Tag: bengaluru rural

  • ಮಾದನಾಯಕನಹಳ್ಳಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಕೇಸ್; ಎ1 ಆರೋಪಿ ಬಂಧನ

    ಮಾದನಾಯಕನಹಳ್ಳಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಕೇಸ್; ಎ1 ಆರೋಪಿ ಬಂಧನ

    ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ದಿನ ಮನೆಗೆ ನುಗ್ಗಿ ಪುರುಷನನ್ನ ಕಟ್ಟಿ ಹಲ್ಲೆ ಮಾಡಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನಾಪತ್ತೆಯಾಗಿದ್ದ, ಪ್ರಕರಣ ಪ್ರಮುಖ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಗ್ಯಾಂಗ್ ರೇಪ್ ಮಾಡಿ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಮಿಥುನ್ ಎ1 ಆರೋಪಿ. ನೆಲಮಂಗಲ ತಾಲೂಕಿನ ಶಿವಗಂಗೆ ಬಳಿ ತಲೆಮರೆಸಿಕೊಂಡಿದ್ದ. ಘಟನೆ ಸಂಬಂಧ ಆರೋಪಿಯನ್ನ ನೆಲಮಂಗಲ ಡಿವೈಎಸ್‌ಪಿ ಜಗದೀಶ್ ನೇತೃತ್ವದ ತಂಡ ಬಂಧಿಸಿದೆ. ಇದನ್ನೂ ಓದಿ: ಬೆಂಗಳೂರು | ಕೋಲ್ಕತ್ತಾ ಮೂಲದ ಮಹಿಳೆ ಮೇಲೆ ಗ್ಯಾಂಗ್ ರೇಪ್ – ಆರು ಮಂದಿ ಅರೆಸ್ಟ್

    ಈ ಪ್ರಕರಣದ ಎಲ್ಲಾ ಆರು ಜನ ಆರೋಪಿಗಳ ಬಂಧನವಾಗಿದ್ದು, ಆರರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು. ಅವರನ್ನು ಬಾಲಪರಧಿ ಕಾರಾಗೃಹಕ್ಕೆ ಬಿಡಲಾಗಿದೆ. ಉಳಿದಂತೆ ಮಿಥುನ್, ಕಾರ್ತಿಕ್, ನವೀನ್, ಗ್ಲಾನಿ ಬಂಧನವಾಗಿದೆ.

    ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸಿ ಡಿಎನ್‌ಎ ಟೆಸ್ಟ್‌ಗೆ ಒಳಪಡಿಸಲಿರುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಪ್ಪಳ | ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಹಿಳೆ

  • ಬೆಂಗಳೂರು | ಮನೆಗೆ ನುಗ್ಗಿ ಗ್ಯಾಂಗ್‌ ರೇಪ್‌ ಮಾಡಿದ್ದ ಕಾಮುಕರ ಬಂಧನ

    ಬೆಂಗಳೂರು | ಮನೆಗೆ ನುಗ್ಗಿ ಗ್ಯಾಂಗ್‌ ರೇಪ್‌ ಮಾಡಿದ್ದ ಕಾಮುಕರ ಬಂಧನ

    ಬೆಂಗಳೂರು: ಗಂಗಗೊಂಡನಹಳ್ಳಿಯಲ್ಲಿರುವ ಮನೆಗೆ ನುಗ್ಗಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಾಮುಕರನ್ನ ಮಾದಕನಾಯಕನ ಹಳ್ಳಿ ಪೊಲೀಸರು (Madanayakahalli Police) ಬಂಧಿಸಿದ್ದಾರೆ.

    ಘಟನೆ ನಡೆದ 24 ಗಂಟೆಯ ಒಳಗಾಗಿ ಮೂವರು ಕಾಮುಕರನ್ನ ಬಂಧಿಸಲಾಗಿದೆ. ಕಾರ್ತಿಕ್‌, ಗ್ಲೇನ್, ಸಯೋಗ ಬಂಧಿತ ಕಾಮುಕರು. ಸದ್ಯ ಬಂಧವಾಗಿರುವ ಆರೋಪಿ (Accused) ಕೃತ್ಯ ನಡೆದ ಅಕ್ಕಪಕ್ಕದ ಏರಿಯಾದವರೇ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಬಲಿ

    ಪ್ಲ್ಯಾನ್‌ ಮಾಡಿಕೊಂಡೇ ಕೃತ್ಯ
    ಇನ್ನು ಕಾಮುಕರು ಪ್ಲ್ಯಾನ್‌ ಮಾಡಿಕೊಂಡೇ ಕೃತ್ಯ ಎಸಗಿರೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ಮೊದಲು ಮನೆಯಲ್ಲಿದ್ದ ಇಬ್ಬರು ಪುರಷರ ಮೇಲೆ ಹಲ್ಲೆ ಮಾಡಿ ಕಟ್ಟಿಹಾಕಿದ್ದಾರೆ. ಆ ಬಳಿಕ ಇದ್ದ ಐವರಲ್ಲಿ ಮೂವರು ಮನೆ ಒಳಗಡೆ ಹೋಗಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯ ಬಳಿ ಇದ್ದ ಮೊಬೈಲ್ ಹಾಗೂ 50 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.

    ಘಟನೆ ಸಂಬಂಧ ಅತ್ಯಾಚಾರ ಹಾಗೂ ರಾಬರಿ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದರು. ಕಾಮುಕರ ಹುಡುಕಾಟಕ್ಕೆ ಮೂರು ತಂಡಗಳನ್ನ ರಚಿಸಲಾಗಿತ್ತು. ಸದ್ಯ ಮೂವರನ್ನ ಬಂಧನ ಮಾಡಿದ್ದು ಉಳಿದು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ಭಾಗ ಮುಟ್ಟಿ, ರೂಮ್ ಬುಕ್ ಮಾಡಿದ್ದೇನೆ ಸಹಕರಿಸು ಅಂತಿದ್ದ – ಚಿಕಿತ್ಸೆಗೆ ಬಂದಿದ್ದ ಯುವತಿಗೆ  ಕಿರುಕುಳ, ವೈದ್ಯ ಅರೆಸ್ಟ್

    ಇನ್ನು ಕೀಚಕರ ಅಟ್ಟಹಾಸದಿಂದ ನಲುಗಿರೋ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಲಾಗಿದ್ದು ಚೇತರಿಸಿಕೊಂಡಿದ್ದಾರೆ. ಸಂತ್ರಸ್ತೆ ಮನೆಯಲ್ಲಿದ್ದ ಇಬ್ಬರು ಪುರುಷರಿಗೆ ಬ್ಯಾಟ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದರಿಂದ ಇಬ್ಬರನ್ನೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣದ ಗಂಭೀರತೆ ಅರಿತ ಅಧಿಕಾರಿಗಳು ನೆಲಮಂಗಲ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಿಸಲು ಆದೇಶಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.‌ಬಾಬಾ ಸ್ಪಷ್ಟಪಡಿಸಿದ್ದಾರೆ.

  • ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿ ಅರೆಸ್ಟ್

    ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿ ಅರೆಸ್ಟ್

    ಆನೇಕಲ್: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿಯನ್ನು ಹೆಬ್ಬಗೋಡಿ ಪೊಲೀಸರು (Hebbagodi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಪತ್ನಿ ರೇಷ್ಮಾಳನ್ನು (32) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ಸೀನಿಯರ್‌ನಿಂದ ಪ್ರೀತಿಸುವಂತೆ ಕಿರುಕುಳ ಆರೋಪ – ಬೆಂಗಳೂರಲ್ಲಿ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

