Tag: bengaluru palace

  • ಮಕ್ಕಳ ಕಾಲೇಜು ಫೀಸ್‌ಗೆ ಸಾಲ ಮಾಡಿ ತಂದಿಟ್ಟ ಹಣವನ್ನೇ ದೋಚಿದ ಖದೀಮರು

    ಮಕ್ಕಳ ಕಾಲೇಜು ಫೀಸ್‌ಗೆ ಸಾಲ ಮಾಡಿ ತಂದಿಟ್ಟ ಹಣವನ್ನೇ ದೋಚಿದ ಖದೀಮರು

    ಬೆಂಗಳೂರು: ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ, ಕಾಲೇಜು ಫೀಸ್ ಕಟ್ಟಲು ಎತ್ತಿಟ್ಟಿದ್ದ ಹಣವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ಪ್ಯಾಲೇಸ್ ಆವರಣದಲ್ಲಿರುವ ಮನೆಯಲ್ಲಿ ನಡೆದಿದೆ.

    ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಯಾರು ಇಲ್ಲದ ಸಮಯ ನೋಡಿಕೊಂಡು ಬಾಗಿಲು ಮುರಿದು, ಒಳಗಡೆ ಹೋಗಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ಇದನ್ನೂ ಓದಿ: ಹೊಸ ದಾಖಲೆಗೆ ಸಿದ್ಧವಾಗ್ತಿದೆ ಕೆಆರ್‌ಎಸ್ – ಡ್ಯಾಂ ಸಂಪೂರ್ಣ ಭರ್ತಿಗೆ 5 ಅಡಿ ಬಾಕಿ

    ಮನೆಯಲ್ಲಿದ್ದ 2 ಬೀರು ಒಡೆದು, ಅದರಲ್ಲಿದ್ದ ಚಿನ್ನಾಭರಣ, ನಗದು ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಮಕ್ಕಳ ಕಾಲೇಜು ಫೀಸ್ ಕಟ್ಟೋಕೆ ಸಾಲ ಮಾಡಿ, ಮನೆಯಲ್ಲಿ ಹಣ ತಂದಿಟ್ಟಿದ್ದರು. ಇದೇ ಹಣವನ್ನು ಖದೀಮರು ಕಳ್ಳತನ ಮಾಡಿಕೊಂಡು ಹೋಗಿರುವುದರಿಂದ ಮನೆ ಮಾಲೀಕ ಶ್ರೀನಿವಾಸ್ ದಿಕ್ಕು ತೋಚದೇ ಕಂಗಾಲಾಗಿದ್ದಾರೆ.

    ಈ ಸಂಬಂಧ ಶ್ರೀನಿವಾಸ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲೇ ಪಕ್ಕದ ಕೆರೆಯಲ್ಲಿ ಮೀನು ಹಿಡಿಯಲು ಬರುವವರೇ ಕಳ್ಳತನ ಮಾಡಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಇದನ್ನೂ ಓದಿ: ಅಮೆರಿಕದ ಮೇಲೆ ಇರಾನ್‌ ಪ್ರತಿದಾಳಿ ಮಾಡೇ ಮಾಡುತ್ತೆ: ಕರ್ನಲ್ ವೆಂಕಟೇಶ್ ನಾಯ್ಕ್

  • ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಕೋರಿ ರಾಜ್ಯದಿಂದ ಸುಪ್ರೀಂಗೆ ಅರ್ಜಿ ಸಾಧ್ಯತೆ

    ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಕೋರಿ ರಾಜ್ಯದಿಂದ ಸುಪ್ರೀಂಗೆ ಅರ್ಜಿ ಸಾಧ್ಯತೆ

    ನವದೆಹಲಿ: ಮೈಸೂರು ರಾಜ ಮನೆತನಕ್ಕೆ 3,400 ಕೋಟಿ ರೂ. ಟಿಡಿಆರ್ (TDR) ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ (Supreme Court) ಮತ್ತೊಂದು ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ (State Government) ಸಿದ್ಧತೆ ಮಾಡಿಕೊಂಡಿದ್ದು, ಸದ್ಯ ಕೋರ್ಟ್‌ನಲ್ಲಿ ಠೇವಣಿ ಇಟ್ಟಿರುವ ಟಿಡಿಆರ್ ಅನ್ನು ರಾಜಮನೆತನಕ್ಕೆ ವರ್ಗಾಯಿಸದಂತೆ ಮನವಿ ಮಾಡುವ ಸಾಧ್ಯತೆಯಿದೆ.

