Tag: Bengaluru Metro

  • ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆ

    ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆ

    ಬೆಂಗಳೂರು: `ನಮ್ಮ ಮೆಟ್ರೋ’ (Namma Metro) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ನೀಡಿದ್ದು, ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದೆ. ಇನ್ನೂ ಹೊಸ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ.

    ಸಿಲಿಕಾನ್ ಸಿಟಿಯ ಟ್ರಾಫಿಕ್‌ಗೆ ಇರುವ ಒಂದೇ ಒಂದು ಪರಿಹಾರವೆಂದರೆ ಅದು ನಮ್ಮ ಮೆಟ್ರೋ. ಇದೀಗ ಬಿಎಂಆರ್‌ಸಿಎಲ್ (BMRCL) ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ.ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ಹೌದು, ನಮ್ಮ ಮೆಟ್ರೋ ರೈಲು ಈಗಾಗಲೇ ಸರಿಸುಮಾರು 76 ಕಿ.ಮೀ. ಸೇವೆಯನ್ನು ನೀಡುತ್ತದೆ. ಇದರಲ್ಲಿ ಹಸಿರು ಮಾರ್ಗದಲ್ಲಿ ಮಾದವಾರದಿಂದ ಸಿಲ್ಕ್ ಬೋರ್ಡ್ ಹಾಗೂ ನೇರಳೆ ಮಾರ್ಗದಲ್ಲಿ ಚಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಪ್ರತಿನಿತ್ಯ ಸರಾಸರಿ 7 ಲಕ್ಷ ಪ್ರಯಾಣಿಕರು ಮೆಟ್ರೋಸೇವೆಯ ಉಪಯೋಗ ಪಡೆಯುತ್ತಿದ್ದಾರೆ. ಪೀಕ್ ಟೈಮ್‌ನಲ್ಲಿ ಮೆಟ್ರೋದಲ್ಲಿ ಜನಜಾತ್ರೆಯಂತೆ ಇರುತ್ತದೆ.

    ಇನ್ನೂ ನಮ್ಮ ಮೆಟ್ರೋದಲ್ಲಿ ಈಗಾಗಲೇ 57 ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪ್ರತಿನಿತ್ಯ 55 ರೈಲುಗಳು ಸಾರ್ವಜನಿಕ ಸೇವೆ ನೀಡುತ್ತಿದ್ದು, ಇನ್ನೂಳಿದ ಎರಡು ರೈಲುಗಳನ್ನು ತುರ್ತುಪರಿಸ್ಥಿತಿಗಾಗಿ ಉಳಿಸಿಕೊಳ್ಳಲಾಗಿದೆ. ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ಸಮಯದಲ್ಲಿ ಒಟ್ಟು 78 ರೈಲುಗಳನ್ನು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದನ್ವಯ ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ನಮ್ಮ ಮೆಟ್ರೋಕ್ಕೆ ಸೇರ್ಪಡೆಯಾಗಲಿದೆ.

    ಇದರಿಂದ ನಮ್ಮ ಮೆಟ್ರೋ ಎರಡು ಮಾರ್ಗದ ಜನ ದಟ್ಟಣೆಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಹಳಿಗೆ ಇಳಿಯುವುದರಿಂದ ಈಗಿನ ಸಮಯದ ಅಂತರವನ್ನು ಇನ್ನಷ್ಟು ಕಡಿಮೆ ಮಾಡಿ ಪ್ರತಿ 3, 3:05 ನಿಮಿಷಕ್ಕೆ ಒಂದೊಂದು ರೈಲು ಸಂಚಾರ ಮಾಡಲಿದೆ. ಇದು ಫೀಕ್ ಟೈಮ್‌ನಲ್ಲಿ ಜನಜಂಗುಳಿಯನ್ನು ತಪ್ಪಿಸಲು ಅನೂಕುಲ ಆಗಲಿದೆ. ಸದ್ಯ ಪ್ರತಿ 5 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚಾರ ಮಾಡುತ್ತಿದ್ದು, ಹೊಸ ರೈಲುಗಳು ಸೇರ್ಪಡೆಯಾದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚಾರ ಮಾಡಲಿದೆ.

    ಒಟ್ಟಿನಲ್ಲಿ ಮುಂದಿನ ಜನವರಿಯಿಂದ ಹಂತಹಂತವಾಗಿ 21 ಹೊಸ ಮೆಟ್ರೋ ರೈಲುಗಳು ಹಸಿರು ಮತ್ತು ನೇರಳೆ ಮಾರ್ಗಕ್ಕೆ ಬರುವುದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.ಇದನ್ನೂ ಓದಿ: ಬೀಡಿ, ಗುಟ್ಕಾ ಬೇಕು: ಕಲಬುರಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಂದ ಪ್ರತಿಭಟನೆ

  • ಭಾರೀ ಮಳೆಗೆ ಟ್ರ್ಯಾಕ್‌ಗೆ ಬಿದ್ದ ಮರ: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

    ಭಾರೀ ಮಳೆಗೆ ಟ್ರ್ಯಾಕ್‌ಗೆ ಬಿದ್ದ ಮರ: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

    – ಮರ ತೆರವು ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಟ್ರ್ಯಾಕ್‌ಗೆ ಮರ ಉರುಳಿ, ನೇರಳ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು (Namma Metro) ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಿಬ್ಬಂದಿ ಮರ ತೆರವುಗೊಳಿಸಿದ ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭವಾಯಿತು.

    ಎರಡು ದಿನಗಳಿಂದ ಬೆಂಗಳೂರಿನಲ್ಲಿ ವರುಣ ಅಬ್ಬರಿಸುತ್ತಿದ್ದು, ಮಳೆಯ ಪರಿಣಾಮ ನಮ್ಮ ಮೆಟ್ರೋ ರೈಲಿನ ನೇರಳೆ ಬಣ್ಣದ (Purple Line Metro) ಮಾರ್ಗದಲ್ಲಿ ಮರವೊಂದು ಟ್ರ್ಯಾಕ್‌ಗೆ ಉರುಳಿ, ಎಸ್‌ವಿ ರೋಡ್ ಹಾಗೂ ಇಂದಿರಾನಗರ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡು ವ್ಯತ್ಯಯ ಉಂಟಾಗಿತ್ತು.ಇದನ್ನೂ ಓದಿ:

    ಬುಧವಾರ ಬೆಳಗ್ಗೆ 6:05ರಿಂದ 8 ಗಂಟೆಯವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರವನ್ನು ತೆರವುಗೊಳಿಸಿದರು. ಈ ವೇಳೆ ಇಂದಿರಾನಗರ -ಚಲಘಟ್ಟ ಹಾಗೂ ಬೈಯಪ್ಪನಹಳ್ಳಿ – ವೈಟ್‌ಫೀಲ್ಡ್ ನಿಲ್ದಾಣದವರೆಗೆ ಮೆಟ್ರೋ ಸುಗಮ ಸಂಚಾರಗೊಂಡಿದ್ದು, ಈ ಎರಡು ಮೆಟ್ರೋ ನಿಲ್ದಾಣಗಳ ಮಧ್ಯೆ ರೈಲು ಸಂಚಾರ ಸ್ಥಗಿತಗೊಂಡಿತ್ತು.

    ಮೆಟ್ರೋ ಸಂಚಾರ ಪುನರಾರಂಭ:
    ಬುಧವಾರ ಬೆಳಗ್ಗೆ 6:05 ಸ್ಥಗಿತಗೊಂಡ ಮೆಟ್ರೋ, ಮರವು ತೆರವುಗೊಳಿಸಿದ ಬಳಿಕ 8 ಗಂಟೆಗೆ ಮತ್ತೆ ಪುನರಾರಂಭಗೊಂಡಿದೆ. ಇದೀಗ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭಗೊಂಡಿದೆ.ಇದನ್ನೂ ಓದಿ:

