ್ರೀ ತಂಗಿಯ ಸೀಮಂತಕ್ಕೆಂದು ಮಾದಾವರಕ್ಕೆ ಬಂದಿದ್ದರು. ಮಾದಾವರ ಬಸ್ ನಿಲ್ದಾಣದಲ್ಲಿ ಬಸ್ಸಿಂದ ಇಳಿಯುವಾಗ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಜಯಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಶವಗಾರಕ್ಕೆ ಕಳುಹಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಕಾರು ಚಾಲಕ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಕಾರವಾರ| ಧಾರಾಕಾರ ಮಳೆಗೆ ಕುಸಿದ 2 ಮನೆಗಳು
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗೂ ಸಾರ್ವಜನಿಕ ದಾಖಲೆಗಳನ್ನ ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ ಹಕ್ಕು (RTI)ನ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಪೊಲೀಸ್ ಇಲಾಖೆ (Police Department) ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು. ಮಾಹಿತಿ ಹಕ್ಕು ಬಹಳ ಸರಳ ಹಾಗೂ ಗಂಭೀರ ಸ್ವರೂಪ ಹೊತ್ತಾಗಿದ್ದು ಸರ್ಕಾರವನ್ನು ಬುಡಮೇಲು ಮಾಡುವ ಶಕ್ತಿ ಕೂಡ ಇದೆ. ಜನಪರ ಕಾನೂನು ಜಾರಿಯಾದ ನಂತರ ಅದರ ಬಗ್ಗೆ ಸರ್ಕಾರಿ ಅಧಿಕಾರಿಗಳು ತಿಳಿದಿರಬೇಕು ಎಂದು ತಿಳಿವಳಿಕೆ ನೀಡಿದರು. ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಗ್ತಿದೆ ನಾಯಿ ಕಡಿತ, ರೇಬಿಸ್ ಆತಂಕ! – ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?
ಅರ್ಜಿದಾರರು ಕೂಡ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳದೇ ಸಮಾಜದ ನೈತಿಕತೆ ಸಾಮಾಜಿಕ ಸ್ವಾತಂತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಆರ್‌ಟಿಐ ಮೂಲಕ ಸಾರ್ವಜನಿಕರು ಮಾಹಿತಿ ಕೇಳಬೇಕು. ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಹಣಕಾಸು, ನರೇಗಾ, ಕಂದಾಯ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಲ್ಲಿ ಹೆಚ್ಚು ಆರ್.ಟಿ.ಐ ಅರ್ಜಿಗಳು ಬರುತ್ತವೆ. ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಶೀಘ್ರ ವಿಲೇವಾರಿ ಮಾಡಬಹುದು ಎಂದರು.
ಪೊಲೀಸ್ ಸ್ಟೇಷನ್‌ಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಆಧರಿಸಿ ಕಡ್ಡಾಯವಾಗಿ ಎಲ್ಲಾ ಪೊಲೀಸ್ ಸ್ಟೇಷನ್‌ಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಹಾಗೆಯೇ ಅವುಗಳನ್ನ ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪಾಲಿಸುವುದು ಅವಶ್ಯಕ. ಅಧಿಕಾರಿಯು ಕಾರಣವಿಲ್ಲದೇ ಮಾಹಿತಿ ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಲಕಾಲಕ್ಕೆ ಅರ್ಜಿಗಳ ವಿಲೇವಾರಿ ಮಾಡಬೇಕು ಎಚ್ಚರಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮಗಿಂತ ಜೆಡಿಎಸ್ – ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿಕೆಶಿ
RTI ಜನಸ್ನೇಹಿ ಕಾಯ್ದೆ
ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಡಾ.ಬಿ.ಆರ್ ಮಮತಾ ಮಾತನಾಡಿ, ಮಾಹಿತಿ ಹಕ್ಕಿನ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅರಿವಿನ ಕೊರತೆ ಇದೆ. ಈ ಕಾಯ್ದೆಯು ಸಾರ್ವಜನಿಕ ಜನ ಸ್ನೇಹಿ ಕಾಯ್ದೆಯಾಗಿದೆ. ಇದನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. 6(1) ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಅರ್ಜಿ ಬಂದರೆ ಅಂತಹ ಅರ್ಜಿಗೆ 30 ದಿನಗಳ ಒಳಗಾಗಿ ಪ್ರತಿ ಪುಟಕ್ಕೆ ಎರಡು ರೂ ಗಳಂತೆ ಹಣ ಪಾವತಿಸಿಕೊಂಡು ಮಾಹಿತಿ ನೀಡಬೇಕು, ನಿಗದಿತ ಕಾಲಮಾನಕ್ಕೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಉಚಿತವಾಗಿ ಮಾಹಿತಿಯನ್ನು ನೀಡಬೇಕು. 41ಎ ಮತ್ತು 41ಬಿ ಯನ್ನು ಎಲ್ಲಾ ಕಚೇರಿಗಳಲ್ಲಿ ಕಡ್ದಾಯವಾಗಿ ಅಳವಡಿಸಬೇಕು. ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿಗಳು ನೀಡಬೇಕು ಕಾಯ್ದೆಯ ನಿರ್ಲಕ್ಷ್ಯತೆ ಆಗಬಾರದು ಎಂದರು.
