Tag: Bengaluru police commissioner

  • ಕಾಲ್ತುಳಿತ ಪ್ರಕರಣ – ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿ 5 ಪೊಲೀಸ್‌ ಅಧಿಕಾರಿಗಳು ಸಸ್ಪೆಂಡ್‌

    ಕಾಲ್ತುಳಿತ ಪ್ರಕರಣ – ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿ 5 ಪೊಲೀಸ್‌ ಅಧಿಕಾರಿಗಳು ಸಸ್ಪೆಂಡ್‌

    ಬೆಂಗಳೂರು: ಕಾಲ್ತುಳಿತಕ್ಕೆ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌, ಅಡಿಷನಲ್‌ ಕಮಿಷನರ್‌ ವಿಕಾಸ್‌ ಕುಮಾರ್‌, ಸೆಂಟ್ರಲ್‌ ಡಿಸಿಪಿ ಶೇಖರ್‌ ತೆಕ್ಕಣ್ಣನವರ್‌, ಎಸಿಪಿ ಬಾಲಕೃಷ್ಣ, ಇನ್‌ಸ್ಪೆಕ್ಟರ್‌ ಗಿರೀಶ್‌ ಅವರನ್ನು ಅಮಾನತು ಮಾಡಲಾಗಿದೆ.

    ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಬುಧವಾರ 11 ಅಭಿಮಾನಿಗಳು ದಾರುಣ ಸಾವನ್ನಪ್ಪಿದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿತು.

  • ಅವಿವಾಹಿತ ಜೋಡಿಗೆ ಓಯೋ ರೂಮ್‌ ನಿರ್ಬಂಧ – ಬೆಂಗಳೂರಲ್ಲೂ ನಿಯಮ ಜಾರಿಗೆ ಬಜರಂಗದಳ ಮನವಿ

    ಅವಿವಾಹಿತ ಜೋಡಿಗೆ ಓಯೋ ರೂಮ್‌ ನಿರ್ಬಂಧ – ಬೆಂಗಳೂರಲ್ಲೂ ನಿಯಮ ಜಾರಿಗೆ ಬಜರಂಗದಳ ಮನವಿ

    ಬೆಂಗಳೂರು: ಓಯೋ ಹೋಟೆಲ್‌ ಬುಕ್ಕಿಂಗ್‌ (OYO Hotel Booking) ಕಂಪನಿ ಚೆಕ್‌ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ಹೋಟೆಲ್‌ ರೂಮ್‌ ನೀಡದಂತೆ ಹೊಸ ನಿಯಮ ಜಾರಿಗೊಳಿಸಿದೆ. ಈ ರೀತಿಯ ನಿಯಮವನ್ನ ಬೆಂಗಳೂರಿನಲ್ಲೂ ಜಾರಿಗೆ ತರುವಂತೆ ಬಜರಂಗದಳ (Bajrang Dal) ಮನವಿ ಮಾಡಿದೆ.

    ಬಿಬಿಎಂಪಿ ಆಯುಕ್ತರು (BBMP Commissioner), ನಗರ ಪೊಲೀಸ್‌ ಆಯುಕ್ತರಿಗೆ ಬಜರಂಗದಳದ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಹೋಂ ಸ್ಟೇ, ಲಾಡ್ಜ್‌, ಸರ್ವೀಸ್‌ ಅಪಾರ್ಟ್‌ಮೆಂಟ್‌ಗಳು ಹಾಗೂ ಯಾವುದೇ ಹೋಟೆಲ್‌ಗಳಲ್ಲಿ ಅವಿವಾಹಿತರಿಗೆ ಅವಕಾಶ ನೀಡಬಾರದು. ಏಕೆಂದರೆ ಕೆಲವರು ಎಲ್ಲೆ ಮೀರಿ ವರ್ತಿಸುವ ಸಾಧ್ಯತೆಗಳಿವೆ. ಜೊತೆಗೆ ಆ ಸ್ಥಳಗಳು ಅನೈತಿಕ ಚಟುವಟಿಕೆಯ ತಾಣವಾಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಈ ಮನವಿಯನ್ನು ಗಂಭಿರವಾಗಿ ಪರಿಗಣಿಸುವಂತೆ ಬಜರಂಗದಳ ಮನವಿ ಮಾಡಿದೆ.

    ಓಯೋ ಹೊಸ ನಿಯಮ ಏನು?
    ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್‌ ಬುಕ್ಕಿಂಗ್‌ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್‌ಗಳಿಗೂ ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್‌ ಚೆಕ್‌ ಇನ್‌ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್‌ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.

    ಮೀರತ್‌ನಲ್ಲಿ ಜಾರಿ:
    ಓಯೋನ ಈ ಹೊಸ ನಿಯಮವು ಉತ್ತರ ಪ್ರದೇಶದ ಮೀರತ್‌ನಲ್ಲಿ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿಯೂ ಜಾರಿಗೆ ತರುವುದಾಗಿ ಸಂಸ್ಥೆ ಹೇಳಿದೆ. ಹಲವು ನಗರಗಳಲ್ಲಿ ಅವಿವಾಹಿತರಿಗೆ ಚೆಕ್ ಇನ್ ಮಾಡಲು ಅವಕಾಶ ನೀಡದಂತೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಯಾಗಿತ್ತು. ಇದರಿಂದಾಗಿ ಓಯೋ ಈ ನಿಮಯ ಜಾರಿಗೊಳಿಸಿದೆ.  ಇದನ್ನೂ ಓದಿ:  ಗಡ್ಕರಿ ಭೇಟಿಯಾದ ಹೆಚ್‌ಡಿಕೆ – ಮಂಡ್ಯ ಹೊರವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿಗೆ ಮನವಿ

    ದಾಖಲೆ ಕಡ್ಡಾಯ:
    ಹೊಸ ನಿಯಮದ ಪ್ರಕಾರ, ಹೊಟೇಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡ ಇದು ಕಡ್ಡಾಯವಾಗಿದೆ.