  • PUBLiC TV Impact | ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ

    PUBLiC TV Impact | ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ

    ಬೆಂಗಳೂರು: ಎರಡು ದಿನದ ಹಿಂದಷ್ಟೇ ಮೆಟ್ರೋ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಪರದಾಡಿದ್ದ ಘಟನೆಯನ್ನು ಪಬ್ಲಿಕ್ ಟಿವಿ (PUBLiC TV) ವರದಿ ಮಾಡಿತ್ತು. ಈ ಬೆನ್ನಲ್ಲೇ ಘಟನೆ ಬಗ್ಗೆ ಅಲರ್ಟ್ ಆದ ರಾಜ್ಯ ಮಹಿಳಾ ಆಯೋಗ (Karnataka State Commission for Women) ಬಿಎಂಆರ್‌ಎಲ್‌ಗೆ (BMRCL) ಪತ್ರ ಬರೆದು ಆರೈಕೆ ಕೇಂದ್ರ ಸ್ಥಾಪಿಸುವಂತೆ ಸೂಚಿಸಿದೆ.

    ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಸಲು ಬಂದ ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸಲು ಪರದಾಡಿದ್ದ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ಸುದ್ದಿ ಬಿತ್ತರಿಸುವ ಮೂಲಕ ಮೆಟ್ರೋ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಈ ಬೆನ್ನಲ್ಲೇ ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಬಿಎಂಆರ್‌ಎಲ್‌ಗೆ ಪತ್ರ ಬರೆದಿದೆ.ಇದನ್ನೂ ಓದಿ: ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ – ಪರಿಸ್ಥಿತಿ ಉದ್ವಿಗ್ನ

    ಸೋಮವಾರ ಟ್ರಿನಿಟಿ ಮೆಟ್ರೋ ನಿಲ್ದಾಣಕ್ಕೆ (Trinity Metro Station) ಬಂದಿದ್ದ ತಾಯಿ ತನ್ನ ಮಗುವಿಗೆ ಹಾಲುಣಿಸಲು ಮೆಟ್ರೋ ನಿಲ್ದಾಣದ ಒಳಭಾಗದಲ್ಲಿ ಪರದಾಡಿದ್ದರು. ಅಕ್ಕಪಕ್ಕದ ಗೋಡೆ ಮರೆಯಲ್ಲಿ ನಿಂತು, ನೆಲದ ಮೇಲೆ ಕೂತು ಪರದಾಡಿದ್ದ ಮಹಿಳೆ ವಿಡಿಯೋ ವೈರಲ್ ಆಗಿತ್ತು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರವಿದೆ. ಮೆಟ್ರೋ ನಿಲ್ದಾಣಗಳಲ್ಲಿ ಯಾಕೆ ಇಲ್ಲ ಎನ್ನುವ ಪ್ರಶ್ನೆ ಉದ್ಬವ ಆಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ಅಧಿಕಾರಿಗಳಿಗೆ ಪ್ರಶ್ನೆಗಳಿಟ್ಟಿತ್ತು. ಈ ಬೆನ್ನಲ್ಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Chowdhary) ಬಿಎಂಆರ್‌ಸಿಎಲ್ ಎಂಡಿಗೆ ಪತ್ರ ಬರೆದು ಕೂಡಲೇ ಆರೈಕೆ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.

    ಪತ್ರದಲ್ಲೇನಿದೆ….?
    * ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಆರೈಕೆ ಕೇಂದ್ರಗಳು ಈಗಾಗಲೇ ಇವೆ.
    * ಆದರಂತೆ ನಮ್ಮ ಮೆಟ್ರೋದಲ್ಲಿ ಮಹಿಳೆಯ ಆರೈಕೆ ಕೇಂದ್ರ ಸ್ಥಾಪನೆ ಆಗಬೇಕು.
    * ಸೆ.16 ರಂದು ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಮೆಟ್ರೋ ಸ್ಟೇಷನ್‌ನಲ್ಲಿ ಪರದಾಡುತ್ತಿರುವ ಸುದ್ದಿ ಪ್ರಸಾರವಾಗಿದೆ.
    * ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ನಿರ್ಮಿಸಲು ಕ್ರಮವಹಿಸುವಂತೆ ಪತ್ರ.ಇದನ್ನೂ ಓದಿ: ಮೋದಿ ಅದ್ಭುತ ವ್ಯಕ್ತಿ, ಮುಂದಿನ ವಾರ ಅವರನ್ನ ಭೇಟಿಯಾಗ್ತೀನಿ: ಟ್ರಂಪ್‌

    ಈ ಬಗ್ಗೆ ಮಹಿಳಾ ಆಯೋಗ ಕ್ರಮಕ್ಕೆ ಆಗ್ರಹಿಸಿದೆ. ಕೂಡಲೇ ಮೆಟ್ರೋ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ತಾಯಿ ಮತ್ತು ಮಕ್ಕಳ ಪರದಾಟ ತಪ್ಪಲಿದೆ.