    ಬೆಂಗಳೂರಿನ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15 ಎಕರೆಗಳಿಗೂ ಅಧಿಕ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 3,400 ಕೋಟಿ ರೂ.ಗಳ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ತನ್ನಲ್ಲಿ ಠೇವಣಿ ಇಡುವಂತೆ ಕೋರ್ಟ್ ಸೂಚನೆ ನೀಡಿತ್ತು.ಇದನ್ನೂ ಓದಿ: ಮಾರಿಷಸ್‌ನಲ್ಲಿ ಹೊಸ ಸಂಸತ್ ನಿರ್ಮಾಣಕ್ಕೆ ಭಾರತದ ಸಹಕಾರ: ಪ್ರಧಾನಿ ಮೋದಿ

    ಕಳೆದ ವಿಚಾರಣೆಯಲ್ಲಿ ರಿಜಿಸ್ಟಾರ್ ಬಳಿ ಟಿಡಿಆರ್ ಠೇವಣಿ ಇಡಲು ಪೀಠ ಸೂಚಿಸಿತ್ತು. ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಕಪಿಲ್ ಸಿಬಲ್, ಇದನ್ನು ರಾಜಮನೆತನಕ್ಕೆ ನೀಡುವುದಿಲ್ಲ ಎನ್ನುವ ಬಗ್ಗೆ ಖಾತ್ರಿ ಕೇಳಿದ್ದರು. ಆದರೆ ಇದಕ್ಕೆ ನಿರಾಕರಿಸಿದ್ದ ಕೋರ್ಟ್ ಇದನ್ನು ನೀವು ನಮಗೆ ಹೇಳಿವಂತಿಲ್ಲ ಎಂದು ಹೇಳಿತ್ತು.

    ಸದ್ಯ ನ್ಯಾಯಾಂಗ ನಿಂದನೆಯಿಂದ ಪಾರಾಗಲು ಮಾ.7 ರಂದು ಟಿಡಿಆರ್ ಅನ್ನು ಠೇವಣಿ ಇಟ್ಟಿರುವ ಸರ್ಕಾರ ಅದನ್ನು ಕೋರ್ಟ್ ಮೂಲಕವೇ ರಾಜಮನೆತನ ಪಡೆಯಬಹುದು ಎನ್ನುವ ಭೀತಿಯಲ್ಲಿದೆ. ಹೀಗಾಗಿ ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಮನವಿ ಮಾಡಿ, ಪ್ರತ್ಯೇಕ ಅರ್ಜಿಯೊಂದನ್ನು ಸೋಮವಾರ ಸಲ್ಲಿಕೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.ಇದನ್ನೂ ಓದಿ: ನಾರಿಮಣಿಯರ ಮನಗೆದ್ದ ಬ್ಯೂಟಿಫುಲ್ ಫ್ರಾಕ್‌ಗಳಿವು

     

  • ಮಗನ ಮದ್ವೆ ಬೆಂಗ್ಳೂರು ಪ್ಯಾಲೇಸ್‍ನಲ್ಲೇ ಮಾಡ್ಬೇಕೆಂಬ ಆಸೆ: ಹೆಬ್ಬಾಳ್ಕರ್

    ಮಗನ ಮದ್ವೆ ಬೆಂಗ್ಳೂರು ಪ್ಯಾಲೇಸ್‍ನಲ್ಲೇ ಮಾಡ್ಬೇಕೆಂಬ ಆಸೆ: ಹೆಬ್ಬಾಳ್ಕರ್

    -ಯಾರಾದ್ರೂ ಪಂಚಮಸಾಲಿ ಕನ್ಯಾ ಇದ್ರೆ ನೋಡ್ರಪ್ಪಾ

    ಬಳ್ಳಾರಿ: ನನಗೂ ಕೂಡ ನನ್ನ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್‍ನಲ್ಲೇ ಮಾಡಬೇಕಂತಾ ಆಸೆ ಇದೆ ಎಂದು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ವಿವಾಹದ ಸೀಕ್ರೆಟ್ ಅನ್ನು ಬಿಚ್ಚಿಟ್ಟರು.

    ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ಆರಾಧ್ಯದೈವ ಬಸವೇಶ್ವರ ಕಾರ್ತಿಕೋತ್ಸವದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನನ್ನ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್ ನಲ್ಲಿ ಮಾಡಬೇಕು ಅಂತಾ ಕನಸು ಕಾಣುತ್ತಿದ್ದೀನಿ. ನನ್ನ ಮಗ ಇಂಜಿನಿಯರ್, ಯಾರಾದರೂ ಪಂಚಮಸಾಲಿ ಕನ್ಯಾ ಇದ್ದರೆ ನೋಡ್ರಪ್ಪಾ ಒಂದು ಚೂರ್ ಎಂದರು.

    ನನಗೆ ಒಬ್ಬನೇ ಮಗ ಇದ್ದಾನೆ, ನಾನು ಸಮಾಜಕ್ಕಾಗಿ ನನ್ನ ಮಗನನ್ನ ತ್ಯಾಗ ಮಾಡಲ್ಲ. ರಾಜಕಾರಣಿಗಳು ಮುಖವಾಡ ಹಾಕಿರ್ತಾರೆ. ಆದರೆ ಸ್ವಾಮಿಗಳು ಮುಖವಾಡ ಹಾಕಿರಲ್ಲ. ಅವರಿಗೂ ತಂದೆ-ತಾಯಿ ಇರ್ತಾರೆ. ಆದರೆ ಸಮಾಜಕ್ಕಾಗಿ ತ್ಯಾಗ ಮಾಡಿ ನಿಸ್ವಾರ್ಥ ಸೇವೆ ಮಾಡುತ್ತಾರೆ. ನಾವು ಸಮಾಜಕ್ಕೆ ಮಕ್ಕಳನ್ನ ತ್ಯಾಗ ಮಾಡಲ್ಲ. ಸ್ವಾಮಿಗಳು ಅವರ ಜೀವನವನ್ನೇ ತ್ಯಾಗ ಮಾಡುತ್ತಾರೆ ಎಂದು ಹೇಳುತ್ತಾ ವೇದಿಕೆಯಲ್ಲಿ ತಮ್ಮ ಮಗನ ಮದುವೆ ಬಗ್ಗೆ ಮಾತನಾಡಿದ್ದಾರೆ.

  • ಮೈಸೂರು ಯದುವಂಶದ ಯುವರಾಜನಿಗೆ ನಾಮಕರಣ

    ಮೈಸೂರು ಯದುವಂಶದ ಯುವರಾಜನಿಗೆ ನಾಮಕರಣ

    ಬೆಂಗಳೂರು: ಯದುವಂಶದ ಕುಡಿ, ಯುವರಾಜನಿಗೆ ರಾಜಮಾತೆ ಪ್ರಮೋದಾದೇವಿ ಚೆಂದದ ಹೆಸರನ್ನು ಇಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ನಲ್ಲಿ ರಾಜಮಾತೆ ಪ್ರಮೋದ ದೇವಿ ಮುದ್ದು ಮೊಮ್ಮಗನಿಗೆ ಆದ್ಯವೀರ್ ನರಸಿಂಹ ರಾಜ ಓಡೆಯರ್ ಅಂತಾ ಹೆಸರಿಟ್ಟರು.

