Tag: bengaluru rural

  • ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿ ಬರೋವಾಗ ಡಿವೈಡರ್‌ಗೆ ಕಾರು ಡಿಕ್ಕಿ- ಸ್ಥಳದಲ್ಲೇ ಮೂವರ ದುರ್ಮರಣ

    ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿ ಬರೋವಾಗ ಡಿವೈಡರ್‌ಗೆ ಕಾರು ಡಿಕ್ಕಿ- ಸ್ಥಳದಲ್ಲೇ ಮೂವರ ದುರ್ಮರಣ

    ಬೆಂಗಳೂರು: ಡಿವೈಡರ್‌ಗೆ ಟಾಟಾ ಸಫಾರಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮೈಲಾಪುರ ಗೇಟ್ ಬಳಿ ನಡೆದಿದೆ.

    ಬೆಳಗಿನ ಜಾವ ಮೂರು ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಆಂಧ್ರ ಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ. ಆಂಧ್ರದ ಪಶ್ಚಿಮ ಗೋದಾವರಿ ಮೂಲದ ಶ್ರೀನಾಥ್(40), ಶ್ರೀಲೇಖಾ(36), ಶ್ರೀಲತಾ(32) ಮೃತ ದುರ್ದೈವಿಗಳು.

    ಹೊಸ ವರ್ಷಾಚರಣೆ ಮುಗಿಸಿ ಆಂಧ್ರದಿಂದ ಬೆಂಗಳೂರಿನ ವೈಟ್ ಫೀಲ್ಡ್ ನತ್ತ 5 ಮಂದಿ ಕಾರಿನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹೊಸಕೋಟೆ ತಾಲೂಕಿನ ಮೈಲಾಪುರ ಗೇಟ್ ಬಳಿ ಬರುತ್ತಿದ್ದ ವೇಳೆ ಡಿವೈಡರ್‌ಗೆ ಟಾಟಾ ಸಫಾರಿ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ನಕಲಿ ಪೊಲೀಸ್ ಗ್ಯಾಂಗ್‍ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್

    ಈ ನಕಲಿ ಪೊಲೀಸ್ ಗ್ಯಾಂಗ್‍ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್

    -ಗೋಲ್ಡ್ ಬಿಸ್ಕಟ್ ಕೊಡ್ತೀನಿ ಅಂತಾ ಹೇಳಿ ಕಿಡ್ನ್ಯಾಪ್ ಮಾಡ್ತಾರೆ

    ಚಿಕ್ಕಬಳ್ಳಾಪುರ: ಚಿನ್ನದ ವ್ಯಾಪಾರಿಯನ್ನ ಅಪಹರಣ ಮಾಡಿ ಅವರ ಬಳಿ ಇದ್ದ ಹಣ ಸುಲಿಗೆ ಮಾಡಿದ್ದ ನಕಲಿ ಪೊಲೀಸರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಆರ್.ಟಿ ಮಣಿ (45), ಸಂಪಂಗಿರಾಮ್(38), ಶ್ರೀನಿವಾಸ್(48), ರಾಮಾಂಜಿನೇಯ ರೆಡ್ಡಿ(28), ಸುರೇಶ್(42), ಆರ್ ಸೋಮು (52), ಜಿ ವೇಣುಗೋಪಾಲ್(40) ಬಂಧಿತರು. ಬಂಧಿತರಿಂದ 9 ಎಂಎಂ ನ ಪಿಸ್ತೂಲು, 10 ಜೀವಂತ ಗುಂಡುಗಳು ಹಾಗೂ 25 ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ: ಮೂಲತಃ ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಧರಣಿಧರನ್ ಎಂಬವರಿಗೆ ಕರೆ ಮಾಡಿದ್ದ ಆರೋಪಿಗಳು ತಮ್ಮ ಬಳಿ ಚಿನ್ನದ ಬಿಸ್ಕೆಟ್ ಇವೆ. ಮಾರಾಟ ಮಾಡುತ್ತೇವೆ ಎಂದು ದೇವನಹಳ್ಳಿಗೆ ಕರೆಸಿಕೊಂಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ದೇವನಹಳ್ಳಿ ಬಂದ ಧರಣಿಧರನ್ ಅವರನ್ನು ಸೆ. 19 ರಂದು ದೇವನಹಳ್ಳಿಯ ರೈಲ್ವೇ ಟ್ರ್ಯಾಕ್ ಬಳಿ ಅಪಹರಣ ಮಾಡಿ, ಅವರ ಬಳಿ ಇದ್ದ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು. ಅಚ್ಚರಿ ಅಂದರೆ ಆರೋಪಿಗಳು ಪೊಲೀಸ್ ವಾಹನ ಮಾದರಿಯ ಬೊಲೇರೊ ಜೀಪ್ ಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಚಿನ್ನದ ವ್ಯಾಪಾರಿ ಧರಣಿಧರನ್ ರನ್ನು ಅಪಹರಣ ಮಾಡಿದ್ದರು.