  • ಮೆಟ್ರೋ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನ – ಪ್ರಾಣಾಪಾಯದಿಂದ ಯುವಕ ಪಾರು

    ಮೆಟ್ರೋ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನ – ಪ್ರಾಣಾಪಾಯದಿಂದ ಯುವಕ ಪಾರು

    ಬೆಂಗಳೂರು: ಯುವಕನೊಬ್ಬ ಬರುತ್ತಿದ್ದ ಮೆಟ್ರೋ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ (Jnana Bharathi Metro Station) ನಡೆದಿದೆ.

    ಯುವಕನನ್ನು ಬಿಹಾರ (Bihar) ಮೂಲದ 20 ವರ್ಷದ ಶ್ರೀ ಸಿದ್ದಾರ್ಥ್ ಎಂದು ಗುರುತಿಸಲಾಗಿದೆ. ಇಂದು (ಸೆ.17) ಮಧ್ಯಾಹ್ನ 2:15ರ ಸುಮಾರಿಗೆ ಈ ದುರಂತ ಸಂಭವಿಸಿದೆ.ಇದನ್ನೂ ಓದಿ: ದೇಶದಲ್ಲಿ ಅ.1 ರವರೆಗೆ ‘ಬುಲ್ಡೋಜರ್‌ ಕಾರ್ಯಾಚರಣೆ’ಗೆ ಸುಪ್ರೀಂ ತಡೆ

    ಬರುತ್ತಿದ್ದ ಮೆಟ್ರೋ ರೈಲಿನ ಟ್ರ‍್ಯಾಕ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ (ETS) ನಿರ್ವಹಿಸಿ, ಸ್ಟೇಷನ್ ಕಂಟ್ರೋಲರ್ ತಂಡದಿಂದ ಯುವಕನನ್ನು ರಕ್ಷಣೆ ಮಾಡಲಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಯುವಕ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

    ಸದ್ಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಅಧಿಕಾರಿಗಳ ವಶದಲ್ಲಿರುವ ಯುವಕನಿಂದ ಮಾಹಿತಿ ಪಡೆಯುತ್ತಿದ್ದು, ವಿಚಾರಣೆ ನಡೆಯುತ್ತಿದೆ.

    2:13 ರಿಂದ 2:30 ಗಂಟೆಯವರೆಗೆ ಚಲ್ಲಘಟ್ಟ ಮೆಟ್ರೊ ನಿಲ್ದಾಣದ (Challaghatta Metro Station) ಬದಲು ಮೈಸೂರು ರಸ್ತೆಯಲ್ಲಿ (Mysore Road Metro Station) ರೈಲುಗಳು ಶಾರ್ಟ್ ಲೂಪ್‌ನಲ್ಲಿ ಕಾರ್ಯನಿರ್ವಹಿಸಿದವು. ಬಳಿಕ 2:30ರಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ (Purple Line) ರೈಲು ಸೇವೆ ಪುನರಾರಂಭಿಸಲಾಗಿದೆ.ಇದನ್ನೂ ಓದಿ: ಮೋದಿ ಜನ್ಮದಿನದಂದೇ ಜನನ – ಪುತ್ರನಿಗೆ ‘ನರೇಂದ್ರ’ ಎಂದು ಹೆಸರಿಟ್ಟ ಕೊಡಗಿನ ದಂಪತಿ