    ಒಟ್ಟಾರೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ.  ಇದನ್ನೂ ಓದಿ: ಕನ್ನಡದ ನಟಿಗೆ ಬಿಗ್ ಚಾನ್ಸ್- ತೆಲುಗಿನತ್ತ ಶರಣ್ಯ ಶೆಟ್ಟಿ

  • ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್‌ – ಡ್ರಂಕ್‌ & ಡ್ರೈವ್‌ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್‌ ರದ್ದು!

    ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್‌ – ಡ್ರಂಕ್‌ & ಡ್ರೈವ್‌ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್‌ ರದ್ದು!

    – ಮಧ್ಯರಾತ್ರಿ 1 ಗಂಟೆ ತನಕ ಹೊಸ ವರ್ಷಾಚರಣೆಗೆ ಅವಕಾಶ
    – ಡಿ.31ರ ರಾತ್ರಿ ನಗರ ಫ್ಲೈಓವರ್‌ಗಳು ಬಂದ್‌

    ಬೆಂಗಳೂರು: ಹೊಸವರ್ಷದ ಸಂಭ್ರಮದ (New Year Celebration) ನಡುವೆ ಯಾವುದೇ ಅವಘಢ ಸಂಭವಿಸಿದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಪೊಲೀಸರು ಆಯಾ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಅಂತ ನಗರ ಪೊಲೀಸ್ ಆಯುಕ್ತ (Bengaluru Police Commissioner) ದಯಾನಂದ್‌ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸಂಬಂಧಪಟ್ಟ ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ನಮ್ಮ ಮೆಟ್ರೋ ಇಲಾಖೆಗಳೊಂದಿಗೆ 2-3 ಸುತ್ತಿನ ಸಭೆ ಮಾಡಲಾಗಿದೆ. ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ, ಅತಿಹೆಚ್ಚು ಜನ ಸೇರುವ ಎಮ್‌.ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ, ಮಹಿಳೆಯರಿಗೆ ಮಹಿಳಾ ಸೇಫ್ಟಿ, ಹೈ ಲ್ಯಾಂಡ್, ವಾಚ್ ಟವರ್, ಶ್ವಾನ ದಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ಕೆ ಸುರೇಶ್ ತಂಗಿ ಅಂತ ಹೇಳ್ಕೊಂಡು ವಂಚನೆ ಕೇಸ್ -ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್‌ ಅರೆಸ್ಟ್

    ಅಲ್ಲದೇ ಡ್ರೋನ್‌ ಕ್ಯಾಮೆರಾ ನಿಯೋಜಿಸಿದ್ದು, ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಬ್ರಿಗೇಡ್‌ ರೋಡ್‌ಗೆ ಕಾವೇರಿ ಎಪೋರಿಯಂನಿಂದ ಮಾತ್ರ ಎಂಟ್ರಿ ಇರಲಿದೆ. ಜೊತೆಗೆ ಬಾರ್‌ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿದ್ದು, ಮಧ್ಯರಾತ್ರಿ 1 ಗಂಟೆ ತನಕ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ. ಇನ್ನೂ ನಗರದ ಹೊರವಲಯದ ರೇವ್ ಪಾರ್ಟಿಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅನಧಿಕೃತ ವಾಗಿ ಪಾರ್ಟಿ ಆಯೋಜನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇತ್ತ 11 ಗಂಟೆ ನಂತರ ಎಮ್‌.ಜಿ ರಸ್ತೆ ಮೆಟ್ರೋ ಸ್ಟೇಷನ್ ಅನ್ನೂ ಮುಚ್ಚಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆ ಕೇವಲ ಬಂದು ಇಳಿಯುವುದಕ್ಕೆ ಮಾತ್ರ ಅವಕಾಶ ಇದ್ದು, ವಾಪಸ್ಸು ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್ ಪಾರ್ಕ್‌ಗೆ ಹೋಗಿಯೇ ಮೆಟ್ರೋ ಹತ್ತಬೇಕು. ಇನ್ನೂ ಅನುಚಿತ ವರ್ತನೆ ತೋರುವವರ ಬಗ್ಗೆ ಕೂಡ ಹೆಚ್ಚು ಗಮನ ಹರಿಸೋದಾಗಿ ಕಮಿಷನರ್ ಹೇಳಿದ್ದಾರೆ. ಬೈಕ್‌ಗಳಲ್ಲಿ ಪದೇ ಪದೇ ಓಡಾಟ.. ಹೊಸ ವರ್ಷ ವಿಶ್ ಮಾಡುವ ಬರದಲ್ಲಿ ಕೂಗಾಟ.. ಪೀಪಿಗಳನ್ನ ಊದುವುದು, ವಿಚಿತ್ರ ರೀತಿಯ ಮಾಸ್ಕ್ ಹಾಕಿಕೊಂಡು ತೊಂದರೆ ಮಾಡುವವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಟ್ರಾಫಿಕ್‌ ನಿಯಂತ್ರಣಕ್ಕೆ ಮಾರ್ಗ ಬದಲಾವಣೆ:
    ಹೊಸವರ್ಷದ ದಿನ ಟ್ರಾಫಿಕ್ ನಿಯಂತ್ರಣಕ್ಕಾಗಿ ಕೆಲ ಮಾರ್ಗಗಳ ಬದಲಾವಣೆ ಕೂಡ ಮಾಡಲಾಗಿದೆ. ಎಮ್‌ಜಿ ರೋಡ್ ಬ್ರಿಗೆಡ್ ರೋಡ್ ಬಳಿ ಯಾವುದೇ ಪಾರ್ಕಿಂಗ್ ಇರೋದಿಲ್ಲ. ಎಮ್‌.ಜಿ ರಸ್ತೆ, ಬ್ರಿಗೇಡ್, ಇಂದಿರಾನಗರ, ಕೋರಮಂಗಲ ಬಳಿ ಪಾರ್ಕಿಂಗ್‌ಗೆ ಪ್ರತ್ಯೇಕವಾಗಿ ಸೂಚನೆ ನೀಡಲಾಗಿದೆ. ಎಲ್ಲಾ ರೀತಿಯ ಫ್ಲೈ ಓವರ್‌ಗಳು ಕ್ಲೋಸ್ ಇರಲಿವೆ. ನೋ ಪಾರ್ಕಿಂಗ್‌ಗಳಲ್ಲಿ ಪಾರ್ಕ್ ಮಾಡಿದ್ರೆ ಗಾಡಿಗಳನ್ನ ಟೋ ಮಾಡಲಾಗುತ್ತೆ. ಆ ದಿನ ರಾತ್ರಿಯಿಡೀ ಟೋಯಿಂಗ್ ವಾಹನಗಳು ಆಕ್ಟೀವ್ ಆಗಿ ಇರಲಿವೆ. ಅಲ್ಲಲ್ಲಿ ಡ್ರಾಪ್ ಪಿಕಪ್ ಬಗ್ಗೆ ಸೂಚನಾಫಲಕ ಹಾಕಲಾಗುತ್ತೆ.