    ಈ ಕುರಿತು ಧರಣಿಧರನ್ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಸಹ ಇದೇ ಮಾದರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಕೃತ್ಯದ ಬಗ್ಗೆ ಅನುಮಾನಗೊಂಡು ಹಳೆಯ ಗ್ಯಾಂಗ್ ಬಗ್ಗೆ ತನಿಖೆ ನಡೆಸಿದ ವೇಳೆ ಏಳು ಮಂದಿ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್: ಹಣಕ್ಕಾಗಿ ಚಿನ್ನದ ವ್ಯಾಪಾರಿಗಳನ್ನು ಕಿಡ್ನಾಪ್ ಮಾಡಿ ಹಣ ದರೋಡೆ ಮಾಡುವುದೇ ಇವರ ಕೆಲಸವಾಗಿತ್ತು. ಅದೇ ರೀತಿ ಧರಣಿಧರನ್ ಅವರಿಗೂ ಫೋನ್ ಮಾಡಿದ ಆರೋಪಿಗಳು ಮೊದಲು ಅಸಲಿ ಚಿನ್ನದ ನಾಣ್ಯವನ್ನು ತೋರಿಸಿ ಧರಣಿಧರ್ ಅವರನ್ನು ನಂಬಿಸಿದರು. ಬಳಿಕ ಹೆಚ್ಚಿನ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ಪೊಲೀಸ್ ವೇಷದಲ್ಲಿ ಅಪಹರಣ ಮಾಡಿದ್ದರು.

    ಅಪಹರಣ ಮಾಡಿದ ಬಳಿಕ ಧರಣಿಧರ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಬಳಿಕ ಪೊಲೀಸ್ ಬೋರ್ಡ್ ಇರುವ ಬುಲೆರೋ ವಾಹನದಲ್ಲಿ ವಿಜಯಪುರ ರಸ್ತೆಯಲ್ಲಿ ಧರಣಿದರನ್ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದು, ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲೆನೋವಿಗೆ ಆಸ್ಪತ್ರೆಗೆ ದಾಖಲಾದ ಯುವಕ ಸಾವು- ರೊಚ್ಚಿಗೆದ್ದ ಸಂಬಂಧಿಕರಿಂದ ಕಲ್ಲು ತೂರಾಟ

    ತಲೆನೋವಿಗೆ ಆಸ್ಪತ್ರೆಗೆ ದಾಖಲಾದ ಯುವಕ ಸಾವು- ರೊಚ್ಚಿಗೆದ್ದ ಸಂಬಂಧಿಕರಿಂದ ಕಲ್ಲು ತೂರಾಟ

    ಚಿಕ್ಕಬಳ್ಳಾಪುರ: ತೀವ್ರ ತಲೆನೋವು, ಆಯಾಸ ಆಗುತ್ತಿದೆ ಅಂತ ಯುವಕನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಆತನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತನ ಕುಟುಂಬದವರು ಆಸ್ಪತ್ರೆಯ ಮೇಲೆ ಕಲ್ಲು ತೂರಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

    ಶಿಡ್ಲಘಟ್ಟ ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ಆಕಾಶ್(19) ಮೃತ ಯುವಕ. ಕಳೆದ ಬುಧವಾರ ಆಕಾಶ್‍ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾನೆ.