    ಮೃತ ಮಹಿಳೆ ರೇಷ್ಮಾಗೆ ಮದುವೆಯಾಗಿ ಪತಿ ಸಾವನ್ನಪ್ಪಿದ್ದ. ತನ್ನ 15 ವರ್ಷದ ಮಗಳೊಂದಿಗೆ ರೇಷ್ಮಾ ಶಿಕಾರಿಪಾಳ್ಯದ ಓಂಶಕ್ತಿ ಲೇಔಟ್‌ನಲ್ಲಿ ವಾಸವಾಗಿದ್ದರು. ಇದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ ಆರೋಪಿ ಪ್ರಶಾಂತ್ ಕುಮಾರ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೀತಿ ಶುರುವಾಗಿ ಕಳೆದ 9 ತಿಂಗಳ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಪತ್ನಿಯ ಶೀಲ ಶಂಕಿಸಿ ಪ್ರಶಾಂತ್ ಪ್ರತಿದಿನ ಜಗಳವಾಡುತ್ತಿದ್ದ. ಅ.15ರಂದು ಇಬ್ಬರ ಮಧ್ಯೆ ಜಗಳವಾಗಿ ತಾರಕಕ್ಕೇರಿತ್ತು. ಗಲಾಟೆಯಲ್ಲಿ ರೇಷ್ಮಾಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಬಾತ್‌ರೂಮ್‌ನಲ್ಲಿ ಮೃತದೇಹ ಹಾಕಿ, ವಾಟರ್‌ಹೀಟರ್ ಸ್ವಿಚ್ ಆನ್ ಮಾಡಿ, ಕರೆಂಟ್ ಶಾಕ್ ತಗುಲಿ ಸತ್ತಿದ್ದಾಳೆಂದು ಬಿಂಬಿಸಿ ಅಲ್ಲಿಂದ ಪರಾರಿಯಾಗಿದ್ದ. ಮೃತ ರೇಷ್ಮಾ ಮಗಳು ಮನೆಗೆ ಬಂದು ನೋಡಿದಾಗ ತಾಯಿ ಅಸ್ವಸ್ಥಳಾಗಿ ಬಾತ್‌ರೂಮ್‌ನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.

    ಮೊದಲು ತಾಯಿಯನ್ನು ನೋಡಿದ್ದ ಮಗಳು ಬಾತ್‌ರೂಮ್ ಚಿಲಕ ಹೊರಗಿನಿಂದ ಹಾಕಿದ್ದನ್ನು ಗಮನಿಸಿದ್ದಳು. ಇದರಿಂದ ಅನುಮಾನಗೊಂಡು ಕೂಡಲೇ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ತಕ್ಷಣ ಆರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

    ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

  • ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಯಶಸ್ವಿ ಕಾರ್ಯ

    ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಯಶಸ್ವಿ ಕಾರ್ಯ

    – ಪಶು ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲು

    ಆನೇಕಲ್: ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲನ್ನು ಯಶಸ್ವಿಯಾಗಿ ಜೋಡಣೆ ಮಾಡಿರುವ ಅಪರೂಪದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) ನಡೆದಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಸಿಕರನ್ ಎಂಬ ಕರಡಿಗೆ ವೈಲ್ಡ್ ಲೈಫ್ SOS ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ (Forest Deparment) ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ಕೈಗೊಂಡಿದ್ದ ಕೃತಕ ಕಾಲು ಜೋಡಣೆ ಕಾರ್ಯ ಯಶಸ್ವಿಯಾಗಿದ್ದು, ಇದೀಗ ಮೊದಲಿನಂತೆ ನಡೆಯಲು ಪ್ರಾರಂಭಿಸಿದೆ.ಇದನ್ನೂ ಓದಿ: ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

    2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸಿದ್ದ ವಸಿಕರನ್ ಕರಡಿಯನ್ನು ಬಳ್ಳಾರಿ ಅರಣ್ಯ ಪ್ರದೇಶದಿಂದ ರಕ್ಷಣೆ ಮಾಡಲಾಗಿತ್ತು. ಈ ವೇಳೆ ಹಿಂಬದಿಯ ಎಡಗಾಲು ಮುರಿದು ಕರಡಿ ನರಳಾಡುತ್ತಿತ್ತು. ಗಾಯಗೊಂಡಿದ್ದ ವಸಿಕರನ್ ಅನ್ನು ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಗ್ಯ ಸುಧಾರಣೆಯಾಗಿ, ಮೂರು ಕಾಲಿನಿಂದ ನಡೆಯಲು ಅಭ್ಯಾಸ ಮಾಡಿಕೊಂಡಿತ್ತು.

    ಈ ಸಮಯದಲ್ಲಿ ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದರು. ಆಗ ಕರಡಿ ವಸಿಕರನ್ ಓಡಾಡುವುದನ್ನ ಗಮನಿಸಿದ್ದರು. ಬಳಿಕ ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹಕ್ಕೆ ಕೃತಕ ಕಾಲನ್ನು ಸಿದ್ಧಪಡಿಸಿದರು. ಸದ್ಯ ಇದೀಗ ಕರಡಿ ಕೃತಕ ಕಾಲಿನಿಂದ ಮೊದಲಿನ ಹಾಗೆ ಓಡಾಡುತ್ತಿದೆ.

