Tag: Bengaluru Pubs

  • ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಬೆಂಗಳೂರು: ಕೋರಮಂಗಲದ ಪಬ್‌ವೊಂದರಲ್ಲಿ ಸೌತ್ ಇಂಡಿಯಾ (South India) ಹಾಡುಗಳನ್ನು ಹಾಕುವುದಕ್ಕೆ ಪಬ್ (Pub) ಸಿಬ್ಬಂದಿ ನಿರಾಕರಿಸಿದ್ದರಿಂದ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಕಿರಿಕ್ ನಡೆದಿದೆ.

    ಪಬ್‌ನಲ್ಲಿ ಪ್ರಾದೇಶಿಕ ಭಾಷೆಯ (Regional Language) ಹಾಡುಗಳನ್ನು ಹಾಕಿ ಎಂದು ಗ್ರಾಹಕರೊಬ್ಬರು ಒತ್ತಾಯ ಮಾಡಿದ್ದರು. ಆವಾಗ, ಇಲ್ಲ ಬರೀ ಇಂಗ್ಲಿಷ್ ಹಾಡುಗಳನ್ನು ಮಾತ್ರ ಹಾಕ್ತೀವಿ, ಇಂಗ್ಲಿಷ್ ಬಿಟ್ಟು ಬೇರೆ ಹಾಡುಗಳನ್ನು ಹಾಕುವುದಿಲ್ಲ ಎಂದು ಪಬ್‌ನ ಮಹಿಳಾ ಸಿಬ್ಬಂದಿ ಪಟ್ಟು ಹಿಡಿದಿದ್ದರು.  ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

    ಈ ಘಟನೆಯನ್ನು ಗ್ರಾಹಕ ವೀಡಿಯೋ ಮಾಡಲು ಮುಂದಾದರು. ವೀಡಿಯೋ ಮಾಡುವುದನ್ನು ನೋಡಿದ ಪಬ್‌ನ ಮತ್ತೊಬ್ಬ ಸಿಬ್ಬಂದಿ ವೀಡಿಯೋ ಹೊರಗಡೆ ಬಂದರೆ ಕನ್ನಡಪರ ಸಂಘಟನೆಯವರು ಹೋರಾಟ ಮಾಡ್ತಾರೆ, ಪೊಲೀಸ್ ಕೇಸ್ ಆಗುತ್ತೆ ಎಂದು ಭಯಪಟ್ಟು ಕನ್ನಡ ಹಾಡು ಹಾಕುವುದಕ್ಕೆ ಒಪ್ಪಿಗೆ ನೀಡಿದ್ದರು. ಕನ್ನಡ ಹಾಡು ಮಾತ್ರ ಹಾಕುತ್ತೇವೆ. ಆದರೆ ತೆಲುಗು ಮತ್ತು ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರು. ಇದನ್ನೂ ಓದಿ: ಎಸ್‌ಸಿಒ ಸಭೆಗೆ ಮೋದಿಗೆ ಆಹ್ವಾನ ನೀಡಿದ ಪಾಕ್‌ – ಪ್ರಧಾನಿ ಭಾಗವಹಿಸೋದು ಡೌಟ್‌

    ಒಂದು ವೇಳೆ ವೀಡಿಯೋ ಮಾಡಿ ಗಟ್ಟಿ ಧ್ವನಿಯಲ್ಲಿ ಕೇಳಿದರೆ ಮಾತ್ರ ಕನ್ನಡ ಹಾಡುಗಳನ್ನು ಹಾಕುತ್ತಾರೆ ಎಂದು ಗ್ರಾಹಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾರಿಗೆ KSRTC ಬಸ್ ಡಿಕ್ಕಿ – ಐವರಿಗೆ ಗಾಯ

  • ರಾಜ್ಯದಲ್ಲಿ ಮಟ್ಕಾದಂಧೆ, ಅಕ್ರಮ ಪಬ್‌ಗಳಿಗೆ ಪೊಲೀಸ್ ಇಲಾಖೆಯಿಂದಲೇ ಸಹಕಾರ – HDK ಕಿಡಿ

    ರಾಜ್ಯದಲ್ಲಿ ಮಟ್ಕಾದಂಧೆ, ಅಕ್ರಮ ಪಬ್‌ಗಳಿಗೆ ಪೊಲೀಸ್ ಇಲಾಖೆಯಿಂದಲೇ ಸಹಕಾರ – HDK ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಮಟ್ಕಾ ದಂಧೆ, ಅಕ್ರಮ ಪಬ್‌ (Pub) ಗಳು  ನಡೆಯುತ್ತಿವೆ. ಇದಕ್ಕೆ ಪೊಲೀಸ್ ಇಲಾಖೆಯೂ (Police Department) ಸಹಕಾರ ನೀಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

    ಇಲ್ಲಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ `ಪಂಚರತ್ನ ರಥಯಾತ್ರೆ’ಗೆ (Pancharatna Rathayatra) ಚಾಲನೆ ನೀಡಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ನಿನ್ನೆ ಹೃದಯಾಘಾತದಿಂದ (Heart Attack) ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದರಿಂದ ಆ ರೀತಿ ಹೃದಯಾಘಾತವಾಗಿದೆ. ಈ ಬಗ್ಗೆ ಮೃತ ಅಧಿಕಾರಿ ನಂದೀಶ್ ಅವರ ಪತ್ನಿ ಮಾತಾಡಿರೋದು ನೋಡಿದ್ದೇನೆ. ಕೆ.ಆರ್.ಪುರಂನಲ್ಲಿ ಅಧಿಕಾರಿ ನಂದೀಶ್ ವ್ಯಾಪ್ತಿಯಲ್ಲಿ ರಾತ್ರಿ ಆದರೂ ಪಬ್ ನಡೆಯುತ್ತಿತ್ತು. ಇದಕ್ಕಾಗಿ ನಂದೀಶ್ ರನ್ನ ಅಮಾನತು ಮಾಡಲಾಗಿದೆ ಇದರಿಂದ ಮಾನಸಿಕವಾಗಿ ಕುಗ್ಗಿ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ಈಗಾಗಲೇ ಸರ್ಕಾರ ರಾತ್ರಿ 1 ಗಂಟೆವರೆಗೆ ಹೊಟೇಲ್ ತೆರೆಯೋಕೆ ಅವಕಾಶ ಕೊಟ್ಟಿದೆ. ಅದೊಂದು ಪಬ್ ಮಾತ್ರ ರಾತ್ರಿ ನಡೆಯುತ್ತಿತ್ತಾ? ಅ ಪಬ್ ನಲ್ಲಿ ರಾಜಕಾರಣಿಗಳ ಬೆಂಬಲಿಗರು ಎಷ್ಟು ಜನ ಇದ್ದರು? ಪೊಲೀಸರು ಸಹ ಪಬ್‌ನಲ್ಲಿ ಡಾನ್ಸ್ (Dance) ಮಾಡ್ತಿದ್ರು ಅಂತಾ ಹೇಳಿದ್ದಾರೆ. ಇದೆಲ್ಲಾ ನೋಡಿದಾಗ ರಾಜ್ಯದಲ್ಲಿ ಮಟ್ಕಾ ದಂಧೆ, ಅಕ್ರಮ ಪಬ್ ಗಳು ನಡೆಯಲು ಪೊಲೀಸ್ ಇಲಾಖೆಯೂ ಸಹಕಾರ ಕೊಟ್ಟಿದೆ ಎಂಬುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]