    ಪೊಲೀಸ್ ಸಿಬ್ಬಂದಿ ಕೂಡ ಸ್ಥಳದಲ್ಲಿ ಮಾಹಿತಿ ನೀಡಲಿದ್ದಾರೆ. ಓಲಾ, ಉಬರ್‌ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅವರಿಗೂ ಡ್ರಾಪ್, ಪಿಕಪ್ ಪಾಯಿಂಟ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಮಧ್ಯೆ ಹೆಚ್ಚಿನ ಹಣ ಕೇಳುವ ಓಲಾ, ಉಬರ್‌ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ. ಯಾರೂ ಕೂಡ ಕುಡಿದು ವಾಹನಗಳನ್ನ ಓಡಿಸಬಾರದು ಅಂತ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಮ್.ಎನ್ ಅನುಚೇತ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಕುಡಿದು ವಾಹನ ಚಲಾಯಿಸಿದ್ರೆ, ವಾಹನ ಪರವಾನಗಿಯನ್ನೇ ರದ್ದುಗೊಳಿಸಲಾಗುತ್ತದೆ ಎಂದೂ ಸಹ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ | ಮರಾಠಿ ನಟಿ ಉರ್ಮಿಳಾ ಕಾರು ಹರಿದು ಓರ್ವ ಕಾರ್ಮಿಕ ಸಾವು

  • ಬಾಂಬ್‌ ಸ್ಫೋಟ ಪ್ರಕರಣ – ಇದುವರೆಗೆ ಯಾರನ್ನೂ ಬಂಧಿಸಿಲ್ಲ: ಪೊಲೀಸ್‌ ಆಯುಕ್ತ ಸ್ಪಷ್ಟನೆ

    ಬಾಂಬ್‌ ಸ್ಫೋಟ ಪ್ರಕರಣ – ಇದುವರೆಗೆ ಯಾರನ್ನೂ ಬಂಧಿಸಿಲ್ಲ: ಪೊಲೀಸ್‌ ಆಯುಕ್ತ ಸ್ಪಷ್ಟನೆ

    ಬೆಂಗಳೂರು: ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (The Rameshwaram Cafe) ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಆಯುಕ್ತ ದಯಾನಂದ್‌ (Bengaluru Police Commissioner) ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

    ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರಾಮೇಶ್ವರಂ ಕೆಫೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದಕರು ಇಲ್ಲಿ ಮಾಡೋದೇನಿಲ್ಲ, ಇಲ್ಲೇ ಭಯೋತ್ಪಾದರನ್ನ ಸೃಷ್ಟಿಸಿದ್ದಾರೆ: ಸೂಲಿಬೆಲೆ

    ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಏನಿದು ಪ್ರಕರಣ?
    ಹೆಚ್‌ಎಎಲ್‌ನಲ್ಲಿರುವ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬಾಂಬ್‌ ಸ್ಫೋಟಗೊಂಡಿದೆ. ಕೆಫೆಯಲ್ಲಿ ತಿಂಡಿ ತಿನ್ನಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಶಂಕೆ ವ್ಯಕ್ತವಾಗಿದೆ. ಆತ ತಂದಿದ್ದ ಕಪ್ಪು ಬಣ್ಣದ ಬ್ಯಾಗ್‌ನ್ನು ಕೆಫೆಯಲ್ಲೇ ಬಿಟ್ಟು ಹೋಗಿದ್ದಾನೆ. ಇದರಿಂದ ಟೈಮರ್‌ ಚಾಲಿತ ಕಚ್ಚಾ ಬಾಂಬ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಸ್ಫೋಟದಲ್ಲಿ ಗಾಯಗೊಂಡವರ ಎಲ್ಲಾ ಖರ್ಚು ಸರ್ಕಾರ ನೋಡಿಕೊಳ್ಳುತ್ತೆ: ಸಿಎಂ