  • ಈ ವರ್ಷದ ಅಂತ್ಯಕ್ಕಿಲ್ಲ ಯೆಲ್ಲೋ ಲೈನ್ ಮೆಟ್ರೋ – 14 ದಿನಗಳ ಕಾಲ ಟೆಕ್ನಿಕಲ್ ಟೆಸ್ಟ್

    ಈ ವರ್ಷದ ಅಂತ್ಯಕ್ಕಿಲ್ಲ ಯೆಲ್ಲೋ ಲೈನ್ ಮೆಟ್ರೋ – 14 ದಿನಗಳ ಕಾಲ ಟೆಕ್ನಿಕಲ್ ಟೆಸ್ಟ್

    ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಯೆಲ್ಲೋ ಲೈನ್ (Bengaluru Namma Metro Yellow Line) ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಇಂದಿನಿಂದ 14 ದಿನಗಳ ಕಾಲ ಆರ್‌ಡಿಎಸ್‌ಓ (RDSO) ರೈಲ್ವೆ ಅಧಿಕಾರಗಳಿಂದ ಟೆಕ್ನಿಕಲ್ ಟೆಸ್ಟ್ (Technical Test) ಆರಂಭಿಸಿದ್ದಾರೆ.

    ಇದಕ್ಕೂ ಮುನ್ನ ಈ ವರ್ಷದ ಅಂತ್ಯದಲ್ಲಿ ಯೆಲ್ಲೋ ಲೈನ್ ಕಾರ್ಯಾರಂಭಿಸುವ ಕುರಿತು ಮಾಹಿತಿ ನೀಡಿದ್ದ ಬಿಎಂಆರ್‌ಸಿಎಲ್ (BMRCL), ನಿರೀಕ್ಷೆ ಇಟ್ಟಿದ್ದ ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ.ಇದನ್ನೂ ಓದಿ: ‘ಫೈರ್‌ ಫ್ಲೈ’ ಟೀಸರ್ ರಿಲೀಸ್- ವಿಕ್ಕಿಯಾಗಿ ವಂಶಿಯನ್ನು ಪರಿಚಯಿಸಿದ ಚಿತ್ರತಂಡ

    ಆರ್‌ವಿ ರಸ್ತೆಯಿಂದ (RV Road) ಬೊಮ್ಮಸಂದ್ರವರೆಗೆ (Bommasandra) ಹಳದಿ ಮಾರ್ಗದ ನಿರ್ಮಾಣ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಆದರೆ ಹಲವಾರು ಟೆಕ್ನಿಕಲ್ ಕೆಲಸಗಳು ಬಾಕಿ ಇರುವ ಕಾರಣ ಇಂದಿನಿಂದ ಸುಮಾರು 14 ದಿನಗಳ ಕಾಲ ಪ್ರಾಯೋಗಿಕ ಟೆಸ್ಟ್ ನಡೆಯಲಿದೆ. ಈಗಾಗಲೇ ಆರ್‌ಡಿಎಸ್‌ಓ ರೈಲ್ವೆ ಆರ್ಗನೈಸೇಷನ್ ಅಧಿಕಾರಿಗಳು ಟೆಕ್ನಿಕಲ್ ಟೆಸ್ಟ್ ಆರಂಭಿಸಿದ್ದಾರೆ.

    ಇದಾದ ಬಳಿಕ ರೈಲ್ವೆ ಮಂಡಳಿಗೆ ಟೆಕ್ನಿಕಲ್ ರಿಪೋರ್ಟ್ ಸಲ್ಲಿಸಬೇಕು. ರಿಪೋರ್ಟ್‌ನ ಪರಿಶೀಲನೆ ನಡೆಸಿ, ಮಂಡಳಿಯು ತಾಂತ್ರಿಕ ಮಂಜೂರಾತಿಯನ್ನು ನೀಡುತ್ತದೆ. ಆ ಮೂಲಕ ಯೆಲ್ಲೋ ಲೈನ್ ಮೆಟ್ರೋ ಆರಂಭದ ಕುರಿತು ಬಿಎಂಆರ್‌ಸಿಎಲ್ ತಿಳಿಸುತ್ತದೆ. ಟೆಕ್ನಿಕಲ್ ಕೆಲಸಗಳು ಇರುವ ಕಾರಣ ಮುಂದಿನ ವರ್ಷ 2025 ಜನವರಿ ಅಥವಾ ಫೆಬ್ರವರಿಗೆ ಆರಂಭ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ಯಾವೆಲ್ಲಾ ಟೆಸ್ಟ್‌ಗಳು ನಡೆಯಲಿವೆ?
    ಸ್ಪೀಡ್ ಟೆಸ್ಟ್, ಬ್ರೇಕ್ ಟೆಸ್ಟ್, ಮರಳಿನ ಮೂಟೆಗಳನ್ನು ಹಾಕಿ ತೂಕದ ಟೆಸ್ಟ್, ಹೆಚ್ಚು ತೂಕ ಇದ್ದಾಗ ಸ್ಪೀಡ್ ಟೆಸ್ಟ್, ಕಡಿಮೆ ತೂಕ ಇದ್ದಾಗ ಸ್ಪೀಡ್ ಟೆಸ್ಟ್, ಟೆಕ್ನಿಕಲ್ ತಾಂತ್ರಿಕ ಪ್ರಯೋಗ ಪರೀಕ್ಷೆ , ಮೆಟ್ರೋ ಸ್ಟೇಷನ್ ಬಳಿ ಸ್ಟಾಪ್ ಪ್ರಮಾಣ ಟೆಸ್ಟ್ ನಡೆಯಲಿದೆ

  • ಆಟವಾಡುತ್ತಾ ಮೆಟ್ರೋ ಹಳಿಗೆ ಬಿದ್ದ ಮಗು – ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪಾರು

    ಆಟವಾಡುತ್ತಾ ಮೆಟ್ರೋ ಹಳಿಗೆ ಬಿದ್ದ ಮಗು – ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪಾರು

    ಬೆಂಗಳೂರು: ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿರುವ (Purple Line) ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ (Baiyappanahalli Metro Station) ಗುರುವಾರ ರಾತ್ರಿ ಸಂಭವಿಸಬಹುದ ಭಾರೀ ಅನಾಹುತವೊಂದು ತಪ್ಪಿದೆ.

    ರಾತ್ರಿ 9 ಗಂಟೆ ಸುಮಾರಿಗೆ ತಾಯಿಯೊಂದಿಗೆ ಪ್ಲಾಟ್‌ಫಾಂನಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕ ಇದ್ದಕ್ಕಿದ್ದಂತೆ ಟ್ರ್ಯಾಕ್‌ ಮೇಲೆ ಜಿಗಿದಿದ್ದಾನೆ. ಕೂಡಲೇ ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಅಪಾಯದಿಂದ ಬಾಲಕ ಪಾರಾಗಿದ್ದಾನೆ. ಇದನ್ನೂ ಓದಿ: MUDA Scam | ಸರ್ಕಾರ Vs ರಾಜಭವನ – ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?

    ಮಗು ಬಿದ್ದ ಕೂಡಲೇ ಮೆಟ್ರೋ ಟ್ರ‍್ಯಾಕ್‌ನ ವಿದ್ಯುತ್‌ ಸಂಚಾರವನ್ನು ಸ್ಥಗಿತಗೊಳಿಸಿ ರಕ್ಷಣೆ ಮಾಡಲಾಗಿತ್ತು. ಮಗುವಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು, ಯಾವುದೇ ಸಮಸ್ಯೆಯಾಗಿಲ್ಲ. ಮೆಟ್ರೋ ಸಿಬ್ಬಂದಿ ಜೊತೆಗೆ ಮಗುವನ್ನು ಸ್ಥಳೀಯ ಆಸ್ಪತ್ರೆ ಕಳುಹಿಸಲಾಗಿದೆ. ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

    ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದ ಪರಿಣಾಮ 8 ನಿಮಿಷ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ರಾತ್ರಿ 9 ಗಂಟೆ 8 ನಿಮಿಷದಿಂದ 9 ಗಂಟೆ 16 ನಿಮಿಷದ ವರೆಗೆ ಮೆಟ್ರೋ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ಇದರಿಂದಾಗಿ 2 ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಗಿತ್ತು.

     

  • ಸೆ.7ರಿಂದ ಮೆಟ್ರೋ ಸೇವೆ ಆರಂಭ – ಪ್ರಯಾಣಿಕರಿಗೆ ಷರತ್ತುಗಳೇನು?

    ಸೆ.7ರಿಂದ ಮೆಟ್ರೋ ಸೇವೆ ಆರಂಭ – ಪ್ರಯಾಣಿಕರಿಗೆ ಷರತ್ತುಗಳೇನು?

    – ಟೋಕನ್‌ ವ್ಯವಸ್ಥೆ ಇಲ್ಲ
    – ಸ್ಮಾರ್ಟ್‌ ಕಾರ್ಡ್‌ ಹೊಂದಿದವರಿಗೆ ಮಾತ್ರ ಅನುಮತಿ

    ಬೆಂಗಳೂರು: ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ಓಟಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

    ಕೋವಿಡ್‌ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಪ್ರಯಾಣಿಕರಿಗೆ ಕೆಲ ಷರತ್ತಗಳನ್ನು ವಿಧಿಸಿ ಮೆಟ್ರೋ ಓಡಿಸಲು ಸಿದ್ಧತೆ ನಡೆಸಿದೆ.

    ಸೆಪ್ಟೆಂಬರ್ 7 ರಿಂದ 10ನೇ ತಾರೀಖಿನವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 3 ಗಂಟೆ ಕಾಲ ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಕಾರ್ಯಾಚರಣೆ ಮಾಡಲಿದೆ. ಸೆಪ್ಟೆಂಬರ್ 9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಆರಂಭವಾಗಲಿದೆ.

    ಸೆಪ್ಟೆಂಬರ್ 7 ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 8 ರಿಂದ ಬೆಳಗ್ಗೆ 11 ವರೆಗೆ ಮತ್ತು ಸಂಜೆ 4-30 ರಿಂದ ರಾತ್ರಿ 7-30 ವರಿಗೆ ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 9 , 10 ರಂದು ಬೆಳಗ್ಗೆ 8 ರಿಂದ 11 ವರೆಗೆ ಸಂಜೆ 4.30 ರಿಂದ ರಾತ್ರಿ 7.30ವರೆಗೆ ಮಾತ್ರ ಮೆಟ್ರೋ ಓಡಾಟ ನಡೆಸಲಿದೆ.

    ಸೆಪ್ಟೆಂಬರ್ 11 ರಿಂದ ಎಲ್ಲಾ ರೈಲು ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಎರಡು ಮಾರ್ಗದಲ್ಲಿ ಸಂಚರಿಸಲಿದೆ. ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಹಾಗೂ ಬೇರೆ ಸಮಯದಲ್ಲಿ10 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಲಿದೆ.

    ಷರತ್ತುಗಳು ಏನು?
    – ಮೆಟ್ರೋದಲ್ಲಿ ಓಡಾಟ ನಡೆಸುವವರು ರೀಚಾರ್ಜ್ ನೊಂದಿಗೆ ಸ್ಮಾರ್ಟ್ ಕಾರ್ಡ್ ನಲ್ಲಿ ಪ್ರಯಾಣ
    -ಮೆಟ್ರೋ ಪ್ರಯಾಣಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ
    – ಪ್ರವೇಶ ದ್ವಾರ , ನಿರ್ಗಮನದ, ಹಾಗೂ ಪ್ಲಾಟ್ ಫಾರ್ಮ್ ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
    – ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
    – 50 ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ

    -ಆರು ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
    -ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಲು ಅವಕಾಶ
    – ಎಲ್ಲಾ ಪ್ರಯಾಣಿಕರಿಗೆ ದೇಹದ ಟೆಂಪರೇಚರ್ ಪರೀಕ್ಷೆ ಮಾಡಲಾಗುತ್ತೆ
    – ಎಸ್ಕೇಲೇಟರ್ ಗಳನ್ನ ಬಳಸುವ ಪ್ರಯಾಣಿಕರು ತಮ್ಮ ಮುಂದಿರುವ ಪ್ರಯಾಣಿಕರಿಂದ ಒಂದು ಮೆಟ್ಟಿಲು ಅಂತರ ಕಾಪಾಡಬೇಕು

    – 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ
    – ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳು ಬಂದ್
    – ಕಂಟೈನ್ಮೆಂಟ್ ಜೋನ್ ಗಳ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಿಸಲ್ಲ