ಜಿಲ್ಲೆಯಲ್ಲಿ 1,440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ
ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ. ಮಾಣಿ (Badruddin K Mani) ಮಾತನಾಡಿ, ಎಲ್ಲಾ ಅಧಿಕಾರಿ, ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾತ್ರ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯ. ರಾಜ್ಯದಲ್ಲಿ 45,000 ದ್ವಿತೀಯ ಹಂತದ ಮೇಲ್ಮನವಿ ಪ್ರಕರಣಗಳು ಬಾಕಿ ಇದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು 9ನೇ ಸ್ಥಾನದೊಂದಿಗೆ 1,440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದರು.
ಹಾಗೆಯೇ ಕಾಯ್ದೆಯು ಬಹಳ ಸುಲಭವಾಗಿದ್ದು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೇ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬಹುದು. ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ಹಕ್ಕು ಅಡಿಯಲ್ಲಿ ಸುಪ್ರೀಂ ಇದ್ದ ಹಾಗೆ. ಮಾಹಿತಿ ಹಕ್ಕನ್ನು ಸರಿಯಾಗಿ ಅರ್ಥೈಸಿಕೊಂಡು ಶೀಘ್ರ ಬಗೆಹರಿಸಬಹುದಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅನಿವಾರ್ಯವಾಗಿದ್ದು ನಿಭಾಯಿಸುವುದು ನಮ್ಮ ಕರ್ತವ್ಯ. ನಿಷ್ಠಾವಂತ ಆರ್‌ಟಿಐ ಅರ್ಜಿದಾರರಿಗೆ ವಂಚಿತತೆ, ದುರ್ಬಳಕೆ ಆಗುತ್ತಿರುವುದನ್ನ ತಡೆಯುವುದು ನಮ್ಮ ಅಧಿಕಾರಿಗಳ ಕರ್ತವ್ಯ ಕೂಡ ಆಗಿದೆ ಎಂದರು. ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ 25% ಟ್ಯಾರಿಫ್ – ‘ಸ್ವದೇಶಿ’ ವಸ್ತು ಖರೀದಿಸಿ: ಮೋದಿ ಕರೆ
ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ಮಾತನಾಡಿ, ಕಂದಾಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಈಗ ಎಲ್ಲವೂ ಆನ್ಲೈನ್ ಅಲ್ಲಿ ಸಿಗುವಂತೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ಮಾಹಿತಿಗಾಗಿ ಆರ್.ಸಿ.ಸಿ.ಎಂ.ಎಸ್ ಪೋರ್ಟಲ್ ಮತ್ತು ಭೂಮಿಗೆ ಸಂಬಂಧಪಟ್ಟ ಮಾಹಿತಿಗಾಗಿ ಭೂ ಸುರಕ್ಷಾ ಪೋರ್ಟಲ್ ಅಲ್ಲಿ ಮಾಹಿತಿ ಪಡೆಯಬಹುದು. ಸರ್ವೆ ದಾಖಲೆ ಕೂಡ ಈಗ ಸಿಗುತ್ತದೆ ಎಂದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಮುಖ್ಯ. ಅಧಿಕಾರಿಗಳು ಯಾವುದೇ ಭಯ ಪಡದೇ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ವಿಲೇವಾರಿ ಮಾಡಿ ಎಂದರು.
ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ನಟ ಪ್ರಥಮ್ (Pratham) ಹಾಗೂ ರಕ್ಷಕ್‌ಗೆ (Rakshak Bullet) ಸ್ಥಳ ಮಹಜರಿಗೆ ಬರುವಂತೆ ನೋಟಿಸ್ ನೀಡಿದ್ದಾರೆ.
ಇಂದು (ಗುರುವಾರ) 11 ಗಂಟೆಗೆ ದೊಡ್ಡಬಳ್ಳಾಪುರ (Doddaballapura) ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಸ್ಥಳ ಮಹಜರಿಗೆ ಹಾಜರಾಗುವಂತೆ ನಟ ಪ್ರಥಮ್, ರಕ್ಷಕ್ ಹಾಗೂ ಜಮೀನು ಮಾಲೀಕ ಮಹೇಶ್‌ಗೆ ನೋಟಿಸ್ ನೀಡಿದ್ದಾರೆ. ಸಾಕ್ಷಿಗಳ ಸಮ್ಮುಖದಲ್ಲಿ ಸ್ಪಾಟ್ ಮಹಜರು ಮಾಡುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ
ಸ್ಥಳ ಮಹಜರು ಬಳಿಕ ಪೊಲೀಸರು ಮತ್ತೊಂದಿಷ್ಟು ಸಾಕ್ಷಿಗಳನ್ನ ಸಂಗ್ರಹ ಮಾಡಿ ಆರೋಪಿತ ವ್ಯಕ್ತಿಗಳಾದ ರೌಡಿಶೀಟರ್ ಬೇಕರಿ ರಘು ಹಾಗೂ ಯಶಸ್ವಿನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಬುಧವಾರ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅವರ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
ಜುಲೈ 22ರ ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಬಂದಿದ್ದರು. ಈ ವೇಳೆ ಪ್ರಥಮ್ ರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದು ಹಲವು ದಿನಗಳ ನಂತರ ಖುದ್ದು, ಪ್ರಥಮ್ ನೇರವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಿದ್ದರು.