    ಈ ಕುರಿತು ಡೆರಿಕ್ ಕಂಪನಾ ಅವರು ಪ್ರತಿಕ್ರಿಯಿಸಿದ್ದು, ಪ್ರಾಣಿ ಎಂಬುದು ನನಗೆ ಹೊಸ ವಿಷಯ ಕಲಿಸುತ್ತದೆ. ಆದರೆ, ವಸಿಕರನ್ ಪ್ರಕರಣದಲ್ಲಿ ಇದೊಂದು ಅತ್ಯದ್ಭುತವೇ ಹೌದು. ಕರಡಿಗೆ ಕೃತಕ ಕಾಲು ಸಿದ್ಧಪಡಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ವಸಿಕರನ್ ನಡಿಗೆಯನ್ನು ಕಂಡು ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ ಎಂದಿದ್ದಾರೆ. ಇದನ್ನೂ ಓದಿ: 579 ಕೋಟಿ ಜೆರ್ಸಿ ಪ್ರಾಯೋಜಕತ್ವ – ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಸಿಗಲಿದೆ ಕೋಟಿ ಕೋಟಿ ರೂ.

  • ನೆಲಮಂಗಲ | ಅಪಾರ್ಟ್ಮೆಂಟ್‌ನ 24ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

    ನೆಲಮಂಗಲ | ಅಪಾರ್ಟ್ಮೆಂಟ್‌ನ 24ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

    ನೆಲಮಂಗಲ: 24ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ (Nelamangala) ಅಪಾರ್ಟ್ಮೆಂಟ್‌ವೊಂದರಲ್ಲಿ ನಡೆದಿದೆ.

    ಅಲಸೂರು (Halasuru) ಮೂಲದ ಲೋಕೇಶ್ ಪವನ್ ಕೃಷ್ಣ (26) ಆತ್ಮಹತ್ಯೆ ಶರಣಾದ ಯುವಕ. 24ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಿಸಿಟಿವಿ ದೃಶ್ಯ `ಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.ಇದನ್ನೂ ಓದಿ: ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಗೆ 2 ಬಾರಿ ಬ್ಯಾಡ್ ಟಚ್ – ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದ ಕಾಮುಕ ಅರೆಸ್ಟ್

    ಮೃತ ಲೋಕೇಶ್‌ನ ಅಕ್ಕ ಹಾಗೂ ಭಾವ ಇದೇ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಭಾವ ಕೆಲಸದ ಮೇಲೆ ಹೊರಗೆ ಹೋಗಿದ್ದರು. ಹೀಗಾಗಿ ಅಕ್ಕ ಗರ್ಭಿಣಿಯಾಗಿದ್ದರಿಂದ ತವರು ಮನೆಗೆ ಬಂದಿದ್ದರು. ಈ ವೇಳೆ ಲೋಕೇಶ್ ಅಕ್ಕನ ಮನೆಯ ಕೀ ತೆಗೆದುಕೊಂಡು ಅಪಾರ್ಟ್ಮೆಂಟ್‌ಗೆ ಬಂದಿದ್ದ. ಎರಡು ದಿನ ಮನೆಯಲ್ಲಿದ್ದು, ಶನಿವಾರ ಬೆಳಗಿನ ಜಾವ 3:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅನಾರೋಗ್ಯದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ಮುಗಿಸಿ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಸಾವು) ದಾಖಲಾಗಿದೆ.ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಹೆಚ್ಚಿದ ಸರಗಳ್ಳರ ಅಟ್ಟಹಾಸ – ಕುತ್ತಿಗೆಗೆ ಲಾಂಗ್ ಇಟ್ಟು 55 ಗ್ರಾಂ ಚಿನ್ನ ಕಳ್ಳತನ

  • ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು

    ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು

    ಬೆಂಗಳೂರು ಗ್ರಾಮಾಂತರ: ಗಂಡ-ಹೆಂಡತಿ ಜಗಳಕ್ಕೆ ಇಬ್ಬರು ಮಕ್ಕಳು ಬಲಿಯಾಗಿರುವ ಘಟನೆ ಹೊಸಕೋಟೆಯ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲದೇ, ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಗಂಡ ಶಿವು, ಮಗಳು ಚಂದ್ರಕಲಾ, ಮಗ ಉದಯ ಸೂರ್ಯ ಸಾವನ್ನಪ್ಪಿದ್ದಾರೆ. ಶಿವು ಪತ್ನಿ ಮಂಜುಳಾ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಗಂಡ-ಹೆಂಡತಿ ಇಬ್ಬರೂ ಸಹ ಸಾಲದ ಬಾಧೆಯಲ್ಲಿ ಸಿಲುಕಿಕೊಂಡಿದ್ದರು. ಗಂಡನಿಗೆ ಕೆಲ ದಿನಗಳ ಹಿಂದೆ ಅಪಘಾತವಾಗಿತ್ತು ಎನ್ನಲಾಗಿದೆ. ಇದರಿಂದ ಎಲ್ಲರೂ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಮಂಜುಳಾ ಮಾತ್ರ ಪ್ರಾಣಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪತಿ ಶಿವು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಶಿವುಗೆ ಅಪಘಾತವಾಗಿದ್ದು, ಕೆಲಸಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಜೊತೆಗೆ ಮಂಜುಳಾ ಸಹ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ದಿನ ಕಳೆದಂತೆ ಸಾಲಗಳು ಹೆಚ್ಚಾಗಿತ್ತು ಎನ್ನಲಾಗಿದೆ. ಅಲ್ಲದೇ, ಮನೆಯಲ್ಲಿ ಆಗಾಗ್ಗೆ ಇದೇ ವಿಚಾರವಾಗಿ ಜಗಳವಾಗುತ್ತಿತ್ತಂತೆ. ನಿನ್ನೆ ಮಧ್ಯಾಹ್ನ ಮಂಜುಳಾ ಹಾಗೂ ಶಿವು ಇಬ್ಬರ ಕುಟುಂಬದವರೆಲ್ಲಾ ಆತ್ಮಹತ್ಯೆಗೆ ನಿರ್ಧರಿಸಿ ಇಬ್ಬರು ಮದ್ಯಪಾನ ಮಾಡಿ ಮಕ್ಕಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆನಂತರ ಶಿವುಗೆ ಮದ್ಯಪಾನ ಮಾಡಿದ್ದರಿಂದ ಆರೋಗ್ಯ ಸಮಸ್ಯೆಯಾಗಿದ್ದು, ಈ ಸಮಯದಲ್ಲಿ ಪತ್ನಿಯನ್ನು ಅಂಗಡಿಗೆ ಕಳಿಸಿದ್ದಾನೆ. ಪತ್ನಿ ಫೋನಿನಲ್ಲಿ ಮಾತನಾಡಿಕೊಂಡು ಅಂಗಡಿಯಿಂದ ಬರುವುದು ತಡ ಮಾಡಿದ್ದಾಳೆ. ಬರುವಷ್ಟರಲ್ಲಿ ಶಿವು ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅಲ್ಲದೇ, ಮಂಜುಳಾ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೂ ಸಹ ಈ ಮೂರು ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ವಿವಿಧ ಆಯಾಮಗಳಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಜುಳಾರನ್ನು ವಶಕ್ಕೆ ಪಡೆದ ಹೊಸಕೋಟೆ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

  • ಸಾಲಬಾಧೆ – ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರು ಸಾವು

    ಸಾಲಬಾಧೆ – ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರು ಸಾವು

    – ಗಂಡ, ಮಕ್ಕಳ ಕತ್ತು ಹಿಸುಕಿ ಕೊಂದ ತಾಯಿ

    ಆನೇಕಲ್‌: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಸಾವನ್ನಪ್ಪಿರುವ ಘಟನೆ ಹೊಸಕೋಟೆ (Hosakote) ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

    ಗಂಡ, ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.‌ ಅದೃಷ್ಟವಶಾತ್‌ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಗಂಡ ಶಿವು (32), ಮಗಳು ಚಂದ್ರಕಳಾ (11) ಮಗ ಉದಯ್ ಸೂರ್ಯ (07) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Chikkaballapura | ಇಬ್ಬರು ಹೆಣ್ಣುಮಕ್ಕಳೊಂದಿಗೆ ವಿಷ ಸೇವಿಸಲು ಪ್ಲ್ಯಾನ್‌ – ತಾಯಿ ಸಾವು