    ಮೈಸೂರು ರಾಜಮನೆತನಕ್ಕೆ ರಾಜಕುಮಾರನ ಆಗಮನವಾದಾಗ ಇಡೀ ರಾಜ್ಯವೇ ಸಂಭ್ರಮ ಪಟ್ಟಿತ್ತು. ಇಂದು ಯದುವೀರ್ ತ್ರಿಷಿಕಾ ದಂಪತಿಯ ಮುದ್ದು ಕಂದನ ನಾಮಕರಣ ಸಮಾರಂಭದಲ್ಲಿ ರಾಜ ಕುಟುಂಬಸ್ಥರು ಭಾಗಿಯಾಗಿ ಯುವರಾಜನಿಗೆ ಶುಭ ಹಾರೈಸಿದರು. ಇನ್ನು ಮೈಸೂರು ಅರಮನೆ ಬಿಟ್ಟು ಬೆಂಗಳೂರು ಪ್ಯಾಲೇಸ್ ನಲ್ಲಿ ನಡೆದ ಸರಳ ನಾಮಕರಣ ಸಮಾರಂಭ ಎಲ್ಲರ ಹುಬ್ಬೇರಿಸಿತ್ತು. ಮಾಧ್ಯಮದವರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು. ಹತ್ತಿರದ ಸಂಬಂಧಿಗಳಷ್ಟೇ ಭಾಗಿಯಾಗಿದ್ರು.

    ನಾಮಕರಣ ಪ್ರಯುಕ್ತ ಬೆಂಗಳೂರು ಪ್ಯಾಲೇಸ್ ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ವಿದೇಶಿ ಪ್ರವಾಸಿಗರು ಸೇರಿದಂತೆ ನೂರಾರು ಜನ ಪ್ರವಾಸಿಗರು ನಿರಾಸೆ ಯಲ್ಲಿ ವಾಪಸು ತೆರಳಿದ್ರು. ಅತ್ಯಂತ ಸರಳವಾಗಿ ಯುವರಾಜನ ನಾಮಕರಣ ಸಮಾರಂಭ ನಡೆಯಿತು. ಆದ್ಯವೀರ್ ಯುವರಾಜ ಮೈಸೂರು ಸಂಸ್ಥಾನದ ಹೆಸರು ಉಳಿಸಿ ಬೆಳಸಲಿ ಎಂದು ಜನ ಹಾರೈಸಿದರು.

  • ಬೆಂಗಳೂರು ಅರಮನೆಯಲ್ಲಿಂದು ಯದುವಂಶದ ಕುಡಿಗೆ ನಾಮಕರಣ

    ಬೆಂಗಳೂರು ಅರಮನೆಯಲ್ಲಿಂದು ಯದುವಂಶದ ಕುಡಿಗೆ ನಾಮಕರಣ

    ಬೆಂಗಳೂರು: ಇಂದು ಬೆಂಗಳೂರು ಅರಮನೆಯಲ್ಲಿ ಯದುವಂಶದ ಕುಡಿಗೆ ನಾಮಕರಣ ಕಾರ್ಯಕ್ರಮ ನಡೆಯಲಿದೆ.

    ಬೆಂಗಳೂರಿನ ಅರಮನೆಯಲ್ಲಿ ನಡೆಯುವ ಸರಳ ಸಮಾರಂಭಕ್ಕೆ ಬಂಧುಗಳು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈಗಾಗಲೇ ರಾಜಮಾತೆ ಪ್ರಮೋದಾದೇವಿ ಬೆಂಗಳೂರಿನ ಅರಮನೆಗೆ ಆಗಮಿಸಿದ್ದಾರೆ. ಆದರೆ ಮೈಸೂರಿನ ಅರಮನೆಯಲ್ಲಿ ಯಾಕೆ ಯದುವಂಶದ ಕುಡಿಯ ನಾಮಕರಣ ಕಾರ್ಯಕ್ರಮ ನಡೆಯುತ್ತಿಲ್ಲ ಎಂಬ ಅಂಶ ಚರ್ಚೆಗೆ ಗ್ರಾಸವಾಗಿದೆ.

    ಕಳೆದ ಡಿಸೆಂಬರ್‍ನಲ್ಲಿ ಮಹಾರಾಜ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಿಕೊಡಲಾಗಿತ್ತು.

    ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?