ಪ್ರಥಮ್ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೀವ ಬೆದರಿಕೆ ಹಾಕಲಾಗಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಥಮ್ ನೀಡಿದ ದೂರಿನಲ್ಲೇನಿದೆ.?
ಜುಲೈ 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ಅವರು ನನಗೆ ದೊಡ್ಡ ಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು 3:50 ಗಂಟೆಗೆ ನಾನು ವಾಪಸ್ ಬರುವ ವೇಳೆ ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಅಪರಿಚಿತರು ನನ್ನ ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ (ಗ್ರಾಮದ ಹೆಸರು ತಿಳಿದಿರುವುದಿಲ್ಲ. ಸ್ಥಳವನ್ನು ಗುರ್ತಿಸುತ್ತೇನೆ) ಕರೆದೊಯ್ದಿದ್ದರು. ದರ್ಶನ್ ಅವರನ್ನ ಕುರಿತು ನನ್ನ ಬಾಸ್ ಬಗ್ಗೆ, ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರ ಬಳಿ ಇದ್ದ ಡ್ರ‍್ಯಾಗರ್ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿ ಭಯಪಡಿಸಿರುತ್ತಾರೆ. ಇವರು ನನ್ನ ಬಳಿ ಗಲಾಟೆ ಮಾಡುವಾಗ, ಜೈಲಿನಲಿ.. ದರ್ಶನ್ ಜೊತೆ ಇದ್ದ ಬ್ಯಾರಕ್ ಪೋಟೋವನ್ನ ತೋರಿಸಿರುತ್ತಾರೆ. ಆ ನಂತರ ಅಲ್ಲಿಂದ ಬಹಳ ಉಪಾಯದಿಂದ ಪ್ರಾಣ ಉಳಿಸಿಕೊಂಡು ಬಂದಿದ್ದೆ ದೊಡ್ಡ ವಿಚಾರ. ಈ ವಿಚಾರವನ್ನ ನನ್ನ ಜೊತೆ ಇದ್ದ ನನ್ನ ಸ್ನೇಹಿತರಾದ ಮಹೇಶ್, ಪ್ರಮೋದ್ ಮತ್ತು ಚಾಲಕ ಪ್ರಕಾಶ್ ಇವರು ಖುದ್ದು ಮೇಲ್ಕಂಡ ವಿಚಾರಕ್ಕೆ ಸಾಕ್ಷಿಯಾಗಿರುತ್ತಾರೆ. ನನಗೆ ಜೀವ ಭಯವಿರುವುದರಿಂದ ರಕ್ಷಣೆ ನೀಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ
* ಭಾರತ-ಪಾಕ್ ನಡುವಿನ ಸಂಘರ್ಷ ಹಿನ್ನೆಲೆ ಹೆಚ್ಚಿನ ಆಯಿಲ್ ಸಂಗ್ರಹಿಸಿದ್ದ ಕಂಪನಿ
ನೆಲಮಂಗಲ: ಶಾರ್ಟ್ ಸರ್ಕ್ಯೂಟ್‌ನಿಂದ ಆಯಿಲ್ ಗೋದಾಮು ಬೆಂಕಿಗಾಹುತಿಯಾಗಿರುವ ಘಟನೆ ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಬಳಿ ಘಟನೆ ನಡೆದಿದೆ.
ಶೆಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮು ಧಗಧಗನೆ ಹೊತ್ತಿ ಉರಿದಿದೆ. ಬೆಳಗಿನ ಜಾವ ಮೂರು ಗಂಟೆಯಲ್ಲಿ ಈ ಅವಘಡ ಸಂಭವಿಸಿದೆ. ನೆಲಮಂಗಲ, ಪೀಣ್ಯಾ, ಯಶವಂತಪುರ ಭಾಗದ 8 ಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಕಿಯ ನರ್ತನ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಕ್ಕದ ಗೋದಾಮು ಮನೆಗೆ ಬೆಂಕಿ ತಗುಲುವ ಆತಂಕ ಎದುರಾಗಿದೆ. ಸರಿಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ ಆಗಿರಬಹುದು ಎನ್ನಲಾಗಿದೆ. 40 ಸಾವಿರ ಅಡಿಯಲ್ಲಿನ ಗೋದಾಮು ಸಂಪೂರ್ಣವಾಗಿ ಬೆಂಕಿಯಿಂದ ನಾಶವಾಗಿದೆ.
