Tag: Bengaluru One

  • ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನ – ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ

    ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನ – ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ

    – ಮಂಗಳವಾರದಿಂದ ಬೆಂಗಳೂರು ಒನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ

    ಬೆಂಗಳೂರು: ಬಿ ಖಾತಾದಿಂದ ಎ ಖಾತಾ (A Khata) ಪರಿವರ್ತನೆಗೆ ಈಗಾಗಲೇ ಅರ್ಜಿ ಆಹ್ವಾನ ಆಗಿದೆ. ಬೆಂಗಳೂರಿನ (Bengaluru) 500ಕ್ಕೂ ಹೆಚ್ಚು ಮಂದಿ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರದಿಂದ ಬೆಂಗಳೂರು ಒನ್‌ನಲ್ಲಿ (Bengaluru One) ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ. ಮತ್ತೊಂದು ಕಡೆ ಅರ್ಜಿ ಸಲ್ಲಿಕೆಯ ಡೆಮೋ ವೀಡಿಯೋವನ್ನ ಜಿಬಿಎ ಇಂದು ರಿಲೀಸ್ ಮಾಡಲಿದೆ.

    ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಾರಿ ಆದ ಬಳಿಕ ಸರ್ಕಾರ ಬೆಂಗಳೂರಿಗರಿಗೆ ನೀಡಿರೋ ದೊಡ್ಡ ಗಿಫ್ಟ್ ಅಂದರೆ ಅದು ಬಿ ಖಾತೆಗಳಿಗೆ ಎ ಖಾತಾ ಮಾನ್ಯತೆ ನೀಡಿರುವುದು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವೆಬ್‌ಸೈಟ್ ಬಿಡುಗಡೆ ಮಾಡಿ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅರ್ಜಿ ಹಾಕೋದಕ್ಕೆ ಅವಕಾಶ ನೀಡಿ ಐದು ದಿನ ಆಗಿದ್ದು, 500 ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 3 ಸಾವಿರ ಜನ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಮಾಹಿತಿ ಪಡೆದುಕೊಂಡಿರೋದು ಬಯಲಾಗಿದೆ. ಬೆಂಗಳೂರು ಜನ ಬಿ ಖಾತಾ ಪರಿವರ್ತನೆಯ ವೆಬ್‌ಸೈಟ್‌ಗೆ ವಿಸಿಟ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಇದನ್ನೂ ಓದಿ: ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಅರ್ಜಿ ಸಲ್ಲಿಕೆಯನ್ನ ಬೆಂಗಳೂರು ಒನ್‌ಗಳಲ್ಲೂ ಕೂಡ ಅಪ್ಲೈ ಮಾಡಬಹುದಾಗಿದೆ. ನಾಳೆಯಿಂದ ಬೆಂಗಳೂರು ಒನ್‌ಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಜನರೇ ತಮ್ಮ ಮೊಬೈಲ್‌ನಲ್ಲಿ ಹೇಗೆ ಅರ್ಜಿ ಸಲ್ಲಿಕೆ ಮಾಡಿಕೊಳ್ಳೋದು ಮತ್ತು ಅರ್ಜಿ ಸಲ್ಲಿಕೆ ಕ್ರಮ ಹೇಗೆ ಅಂತಾ ಒಂದು ಡೆಮೋ ವೀಡಿಯೋವನ್ನ ಬಿಡುಗಡೆ ಮಾಡುವುದಾಗಿ ಪಬ್ಲಿಕ್ ಟಿವಿಗೆ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಲಾಠಿ, ಗನ್‌ ಟ್ರೈನಿಂಗ್‌ ಕೊಟ್ಟಿದ್ದೀರಾ ಎಂದ ‘ಕೈ’ ನಾಯಕರಿಗೆ ಟಾಂಗ್‌ – ತಂದೆ, ನಾನು, ಮಗ RSS ಎಂದ ಸುನಿಲ್‌ ಕುಮಾರ್‌