    ಆಕಾಶ್‍ಗೆ ಪ್ಲೇಟ್ ಲೇಟ್ ಕಡಿಮೆಯಿದ್ದು, ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದ ಎನ್ನಲಾಗಿದೆ. ನಮ್ಮ ಮಗನನ್ನು ನಿಮ್ಮ ಕೈಯಲ್ಲಿ ಉಳಿಸಲು ಆಗಲ್ಲ ಅಂದ ಮೇಲೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಹೇಳಬೇಕಿತ್ತು. ಅದನ್ನು ಬಿಟ್ಟು ಚೆನ್ನಾಗಿದ್ದಾನೆ, ಹುಷಾರಾಗುತ್ತಾನೆ ಎಂದು ಎರಡು ದಿನ ಚಿಕಿತ್ಸೆ ನೀಡುವ ನಾಟಕ ಮಾಡಿದ್ದು ಏಕೆ ಎಂದು ಪ್ರಶ್ನಿಸಿ ಆಕಾಶ್ ಸಂಬಂಧಿಕರು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಳಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿದ ಮೃತನ ಸಂಬಂಧಿಕರು, ಆಸ್ಪತ್ರೆಯ ಕಿಟಕಿ, ಬಾಗಿಲುಗಳ ಮೇಲೆ ಕಲ್ಲು ತೂರಿ ಗಾಜು ಒಡೆದಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ಈ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಮೃತ ಆಕಾಶ್ ಸಂಬಂಧಿಕರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು. ಸ್ವಲ್ಪ ಸಮಯದ ನಂತರ ಇಬ್ಬರೂ ರಾಜಿ ಮೂಲಕ ಇತ್ಯರ್ಥ ಪಡಿಸಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾಗಲು ಪ್ರಿಯತಮೆಯ 9 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಂದೇಬಿಟ್ಟ!

    ಮದ್ವೆಯಾಗಲು ಪ್ರಿಯತಮೆಯ 9 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಂದೇಬಿಟ್ಟ!

    ಬೆಂಗಳೂರು: ಮದುವೆಯಾಗಲು ಪ್ರಿಯತಮೆ ಹಾಗೂ ಆಕೆಯ ಮಗ ಅಡ್ಡಿಯಾದ ಕಾರಣ 9 ವರ್ಷದ ಬಾಲಕನನ್ನು ಅಮಾನುಷವಾಗಿ ಕೊಲೆ ಮಾಡಿ, ಪ್ರಿಯತಮೆಯ ಕೊಲೆಗೆ ಯತ್ನಿಸಿರುವ ಘಟನೆ ಹೊಸಕೋಟೆ ತಾಲೂಕಿನ ವಾಗಟ ಗ್ರಾಮದಲ್ಲಿ ನಡೆದಿದೆ.

    9 ವರ್ಷದ ಗೌತಮ್ ಮೃತ ದುರ್ದೈವಿಯಾಗಿದ್ದು, ಹೊಸಕೋಟೆ ಅತ್ತಿವಟ್ಟ ಗ್ರಾಮದ ನಿವಾಸಿಯಾಗಿರುವ ರಾಮಮೂರ್ತಿ ಕೊಲೆ ಮಾಡಿದ ಆರೋಪಿ. ಇನ್ನು ಘಟನೆಯಲ್ಲಿ ಆರೋಪಿ ಮೂರ್ತಿ ಪ್ರಿಯತಮೆ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಏನಿದು ಪ್ರಕರಣ?
    ಕಳೆದ ಕೆಲ ವರ್ಷಗಳ ಹಿಂದೆ ಜ್ಯೋತಿ ವ್ಯಕ್ತಿಯೊಬ್ಬರನ್ನು ಮುವೆಯಾಗಿದ್ದು ಇಬ್ಬರ ದಾಂಪತ್ಯ ಜೀವನಕ್ಕೆ ಗಂಡು ಮಗು ಜನಿಸಿತ್ತು. ಕೆಲ ದಿನ ಸಂಸಾರ ಮಾಡಿದ್ದ ಪತಿ ಜ್ಯೋತಿಯನ್ನು ಬಿಟ್ಟು ಹೋಗಿದ್ದ. ಗಂಡ ಬಿಟ್ಟು ಹೋದ ಬಳಿಕ ಜ್ಯೋತಿ ಅತ್ತಿಮಟ್ಟ ನಿವಾಸಿ ರಾಮಮೂರ್ತಿ ಜೊತೆ ಆಕ್ರಮ ಸಂಬಂಧ ಹೊಂದಿದ್ದಳು.