  • Bengaluru Bomb Threat: ಶಾಲೆಗಳು, ದೇವಸ್ಥಾನಗಳಿಗೆ ಭದ್ರತೆ ಒದಗಿಸುತ್ತೇವೆ – ಸಿಎಂ

    Bengaluru Bomb Threat: ಶಾಲೆಗಳು, ದೇವಸ್ಥಾನಗಳಿಗೆ ಭದ್ರತೆ ಒದಗಿಸುತ್ತೇವೆ – ಸಿಎಂ

    ಬೆಂಗಳೂರು: ಸಿಲಿಕಾನ್ ಸಿಟಿಯ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜಕೀಯ ನಾಯಕರೂ ಫುಲ್ ಅಲರ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದೇವಸ್ಥಾನಗಳಿಗೂ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸೂಕ್ತ ತನಿಖೆಗೆ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ (Private School) ವಿದ್ವಂಸಕ ಕೃತ್ಯ ನಡೆಸುವುದಾಗಿ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಈಗಾಗಲೇ ಶಾಲೆಗಳಲ್ಲಿ ಪರಿಶೀಲನೆ ನಡೆಸುತ್ತಿವೆ. ಸಾರ್ವಜನಿಕರು ಮತ್ತು ಶಾಲಾ ಮಕ್ಕಳ ಪೋಷಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ತುಷ್ಠೀಕರಣ ಪರಿಣಾಮ ಮುಸ್ಲಿಮರಿಗೆ ನಮ್ಮದೇ ರಾಜ್ಯ ಎನ್ನುವ ಭ್ರಮೆ: ಮುತಾಲಿಕ್

    ಈ ಪ್ರಕರಣವನ್ನು ನಮ್ಮ‌ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಶಾಲೆಗಳು ಮತ್ತು ದೇವಾಲಯಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ ನೀಡಿದ್ದೇನೆ. ನಾಡಿನ ಜನರಿಗೆ ಸುರಕ್ಷಿತ ವಾತಾವರಣ, ನೆಮ್ಮದಿಯ ಬದುಕು ಕಲ್ಪಿಸಿಕೊಡಲು ನಮ್ಮ ಸರ್ಕಾರ (Government) ಬದ್ಧವಾಗಿದೆ. ವಿದ್ವಂಸಕ ಕೃತ್ಯದ ಬೆದರಿಕೆ ಒಡ್ಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವುದು, ಸಾರ್ವಜನಿಕರ ನೆಮ್ಮದಿ ಕದಡುವುದು ಇಂತಹಾ ಯಾವುದೇ ದುಷ್ಟ ಆಲೋಚನೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಘಟನೆಯ ಹಿಂದಿರುವ ದುಷ್ಟಶಕ್ತಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

    35 ಶಾಲೆಗಳ ಇ-ಮೇಲ್‌ ಪರಿಶೀಲನೆ:
    ಪೊಲೀಸರ ತನಿಖೆ (Police Investigation) ವೇಳೆ 15 ಅಲ್ಲ ಒಟ್ಟು 35 ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದುರುವುದು ಕಂಡುಬಂದಿದೆ. ʻಪಬ್ಲಿಕ್‌ ಟಿವಿʼ ವರದಿ ನೋಡಿ ಎಚ್ಚೆತ್ತ ಅಧಿಕಾರಿಗಳು ಶಾಲೆಗಳಲ್ಲಿ ಮೇಲ್‌ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಶಾಲೆಗಳ ಇಂಚಿಂಚೂ ಆವರಣಗಳನ್ನು ತಪಾಸಣೆ ನಡೆಸುಲಾಗುತ್ತಿದೆ. ಇದನ್ನೂ ಓದಿ: Bomb Threat: ಅಪ್ಪ-ಅಮ್ಮನಿಗೆ ಕಷ್ಟ ಆಗ್ತಿದೆ; ಪೊಲೀಸ್ ಕಂಪ್ಲೇಂಟ್ ಕೊಟ್ಟೇ ಕೊಡ್ತೀನಿ – ಪುಟ್ಟ ಬಾಲಕನ ಆಕ್ರೋಶ

    ಹುಸಿ ಬಾಂಬ್‌ ಕರೆ:
    ಆರಂಭಿಕ ತನಿಖೆಯಲ್ಲಿ ಬೆಂಗಳೂರು ಹೊರವಲಯದ ಹಲವು ಶಾಲೆಗಳಿಗೆ ಬಂದಿರುವುದು ಹುಸಿ ಬಾಂಬ್‌ ಬೆದರಿಕೆ ಕರೆ ಎಂಬುದು ಗೊತ್ತಾಗಿದೆ. ಅವು ಈ ಕೆಳಗಿನಂತಿವೆ.

    ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ 7 ಶಾಲೆಗಳಿಗೆ ಹುಸಿ ಬಾಂಬ್ ಕರೆ

    *ಗ್ರೀನ್ ಹುಡ್ ಹೈಸ್ಕೂಲ್, ದಿನ್ನೇಪಾಳ್ಯ
    *ಗ್ಲೋಬಲ್ ಇಂಟರ್ನ್ಯಾಷನಲ್ ಶಾಲೆ
    *ರಾಯನ್ ಇಂಟರ್ನ್ಯಾಷನಲ್ ಶಾಲೆ
    *ಆಲ್ ಬಷೀರ್ ಶಾಲೆ
    *ದೀಕ್ಷಾ ಹೈಟ್ ಶಾಲೆ
    *ಕಾಂಡರ್ ಇಂಟರ್ನ್ಯಾಷನಲ್ ಶಾಲೆ
    *ಬಿವಿಎಂ ಗ್ಲೋಬಲ್ ಶಾಲೆ

    ಹೆಬ್ಬಗೋಡಿಯ ಪೊಲೀಸ್ ಠಾಣಾ ವ್ಯಾಪ್ತಿಯ 4 ಶಾಲೆಗಳು

    *ಡಿವೈನ್ ಇಂಟರ್ನ್ಯಾಷನಲ್ ಶಾಲೆ
    *ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ
    *ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ
    *ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ

    ಸರ್ಜಾಪುರದ ಸರ್ಜಾಪುರ ಪೊಲೀಸ್ ಠಾಣೆ 5 ಶಾಲೆಗಳು

    *ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್
    *ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ
    *ಓಕರಿಡ್ಜ್ ಶಾಲೆ
    *ಟಿ ಐ ಎಸ್ ಬಿ ಶಾಲೆ
    *ಇನ್ವೆಂಚರ್ ಅಕಾಡೆಮಿ

  • Bomb Threat: ಅಪ್ಪ-ಅಮ್ಮನಿಗೆ ಕಷ್ಟ ಆಗ್ತಿದೆ; ಪೊಲೀಸ್ ಕಂಪ್ಲೇಂಟ್ ಕೊಟ್ಟೇ ಕೊಡ್ತೀನಿ – ಪುಟ್ಟ ಬಾಲಕನ ಆಕ್ರೋಶ

    Bomb Threat: ಅಪ್ಪ-ಅಮ್ಮನಿಗೆ ಕಷ್ಟ ಆಗ್ತಿದೆ; ಪೊಲೀಸ್ ಕಂಪ್ಲೇಂಟ್ ಕೊಟ್ಟೇ ಕೊಡ್ತೀನಿ – ಪುಟ್ಟ ಬಾಲಕನ ಆಕ್ರೋಶ

    ಬೆಂಗಳೂರು: ಅಪ್ಪ-ಅಮ್ಮನಿಗೆ ತುಂಬಾ ಕಷ್ಟ ಆಗ್ತಿದೆ, ನನ್ನ ಫ್ರೆಂಡ್ಸ್‌ಗೂ ಕಷ್ಟ ಆಗ್ತಿದೆ. ಲೆಟರ್‌ ಕಳಿಸಿರೋನ ವಿರುದ್ಧ ನಾನಂತೂ ಪೊಲೀಸ್‌ ಕಂಪ್ಲೇಂಟ್‌ (Police Complaint) ಕೊಟ್ಟೇ ಕೊಡ್ತೀನಿ… ಇದು ಬಾಂಬ್‌ ಬೆದರಿಕೆಗೆ ಒಳಗಿದ್ದ ಶಾಲೆಯ ಪುಟ್ಟ ಬಾಲಕನ (School Boy) ಆಕ್ರೋಶದ ನುಡಿ…

    ಉಗ್ರ ಸಂಘಟನೆ ಮುಜಾಹಿದ್ದೀನ್‌ ಬೆಂಬಲಿಸಿ ಬೆಂಗಳೂರಿನ (Bengaluru) 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ (Bomb Threat) ಹಾಕಿದ್ದಾರೆ. ಇ-ಮೇಲ್‌ ಮೂಲಕ ನಗರದ ಬಸವೇಶ್ವರ ನಗದರ ನ್ಯಾಪಲ್‌, ವಿದ್ಯಾಶಿಲ್ಪ ಸೇರಿದಂತೆ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಕೇಳಿಬಂದಿದೆ. ಈ ಬೆನ್ನಲ್ಲೇ ಬೆದರಿಕೆ ಬಂದಿರುವ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಪೋಷಕರು ಆತಂಕದಲ್ಲಿ ಬಂದು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಅವಹೇಳನ ಮಾಡ್ತಿರೋದಕ್ಕೆ ಬಾಂಬ್ ಬೆದರಿಕೆ ಸಂದೇಶ: ಆರ್.ಅಶೋಕ್

    ಈ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ʻಪಬ್ಲಿಕ್‌ ಟಿವಿʼಯೊಂದಿಗೆ (Public TV) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾನೆ. ಅಪ್ಪ-ಅಮ್ಮ ಕೆಲಸಕ್ಕೆ ಹೋಗಿರ್ತಾರೆ, ಅವರಿಗೂ ಕೆಲಸ ಇರುತ್ತೆ. ಹೇಗೋ ಕಷ್ಟಪಟ್ಟು ಶಾಲೆಗೆ ಕರೆದುಕೊಂಡು ಬರ್ತಾರೆ. ಪುನಃ ಶಾಲೆಗೆ ಬಂದು ಕರ್ಕೊಂಡ್‌ ಹೋಗ್ಬೇಕು ಅಂದ್ರೆ ಅವರಿಗೂ ಕಷ್ಟ ಆಗುತ್ತೆ. ನನ್ನ ಫ್ರೆಂಡ್ಸ್‌ಗೂ ಕಷ್ಟ ಆಗಿದೆ. ಬೆದರಿಕೆ ಲೆಟರ್‌ ಕಳಿಸಿದವನ ವಿರುದ್ಧ ಪೊಲೀಸ್‌ ಕಂಪ್ಲೆಂಟ್‌ ಕೊಟ್ಟೇ ಕೊಡ್ತೀನಿ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ – ಸ್ಥಳಕ್ಕೆ ಭೇಟಿ ನೀಡಿ ಖುದ್ದು ಮಾಹಿತಿ ಪಡೆದ ಡಿಸಿಎಂ