    ಎ ಖಾತಾ ಪಡೆಯಬೇಕು ಅಂದರೆ 5% ಮಾರ್ಗಸೂಚಿ ದರ ಕೂಡ ಕಟ್ಟಬೇಕಾಗಿದೆ. ಇದು ಮಧ್ಯಮ ವರ್ಗಕ್ಕೆ ಹೊರೆ ಆಗುತ್ತದೆ, ವಿನಾಯ್ತಿ ಮಾಡಿ ಅಂತಾ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ. ಆದರೆ ಡಿಸಿಎಂ ಮಾರ್ಗಸೂಚಿ ದರ 5% ಕಡಿಮೆ ಬೆಲೆ. ಬೆಲೆ ಫಿಕ್ಸ್ ಮಾಡಲಾಗಿದೆ, ವಿನಾಯಿತಿ ಇಲ್ಲ. ಎ ಖಾತಾ ಆದರೆ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ ಮತ್ತು ಸೈಟ್ ಬೆಲೆ ಜಾಸ್ತಿ ಕೂಡ ಆಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಗೆ

  • ಗುಡ್‌ನ್ಯೂಸ್ – ಇನ್ಮುಂದೆ ಬೆಂಗಳೂರು ಒನ್‌ನಲ್ಲೇ ಆಸ್ತಿ ತೆರಿಗೆ ಪಾವತಿಗೆ ಅವಕಾಶ!

    ಗುಡ್‌ನ್ಯೂಸ್ – ಇನ್ಮುಂದೆ ಬೆಂಗಳೂರು ಒನ್‌ನಲ್ಲೇ ಆಸ್ತಿ ತೆರಿಗೆ ಪಾವತಿಗೆ ಅವಕಾಶ!

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಬಿಬಿಎಂಪಿಯ (BBMP) ಕಂದಾಯ ಸೇವೆಗಳು ದೊಡ್ಡ ತಲೆನೋವಾಗಿವೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿ, ಪಹಣಿ ಇವೆಲ್ಲ ಮಾಡಿಸೋದು ಕಷ್ಟಕರವಾಗಿದೆ. ಇದೀಗ ಬಿಬಿಎಂಪಿ ಇದನ್ನು ಸರಳೀಕರಣ ಮಾಡಲು ಮುಂದಾಗಿದೆ. ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಕಂದಾಯ ಸೇವೆಗಳ (Revenue Service) ಸರಳೀಕರಣ ಘೋಷಣೆ ಆಗಲಿದೆ.

    ಆಸ್ತಿ ತೆರಿಗೆ ಪಾವತಿಯನ್ನು (Property Tax Payment) ಆನ್‌ಲೈನ್‌ನಲ್ಲಿ ಮಾಡುವಂತೆ ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ. ಆನ್‌ಲೈನ್‌ನಲ್ಲಿ ಸಾರ್ವಜನಿಕರು ತಾಂತ್ರಿಕ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಇದೇ ಮೊದಲ ಬಾರಿಗೆ ಬೆಂಗಳೂರು ಒನ್‌ಗಳಲ್ಲಿ (Bengaluru One) ಆಸ್ತಿ ತೆರಿಗೆ ಪಾವತಿ ಮಾಡೋದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಬಜೆಟ್‌ನಲ್ಲಿ ಘೋಷಣೆ ಮಾಡಲು ಮುಂದಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು

    ಬಿಬಿಎಂಪಿ ಬಜೆಟ್‌ಗೆ ಸಾರ್ವಜನಿಕರಿಂದ ಸಾಲು ಸಾಲು ಸಲಹೆಗಳು ಬರುತ್ತಿವೆ. ಅದರಲ್ಲೂ ಕಂದಾಯ ವಿಭಾಗಕ್ಕೆ ಹಲವು ಸಲಹೆಗಳು ಬಂದಿವೆ. ಖಾತೆ ಬದಲಾವಣೆ, ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಹೀಗೆ ಹಲವು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲು ಸಲಹೆ ಬಂದಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಹಲವಾರು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್