    ಈ ನಡುವೆ ರಾಮಮೂರ್ತಿಗೆ ಆತನ ಪೋಷಕರು ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ತಾನು ಮದುವೆಯಾಗಲು ಪ್ರಿಯತಮೆ ಹಾಗೂ ಆಕೆಯ ಮಗ ಅಡ್ಡ ಬಂದ ಕಾರಣ ಇಬ್ಬರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಲೆ ಮಾಡಲು ಪ್ಲಾನ್ ಮಾಡಿದ್ದ ಆತ ತನ್ನ ಸ್ನೇಹಿತರ ಜೊತೆ ಚರ್ಚೆ ನಡೆಸಿ ಕೃತ್ಯಕ್ಕೆ ಸಂಚು ರೂಪಿಸಿದ್ದ.

    ಕಳೆದ ಮೂರು ದಿನಗಳ ಹಿಂದೆ ಸ್ನೇಹಿತರ ಸಹಾಯದಿಂದ ಗ್ರಾಮದ ಹೊರ ವಲಯಕ್ಕೆ ಇಬ್ಬರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಗೌತಮ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮೃತ ದೇಹವನ್ನು ವಾಗಟ ಗ್ರಾಮದ ಬಳಿ ಪೊದೆಯಲ್ಲಿ ಎಸೆದು ಬಂದಿದ್ದ.

    ಬಳಿಕ ಪ್ರಿಯತಮೆಯನ್ನು ಕೊಲೆ ಮಾಡಲು ಯತ್ನಿಸಿ ಆಕೆಯ ತಲೆಗೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಇದ್ದರಿಂದ ಸ್ಥಳದಲ್ಲೇ ಜ್ಯೋತಿ ಕುಸಿದು ಬಿದಿದ್ದಳು. ಇದನ್ನು ಕಂಡ ಆರೋಪಿ ರಾಮಮೂರ್ತಿ, ಜ್ಯೋತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಸ್ಥಳದಿಂದ ಪರಾರಿಯಾಗಿದ್ದ.

    ಮಾರಣಾಂತಿಕವಾಗಿ ಹಲ್ಲೆಗೆ ಗುರಿಯಾಗಿದ್ದ ಜ್ಯೋತಿ ಪ್ರಜ್ಞೆ ಬಂದ ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಗೌತಮ್ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ ಬಳಿಕ ಆತನ ದೇಹ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿದ್ದರು.

    ತನಿಕೆ ವೇಳೆ ಘಟನೆಯ ಸತ್ಯಾಂಶ ಹೊರ ಬಂದಿದ್ದು ಆರೋಪಿ ರಾಮಮೂರ್ತಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಘಟನೆಯ ಕುರಿತು ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • 2019ರ ಚುನಾವಣೆಗೆ ರಣತಂತ್ರ- ಬೆಂಗಳೂರು ಗ್ರಾಮಾಂತರದಲ್ಲಿ ಕಮಲ ಅರಳಿಸಲು ಬರ್ತಾರೆ ಜೇಟ್ಲಿ