    ಈ ಹಿಂದೆ ಪತಿ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿಕೊಂಡಿತ್ತು. ಸಾಲ ಹೆಚ್ಚಾಗಿದ್ದರಿಂದ ದಂಪತಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ. ನಾವು ಸತ್ತರೆ ಮಕ್ಕಳು ತಬ್ಬಲಿಗಳಾಗುತ್ತಾರೆ ಅಂತ ಮಕ್ಕಳನ್ನೂ ಸಾಯಿಸುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ – ಶಾಸಕ ವೀರೇಂದ್ರ ಪಪ್ಪಿಗೆ 14 ದಿನ ನ್ಯಾಯಾಂಗ ಬಂಧನ

    ಮೊದಲಿಗೆ ಗಂಡ ಮತ್ತು ಮಕ್ಕಳ ಕುತ್ತಿಗೆಯನ್ನ ವೇಲ್‌ನಿಂದ ಹೆಂಡತಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಹಗ್ಗ ತುಂಡಾದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸದ್ಯ ಮಹಿಳೆಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

  • ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    – ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ ವೃದ್ಧರು

    ಆನೇಕಲ್: ಸಾಕಿದ ನಾಯಿಯನ್ನು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಹೊಸೂರು (Hosuru) ಸಮೀಪದ ಇರುತುಕೋಟೆ (Irutukote) ಗ್ರಾಮದಲ್ಲಿ ನಡೆದಿದೆ.

    ಕೋಳಿ, ಮೇಕೆಗಳನ್ನು ಕಚ್ಚುತ್ತಿದೆ ಎಂದು ನಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ, ಇಬ್ಬರು ವೃದ್ಧರು ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

    ಹಲ್ಲೆ ಮಾಡುವಾಗ ಸ್ಥಳದಲ್ಲೇ ಇದ್ದ ಜನರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ಕರುಳು ಕಿತ್ತು ಬರುವಂತಿದೆ. ನಾಯಿ ಎಷ್ಟೇ ಕಿರುಚಾಡಿದರೂ ಕೂಡ ಅಲ್ಲಿದ್ದವರು ಯಾರು ನಾಯಿಯ ರಕ್ಷಣೆಗೆ ಬಂದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾ ಪ್ರಾಣಿ ಹಿಂಸೆ ತಡೆ ಸಂಘದ ಸದಸ್ಯರು ಭೇಟಿ ನೀಡಿ, ನಾಯಿಯ ರಕ್ಷಣೆ ಮಾಡಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲೀಕ ಮತ್ತು ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದ್ರೆ ಶಿಕ್ಷೆ ಅನುಭವಿಸಬೇಕು: ಜಯಂತ್

  • ಆನೆಯ ಮೇಲೆ ಅಂಬಾರಿ ಕಂಡೆ.. ಅಂಬಾರಿಯೊಳಗೆ ಗಣೇಶನ ಕಂಡೆ..!

    ಆನೆಯ ಮೇಲೆ ಅಂಬಾರಿ ಕಂಡೆ.. ಅಂಬಾರಿಯೊಳಗೆ ಗಣೇಶನ ಕಂಡೆ..!

    – ಅಂಬಾರಿ ಗಣೇಶನ ಮೆರವಣಿಗೆಗೆ ಸಚಿವ ಮುನಿಯಪ್ಪ ಚಾಲನೆ

    ಚಿಕ್ಕಬಳ್ಳಾಪುರ/ ಬೆಂಗಳೂರು: ದೊಡ್ಡಬಳ್ಳಾಪುರದ (Doddaballapur) ತೂಬಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಗಣೇಶನನ್ನು ಆನೆಯ ಮೇಲೆ ಅಂಬಾರಿಯ (Ambari Ganesha) ಅಲಂಕಾರ ಮಾಡಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಿದ್ದಾರೆ. ನಾಡಹಬ್ಬ ದಸರಾ ಮಾದರಿಯಲ್ಲಿಯೇ ಗಣೇಶನ ಮೆರವಣಿಗೆ ಮಾಡಲಾಗಿದೆ.

