Tag: Bengaluru Murder

  • ಬೆಂಗಳೂರಲ್ಲಿ ತ್ರಿಬಲ್‌ ಮರ್ಡರ್‌ ಕೇಸ್‌ – ಎರಡನೇ ಪತ್ನಿ, ಮಲ ಮಗಳ ಮೇಲೆ ಅಕ್ರಮ ಸಂಬಂಧ ಅನುಮಾನ

    ಬೆಂಗಳೂರಲ್ಲಿ ತ್ರಿಬಲ್‌ ಮರ್ಡರ್‌ ಕೇಸ್‌ – ಎರಡನೇ ಪತ್ನಿ, ಮಲ ಮಗಳ ಮೇಲೆ ಅಕ್ರಮ ಸಂಬಂಧ ಅನುಮಾನ

    – ಹೆಸರಘಟ್ಟ ಸಂತೆಯಲ್ಲಿ ಮಚ್ಚು ತಂದು ಒಬ್ಬೊಬ್ಬರನ್ನೇ ಕೊಂದ ಪಾತಕಿ

    ಬೆಂಗಳೂರು: ಆತ ಪತ್ನಿಯನ್ನ ಬಿಟ್ಟಿದ್ದ, ಈಕೆ ಮದುವೆಗೆ ಬಂದಿದ್ದ ಮಗಳ ಜೊತೆ ಗಂಡನನ್ನ ಬಿಟ್ಟು ಈತನ ಜೊತೆ ಸೇರಿದ್ದಳು. ಸಹಜೀವನ ನಡೆಸುತ್ತಿರುವಾಗಲೇ ಎರಡನೇ ಪತ್ನಿಗೆ ಅಕ್ರಮ ಸಂಬಂಧವಿದೆ ಎನ್ನುವ ಅನುಮಾನದ ಭೂತ ಆತನಿಗೆ ಕಾಡುತ್ತಿತ್ತು. ಜೊತೆಗೆ ಮಲ ಮಗಳ ಮೇಲೂ ಅನುಮಾನ. ಇದು ಬೆಂಗಳೂರಲ್ಲಿ (Bengaluru) ತ್ರಿಬಲ್‌ ಮರ್ಡರ್‌ಗೆ ಕಾರಣವಾಯಿತು.

    ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿಬಲ್ ಮರ್ಡರ್ ತನಿಖೆಯಲ್ಲಿ ಕೊಲೆಯ ಹಿಂದಿನ ಅಸಲಿ ಸತ್ಯ ಹೊರಬಿದ್ದಿದೆ. ಪೊಲೀಸರಿಗೆ ಶರಣಾಗತಿಯಾಗಿದ್ದ ಆರೋಪಿ ಗಂಗರಾಜುನನ್ನ ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಇದೇ ವೇಳೆ ಕೆಲ ಅಚ್ಚರಿ ವಿಚಾರಗಳು ಬೆಳಕಿಗೆ ಬಂದಿವೆ. ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ಡಿವೋರ್ಸ್ ಪಡೆಯದೇ ಭಾಗ್ಯಮ್ಮ ಮತ್ತು ಗಂಗರಾಜು ಲಿವಿಂಗ್ ಇನ್‌ ರಿಲೇಷನ್‌ನಲ್ಲಿದ್ದರು. ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ದರೂ ಕೂಡಾ ಸಹ ಜೀವನಕ್ಕೆ ಆರೋಪಿ ಒಪ್ಪಿದ್ದ. ಆದರೆ, ಇತ್ತೀಚೆಗೆ ಭಾಗ್ಯಮ್ಮ ಸೇರಿ ಮಲ ಮಗಳ ಮೇಲೂ ಸಾಕಷ್ಟು ಅನುಮಾನಪಡುತ್ತಿದ್ದ. ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಮಲತಂದೆಯೇ ಅನುಮಾನ ವ್ಯಕ್ತಪಡಿಸಿದ್ದ. ಇದನ್ನೂ ಓದಿ: ಬೆಂಗಳೂರು| ಕೌಟುಂಬಿಕ ಕಲಹ – ಮಚ್ಚಿನಿಂದ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ಪತಿ

    ಇತ್ತೀಚೆಗೆ ಮನೆಗೆ ಬಂದಿದ್ದ ಮೃತ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ನಿನ್ನೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ‌ ಹೆಸರಘಟ್ಟಗೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ ಮಚ್ಚು ಖರೀದಿ‌ ಮಾಡಿದ್ದ. ರೈತರು ಬಳಸುವ ಹರಿತವಾದ ಮಚ್ಚನ್ನ 500 ರೂ. ಕೊಟ್ಟು ನೇರವಾಗಿ ಮನೆಗೆ ತಂದಿದ್ದ. ಮೂವರನ್ನ ಕೊಲೆ ಮಾಡಿ ಶರಣಾಗತಿಗೆ ಪ್ಲ್ಯಾನ್‌ ಕೂಡಾ ಮಾಡಿಕೊಂಡಿದ್ದ. ಪತ್ನಿ ಮನೆಯಲ್ಲಿ ಇಲ್ಲದ್ದನ್ನ ಮೊದಲೇ ತಿಳಿದು ಒಬ್ಬೊಬ್ಬರನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದನಂತೆ. ಮನೆಗೆ ಬರ್ತಿದ್ದಂತೆ ಮತ್ತೆ ಗಲಾಟೆ ತೆಗೆದು ಮೊದಲ ಮಲ ಮಗಳಾದ ನವ್ಯಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಬಳಿಕ ಅಡ್ಡ ಬಂದಿದ್ದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚೇಟು ಬಿದ್ದಿದ್ದು, ಇಬ್ಬರ ರುಂಡ ಮುಂಡ ಬೇರ್ಪಡಿಸಿ ಬಿಸಾಡಿದ್ದಾನೆ.

    ಇಷ್ಟಲ್ಲದೆ ಮನೆಯಲ್ಲೇ ಇಬ್ಬರನ್ನ ಕೊಂದು ಮನೆಯಲ್ಲಿ ಪತ್ನಿಗಾಗಿ ಬಾಗಿಲ ಹಿಂದೆ ಆರೋಪಿ ಗಂಗರಾಜು ಕಾಯುತ್ತಿದ್ದ. ಆ ಬಳಿಕ ಪತ್ನಿ ಮನೆಗೆ ಬಂದಿದ್ದು, ರಕ್ತದ ಮಡುವಿನಲ್ಲಿದ್ದ ಮಗಳನ್ನ ನೋಡಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಪತ್ನಿಯ ಮೇಲೂ ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಆರು ವರ್ಷಗಳಿಂದ ಮೃತಳ ಜೊತೆಗೆ ಆರೋಪಿ ಇರೋದು ತಿಳಿದು ಬಂದಿದೆ. ಆದರೆ, ಆಕೆಯ ಮೇಲಿನ ಅನುಮಾನವೇ ಮೂವರ ಕೊಲೆಗೆ ಕಾರಣವಾಗಿದ್ದು ದುರಂತ. ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆ!

  • ಬೆಂಗಳೂರಲ್ಲಿ ತುಂಡು ತುಂಡಾಗಿ ಕತ್ತರಿಸಿ ವೃದ್ಧೆಯ ಭೀಕರ ಹತ್ಯೆ

    ಬೆಂಗಳೂರಲ್ಲಿ ತುಂಡು ತುಂಡಾಗಿ ಕತ್ತರಿಸಿ ವೃದ್ಧೆಯ ಭೀಕರ ಹತ್ಯೆ

    ಬೆಂಗಳೂರು: ವೃದ್ಧೆಯೊಬ್ಬರನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿಯ ಕೆ.ಆರ್. ಪುರಂನಲ್ಲಿ (K.R. Puram) ನಡೆದಿದೆ.

    ಸುಶೀಲಮ್ಮ ಕೊಲೆಯಾದ ವೃದ್ಧೆ (70). ಕೆ.ಆರ್. ಪುರಂ ಠಾಣೆ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ವೃದ್ಧೆಯ ದೇಹವನ್ನು ತುಂಡಾಗಿ ಕತ್ತರಿಸಿದ ಡ್ರಮ್‌ನಲ್ಲಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೃತದೇಹದ ದುರ್ವಾಸನೆಯಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಮತ್ತು ಎಫ್‌ಎಸ್‌ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹರಿಯಾಣದ ಮಾಜಿ ಶಾಸಕನಿಗೆ ಗುಂಡಿಕ್ಕಿ ಹತ್ಯೆ

    ಕಳೆದ ಎಂಟು ವರ್ಷಗಳಿಂದ ಕೊಲೆಯಾದ ಮನೆಯಲ್ಲಿ ಮಗಳೊಂದಿಗೆ ವೃದ್ಧೆ ವಾಸವಿದ್ದರು. ಆಸ್ತಿ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ವೃದ್ಧೆಯ ದೇಹವನ್ನ ಆರು ಭಾಗವಾಗಿ ಪೀಸ್ ಪೀಸ್ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

    ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ಸ್ಥಳದ ಕೂದಲೆಳೆ ದೂರದಲ್ಲೇ ವಾಸವಿರೋ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ. ರಕ್ತದ ಕಲೆ ಆಧರಿಸಿ ಸ್ಥಳೀಯ ಮನೆಯೊಂದಕ್ಕೆ ಡಾಗ್ ಸ್ಕ್ವಾಡ್‌ ಶ್ವಾನ ಪೊಲೀಸರನ್ನ ಕರೆದೊಯ್ದಿತ್ತು. ವಶಕ್ಕೆ ಪಡೆದಿರುವ ವ್ಯಕ್ತಿ ಮೃತ ಸುಶೀಲಮ್ಮ ಕುಟುಂಬಕ್ಕೆ ಚಿರಪರಿಚಿತ ಹಾಗೂ ಅತ್ಯಾಪ್ತ ಎಂದು ತಿಳಿದುಬಂದಿದೆ. ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್‌ಗೆ ಮೂವರು ಮಾವೋವಾದಿಗಳ ಬಲಿ

    ಕೊಲೆಯಾದ ವೃದ್ಧೆ ಸುಶೀಲಮ್ಮ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಉತ್ತರಹಳ್ಳಿ ಹಾಗೂ ಯಲಹಂಕದಲ್ಲಿ ವೃದ್ಧೆ ಸುಶೀಲಮ್ಮ ಹೆಸರಲ್ಲಿ ಪ್ರಾಪರ್ಟಿ ಇದೆ. ಕೆಲ ಆಸ್ತಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೋರ್ಟ್ನಲ್ಲಿ ವ್ಯಾಜ್ಯ ಇತ್ಯರ್ಥವಾಗಿತ್ತು. ಸದ್ಯದಲ್ಲೇ ದೊಡ್ಡದಾದ ಅಮೌಂಟ್ ಬರಲಿದೆ ಎಂದು ಸ್ಥಳೀಯರು ಹಾಗೂ ಪರಿಚಿತರ ಬಳಿ ಸುಶೀಲಮ್ಮ ಹೇಳಿಕೊಂಡಿದ್ದರು. ಕೋಟಿಗಟ್ಟಲೇ ಆಸ್ತಿಯಿದ್ದರೂ ಮಕ್ಕಳಿಂದ ದೂರವಿದ್ದರು. ನಿಸರ್ಗ ಬಡಾವಣೆಯಲ್ಲೇ ಮೃತ ಸುಶೀಲಮ್ಮರ ಮಗ ಹಾಗೂ ಮಗಳು ಪ್ರತ್ಯೇಕವಾಗಿ ವಾಸವಿದ್ದರು.

  • ಬೆಂಗಳೂರಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

    ಬೆಂಗಳೂರಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

    ಬೆಂಗಳೂರು: ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bengaluru Murder) ನಡೆದಿದೆ.

    ಬೆಂಗಳೂರಿನ ಕೆಆರ್ ಪುರ ಬಳಿಯ ಟಿನ್ ಫ್ಯಾಕ್ಟರಿ ಬಳಿ ಘಟನೆ ನಡೆದಿದೆ. ರಫೀಕ್ ಅಹಮದ್ ಕೊಲೆಯಾದ ಯುವಕ. ಮಹದೇವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ರಫೀಕ್‌ 28 ವಯಸ್ಸಿನ ಯುವಕ. ಕೊಲೆ ಮಾಡಿದ ಆರೋಪಿ ಈತನಿಗೆ ಪರಿಚಿತ ಎಂದು ವೈಟ್‌ಫೀಲ್ಡ್ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆತ್ತ ತಾಯಿ ಕೊಂದು ಸೂಟ್‌ಕೇಸಲ್ಲಿ ಶವಹೊತ್ತು ಸ್ಟೇಷನ್‌ಗೆ ಬಂದ ಮಗಳು

    ಹೆತ್ತ ತಾಯಿ ಕೊಂದು ಸೂಟ್‌ಕೇಸಲ್ಲಿ ಶವಹೊತ್ತು ಸ್ಟೇಷನ್‌ಗೆ ಬಂದ ಮಗಳು

    ಬೆಂಗಳೂರು: ತಾಯಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ಹೊತ್ತುಕೊಂಡು ಮಗಳು ಪೊಲೀಸ್ ಠಾಣೆಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಸೆನಾಲಿ ಸೇನ್ (39) ಹೆತ್ತ ತಾಯಿಯನ್ನು ಕೊಲೆ ಮಾಡಿದಾಕೆ. 70 ವರ್ಷದ ಬೀವಾ ಪಾಲ್ ಕೊಲೆಯಾದ ವೃದ್ಧೆ. ಇದನ್ನೂ ಓದಿ: ಬೆಂಗಳೂರಿನ ಹಲವು ಕಡೆ ಭಾರೀ ಮಳೆ- ವಾಹನ ಸವಾರರ ಪರದಾಟ

    ಸೆನಾಲಿ ಸೇನ್ ಅಮ್ಮ ಮತ್ತು ಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರೂ ದಿನಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಬೀಗರ ಜಗಳಕ್ಕೆ ಬೇಸತ್ತಿದ್ದ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾರೆ. ಬೆದರಿಕೆಯಂತೆಯೇ ಮುಂಜಾನೆ ಸೆನಾಲಿ ಸೇನ್ ತನ್ನ ತಾಯಿಗೆ 20 ನಿದ್ರೆ ಮಾತ್ರೆ ನುಂಗಿಸಿದ್ದಾಳೆ.

    ತಾಯಿ ಹೊಟ್ಟೆ ನೋವು ಎಂದಾಗ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಟ್ರ‍್ಯಾಲಿ ಸೂಟ್‌ಕೇಸ್‌ನಲ್ಲಿ ತಾಯಿ ಶವವಿಟ್ಟು, ತಂದೆಯ ಫೋಟೊ ಇಟ್ಟು ಮಗಳು ಸ್ಟೇಷನ್‌ಗೆ ಬಂದಿದ್ದಾಳೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ!

    ಬಿಳೇಕಳ್ಳಿಯ ಎನ್‌ಎಸ್‌ಆರ್ ಗ್ರೀನ್ ಅಪಾರ್ಟ್ಮೆಂಟ್‌ನಿಂದ ತಾಯಿಯ ಮೃತದೇಹದೊಂದಿಗೆ ಮೈಕೊಲೇಔಟ್ ಪೊಲೀಸ್ ಠಾಣೆಗೆ ಸೆನಾಲಿ ಬೇನ್ ಬಂದಿದ್ದಾಳೆ. ಇದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.

    ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆನಾಲಿ ಸೇನ್‌ಳನ್ನು ಬಂಧಿಸಿದ್ದಾರೆ.

  • ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್

    ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್

    – ಪ್ರಿಯಕರನೊಂದಿಗೆ ಸೇರಿ ಸಹೋದರನ ದೇಹ ಪೀಸ್‌ ಮಾಡಿ ಎಸೆದಿದ್ದ ಅಕ್ಕ

    ಬೆಂಗಳೂರು: ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.

    ಎಂಟು ವರ್ಷಗಳ ಹಿಂದೆ ಏರ್‌ಬ್ಯಾಗ್‌ನಲ್ಲಿ ತುಂಡರಿಸಿದ ಕೈ-ಕಾಲು ಮತ್ತು ರುಂಡವಿಲ್ಲದ ಮುಂಡಾ ಪ್ರತ್ಯೇಕ ಕಡೆ ಪತ್ತೆಯಾಗಿತ್ತು. ಮೂರು ವರ್ಷಗಳ ತನಿಖೆ ಬಳಿಕವು ಆರೋಪಿಗಳು ಪತ್ತೆಯಾಗದ ಹಿನ್ನೆಲೆ ಪೊಲೀಸರು ಪತ್ತೆಯಾಗದ ಪ್ರಕರಣ ಎಂದು ಕ್ಲೋಸ್ ಮಾಡಿದ್ದರು. ಆದರೆ ಎಂಟು ವರ್ಷಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

    ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಆಕ್ಕನಾದ ಭಾಗ್ಯಶ್ರೀ ಮತ್ತು ಆಕೆಯ ಪ್ರಿಯಕರ ಸುಪುತ್ರ ಶಂಕರಪ್ಪ ತಳವಾರ್‌ನಿಂದ ಕೊಲೆಯಾಗಿದ್ದ. ಆರೋಪಿಗಳಾದ ಸುಪುತ್ರ ಮತ್ತು ಭಾಗ್ಯಶ್ರೀ ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು. ಆದರೆ ಪೋಷಕರು ಒಪ್ಪದ ಹಿನ್ನೆಲೆ ಇಬ್ಬರು ಪ್ರತ್ಯೇಕವಾಗಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಈ ನಡುವೆ ಸಂಸಾರದಲ್ಲಿ ವಿರಸ ಮೂಡಿ ಸುಪುತ್ರ ಬೆಂಗಳೂರು ಸೇರಿದ್ದ. ಜೊತೆಗೆ ಭಾಗ್ಯಶ್ರೀಯನ್ನೂ ಬೆಂಗಳೂರಿಗೆ ಬರುವಂತೆ ಹೇಳಿದ್ದಾನೆ. ಗಂಡನನ್ನು ಬಿಟ್ಟ ಭಾಗ್ಯಶ್ರೀ ತಮ್ಮ ಲಿಂಗರಾಜನ ಜೊತೆ ಬೆಂಗಳೂರಿಗೆ ಬಂದಿದ್ದಳು. ಮೂರು ಜನ ಜಿಗಣಿ ಕೈಗಾರಿಕಾ ಪ್ರದೇಶದ ಯಜಾಕಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಜಿಗಣಿ ಸಮೀಪದ ವಡೇರ ಮಂಚನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಮೂರು ಮಂದಿ ವಾಸವಾಗಿದ್ದರು. ದಿನ ಕಳೆದಂತೆ ಭಾಗ್ಯಶ್ರೀ ಮತ್ತು ಸುಪತ್ರ ನಡುವಿನ ಸಲುಗೆಯು ಆಕೆಯ ಸಹೋದರ ಲಿಂಗರಾಜುಗೆ ಬೇಸರ ಮೂಡಿಸಿತ್ತು. ಅದೊಂದು ದಿನ ಸುಪುತ್ರನ ಸಂಬಂಧ ಮುರಿದುಕೊಳ್ಳುವಂತೆ ಅಕ್ಕ ಭಾಗ್ಯಶ್ರೀಗೆ ಲಿಂಗರಾಜು ತಾಕೀತು ಮಾಡಿದ್ದ. ಇದಕ್ಕೆ ಒಪ್ಪದಿದ್ದಾಗ ಕಪಾಳಕ್ಕೆ ಹೊಡೆದಿದ್ದ. ಮಧ್ಯಪ್ರವೇಶಿಸಿದ ಅಕ್ಕನ ಪ್ರಿಯಕರ ಲಿಂಗರಾಜುನನ್ನು ಪ್ರಶ್ನಿಸಿದ್ದ. ಈ ವೇಳೆ ಕೋಪಗೊಂಡ ಲಿಂಗರಾಜು ಅಕ್ಕನ ಪ್ರಿಯಕರ ಸುಪುತ್ರನ ಮೇಲೆ ಹಲ್ಲೆ ಮಾಡಿದ್ದ.

    ಪ್ರಿಯಕರನ ಮೇಲೆ ತಮ್ಮ ಲಿಂಗರಾಜು ಹಲ್ಲೆ ಮಾಡುತ್ತಿರುವುದನ್ನು ಕಂಡು ವ್ಯಾಘ್ರಗೊಂಡ ಭಾಗ್ಯಶ್ರೀ ಮತ್ತು ಪ್ರಿಯಕರ ಸುಪುತ್ರ ಸೇರಿಕೊಂಡು ನಿಂಗರಾಜು ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ನಿತ್ರಾಣಗೊಂಡು ಲಿಂಗರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದ. ಕೊಲೆ ರಹಸ್ಯವಾಗಿಡಲು ಲಿಂಗರಾಜು ಕೈ-ಕಾಲು, ರುಂಡ-ಮುಂಡಾವನ್ನು ಕತ್ತರಿಸಿ ಬೇರ್ಪಡಿಸಿದ ಭಾಗ್ಯಶ್ರೀ ಮತ್ತು ಸುಪುತ್ರ ಮೂರು ಬ್ಯಾಗ್‌ಗಳಲ್ಲಿ ತುಂಬಿ ಪ್ರತ್ಯೇಕ ಕಡೆಗಳಲ್ಲಿ ಎಸೆದು ಪರಾರಿಯಾಗಿದ್ದರು. ಇದನ್ನೂ ಓದಿ: ಪೊಲೀಸರಿಗೆ ಮಾಹಿತಿ ನೀಡಿದ್ರೆ ನಿಮ್ಮ ಮನೆ ಸರ್ವನಾಶವಾಗುತ್ತೆ – ವಿಚಿತ್ರ ಡೆತ್‌ನೋಟ್ ಬರೆದು ಯುವಕ ಆತ್ಮಹತ್ಯೆ

    ಜಿಗಣಿ ಟೌನ್ ವಿ ಇನ್ ಹೋಟೆಲ್ ಬಳಿ ತುಂಡರಿಸಿ ಕೈ-ಕಾಲುಗಳು ತುಂಬಿದ ಬ್ಯಾಗ್ ಪತ್ತೆಯಾದರೆ, ರುಂಡವಿಲ್ಲದ ಮುಂಡಾ ವಡೇರ ಮಂಚನಹಳ್ಳಿ ಕೆರೆಯಲ್ಲಿ ಪತ್ತೆಯಾಗಿತ್ತು. ರುಂಡ ಮಾತ್ರ ಇಲ್ಲಿಯವರೆಗೆ ಪತ್ತೆಯಾಗುವುದಿಲ್ಲ. ಆದರೆ ಸ್ಥಳೀಯರ ಮಾಹಿತಿ ಆಧರಿಸಿ ಜಿಗಣಿ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಪ್ರಕರಣಗಳು ದಾಖಲಾಗುತ್ತವೆ. ಮೂರು ವರ್ಷ ಕಳೆದರೂ ಪ್ರಕರಣ ಬೇಧಿಸಲು ಸಾಧ್ಯವಾಗದೇ ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ 2018ರಲ್ಲಿ ಜಿಗಣಿ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು. ಇತ್ತೀಚೆಗೆ ಕೇಂದ್ರ ವಲಯ ಐಜಿ ರವಿಕಾಂತೇ ಗೌಡರು ಕ್ರೈಮ್ ರಿವೀವ್ ಸಭೆ ವೇಳೆ 2015 ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಕಾಣಿಸುವಂತೆ ಜಿಗಣಿ ಪೊಲೀಸರಿಗೆ ಸೂಚಿಸಿದ್ದರು. ಪ್ರಕರಣದ ಮರುತನಿಖೆಗೆ ಇಳಿದ ಜಿಗಣಿ ಪೊಲೀಸರಿಗೆ ಆರೋಪಿಗಳ ಸುಳಿವು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಕೊನೆಗೆ ಮೂರು ತಿಂಗಳ ನಿರಂತರ ಪರಿಶ್ರಮದ ಫಲವಾಗಿ ಅದೊಂದು ದಿನ ಬಾತ್ಮೀದಾರರಿಂದ ಮಾಹಿತಿ ಲಭ್ಯವಾಗುತ್ತದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಪುತ್ರ ಮತ್ತು ಭಾಗ್ಯಶ್ರೀ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತಲಾಷೆಗಿಳಿದಾಗ ಆರೋಪಿ ಭಾಗ್ಯಶ್ರೀ, ಪ್ರಿಯಾಂಕಾ ವಿನೋದ್ ರೆಡ್ಡಿ ಎಂದು ಹೆಸರು ಬದಲಿಸಿಕೊಂಡು ನಾಸಿಕ್ ನಗರದಲ್ಲಿ ಸುಪುತ್ರನ ಜೊತೆ ವಾಸವಾಗಿರುವುದು ಪತ್ತೆಯಾಗುತ್ತದೆ. ಅಂತಿಮವಾಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಲಿಂಗರಾಜು ಕೊಲೆ ವೃತ್ತಾಂತ ಬಯಲಾಗಿದೆ.

    ಲಿಂಗರಾಜು ಕೊಲೆ ಬಳಿಕ ಸ್ವಗ್ರಾಮಕ್ಕೂ ತೆರಳದ ಆರೋಪಿಗಳು ಯಾರೊಬ್ಬರ ಸಂಪರ್ಕಕ್ಕೂ ಬಾರದೆ, ಮೊಬೈಲ್ ಪೋನ್ ಸಹ ಬಳಸದೇ ತಲೆ ಮರೆಸಿಕೊಂಡಿದ್ದರು. ಟೆಕ್ನಿಕಲ್ ಎವಿಡೆನ್ಸ್ ಮತ್ತು ಭಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಸುದರ್ಶನ್ ಮತ್ತು ತಂಡ ಯಶಸ್ವಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ವಿಶೇಷ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ವ್ಹೀಲಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