    2019ರ ಚುನಾವಣೆಗೆ ರಣತಂತ್ರ- ಬೆಂಗಳೂರು ಗ್ರಾಮಾಂತರದಲ್ಲಿ ಕಮಲ ಅರಳಿಸಲು ಬರ್ತಾರೆ ಜೇಟ್ಲಿ

    ಬೆಂಗಳೂರು: ಪಂಚ ರಾಜ್ಯಗಳಲ್ಲಿ ಕೇಸರಿ ಪತಾಕೆಯನ್ನ ಹಾರಿಸಿರೋ ಬಿಜೆಪಿ 2019ರ ಚುನಾವಣೆಗೆ ಈಗಾಗಲೇ ರಣತಂತ್ರ ರೂಪಿಸ್ತಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬ್ರಿಗೇಡ್ ಭರ್ಜರಿ ಜಯಗಳಿಸಿತ್ತು. ಮುಂದಿನ ಬಾರಿಯೂ ಅಧಿಕಾರಕ್ಕೇರಿಲು ಮೋದಿ-ಅಮಿತ್ ಷಾ ಜೋಡಿ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಅದರಂತೆ ಕಳೆದ ಬಾರಿ ಬಿಜೆಪಿ ಸೋತಿರುವ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದೆ. ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿರೋ ಕ್ಷೇತ್ರಗಳಲ್ಲಿ 2019ಕ್ಕೆ ಬಿಜೆಪಿಯನ್ನ ಗೆಲ್ಲಿಸಲೇಬೇಕು ಅನ್ನೋದು ಮೋದಿ ಮಾಸ್ಟರ್ ಪ್ಲಾನ್ ಎನ್ನಲಾಗಿದೆ.

    ಬೆಂಗಳೂರು ಗ್ರಾಮಾಂತರಕ್ಕೆ ಬರ್ತಾರೆ ಜೇಟ್ಲಿ: 2014ರಲ್ಲಿ ಬಿಜೆಪಿ ಸೋತಿರುವ ಸುಮಾರು 120 ಕ್ಷೇತ್ರಗಳಿಗೆ ಏಪ್ರಿಲ್ 6ರಿಂದ 14ರವರೆಗೆ ಕೇಂದ್ರ ಸಚಿವರು ಭೇಟಿ ನೀಡಲಿದ್ದಾರೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹೊಣೆಯನ್ನ ಹೊತ್ತಿರೋದು ಅರುಣ್ ಜೇಟ್ಲಿ. ಇಲ್ಲಿ ಸಚಿವ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವ್ರನ್ನ ಮುಂದಿನ ಬಾರಿ ಮಣಿಸಲು ಬಿಜೆಪಿ ಪ್ಲಾನ್ ಮಾಡ್ತಿದೆ.

    ಸೋನಿಯಾ, ರಾಹುಲ್ ಕ್ಷೇತ್ರದ ಮೇಲೂ ಕಣ್ಣು: ರಾಹುಲ್ ಗಾಂಧಿಯ ಅಮೇಠಿ ಕೇತ್ರಕ್ಕೆ ಸ್ಮøತಿ ಇರಾನಿ, ಸೋನಿಯಾ ಗಾಂಧಿ ಪ್ರತಿನಿಧಿಸೋ ರಾಯ್‍ಬರೇಲಿಗೆ ವಿಕೆ ಸಿಂಗ್ ಹೋಗ್ತಿದ್ದಾರೆ. ಕೋಲ್ಕತ್ತಾಗೆ ರಾಜ್‍ನಾಥ್ ಸಿಂಗ್, ನಝೀಮಾಬಾದ್‍ಗೆ ಗಡ್ಕರಿ, ಕೇರಳದ ತ್ರಿಶೂರ್‍ಗೆ ಜೆಪಿ ನಡ್ಡಾ ಸೇರಿದಂತೆ ಸೋತ ಕ್ಷೇತ್ರಗಳಿಗೆ ಕೇಂದ್ರ ಸಚಿವರು ಭೇಟಿ ಕೊಟ್ಟು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹೈದರಾಬಾದ್ ಹೊಣೆಯನ್ನ ಅಮಿತ್ ಷಾ ಹೊತ್ತಿದ್ರೆ, ಬಿಹಾರವನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್‍ಗೆ ನೀಡಲಾಗಿದೆ.

    ಪಕ್ಷದ ಸಂಸ್ಥಾಪನಾ ದಿನವಾದ ಏಪ್ರಿಲ್ 6ರಿಂದ ಅಂಬೇಡ್ಕರ್ ಜಯಂತಿ ದಿನವಾದ ಏಪ್ರಿಲ್ 14ರವರೆಗೆ ಸೋತ ಕ್ಷೇತ್ರಗಳಲ್ಲಿ ದೀರ್ಘಾವಧಿ ಕಾರ್ಯಕ್ರಮಗಳನ್ನ ಬಿಜೆಪಿ ಆಯೋಜಿಸಿದೆ.