ಭಾರತ-ಪಾಕಿಸ್ತಾನ ನಡುವಿನ ಯುದ್ಧ ಆರಂಭ ಹಿನ್ನೆಲೆ ಹೆಚ್ಚಿನ ಸ್ಟಾಕ್ ಶೇಖರಣೆ ಮಾಡಲಾಗಿತ್ತು. ಯುದ್ಧದ ಪರಿಣಾಮವಾಗಿ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಶೇಖರಣೆ ಮಾಡಿತ್ತು. ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಂಗ್ರಹಣೆ ಮಾಡಲಾಗಿತ್ತು. ಆದರೆ, ಬೆಂಕಿ ಅವಘಡದಿಂದ ಆಯಿಲ್ ನಷ್ಟವಾಗಿದೆ. ಇದನ್ನೂ ಓದಿ: ಹಾವೇರಿ | ಬಿರುಗಾಳಿ ಸಹಿತ ಮಳೆ – ಸಿಡಿಲಬ್ಬರಕ್ಕೆ ಇಬ್ಬರು ಬಲಿ
ಕಂದಾಯ ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ಅಳಿಯ ಕೃಷ್ಣಪ್ಪ ಎಂಬವರಿಗೆ ಸೇರಿದ ಗೋದಾಮು ಇದು. ಇದನ್ನು ಶೆಲ್ ಕಂಪನಿಗೆ ಬಾಡಿಗೆಗೆ ನೀಡಲಾಗಿತ್ತು.
ಆನೇಕಲ್: ಆತ ಪ್ರೀತಿ ನೆಪದಲ್ಲಿ ಕೈಗೊಂದು ಕೂಸು ಕೊಟ್ಟು ಬೆಂಗಳೂರು ಸೇರಿಕೊಂಡಿದ್ದ. ಆಕೆ ದೂರದ ಒಡಿಶಾದಿಂದ ಹೆತ್ತವರ ಧಿಕ್ಕರಿಸಿ ಪತಿಗಾಗಿ ತವರು ಬಿಟ್ಟಿದ್ದಳು. ಆದರೆ, ತನಗಾಗಿ ಬಂದವಳನ್ನು ಪುಟ್ಟ ಮಗುವಿನ ಮುಂದೆಯೇ ತಡರಾತ್ರಿ ಪತಿಯೇ ಕೊಂದು ಮುಗಿಸಿ ಪರಾರಿಯಾಗಿದ್ದಾನೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ವಾಬಸಂದ್ರ ಬಳಿಯ ನಂಜಾರೆಡ್ಡಿ ಬಡಾವಣೆಯಲ್ಲಿ ತಡರಾತ್ರಿ ನಡೆದಿದೆ. ಒಡಿಶಾ ಮೂಲದ ಬರ್ಸಾ ಪ್ರಿಯದರ್ಶಿನಿ ಮೃತ ದುರ್ದೈವಿ. ಬಿಹಾರ ಮೂಲದ ಸೋಹನ್ ಕುಮಾರ್ ಪತ್ನಿಯನ್ನು ಕೊಂದ ಪಾಪಿ ಪತಿ. ಆರೋಪಿ ಸೋಹನ್ ಕುಮಾರ್ ಜೊತೆ ಬಾಳ್ವೆ ನಡೆಸಲು ಬರ್ಸಾ ಪ್ರಿಯದರ್ಶಿನಿ ಕಳೆದ ಶನಿವಾರ ಒಡಿಶಾದಿಂದ ಬಂದಿದ್ದಳು. ಆದರೆ, ನಿನ್ನೆ ರಾತ್ರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದ ಆರೋಪಿ ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಕುಡಿದ ನಶೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಆದರೆ, ಪುಟ್ಟ ಮಗು ಜೋರಾಗಿ ಅಳುತ್ತಿರುವುದನ್ನು ಗಮನಿಸಿ ಮನೆಯ ಮಾಲಕಿ ಹೊರ ಬಂದಿದ್ದು, ಆರೋಪಿ ಸೋಹನ್ ಕುಮಾರ್ ಪರಾರಿಯಾಗಿದ್ದಾನೆ.
ಮೃತ ಬರ್ಸಾ ಪ್ರಿಯದರ್ಶಿನಿ ಮತ್ತು ಸೋಹನ್ ಕುಮಾರ್ ಪರಸ್ಪರ ಪ್ರೀತಿಸಿ ತಮಿಳುನಾಡಿನಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಸೋಹನ್ ಕುಮಾರ್ ಸ್ವಗ್ರಾಮ ಬಿಹಾರಕ್ಕೆ ತೆರಳಿದ್ದರು. ಆದರೆ, ಸೋಹನ್ ಕುಮಾರ್ ಪೋಷಕರು ಬರ್ಸಾ ಪ್ರಿಯದರ್ಶಿನಿಯನ್ನು ತಮ್ಮ ಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅಲ್ಲಿಂದ ಪತ್ನಿ ತವರೂರು ಒಡಿಶಾಗೆ ಬಂದಿದ್ದ ಸೋಹನ್ ಕುಮಾರ್ ಆರೇ ತಿಂಗಳಿಗೆ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಪತ್ನಿಗೆ ಗಂಡು ಮಗು ಜನಿಸಿದರೂ, ಅತ್ತ ತಲೆ ಕೂಡ ಹಾಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಬರ್ಸಾ ಪ್ರಿಯದರ್ಶಿನಿ ಪೋಷಕರು ಬೇರೆ ಮದುವೆ ಆಗುವಂತೆ ಒತ್ತಾಯಿಸಿದ್ದರು. ಆದರೆ, ಪತಿಯೇ ಬೇಕು ಎಂದು ಹೆತ್ತವರ ಧಿಕ್ಕರಿಸಿ ಬೆಂಗಳೂರಿಗೆ ಬಂದು ಕೊಲೆಯಾಗಿ ಹೋಗಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಆಕ್ಸ್‌ಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