    ಗ್ರಾಮದ ಚಾವಡಿ ಗಣೇಶೋತ್ಸವ ಸಮಿತಿಯವರು ಇದೇ ಮೊದಲ ಬಾರಿಗೆ ಅಂಬಾರಿ ಗಣೇಶನ ಮೆರವಣಿಗೆ ಆಯೋಜನೆ ಮಾಡಿದ್ದು, ಜನರ ಗಮನ ಸೆಳೆಯಿತು. ದಸರಾ ಆನೆಯಂತೆ ಅಲಂಕೃತಗೊಂಡು ಸಿಂಗಾರಗೊಂಡಿದ್ದ ಲಕ್ಷ್ಮೀ ಹೆಸರಿನ ಆನೆಯ ಮೇಲೆ ಅಂಬಾರಿಯಲ್ಲಿ ಗಣೇಶನನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆನೆಯ ಮೆರವಣಿಗೆಯೊಂದಿಗೆ, ನಾದಸ್ವರದ ಮೇಳ, ಡೊಳ್ಳು-ಕುಣಿತ, ಜಾನಪದ ತಂಡಗಳ ಸೊಗಸು ಎಲ್ಲವೂ ಸೇರಿ ದಸರಾ ವೈಭವವದ ಕಳೆಯನ್ನು ತಂದಿತ್ತು. ಇದನ್ನೂ ಓದಿ: ಸೊರಬದ ಅತಿ ಎತ್ತರದ ಗಣೇಶ ʻಕುಬಟೂರು ಮಹಾರಾಜʼನಿಗೆ ವಿಶೇಷ ಪೂಜೆ ಸಲ್ಲಿಸಿದ ಮಧು ಬಂಗಾರಪ್ಪ

    ಈ ಅಂಬಾರಿ ಗಣೇಶನ ಮೆರವಣಿಗೆಗೆ ಸಚಿವ ಕೆ.ಎಚ್ ಮುನಿಯಪ್ಪ ಪುಷ್ಪನಮನದ ಮೂಲಕ ಚಾಲನೆ ನೀಡಿದ್ದರು. ಇದನ್ನೂ ಓದಿ: ʻಪಬ್ಲಿಕ್‌ ಟಿವಿʼ 13ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ – ಜೆಪಿ ಪಾರ್ಕ್‌ ಕೆರೆಯಲ್ಲಿ ಗಣೇಶ ವಿಸರ್ಜನೆ

  • ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ

    ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ

    ಬೆಂಗಳೂರು ಗ್ರಾಮಾಂತರ: ಆಗಸ್ಟ್‌ 14 ರಂದು ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ.

    ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ‘ಯುವನಿಧಿ’ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ನೋಂದಣಿಯು ಚಾಲ್ತಿಯಲ್ಲಿದ್ದು, 2025ನೇ ಸಾಲಿನಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮಾದಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ‘ಯುವನಿಧಿ ಯೋಜನೆಯ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ’ವನ್ನು ಆಯೋಜಿಸಲಾಗಿದೆ. ಆ.14ರ ಬೆಳಗ್ಗೆ 10 ರಿಂದ ಸಾಯಂಕಾಲ 4 ಗಂಟೆ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ.

    ಈ ಯೋಜನೆಯಡಿ 2023 ಹಾಗೂ 2024ರಲ್ಲಿ ತೇರ್ಗಡೆಯಾಗಿ ಅರ್ಜಿ ಸಲ್ಲಿಸದೇ ಇರುವವರು ಕೂಡ ಅರ್ಜಿ ಸಲ್ಲಿಸಬಹುದು. ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೂಚಿತ ವಿದ್ಯಾರ್ಹತೆಗಳಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತಿಪರ ಕೋರ್ಸ್‌ಗಳು ಸೇರಿದಂತೆ) ಪ್ರತಿ ತಿಂಗಳು 3,000 ರೂ. ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1.500 ರೂ. ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ. ನಿರುದ್ಯೋಗ ಭತ್ಯೆಯನ್ನು ಫಲಾನುಭಾವಿಗಳ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ.

    ಪದವಿ/ಡಿಪ್ಲೋಮಾ ನಂತರ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವವರು, ಶಿಶಿಕ್ಷು ವೇತನವನ್ನು ಪಡೆಯುತ್ತಿರುವವರು, ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು ಹಾಗೂ ಕರ್ನಾಟಕದಲ್ಲಿ ಕನಿಷ್ಠ ಆರು ವರ್ಷಗಳಿಗಿಂತ ಕಡಿಮೆ ವಾಸವಿಲ್ಲದಿರುವ ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ಅರ್ಹರಾಗುವುದಿಲ್ಲ.