    ಯಾವೆಲ್ಲಾ ಕಂದಾಯ ಸೇವೆ ಸರಳೀಕರಣ ಆಗಲಿವೆ?
    1. ಬೆಂಗಳೂರು ಒನ್‌ಗಳಲ್ಲಿ ಆಸ್ತಿ ತೆರಿಗೆ ಪಾವತಿ ಬಗ್ಗೆ ಬಜೆಟ್‌ನಲ್ಲಿ ಘೋಷಣೆ
    2. ಆನ್‌ಲೈನ್‌ನಲ್ಲಿ ಖಾತೆ ಬದಲಾವಣೆ ಸೇವೆ
    3. ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಖಾತೆ ಮಾಡಿಸಲು ಆನ್‌ಲೈನ್ ಸೇವೆ
    4. ಡಿಜಿಟಲ್‌ನಲ್ಲಿ ಆಸ್ತಿ ಮ್ಯಾಪ್ ರೆಕಾರ್ಡಿಂಗ್ ಸೇವೆ
    5. ಕಂದಾಯ ಸೇವೆಯನ್ನು ಡಿಜಿಟಲೀಕರಣ ಆಗಿ ಮಾರ್ಪಾಡು ಮಾಡುವುದು

    ಒಟ್ಟಾರೆ ಕಂದಾಯ ಸೇವೆಗಳನ್ನು ಡಿಜಿಟಲೀಕರಣ ಮಾಡಿ ಜನರು ಕಚೇರಿಯಿಂದ ಕಚೇರಿಗೆ ಅಲೆಯೋದನ್ನು ತಪ್ಪಿಸಲು ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡಲು ಮುಂದಾಗಿದ್ದು, ಕಂದಾಯ ಸೇವೆಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿವೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿಂದು ಶೋಷಿತ ಸಮುದಾಯಗಳ ಬೃಹತ್ ಸಮಾವೇಶ – 2 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ

  • ಅರ್ಜಿ ಹಾಕದಿದ್ರೆ ವಿದ್ಯುತ್‌ ಉಚಿತ ಇಲ್ಲ – ಸಚಿವ ಕೆ.ಜೆ.ಜಾರ್ಜ್

    ಅರ್ಜಿ ಹಾಕದಿದ್ರೆ ವಿದ್ಯುತ್‌ ಉಚಿತ ಇಲ್ಲ – ಸಚಿವ ಕೆ.ಜೆ.ಜಾರ್ಜ್

    ಚಿಕ್ಕಮಗಳೂರು: ಗೃಹಜ್ಯೋತಿ ಯೋಜನೆ (Gruhajyothi Scheme) ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸೋಕೆ ಜುಲೈ 25ರ ವರೆಗೂ ಸಮಯವಿದೆ. ಅರ್ಜಿ ಹಾಕದವರಿಗೆ ವಿದ್ಯುತ್ ಉಚಿತ (Free Electricity) ಸಿಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ (KJ George) ಹೇಳಿದ್ದಾರೆ.

    ನಗರದ ಐಡಿಎಸ್‌ಜಿ ಕಾಲೇಜು ಗ್ರೌಂಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಗೃಹಜ್ಯೋತಿ ಯೋಜನೆ ಕೆಲಸ ಚೆನ್ನಾಗಿ ಆಗುತ್ತಿದೆ. 86.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಜುಲೈ 1ರಿಂದಲೇ ಎಲ್ಲರಿಗೂ ಫ್ರೀ ಕರೆಂಟ್ ಸಿಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ, ಗೃಹಜ್ಯೋತಿ ಇಂದಿನಿಂದ ಜಾರಿ

    ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಬಿಲ್ ಬರುತ್ತೆ. ಜೂನ್ ತಿಂಗಳಿನದ್ದು ಜುಲೈಗೆ ಬರಲಿದೆ. ಎಲಿಜಬಲ್ ಇರೋ ಎಲ್ಲರಿಗೂ ಆಗಸ್ಟ್ 1ಕ್ಕೆ ಬಿಲ್ ಬರಲಿದ್ದು. ಉಚಿತ ಕರೆಂಟ್ ಸಿಗಲಿದೆ. ಈವರೆಗೆ ಅರ್ಜಿ ಸಲ್ಲಿಕೆ ಮಾಡದವರು ಕೂಡಲೇ ಅರ್ಜಿ ಸಲ್ಲಿಸಬೇಕು. ಸರ್ವರ್ ಬ್ಯೂಸಿ ಇದ್ದರೆ, ಕೆಇಬಿ ಆಫೀಸಿಗೂ ಹೋಗಿ ಅರ್ಜಿ ಕೊಡಬಹುದು. ಮೊದಲಿನಂತೆ ಈಗ ಸರ್ವರ್‌ ಸಮಸ್ಯೆಯಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಉಚಿತ ಕರೆಂಟ್‌ ಸೌಲಭ್ಯ ಸಿಗಲ್ಲ ಎಂದು ಎಚ್ಚರಿಸಿದ್ದಾರೆ.  ಇದನ್ನೂ ಓದಿ: ವಿರೋಧ ಪಕ್ಷದ ನಾಯಕರು ಬೇಕಾಗಿದ್ದಾರೆ – ಟ್ವೀಟ್‌ನಲ್ಲೇ ಕಾಲೆಳೆದ ಕಾಂಗ್ರೆಸ್‌

    ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದವರಗೆ ಮಾತ್ರ ಆಗಸ್ಟ್‌ ತಿಂಗಳಿಂದ ಕರೆಂಟ್‌ ಬಿಲ್‌ ಫ್ರೀ ಇರಲಿದೆ. ಇಲ್ಲದಿದ್ದರೆ, ಉಚಿತ ಇರಲ್ಲ. ಅರ್ಜಿ ಹಾಕೋದು ತಡ ಮಾಡಿದ್ರೆ, ಸೌಲಭ್ಯ ಸಿಗೋದು ಕೂಡ ತಡವಾಗುತ್ತೆ. ಆದ್ದರಿಂದ ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಬೆಂಗಳೂರು: ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ (Gruhajyothi Scheme) ಅಡಿಯಲ್ಲಿ ಷರತ್ತುಗಳೊಂದಿಗೆ ಉಚಿತ ವಿದ್ಯುತ್ (Free Electricity) ನೀಡಲು ಅರ್ಜಿ ಆಹ್ವಾನಿಸುತ್ತಿದೆ. ಉಚಿತ ವಿದ್ಯುತ್ ಪ್ರಯೋಜನ ಪಡೆಯಲು 50 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ವಿದ್ಯುತ್ ಶುಲ್ಕ ಹೆಚ್ಚಾಗಿದ್ದು ಏಪ್ರಿಲ್‌ನಿಂದಲೇ ಏರಿಕೆಯಾದ ದರವನ್ನು ಈ ಬಾರಿ ಹಾಕಿದ ಪರಿಣಾಮ ಬಿಲ್ ಜಾಸ್ತಿ ಎಂಬ ಉತ್ತರವನ್ನ ಬೆಸ್ಕಾಂ (Bescom) ಹೇಳಿಯೂ ಆಗಿದೆ. ಆದ್ರೆ ಬೆಸ್ಕಾಂನವರು ಮಾತ್ರ ಬಿಲ್ (Electricity Bill) ಹಾಕುವಾಗ ಮಾಡಿರುವ ಎಡವಟ್ಟುಗಳು ಈಗ ಬೆಳಕಿಗೆ ಬರ್ತಿದೆ.

    ಹೌದು. ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆ ಅಡಿಯಲ್ಲಿ ಷರತ್ತುಗಳೊಂದಿಗೆ 200 ಯುನಿಟ್ ವಿದ್ಯುತ್ ಉಚಿತ ಯೋಜನೆಯನ್ನ ಜಾರಿಗೊಳಿಸಲು ಅರ್ಜಿ ಸಲ್ಲಿಕೆಯೂ ಆರಂಭವಾಗಿದೆ. ಈ ನಡುವೆ ಜೂನ್ ತಿಂಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಕೂಡದೇ ಮೇ ನಲ್ಲೇ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿ ಜನರಿಗೆ ಶಾಕ್ ಕೊಟ್ಟಿತು. ಆದ್ರೆ ಕಾಂಗ್ರೆಸ್ ಸರ್ಕಾರ ಇದು ಕೆಇಆರ್‌ಸಿ ಹೆಚ್ಚಳ ಮಾಡಿರೋದು, ಸರ್ಕಾರದ ನಿರ್ಧಾರವಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಜೊತೆಗೆ ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಏರಿಕೆಯಾಗಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.