    20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ:
    ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿರುವ ಸಂಗತಿ ಬೆಳಿಕೆ ಬಂದಿತ್ತು. ತನಿಖೆ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ನಗರದ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ.

    ಖಾರಿಜೈಟ್ಸ್ ಎಂಬ ಮೂಲಭೂತವಾದಿ ಸಂಘಟನೆ ಹೆಸರಲ್ಲಿ ಬಂದ ಇ-ಮೇಲ್ ಬಂದಿದೆ. ಎಲ್ಲಾ ಶಾಲೆಗೂ ಒಂದೇ ರೀತಿಯ ಇ- ಮೇಲ್ ಬಂದಿರುವ ಮಾಹಿತಿ ಲಭ್ಯವಾಗಿದ್ದು, ರಾಜಕೀಯ ನಾಯಕರು ಆತಂಕ ಹೊರಹಾಕಿದ್ದಾರೆ. ಇದನ್ನೂ ಓದಿ: Bomb Threat: ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ; ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

  • ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ – ಸ್ಥಳಕ್ಕೆ ಭೇಟಿ ನೀಡಿ ಖುದ್ದು ಮಾಹಿತಿ ಪಡೆದ ಡಿಸಿಎಂ

    ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ – ಸ್ಥಳಕ್ಕೆ ಭೇಟಿ ನೀಡಿ ಖುದ್ದು ಮಾಹಿತಿ ಪಡೆದ ಡಿಸಿಎಂ

    – ಯಾವಾಗಲಾದ್ರೂ ನಿಜವಾಗಿಯೂ ಬಾಂಬ್‌ ಇಡಬಹುದು ಯಾವುದನ್ನೂ ಕಡೆಗಣಿಸೋಕೆ ಆಗಲ್ಲ ಎಂದ ಡಿಕೆಶಿ

    ಬೆಂಗಳೂರು: ಸಿಲಿಕಾನ್ ಸಿಟಿಯ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat)  ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜಕೀಯ ನಾಯಕರೂ ಫುಲ್ ಅಲರ್ಟ್ ಆಗಿದ್ದಾರೆ. ತಮ್ಮ ನಿವಾಸದ ಎದುರು ರಸ್ತೆಯಿಂದಾಚೆಯಿರುವ ಬೇಬಿ ಸಿಟ್ಟಿಂಗ್‌ಗೆ ಬಾಂಬ್ ಬೆದರಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ (DK Shivakumar) ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನೀವ್ ಬೇಬಿ ಸಿಟ್ಟಿಂಗ್‌ಗೆ ಇ-ಮೇಲ್ ಬಾಂಬ್ ಬೆದರಿಕೆ (E-Mail Bomb Threat) ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿ, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ, ಟಿವಿಯಲ್ಲಿ ವಿಷಯ ತಿಳಿದು ಗಾಬರಿ ಆದೆ. ಇದೊಂದು ಹುಸಿ ಕರೆ ಅಂತ ಮೇಲ್ನೋಟಕ್ಕೆ ಗೊತ್ತಾಗ್ತಿದೆ. 8-10 ಬಾರಿ ಹೀಗೆ ಹುಸಿ ಕರೆ ಮಾಡ್ತಾರೆ ಯಾವಗಲಾದರೂ ನಿಜವಾಗಿಯೂ ಬಾಂಬ್‌ ಇಡಬಹುದು ಯಾವುದನ್ನೂ ಕಡೆಗಣಿಸೋಕೆ ಆಗಲ್ಲ ಎಂದು ಹೇಳಿದ್ದಾರೆ.

    ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಅವರೂ ಸಹ ನಗರ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Bomb Threat: ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ; ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

    ಶಾಲೆಗಳಿಗೆ ರಜೆ:
    ಬಾಂಬ್ ಬೆದರಿಕೆ ಕೇಳಿಬಂದ ಕೂಡಲೇ ಆತಂಕಗೊಂಡ ಪೋಷಕರು ಶಾಲೆ ಬಳಿಗೆ ದೌಡಾಯಿಸಿ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಪೊಲೀಸ್ ತೀವ್ರ ತಪಾಸಣೆ ಕೈಗೊಂಡಿರುವುದರಿಂದ ಶಾಲೆಗಳಿಗೆ ರಜೆ ಘೋಷಿಸಿ ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಿಕೊಡಲಾಗುತ್ತಿದೆ.

    ಬಾಂಬ್ ಸ್ಕ್ವಾಡ್ ಆಗಮನ:
    ಇನ್ನೂ ಬಾಂಬ್ ಬೆದರಿಕೆ ಕೇಳಿಬಂದ ಎಲ್ಲಾ ಶಾಲೆಗಲ್ಲಿ ಈ ತೀವ್ರ ತಪಾಸಣೆ ನಡೆಯುತ್ತಿದ್ದು, ತುಮಕೂರಿನಿಂದ ಬಂದ ಬಾಂಬ್ ಸ್ಕ್ವಾಡ್ ಸಹ ಕರೆಸಲಾಗಿದೆ. ಯಲಹಂಕ 2 ಶಾಲೆಗಳು, ಭಾರತೀನಗರ ಸೆಂಟ್ ಜಾನ್ಸ್ ಸ್ಕೂಲ್, ಕೆಂಗೇರಿಯ ಚಿತ್ರಕೂಟ ಶಾಲೆಗಳಿಗೂ ಇಮೇಲ್ ಬೆದಿಕೆ ಬಂದಿದೆ. ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲೂ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದೆ: ಪೊಲೀಸ್ ಆಯುಕ್ತರು

    ಏನಿದು ಬಾಂಬ್ ಬೆದರಿಕೆ?
    ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಮೂಲಕ ನಗರದ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 7 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ.

    ಕಳೆದ ವರ್ಷವೂ ಬೆಂಗಳೂರು ನಗರದ 4 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಅಂದು ಕೂಡ ಇ-ಮೇಲ್ ಮಾಡಿರುವ ಆಗಂತುಕರು, ನಿಮ್ಮ ಶಾಲೆಯಲ್ಲಿ ಶಕ್ತಿಶಾಲಿ ಬಾಂಬ್ ಇರಿಸಲಾಗಿದ್ದು. ಎಚ್ಚರಿಕೆ ವಹಿಸುವುದು ನಿಮ್ಮ ಕರ್ತವ್ಯ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿದ್ದ ರಾಜ್ಯದ ತಂಡಕ್ಕೆ ಗಣ್ಯರ ಅಭಿನಂದನೆ

    ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರು. ಕೂಡಲೇ ಶಾಲೆಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.

  • ಎಲ್ಲಾ ಶಾಲೆಗಳಲ್ಲೂ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದೆ: ಪೊಲೀಸ್ ಆಯುಕ್ತರು

    ಎಲ್ಲಾ ಶಾಲೆಗಳಲ್ಲೂ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದೆ: ಪೊಲೀಸ್ ಆಯುಕ್ತರು

    ಬೆಂಗಳೂರು: ಸಿಲಿಕಾನ್ ಸಿಟಿಯ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಇ-ಮೇಲ್ ಬೆದರಿಕೆ ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ತೀವ್ರ ತಪಾಸಣೆ ಕೈಗೊಂಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಈಗಾಗಲೇ ಬೆದರಿಕೆ ಇ-ಮೇಲ್ ಮಾಡಲಾಗಿದ್ದ ಶಾಲೆಗಳಿಗೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಬಾಂಬ್ ಪತ್ತೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿದ್ದ ರಾಜ್ಯದ ತಂಡಕ್ಕೆ ಗಣ್ಯರ ಅಭಿನಂದನೆ

    ಬೆಂಗಳೂರು ನಗರದ ಕೆಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ನಮಗೆ ಮಾಹಿತಿ ಬಂದಕೂಡಲೇ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಶಾಲೆಗಳಿಗೆ ನಮ್ಮ ಬಾಂಬ್ ನಿಷ್ಕ್ರಿಯ ದಳ ಹೋಗಿ ತಪಾಸಣೆ ನಡೆಸಿದೆ. ಈ ಹಿಂದೆಯೂ ಸಹ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಅನ್ನಿಸುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

    15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ:
    ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಮೂಲಕ ನಗರದ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 7 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ.

    ಕಳೆದ ವರ್ಷವೂ ಬೆಂಗಳೂರು ನಗರದ 4 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಅಂದು ಕೂಡ ಇ-ಮೇಲ್ ಮಾಡಿರುವ ಆಗಂತುಕರು, ನಿಮ್ಮ ಶಾಲೆಯಲ್ಲಿ ಶಕ್ತಿಶಾಲಿ ಬಾಂಬ್ ಇರಿಸಲಾಗಿದ್ದು. ಎಚ್ಚರಿಕೆ ವಹಿಸುವುದು ನಿಮ್ಮ ಕರ್ತವ್ಯ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಲಾಗಿತ್ತು. ಇದನ್ನೂ ಓದಿ: COP28 Summit: ದುಬೈ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ – ಹಿಂದೂಸ್ತಾನ್‌ ಹಮಾರ ಎಂದ ಭಾರತೀಯರು

    ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರು. ಕೂಡಲೇ ಶಾಲೆಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.

  • ನಾನು ಬೆಂಗಳೂರಿಗ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಇದೆ – ನೂತನ ಪೊಲೀಸ್‌ ಕಮಿಷನರ್‌ ದಯಾನಂದ

    ನಾನು ಬೆಂಗಳೂರಿಗ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಇದೆ – ನೂತನ ಪೊಲೀಸ್‌ ಕಮಿಷನರ್‌ ದಯಾನಂದ

    – ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಆಗಿ ಅಧಿಕಾರ ಸ್ವೀಕಾರ

    ಬೆಂಗಳೂರು: ನಗರ ಪೊಲೀಸ್‌ ಕಮಿಷನರ್‌ (Bengaluru Police Commissioner) ಆಗಿ ಬಿ.ದಯಾನಂದ (B.Dayananda) ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ಅವರು ಬ್ಯಾಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

    ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಯಾನಂದ ಅವರು, ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿಯಾಗಿದೆ. ನಗರದ ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಲು ಅವಕಾಶ ಕೊಟ್ಟ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪೊಲೀಸ್ ಇಲಾಖೆ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಾನು ಹುಟ್ಟಿ ಬೆಳದ ಸ್ಥಳ ಬೆಂಗಳೂರು. ನಾನು ಬೆಂಗಳೂರಿಗಾ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

    ಬಹಳಷ್ಟು ಚಾಲೆಂಜ್‌ಗಳು‌ ಕೂಡ ಇವೆ. ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ. ಬೆಂಗಳೂರಿನಲ್ಲಿ ತಂತ್ರಜ್ಞಾನದ ಅವಶ್ಯಕತೆ ಇದೆ. ಪೊಲೀಸ್ ವ್ಯವಸ್ಥೆ ನೇರವಾಗಿ ಇರಬೇಕು, ಹತ್ತಿರವಾಗಿ ಇರಬೇಕು. ನಗರದ ಟ್ರಾಫಿಕ್ ನಿರ್ವಹಣೆಗೆ ಬೇರೆ ಬೇರೆ ಇಲಾಖೆಗಳ ಸಹಭಾಗಿತ್ವ ಬೇಕು ಎಂದು ಹೇಳಿದರು.

    ಸಂಬಂಧಿತ ಇಲಾಖೆಗಳ ಜೊತೆಗೆ ಸೇರಿ ಟ್ರಾಫಿಕ್ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತೇವೆ. ಮತ್ತೆ ಟೋಯಿಂಗ್ ಮಾಡೋ ಬಗ್ಗೆ ಯಾವುದೇ ತೀರ್ಮಾನ ಇಲ್ಲ. ಅದರ ಸಾಧಕ-ಬಾಧಕಗಳನ್ನು ಪರಿಶೀಲನೆ ನಡೆಸಿ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಇದನ್ನೂ ಓದಿ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ- ತಪ್ಪಿದ ಭಾರೀ ಅನಾಹುತ

    ಸೈಬರ್ ಕ್ರೈಮ್ ಪೊಲೀಸರಿಗೆ ತರಬೇತಿ ಕೊರತೆ ಇದೆ. ಅತಿ ಹೆಚ್ಚು ಕೇಸ್‌ಗಳು ದಾಖಲಾಗಿ ಓವರ್ ಲೋಡ್ ಆಗ್ತಿದೆ. ಅದರಿಂದ ಸಣ್ಣಪುಟ್ಟ ಕೇಸ್‌ಗಳು ಸ್ಥಳೀಯ ಠಾಣೆಗಳಲ್ಲಿ ದಾಖಲಿಸಲು ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

  • ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಬೆಂಗಳೂರು: ನ್ಯೂ ಇಯರ್ ವೆಲ್‌ಕಮ್‌ಗೆ (New Year Celebration) ಬೆಂಗಳೂರು ಪೊಲೀಸ್ (Bengaluru Police) ಸರ್ಪಗಾವಲಿನಲ್ಲಿ ಇರಲಿದೆ. ಈಗಾಗಲೇ ತಯಾರಿ ಶುರುವಾಗಿದ್ದು, ಕ್ಲಬ್ -ಪಬ್‌ಗಳೂ (Club, Pub) ಸಹ ತಯಾರಿ ನಡೆಸಿವೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸ್ಪೆಷಲ್ ಪಿಂಕ್‌ಸ್ಕ್ವಾಡ್‌ (Police Pink Squad) ಫೀಲ್ಡಿಗಿಳಿದಿದೆ.

    ಮಹಿಳಾ ಪೊಲೀಸರನ್ನು (Women Police) ವಿವಿಧ ತಂಡಗಳಾಗಿ ಮಾಡಿ ಫೀಲ್ಡ್‌ಗೆ ಇಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆ ಮೂಲಕ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಸಿಸಿಟಿವಿ, 50 ಬಾಡಿ ಕ್ಯಾಮೆರಾ (BodyCamera) ಹಾಕಲು ತೀರ್ಮಾನಿಸಲಾಗಿದೆ. ಕ್ಲಬ್ ಮತ್ತು ಪಬ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಕ್ಲಬ್‌ನವರೇ ಲೇಡಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಲಬ್ ಮತ್ತು ಪಬ್, ಹೋಟೆಲ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಲಬ್ ನವರೇ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಯಾವ ಕ್ಲಬ್ ಮತ್ತು ಪಬ್‌ನಲ್ಲಿ ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಹೋಟೆಲ್ ಮತ್ತು ಪಬ್ ಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ರೆ ಕ್ಲಬ್ ನವರೇ ಹೊಣೆಯಾಗ್ತಾರೆ. ಪಾರ್ಟಿ ವೇಳೆ ಡ್ರಗ್ಸ್ ಬಳಕೆ ಮಾಡಿರೋದು ಗೊತ್ತಾದರೆ ಕಠಿಣ ಕ್ರಮದ ಜೊತೆಗೆ ಲೈಸೆನ್ಸ್ (ಪರವಾನಗಿ) ರದ್ದು ಮಾಡಲಾಗುತ್ತದೆ. ಇನ್ನೂ 2-3 ದಿನಗಳಲ್ಲಿ ಈ ಸಂಬಂಧ ಕಂಪ್ಲೀಟ್ ಡಿಟೇಲ್ಸ್ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]