ಆನೇಕಲ್: 30 ಅಡಿ ಆಳದ ಬಾವಿಗೆ ಬಿದ್ದು ನರಳಾಡುತ್ತಿದ್ದ ಎರಡು ಕಾಡಾನೆಗಳನ್ನು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ ಕುಂಡಲಂ ಗ್ರಾಮದ ಬಳಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಜವಳಗೆರೆ ಕಾಡಿನಿಂದ ಆಹಾರ ಹರಿಸಿ ರೈತರ ಜಮೀನುಗಳಿಗೆ ನುಗ್ಗಿದ್ದವು. ಸಂಜೆಯಾದರೂ ಕಾಡಿನತ್ತ ಮುಖ ಮಾಡದೇ ಅಲ್ಲಿಯೇ ಉಳಿದಿದ್ದ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಪಟಾಕಿ ಸಿಡಿಸಿದ್ದರಿಂದ ರೈತರ ತೋಟಗಳಿಗೆ ನುಗ್ಗಿದ್ದವು. ಈ ವೇಳೆ ಆಯಾತಪ್ಪಿ ಮರಿ ಆನೆ ಹಾಗೂ ಸಲಗ 30 ಅಡಿ ಆಳದ ಬಾವಿಗೆ ಬಿದ್ದಿದ್ದವು.ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಧೂಳಿನ ಬಿರುಗಾಳಿ – ಧರೆಗುರುಳಿದ ಮರಗಳು, 15 ವಿಮಾನಗಳ ಮಾರ್ಗ ಬದಲಾವಣೆ
ಉಳಿದ ಕಾಡಾನೆಗಳು ಕಾಡಿನತ್ತ ಹೊರಟು ಹೋದರೆ ಮರಿ ಆನೆಗಾಗಿ ಬಾವಿ ಬಳಿಯೇ ತಾಯಿ ಆನೆ ರೋಧಿಸುತ್ತಾ ನಿಂತ್ತಿತ್ತು. ಕಾಡಾನೆಯ ರೋಧನೆಯನ್ನು ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಬಾವಿ ಬಳಿ ತೆರಳಿದ್ದು, ಬಾವಿಯಿಂದ ಹೊರಬರಲು ಹರಸಾಹಸಪಡುತ್ತಿರುವುದನ್ನು ಗಮನಿಸಿದ್ದಾರೆ.
ಕೂಡಲೇ ಎರಡು ಜೆಸಿಬಿಗಳ ಮೂಲಕ ತಡರಾತ್ರಿಯವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ತಾಯಿ ಆನೆಯ ಅಡಚಣೆ ನಡುವೆಯೂ ದಾರಿ ಮಾಡಿ ಬಾವಿಯಿಂದ ಸಲಗ ಮತ್ತು ಮರಿ ಆನೆಗೆ ಹೊರಬರಲು ವ್ಯವಸ್ಥೆ ಮಾಡಿದ್ದಾರೆ. ಸಲಗದ ಜೊತೆ ಮರಿ ಆನೆ ಹೊರಬರುತ್ತಿದ್ದಂತೆ ತಾಯಿ ಆನೆ ಮರಿಯನ್ನು ಕಾಡಿನತ್ತ ಕರೆದೊಯ್ದಿದ್ದು, ಅರಣ್ಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ; ಸಿಡಿಲಿಗೆ ಮೂವರು ಬಲಿ
ನೆಲಮಂಗಲ: ಮದುವೆಯಾಗಿ 13 ವರ್ಷದ ನಂತರ ಇನ್‌ಸ್ಟಾದಲ್ಲಿ ಪರಿಚಯವಾದವನೊಂದಿಗೆ ಪತ್ನಿ ಎಸ್ಕೇಪ್ ಆಗಿ, ಎರಡನೇ ಮದುವೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ (Nelamangala) ನಡೆದಿದೆ.
ಕಳೆದ 1 ವಾರದ ಹಿಂದೆ ಇನ್‌ಸ್ಟಾದಲ್ಲಿ ನೇತ್ರಾವತಿಗೆ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯವು ಪ್ರೀತಿಗೆ ತಿರುಗಿತ್ತು. ನೇತ್ರಾವತಿಯು ಕೆಲವೇ ದಿನಗಳ ಪ್ರೀತಿಗಾಗಿ ಮೊದಲ ಪತಿಗೆ ಕೈಕೊಟ್ಟು, ಸಂತೋಷ್ ಜೊತೆ ದೇವಾಲಯಲ್ಲಿ ಎರಡನೇ ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ವೀಡಿಯೋವನ್ನು ನೋಡಿ ಮೊದಲ ಪತಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!
ನೇತ್ರಾವತಿ ವಿರುದ್ಧ ನೆಲಮಂಗಲ ಟೌನ್ ಪೋಲೀಸ್ ಠಾಣೆಯಲ್ಲಿ (Nelamangala Town Police Station) ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಆತನ ಕುಟುಂಬ ದೂರು ನೀಡಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!