    ಈ ನಡುವೆ ಬೆಸ್ಕಾಂ ಹಗಲು ದರೋಡೆಗೆ ಇಳಿದಿರುವುದು ಕಂಡುಬಂದಿದೆ. ಮೇ ನಲ್ಲಿ ದರ ಜಾಸ್ತಿಯಾಗಿದೆ. ಮೊದಲ 100 ಸ್ಲಾಬ್ ಬಳಕೆಯಾಗುವ ಯೂನಿಟ್‌ಗೆ 4.65 ರೂ. ನಿಗದಿ ಮಾಡಿದ್ದು, 100ರ ಮೇಲೆ ಬಳಿಕೆಯಾಗುವ ವಿದ್ಯುತ್‌ಗೆ 7 ರೂ. ಮಾಡಿದೆ. ಇದರಿಂದ 100ಕ್ಕಿಂತ ಅಧಿಕ ಯೂನಿಟ್ ಬಳಕೆ ಮಾಡಿದರೆ ಪ್ರತಿ ಯೂನಿಟ್‌ಗೆ 7 ರೂ. ನೀಡಬೇಕಾಗುತ್ತೆ. ಇದನ್ನೂ ಓದಿ: ನಾನು ಸಾವರ್ಕರ್‌ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ – ಎಂಬಿಪಿಗೆ ಸೂಲಿಬೆಲೆ ಪ್ರಶ್ನೆ

    ಅದೇ ರೀತಿ ನಂದಿನಿ ಲೇಔಟ್ ಬೆಸ್ಕಾಂ ಕಚೇರಿಗೆ ವ್ಯಾಪ್ತಿಗೆ ಸೇರಿದ ವ್ಯಕ್ತಿಯೊಬ್ಬರ ಮನೆಗೆ ಬಂದಿರೋ ಬಿಲ್‌ನಲ್ಲಿ ಒಟ್ಟು ಬಳಕೆಯಾಗಿರುವ ಯೂನಿಟ್ 104 ಎಂದು ನಮೂದಿಸಿದೆ. ಅದರೆ ಮೇ ತಿಂಗಳಿನಿಂದ ಮೀಟರ್ ರಿಡೀಂಗ್ ಮಾಡಿದ ದಿನದವರೆಗೆ 104 ಯೂನಿಟ್ ಬಳಕೆ ಮಾಡಿದ್ದು ಬೇರೆ ಎಲ್ಲ ರೀತಿಯ ಟ್ಯಾಕ್ಸ್ ಸೇರಿ ಒಟ್ಟು ಬಿಲ್ 1,300 ರೂ. ಬಂದಿದೆ. ಕಳೆದ ತಿಂಗಳು ಕೂಡ 101 ಯೂನಿಟ್ ವಿದ್ಯುತ್ ಬಳಸಿದ್ದಾರೆ. 900ರೂ.ಗಿಂತ ಹೆಚ್ಚು ಹಣವನ್ನ ಶುಲ್ಕವಾಗಿ ವಿಧಿಸಿದ್ದಾರೆ. ಆದ್ರೆ ಈ ಬಿಲ್‌ನಲ್ಲಿ ಮಿಟರ್ ರೀಡಿಂಗ್‌ಗಿಂತ ಹೆಚ್ಚು ಯೂನಿಟ್ ಬಳಕೆ ಮಾಡಿದ್ದೀರಾ ಅಂತಾ ಮನೆಯವರಿಗೆ ಬಿಲ್ ಕೊಟ್ಟಿರೋದು ನಂತರ ಬೆಳಕಿಗೆ ಬಂದಿದೆ.

