Tag: bengaluru- priest

  • ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    – ರಾಕೇಶ್‌ಭಟ್ ಬಗ್ಗೆ ಪೇಜಾವರ ಶ್ರೀ ಮೆಚ್ಚುಗೆ

    ವಾಷಿಂಗ್ಟನ್: ಅಮೆರಿಕದ (USA) ಚಿಕಾಗೋದಲ್ಲಿ ನಡೀತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ (Democratic National Convention) 3ನೇ ದಿನ ಹಿಂದೂ ಸಂಪ್ರದಾಯಂತೆ ವೇದ ಮಂತ್ರಗಳೊಂದಿಗೆ ಆರಂಭವಾಗಿದ್ದು ವಿಶೇಷ.

    ಅಮೆರಿಕದಲ್ಲಿ ಈ ರೀತಿ ನಡೀತಿರೋದು ಇದು ಮೊದಲ ಬಾರಿ. ದೇಶದ ಐಕ್ಯತೆಯನ್ನು ಪ್ರತಿಪಾದಿಸಿದ ಬೆಂಗಳೂರು ಮೂಲದ ಅರ್ಚಕ ರಾಕೇಶ್ ಭಟ್ (Bengaluru Priest Rakesh Bhatt), ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾ ದೇವರ ಆಶೀರ್ವಚನ ಕೋರಿದ್ರು.

    ನಾವೆಲ್ಲ ಒಂದೇ ಕುಟುಂಬ.. ಸತ್ಯವೇ ನಮ್ಮ ಬುನಾದಿ.. ಅದೇ ನಮ್ಮನ್ನು ಗೆಲ್ಲಿಸುತ್ತದೆ.. ಕತ್ತಲಿನಿಂದ ಬೆಳಕಿನೆಡೆಗೆ.. ಸಾವಿನಿಂದ ಅಮರತ್ವದವರೆಗೂ ನಮ್ಮನ್ನು ನಡೆಸಿ ಎಂದು ಆ ದೇವರನ್ನು ಕೋರುತ್ತಿರುವೆ. ಓಂ ಶಾಂತಿ.. ಶಾಂತಿ ಶಾಂತಿ ಎಂದು ರಾಕೇಶ್ ಭಟ್ ಪ್ರಾರ್ಥಿಸಿದ್ರು.

    ಈ ಬಗ್ಗೆ ಅಮೆರಿಕದಲ್ಲಿರುವ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ಹಿಂದೂ ಸಮಾಜಕ್ಕೆ ಹೆಚ್ಚುತ್ತಿರುವ ಆದರಣೆ, ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ ಎಂದು ಹಿಂದೂ ಮುಖಂಡರು (Hindu Leader) ಹೇಳಿದ್ದಾರೆ. ಪೇಜಾವರ ಶ್ರೀಗಳು ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿನ ಪೇಜಾವರ ಮಠದಲ್ಲಿ ಶಿಕ್ಷಣ ಪಡೆದಿರುವ ರಾಕೇಶ್ ಭಟ್, 2013ರಿಂದ ಮೇರಿಲ್ಯಾಂಡ್‌ನ ಶಿವವಿಷ್ಣು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸ್ತಿದ್ದಾರೆ.

  • ದೇಗುಲಗಳಲ್ಲಿ ಪೂಜಾಕೈಂಕರ್ಯಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಮನವಿ

    ದೇಗುಲಗಳಲ್ಲಿ ಪೂಜಾಕೈಂಕರ್ಯಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಮನವಿ

    ಬೆಂಗಳೂರು: ದೇಗುಲಗಳಲ್ಲಿ ಪೂಜಾಕೈಂಕರ್ಯಗಳು ಸುಲಲಿತವಾಗಿ ನಡೆಯಲು ಏರ್ಪಡಿಸುವಂತೆ ಮುಜರಾಯಿ ದೇವಸ್ಥಾನದ ಅರ್ಚಕರು ಹಾಗೂ ಅರ್ಚಕರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.

    ಇಂದು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿಯಾದ ಅರ್ಚಕರ ಒಕ್ಕೂಟ, ಮುಜುರಾಯಿ ದೇವಸ್ಥಾನಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಮನವಿ ಪತ್ರ ನೀಡಿದರು. ಇದೇ ವೇಳೆ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಎಲ್ಲ COVID ನಿಯಮ ಪಾಲನೆ ಅನುಸಾರ ಎಲ್ಲ ಸೇವೆಗಳು ಹಾಗೂ ಪೂಜಾ ಕೈಂಕರ್ಯಗಳನ್ನು ಆರಂಭಿಸಲು ಅನುಮತಿ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.  ಇದನ್ನೂ ಓದಿ: ಹೆಮ್ಮೆಯಿಂದ ಬದುಕಿದ್ದು, ಅವಮಾನದಿಂದ ಬದುಕಲು ಸಾಧ್ಯವಾಗ್ತಿಲ್ಲ: ಗಿರಿ ಡೆತ್‍ನೋಟ್

    ಇಷ್ಟು ಮಾತ್ರವಲ್ಲದೆ ಮುಜರಾಯಿ ಇಲಾಖೆಯ ದೇವಸ್ಥಾನ ದೇವಸ್ಥಾನಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು