Tag: Bengaluru Potholes

  • ಅನುದಾನ ಪಡೆದೂ ಬಿಜೆಪಿ ಶಾಸಕರು ಏಕೆ ರಸ್ತೆ ಗುಂಡಿ ಮುಚ್ಚಿಲ್ಲ: ಡಿಕೆಶಿ ಪ್ರಶ್ನೆ

    ಅನುದಾನ ಪಡೆದೂ ಬಿಜೆಪಿ ಶಾಸಕರು ಏಕೆ ರಸ್ತೆ ಗುಂಡಿ ಮುಚ್ಚಿಲ್ಲ: ಡಿಕೆಶಿ ಪ್ರಶ್ನೆ

    – ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧ
    – 7 ಸಾವಿರ ಗುಂಡಿ ಮುಚ್ಚಿದ್ದು, 5 ಸಾವಿರ ಬಾಕಿ ಇವೆ

    ಬೆಂಗಳೂರು: ರಸ್ತೆ ಗುಂಡಿ ಸಮಸ್ಯೆ (Bengaluru Potholes) ಬಗೆಹರಿಸಲು ನಾವು ಬದ್ಧವಾಗಿದ್ದು, ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಜಕೀಯ ಮಾಡುವವರು ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಅವರು ತಿಳಿಸಿದರು. ಇದೇ ವೇಳೆ ಅನುದಾನ ಪಡೆದೂ ಬಿಜೆಪಿ ಶಾಸಕರು ಏಕೆ ಗುಂಡಿ ಮುಚ್ಚಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

    ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಯಾರೂ ಸಹ ಉದ್ದೇಶಪೂರ್ವಕವಾಗಿ ರಸ್ತೆ ಗುಂಡಿಗಳನ್ನು ಮಾಡುವುದಿಲ್ಲ. ಅತಿಯಾದ ಮಳೆ ಬಿದ್ದ ಕಾರಣಕ್ಕೆ ಗುಂಡಿಗಳಾಗಿವೆ. 7 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚಲು ಬಾಕಿಯಿದೆ. ಈ ಕಾರಣಕ್ಕೆ ಪೊಲೀಸ್ ಕಮಿಷನರ್ ಅವರಿಂದ ವರದಿ ಕೇಳಲಾಗಿದೆ. ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹ ರಸ್ತೆ ಗುಂಡಿಗಳು ಕಂಡರೆ ಗಮನಕ್ಕೆ ತರುವ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    ಬಿಜೆಪಿ ಶಾಸಕರು ಯಾಕೆ ಗುಂಡಿ ಮುಚ್ಚಿಲ್ಲ?
    ಬಿಜೆಪಿಯವರು ರಸ್ತೆ ತಡೆಯದರೂ ಮಾಡಲಿ, ಬೇರೆ ಏನಾದರೂ ಮಾಡಲಿ. ಪ್ರತಿಯೊಬ್ಬ ಬಿಜೆಪಿ ಶಾಸಕನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗಿದೆ. ನನ್ನ ಅನುದಾನದಲ್ಲೂ ಯಾವುದೇ ತಾರತಮ್ಯ ಇಲ್ಲದೆ ನಗರದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದರೂ ಏಕೆ ರಸ್ತೆಗುಂಡಿಗಳನ್ನು ಮುಚ್ಚಿಸಿಲ್ಲ. ಅವರುಗಳು ಮೊದಲು ತಮ್ಮ‌ಪಾಲಿನ ಕೆಲಸ ಮಾಡಲಿ. ಅನಂತರ ರಾಜಕೀಯ ಮಾಡಲಿ. ನಾವು ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಾವು ರಾಜಕೀಯ ಮಾಡುವುದು ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿ ಮುಚ್ಚಿದ್ದೇವೆ, ವಿಪಕ್ಷಗಳು ರಾಜಕೀಯ ಮಾಡ್ತಿದೆ: ಡಿಕೆಶಿ

  • ದುರಹಂಕಾರದ ಮಾತು ಬಿಟ್ಟು, ಜನಪರ ಕೆಲಸ ಮಾಡಿ – ಉದ್ಯಮಿಗಳ ಬಗ್ಗೆ ಡಿಕೆಶಿ ಹೇಳಿಕೆಗೆ ಅಶ್ವಥ್ ನಾರಾಯಣ್‌ ಖಂಡನೆ

    ದುರಹಂಕಾರದ ಮಾತು ಬಿಟ್ಟು, ಜನಪರ ಕೆಲಸ ಮಾಡಿ – ಉದ್ಯಮಿಗಳ ಬಗ್ಗೆ ಡಿಕೆಶಿ ಹೇಳಿಕೆಗೆ ಅಶ್ವಥ್ ನಾರಾಯಣ್‌ ಖಂಡನೆ

    ಬೆಂಗಳೂರು: ಹಲವು ವರ್ಷಗಳಿಂದ ಅನಾನುಕೂಲಗಳನ್ನು ಎದುರಿಸಿದ ಕಂಪನಿ ಬೆಂಗಳೂರಿನ (Bengaluru) ಕುಂದುಕೊರತೆ, ವಿಫಲತೆಗಳ ಕುರಿತು ಮಾತನಾಡಿದರೆ ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್ (C.N Ashwath Narayan)  ಅವರು ಟೀಕಿಸಿದರು.

    ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಉದ್ಯಮಿಗಳ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌  (D.K Shivakumar) ಅವರ ಡೋಂಟ್ ಕೇರ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇಂತಹ ಕಂಪನಿಗೆ ಬೇಕಿದ್ದರೆ ಇರಿ; ಇಲ್ಲದಿದ್ದರೆ ಹೋಗಿ ಎನ್ನುವುದಾದರೆ, ಇದ್ಯಾವ ಸಂಸ್ಕೃತಿ? ಇದು ಜನಪರ ಸರ್ಕಾರದ ಮಾತುಗಳೇ? ಈ ದುರಹಂಕಾರದ ಮಾತು ಬಿಟ್ಟು, ಜನಪರವಾಗಿ ಕೆಲಸ ಮಾಡಿ ವಿಶ್ವಾಸ ಮೂಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೇರೆ ಧರ್ಮಕ್ಕೆ ಮತಾಂತರ ಆದ್ರೆ ಮುಗೀತು, ಧರ್ಮದ ಜೊತೆ ಜಾತಿ ಸೇರಿಸುವಂತಿಲ್ಲ: ಸತೀಶ್ ಜಾರಕಿಹೊಳಿ

    ಸರ್ಕಾರ ಎಂಬುದು ಜನಪರವಾಗಿರಬೇಕು. ಆಡಳಿತದಲ್ಲಿ ಸೌಜನ್ಯ, ಜನಪರ ಕಾಳಜಿ ಇರಬೇಕು. ಆದರೆ, ಕಾಂಗ್ರೆಸ್ಸಿನ ರಾಜ್ಯ ಸರಕಾರಕ್ಕೆ ಅಧಿಕಾರ ತಲೆಗೆ ಹತ್ತಿದೆ. ದುರಹಂಕಾರದ ಮಾತು ಆಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನರು ಎತ್ತಿ ಹಿಡಿದಾಗ ಅದನ್ನು ಒಪ್ಪಿಕೊಳ್ಳುವ ಸೌಜನ್ಯ, ಸಂಸ್ಕೃತಿ ಅವರಲ್ಲಿಲ್ಲ ಎಂದು ದೂರಿದರು.

    ಬೆಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ಹೆಮ್ಮೆಯ ನಗರವಾಗಿದೆ. ಉದ್ಯಮಶೀಲತೆ, ತಂತ್ರಜ್ಞಾನ, ಸ್ಟಾರ್ಟಪ್‍ಗೆ ಹೆಸರುವಾಸಿಯಾಗಿದೆ. ಎಲ್ಲ ಪ್ರಧಾನಮಂತ್ರಿಗಳು, ಮಾನ್ಯ ರಾಷ್ಟ್ರಪತಿಗಳು, ವಿಶ್ವ ನಾಯಕರು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಾರೆ. ಬೆಂಗಳೂರಿನ ವೈಫಲ್ಯವನ್ನು ತಿಳಿಸಿ, ಕುಂದುಕೊರತೆ ಹೇಳಿದಾಗ ಅದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಎಂ.ಬಿ ಪಾಟೀಲ್

  • ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗದಿದ್ರೆ ಇಂಜಿನಿಯರ್‌ಗಳ ಸಂಬಳ ಕಟ್: BBMP ಕಮಿಷನರ್ ವಾರ್ನಿಂಗ್

    ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗದಿದ್ರೆ ಇಂಜಿನಿಯರ್‌ಗಳ ಸಂಬಳ ಕಟ್: BBMP ಕಮಿಷನರ್ ವಾರ್ನಿಂಗ್

    ಬೆಂಗಳೂರು: ಬಿಬಿಎಂಪಿಗೆ (BBMP) ರಸ್ತೆಗುಂಡಿಗಳನ್ನು (Road) ಇಷ್ಟು ದಿನಗಳಲ್ಲಿ ಮುಚ್ಚುತ್ತೇವೆ ಎನ್ನುವ ಡೆಡ್‍ಲೈನ್ ಕಾಮನ್ ಆಗಿದೆ. ಇದೀಗ ಕಮೀಷನರ್ ಹೊಸವರ್ಷಕ್ಕೆ (New Year) ಮತ್ತೊಂದು ಹೊಸ ಡೆಡ್‍ಲೈನ್ ನೀಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ಗುಂಡಿ (Potholes) ಮುಚ್ಚಿಲ್ಲ ಅಂದ್ರೇ ಸಂಬಳ (Salary)  ಕಟ್ ಮಾಡುವ ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    BBMP

    ಬೆಂಗಳೂರು (Bengaluru) ನಗರದಲ್ಲಿರುವ ಗುಂಡಿ ಮುಚ್ತೀವಿ ಮುಚ್ತೀವಿ ಅಂತ ಬಿಬಿಎಂಪಿ ಹೇಳಿದ್ದೆ ಬಂತು. ಜನರ ತೆರಿಗೆ ದುಡ್ಡು ನೀರಲ್ಲಿ ಹೋಮ ಮಾಡಿದ್ದೆ ಬಂತು. ಗುಂಡಿಗಳಿಗೆ ಮಾತ್ರ ಕಡಿವಾಣವೇ ಬೀಳ್ತಿಲ್ಲ. ಈ ಮಧ್ಯೆ ಕಮಿಷನರ್ ಹೊಸ ವರ್ಷಕ್ಕೆ ನೂತನ ಡೆಡ್‍ಲೈನ್ ಕೊಟ್ಟಿದ್ದಾರೆ. ಡಿ.31ರ ಒಳಗೆ ಎಲ್ಲಾ ಗುಂಡಿ ಮುಚ್ಚುವಂತೆ ಸೂಚಿಸಿದ್ದಾರೆ. ಹೊಸ ವರ್ಷಕ್ಕೆ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಮೂಲಕ ಜನರಿಗೆ ಹೊಸ ವರ್ಷದ ಮೊದಲ ಗಿಫ್ಟ್ ನೀಡೋಕೆ ಮುಂದಾಗಿದ್ದಾರೆ. ಇದನ್ನೂ ಓದಿ: 5 ಲಕ್ಷದ ವಾಚ್‌ ವಿವಾದ: ದೇಶಭಕ್ತಿಯ ಟ್ವಿಸ್ಟ್‌ ನೀಡಿ ಸವಾಲೆಸೆದ ಅಣ್ಣಾಮಲೈ

    ಗುಂಡಿ ಗಂಡಾಂತರಕ್ಕೆ ಮೂಲ ಕಾರಣವೇ BWSSB, BESCOM ಎಂದು ಬಿಬಿಎಂಪಿ ದೂರುತ್ತಿದೆ. ನಾವೆಲ್ಲಾ ಕಾಮಗಾರಿ ಮಾಡ್ತಾ ಕಂಪ್ಲೀಟ್ ಮಾಡ್ತಿದ್ರೆ, ಈ ಎರಡೂ ಸಂಸ್ಥೆಗಳು ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಈ ಸಂಸ್ಥೆಗಳಿಗೆ ನಮ್ಮ ಬಿಬಿಎಂಪಿ ಇಂಜಿಯರ್‌ಗಳೇ ಅನುಮತಿ ಕೊಡಬೇಕು. ಕೊಟ್ಟ ಬಳಿಕ ಕಾಮಗಾರಿ ಮುಗಿದ ಮೇಲೆ ನಮ್ಮ ಅಧಿಕಾರಿಗಳೇ ರಸ್ತೆಗಳನ್ನು ಮುಂದೆ ನಿಂತು, ಆ ಸಂಸ್ಥೆಗಳಿಂದಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಹಾಗೇನಾದ್ರು ಮಾಡಲಿಲ್ಲ ಅಂದ್ರೆ ನಮ್ಮ ವಾರ್ಡ್ ಹಾಗೂ ಮೇಜರ್ ರೋಡ್ ಇಂಜಿನಿಯರ್‌ಗಳ ಸಂಬಳವನ್ನು ಕಡಿತ ಮಾಡಿ ರಸ್ತೆ ದುರಸ್ತಿ ಮಾಡ್ತೇವೆ ಎಂದು ಕಮಿಷನರ್ ತುಷಾರ್ ಗಿರಿನಾಥ್ (Tushar Girinath) ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಅವರ ಭಾಷೆಯಲ್ಲೇ ಉತ್ತರಿಸಿ: NCP ನಾಯಕ

    ಆಗುವ ಕೆಲಸವನ್ನು ಮಾಡೋದು ಬಿಟ್ಟು, ಕಮಿಷನರ್ ಬರಿ ಶಿಸ್ತು ಕ್ರಮ, ಸಂಬಳ ಕಡಿತ, ಡೆಡ್‍ಲೈನ್ ಅಂತ ಹೇಳಿಕೆ ಕೊಡ್ತಾರೆ. ಪಾಲಿಕೆ ಇಂಜಿನಿಯರ್‌ಗಳು ಕಮಿಷನರ್ ಅವರ ಮಾತನ್ನೇ ಕೇಳೋಲ್ಲ. ಇವರೇನಾದ್ರೂ ಇಂಜಿನಿಯರ್‌ಗಳ ಸಂಬಳ ಕಡಿತ ಮಾಡಿದ್ರೆ, ಅವರೆಲ್ಲಾ ಸೇರಿ ಇವರ ವರ್ಗಾವಣೆಯನ್ನೇ ಮಾಡಿಸಿ ಬಿಡ್ತಾರೆ. ಇದು ಬಿಬಿಎಂಪಿಯಲ್ಲಿರೋ ವ್ಯವಸ್ಥೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭೀಕರ ಅಪಘಾತ – ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಬ್ಬ ಯುವಕ ಬಲಿ

    ಭೀಕರ ಅಪಘಾತ – ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಬ್ಬ ಯುವಕ ಬಲಿ

    ಬೆಂಗಳೂರು: ನಗರವಾಸಿಗಳನ್ನು ಹೈರಾಣಾಗಿಸಿರುವ ಬೆಂಗಳೂರಿನ ರಸ್ತೆಗುಂಡಿಗಳು (Bengaluru Potholes) ಇದೀಗ ಮತ್ತೊಬ್ಬ ಯುವಕನನ್ನು ಬಲಿ ಪಡೆದಿದೆ.

    ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಕೇರಳ (Kerala) ಮೂಲದ ಯುವಕ ಅರ್ಷದ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಒಂದೇ ದಿನದಲ್ಲಿ ಕಾಡಿನಲ್ಲಿ ಶೂಟಿಂಗ್ – ಟವೆಲ್ ಸುತ್ತಿಕೊಂಡು ಅಭಿನಯಿಸಿದ್ದೆ

    ಬೈಕ್‌ನಲ್ಲಿ (Bike) ತೆರಳುತ್ತಿದ್ದ ಅರ್ಷದ್ ಭಾರೀ ಗಾತ್ರದ ರಸ್ತೆಗುಂಡಿ ಕಂಡು ತಕ್ಷಣ ಬ್ರೇಕ್‌ಹಾಕಿದ್ದಾನೆ, ಇದರಿಂದ ಬೈಕ್ ಸ್ಕಿಡ್ ಆಗಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು (Car) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡಿದ್ದ ಅರ್ಷದ್ ತಲೆಗೆ ಗಂಭೀರವಾದ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ

    ಬೈಕ್ ಸವಾರನನ್ನು ತಪ್ಪಿಸಲು ಹೋಗಿ ತಾನೂ ಆಳವಾದ ಗುಂಡಿಗೆ ಬಿದ್ದು ಕಾರು ಪಲ್ಟಿಯಾಗಿ ಬಿದ್ದಿದೆ. ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಆಗಸ್ಟ್‌ ಬಿಟಿಎಂ ಲೇಔಟ್‌ನ (BTM layout) ಕುವೆಂಪು ನಗರ ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಪರಿಣಾಮ ಬಿಎಂಟಿಸಿ ಬಸ್ ಹರಿದು ದ್ವಿಚಕ್ರ ಸವಾರ ಶಿವಕುಮಾರ್ (35) ಸ್ಥಳದಲ್ಲೇ ಮೃತಪಟ್ಟಿದ್ದರು.

    ರಸ್ತೆ ಗುಂಡಿಗೆ ಅನೇಕ ಜೀವಗಳು ಬಲಿ:
    ರಸ್ತೆ ಅಪಘಾತ ಇದೇ ಮೊದಲೇನಲ್ಲ ಕಳೆದ ವಾರ ಜೆ.ಸಿ.ನಗರದ ನಿವಾಸಿಯಾಗಿರುವ 38 ವರ್ಷದ ಬಾಲಾಜಿ ಎಂಬುವರು ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿತ್ತು. ಇದನ್ನೂ ಓದಿ: ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR

    ಸುಜಾತಾ ಥಿಯೇಟರ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯ ಬಸ್ ಗುದ್ದಿ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗಳು ರಸ್ತೆ ಬಿದ್ದಿದ್ದರು. ಬಿದ್ದು ಬಸ್ ಅಡಿ ಸಿಲುಕಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]