ಈ ಹಿಂದೆ ನೇತ್ರಾವತಿಯು ಪತಿ ಕುಡಿದು ಹೊಡೆಯುತ್ತಾನೆ ಎಂದು ದೂರು ನೀಡಿ, ಪತಿಯನ್ನು ಮನೆಯಿಂದ ಹೊರಗೆ ಹಾಕಿರುವ ವಿಷಯವೂ ಬೆಳಕಿಗೆ ಬಂದಿದೆ.
– ಅತ್ತೆ ಮಗಳನ್ನೇ ಕೊಂದು ಈಗ ಪಶ್ಚಾತಾಪ
– ಆರೋಪಿಗೆ 14 ದಿನ ಜೈಲು
ಬೆಂಗಳೂರು: ಹೆಂಡ್ತಿಯನ್ನ ಕೊಂಡು ಪೀಸ್ ಪೀಸ್ ಮಾಡಿ, ತುಂಡರಿಸಿದ ಮೃತದೇಹವನ್ನ ಸೂಟ್‌ಕೇಸ್‌ನಲ್ಲಿಟ್ಟು ಎಸ್ಕೇಪ್ ಆಗಿದ್ದ ಟೆಕ್ಕಿ ಹಂತಕನನ್ನ ಕೊನೆಗೂ ಪೊಲೀಸರು ಬೆಂಗಳೂರಿಗೆ (Bengaluru) ಕರೆ ತಂದಿದ್ದಾರೆ.
ಸ್ವಂತ ಅತ್ತೆ ಮಗಳನ್ನ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದ ಟೆಕ್ಕಿ, ಇದೀಗ ಕೊಲೆ ಮಾಡಿ ಪಶ್ಚಾತ್ತಾಪದಲ್ಲಿದ್ದಾನೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ (Hulimavu Police Station) ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಪತ್ನಿ ಗೌರಿಯನ್ನು ಕೊಂದು ಸೂಟ್ ಕೇಸ್ಗೆ ತುಂಬಿದ್ದ ಆರೋಪಿ ಟೆಕ್ಕಿ ರಾಕೇಶ್ ನನ್ನ ನಿನ್ನೆ ರಾತ್ರಿಯೇ ಕೋರಮಂಗಲದ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಿದ್ದಾರೆ. ಇದನ್ನೂ ಓದಿ: ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು
ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ ಟೆಕ್ಕಿ ರಾಕೇಶ್. ನಾಳೆ ಓಪನ್ ಕೋರ್ಟ್ ನಲ್ಲಿ ಬಾಡಿ ವಾರೆಂಟ್ ಮೇಲೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಪೊಲೀಸ್ರು ಸಿದ್ಧತೆ ಮಾಡ್ಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!
ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿ
ಕೊಲೆ ಮಾಡಿ ಪುಣೆ ಕಡೆ ಹೋಗ್ತಿದ್ದ ಆರೋಪಿ ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ ಕಾಗಲ್ ಎಂಬಲ್ಲಿ ವಿಷ ಖರೀದಿಸಿದ್ದ. ಪೆನಾಯಿಲ್ ಮತ್ತು ಜಿರಲೆ ಔಷಧಿಯನ್ನ ಖರೀದಿ ಮಾಡಿಟ್ಟುಕೊಂಡು ಮುಂದೆ ಸಾಗಿದ್ದ. ಶಿರವಾಲ್‌ಗೆ ಹೋಗುವ ದಾರಿಯಲ್ಲಿ ಖಂಬಟ್ಕಿ ಎಂಬಲ್ಲಿ ಕಾರು ನಿಲ್ಲಿಸಿ ವಿಷ ಸೇವನೆ ಮಾಡಿದ್ದ. ವಿಷ ಸೇವಿಸಿದ ಕೂಡಲೇ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿತ್ತು. ಈತನನ್ನ ನೋಡಿ ಏನಾಯ್ತು ಎಂದು ಕೇಳಿದ ಬೈಕ್ ಸವಾರನಿಗೆ ಕೊಲೆ ಮಾಡಿದ್ದ ಕಥೆ ಹೇಳಿದ್ದ. ಅಲ್ಲದೇ ತಾನು ವಿಷ ಸೇವನೆ ಮಾಡಿರೋದಾಗಿ ಹೇಳಿದ್ದ. ಕೂಡಲೇ ರಾಕೇಶ್ ನನ್ನ ಬೈಕ್ ನಲ್ಲೆ ಆಸ್ಪತ್ರೆಗೆ ದಾಖಲಿಸಿದ್ದ. ಇದನ್ನೂ ಓದಿ: ಆನೇಕಲ್ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್
ಇನ್ನು ಘಟನೆ ಬಗ್ಗೆ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೇಡೆಕರ್ ಹೇಳಿಕೆ ನೀಡಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರ್ಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡ್ಕೊಂಡಿದ್ಲು. ಸ್ವಭಾವತಃ ಗೌರಿ ಜಗಳ ಪ್ರೌವೃತ್ತಿಯವಳಾಗಿದ್ಲು, ಎರಡು ವರ್ಷದ ಹಿಂದೆ ವಿರೋಧದ ನಡುವೆಯೂ ಮದುವೆ ಆಗಿದ್ರು. ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡ್ತಿದ್ಲು. ಗಂಡ-ಹಂಡತಿ ಜಗಳ ಪೊಲೀಸ್ ಠಾಣೆವರೆಗೂ ಹೋಗಿತ್ತು. ರಾಕೇಶ್ ಕೊಲೆ ಮಾಡಿದೀನಿ ಅಂತಾ ಗುರುವಾರ ನನಗೆ ಕಾಲ್ ಮಾಡಿ ಹೇಳಿದ್ದ. ಅಲ್ಲದೇ ತಾನೂ ಕೂಡ ಆತ್ಮಹತ್ಯೆ ಮಾಡ್ಕೊಳ್ತಿದೀನಿ ಅಂತಾ ಹೇಳಿದ್ದ. ನಿನ್ನ ನಿರ್ಧಾರ ತುಂಬಾ ಕಠಿಣವಾಗಿದೆ ಅಂತಾ ನಾನು ಹೇಳಿದ್ದೆ. ಗೌರಿ ತಾಯಿ ಮತ್ತು ಮುಂಬೈನ ಮೆಗವಾಡಿ ಪೊಲೀಸ್ರಿಗೆ ಘಟನೆ ಬಗ್ಗೆ ತಿಳಿಸಿದ್ದೆ. ನಂತರ ಶಿರವಾಲ್ ಪೊಲೀಸ್ರು ಆತನನ್ನ ಪತ್ತೆ ಹಚ್ಚಿದ್ರು ಅಂತಾ ಆರೋಪಿ ರಾಕೇಶ್ ತಂದೆ ರಾಜೇಂದ್ರ ಹೇಳಿಕೆ ನೀಡಿದ್ದಾರೆ.
ಆನೇಕಲ್: ಹೆಣ್ಣಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆದ ಮೂರು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಬಾಗಲೂರು ರಸ್ತೆಯ ಪೋರ್ ವಾಲ್ಸ್ ಅವೆನ್ಯೂ ಹೆಸರಿನ ನಿರ್ಮಾಣ ಹಂತದ ಅಪಾರ್ಟ್ಮೆಂಟ್‌ನಲ್ಲಿ ಮೂವರ ಬರ್ಬರ ಹತ್ಯೆಯಾಗಿತ್ತು. ಬಿಹಾರ ಮೂಲದ ಅನ್ಶು (20), ರಾಧೆಶ್ಯಾಮ್ (20), ದೀಪು (18) ಮೃತಪಟ್ಟಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಸೋನು ಮತ್ತು ಸುಧೀರ್ ಇಬ್ಬರನ್ನ ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
ಹೋಳಿ ಹಬ್ಬದ ಅಂಗವಾಗಿ ಬಿಹಾರ ಮೂಲದ ಕಟ್ಟಡ ಕಾರ್ಮಿಕರಿಗೆ ರಜೆ ಸಿಕ್ಕ ಖುಷಿಯಲ್ಲಿ ದೊಡ್ಡ ಕನ್ನಲ್ಲಿ ಬಳಿ ಅಪಾರ್ಟ್ಮೆಂಟ್‌ನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮದೇ ಊರಿನವರಾದ ಆರೋಪಿ ಸೋನು ಮತ್ತು ಸುಧೀರ್ನ ಎಣ್ಣೆ ಪಾರ್ಟಿಗೆ ಕರೆದಿದ್ದರು. ಪಾರ್ಟಿ ಏಂಜಾಯ್ ಮಾಡಲು ಆರೇಳು ಜನರು ಸರ್ಜಾಪುರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸೇರಿದ್ದರು. ಎಣ್ಣೆ ಪಾರ್ಟಿ ಮಾಡುವಾಗ ನಡೆದ ಗಲಾಟೆ ಮೂವರ ಕೊಲೆಯಲ್ಲಿ ಅಂತ್ಯವಾಗಿತ್ತು. ಹೋಳಿ ಹಬ್ಬದ ದಿನ ರಕ್ತದೋಕುಳಿ ಹರಿಸಿ ಪರಾರಿಯಾಗಿದ್ದ ಆರೋಪಿಗಳಾದ ಸೋನು ಮತ್ತು ಸುಧೀರ್ನ ಬಂಧಿಸುವಲ್ಲಿ ಸರ್ಜಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಣ್ಣೆ ಪಾರ್ಟಿಯಲ್ಲಿ ನಶೆ ನೆತ್ತಿಗೇರುತ್ತಿದ್ದಂತೆ ಕೊಲೆಯಾದ ಅನ್ಶು ತನ್ನ ಸ್ನೇಹಿತ ಸುಧೀರ್ ತಂಗಿಗೆ ಫೋನ್ ಮಾಡಿ ಲೌಡ್‌ಸ್ಪೀಕರ್ ಇಟ್ಟು ಅಸಭ್ಯವಾಗಿ ಮಾತನಾಡೋದಕ್ಕೆ ಶುರು ಮಾಡಿದ್ದ. ಈ ಹಿಂದೆಯೂ ಸಹ ನನ್ನ ತಂಗಿಯ ಜೊತೆ ಈ ರೀತಿ ಎಲ್ಲಾ ಮಾತನಾಡಬೇಡ ಅಂತ ಸುಧೀರ್ ಸ್ನೇಹಿತ ಅನ್ಶುಗೆ ಹೇಳಿದ್ದ. ಆದರೂ ಸುಮ್ಮನಾಗದ ಅನ್ಶು ಎಣ್ಣೆ ಪಾರ್ಟಿಯಲ್ಲಿ ಪದೇ ಪದೇ ಫೋನ್ ಮಾಡುತ್ತಿದ್ದ. ಇದು ಸುಧೀರ್ ಕಣ್ಣು ಕೆಂಪಾಗಿಸಿತ್ತು. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಪಾರ್ಟಿ ಮಾಡಲು ಬಂದಿದ್ದ ನಾಲ್ವರ ಮೇಲೆ ಸೋನು, ಸುಧೀರ್ ಸೇರಿ ಕೈಗೆ ಸಿಕ್ಕ ದೊಣ್ಣೆ ಮತ್ತು ಕಬ್ಬಿಣದ ರಾಡ್‌ನಿಂದ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.