    ಮನೆ ಮಾಲೀಕರು ಮೀಟರ್ ಚೆಕ್ ಮಾಡಿದಾಗ 50 ರಿಂದ 70 ಯೂನಿಟ್ ಅಷ್ಟೇ ಬಳೆಕೆಯಾಗಿರುವುದನ್ನ ಕಂಡು ಶಾಕ್ ಆಗಿದ್ದಾರೆ. ಆದ್ರೆ ಬಿಲ್‌ನಲ್ಲಿ 1,535ಕ್ಕೆ ರೀಡಿಂಗ್ ಎಂಡ್ ಮಾಡಿದ್ದಾರೆ. ನಿಜವಾಗಿಯೂ ಮೀಟರ್ ರೀಡಿಂಗ್ ಇದ್ದದ್ದು 1,504ಕ್ಕೆ, ಅದರೆ ಅಗತ್ಯಕ್ಕಿಂತ 30 ಹೆಚ್ಚುವರಿ ಯೂನಿಟ್‌ಗೆ ಶುಲ್ಕ ವಿಧಿಸಿದ್ದಾರೆ. ಇದರಿಂದ ಗ್ರಾಹಕರಿಗೆ 250 ರಿಂದ 300 ರೂ. ಬಿಲ್ ಹೆಚ್ಚಾಗ್ತಿದೆ. ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸೋಲಿಗೆ ಗ್ಯಾರಂಟಿ ಅಲ್ಲ, ನೀವೇ ಕಾರಣ – ಬಿಜೆಪಿ ನಾಯಕರ ವಿರುದ್ಧ ಸಿಡಿದ ಕಾರ್ಯಕರ್ತರು

  • ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    – ಕಾದು ಕಾದು ಹೈರಾಣಾದ ಜನ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ (Gruhajyothi Scheme)ನೋಂದಣಿ ಕಾರ್ಯ 5ನೇ ದಿನಕ್ಕೆ ಕಾಲಿಟ್ಟಿದ್ದು, 5ನೇ ದಿನವೂ ಸರ್ವರ್‌ ಸಮಸ್ಯೆ (Server Down Problem) ಎದುರಿಸುವಂತಾಗಿದೆ.

    5ನೇ ದಿನವಾದ ಗುರುವಾರವೂ ರಾಜಾಜೀನಗರದ 4ನೇ ಬ್ಲಾಕ್‌, ಮಲ್ಲೇಶ್ವರಂ ಕಾಡುಮಲ್ಲೇಶ್ವರ ವಾರ್ಡ್, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ವೃಷಭಾವತಿ ನಗರ ಹಾಗೂ ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧೆಡೆ ಬೆಂಗಳೂರು ಒನ್‌ (Bengaluru One) ಕೇಂದ್ರಗಳಲ್ಲಿ ಬೆಳ್ಳಂ ಬೆಳಗ್ಗೆ ಸರ್ವರ್‌ ಸಮಸ್ಯೆ ಕಂಡುಬಂದಿದೆ. ಇದರಿಂದ ಅರ್ಜಿ ಸಲ್ಲಿಸಲು ಕಾದು ನಿಂತ ಜನರು ಹಾಗೂ ಬೆಂಗಳೂರು ಒನ್‌ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

    ಬೆಳಗ್ಗಿನ ಜಾವ 5 ಗಂಟೆಯಿಂದಲೇ ಬೆಂಗಳೂರು ಒನ್‌ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಒಂದು ಅರ್ಜಿ ಸಲ್ಲಿಕೆಗೆ 30 ನಿಮಿಷಗಳ ಸಮಯ ಬೇಕಾಗುತ್ತಿದೆ. ಆದ್ರೆ ಸರ್ವರ್‌ ಸಮಸ್ಯೆಯಿಂದಾಗಿ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಿಂದ ಪರಿಷತ್ ಮೂರು ಸ್ಥಾನಗಳಿಗೆ ಉಪಚುನಾಚಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ

    ಅರ್ಜಿ ಸಲ್ಲಿಕೆ ಆರಂಭವಾದ ಮೊದಲ ದಿನವೇ ವಿವಿಧೆಡೆ ಸರ್ವರ್‌ ಸಮಸ್ಯೆಯ ಹೊರತಾಗಿಯೂ 1,61,958 ಗ್ರಾಹಕರು (ಸಂಜೆ 5 ಗಂಟೆವರೆಗೆ) ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ, ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.