ನಶೆ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್ಮೆಂಟ್‌ನ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ಅನ್ಶು, ದೀಪು, ರಾಧೆಶ್ಯಾಮ್ ಸಾವಿಗೀಡಾದ ಆರೋಪಿಗಳು ಕೃತ್ಯ ನಡೆಸಿ ಹೊರರಾಜ್ಯಕ್ಕೆ ಕಾಲ್ಕಿತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸರ್ಜಾಪುರ ಪೊಲೀಸರು ಹಲವು ಸಾಕ್ಷ್ಯಗಳನ್ನ ಕಲೆಹಾಕಿದ್ದರು. ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನ ರಚನೆ ಮಾಡಿ ಆರೋಪಿಗಳ ಬೆನ್ನು ಬಿದ್ದಿದ್ದ ಸರ್ಜಾಪುರ ಪೊಲೀಸರು, ಟ್ರೈನ್ ಮೂಲಕ ಹೊರರಾಜ್ಯಕ್ಕೆ ಎಸ್ಕೇಪ್ ಆಗುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟಿದ್ದಾರೆ.
ಮುಂಬೈ: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ತುಂಡು ಮಾಡಿ ಸೂಟ್‍ಕೇಸ್‍ಗೆ ತುಂಬಿದ್ದ ಆರೋಪಿ ರಾಕೇಶ್ ಬಂಧನವಾಗಿದ್ದು, ಆತ ವಿಷ ಸೇವಿಸಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ರಾಕೇಶ್ ವಿಷ ಕುಡಿದು ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದರಿಂದಾಗಿ ಆರೋಪಿಯನ್ನ ಇಂದು (ಶುಕ್ರವಾರ) ಬೆಂಗಳೂರಿಗೆ ಕರೆದುಕೊಂಡು ಬರುವುದು ಅನುಮಾನವಾಗಿದೆ. ಪುಣೆ ಪೊಲೀಸರು ಆರೋಪಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಆನೇಕಲ್ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್
ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಪತಿ ಮೇಲೆ ಹತ್ಯೆಯಾದ ಗೌರಿ ಚಾಕು ಎಸೆದಿದ್ದಳು. ಅದೇ ಚಾಕುವಿನಿಂದ ಪತ್ನಿಯ ಹತ್ಯೆ ಮಾಡಿ ಹೊಟ್ಟೆ, ಕತ್ತು ಕತ್ತರಿಸಿ ಸೂಟ್ ಕೇಸ್ಗೆ ತುಂಬಿದ್ದ. ಕೂಡಲೇ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆಯಲ್ಲಿ ಊಟ ಮಾಡಿದ್ದ. ಬಳಿಕ ರಾತ್ರಿ 11 ಗಂಟೆಗೆ ಕಾರಿನಲ್ಲಿ ಮೃತದೇಹ ಸಾಗಿಸುವ ಪ್ಲ್ಯಾನ್ ಮಾಡಿದ್ದ. ಆದರೆ ಅದು ಸಕ್ಸಸ್ ಆಗೋದಿಲ್ಲ. ಬಳಿಕ ಬಾತ್ ರೂಮ್‍ನಲ್ಲಿ ಮೃತದೇಹ ಇಟ್ಟು ರಾಕೇಶ್ ಪರಾರಿಯಾಗಿದ್ದ. ಇದನ್ನೂ ಓದಿ: ಆನೇಕಲ್| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ
ಹತ್ಯೆಯಾದ 16 ಗಂಟೆಗಳ ಬಳಿಕ ಆರೋಪಿಯೇ ಪಕ್ಕದ ಮನೆಯ ಬಾಡಿಗೆದಾರನಿಗೆ ಕರೆ ಮಾಡಿ, ವಿಚಾರ ಹೇಳಿದ್ದ. ನಂತರ ಮೃತಳ ಕುಟುಂಬಸ್ಥರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಬಳಿಕ ಮನೆಯ ಮಾಲೀಕರಿಗೆ ಮಾಹಿತಿ ದೊರೆತಿದ್ದು, ಪೊಲೀಸರಿಗೆ ಮಾಹಿತಿ ನಿಡಲಾಗಿತ್ತು.